in

ಸುಂದರವಾದ ತುಟಿಯ ಬಣ್ಣಕ್ಕಾಗಿ ನೈಸರ್ಗಿಕ ಮನೆ ಮದ್ದುಗಳು

ತುಟಿಯ ಬಣ್ಣಕ್ಕಾಗಿ ನೈಸರ್ಗಿಕ ಮನೆ ಮದ್ದು
ತುಟಿಯ ಬಣ್ಣಕ್ಕಾಗಿ ನೈಸರ್ಗಿಕ ಮನೆ ಮದ್ದು

ಎಲ್ಲರಿಗೂ ತಮ್ಮ ತುಟಿಗಳು ಮೃದು ಹಾಗೂ ಗುಲಾಬಿ ಬಣ್ಣದಲ್ಲಿರುವುದು ಇಷ್ಟ. ವಿಶೇಷವಾಗಿ ಮಹಿಳೆಯರು ತಮ್ಮ ತುಟಿಗಳ ಬಣ್ಣದ ಕುರಿತು ಹೆಚ್ಚಿನ ಕಾಳಜಿ ಹೊಂದಿರುತ್ತಾರೆ. ಕೆಲವರು ನೈಸರ್ಗಿಕವಾಗಿಯೇ ಗುಲಾಬಿ ಬಣ್ಣದ ತುಟಿಗಳನ್ನು ಪಡೆದಿದ್ದು ಕೆಲವರು ಕೊಂಚ ಗಾಢವರ್ಣದ ತುಟಿಗಳನ್ನು ಪಡೆದಿರುತ್ತಾರೆ.

ತುಟಿ ಡಾರ್ಕ್ ಆಗಲು ಕಾರಣವೇನು?

*ಬಿಸಿಲಿನಲ್ಲಿ ಹೆಚ್ಚು ಓಡಾಡುವುದರಿಂದ ಚರ್ಮದಲ್ಲಿ ಮೆಲನಿನ್ ಉತ್ಪಾದನೆ ಹೆಚ್ಚಾಗುತ್ತದೆ. ಇದರಿಂದ ಚರ್ಮ ಸೇರಿದಂತೆ ತುಟಿಯ ಬಣ್ಣ ಕಪ್ಪು ಬಣ್ಣಕ್ಕೆ ತಿರುಗುವುದು.

ಸುಂದರವಾದ ತುಟಿಯ ಬಣ್ಣಕ್ಕಾಗಿ ನೈಸರ್ಗಿಕ ಮನೆ ಮದ್ದುಗಳು
ತುಟಿ ಡಾರ್ಕ್ ಆಗಲು ಕಾರಣ

*ಅತಿಯಾದ ತಂಬಾಕು ಸೇವನೆ ಅಥವಾ ಧೂಮಪಾನದಿಂದ.

*ಟೂತ್‌ ಪೇಸ್ಟ್, ಲಿಪ್‌ಸ್ಟಿಕ್ ಮುಂತಾದ ಕೆಲವು ಉತ್ಪನ್ನಗಳಲ್ಲಿ ಅಲರ್ಜಿಯಾಗುವ ಅಂಶ ಇರುವುದರಿಂದ ತುಟಿಗಳ ಹೈಪರ್‌ಪಿಗ್ಮೆಂಟೇಶನ್‌ಗೆ ಕಾರಣವಾಗಬಹುದು.

*ಲಾಜಿಯರ್-ಹನ್ಜಿಕರ್ ಸಿಂಡ್ರೋಮ್ ಮತ್ತು ಪ್ಯೂಟ್ಜ್-ಜೆಘರ್ಸ್ ಸಿಂಡ್ರೋಮ್ ನಂತಹ ವೈದ್ಯಕೀಯ ಸಮಸ್ಯೆಗಳು ನಿಮ್ಮ ತುಟಿಗಳ ಮೇಲೆ ತೀವ್ರ ಪರಿಣಾಮ ಬೀರಬಹುದು.

*ತುಟಿಗಳ ಮೇಲಿನ ಚರ್ಮದ ಬಣ್ಣ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಕೆಲವರು ತಮ್ಮ ತುಟಿಯ ಬಣ್ಣ ಮರೆಮಾಚಲೆಂದೇ ಗಾಢವಾದ ಲಿಪ್ ಸ್ಟಿಕ್ ಬಳಸುತ್ತಾರೆ. ಆದರೆ ಯಾವಾಗಲೂ ಹೀಗೆ ತುಟಿಗೆ ಬಣ್ಣ ಹಚ್ಚುವುದು ಸಹ ಡೇಂಜರ್. ಇದರಿಂದ ತುಟಿಯ ಚರ್ಮ ಇನ್ನಷ್ಟು ಹಾಳಾಗುವುದೇ ಹೊರತು ಒಳಿತಂತೂ ಅಲ್ಲ. ಹಾಗಾದರೆ ನೈಸರ್ಗಿಕವಾಗಿ ಕೆಂಬಣ್ಣದ ತುಟಿ ಪಡೆಯುವುದು ಹೇಗೆ?

*ಇದಕ್ಕಾಗಿ ದೂರವೇನೂ ಹೋಗಬೇಕಾಗಿಲ್ಲ. ಬದಲಿಗೆ ಮನೆಯಲ್ಲಿ ಲಭ್ಯವಿರುವ ಸುಲಭ ಸಾಮಾಗ್ರಿಗಳೇ ಸಾಕು. ಅಷ್ಟೇ ಅಲ್ಲ, ಇವು ಅಗ್ಗವೂ, ಯಾವುದೇ ಅಡ್ಡಪರಿಣಾಮಗಳಿಲ್ಲದೇ ಇರುವುವೂ ಆಗಿರುವ ಕಾರಣ ಎರಡನೇ ಬಾರಿ ಯೋಚಿಸಬೇಕಾಗಿಲ್ಲ. ಗುಲಾಬಿ ವರ್ಣದ ತುಟಿಗಳನ್ನು ಪಡೆಯಲು ಸೂಕ್ತ ವಿಧಾನವನ್ನು ಅನುಸರಿಸಿ ಹಿಂದಿನ ಸೌಂದರ್ಯವನ್ನು ಮತ್ತೊಮ್ಮೆ ಪಡೆಯಬಹುದು…

*ಕೊಬ್ಬರಿ ಎಣ್ಣೆಯು ತುಟಿಯು ಶುಷ್ಕವಾಗದಂತೆ ಮತ್ತು ಕಪ್ಪು ಬಣ್ಣಕ್ಕೆ ತಿರುಗದಂತೆ ತಡೆಯುತ್ತದೆ. ತೋರು ಬೆರಳಿಗೆ ಸ್ವಲ್ಪ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಅದನ್ನು ನಿಮ್ಮ ತುಟಿಗಳಿಗೆ ಹಚ್ಚಿ.

*ಕೆಲವೊಮ್ಮೆ ಸತ್ತ ಚರ್ಮವನ್ನು ತೊಡೆದುಹಾಕಲು ಲಿಪ್ ಸ್ಕ್ರಬ್ ಸಾಕಾಗುವುದಿಲ್ಲ. ಮೃದುವಾದ ಬಿರುಸಾದ ಹಲ್ಲುಜ್ಜುವ ಬ್ರಷ್ ಅನ್ನು ಬಳಸುವುದು ಉತ್ತಮ. ಸ್ವಚ್ಛವಾದ ಟೂತ್ ಬ್ರಶ್ ಅನ್ನು ಆರಿಸಿ, ಬೆಚ್ಚಗಿನ ನೀರಿನಿಂದ ಒದ್ದೆ ಮಾಡಿ ನಿಮ್ಮ ತುಟಿಗಳನ್ನು ಅದರಿಂದ ನಿಧಾನವಾಗಿ ಉಜ್ಜಿಕೊಳ್ಳಿ.

ಸುಂದರವಾದ ತುಟಿಯ ಬಣ್ಣಕ್ಕಾಗಿ ನೈಸರ್ಗಿಕ ಮನೆ ಮದ್ದುಗಳು
ಬೀಟ್‌ರೂಟ್‌ ರಸದಿಂದ ತುಟಿ ಸೌಂದರ್ಯ ಹೆಚ್ಚುವುದು

*ತುಟಿಗೆ ಬೀಟ್‌ರೂಟ್‌ರಸ, ಗುಲಾಬಿ ಎಸಳಿನ ರಸ ಹಚ್ಚಬಹುದು. ಈ ರೀತಿ ಮಾಡುತ್ತಾ ಬಂದರೆ ಯಾವ ಲಿಪ್‌ಗ್ಲೋಸ್ ಸಹಾಯವಿಲ್ಲದೆ ತುಟಿ ಸೌಂದರ್ಯ ಹೆಚ್ಚುವುದು.

ಒಂದು ತುಂಡು ಬೀಟ್ರೂಟ್ ಅನ್ನು ತುರಿದು ಹಿಂಡಿ ರಸ ಸಂಗ್ರಹಿಸಿ. ಈ ರಸವನ್ನು ಒಂದು ದಿನವಿಡೀ ಫ್ರಿಜ್ಜಿನಲ್ಲಿಟ್ಟು ಗಟ್ಟಿಯಾಗುವಂತೆ ಮಾಡಿ. ಬಳಿಕ ಇದರಲ್ಲಿ ಒಂದು ಚಿಕ್ಕ ಚಮಚದಷ್ಟು ಪ್ರಮಾಣವನ್ನು 1/3 ಚಿಕ್ಕ ಚಮಚದಷ್ಟು ಗ್ಲಿಸರಿನ್ ದ್ರವದಲ್ಲಿ ಮಿಶ್ರಣ ಮಾಡಿ ತುಟಿಗಳಿಗೆ ಲೇಪಿಸಿಕೊಳ್ಳಿ. ಇದರ ಬಣ್ಣ ನಿಮ್ಮ ನಿತ್ಯದ ಲಿಪ್ ಸ್ಟಿಕ್ ಗೆ ಸರಿಸಮನಾಗಿರುವ ಕಾರಣ ನಿತ್ಯದ ಲಿಪ್ ಸ್ಟಿಕ್ ಬದಲಿಗೆ ಹಚ್ಚಿಕೊಂಡು ಹೊರಹೋಗಬಹುದು. ಕೆಲವೇ ದಿನಗಳಲ್ಲಿ ಮೃದು ಹಾಗೂ ಗುಲಾಬಿ ವರ್ಣದ ತುಟಿಗಳು ನಿಮ್ಮದಾಗುತ್ತವೆ.

*ನಿಂಬೆಹಣ್ಣಿನಂತಹ ಸಿಟ್ರಸ್ ಹಣ್ಣುಗಳು ಚರ್ಮದ ಹೊಳಪಿಗೆ ಹೆಸರುವಾಸಿಯಾಗಿವೆ. ಇನ್ನು ಇದಕ್ಕೆ ಜೇನುತುಪ್ಪ ಸೇರಿಸಿ ಹಚ್ಚುವುದರಿಂದ ತುಟಿ ಮೃದುವಾಗಲು ಸಹಾಯವಾಗುತ್ತದೆ. ಪ್ರತಿ ಟೀ ಚಮಚ ನಿಂಬೆ ರಸ ಮತ್ತು ಜೇನುತುಪ್ಪವನ್ನು ಚೆನ್ನಾಗಿ ಮಿಶ್ರಣ ಮಾಡಿ ನಿಮ್ಮ ತುಟಿಗಳಿಗೆ ಹಚ್ಚಿ. ಇದನ್ನು 15-20 ನಿಮಿಷಗಳ ಕಾಲ ಬಿಡಿ. ನಂತರ ನೀರಿನಿಂದ ತೊಳೆಯಿರಿ. ಪ್ರತಿದಿನ ಒಮ್ಮೆ ಹೀಗೆ ಮಾಡಬಹುದು.

ಈ ಪರಿಹಾರವನ್ನು ಪ್ರಯತ್ನಿಸುವ ಮೊದಲು ದಯವಿಟ್ಟು ಪ್ಯಾಚ್ ಟೆಸ್ಟ್ ಮಾಡಿ.

*ನಾಲ್ಕೈದು ಗುಲಾಬಿಯ ದಳಗಳನ್ನ ರುಬ್ಬಿಕೊಂಡು ರಸ ಮಾಡಿಕೊಂಡು ತುಟಿಗೆ ಹಚ್ಚಿಕೊಂಡು 10-15 ನಿಮಿಷದ ಬಳಿಕ ತೊಳೆಯಿರಿ.

*½ ಚಿಕ್ಕಚಮಚ ಮೃದುವಾಗಿರುವ ಬೆಣ್ಣೆ ಮತ್ತು ½ ಚಿಕ್ಕಚಮಚ ಜೇನು ಬೆರೆಸಿ ಮಿಶ್ರಣ ಮಾಡಿ. ಈ ಲೇಪನವನ್ನು ಈಗತಾನೇ ಚೆನ್ನಾಗಿ ತೊಳೆದ ಹಾಗೂ ಸತ್ತ ಜೀವಕೋಶಗಳನ್ನು ಕೆರೆದು ನಿವಾರಿಸಿರುವ ತುಟಿಗಳಿಗೆ ಹಚ್ಚಿ. ಈ ವಿಧಾನವನ್ನು ರಾತ್ರಿ ಮಲಗುವ ಮುನ್ನ ಅನುಸರಿಸಿ ಬೆಳಿಗ್ಗೆದ್ದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ವಿಧಾನದಿಂದ ಕೆಲವೇ ವಾರಗಳಲ್ಲಿ ತುಟಿ ಗುಲಾಬಿ ವರ್ಣವನ್ನು ಪಡೆಯಲು ಸಾಧ್ಯವಾಗುತ್ತದೆ. ಬೆಣ್ಣೆ ತುಟಿಗಳಿಗೆ ಅತ್ಯುತ್ತಮವಾದ ತೇವಕಾರಕವಾಗಿದೆ ಹಾಗೂ ಜೇನು ಆರ್ದ್ರತೆ ನೀಡುತ್ತದೆ. ಅಲ್ಲದೇ ತುಟಿಗೆ ಆವರಿಸಿರುವ ಯಾವುದೇ ಸೋಂಕನ್ನೂ ಇವು ನಿವಾರಿಸುತ್ತವೆ.

*ಅಲೋವೆರಾದಲ್ಲಿ ಅಲೋಯಿನ್ ಇದೆ. ಇದು ಡಿಪಿಗ್ಮೆಂಟಿಂಗ್ ಗುಣಲಕ್ಷಣಗಳನ್ನು ಹೊಂದಿರುವ ಸಂಯುಕ್ತವಾಗಿದೆ. ಹೊಸದಾಗಿ ಹೊರತೆಗೆದ ಅಲೋವೆರಾ ಜೆಲ್ ಅನ್ನು ಅರ್ಧ ಟೀ ಚಮಚ ತೆಗೆದುಕೊಂಡು ನಿಮ್ಮ ತುಟಿಗಳಿಗೆ ಹಚ್ಚಿ. ನೀರಿನಿಂದ ತೊಳೆಯಿರಿ. ಇದನ್ನು ಪ್ರತಿದಿನ 1-2 ಬಾರಿ ಮಾಡಬಹುದು.

ಸುಂದರವಾದ ತುಟಿಯ ಬಣ್ಣಕ್ಕಾಗಿ ನೈಸರ್ಗಿಕ ಮನೆ ಮದ್ದುಗಳು
ಎಳ್ಳೆಣ್ಣೆ ತುಟಿಗಳಿಗೆ ಹಚ್ಚಬಹುದು

*ಎಳ್ಳೆಣ್ಣೆಯನ್ನು ನಿಮ್ಮ ತುಟಿಗಳಿಗೆ ಹಚ್ಚಿ, ಒಣಗುವವರೆಗೆ ಬಿಡಿ. ಅಗತ್ಯವಿದ್ದಾಗ ನೀವು ಮತ್ತೆ ಎಣ್ಣೆಯನ್ನು ಹಚ್ಚಬಹುದು. ಪ್ರತಿದಿನ 2-3 ಬಾರಿ ಹೀಗೆ ಮಾಡಿ. ಎಳ್ಳೆಣ್ಣೆ ಸಹ ಕೆಲವು ಜನರಿಗೆ ಅಲರ್ಜಿ ಉಂಟುಮಾಡುತ್ತದೆ.

*ಸ್ಟ್ರಾಬೆರಿಯನ್ನ ಪೇಸ್ಟ್ ಅಥವಾ ರಸ ಮಾಡಿಕೊಂಡು ತುಟಿಗೆ ಲೇಪಿಸಿದರೆ ನೈಸರ್ಗಿಕ ಕೆಂಪು ಬಣ್ಣ ಬರುತ್ತದೆ.

*ಲಿಂಬೆರಸ ಒಂದು ನೈಸರ್ಗಿಕವಾದ ಬಿಳಿಚುಕಾರಕವಾಗಿದ್ದು ಗಾಢವಾಗಿದ್ದ ಚರ್ಮವನ್ನು ಮತ್ತೆ ಸಹಜವರ್ಣಕ್ಕೆ ತರಲು ನೆರವಾಗುತ್ತದೆ. ಇದಕ್ಕಾಗಿ. ½ ಚಿಕ್ಕ ಚಮಚ ಲಿಂಬೆರಸ ಮತ್ತು ಒಂದು ಚಿಕ್ಕ ಚಮಚ ಜೇನನ್ನು ಬೆರೆಸಿ ತುಟಿಗಳಿಗೆ ಹಚ್ಚಿಕೊಳ್ಳಿ. ಸುಮಾರು ಹದಿನೈದು ನಿಮಿಷ ಬಿಟ್ಟು ಒದ್ದೆ ಬಟ್ಟೆಯಿಂದ ಒರೆಸಿಕೊಳ್ಳಿ. ಬಳಿಕ ಉತ್ತಮ ಗುಣಮಟ್ಟದ ಲಿಪ್ ಬಾಮ್ ಹಚ್ಚಿಕೊಂಡು ತುಟಿಗಳಿಗೆ ತೇವವನ್ನು ಒದಗಿಸಿ.

*ಒಂದು ಟೀಚಮಚ ದಾಳಿಂಬೆ ಪುಡಿ ತೆಗೆದುಕೊಂಡು ನೀರು ಸೇರಿಸಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ನಿಮ್ಮ ತುಟಿಗಳಿಗೆ ಹಚ್ಚಿ ಒಣಗಲು ಬಿಡಿ. ನೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ಪ್ರತಿದಿನ 1-2 ಬಾರಿ ಹೀಗೆ ಮಾಡಬಹುದು. ದಾಳಿಂಬೆ ಪುಡಿ ಕೆಲವರಿಗೆ ಚರ್ಮದ ಕಿರಿಕಿರಿ, ದದ್ದುಗಳಂತಹ ಅಲರ್ಜಿ ಉಂಟುಮಾಡುತ್ತದೆ.

*ತುಟಿಗಳ ಮೇಲೆ ದಾಲ್ಚಿನ್ನಿ ಅಥವಾ ಇನ್ನೊಂದು ಮಸಾಲೆ ವಸ್ತುವನ್ನು ಬಳಸಿ ಸ್ವಲ್ಪ ಉಜ್ಜಿಕೊಳ್ಳಿ, ಕೆಲವು ನಿಮಿಷ ನಂತರ ನಿಮ್ಮ ತುಟಿಗಳನ್ನು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

*ಒಂದು ಚಮಚ ಆಲಿವ್ ಎಣ್ಣೆ ಮತ್ತು ಒಂದು ಚಮಚ ಸಕ್ಕರೆ ಬೆರೆಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಚಿಕ್ಕ ವೃತ್ತಾಕಾರದಲ್ಲಿ ತುಟಿಗಳಿಗೆ ಹಚ್ಚಿ. ಇದರಿಂದ ತುಟಿಗಳ ಹೊರಪದರದ ಸತ್ತ ಜೀವಕೋಶಗಳನ್ನಿ ನಿವಾರಿಸಲು ಸಾಧ್ಯವಾಗುತ್ತದೆ ಹಾಗೂ ಮೃದುವಾಗುತ್ತವೆ. ಸುಮಾರು ಹದಿನೈದು ನಿಮಿಷ ಬಿಟ್ಟು ಒದ್ದೆ ಬಟ್ಟೆಯಿಂದ ಒರೆಸಿಕೊಳ್ಳಿ. ಬಳಿಕ ಉತ್ತಮ ಗುಣಮಟ್ಟದ ಲಿಪ್ ಬಾಮ್ ಹಚ್ಚಿಕೊಂಡು ತುಟಿಗಳಿಗೆ ತೇವವನ್ನು ಒದಗಿಸಿ.

*ಅರಿಶಿನದಲ್ಲಿರುವ ಕರ್ಕ್ಯುಮಿನ್ ಕಪ್ಪು ಬಣ್ಣದ ತುಟಿಯನ್ನು ಕೆಂಬಣ್ಣಕ್ಕೆ ತಿರುಗಿಸುತ್ತದೆ. ಒಂದು ಟೀ ಚಮಚ ಅರಿಶಿನ ಪುಡಿಯನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ ದಪ್ಪ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ನಿಮ್ಮ ತುಟಿಗಳಿಗೆ ಹಚ್ಚಿ ಒಣಗಲು ಬಿಡಿ. ನೀರಿನಿಂದ ತೊಳೆಯಿರಿ. ಪ್ರತಿದಿನ ಒಮ್ಮೆ ಹೀಗೆ ಮಾಡಿ. ಅರಿಶಿನ ಕೆಲವರಿಗೆ ಅಲರ್ಜಿ ಇರಬಹುದು ಅಂಥವರು ಬೇಡ.

*½ ಚಿಕ್ಕ ಚಮಚ ನುಣ್ಣಗೆ ಪುಡಿಮಾಡಿದ ಕಾಫಿ ಪುಡಿ ಹಾಗೂ ½ ಚಿಕ್ಕಚಮಚ ಜೇನು ಬೆರೆಸಿ ಮಿಶ್ರಣ ತಯಾರಿಸಿ. ಇದನ್ನು ತುಟಿಗಳಿಗೆ ವೃತ್ತಾಕಾರದಲ್ಲಿ ಮಸಾಜ್ ಮಾಡುತ್ತಾ ಹಚ್ಚಿಕೊಳ್ಳಿ. ಸುಮಾರು ಎರಡು ಮೂರು ನಿಮಿಷ ಮಸಾಜ್ ಮಾಡಿದ ಬಳಿಕ ಸುಮಾರು ಅರ್ಧ ನಿಮಿಷ ಹಾಗೇ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಸುಂದರವಾದ ತುಟಿಯ ಬಣ್ಣಕ್ಕಾಗಿ ನೈಸರ್ಗಿಕ ಮನೆ ಮದ್ದುಗಳು
ಸೌತೆಕಾಯಿಯ ಪೇಸ್ಟ್ ಅನ್ನು ತುಟಿಗಳಿಗೆ ಹಚ್ಚಿ

*ಸೌತೆಕಾಯಿಯಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಸಿಲಿಕಾ ಭರಿತ ಸಂಯುಕ್ತಗಳಿವೆ. ಈ ಸಂಯುಕ್ತಗಳು ಕಪ್ಪು ಚರ್ಮ ತೆಗೆಯಲು ಸಹಾಯ ಮಾಡುತ್ತದೆ. ಆದ್ದರಿಂದ ಸೌತೆಕಾಯಿಯ ಪೇಸ್ಟ್ ಅನ್ನು ತುಟಿಗಳಿಗೆ ಹಚ್ಚಿ. 15-20 ನಿಮಿಷಗಳ ಕಾಲ ಬಿಡಿ. ನಂತರ ನೀರಿನಿಂದ ತೊಳೆಯಿರಿ. ಪ್ರತಿದಿನ 1-2 ಬಾರಿ ಹೀಗೆ ಮಾಡಿ.

ತುಟಿ ನೈಸರ್ಗಿಕವಾಗಿ ಆಕರ್ಷಕವಾಗಿ ಕಾಣಲು ಹೀಗೆ ಮಾಡಿ :

1. ಆಲೀವ್ ಎಣ್ಣೆ ಹಾಗೂ ಸಕ್ಕರೆ ಸ್ಕ್ರಬ್

ಸ್ವಲ್ಪ ಆಲೀವ್ ಎಣ್ಣೆಗೆ ಸಕ್ಕರೆ ಹಾಕಿ ಅದರಿಂದ ತುಟಿಯನ್ನು ಸ್ಕ್ರಬ್‌ಮಾಡಬೇಕು. ಇದು ತುಟಿ ಮೇಲಿನ ಒಣ ತ್ವಚೆಯನ್ನು ತೆಗೆಯಲು ಸಹಾಯ ಮಾಡುತ್ತೆ. (ಈ ರೀತಿ ವಾರದಲ್ಲಿ ಎರಡು ಬಾರಿ ಮಾಡಿ).

2. ನಂತರ ತುಟಿಯನ್ನು ಒಂದು ನಿಮಿಷ ಮೆಲ್ಲನೆ ಬ್ರೆಷ್‌ನಿಂದ ಉಜ್ಜಿ. ಇದು ಆ ಭಾಗದಲ್ಲಿ ರಕ್ತ ಸಂಚಲನ ಹೆಚ್ಚುವಂತೆ ಮಾಡುವುದು.

3. ತುಟಿಗೆ ಜೇನು ಹಚ್ಚಿ (ಜೇನು ಪ್ರತಿದಿನ ಹಚ್ಚಿ).

ನೆನಪಿನಲ್ಲಿಡಬೇಕಾದ ಅಂಶಗಳು

*ನಿಮ್ಮ ತುಟಿಗಳನ್ನು ನಿಯಮಿತವಾಗಿ ಎಫ್ಫೋಲಿಯೇಟ್ ಮಾಡಿ.

* ಪ್ರತಿದಿನ ಸಾಕಷ್ಟು ನೀರು ಕುಡಿಯಿರಿ.

*ಗುಣಮಟ್ಟದ ಲಿಪ್ ಬಾಮ್ ಬಳಸಿ.

*ಕಡಿಮೆ-ಗುಣಮಟ್ಟದ ಲಿಪ್ ಸ್ಟಿಕ್ ಬಳಸಬೇಡಿ.

*ನಿಮಗೆ ಅಲರ್ಜಿ ಉಂಟುಮಾಡುವ ಉತ್ಪನ್ನಗಳನ್ನು ಬಳಸಲೇಬೇಡಿ.

* ನಿರಂತರವಾಗಿ ತುಟಿಗಳನ್ನು ಒಣಗದಂತೆ ನೋಡಿಕೊಳ್ಳಿ.

ಮನೆಯಲ್ಲಿ ತಯಾರಿಸಿದ ಸೀರಮ್‌ನಿಂದ ಬಳಕೆ ಮಾಡಿ. ಈಗ ನಿಮ್ಮ ತುಟಿಗಳು ಮೃದುವಾಗಿಸುತ್ತದೆ. ಇದು ತುಟಿಗಳ ಬಣ್ಣವನ್ನು ಹೆಚ್ಚು ಕಾಲ ಉಳಿಸಿಕೊಳ್ಳಲು ಮತ್ತು ಒಣಗದಂತೆ ತಡೆಯಲು ಸಹಾಯ ಮಾಡುತ್ತದೆ. ಈ ಕೆಳಗಿನ ಯಾವುದೇ ಪದಾರ್ಥಗಳನ್ನು ಲಿಪ್ ಸೀರಮ್ ಆಗಿ ಬಳಸಿ;

1/2 ಟೀ ಚಮಚ ತೆಂಗಿನ ಎಣ್ಣೆ

1/2 ಟೀ ಚಮಚ ಆಲಿವ್ ಎಣ್ಣೆ

1/2 ಟೀ ಸ್ಪೂನ್ ಬಾದಾಮಿ ಎಣ್ಣೆ

ಇವುಗಳನ್ನು ತುಟಿಗೆ ಹಚ್ಚಿ ಉಜ್ಜಿ 15 ನಿಮಿಷಗಳ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಇನ್ನು ಈ ವಸ್ತುಗಳನ್ನು ಬಳಸಿ ನಿಮ್ಮ ತುಟಿಯ ಅಂದವನ್ನು ಹೆಚ್ಚು ಮಾಡಬಹುದು. ಇವುಗಳು ನಿಮ್ಮ ತುಟಿಯ ಕೆಂಪು ಬಣ್ಣವನ್ನು ಹೆಚ್ಚು ಮಾಡುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಭತ್ತದ ಕೃಷಿ

ಭಾರತದ ನಾಗರಿಕರ ಬದುಕಿಗೆ ಪೂರಕವಾದ ‘ಭತ್ತದ ಕೃಷಿ ಸಂಸ್ಕೃತಿ,’ ಸನಾತನವಾದದ್ದು

ಮೆದುಳು ಜ್ವರದ ಲಸಿಕೆ ಅಭಿಯಾನ

ಮೆದುಳು ಜ್ವರದ ಲಸಿಕೆ ಅಭಿಯಾನ, ತಪ್ಪದೆ ನಿಮ್ಮ ಮಕ್ಕಳಿಗೆ ಹಾಕಿಸಿ