ಕೊರೊನದ ಬಗ್ಗೆ ಹೇಳುವುದೇ ಬೇಡ, ಎಲ್ಲರ ಬಾಯಲ್ಲೂ ಮತ್ತು ಎಲ್ಲಾಕಡೆ ಸುದ್ದಿಯಲ್ಲಿರುವ ವಿಷಯ ಕೊರೊನ. ಇದು ಎಷ್ಟರ ಮಟ್ಟಿಗೆ ಮನುಷ್ಯನ ಜೀವನದಲ್ಲಿ ಭಯವೆಬ್ಬಿಸಿದೆ ಎಂದರೆ ನಾವು ಮನೆ ಬಿಟ್ಟು ಹೊರಗಡೆ ಓಡಾಡುವುದೇ ಕಷ್ಟದ ಸಂಗತಿ. ಪ್ರತಿ ದಿನ ಲಾಕ್ಡೌನ್ನಿಂದಾಗಿ ನಾವುಗಳು ಹೊರಗೆ ಓಡಾಡುವುದೇ ಕಮ್ಮಿಯಾಗಿದೆ. ಹೌದು ಹೊರಗೆ ಓಡಾಡಿ ಕೊರೊನ ಬರಿಸಿಕೊಳ್ಳುವುದಕ್ಕಿಂದ ಮನೆಯಲ್ಲೇ ಇದ್ದು ಆರೋಗ್ಯ ಕಾಪಾಡಿಕೊಳ್ಳುವುದು ಉತ್ತಮ.
5೦ ವರ್ಷದ ಮೇಲ್ಪಟ್ಟಿರುವವರು ಜಾಗ್ರತೆಯಿಂದ ಇರಬೇಕು ಎನ್ನುವುದು ಹಳೆಯ ಸುದ್ದಿ. ಕೊರೊನ ಎರಡನೇ ಅಲೆಯ ಅಬ್ಬರ ನೋಡಿದರೆ 2೦ರಿಂದ 4೦ ವರ್ಷಗಳ ನಡುವಿನವರಿಗೆ ಇದರ ಹರಡುವಿಕೆ ಅಧಿಕವಾಗಿದೆ.ಆದಷ್ಟು ಮನೆಯಲ್ಲೇ ಇದ್ದು ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಕೊರೊನ ಲಸಿಕೆಯೇನೋ ಬಂದಿದೆ ಆದರೆ ನಾವುಗಳು ಅದರ ಉಪಯೋಗ ಸರಿಯಾಗಿ ಪಡೆಯುತಿದ್ದೇವೆಯೇ? ಇಲ್ಲ ಬಿಡಿ, ಕೊರೊನ ಇರುವುದೇ ಸುಳ್ಳು ಎಂಬ ಕೆಲವರ ಮೊಂಡುವಾದ ಒಂದುಕಡೆಯಾದ್ರೆ ಬಿಡಪ್ಪ ಲಸಿಕೆ ತೆಗೆದುಕೊಂಡ್ರು ಕೊರೊನ ಬರುತ್ತಂತೆ ಅನ್ನೋರು ಇನ್ನೊಂದು ಕಡೆ. ಈ ಎಲ್ಲಾ ವಾದಗಳ ನಡುವೆ ಇದಕೆಲ್ಲ ಹೌದ ಎಂದು ಕಿವಿಕೊಡುವವರು ಮತ್ತೊಂದುಕಡೆ.
ಪ್ರಪಂಚವೇ ಕೊರೊನದ ಹೊಡೆತದಿಂದ ತತ್ತರಿಸಿ ಹೋಗಿದೆ ಅಲ್ಲವೇ, ಲಸಿಕೆ ಬಂದಿದೆ ಅಂದ ಮೇಲೆ ಅದನ್ನು ಸರಿಯಾದ ಕ್ರಮದಲ್ಲಿ ಬಳಸಿಕೊಳ್ಳಬೇಕು. ಲಸಿಕೆಯನ್ನು ಒಟ್ಟು ಎರಡು ಹಂತದಲ್ಲಿ ಕೊಡಲಾಗುತ್ತದೆ. ಒಂದು ಹಂತಕ್ಕೂ ಮತ್ತು ಎರಡನೆಯ ಹಂತಕ್ಕೂ ಕಡಿಮೆ ಅಂದರು 8-12 ವಾರಗಳ ಅಂತರವಿರಬೇಕು.
ಲಸಿಕೆ ಪಡೆಯುವುದರಿಂದ ಕೊರೊನ ಬರುವುದೇ ಇಲ್ಲ ಎಂದಲ್ಲ, ನಮ್ಮ ದೇಹದಲ್ಲಿ ರೋಗನಿರೋಧಕಶಕ್ತಿ ಹೆಚ್ಚಿ ಕೊರೊನ ವೈರಸ್ ಜೊತೆ ಹೋರಾಡಲು ಶಕ್ತಿ ತುಂಬುತ್ತದೆ.ಬರಿ ಒಂದು ಹಂತದ ಲಸಿಕೆ ಪಡೆದು ಎರಡನೆಯ ಹಂತದ ಲಸಿಕೆಯನ್ನು ಬಿಟ್ಟುಬಿಡಬೇಡಿ, ಇದರಿಂದ ಲಸಿಕೆ ಪಡೆದು ಪ್ರಯೋಜನವಿಲ್ಲ.ಎರಡು ಹಂತದ ಲಸಿಕೆ ಬಹಳ ಮುಖ್ಯ ಆಗಲೇ ಪ್ರತಿರೋಧ ಶಕ್ತಿ ಹೆಚ್ಚುವುದು.
ಸುಮ್ಮನೆ ಕುಳಿತಿ ಕಾಲಹರಣ ಮಾಡುವ ಬದಲು, ಲಸಿಕೆ ಪಡೆದು ನಮ್ಮ ಜವಾಬ್ಧಾರಿಯನ್ನು ಮುಗಿಸೋಣ.ವಿಶ್ವವ್ಯಾಪಿ ಕೊರೊನ ವೈರಸ್ ವಿರುದ್ಧ ಹೊರೋಡೋಣ ದೇಶವನ್ನು ಮತ್ತು ನಮ್ಮ ಸಮಾಜವನ್ನು ಸಾಮಾನ್ಯ ಸ್ಥಿತಿಗೆ ಮರಳಿಸೋಣ.
Входные стальные двери с завода с установкой за 1 день.
Любые конфигурации отделок на выбор. Более 3500 моделей на складе: [url=https://korolev.vhodnye-metallicheskie-dveri.ru/]https://korolev.vhodnye-metallicheskie-dveri.ru/[/url]