in ,

ಕರಡಿಗಳ ಗುಣಲಕ್ಷಣಗಳು ಮತ್ತು ವಿವಿಧ ಜಾತಿಯ ಕರಡಿಗಳು

ಕರಡಿಗಳ ಗುಣಲಕ್ಷಣಗಳು
ಕರಡಿಗಳ ಗುಣಲಕ್ಷಣಗಳು

ಭಾರತ, ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶಗಳಲ್ಲಿ ಕಂಡು ಬರುವ ಕರಡಿಗಳ ಒಂದು ಪ್ರಭೇದ. ಕರ್ನಾಟಕದಲ್ಲಿ ಅರಣ್ಯಗಳಲ್ಲಿ ಹಾಗೂ ಬಂಡೆಗಳಿರುವ ಬೆಟ್ಟಸಾಲಿನಲ್ಲಿ ಕಂಡುಬರುವುದು.

ಕರಡಿಗಳು ಸ್ವಾಭಾವಿಕವಾಗಿ ಶಾಂತಸ್ವಭಾವದ ಪ್ರಾಣಿಗಳು. ತಾವಾಗಿಯೇ ಇತರ ಪ್ರಾಣಿಗಳ ಮೇಲೆ ಬಿದ್ದು ಆಕ್ರಮಣ ಮಾಡುವುದಿಲ್ಲ. ಆದಷ್ಟು ಮಟ್ಟಿಗೆ ಬೇರೆ ಪ್ರಾಣಿಗಳೊಂದಿಗೆ ಹೋರಾಡುವುದನ್ನು ತಪ್ಪಿಸಲು ಪ್ರಯತ್ನಿಸುತ್ತವೆ. ಆದರೆ ಸ್ವಂತ ಹಾಗೂ ಮರಿಗಳ ರಕ್ಷಣೆಗಾಗಿ, ಆಹಾರಕ್ಕಾಗಿ, ಇಕ್ಕಟ್ಟಗೆ ಸಿಲುಕಿದಾಗ, ಬಹುಕ್ರೂರವಾಗಿ, ಅಪಾಯಕರವಾಗಿ ಹೋರಾಡಬಲ್ಲವು.

ಕರಡಿ ನಿಶಾಚರಿ. ಹಗಲೆಲ್ಲ ಗುಡ್ಡಬೆಟ್ಟಗಳಲ್ಲಿನ ಗವಿಗಳಲ್ಲೊ, ದಟ್ಟವಾದ ಪೊದೆಗಳಲ್ಲೊ, ದೊಡ್ಡ ದಿಮ್ಮಿಗಳ ಪೊಟರೆಗಳಲ್ಲೋ ಅಥವಾ ನೆಲವನ್ನು ತೋಡಿ ಮಾಡಿಕೊಂಡ ಬಿಲಗಳಲ್ಲೊ ನಿದ್ರಿಸುತ್ತ ಕಾಲ ಕಳೆಯುತ್ತಿದ್ದು, ಆಹಾರಾರ್ಜನೆಗಾಗಿ ಸಂಜೆ ಅಥವಾ ರಾತ್ರಿ ಹೊರ ಹೊರಡುತ್ತದೆ. ಶೀತವಲಯದ ಕರಡಿ ಮಾತ್ರ ಹಗಲಿನಲ್ಲೆ ತನ್ನ ಚಟುವಟಿಕೆಗಳಲ್ಲಿ ನಿರತವಾಗಿರುತ್ತದೆ. ಸಾಮಾನ್ಯವಾಗಿ ಕರಡಿಗಳೆಲ್ಲ ಅಹಾರವನ್ನು ಹುಡುಕಿಕೊಂಡು ತಾವು ವಾಸಿಸುವ ಸ್ಥಳದಿಂದ ಬಹುದೂರ ಹೋಗುತ್ತವೆ. ಅದಕ್ಕೇ ಬಹಳ ಅಲೆಮಾರಿ ಪ್ರಾಣಿಗಳೆಂದು ಇವು ಹೆಸರಾಗಿವೆ. ಕರಡಿಗಳು ಸರ್ವಭಕ್ಷಕ ಪ್ರಾಣಿಗಳು. ಹುಲ್ಲು, ಎಲೆ, ಬೇರು, ಹಣ್ಣು, ಹಂಪಲು, ಜೇನುತುಪ್ಪ ಮುಂತಾದ ಸಸ್ಯಾಹಾರವನ್ನೂ ಕೀಟಗಳು, ಸಣ್ಣಪುಟ್ಟ ಸ್ತನಿಗಳು ಮುಂತಾದ ಮಾಂಸಾಹಾರವನ್ನೂ ತಿನ್ನುತ್ತವೆ. ಮೀನನ್ನು ಹಿಡಿದು ತಿನ್ನುವುದೂ ಉಂಟು. ಅಹಾರ ಪ್ರಾಣಿಗಳನ್ನು ತಮ್ಮ ಬಲವಾದ ಪುಂಜಗಳಿಂದ ಹೊಡೆದು ಕೊಂದು ತಿನ್ನುವುದೇ ವಾಡಿಕೆ.

ಕರಡಿಗಳ ಗುಣಲಕ್ಷಣಗಳು ಮತ್ತು ವಿವಿಧ ಜಾತಿಯ ಕರಡಿಗಳು
ಕಪ್ಪು ಕರಡಿಗಳು

ಕರಡಿಗಳು ಪಾಪ್ ಸಂಸ್ಕೃತಿಯಲ್ಲಿ ವಿಶಿಷ್ಟವಾದ ಸ್ಥಾನಮಾನವನ್ನು ಹೊಂದಿವೆ.

ಕರಡಿಗಳು ಮೂಲತಃ ನಾಯಿ ಕುಟುಂಬದ ದೂರದ ಸಂಬಂಧಿಗಳು ಎನ್ನುತ್ತಾರೆ, ಇವುಗಳನ್ನು ಉರ್ಸಿಡೆ ಕುಟುಂಬಕ್ಕೆ ಸೇರಿಸಲಾಗಿದೆ. ಕರಡಿಗಳು ಅನೇಕಬಗೆಯಪರಿಸರಕ್ಕೆ ಹೊಂದಿಕೊಂಡು ಪ್ರಪಂಚದಾದ್ಯಂತನೆಲೆಸಿವೆ. ಅತೀ ಶೀತ ಆರ್ಕಟಿಕ್ವಲಯದಲ್ಲಿ ಭೂಮಿ ಮೇಲಿನ ಅತೀ ದೊಡ್ಡ ಮಾಂಸಹಾರಿ ಪ್ರಾಣಿದೃವ ಕರಡಿ ವಾಸಿಸಿದರೆ, ಉಷ್ಣವಲಯದಲ್ಲಿ ವಿವಿಧ ಜಾತಿ ಕರಡಿಗಳು ವಾಸಿಸುತ್ತಿವೆ. ಆದರೆ ಅಚ್ಚರಿ ಎನ್ನುವಂತೆ ಆಫ್ರಿಕಾ ಹಾಗು ಆಸ್ಟ್ರೇಲಿಯಾದ ಕಾಡುಗಳಲ್ಲಿ ಕರಡಿಗಳು ಇಲ್ಲ. ಕರಡಿಗಳಂತೆ ಪಾಂಡಾಗಳು ಕಂಡು ಬಂದರೂ ಇವುಗಳನ್ನು ಬೇರೆ ಕುಟುಂಬಕ್ಕೆ ಸೇರಿಸಲಾಗಿದೆ.

ಕೆಲವೊಂದು ಕರಡಿಗಳ ಜಾತಿಗಳು :

ಅಮೇರಿಕನ್ ಕಪ್ಪು ಕರಡಿಗಳು

ಉತ್ತರ ಅಮೆರಿಕಾ ಮತ್ತು ಮೆಕ್ಸಿಕೊದಲ್ಲಿ ವಾಸಿಸುತ್ತವೆ; ಅವುಗಳ ಆಹಾರವು ಮುಖ್ಯವಾಗಿ ಎಲೆಗಳು, ಮೊಗ್ಗುಗಳು, ಚಿಗುರುಗಳು, ಹಣ್ಣುಗಳು ಮತ್ತು ಬೀಜಗಳನ್ನು ಒಳಗೊಂಡಿರುತ್ತದೆ. ಈ ಕರಡಿಯ ಉಪಜಾತಿಗಳಲ್ಲಿ ದಾಲ್ಚಿನ್ನಿ ಕರಡಿ, ಹಿಮನದಿ ಕರಡಿ, ಮೆಕ್ಸಿಕನ್ ಕಪ್ಪು ಕರಡಿ, ಕೆರ್ಮಡಿ ಕರಡಿ, ಲೂಯಿಸಿಯಾನಾ ಕಪ್ಪು ಕರಡಿ ಮತ್ತು ಹಲವಾರು ಇತರವು ಸೇರಿವೆ.

ಕಂದು ಕರಡಿ : 

ವಿಶ್ವದ ಅತಿ ದೊಡ್ಡ ಭೂ ಮಾಂಸ ತಿನ್ನುವ ಸಸ್ತನಿಗಳಾಗಿವೆ. ಅವರು ಉತ್ತರ ಅಮೇರಿಕಾ, ಯುರೋಪ್, ಮತ್ತು ಏಷ್ಯಾದಾದ್ಯಂತ ವ್ಯಾಪಿಸಿವೆ ಮತ್ತು ಕಾರ್ಪಾಥಿಯನ್ ಕರಡಿ, ಯುರೋಪಿಯನ್ ಕಂದು ಕರಡಿ, ಗೋಬಿ ಕರಡಿ, ಕಂದು ಬಣ್ಣದ ಕರಡಿ, ಕೊಡಿಯಾಕ್ ಕರಡಿ ಮತ್ತು ಹಲವಾರು ಇತರ ಉಪಜಾತಿಗಳನ್ನು ಒಳಗೊಂಡಿದೆ.

ಸ್ಲಾತ್‌ ಕರಡಿಗಳು :

ನಮ್ಮಲ್ಲಿರುವ ಕರಡಿಗೆ ಸೋಮಾರಿ ಕರಡಿ ಎಂದು ಹೆಸರು, ಇವುದೀರ್ಘ ನಿದ್ರೆ ಮಾಡುತ್ತವೆ. ಅದನ್ನು ಬಿಟ್ಟರೆ ಸೋಮಾರಿಯ ಯಾವ ಲಕ್ಷಣಗಳು ಈ ಕರಡಿಯಲ್ಲಿಲ್ಲ. ಆದರೂ ಈ ಕರಡಿಗೆ ಸೋಮಾರಿ ಕರಡಿ ಹೆಸರು ಬರಲು ಬೇರೆ ಕಾರಣವೇ ಇರಬೇಕು. 18ನೇ ಶತಮಾನದ ಅಂತ್ಯದಲ್ಲಿ ವೈಜ್ಞಾನಿಕ ಪರಿಶೀಲನೆಗಾಗಿ ಕಳುಹಿಸಿದ ಈ ಕರಡಿಯ ಚರ್ಮವು ದಕ್ಷಿಣ ಅಮೆರಿಕಾದ ಸ್ಲಾಥ್ಪ್ರಾಣಿಯಂತೆ ಕಂಡಿದ್ದರಿಂದ ಸೋಮಾರಿ ಕರಡಿ ಎಂಬ ಹೆಸರು ಬಂದಿರಬಹುದೆಂಬ ಊಹೆಯಿದೆ. ಮುಂದೆ 1810ರಲ್ಲಿ ಜೀವಂತ ಕರಡಿಯನ್ನು ಪ್ಯಾರಿಸ್‌ಗೆ ಒಯ್ದ ನಂತರ ಇದು ಕರಡಿ ಎಂದು ತೀರ್ಮಾನಿಸಲಾಯಿತು. 

ಏಷ್ಯಾದ ಕಪ್ಪು ಕರಡಿಗಳು :

ಆಗ್ನೇಯ ಏಷ್ಯಾ ಮತ್ತು ರಷ್ಯಾದ ದೂರಪ್ರಾಚ್ಯದಲ್ಲಿ ವಾಸಿಸುತ್ತವೆ. ಅವುಗಳು ತಮ್ಮ ಎದೆಯ ಮೇಲೆ ಹಳದಿ-ಬಿಳಿ ತುಪ್ಪಳದ ನಿರ್ಬಂಧಿತ ದೇಹಗಳನ್ನು ಮತ್ತು ತೇಪೆಗಳಿರುತ್ತವೆ, ಆದರೆ ಅಮೇರಿಕನ್ ಕಪ್ಪು ಕರಡಿಗಳನ್ನು ದೇಹ ಆಕಾರ, ನಡವಳಿಕೆ ಮತ್ತು ಆಹಾರದಲ್ಲಿ ಹೋಲುತ್ತವೆ.

ಹಿಮಾಲಯದ ಕಪ್ಪು ಕರಡಿ :

ಎದೆಯ ಮೇಲೆ ಅರ್ದಚಂದ್ರಾಕೃತಿ ಇರುವುದರಿಂದ ಮೂನ್ ಬೇರ್ ಅಂತಲೂ ಕರೆಯುತ್ತಾರೆ. ತೂಕ 90-115, ಹೆಚ್ಚಾಗಿ ಮಾಂಸಾಹಾರಿಗಳು, ಚನ್ನಾಗಿ ಈಜಬಲ್ಲವು. ಹಿಮಾಲಯ, ಭೂತಾನ್,ಚೀನಾ, ನೇಪಾಳ ಪಾಕಿಸ್ತಾನಗಳಲ್ಲಿ ಹೆಚ್ಚಾಗಿ ಕಾಣಿಸುತ್ತವೆ

ಹಿಮಕರಡಿಗಳು :

ಕರಡಿಗಳ ಗುಣಲಕ್ಷಣಗಳು ಮತ್ತು ವಿವಿಧ ಜಾತಿಯ ಕರಡಿಗಳು
ಹಿಮಕರಡಿಗಳು

ಪ್ರತಿಸ್ಪರ್ಧಿ ಕಂದು ಕರಡಿಗಳ ಗಾತ್ರದಲ್ಲಿದೆ. ಈ ಹಿಮಕರಡಿಗಳು ಆರ್ಕ್ಟಿಕ್ನಲ್ಲಿನ ವೃತ್ತಾಕಾರದ ಪ್ರದೇಶಕ್ಕೆ ಸೀಮಿತವಾಗಿದ್ದು, ದಕ್ಷಿಣ ಕೆನಡಾ ಮತ್ತು ಅಲಾಸ್ಕಾಕ್ಕೆ ತಲುಪುತ್ತವೆ. ಅವರು ಪ್ಯಾಕ್ ಐಸ್ ಮತ್ತು ತೀರಗಳಲ್ಲಿ ವಾಸಿಸುತ್ತಿರುವಾಗ, ಹಿಮಕರಡಿಗಳು ತೆರೆದ ನೀರಿನಲ್ಲಿ ಈಜುತ್ತವೆ, ಸೀಲುಗಳು ಮತ್ತು ವಾಲ್ರಸ್ಗಳ ಮೇಲೆ ತಿನ್ನುತ್ತವೆ.

ಮಲಯದ ಸೂರ್ಯ ಕರಡಿ :

ಎದೆಯ ಮೇಲೆ ಸೂರ್ಯ ಉದಯಿಸುವ ಹೊಂಬಣ್ಣದ ಅರ್ಧ ಚಂದ್ರಾಕೃತಿ ಇರುವುದರಿಂದ ಸೂರ್ಯ ಕರಡಿ ಎನ್ನುತ್ತಾರೆ. ನಮ್ಮ ದೇಶದಲ್ಲಿ ಕಂಡು ಬರುವ ಕರಡಿಗಳಲ್ಲಿ ಅತೀ ಚಿಕ್ಕದು. 25-65 ಕೆಜಿ ತೂಗುತ್ತವೆ. ದುಂಡನೆಯ ಚಿಕ್ಕ ಕಿವಿ ಹೊಂದಿವೆ, ಸ್ಲಾಥ್ಕರಡಿಯಂತೆ ಆಹಾರ ಕ್ರಮವಿದೆ.ಈಶಾನ್ಯ ಭಾರತದ ಪರ್ವತಗಳಿಂದ, ಸುಮತ್ರಾ, ಬೋರ್ನಿಯಾವರೆಗೆ ವಿತರಣೆಗೊಂಡಿವೆ. ಕರಡಿಗಳ ಪಿತ್ತಕೋಶದಿಂದ ವಿವಿಧ ಔಷಧ ತಯಾರಿಸಲು ಹಾಗು ಚರ್ಮಕ್ಕಾಗಿ ಇವುಗಳ ಹತ್ಯೆ ಮಾಡಲಾಗುತ್ತಿದೆ, ಆವಾಸ ನಾಶವೂ ಇವುಗಳನ್ನು ಅಪಾಯಕ್ಕೆ ಸಿಲುಕಿಸಿವೆ, ಕರಡಿಗಳೆಲ್ಲವೂ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ರಕ್ಷಣೆಗೊಳಪಟ್ಟಿವೆ.

ಜೈಂಟ್ ಪಾಂಡಾಗಳು :

ಕರಡಿಗಳ ಗುಣಲಕ್ಷಣಗಳು ಮತ್ತು ವಿವಿಧ ಜಾತಿಯ ಕರಡಿಗಳು
ಜೈಂಟ್ ಪಾಂಡಾಗಳು

ಪಶ್ಚಿಮ ಚೀನಾದ ಮಧ್ಯ ಮತ್ತು ದಕ್ಷಿಣ ಭಾಗಗಳಲ್ಲಿ ಬಿದಿರು ಚಿಗುರುಗಳು ಮತ್ತು ಎಲೆಗಳನ್ನು ಪ್ರತ್ಯೇಕವಾಗಿ ತಿನ್ನುತ್ತವೆ. ಈ ವಿಶಿಷ್ಟ ಮಾದರಿಯ ಹಿಮಕರಡಿಗಳು ಕಪ್ಪು ಕಾಯಗಳು, ಬಿಳಿ ಮುಖಗಳು, ಕಪ್ಪು ಕಿವಿಗಳು ಮತ್ತು ಕಪ್ಪು ಕಣ್ಣಿನ ಚುಕ್ಕೆಗಳನ್ನು ಹೊಂದಿವೆ.

ಸ್ಪೆಕ್ಟಾಕಲ್ಡ್ ಕರಡಿಗಳು :

ದಕ್ಷಿಣ ಅಮೆರಿಕಾದ ಸ್ಥಳೀಯ ಹಿಮಕರಡಿಗಳಾಗಿವೆ, ಮೋಡದ ಕಾಡುಗಳು 3,000 ಅಡಿಗಳಷ್ಟು ಎತ್ತರದಲ್ಲಿ ನೆಲೆಸುತ್ತವೆ. ಈ ಹಿಮಕರಡಿಗಳು ಒಮ್ಮೆ ಕರಾವಳಿ ಮರುಭೂಮಿಗಳು ಮತ್ತು ಎತ್ತರದ ಹುಲ್ಲುಗಾವಲು ಪ್ರದೇಶಗಳಲ್ಲಿ ವಾಸವಾಗಿದ್ದವು, ಆದರೆ ಮಾನವ ಆಕ್ರಮಣವು ಅವರ ವ್ಯಾಪ್ತಿಯನ್ನು ನಿರ್ಬಂಧಿಸಿದೆ.

ಕರಡಿಗಳಸಾಮಾನ್ಯ ಲಕ್ಷಣಗಳು : ಹಿಮ ಕರಡಿ ಹೊರತುಪಡಿಸಿದರೆ ಉಳಿದವು ಮಿಶ್ರಹಾರಿಗಳು. ಇವುಗಳಿಗೆ ಮಾಂಸವನ್ನು ಹರಿಯಬಲ್ಲ ಕಾರ್ನೇಸಿಯಲ್ಹಲ್ಲುಗಳಿಲ್ಲ. ಇವಕ್ಕೆಬಾಲವಿಲ್ಲ, ಇದ್ದರೂ ಅತೀ ಚಿಕ್ಕದು. ನೆಲಕ್ಕೆ ಮನುಷ್ಯರಂತೆ ಪೂರ್ಣ ಊರುವ ಪಾದಗಳಿವೆ. ಹೆಜ್ಜೆಗಳು ಮನುಷ್ಯರಂತೆ ಕಂಡರೂ ಮುಂದಿರುವ ಉಗುರಿನ ಗುರುತು ಬೀಳುವುದರಿಂದ ವ್ಯತ್ಯಾಸ ತಿಳಿಯಬಹುದು. ಪ್ರತಿ ಪಾದದ ಬೆರಳುಗಳಿಗೆ ಉದ್ದವಾದ ಬಾಗಿದ ಮೊನಚಾದ ನಖಗಳಿವೆ. ಮೂಗು ಮತ್ತು ಕಿವಿ ತುಂಬಾ ಚುರುಕು ಮತ್ತು ಕಣ್ಣು ಮಂದ. ಕೆಲ ಜಾತಿಯ, ಕರಡಿಗಳು ಮರ ಏರುತ್ತವೆ. ಹಿಂಗಾಲುಗಳ ಮೇಲೆ ನಿಂತು ಕೆಲ ಹೆಜ್ಜೆ ನಡೆಯಬಲ್ಲವು. ಜೇನು, ಗೆದ್ದಲು, ಹಣ್ಣು, ಮೀನು, ಇರುವೆಗಳನ್ನು ಇವು ತಿನ್ನುತ್ತವೆ. ಶೀತ ವಲಯದ ಕರಡಿಗಳು ಚಳಿಗಾಲದಲ್ಲಿ ಶಿಶಿರ ನಿದ್ರೆ ಮಾಡುತ್ತವೆ. ಉಷ್ಣವಲಯದ ಕರಡಿಗಳು ಶಿಶಿರ ನಿದ್ರೆ ಮಾಡುವುದಿಲ್ಲ. ಆದರೆ ಹುಟ್ಟುವ ಮರಿಗಳು ಕೂದಲ್ಲಿಲ್ಲದೆ, ಕುರುಡಾಗಿ ಹುಟ್ಟುತ್ತವೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

53 Comments

  1. The most exciting thing about Temple Tumble 2 slot game is that it features the very first and much-awaited Dream Drop Jackpot feature. It is also a great example of a high-definition video slot. Required aspect ratio: 16:9 Required aspect ratio: 16:9 Find out what to expect and how to prepare for one of Zion’s most popular hikes with Park Ranger Jonathan Fortner. An ambitious project whose goal is to celebrate the greatest and the most responsible companies in iGaming and give them the recognition they deserve. Temple of Fury Dream Drop transports players to a medieval temple filled with thrilling features. The game sticks out with low volatility, meaning you shouldn’t worry about losing your money too quickly. The negative side is that you usually don’t make enormous wins either. However, the max win of 1,780X the bet can definitely be a nice contribution. Apart from the regular game’s low volatility, there’s a chance to take home the Dream Drop Jackpot, which can award up to a breathtaking €3 million.
    https://kelaza.com/leisure-content-from-3/
    (504) 944 – 5515 Your Geo Location Recently, Mohegan Digital, the online gaming arm of Mohegan Gaming & Entertainment, officially debuted a fresh online gaming platform in the Keystone State. The firm revealed its dedicated website called Play.MoheganPAcasino as well as related mobile applications that offer great sign-up bonuses and feature table games and exciting slots among other other perks. Our online slot games and casino games are brought to you by leading casino software provider Microgaming. Memorable Events Fire Link games are designed to give you the Fire Link bonus more frequently than the free spins bonus. If you’ve played the games in the series enough, you generally become aware of this over time. This was by design.

  2. Caesars has brought the exceptional standards of its retail casinos into the mobile gaming world with an app that boasts an intuitive and user-friendly interface. Compatible with both iOS and Android, the Caesars slot app lets you play your favorite casino games from anywhere in your state, depending on the online gambling regulations in your state. The Caesars real money slots app is available in New Jersey, Pennsylvania, Michigan, and West Virginia.  If you’re looking for a trustworthy Android casino app to win money, the shortlisted casinos here have scored the highest for all the categories in our 25-step reviews process. They provide a competitive range of mobile optimized casino games, with powerful games software to prevent buffering. Promotions offer value for new and regular players. You can expect swift, simple Android payments to and from your preferred payment options and with fast payouts. Everything will be licensed and regulated in your state and audited for safe, fair gaming.
    https://en-web-directory.com/listings12764113/jackpot-city-casino-news
    What are we looking for in the brand new casinos? Games, games, and games! Even though new online casinos are glad to cooperate with the old developers as their games are good for the casino’s reputation, they tend to choose more modern inventions and game releases and the technologies they are using are more reliable and entertaining. As always, the new mobile Microgaming casinos, as well as the casinos powered by the newer providers, can be found in the corresponding section of SlotsUp. Even though most of the companies try to keep their products up-to-date, some of the older online casinos look a little bit old school with their classic designs and standard features — it can take you ages to find out how to see the full game list or contact the CS. At the same time, the best new casino sites are often created by the natives of other gambling companies who try to make better and more innovative casinos. The new casino operators mostly aim at the new generation that requires a special attitude to get involved, such as:

ಒಳ್ಳೆಯ ಕಾಂತಿ ಬರಲು ಮನೆ ಮದ್ದುಗಳು

ಮುಖದ ಚರ್ಮ ಬೆಳ್ಳಗಾಗಿ, ಒಂದು ಒಳ್ಳೆಯ ಕಾಂತಿ ಬರಲು ಮನೆ ಮದ್ದುಗಳು

ಸಾವಿತ್ರಿಬಾಯಿ ಫುಲೆ ಜನ್ಮದಿನ

ಜನವರಿ ೩, ಲೇಡಿ ಟೀಚರ್” ಸಾವಿತ್ರಿಬಾಯಿ ಫುಲೆ ಜನ್ಮದಿನ