in

ಮೂಲವ್ಯಾಧಿ ಸಮಸ್ಯೆಗೆ ಮನೆಮದ್ದುಗಳು

ಮೂಲವ್ಯಾಧಿ ಸಮಸ್ಯೆಗೆ ಮನೆಮದ್ದು
ಮೂಲವ್ಯಾಧಿ ಸಮಸ್ಯೆಗೆ ಮನೆಮದ್ದು

ಪೈಲ್ಸ್ ಅಥವಾ ಹೆಮೊರೊಯಿಡ್ಸ್ ಗುದನಾಳದ ಮತ್ತು ಗುದ ಕಾಲುವೆಯ ಗೋಡೆಗಳೊಳಗಿನ ರಕ್ತನಾಳಗಳಾಗಿವೆ. ಈ ರಕ್ತನಾಳಗಳು ಊದಿಕೊಂಡಾಗ ಮತ್ತು ಅವುಗಳ ಮೇಲಿನ ಅಂಗಾಂಶವು ಹಿಗ್ಗಿದಾಗ ಪೈಲ್ಸ್ ಸಂಭವಿಸುತ್ತದೆ. ಈ ಪ್ರಕ್ರಿಯೆಯು ಚೀಲದಂತಹ ರಚನೆಯನ್ನು ಸೃಷ್ಟಿಸುತ್ತದೆ.ಇದು ನಮ್ಮ ಕರುಳಿನ ಚಲನೆಯ ಸಮಯದಲ್ಲಿ ಮತ್ತಷ್ಟು ಒತ್ತಡವನ್ನು ಪಡೆಯುತ್ತದೆ, ಇದರಿಂದಾಗಿ ನೋವು ಮತ್ತು ಅಸ್ವಸ್ಥತೆಯನ್ನು ಉಂಟುಮಾಡುತ್ತದೆ.

ಮೂಲವ್ಯಾಧಿಯಿಂದ ಬಳಲುತ್ತಿರುವವರಿಗೆ ಮಲ ವಿಸರ್ಜನೆಗೆ ಹೋಗುವುದೆಂದರೆ ದೊಡ್ಡ ತಲೆ ನೋವು. ಹಾಗಂತ ಹೋಗದಿದ್ದರೆ ಮತ್ತೂ ಆಪತ್ತು. ಕೂರಲೂ ಆಗೋಲ್ಲ, ನಡೆಯಲೂ ಕಷ್ಟ. ಮೂಲವ್ಯಾಧಿ ಸಮಸ್ಯೆ ಇರುವವರು ಪಡೋ ಪಾಡು ಅಷ್ಟಿಷ್ಟಲ್ಲ.

ಸಾಮಾನ್ಯವಾಗಿ ಮೂಲವ್ಯಾಧಿ ಅಥವಾ ಪೈಲ್ಸ್ ಕಾಯಿಲೆ ಬಂದರೆ ಸಾಕು ಊಹಿಸಿಕೊಳ್ಳದಷ್ಟು ನೋವು ವ್ಯಕ್ತಿಗೆ ಕಾಡತೊಡಗುತ್ತದೆ. ಆರೋಗ್ಯ ತಜ್ಞರ ಪ್ರಕಾರ ಮೂಲವ್ಯಾಧಿ ಬೇರೆ-ಬೇರೆ ಗಾತ್ರದಲ್ಲಿ ಕಂಡು ಬರುತ್ತದೆಯಂತೆ. ಕೆಲವರಿಗೆ ಗುದದ್ವಾರ ಹೊರ ಭಾಗದಲ್ಲಿ ಪೈಲ್ಸ್ ಉಂಟಾದರೆ, ಮತ್ತೆ ಕೆಲವರಿಗೆ ಗುದದ್ವಾರದ ಒಳಗೆ ಪೈಲ್ಸ್ ಸಮಸ್ಯೆ ಕಂಡುಬರುತ್ತದೆ.

ಮೂಲವ್ಯಾಧಿ ಸಮಸ್ಯೆಗೆ ಮನೆಮದ್ದುಗಳು
ಗುದನಾಳದ ಮತ್ತು ಗುದ ಕಾಲುವೆಯ ಗೋಡೆಗಳೊಳಗಿನ ರಕ್ತನಾಳಗಳಾಗಿವೆ

ಮಲವಿಸರ್ಜನೆಗೆ ಹೋದಾಗ ತುಂಬಾ ನೋವಾಗುವುದು, ರಕ್ತ ಸುರಿಯುವಿಕೆ, ಉರಿ ಇವೆಲ್ಲಾ ಮೂಲವ್ಯಾಧಿ ಸಮಸ್ಯೆಯ ಲಕ್ಷಣವಾಗಿದೆ. ಇದಕ್ಕೆ ಅನೇಕ ಚಿಕಿತ್ಸೆಗಳಿವೆ. ಈ ಕಾಯಿಲೆ ಪ್ರಭಾವದ ಮೇಲೆ ಇದಕ್ಕೆ ಚಿಕಿತ್ಸೆಯನ್ನು ಮಾಡಲಾಗುವುದು. ಈ ಕಾಯಿಲೆ ಅಧಿಕವಾಗಿದ್ದರೆ ಆಪರೇಷನ್ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಔಷಧಿಯಿಂದ ಗುಣಪಡಿಸಬಹುದು.

ಮೂಲವ್ಯಾಧಿ ಸಮಸ್ಯೆ ಅನ್ನುವುದು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಕಾಯಿಲೆ ಆಗಿದೆ. ಮೂಲವ್ಯಾಧಿ ಅಥವಾ ಫೈಲ್ಸ್ ಸಮಸ್ಯೆ ಬಂತೆಂದರೆ ಆ ವ್ಯಕ್ತಿಗೆ ಮಲವಿಸರ್ಜನೆಯ ಸಮಯದಲ್ಲಿ ಊಹಿಸಲಾರದಷ್ಟು ನೋವು ಕಾಡುತ್ತದೆ. ಈ ಸಮಸ್ಯೆಯಿಂದ ನರಳುತ್ತಿರುವ ಅದೆಷ್ಟೋ ಜನರು ನಾಚಿಕೆಯಿಂದ ವೈದ್ಯರ ಬಳಿ ತಮ್ಮ ಸಂಕಷ್ಟವನ್ನು ಹೇಳಿಕೊಳ್ಳುವುದೇ ಇಲ್ಲ. ಈ ರೀತಿಯಲ್ಲಿ ನಿರ್ಲಕ್ಷ್ಯ ತೋರಬಾರದು, ಚಿಕಿತ್ಸೆ ಪಡೆಯುವುದು ಉತ್ತಮ.

ಪೈಲ್ಸ್ ಅಥವಾ ಮಲಬದ್ಧತೆ ಹೊಂದಿರುವ ರೋಗಿಗಳು ತಮ್ಮ ಆಹಾರದಲ್ಲಿ ಫೈಬರ್ ಸಮೃದ್ಧ ಪದಾರ್ಥಗಳ ಸೇರಿಸಿ ಸೇವನೆ ಮಾಡಬೇಕು. ಇವುಗಳು ನಿಮ್ಮ ಮಲ ವಿಸರ್ಜನೆ ಕ್ರಿಯೆಯನ್ನು ಸುಲಭವಾಗಿಸುತ್ತದೆ. ಇದು ಪೈಲ್ಸ್‌ನ ರಕ್ತಸ್ರಾವ ಮತ್ತು ಊತ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮೂಲವ್ಯಾಧಿಯ ನಿವಾರಣೆಗೆ ಕೊತ್ತಂಬರಿ ಬೀಜ ಹಾಕಿ ತಯಾರಿಸಿದ ಕಷಾಯಕ್ಕೆ ಕಲ್ಲುಸಕ್ಕರೆ ಸೇರಿಸಿ ಸೇವಿಸುವುದು ಉತ್ತಮ ಪರಿಣಾಮವನ್ನು ನೀಡುತ್ತದೆ.

ಮೂಲವ್ಯಾಧಿ ಸಮಸ್ಯೆಗೆ ಮನೆಮದ್ದುಗಳು
ಕೊತ್ತಂಬರಿ ಬೀಜ ಹಾಕಿ ತಯಾರಿಸಿದ ಕಷಾಯ

ಮಲಬದ್ಧತೆಯನ್ನು ತೆಗೆದುಹಾಕಲು ತ್ರಿಫಲ ಪುಡಿಯನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು. ತ್ರಿಫಲ ಪುಡಿ ಮೂಲವ್ಯಾಧಿ ಬೆಳೆಯದಂತೆ ತಡೆಯುತ್ತದೆ.

ಮೂಲವ್ಯಾಧಿಯನ್ನು ನಿರ್ಮೂಲನೆ ಮಾಡಲು ಮಲಬದ್ಧತೆಯನ್ನು ಕಡಿಮೆ ಮಾಡುವ ಆಹಾರವನ್ನು ತಿನ್ನಬೇಕು. ಇದು ಮೂಲವ್ಯಾಧಿಗೆ ಪ್ರಥಮ ಪ್ರಚೋದಕವಾಗಿದೆ ಮತ್ತು ನೋವು ಕಡಿಮೆ ಮಾಡುತ್ತದೆ. ಹೆಚ್ಚು ನಾರಿನಂಶ/ ಫೈಬರ್ ಇರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಫೈಬರ್ ಬೃಹತ್ ರಚನೆಯ ಸಾಮರ್ಥ್ಯವನ್ನು ಹೊಂದಿದೆ. ಅಂತೆಯೇ, ಹಲವಾರು ವಿರೇಚಕಗಳು ಸಡಿಲವಾದ ಮಲವನ್ನು ಉಂಟುಮಾಡುತ್ತವೆ.

ಹಸಿ ಈರುಳ್ಳಿ ಮೂಲವ್ಯಾಧಿಗೆ ಉತ್ತಮವಾದ ಮನೆ ಮದ್ದಾಗಿದೆ. ಪೈಲ್ಸ್ ನಿಂದಾಗಿ ರಕ್ತ ಬರುತ್ತಿದ್ದರೆ, ಹಸಿ ಈರುಳ್ಳಿ ತಿಂದರೆ ಸಾಕು ರಕ್ತ ಸೊರುವುದು ನಿಲ್ಲುವುದು.

ನೀರನ್ನು ಚೆನ್ನಾಗಿ ಕುಡಿಯಬೇಕು ಮತ್ತು ಮೂಲಂಗಿ, ಕ್ಯಾರೆಟ್ ಮತ್ತು ಸೌತೆಕಾಯಿ ಸೇರಿದಂತೆ ತರಕಾರಿಗಳನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಇದರಿಂದ ಶೀಘ್ರದಲ್ಲಿಯೇ ನಿಮ್ಮ ಸಮಸ್ಯೆಯು ದೂರವಾಗುತ್ತದೆ.

ಮೂಲಂಗಿ ಮೂಲವ್ಯಾಧಿಗೆ ಅತ್ಯುತ್ತಮವಾದ ಔಷಧಿಯಾಗಿದೆ. ಇದರ ಜ್ಯೂಸ್ ಕುಡಿದರೆ ಮೂಲವ್ಯಾಧಿ ಕಾಯಿಲೆ ಗುಣಮುಖವಾಗುವುದು. ಮೊದಮೊದಲು 1/3 ಕಪ್ ಮೂಲಂಗಿ ರಸ ಕುಡಿಯಿರಿ. ನಂತರ ಅರ್ಧ ಕಪ್ ನಷ್ಟು ಪ್ರತಿದಿನ ಕುಡಿಯುತ್ತಾ ಬನ್ನಿ. ಹೀಗೆ ಮಾಡಿದರೆ ಪೈಲ್ಸ್ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ. ಇದರಿಂದ ಚಟ್ನಿ, ಪಲ್ಯ ಮಾಡಿ ತಿನ್ನಿ. ಇದರ ಸೊಪ್ಪು ಕೂಡ ತುಂಬಾ ಒಳ್ಳೆಯದು.

ಕ್ಯಾಸ್ಟರ್ ಎಣ್ಣೆ ಆಂಟಿ-ಆಕ್ಸಿಡೆಂಟ್ ಶ್ರೀಮಂತ, ಶಿಲೀಂಧ್ರ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದಂತಹ ವ್ಯಾಪಕ ಶ್ರೇಣಿಯ ಗುಣಗಳನ್ನು ಹೊಂದಿದೆ. ಆದ್ದರಿಂದ, ಈ ಘಟಕಾಂಶವು ಮೂಲವ್ಯಾಧಿ ಗಾತ್ರವನ್ನು ಕಡಿಮೆ ಮಾಡಲು ಮತ್ತು ಮೂಲವ್ಯಾಧಿ ನೋವನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ.

ಮೂಲವ್ಯಾಧಿ ಸಮಸ್ಯೆಗೆ ಮನೆಮದ್ದುಗಳು
ಕ್ಯಾಸ್ಟರ್ ಎಣ್ಣೆ

ಡೀಪ್ ಫ್ರೈಡ್ ಆಹಾರವು ಮೂಲವ್ಯಾಧಿಯನ್ನು ಮತ್ತಷ್ಟು ಹಾನಿಗೊಳಿಸುತ್ತದೆ. ಅವರು ಜೀರ್ಣಾಂಗ ವ್ಯವಸ್ಥೆಯನ್ನು ನಿಧಾನಗೊಳಿಸುವುದರಿಂದ ಅನಿಯಮಿತ ಬೌಲ್ ಚಲನೆ ಮತ್ತು ಉರಿಯೂತ ಹೆಚ್ಚಾಗುತ್ತದೆ. ಇದು ಹೆಚ್ಚು ನೋವು ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತದೆ. ಭಾರವಾದ ಆಹಾರದ ಹೊರತಾಗಿ, ಮಸಾಲೆಯುಕ್ತ ಆಹಾರವು ಉತ್ತಮವಲ್ಲ. ವಿಶೇಷವಾಗಿ ಮೂಲವ್ಯಾಧಿ ರಕ್ತಸ್ರಾವವಾಗುತ್ತಿದ್ದರೆ, ಅವು ತೀವ್ರವಾದ ನೋವನ್ನು ಉಂಟುಮಾಡುತ್ತವೆ.

ಮೂಲವ್ಯಾಧಿಯ ತೀವ್ರತೆಯನ್ನು ನಿಯಂತ್ರಿಸಲು ಅಲೋವೆರಾ / ಲೋಳೆಸರದ ತಿರುಳನ್ನು ಒಂದು ಚಮಚದಷ್ಟು ತೆಗೆದು ದಿನಕ್ಕೆ ಮೂರು ಬಾರಿಯಂತೆ ಸೇವಿಸುತ್ತಾ ಬರಬೇಕು.

ಆರೋಗ್ಯಕರ ಆಹಾರದಿಂದ ಪೂರಕವಾಗಿ ನೀರಿನ ಸೇವನೆಯು ಆರೋಗ್ಯಕರ ಕರುಳಿನ ಚಲನೆಗೆ ಕಾರಣವಾಗುತ್ತದೆ. ಉತ್ತಮ ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಮಲಬದ್ಧತೆ ತಡೆಯುತ್ತದೆ. ಪ್ರತಿದಿನ 8-10 ಗ್ಲಾಸ್ ನೀರನ್ನು ಕುಡಿಯುವುದರ ಮೂಲಕ ಜೀರ್ಣಾಂಗ ವ್ಯವಸ್ಥೆಯನ್ನು ಸುಗಮಗೊಳಿಸಿ ಮತ್ತು ಅದನ್ನು ನಿಯಂತ್ರಿಸುತ್ತದೆ.

ದಾಳಿಂಬೆ ಸಿಪ್ಪೆಯನ್ನು ನೀರಿನಲ್ಲಿ ಹಾಕಿ ಬೇಯಿಸಿ. ನಂತರ ಸೋಸಿ ಆ ನೀರನ್ನು ದಿನದಲ್ಲಿ ಎರಡು ಬಾರಿ ಕುಡಿಯಿರಿ. ಈ ರೀತಿ ಮಾಡುತ್ತಾ ಬಂದರೆ ಮೂಲವ್ಯಾಧಿ ಸಮಸ್ಯೆ ಗುಣಮುಖವಾಗುವುದು.

ಸೌತೆಕಾಯಿ, ಕ್ಯಾರೆಟ್‌ನಂತಹ ಸಲಾಡ್‌ಗಳನ್ನು ಉಪಾಹಾರದ ನಂತರ ಸೇವಿಸುವಂತೆ ಸಲಹೆ ನೀಡುತ್ತಾರೆ. ಇನ್ನು ಕ್ಯಾರೆಟ್‌ನಂತಹ ತರಕಾರಿಗಳಲ್ಲಿ ಆಂಟಿ-ಆಕ್ಸಿಡೆಂಟ್ ಮತ್ತು ಉರಿಯೂತದ ಗುಣಗಳನ್ನು ಹೊಂದಿದೆ. ಇದು ಮೂಲವ್ಯಾಧಿಯನ್ನು ಗುಣಪಡಿಸಲು ಪ್ರಯೋಜನಕಾರಿ. ಇವುಗಳಲ್ಲಿ ವಿಟಮಿನ್ ಸಿ ಮತ್ತು ಕೆ ಅಧಿಕ ಪ್ರಮಾಣದಲ್ಲಿ ಇರುವುದರಿಂದ ರಕ್ತನಾಳದ ಹಾಗೂ ಆರೋಗ್ಯವನ್ನು ಸುಧಾರಿಸಲು ಇದು ನೆರವಾಗುತ್ತದೆ.

ನಿರ್ಜಲೀಕರಣದಿಂದ ಮೂಲವ್ಯಾಧಿ ಸಮಸ್ಯೆ ಉಂಟಾಗುತ್ತದೆ. ಅದಕ್ಕೆ ಶುಂಠಿ ರಸವನ್ನು ನಿಂಬೆ ಹಣ್ಣಿನ ಪಾನಕಕ್ಕೆ ಹಾಕಿ ಕುಡಿಯುವುದು ಒಳ್ಳೆಯದು.

ತುಪ್ಪದಲ್ಲಿ ಹುರಿದ ಅಳಲೆಕಾಯಿಗೆ ಹಿಪ್ಪಲಿ ಹಾಗೂ ಬೆಲ್ಲ ಸೇರಿಸಿ ತಿನ್ನೋದ್ರಿಂದ ಮಲ ವಿಸರ್ಜನೆ ಸುಲಭವಾಗುತ್ತದೆ.

 ಒಣ ಅಂಜೂರವನ್ನು ರಾತ್ರಿಯಲ್ಲಿ ನೆನೆ ಹಾಕಿ ಬೆಳಗ್ಗೆ ಅರ್ಧ ನೀರನ್ನು ಕುಡಿದು, ಉಳಿದ ಅರ್ಧ ನೀರನ್ನು ಸಂಜೆ ಕುಡಿಯಿರಿ.

ಮೂಲವ್ಯಾಧಿ ಸಮಸ್ಯೆಗೆ ಕಡೆದ ಮಜ್ಜಿಗೆ, ಹಸಿ ಮೂಲಂಗಿ, ಹಸಿ ಕ್ಯಾರೆಟ್‌, ಹೆಸರು ಬೇಳೆ, ಒಣ ದ್ರಾಕ್ಷಿ ಇವುಗಳನ್ನು ದಿನನಿತ್ಯದ ಆಹಾರದಲ್ಲಿ ಸೇವಿಸಿದರೆ ಮೂಲವ್ಯಾಧಿ ಕಡಿಮೆಯಾಗುತ್ತದೆ.

ಅರಿಶಿಣವನ್ನು ನೀರಿನಲ್ಲಿ ಬೇಯಿಸಿ ಆ ನೀರು ಕುಡಿಯುವುದರಿಂದಲೂ ಮೂಲವ್ಯಾಧಿಯನ್ನು ಗುಣ ಪಡಿಸಬಹುದು.

ಮೂಲವ್ಯಾಧಿ ಸಮಸ್ಯೆಗೆ ಮನೆಮದ್ದುಗಳು
ನಾಚಿಕೆ ಮುಳ್ಳಿನ ಗಿಡದ ಎಲೆಗಳು

ನಾಚಿಕೆ ಮುಳ್ಳಿನ ಗಿಡದ ಎಲೆಗಳನ್ನು ನೆರಳಿನಲ್ಲಿ ಒಣಗಿಸಿ ಪುಡಿಮಾಡಿ ಇಟ್ಟುಕೊಳ್ಳಿ. ಇದನ್ನು ಪ್ರತಿದಿನ ಒಂದು ಲೋಟ ನೀರಿಗೆ ಒಂದು ಚಮಚ ಹಾಕಿಕೊಂಡು ಸೇವನೆ ಮಾಡುವುದರಿಂದ ಮೂಲವ್ಯಾಧಿ ದೂರವಾಗುತ್ತದೆ.

 ಮೂಲವ್ಯಾಧಿ ನಿವಾರಣೆಗೆ ಮಾವಿನ ಗೊರಟೆಗಳನ್ನು ಸ್ವಚ್ಛಗೊಳಿಸಿ, ಒಣಗಿಸಿಕೊಳ್ಳಬೇಕು. ಇದನ್ನು ಪುಡಿಮಾಡಿ ಪ್ರತಿದಿನ ಎರಡು ಚಮಚದಂತೆ ಜೇನಿನೊಡನೆ ಸೇವಿಸಬೇಕು.

ಮೂಲವ್ಯಾಧಿ ಇರುವವರು ಪ್ರತಿದಿನ ರಾತ್ರಿ 1 ಬಾಳೆ ಹಣ್ಣು ತಿನ್ನುವುದು ಒಳ್ಳೆಯದು. ಇದರಿಂದ ಮಲ ಮಾಡಲು ಹೋಗುವಾಗ ಕಷ್ಟವಾಗುವುದಿಲ್ಲ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕೆಂಪು ಬಾಳೆ

ಬಾಳೆಹಣ್ಣುಗಳಲ್ಲಿ ಕೆಂಪು ಬಾಳೆಹಣ್ಣಿನಲ್ಲಿ ಶ್ರೇಷ್ಠವಾದ ಗುಣಗಳಿವೆ 

ವೆಂಕಟೇಶನಿಗೆ ಕೂದಲು ಕೊಡುವುದು ಯಾಕೆ

ವೆಂಕಟೇಶನಿಗೆ ಕೂದಲು ಕೊಡುವುದು ಯಾಕೆ ಮತ್ತು ಶ್ರೀನಿವಾಸ ಕಲ್ಯಾಣ ಹೇಗೆ ಆಯಿತು?