in

ಮುಖದ ಚರ್ಮ ಬೆಳ್ಳಗಾಗಿ, ಒಂದು ಒಳ್ಳೆಯ ಕಾಂತಿ ಬರಲು ಮನೆ ಮದ್ದುಗಳು

ಒಳ್ಳೆಯ ಕಾಂತಿ ಬರಲು ಮನೆ ಮದ್ದುಗಳು
ಒಳ್ಳೆಯ ಕಾಂತಿ ಬರಲು ಮನೆ ಮದ್ದುಗಳು

ಮುಖ ಬೆಳ್ಳಗೆ ಇರಬೇಕು ಅನ್ನುವುದು ಪ್ರತಿಯೊಬ್ಬರ ಆಸೆ. ಆದರೆ ಚರ್ಮದ ಬಣ್ಣ ಬದಲಾಯಿಸಲು ಸಾಧ್ಯವಿಲ್ಲ, ಬದಲಿಗೆ ಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಸಿ ಮುಖದ ಚರ್ಮದ ಕಾಂತಿಯನ್ನಂತೂ ಹೆಚ್ಚಿಸಬಹುದು.

ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಎಷ್ಟೋ ಬಗೆಯ ಕ್ರೀಮ್ ಗಳು ಮತ್ತು ಫೇಸ್ ವಾಷ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ. ಆದರೆ ಅವುಗಳಿಂದ ಒಳ್ಳೆಯ ಪರಿಣಾಮಗಳಿಗಿಂತ ಅಡ್ಡ ಪರಿಣಾಮಗಳು ಉಂಟಾಗುವುದು ಹೆಚ್ಚು. ಏಕೆಂದರೆ ಅದಕ್ಕೆ ರಾಸಾಯನಿಕಗಳನ್ನು ಬಳಸಿರುತ್ತಾರೆ. ಮನೆಯಲ್ಲಿ ಬೇಕಾದಷ್ಟು ವಸ್ತುಗಳನ್ನು ಬಳಸಿ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಸಾಮಾನ್ಯವಾಗಿ ಕಡಲೆಹಿಟ್ಟನ್ನು ಮುಖಕ್ಕೆ ಹಚ್ಚುತ್ತಾರೆ. ಆದರೆ ಅಕ್ಕಿಹಿಟ್ಟನ್ನು ಸಹ ಬಳಸಿ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಇದು ಮುಖದ ಕಾಂತಿಯನ್ನು ಹೆಚ್ಚಿಸಿ ಕಲೆಗಳನ್ನು ಹೋಗಲಾಡಿಸುತ್ತದೆ.

ಮುಖದ ಚರ್ಮ ಬೆಳ್ಳಗಾಗಿ, ಒಂದು ಒಳ್ಳೆಯ ಕಾಂತಿ ಬರಲು ಮನೆ ಮದ್ದುಗಳು
ಅರಸಿಣ ಪುಡಿ ಮತ್ತು ಹಾಲು ಅಂಟಿ ಆಕ್ಸಿಡೆಂಟ್ ಗುಣ ಹೊಂದಿದೆ

ರಾತ್ರಿ ಮಲಗುವ ಮುನ್ನ ಒಂದು ಚಮಚ ಕಚ್ಚಾ ಹಾಲಿಗೆ ಅರ್ಧ ಚಮಚ ಅರಸಿಣ ಪುಡಿ  ಅಥವಾ ಹಳದಿ ಪುಡಿ ಸೇರಿಸಿ. ಒಂದು ಹತ್ತಿ ಉಂಡೆಯ ನೆರವಿನಿಂದ ಅದನ್ನು ಟೋನರ್  ತರಹ ಮುಖಕ್ಕೆ ಹಚ್ಚಿ.  ಹಾಸಿಗೆಗೆ ಹೋಗುವ ಮೊದಲು ಅದು ಸಂಪೂರ್ಣವಾಗಿ ಒಣಗಬೇಕು.  ಈ ಕ್ರಮ ನಿತ್ಯವೂ ಅನುಸರಿಸಿದರೆ ಹೊಳೆಯುವ ಮುಖ ನಿಮ್ಮದಾಗುತ್ತದೆ. ಆರೋಗ್ಯಕ್ಕಾಗಿ ಅರಸಿಣ ಮಿಶ್ರಿತ ಹಾಲು ಎಷ್ಟು ಮುಖ್ಯ ಎಂಬುದು ನಿಮಗೆ ಗೊತ್ತಿದೆ.  ಇದು ಅಂಟಿ ಆಕ್ಸಿಡೆಂಟ್ ಗುಣ ಹೊಂದಿದೆ. ರೋಗನಿರೋಧಕ ಗುಣ ಇದೆ. ಆಯುರ್ವೇದದಲ್ಲಿ ಅರಸಿಣಕ್ಕೆ ಸಾಕಷ್ಟು ಮಹತ್ವ ಇದೆ.  

ಲಿಂಬೆರಸ ಮತ್ತು ಮೊಸರು ಎರಡೂ ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಉತ್ತಮವಾಗಿವೆ ಹಾಗೂ ತ್ವಚೆಯಲ್ಲಿರುವ ಕಪ್ಪು ಕಲೆಗಳು ಮತ್ತು ಸೂಕ್ಷ್ಮಗೀರುಗಳನ್ನು ನಿವಾರಿಸಿ ಆರೋಗ್ಯಕರ ಹಾಗೂ ಕಲೆಯಿಲ್ಲದ ಕಾಂತಿಯುಕ್ತ ತ್ವಚೆ ಪಡೆಯಲು ನೆರವಾಗುತ್ತದೆ.

ಹಸಿ ಹಾಲಿನಲ್ಲಿ ಹತ್ತಿ ಉಂಡೆ ಮುಳುಗಿಸಿ ಮತ್ತು ಪ್ರತಿನಿತ್ಯ ನಿಮ್ಮ ಮುಖವನ್ನು ಅದರಿಂದ ಒರೆಸಿರಿ. ಇದರಿಂದ ಮುಖದ ಮೇಲೆ ಕೊಳೆಯು ತೆಗೆದುಹಾಕಲ್ಪಡುವುದು ಮತ್ತು ಶುದ್ಧ ಚರ್ಮವನ್ನು ಇದು ನೀಡುವುದು.

ಒಣಚರ್ಮ ಹೊಂದಿದವರು ಹಸಿ ಹಾಲನ್ನು ದಿನಾಲೂ ಮುಖಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಚರ್ಮ ಮೃದು ಆಗುತ್ತದೆ. ಮುಖ ಕಾಂತಿಯನ್ನು ಹೊಂದಲು ಮೊದಲ ಹಂತದಲ್ಲಿ ಹಸಿಹಾಲನ್ನು ತೆಗೆದುಕೊಂಡು ಅದನ್ನು ಹತ್ತಿಯ ಚೂರಿನಲ್ಲಿ ಮುಖಕ್ಕೆ ಹಚ್ಚಬೇಕು. ನಂತರ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಬೇಕು. ಎರಡನೆಯ ಹಂತದಲ್ಲಿ ಹಾಗೆಯೇ ಒಂದು ಕಪ್ ನಲ್ಲಿ ಹಾಲನ್ನು ತೆಗೆದುಕೊಂಡು ಅದಕ್ಕೆ ಅರ್ಧ ಚಮಚ ಅಕ್ಕಿಹಿಟ್ಟನ್ನು ಹಾಕಬೇಕು. ಇದನ್ನು ಚೆನ್ನಾಗಿ ಮಿಶ್ರಣ ಮಾಡಬೇಕು. ಹಸಿಯಾದ ಹಾಲನ್ನೇ ತೆಗೆದುಕೊಳ್ಳಬೇಕು.

ಮುಖದ ಚರ್ಮ ಬೆಳ್ಳಗಾಗಿ, ಒಂದು ಒಳ್ಳೆಯ ಕಾಂತಿ ಬರಲು ಮನೆ ಮದ್ದುಗಳು
ಬೇವಿನ ಎಲೆಗಳಲ್ಲಿ ಔಷಧೀಯ ಗುಣಗಳು ಅಪಾರ

ಬೇವಿನ ಎಲೆಗಳಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇದೆ ಎನ್ನುವುದು ಎಲ್ಲರಿಗೂ ತಿಳಿದಿರುವಂತಹ ವಿಚಾರ. ಬೇವು ಕಹಿಯಾದರೂ ಇದರಲ್ಲಿನ ಔಷಧೀಯ ಗುಣಗಳು ಅಪಾರ. ಹೀಗಾಗಿ ಇದನ್ನು ಹಿಂದಿನಿಂದಲೂ ಆಯುರ್ವೇದದಲ್ಲಿ ಬಳಸಿಕೊಂಡು ಬರಲಾಗುತ್ತಿದೆ. ಇದನ್ನು ಸೌಂದರ್ಯ ವೃದ್ಧಿಸಲು ಹೊರಗಿನಿಂದ ಹಚ್ಚಿಕೊಳ್ಳಬಹುದು.

ಬೇವಿನ ಎಲೆಗಳು ಚರ್ಮದ ರಂಧ್ರಗಳಲ್ಲಿನ ವಿಷವನ್ನು ಹೊರಗೆ ಹಾಕುವುದು. ಬೇವಿನ ಎಲೆಗಳನ್ನು ಕುದಿಸಿಕೊಂಡು ಅದರ ಹಬೆ ಪಡೆಯಿರಿ.

ಮನೆಯಲ್ಲೇ ಫೇಸ್ ಪ್ಯಾಕ್ ತಯಾರಿಸಿಕೊಂಡರೆ ತುಂಬಾ ಒಳ್ಳೆಯದು.

ಜೀರಿಗೆ ರುಬ್ಬಿಕೊಂಡು ಅದರ ಪೇಸ್ಟ್ ಮಾಡಿ. ಇದಕ್ಕೆ ಅರಶಿನ ಹುಡಿ ಮತ್ತು ಶ್ರೀಗಂಧದ ಹುಡಿ ಹಾಕಿಕೊಂಡು ಮಿಶ್ರಣ ಮಾಡಿ ಪೇಸ್ಟ್ ಮಾಡಿ.

ತೆಂಗಿನೆಣ್ಣೆ ಮತ್ತು ಬೀಟ್ ರೂಟ್ ಜ್ಯೂಸ್ ಬಳಸಿಕೊಂಡರೆ ಆಗ ತುಟಿಗಳು ನೈಸರ್ಗಿಕವಾಗಿ ಕೆಂಪಾಗಿರುವುದು. ಅಂಜೂರವನ್ನು ಕೂಡ ವಯಸ್ಸಾಗುವ ಲಕ್ಷಣ ತಡೆಯಲು ಬಳಸಬಹುದು.

ಅಲೋವೆರಾದಲ್ಲಿ ಅದ್ಭುತ ಗುಣಗಳು ಇವೆ. ಇದು ಬಿಸಿಲಿನ ಸುಟ್ಟ ಕಲೆ, ಅಲರ್ಜಿ, ಮೊಡವೆ, ಬೊಕ್ಕೆ ಇತ್ಯಾದಿ ಸಮಸ್ಯೆಗಳನ್ನು ಏಕಕಾಲದಲ್ಲಿ ನಿವಾರಿಸುವುದು.

ಇದನ್ನು ನೈಸರ್ಗಿಕ ಮೊಶ್ಚಿರೈಸರ್ ಆಗಿಯೂ ಬಳಕೆ ಮಾಡಬಹುದು. ಹೊಟ್ಟೆಯ ಆರೋಗ್ಯ ಕಾಪಾಡಲು ಪ್ರತಿನಿತ್ಯ ಅಲೋವೆರಾ ಜ್ಯೂಸ್ ಕುಡಿಯಬಹುದು. ಕಣ್ಣು ಊದಿಕೊಂಡ ಸಮಸ್ಯೆಯಿದ್ದರೆ ಆಗ ನೀವು ಅಲೋವೆರಾವನ್ನು ಕಣ್ಣಿನ ಮೇಲ್ಭಾಗಕ್ಕೆ ಹಚ್ಚಿಕೊಳ್ಳಿ.

ಮುಖದ ಚರ್ಮ ಬೆಳ್ಳಗಾಗಿ, ಒಂದು ಒಳ್ಳೆಯ ಕಾಂತಿ ಬರಲು ಮನೆ ಮದ್ದುಗಳು
ಚರ್ಮದ ಸಮಸ್ಯೆ ನಿವಾರಣೆ ಮಾಡಲು ಮೊಟ್ಟೆಯ ಬಿಳಿ ಲೋಳೆ

ಎಣ್ಣೆಯುಕ್ತ ಚರ್ಮದ ಸಮಸ್ಯೆ ನಿವಾರಣೆ ಮಾಡಲು ಮೊಟ್ಟೆಯ ಬಿಳಿ ಲೋಳೆ ಬಳಸಬಹುದು. ಕಡಲೆ ಹಿಟ್ಟು ಮತ್ತು ಅರಶಿನದ ಫೇಸ್ ಪ್ಯಾಕ್ ನ್ನು ಹೆಚ್ಚಿನ ಭಾರತೀಯರು ಬಳಸಿಕೊಳ್ಳುವರು.

ಅರಸಿನ, ಕಡಲೆ ಹಿಟ್ಟು ಮತ್ತು ಹಾಲನ್ನು ಮಿಕ್ಸಿಗೆ ಹಾಕಿ ರುಬ್ಬಿ. ಪೇಸ್ಟ್ ನಂತೆ ದಪ್ಪ ಹಿಟ್ಟಿನಂತಿರಲಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಹತ್ತು ನಿಮಿಷ ಬಿಡಿ. ನಂತರ ಶುದ್ಧ ನೀರಿನಿಂದ ಮುಖ ತೊಳೆದುಕೊಳ್ಳಿ. ಈ ರೀತಿ ವಾರಕ್ಕೆ ಮೂರು, ನಾಲ್ಕು ಬಾರಿ ಮಾಡುತ್ತಿದ್ದರೆ ನಿಧಾನವಾಗಿ ನಿಮ್ಮ ಮುಖದ ತ್ವಚೆಯಲ್ಲಿ ಬದಲಾವಣೆ ಕಾಣಬಹುದು. 

ಸಿಟ್ರಸ್ ಹಣ್ಣುಗಳನ್ನು ಆದಷ್ಟು ಸೇವಿಸಿ. ಕಿತ್ತಳೆ ಮತ್ತು ಲಿಂಬೆಯ ರಸವನ್ನು  ಮುಖಕ್ಕೆ ಹೆಚ್ಚಿಕೊಂಡರೆ ಆಗ ವಿಟಮಿನ್ ಸಿ ತ್ವಚೆಗೆ ಕಾಂತಿ ನೀಡುವುದು. ವಿಟಮಿನ್ ಸಿ ಪಡೆಯಲು ಬಟಾಟೆ ತುಂಡುಗಳನ್ನು ಮುಖದ ಮೇಲೆ ಇಟ್ಟುಕೊಳ್ಳಬಹುದು.

ಉತ್ತಮ ವಿಟಮಿನ್ ಗಳು ಹಾಗೂ ಖನಿಜಾಂಶಗಳು ಇರುವಂತ ಹಣ್ಣುಗಳು ಹಾಗೂ ತರಕಾರಿಗಳನ್ನು ಹೆಚ್ಚು ಸೇವಿಸಬೇಕು.

ಮಲಗುವ ಮೊದಲು ಆಲಿವ್ ತೈಲ ಹಚ್ಚಿಕೊಳ್ಳಿ. ಇದರಿಂದ ಅಕಾಲಿಕ ನೆರಿಗೆ ಮತ್ತು ಕಪ್ಪು ಕಲೆಗಳ ಸಮಸ್ಯೆ ನಿವಾರಣೆ ಮಾಡಬಹುದು. ಸೂಕ್ಷ್ಮ ಭಾಗಗಳಿಗೆ ತೆಂಗಿನೆಣ್ಣೆ ಬಳಸಬಹುದು. ಎಣ್ಣೆಯುಕ್ತ ಚರ್ಮಕ್ಕೆ ಚಾ ಮರದ ಎಣ್ಣೆಯು ತುಂಬಾ ಉಪಯುಕ್ತ.

ಟೊಮಾಟೋದಲ್ಲಿ ವಿಟಮಿನ್ ಎ, ಬಿ.ಮತ್ತು ಸಿ ವಿಫುಲವಾಗಿದೆ. ಇದರಲ್ಲಿ ವಿಟಮಿನ್ ಎ ತ್ವಚೆಯಲ್ಲಿರುವ ಕಲೆಗಳನ್ನು ನಿವಾರಿಸಲು ನೆರವಾಗುವ ಮೂಲಕ ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಹಸಿ ತೆಂಗಿನ ಹಾಲು ತ್ವಚೆಯನ್ನು ಸೌಮ್ಯ ಮತ್ತು ನುಣುಪಾಗಿಸುತ್ತದೆ.

ರಾತ್ರಿ ಮಲಗುವ ಮೊದಲು ಸೌತೆಕಾಯಿ  ರಸ ಹಿಂಡಿ ಅದನ್ನುಮುಖಕ್ಕೆ  ಹಚ್ಚಿ. ಸೌತೆ ಕಾಯಿ ಮುಖದ ಕಾಂತಿಗೆ ಒಂದು ಸೂಪರ್ ಫುಡ್. ಸೌತೆಕಾಯಿ ಸಾರ ಚರ್ಮಕ್ಕೆ ತಂಪಿನ ಅನುಭವ ನೀಡುತ್ತದೆ.  ತ್ವಚೆಯ ನೀರಿನ ಮಟ್ಟವನ್ನು ಹೆಚ್ಚಿಸುತ್ತದೆ. ಉರಿ ಕಡಿಮೆ ಮಾಡುತ್ತದೆ. ಅರ್ಧ ಸೌತೆಕಾಯಿ ಕಟ್ ಮಾಡಿ ಅದರ ರಸ ತೆಗೆದು ಒಂದು ಹತ್ತಿ ಉಂಡೆಯ ನೆರವಿನಿಂದ ಮುಖಕ್ಕೆ ಹಚ್ಚಬಹುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಚಂದ್ರಶೇಖರ ಕಂಬಾರ ಜನ್ಮದಿನ

ಜನವರಿ 2, ಚಂದ್ರಶೇಖರ ಕಂಬಾರ ಜನ್ಮದಿನ

ಕರಡಿಗಳ ಗುಣಲಕ್ಷಣಗಳು

ಕರಡಿಗಳ ಗುಣಲಕ್ಷಣಗಳು ಮತ್ತು ವಿವಿಧ ಜಾತಿಯ ಕರಡಿಗಳು