in

ಕಣ್ಣು ಉರಿ ಸಮಸ್ಯೆ ಇದ್ದರೆ ಕೆಲವೊಂದು ಮನೆ ಮದ್ದು ಉಪಯೋಗಿಸಿ

ಕಣ್ಣು ಉರಿ ಸಮಸ್ಯೆ
ಕಣ್ಣು ಉರಿ ಸಮಸ್ಯೆ

ಸಾಮಾನ್ಯವಾಗಿ ಕಣ್ಣುಗಳಿಗೆ ನೀಡುವ ಅತಿಯಾದ ಶ್ರಮದಿಂದ ಕಣ್ಣು ಕೆಂಪಗಾಗುವುದು, ಕಣ್ಣುಗಳಲ್ಲಿ ಉರಿ, ಎದುರಿನ ವಸ್ತುಗಳನ್ನು ಸ್ಪಷ್ಟವಾಗಿ ನೋಡಲಸಾಧ್ಯವಾಗುವುದು, ಹಗಲಿನ ಬೆಳಕನ್ನು ನೋಡಲಾಗದ ಸಮಸ್ಯೆಗಳು ಎದುರಾಗಬಹುದು.

ದಿನವಿಡೀ ಲ್ಯಾಪ್‌ಟಾಪ್, ಕಂಪ್ಯೂಟರ್, ಮೊಬೈಲ್‌ನಲ್ಲಿರುವವರಿಗೆ ಕಣ್ಣು ನೋವು ಕಾಣಿಸಿಕೊಳ್ಳುವುದು ಸಹಜ. ಕಣ್ಣಿನಲ್ಲಿ ನೋವು, ಉರಿ, ಆಯಾಸದ ಅನುಭವವಾಗುತ್ತದೆ.

ಕಣ್ಣು ಉರಿ ಸಮಸ್ಯೆ ಇದ್ದರೆ ಕೆಲವೊಂದು ಮನೆ ಮದ್ದು ಉಪಯೋಗಿಸಿ
ದಿನವಿಡೀ ಲ್ಯಾಪ್‌ಟಾಪ್, ಕಂಪ್ಯೂಟರ್, ಮೊಬೈಲ್‌ನಲ್ಲಿರುವವರಿಗೆ ಕಣ್ಣು ನೋವು ಕಾಣಿಸಿಕೊಳ್ಳುವುದು ಸಹಜ

ಆಧುನಿಕ ಯುಗದಲ್ಲಿ ಕಣ್ಣಿಗೆ ಹೆಚ್ಚಿನ ಒತ್ತಡ ಇರುತ್ತದೆ. ತಂತ್ರಜ್ಞಾನೀಕರಣಗೊಂಡ ಈ ಯುಗದಲ್ಲಿ ಪ್ರತಿಯೊಬ್ಬರೂ ಕೂಡ ಮೊಬೈಲ್, ಕಂಪ್ಯೂಟರ್‌ಗಳ ದಾಸರಾಗಿ ಬಿಟ್ಟಿದ್ದಾರೆ. ಹೀಗಾಗಿ ಬಹುಬೇಗ ಕಣ್ಣಿನ ಸಮಸ್ಯೆಗಳು ನಮ್ಮನ್ನು ಕಾಡುತ್ತಿರುತ್ತವೆ. ಕಣ್ಣಿನಲ್ಲಿ ಉರಿ ಕಾಣಿಸಿಕೊಳ್ಳುವುದು ಈಗ ಒಂದು ರೀತಿಯ ಸಾಮಾನ್ಯ ಖಾಯಿಲೆಯಾಗಿ ಬಿಟ್ಟಿದೆ.

ಕಣ್ಣಿನ ಬಾಹ್ಯದಲ್ಲಿ ಸಮಸ್ಯೆ ಅಥವಾ ಕಣ್ಣಿನ ಒಳಗಿನ ಸಮಸ್ಯೆ ಎರಡೂ ಕಣ್ಣಿನ ನೋವು, ಉರಿಗೆ ಕಾರಣವಾಗುತ್ತದೆ. ಕೆಲವೊಮ್ಮೆ ಗಂಭೀರ ಖಾಯಿಲೆಯೂ ಇದಕ್ಕೆ ಕಾರಣವಾಗಬಹುದು. ಕಣ್ಣು ನೋವು ಮಾಮೂಲಿಯಾಗಿದ್ದರೆ ಕೆಲವೊಂದು ಮನೆ ಮದ್ದಿನ ಮೂಲಕ ನೋವನ್ನು ಕಡಿಮೆ ಮಾಡಬಹುದು.

ಇಂತಹ ಯಾವುದೇ ತೊಂದರೆಗಳಿಲ್ಲದೇ ಬಹಳ ಸುಲಭವಾಗಿ ಕಣ್ಣಿನ ಉರಿಯಂಥಹ ಸಮಸ್ಯೆಗಳನ್ನು ನಿವಾರಣೆ ಮಾಡಬಹುದಾಗಿದೆ.

*ಕಣ್ಣುಗಳಲ್ಲಿ ಹೆಚ್ಚಿನ ಅಲರ್ಜಿ ಉಂಟಾದರೆ 2-3 ಡ್ರಾಪ್‌ ಹಸುವಿನ ಶುದ್ಧವಾದ ಹಾಲನ್ನು ಹಾಕಿದರೆ ಈ ಹಾಲು ಎಲ್ಲಾ ಸಮಸ್ಯೆಗಳನ್ನು ಹೀರಿಕೊಳ್ಳುತ್ತದೆ.

*ಮೊಸರಲ್ಲಿ ಬಾಳೆಹಣ್ಣನ್ನು ಕಿವುಚಿ ಪ್ರತಿದಿನ ತಿನ್ನುವುದು ಸಹ ಕಣ್ಣಿನ ಆರೋಗ್ಯಕ್ಕೆ ಉತ್ತಮ. ಹೀಗೆ ನಿರಂತರ ಸೇವಿಸುವುದರಿಂದ ಕಣ್ಣು ಉರಿ ಕೂಡ ಕಡಿಮೆಯಾಗುತ್ತದೆ.

*ವಿಪರೀತ ಕಣ್ಣು ಉರಿಯಿದ್ದರೆ, ಎದೆಹಾಲಿನಲ್ಲಿ ಉಪ್ಪಿನ ಹರಳನ್ನು ಕರಗಿಸಿ, ಕಣ್ಣಿಗೆ ಹಚ್ಚಿಕೊಳ್ಳುವುದು ಉತ್ತಮ.

*ಕಣ್ಣಿನ ನೋವಿಗೆ ರೋಸ್ ವಾಟರ್ ಬಹಳ ಪ್ರಯೋಜನಕಾರಿ. ರಾತ್ರಿ ಮಲಗುವ ಮೊದಲು ಕಣ್ಣಿನ ಮೇಲೆ ರೋಸ್ ವಾಟರ್ ಸವರಿ ಮಲಗಬೇಕು. ರೋಸ್ ವಾಟರ್ ನಿಂದ ಕಣ್ಣು ತೊಳೆಯಬಹುದು.

*ಕಣ್ಣು ಉರಿಯ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ ಸೌತೆಕಾಯಿಯ ತಿರುಳನ್ನು ಕಣ್ಣಿಗೆ ಉಜ್ಜಿಕೊಂಡರೆ ಉರಿ ಕಡಿಮೆಯಾಗುತ್ತದೆ.

ಕಣ್ಣು ಉರಿ ಸಮಸ್ಯೆ ಇದ್ದರೆ ಕೆಲವೊಂದು ಮನೆ ಮದ್ದು ಉಪಯೋಗಿಸಿ
ಸೌತೆಕಾಯಿ ಹೋಳುಗಳನ್ನು ಸ್ವಲ್ಪ ಸಮಯದವರೆಗೆ ಕಣ್ಣುಗಳ ಮೇಲೆ ಇರಿಸಿ

*ಸೌತೆಕಾಯಿ ಹೋಳುಗಳನ್ನು ಸ್ವಲ್ಪ ಸಮಯದವರೆಗೆ ಕಣ್ಣುಗಳ ಮೇಲೆ ಇರಿಸಿ. ಇದನ್ನು ಮಾಡುವುದರಿಂದ ಕಣ್ಣುಗಳು ತಂಪಾಗಿರುತ್ತವೆ.

*ಬದನೆಕಾಯಿ ಕೂಡ ನಯನಗಳ ಆರೋಗ್ಯವನ್ನು ಕಾಪಾಡುತ್ತದೆ. ಹೀಗಾಗಿ ಬದನೆಕಾಯಿ ಪಲ್ಯವನ್ನು ಮಿತವಾಗಿ ಸೇವಿಸುತ್ತಿದ್ದರೆ ದೃಷ್ಟಿ ಮಾಂದ್ಯತೆ ಕಡಿಮೆಯಾಗುತ್ತದೆ.

*ಒಂದು ಹತ್ತಿ ಬಟ್ಟೆಯೊಳಗೆ ಐಸ್ ಹಾಕಿ ಅದನ್ನು ಕಟ್ಟಿ. ಕಣ್ಣಿನ ಸುತ್ತಮುತ್ತ ಸ್ವಲ್ಪ ಸಮಯ ಐಸ್ ಇರುವ ಬಟ್ಟೆಯನ್ನಿಟ್ಟು ಮೆದುವಾಗಿ ಒತ್ತಿ.

ಕಣ್ಣುಗಳನ್ನು ತಣ್ಣಗಿನ ನೀರಿನಲ್ಲಿ ಆಗಾಗ ತೊಳೆಯುತ್ತಿರಿ. ಇದ್ರಿಂದಲೂ ಕಣ್ಣಿನ ಉರಿ ಕಡಿಮೆಯಾಗುತ್ತದೆ.

*ಕಣ್ಣುಗಳ ಆರೋಗ್ಯವನ್ನು ಹೆಚ್ಚಿಸುವಲ್ಲಿ ಕೆಂಪು ಮೂಲಂಗಿ ಮುಖ್ಯ ಪಾತ್ರವಹಿಸುತ್ತದೆ. ಇದನ್ನು ಆಹಾರದಲ್ಲಿ ಹೆಚ್ಚು ಬಳಸುವುದು ಉತ್ತಮ.

*ದಿನಕ್ಕೆ ಕನಿಷ್ಠ 8 ಗಂಟೆಗಳ ಕಾಲ ನಿದ್ರೆ ಮಾಡಿ. ಸಾಕಷ್ಟು ನೀರು ಕುಡಿಯುವುದು, ಮತ್ತು ಪ್ರತಿನಿತ್ಯ ಕನಿಷ್ಠ 10 ರಿಂದ 15 ನಿಮಿಷ ಕಣ್ಣಿನ ಸುತ್ತ ಬಟ್ಟೆಗಳಲ್ಲಿ ಐಸ್ ಕ್ಯೂಬ್ ಇಡಿ. ಕಣ್ಣುಗಳ ಮೇಲೆ ಕ್ಯಾಮೊಮೈಲ್, ಹಸಿರು ಚಹಾ ಅಥವಾ ಸೌತೆಕಾಯಿ ಇಡಬಹುದು ಅಥವಾ ಕ್ರೀಮ್ ಹಚ್ಚಿ.

*ಮಾವಿನಹಣ್ಣಿನ ಸೀಕರಣೆಯನ್ನು ಪ್ರತಿದಿನ ಸೇವಿಸುವುದರಿಂದ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು.

*ಅರಿಶಿನ ಬೆರೆಸಿದ ಹಾಲು ಅಥವಾ ವಿಟಮಿನ್‌ ಸಿ ಹೆಚ್ಚಾಗಿ ಸೇವನೆ ಮಾಡಿದರೆ ಕಣ್ಣಿನ ಸಮಸ್ಯೆ ನಿವಾರಣೆಯಾಗುತ್ತದೆ.

ಕಣ್ಣು ಉರಿ ಸಮಸ್ಯೆ ಇದ್ದರೆ ಕೆಲವೊಂದು ಮನೆ ಮದ್ದು ಉಪಯೋಗಿಸಿ
ಅರಿಶಿನ ಬೆರೆಸಿದ ಹಾಲು

*ನಿದ್ರಾಹೀನತೆ, ಡಿಹೈಡ್ರೇಶನ್, ಸತತವಾಗಿ ಧೂಮಪಾನ ಮಾಡುವ ಚಟ, ಅತಿಯಾದ ಮದ್ಯಪಾನ ಮತ್ತು ವಯಸ್ಸಾದಂತೆ ಕಣ್ಣುಗಳ ಸುತ್ತ ಕಪ್ಪು ಕಲೆಗಳು ಹೆಚ್ಚುತ್ತವೆ.

*ಪ್ರತಿ ದಿನ ನೆಲ್ಲಿಕಾಯಿ ಜ್ಯೂಸ್​ ಅನ್ನು ಸೇವಿಸುತ್ತಿದ್ದರೆ ಕಣ್ಣಿನ ದೋಷ ದೂರವಾಗುತ್ತದೆ. ಊಟದೊಂದಿಗೆ ಈರುಳ್ಳಿಯನ್ನು ನಂಜಿಕೊಂಡು ತಿನ್ನುವುದರಿಂದ ಸಹ ಕಣ್ಣು ನೋವು ಕಡಿಮೆಯಾಗುತ್ತದೆ

*ಕಣ್ಣಿನಲ್ಲಿ ಉರಿ ಕಂಡುಬಂದರೆ ರಾಸ್ಬರ್ರಿಎಲೆಗಳನ್ನು ಅರೆದು ಅದನ್ನು ಕಣ್ಣಿಗೆ ಹಾಕಿದರೆ ಸಮಸ್ಯೆ ನಿವಾರಣೆಯಾಗುತ್ತದೆ.

 *ಬೇವು ಕೂಡ ಕಣ್ಣಿನ ಆರೋಗ್ಯವನ್ನು ವೃದ್ಧಿಸುತ್ತದೆ. ಬೇವಿನ ಸೊಪ್ಪಿನ ರಸವನ್ನು ಕಣ್ಣುಗಳಿಗೆ ಹನಿ ಹನಿಯಾಗಿ ವಾರಕ್ಕೊಮ್ಮೆ ಹಾಕಿದರೆ ಕಣ್ಣಿಗೆ ಸಂಬಂಧಿಸಿದ ಕಾಯಿಲೆಗಳು ದೂರವಾಗುತ್ತದೆ.

*ಆಲೂಗಡ್ಡೆ ಚೂರುಗಳನ್ನು ಸೌತೆಕಾಯಿಗಳಂತೆ ಕಣ್ಣುಗಳ ಮೇಲೆ ಇಡಬಹುದು. ಇದು ಕಣ್ಣಿಗೆ ವಿಶ್ರಾಂತಿ ನೀಡುತ್ತದೆ. ಆಲೂಗಡ್ಡೆ ರಸವನ್ನು ಕೂಡ ಕಣ್ಣಿಗೆ ಹಚ್ಚಬಹುದು.

* ಸಾಕಷ್ಟು ನಿದ್ರೆ ಮತ್ತು ನೀರು ಸೇವನೆ ಈ ಪ್ರಕ್ರಿಯೆಯನ್ನು ನಿಧಾನಗೊಳಿಸುವ ನೈಸರ್ಗಿಕ ಸಾಧನಗಳಾಗಿವೆ. ಉತ್ತಮ ಫಲಿತಾಂಶಗಳಿಗಾಗಿ ವಿಟಮಿನ್ ಸಿ, ರೆಟಿನಾಲ್ ವಿಟಮಿನ್ ಎ ತುಂಬಿದ ಸೌಂದರ್ಯವರ್ಧಕಗಳನ್ನು ಬಳಸಬಹುದು.

*ದಾಳಿಂಬೆ ಎಲೆಗಳು ಕೂಡ ಕಣ್ಣು ನೋವಿಗೆ ಪರಿಣಾಮಕಾರಿ. ಎಲೆಗಳನ್ನು ಪುಡಿ ಮಾಡಿ ಕಣ್ಣಿನ ಮೇಲೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ಕಣ್ಣನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು.

*ನೆಲ್ಲಿಕಾಯಿ ಪುಡಿ, ಜೇನು ಮಿಕ್ಸ್‌ ಮಾಡಿ ರಾತ್ರಿ ಮಲಗುವ ವೇಳೆ ಒಂದು ಚಮಚದಷ್ಟು ಸೇವಿಸಿ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಭೃಂಗರಾಜ

ಭೃಂಗರಾಜ ಉತ್ತಮ ಔಷಧೀಯ ಗುಣಗಳನ್ನು ಹೊಂದಿದೆ

ಡಾ. ವೀರೇಂದ್ರ ಹೆಗ್ಗಡೆ ಜನುಮ ದಿನ

ಧರ್ಮಸ್ಥಳ ಧರ್ಮಾಧಿಕಾರಿಯಾದ ಡಾ. ವೀರೇಂದ್ರ ಹೆಗ್ಗಡೆ ಜನುಮ ದಿನ