ಕೂದಲು ಉದರುರುವುದನ್ನು ವೈಜ್ಞಾನಿಕವಾಗಿ ಆಂಡ್ರೋಜಿನಿಕ್ ಅಲೋಫೇಸಿಯಾ” ಎಂದು ಕರೆಯುತ್ತಾರೆ. ಪುರುಷರಲ್ಲಿ ಕೂದಲು ಉದುರಲು ಪ್ರಾರಂಭ ಆಗುತ್ತಿದ್ದಂತೆ ತಲೆ ಬೋಳು ತಲೆಯಾಗಿ ಪರಿವರ್ತನೆಯಾಗುತ್ತಾ ಹೋಗುತ್ತದೆ. ಇದು ಕೆಲವರಿ ವಂಶಪಾರಂಪರ್ಯವಾದರೆ, ಕೆಲವರಿಗೆ ಒತ್ತಡ ಜೀವನ, ಮಾಲಿನ್ಯ ಹಾಗೂ ಜೀವನಶೈಲಿಯ ಕಾರಣದಿಂದಾಗಿ ಕಾಣಿಸಿಕೊಳ್ಳುತ್ತದೆ. ಇದು ಹೆಣ್ಣು ಮಕ್ಕಳಲ್ಲೂ ಕಾಣಿಸಿಕೊಳ್ಳಬಹುದು. ಇನ್ನು ವಯಸ್ಸು 50ದಾಟುತ್ತಿದ್ದರಂತೆಯೇ ಕೂದಲು ಉದುರುವಿಕೆ ಹೆಚ್ಚಾಗಿ ತಲೆ ಕಾಣಲಾರಂಭಿಸುತ್ತದೆ. ಇದಕ್ಕೆ ನಿತ್ಯ ಬಳಸುವ ಹೇರ್ ಡ್ರೈಯರ್ ಸಹ ಕಾರಣವಾಗಬಹುದು. ಕೆಲವರಿಗೆ ವಿಟಮಿನ್ಗಳ ಕೊರತೆಯಾದರೆ, ಮತ್ತೆ ಕೆಲವರಿಗೆ ಕೆಮಿಕಲ್ ಹೆಚ್ಚಾಗಿರುವ ಶಾಂಪೂ ಬಳಕೆ ಸಜ ಕಾರಣವಾಗಬಹುದು.
ಬೊಕ್ಕ ತಲೆಯ ಮೇಲೆ ಕೂದಲು ಬೆಳೆಯಲು ಮನೆಯಲ್ಲಿಯೇ ಹಲವಾರು ಮನೆ ಮದ್ದುಗಳು ದೊರೆಯುತ್ತವೆ. ಅವುಗಳನ್ನು ಸುಲಭವಾಗಿ ಬಳಸಿಕೊಂಡು, ಸ್ವಾಭಾವಿಕವಾಗಿ ನಿಮ್ಮ ತಲೆಯಲ್ಲಿ ಕೂದಲನ್ನು ಬೆಳೆಯುವ ಹಾಗೆ ಮಾಡಬಹುದು
ಮದರಂಗಿ ಎಲೆಗಳು
ಮದರಂಗಿ ಎಲೆಗಳನ್ನು ಹಿಂದಿನಿಂದಲೂ ಕೂದಲು ಉದುರುವಿಕೆ ಸಮಸ್ಯೆ ನಿವಾರಣೆ ಮಾಡಲು ಹಿಂದಿನಿಂದಲೂ ಬಳಸಿಕೊಂಡು ಬರಲಾಗುತ್ತಿದೆ. ಕೂದಲಿಗೆ ಬಣ್ಣ ನೀಡಲು ಮದರಂಗಿ ಎಲೆ ಹುಡಿ ಬಳಸಲಾಗುತ್ತದೆ ಮತ್ತು ಇದನ್ನು ಪುರುಷರ ಬೋಳು ತಲೆ ಸಮಸ್ಯೆಗೂ ಬಳಸಬಹುದು. ಇದು ಕೂದಲಿಗೆ ಕಂಡೀಷನ್ ನೀಡುವುದು ಮತ್ತು ಕೂದಲಿನ ಬೆಳವಣಿಗೆ ಸುಧಾರಣೆ ಮಾಡುವುದು. ಕೂದಲು ಉದುರುವಿಕೆ ತಡೆಯಲು ನೆರವಾಗುವ ಇದು ಕೂದಲನ್ನು ಬಲಪಡಿಸುವುದು.
ಅಲೋವೆರಾ
ಪ್ರತಿನಿತ್ಯ ಅಲೋವೆರಾ ಜೆಲ್ ಅನ್ನು ನಿಮ್ಮ ಕೂದಲ ಬುಡಕ್ಕೆ ಹಚ್ಚಿಕೊಳ್ಳಿ. ಒಂದು ಗಂಟೆ ಬಿಟ್ಟು ಸ್ನಾನ ಮಾಡಿ. ಇದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.
ಸಾರಭೂತ ತೈಲಗಳು
ಬೇರೆ ತೈಲಗಳ ಜತೆಗೆ ಸೇರಿಸಿಕೊಂಡು ಸಾರಭೂತ ತೈಲಗಳನ್ನು ಬಳಸಿಕೊಂಡರೆ ಇದು ಪುರುಷರ ಬೋಳು ತಲೆ ಸಮಸ್ಯೆ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಸಾರಭೂತ ತೈಲಗಳಾಗಿರುವಂತಹ ಲ್ಯಾವೆಂಡರ್, ಥೈಮ್, ರೋಸ್ಮರಿ ಮತ್ತು ಸೀಡರ್ವುಡ್ ತುಂಬಾ ಪರಿಣಾಮಕಾರಿ. ಇವುಗಳನ್ನು ಜೊಜೊಬಾ ತೈಲ ಅಥವಾ ದ್ರಾಕ್ಷಿ ಬೀಜದ ತೈಲದ ಜತೆಗೆ ಬೆರೆಸಿಕೊಂಡು ಬಳಸಿಕೊಂಡರೆ ಅದು ಲಾಭಕಾರಿ.
ಹರಳೆಣ್ಣೆಯ ಮಸಾಜ್
ಹರಳೆಣ್ಣೆಯು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಒಂದು ಅಥವಾ ಎರಡು ಟೇಬಲ್ ಚಮಚ ಹರಳೆಣ್ಣೆಯನ್ನು ಅಂಗೈನಲ್ಲಿ ತೆಗೆದುಕೊಂಡು ಬೊಕ್ಕತಲೆಯ ಭಾಗದಲ್ಲಿ ಲೇಪಿಸಿಕೊಳ್ಳಿ. ಇದರಿಂದ ಸ್ವಾಭಾವಿಕವಾಗಿ ನಿಮ್ಮ ಕೂದಲು ಆ ಭಾಗದಲ್ಲಿ ಬೆಳೆಯುತ್ತದೆ.
ನೆಲ್ಲಿಕಾಯಿ
ಕೂದಲಿನ ವೃದ್ಧಿಸಲು ಹಾಗೂ ಕೂದಲನ್ನು ಸುಸ್ಥಿತಿಯಲ್ಲಿಡುವಲ್ಲಿ ನೆಲ್ಲಿಕಾಯಿಯ ಪಾತ್ರ ನಮಗೆಲ್ಲಾ ಗೊತ್ತೇ ಇದೆ. ಇದರಲ್ಲಿರುವ ವಿಟಮಿನ್ ಸಿ ಕೂದಲು ಉದುರುವ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ನೆಲ್ಲಿಕಾಯಿ ರಸ ಮತ್ತು ಲಿಂಬೆ ಹಣ್ಣಿನ ರಸಗಳ ಮಿಶ್ರಣವನ್ನು ಕೂದಲು ಉದುರಿರುವ ಜಾಗಕ್ಕೆ ಹಚ್ಚಿ, ಅಲ್ಲದೆ ಒಂದು ದಿನ ಹಾಗೆಯೇ ಬಿಡಿ ಹಾಗೂ ಮರುದಿನ ಸ್ನಾನ ಮಾಡುವಾಗ ನೈಸರ್ಗಿಕ ಶಾಂಪೂ ಬಳಸಿ ಸ್ನಾನ ಮಾಡಿ.
ಸೀಬೆ ಹಣ್ಣಿನ ಎಲೆಗಳು
ಒಂದಿಷ್ಟು ಸೀಬೆ ಹಣ್ಣಿನ ಎಲೆಗಳ ಜೊತೆಗೆ ಎರಡು ಟೇಬಲ್ ಚಮಚ ತೆಂಗಿನ ಎಣ್ಣೆಯನ್ನು ಬೆರೆಸಿಕೊಳ್ಳಿ. ಇದರ ಮೂಲಕ ನಿಮ್ಮ ಕೂದಲನ್ನು ತೊಳೆದುಕೊಳ್ಳಿ. ಇದರಿಂದ ನಿಮ್ಮ ಕೂದಲು ಬೇಗೆ ಬೆಳೆಯಲು ಸಾಧ್ಯವಾಗುತ್ತದೆ. ನಿಮಗೆ ಬೇಕಾದಲ್ಲಿ ಒಂದು ಟೇಬಲ್ ಚಮಚ ಲಿಂಬೆರಸವನ್ನು ಬೆರೆಸಿಕೊಳ್ಳಬಹುದು.
ಮೊಟ್ಟೆ
ಮೊಟ್ಟೆಯ ಲೋಳೆಯನ್ನು ತಲೆಗೆ ಮಸಾಜ್ ಮಾಡಿಕೊಂಡರೆ ಅದರಿಂದ ಬೋಳು ತಲೆ ಸಮಸ್ಯೆ ನಿವಾರಿಸಬಹುದು. ಮೊಟ್ಟೆಯಲ್ಲಿ ಪ್ರೋಟೀನ್ ಅಂಶವು ಅಧಿಕವಾಗಿದ್ದು, ಇದು ದಪ್ಪ ಹಾಗೂ ಉದ್ದಗಿನ ಕೂದಲು ನಿರ್ವಹಿಸಲು ನೆರವಾಗುವುದು. ಕೆಲವು ಮೊಟ್ಟೆಗಳನ್ನು ಒಡೆದು, ಅದರ ಲೋಳೆ ತೆಗೆದು ತಲೆ ಬುರುಡೆಗೆ ನಿಧಾನವಾಗಿ ಮಸಾಜ್ ಮಾಡಿ. 15 ನಿಮಿಷ ಕಾಳ ಹಾಗೆ ಇರಲಿ. ಇದರ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಪುರುಷರಲ್ಲಿ ತಲೆ ಬೋಳು ಆಗುವ ಸಮಸ್ಯೆಗೆ ಮೊಟ್ಟೆಯಲ್ಲಿನ ವಿಟಮಿನ್ ಗಳು ಅದ್ಭುತವಾಗಿ ಕೆಲಸ ಮಾಡುವುದು.
ಮೊಸರು ಮತ್ತು ಕಡಲೆಹಿಟ್ಟಿನ ಲೇಪ
ಎರಡರಿಂದ ಮೂರು ದೊಡ್ಡಚಮಚ ಹುಳಿಮೊಸರು ಮತ್ತು ಎರಡು ದೊಡ್ಡಚಮಚ ಕಡೆಹಿಟ್ಟು ಬೆರೆಸಿ ಅತಿ ದಪ್ಪನೆಯೂ ಅಲ್ಲದ, ಅತಿ ತೆಳುವೂ ಅಲ್ಲದ ಲೇಪನ ತಯಾರಿಸಿ. ಈ ಲೇಪನವನ್ನು ತಲೆಗೆ ಹಚ್ಚಿ ಒಂದು ಗಂಟೆ ಕಾಲ ಒಣಗಲು ಬಿಡಿ. ಬಳಿಕ ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರಿನಿಂದ ಸ್ನಾನ ಮಾಡಿ. ಈ ವಿಧಾನವನ್ನು ವಾರಕ್ಕೆ ಮೂರು ಬಾರಿ ಅನುಸರಿಸಿದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ ಹಾಗೂ ಬಕ್ಕತಲೆಯಲ್ಲಿ ಕೂದಲು ಹುಟ್ಟುವ ಸಾಧ್ಯತೆ ಹೆಚ್ಚುತ್ತದೆ.
ಆಲಿವ್ ಎಣ್ಣೆ
3-4 ಚಮಚ ಆಲಿವ್ ಎಣ್ಣೆಯನ್ನು ಬೆಚ್ಚಗೆ ಮಾಡಿ ನಿಮ್ಮ ಕೂದಲ ಬುಡಕ್ಕೆ ಹಚ್ಚಿಕೊಳ್ಳಿ. ಟವಲ್ ಅನ್ನು ಬಿಸಿ ನೀರಲ್ಲಿ ಅದ್ದಿ ಹಿಂಡಿ ತಲೆಗೆ ಸುತ್ತಿಕೊಳ್ಳಿ. ಒಂದು ಗಂಟೆಯ ಬಳಿಕ ಸ್ನಾನ ಮಾಡಿ.
ಈರುಳ್ಳಿ ರಸ
ತಲೆ ಬೋಳು ಇರುವಂತಹ ಜಾಗಕ್ಕೆ ನೀವು ನೇರವಾಗಿ ಈರುಳ್ಳಿಯ ರಸ ಹಚ್ಚಿಕೊಳ್ಳಿ. ಈರುಳ್ಳಿ ರಸ ತೆಗೆಯಿರಿ ಮತ್ತು ಇದಕ್ಕೆ ಸ್ವಲ್ಪ ತೆಂಗಿನ ಎಣ್ಣೆ ಹಾಕಿದ ಬಳಿಕ ಮಧ್ಯಮ ಬೆಂಕಿಯಲ್ಲಿ ಬಿಸಿ ಮಾಡಿ. ಇದರ ಬಳಿಕ ಸ್ವಲ್ಪ ಬಿಸಿ ಇರುವಾಗಲೇ ತಲೆಗೆ ಹಚ್ಚಿಕೊಂಡು ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ. ಇದು ತಲೆಯಲ್ಲಿ 15-20 ನಿಮಿಷ ಕಾಲ ಹಾಗೆ ಇರಲಿ. ಇದರ ಬಳಿಕ ಲಘು ಶಾಂಪೂ ಹಚ್ಚಿಕೊಂಡು ಕೂದಲು ತೊಳೆಯಿರಿ. ವಾರದಲ್ಲಿ ಮೂರರಿಂದ ನಾಲ್ಕು ಸಲ ನೀವು ಇದನ್ನು ಬಳಸಿಕೊಂಡರೆ ಖಂಡಿತವಾಗಿಯೂ ಉತ್ತಮ ಫಲಿತಾಂಶ ಸಿಗುವುದು.
ಆಲೂಗಡ್ಡೆ : ಆಲೂಗಡ್ಡೆ ಜ್ಯೂಸ್ ತೆಗೆದು ಅದನ್ನು ತಲೆಗೆ ಹಚ್ಚಿಕೊಂಡು ಒಂದು ಗಂಟೆ ಬಿಟ್ಟು ತೊಳೆದರೆ ಕೂದಲು ಉದುರುವುದಿಲ್ಲ.
ದಾಲ್ಚಿನಿ ಮತ್ತು ಆಲಿವ್ ತೈಲ
ಆಲಿವ್ ತೈಲ ಮತ್ತು ದಾಲ್ಚಿನಿ ಹುಡಿಯನ್ನು ಮಿಶ್ರಣ ಮಾಡಿಕೊಂಡರೆ ಪುರುಷರಲ್ಲಿನ ಬೋಳು ತಲೆ ಸಮಸ್ಯೆಗೆ ಇದು ಅತ್ಯುತ್ತಮ ಪರಿಹಾರ ವಾಗಿರುವುದು. ಒಂದು ಕಪ್ ಆಲಿವ್ ತೈಲಕ್ಕೆ ಒಂದು ಚಮಚ ದಾಲ್ಚಿನಿ ಹುಡಿ ಹಾಕಿಕೊಂಡು ಬಳಿಕ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದು ಮೆತ್ತಗಿನ ಪೇಸ್ಟ್ ಆದ ಬಳಿಕ ನೀವು ಇದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ ಮತ್ತು ಅರ್ಧ ಗಂಟೆ ಕಾಲ ಹಾಗೆ ಬಿಡಿ. ಈ ಪೇಸ್ಟ್ ನ್ನು ನಿಯಮಿತವಾಗಿ ಹಚ್ಚಿಕೊಂಡರೆ ಅದರಿಂದ ಬೋಳು ತಲೆ ಸಮಸ್ಯೆಗೆ ಪರಿಹಾರ ಸಿಗುವುದು.
ಕರಿಬೇವು : ಕಾಲು ಕಪ್ ನಷ್ಟು ಬಾದಾಮಿ ಎಣ್ಣೆ, ಸಾಸಿವೆ ಎಣ್ಣೆಗೆ ಕರಿಬೇವಿನ ಎಲೆಯ ಪುಡಿ ಸೇರಿಸಿ ಬಿಸಿ ಮಾಡಿ. ನಂತರ ರಾತ್ರಿ ಮಲಗುವಾಗ ಅದನ್ನು ಕೂದಲು ಬುಡಕ್ಕೆ ಹಚ್ಚಿಕೊಳ್ಳಿ. ಈ ರೀತಿ ವಾರದಲ್ಲಿ 3 ಬಾರಿ ಮಾಡಿ.
ಪೇರಳೆ ಎಲೆಗಳು
ಕೆಲವು ಪೇರಳೆ ಎಲೆಗಳನ್ನು (ತುಂಬಾ ಬಲಿತವೂ ಅಲ್ಲ, ತೀರಾ ಎಳೆಯವೂ ಅಲ್ಲ) ಕೊಂಚ ನೀರಿನೊಂದಿಗೆ ನಯವಗಿ ಅರೆಯಿರಿ. ಈ ಲೇಪನವನ್ನು ದಪ್ಪನಾಗಿ ತಲೆಯ ಕೂದಲಿಗೆ ಹಚ್ಚಿ ಒಣಗಲು ಬಿಡಿ. ಇಪ್ಪತ್ತು ನಿಮಿಷದ ಬಳಿಕ ಕೇವಲ ತಣ್ಣೀರು ಉಪಯೋಗಿಸಿ ತೊಳೆದುಕೊಳ್ಳಿ. ಇದು ಕೂದಲು ಉದುರುವುದನ್ನು ತಡೆಯುವುದರ ಜೊತೆಗೇ ಕೂದಲಿಗೆ ಕಾಂತಿ ನೀಡಲೂ ನೆರವಾಗುತ್ತದೆ.
ಧನ್ಯವಾದಗಳು.
I like this weblog it’s a master piece! Glad I observed this ohttps://69v.topn google.Blog monetyze
casibom giris: casibom guncel giris adresi – casibom guncel giris
casibom 158 giris
п»їfarmacia online espaГ±a: farmacia online internacional – farmacias online baratas
viagra naturale in farmacia senza ricetta: viagra – viagra cosa serve
п»їFarmacia online migliore: BRUFEN 600 mg 30 compresse prezzo – comprare farmaci online all’estero
farmacia online senza ricetta: Brufen 600 senza ricetta – farmacie online autorizzate elenco
ventolin 4mg uk: ventolin hfa inhaler – buy ventolin online australia
neurontin tablets 300 mg: drug neurontin – neurontin without prescription