in

ರಜೆಯಿಂದಾಗುವ ಲಾಭಗಳು ನಿಮಗೆಲ್ಲ ಗೊತ್ತ?

ರಜೆಯಿಂದಾಗುವ ಲಾಭಗಳು ನಿಮಗೆಲ್ಲ ಗೊತ್ತ?

ರಜೆ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ವರ್ಷ ಶುರುವಾಗುತಿದ್ದ ಹಾಗೆ ಕ್ಯಾಲೆಂಡರ್ ನೋಡಿ ಯಾವತ್ತು ರಜೆ ಇದೆ ಎಂದು ಕೆಲ್ಸಕ್ಕೆ ಸೂಟಿ ಸಿಗತ್ತೆ ಅಂತ ನೋಡವ್ರು ಒಂದ್ಕಡೆ ಆದ್ರೆ, ಶಾಲೆಗಳಿಗೆ ರಜೆ ಮನೇಲಿ ಆಟ ಆಡ್ಕೊಂಡು ಮಜಾ ಮಾಡಬಹುದು ಅನ್ನೋ ಮಕ್ಕಳು  ಇನ್ನೊಂದ್ಕಡೆ. ರಜೆ ಬರುತ್ತೆ ಅಂದರೆ ಅಲ್ಲೆಲ್ಲಾದ್ರು ಟ್ರಿಪ್ ಹೊಗೆಬೇಕು ಇಲ್ಲ ಶಾಪಿಂಗ್ ಮಾಡಬೇಕು ಅಂತ  ಒಂದು ತಿಂಗಳು ಮುಂಚೆನೇ ಪ್ಲಾನ್ ಮಾಡಿರ್ತೀವಿ. ಆದ್ರೆ ಹೋಗೋ ಟೈಮ್ ಬಂದಾಗ ಇಲ್ಲ ಯಾವ್ದಾದ್ರು ಕೆಲಸದಲ್ಲಿ ಬ್ಯುಸಿ ಆಗ್ಬಿಡ್ತೀವಿ ಇಲ್ಲ ಬೇರೆ ಏನಾದ್ರು ಕೆಲ್ಸಕ್ಕೆ ಕಮಿಟ್ ಆಗ್ಬಿಟ್ಟಿರ್ತೀವಿ. ಹೀಗೆ ನಾವು ಪ್ಲಾನ್ ಮಾಡ್ಕೊಳೋ ಅದೆಷ್ಟೋ ಟ್ರಿಪ್ಗಳು ಬರಿ ಪ್ಲಾನ್ ಆಗಿನೇ ಉಳ್ಕೊಳುತ್ತವೆ. ಟ್ರಿಪ್ ಅಂದರೆ ಒಂದು  ವಾರ ಲಾಂಗ್ ಟ್ರಿಪ್ ಹೋಗ್ಬೇಕು ಅಂತೇನು ಇಲ್ಲ ನಮಗೆ ಅನುಕೂಲ ಆಗುವ ಹಾಗೆ ಒಂದೆರಡು ದಿನ ಹತ್ತಿರದ ದೇವಸ್ಥಾನ, ನೇಚರ್ ತಾಣಗಳಿಗೆ ಹೋಗಿಬರಬಹುದು.

ಒಂದು ಪುಟ್ಟ ರಜೆ ಇಲ್ಲವೇ ಪ್ರವಾಸ ಮುಗಿಸಿಕೊಂಡು ಬಂದ್ರೆ ಮನಸ್ಸಿಗೆ ಏನೋ ಒಂತರ ಖುಷಿ ಹಾಗೆ ನಮ್ಮ ಬ್ಯಾಟರಿ ಕೂಡ ಚಾರ್ಜ್ ಆಗಿ ಲವಲವಿಕೆಯಿಂದ ತುಂಬಿರುತ್ತದೆ. ಮಾಮೂಲಿ ಕೆಲಸದಿಂದ ಬಿಡುವು ತಗೋಳೋದ್ರಿಂದ ಸ್ಟ್ರೆಸ್ ಕಡಿಮೆಯಾಗುತ್ತೆ. ಬಿಡುವಿಲ್ಲದ ಕೆಲಸದಲ್ಲಿ ಜಾಸ್ತಿ ಸಮಯ ಕಳೆಯುವುದರಿಂದ ಬೇಗ  ಆಯಾಸ, ಒತ್ತಡದಿಂದ ನಾವು ದೈಹಿಕ ಮತ್ತು ಮಾನಸಿಕವಾಗಿ ದಣಿದುಬಿಡುತ್ತೇವೆ. ಸ್ವಲ್ಪ  ದಿನಗಳು  ಕೆಲಸದಿಂದ ಬ್ರೇಕ್ ತೆಗೆದುಕೊಂಡರೆ ಪುನಃ ರಿಚಾರ್ಜ್ ಆಗಿ ನಮ್ಮ ಆಯಾಸ ಕೂಡ ಕಮ್ಮಿ ಆಗುತ್ತೆ. ಕೆಲಸದಿಂದ ಬ್ರೇಕ್ ತಗೋಳೋದು ಅಂದ್ರೆ ಮನೆ ಬಿಡ್ಬೇಕು ಇಲ್ಲ ದೇಶಾನೇ ಬಿಟ್ಟೋಗ್ಬೇಕು ಅಂತಲ್ಲ. ಒಂದು ಒಳ್ಳೆ ಉದಾಹರಣೆ ಎಂದರೆ ಇರುವ ಕೆಲ್ಸದಿಂದ ಸ್ವಲ್ಪ ರಜೆ ತಗೊಂಡು ಯಾವುದೇ ಚಿಂತೆ ಇಲ್ಲದೆ ರಜೆ ಆನಂದಿಸಬೇಕು. ಹಲವರು ರಜೆ ಅಂದರೆ ಮನೆಯಲ್ಲೇ ಉಳಿದು ರೆಸ್ಟ್ ಮಾಡಿ ಖುಷಿ ಪಡುತ್ತಾರೆ, ಇನ್ನು ಕೆಲವರು ರಜೆ ಎಂದರೆ ತಮ್ಮ ಪರಿವಾರ ಮತ್ತು ಫ್ರೆಂಡ್ಸ್  ಜೊತೆಗೂಡಿ ಊರು ಸುತ್ತಕೆ  ರೆಡಿಯಾಗುತ್ತಾರೆ. ಇದರಲ್ಲಿ ಯಾವುದಾದರೂ ಸರಿ ದಿನನಿತ್ಯ ಜಂಜಾಟದಿಂದ ಸ್ವಲ್ಪ ಬಿಡುವು ಮಾಡಿಕೊಬೇಕು ಅಷ್ಟೆ. ಕೆಲಸದ ನಡುವೆ ಬಿಡುವುಮಾಡಿಕೊಂಡು ವಿಶ್ರಾಂತಿ ಮಾಡುವುದು  ತುಂಬ ಒಳ್ಳೆಯದು. ಜೀವನಕ್ಕೆ ದುಡಿಯೋದು ಎಷ್ಟು ಮುಖ್ಯವೋ ಹಾಗೆಯೇ ನಾವು ಖುಷಿಯಾಗಿದ್ದರೆ ಇನ್ನು ಹೆಚ್ಚು ಕೆಲಸ ಕಡಿಮೆ ಶ್ರಮದಿಂದ ಮಾಡಬಹುದು.

ರಜೆಯಿಂದಾಗುವ ಒಳ್ಳೆಯ ಉಪಯೋಗಗಳು,

ಒತ್ತಡ ಕಡಿಮೆಯಾಗುತ್ತದೆ: ಹಲವು ರಿಸರ್ಚ್ ಪ್ರಕಾರ ಒತ್ತಡದಿಂದ ಬರುವ ತಲೆನೋವು, ಹೃದಯರಕ್ತನಾಳದ ಕಾಯಿಲೆಗಳು,ಕ್ಯಾನ್ಸರ್ ಮತ್ತು ಇನ್ನು ಕೆಲವು ರೀತಿಯ ಸೋಂಕುಗಳಿಂದ ನಮ್ಮ ರೋಗನಿರೋಧಕ ಶಕ್ತಿಯು ಕುಗ್ಗುತ್ತದೆ. ನಾವು ಆಗಾಗ್ಗೆ ವೆಕೇಷನ್ ತಗೋಳೋದ್ರಿಂದ ಈ ತರಹದ ಘಟನೆಗಳು ಕಡಿಮೆಯಾಗುತ್ತದೆ.

ನಮ್ಮ ದೃಷ್ಟಿಕೋನ ರಿಫ್ರೆಶ್ಯಾಗುತ್ತದೆ: ಒತ್ತಡದಿಂದ ಬ್ರೇಕ್ ಸಿಗುವುದರಿಂದ ನಮಗೆ ಹೊಸ ದೃಷ್ಟಿಕೋನ ಸಿಗುತ್ತದೆ. ಇಂತಹ ಹೊಸ ದೃಷ್ಟಿಕೋನದಿಂದ ನಮ್ಮ ಶಕ್ತಿ ಹಾಗು ಹಿಂದೆ ಬಹಳ ಸಣ್ಣ ಸಮಸ್ಯೆಗಳನ್ನು ಬಗೆಹರಿಸಲು ತೆಗೆದುಕೊಳುತ್ತಿದ್ದ  ಹೆಚ್ಚು ಸಮಯ ಈಗ ಅತಿ ಸುಲಭದಲ್ಲಿ ಬಗೆಹರಿಸಿಕೊಳ್ಳಬಹುದು.

ಮಾನಸಿಕ ಸಾಮರ್ಥ್ಯ ಸುಧಾರಣೆ: ಸರಿಯಾದ ರೀತಿಯಲ್ಲಿ ವಿಶ್ರಾಂತಿ ಪಡೆಯುವ ಮನಸ್ಸು ಚಿಂತೆಯಿಂದ ಮುಕ್ತವಾಗುತ್ತದೆ. ಸೃಜನಾತ್ಮಕ ರೀತಿಯಲ್ಲಿ ಯೋಚಿಸುತ್ತದೆ. ಕೆಲವು ಅಧ್ಯಯನಗಳ ಪ್ರಕಾರ ವೆಕೇಷನ್ ತೆಗೆದುಕೊಳ್ಳುವವರ ವರುಷದ ಕೊನೆಯಲ್ಲಿ ಪರ್ಫಾರ್ಮೆನ್ಸ್ ಬೇರೆ ಕೆಲಸಗಾರರಿಗೆ ಹೋಲಿಸಿದರೆ 10% ಹೆಚ್ಚು ಚೆನ್ನಾಗಿರುತ್ತದೆ.

ಭೌತಿಕ ಆರೋಗ್ಯ ಸುಧಾರಣೆ : ರಜೆಯಿಂದಾಗಿ ಹಿಂದೆ ಕಳೆದುಕೊಂಡಿದ್ದ ನಿದ್ರೆ ಮತ್ತು ವ್ಯಾಯಾಮಕ್ಕೂ ಅವಕಾಶ ಸಿಗುತ್ತದೆ.

ಹೃದಯ ಸಂಬಂಧಿ ಅಪಾಯಗಳು ಕಡಿಮೆಯಾಗುತ್ತದೆ: ಸ್ವಲ್ಪ ಸಮಯ ಮಾಡಿಕೊಂಡು ನಮ್ಮ ಪ್ರೀತಿಪಾತ್ರರ ಜೊತೆ ರಜೆಯಲ್ಲಿ ಸಮಯಕಳೆಯುವುದರಿಂದ ಹೃದಯ ಸಂಭಂದಿ ಕಾಯಿಲೆಗಳನ್ನು ದೂರ ಇರಿಸಬಹುದು. ಹಾಗೆ ನೋಡಿದರೆ ಪುರುಷರಿಗೆ 30% ಮತ್ತು ಮಹಿಳೆಯರಿಗೆ 50% ಇದರ ಸಮಸ್ಯೆಯಿಂದ ದೂರ ಉಳಿಯಬಹುದು.

.ಕುಟುಂಬದ ಸಂಬಂಧಗಳು ಗಟ್ಟಿಯಾಗುತ್ತವೆ: ಈಗಿನ ಕುಟುಂಬಗಳು ತುಂಬಾನೇ ಬ್ಯುಸಿ. ವ್ಯಕೇಷನ್ ತೆಗೆದುಕೊಳ್ಳುವುದರಿಂದ ನಮ್ಮ ಕುಟುಂಬದ ಜೊತೆ ಸಮಯಕಳೆಯುವ ಅವಕಾಶ  ಸಿಗುತ್ತದೆ. ಸಮಯ ಕಳೆಯುವುದರ ಜೊತೆಗೆ ಎಲ್ಲರೂ  ಕಳೆದ  ಒಳ್ಳೆಯ ನೆನಪುಗಳು ಉಳಿಯುತ್ತವೆ.

ಹೀಗೆ ನಮ್ಮ ಸ್ನೇಹಿತರ ಮತ್ತು ಕುಟುಂಬದ ಜೊತೆ ಸಮಯಕಳೆಯುವುದರಿಂದ  ಮನಸ್ಸು ವಿಶ್ರಾಂತಿಯಾಗುತ್ತದೆ. ರಜೆಯಿಂದ ಮರಳಿದ ನಂತರ ಮತ್ತೆ ನಮ್ಮ ಕೆಲಸದಲ್ಲಿ ತೊಡಗಿಕೊಂಡು ಮೊದಲಿಗಿಂತಲೂ ಹೆಚ್ಚು ಏಕಾಗ್ರತೆಯಿಂದ ಕೆಲಸ ಮಾಡಬಹುದು. ಹೆಚ್ಚು ದಿನಗಳಿಂದ ನಮ್ಮ ಲಿಸ್ಟ್ಗಳಲ್ಲಿ  ಹೋಗಲಾಗದೆ ಉಳಿದಿರುವ ರಜೆಗಳನ್ನು ನಮ್ಮ ಪ್ರೀತಿಪಾತ್ರರ ಜೊತೆ ಕಳೆಯೋಣ. ನಮ್ಮ ದೈಹಿಕ  ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

ಕೊರೊನದಿಂದ ರಕ್ಷಣೆ ಹಾಗೂ ಲಸಿಕೆಯ ಮಾಹಿತಿ ಇಲ್ಲಿದೆ

ಕೊರೊನದಿಂದ ರಕ್ಷಣೆ ಹಾಗೂ ಲಸಿಕೆಯ ಮಾಹಿತಿ ಇಲ್ಲಿದೆ

ಅಬಬ್ಬಾ ಹಣ್ಣಿನ ರಾಜ ಬಂದ..ಯಾರು ಈ ರಾಜ?

ಅಬಬ್ಬಾ ಹಣ್ಣಿನ ರಾಜ ಬಂದ..ಯಾರು ಈ ರಾಜ?