in ,

ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆ ಇದ್ದರೆ ಕೆಲವೊಂದು ಆಹಾರಗಳನ್ನು ಸೇವಿಸಿ

ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆ ಇದ್ದರೆ ಕೆಲವೊಂದು ಆಹಾರಗಳನ್ನು ಸೇವಿಸಿ
ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆ ಇದ್ದರೆ ಕೆಲವೊಂದು ಆಹಾರಗಳನ್ನು ಸೇವಿಸಿ

ಹಿಮೋಗ್ಲೋಬಿನ್, ಕೆಂಪು ರಕ್ತ ಕಣಗಳಲ್ಲಿ ಕಂಡು ಬರುವ ಪ್ರೋಟೀನ್. ಇದು ದೇಹದ ಅಂಗಾಂಶಗಳಿಗೆ ಆಮ್ಲಜನಕವನ್ನು ಪೂರೈಸುತ್ತದೆ. ಆದರೆ ಕಡಿಮೆ ಹಿಮೋಗ್ಲೋಬಿನ್ ಹೊಂದಿರುವವರಲ್ಲಿ ರಕ್ತಹೀನತೆ ಕೊರತೆ ಉಂಟಾಗುತ್ತದೆ. ಇದರಿಂದ ನೀವು ಇತರ ಸಮಸ್ಯೆಗಳನ್ನು ಎದುರಿಸಬಹುದು.

ದೇಹದಲ್ಲಿ ಕಬ್ಬಿಣಾಂಶದ ಪ್ರಮಾಣವು ಸಮತೋಲನದಲ್ಲಿ ಇದ್ದಾಗ ರಕ್ತದಲ್ಲಿಯೂ ಸೂಕ್ತ ಪ್ರಮಾಣದ ಹಿಮೋಗ್ಲೋಬಿನ್ ಇರುತ್ತದೆ. ಜೊತೆಗೆ ದೇಹದಾದ್ಯಂತ ಆಮ್ಲಜನಕವು ಸಮವಾಗಿ ಸಂಚಲನ ಪಡೆಯುವಂತೆ ಮಾಡುವುದು.

ಆರೋಗ್ಯವಂತ ಗಂಡಸರಲ್ಲಿ 13.5 ನಿಂದ 17.5 ರಷ್ಟು ಮತ್ತು ಮಹಿಳೆಯರಲ್ಲಿ 12ರಿಂದ 15.5 ಗ್ರಾಂ ವರೆಗಿನ ಹಿಮೋಗ್ಲೋಬಿನ್‌ ಅಂಶ ಇರಬೇಕು ಎನ್ನುವುದು ತಜ್ಞರ ಅಭಿಪ್ರಾಯ. ಇಷ್ಟು ಇದ್ದಲ್ಲಿ ಮಾತ್ರವೇ ಅಂಗಾಂಗಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತವೆ. ಇವುಗಳ ಪ್ರಮಾಣದಲ್ಲಿ ಇಳಿಕೆಯಾದಾಗ ಸಾಮಾನ್ಯವಾಗಿ ಆಯಾಸ, ತಲೆನೋವು, ಉಸಿರಾಟದ ತೊಂದರೆ, ತಲೆ ತಿರುಗುವಿಕೆ, ಹಸಿವಾಗದೆ ಇರುವುದು ಹೀಗೆ ಅನೇಕ ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ. ಇಂತಹ ಸಮಸ್ಯೆಯನ್ನು ಕೆಲವು ನೈಸರ್ಗಿಕ ಆರೈಕೆಯಿಂದಲೇ ನಿವಾರಿಸಬಹುದು.

ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆ ಇದ್ದರೆ ಕೆಲವೊಂದು ಆಹಾರಗಳನ್ನು ಸೇವಿಸಿ
ದಾಳಿಂಬೆ

ಕಡಿಮೆ ಮಟ್ಟದ ಹಿಮೋಗ್ಲೋಬಿನ್ ಹೊಂದಿರುವ ವ್ಯಕ್ತಿಯು ಹೆಚ್ಚು ಕಬ್ಬಿಣದ ಆಹಾರವನ್ನು ಸೇವಿಸುವುದರಿಂದ ಉತ್ತಮ ಪ್ರಯೋಜನವಾಗುತ್ತದೆ. ಕಬ್ಬಿಣವು ಹಿಮೋಗ್ಲೋಬಿನ್ ಉತ್ಪಾದನೆಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ, ಇದು ಹೆಚ್ಚು ಕೆಂಪು ರಕ್ತ ಕಣಗಳನ್ನು ರೂಪಿಸಲು ಸಹಾಯ ಮಾಡುತ್ತದೆ.

ಕಬ್ಬಿಣಾಂಶ ಹೆಚ್ಚು ಪ್ರಮಾಣದಲ್ಲಿರುವ ಆಹಾರ ವಸ್ತುಗಳೇ ಆದ್ಯತೆಯ ಪಟ್ಟಿಯಲ್ಲಿರಲಿ. ಹಸಿರು ತರಕಾರಿಗಳು, ಮೊಟ್ಟೆ, ಧಾನ್ಯಗಳು, ಕಾಳುಗಳು, ಮಾಂಸ, ಮೀನು, ಬೀನ್ಸ್‌, ಒಣ ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿ.

ನಿತ್ಯವೂ ಒಂದು ದಾಳಿಂಬೆ ಅಥವಾ ಸೇಬು ಹಣ್ಣನ್ನು ತಿಂದರೆ ವೈದ್ಯರನ್ನು ದೂರ ಇಡಬಹುದು. ದಿನಕ್ಕೆ ಒಂದು ಸೇಬು ಹಣ್ಣನ್ನು ತಿನ್ನುವುದರಿಂದ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುವುದು. ಸೇಬು ಮತ್ತು ದಾಳಿಂಬೆ ಹಣ್ಣಿನಲ್ಲಿ ಕಬ್ಬಿಣಾಂಶ ಸಮೃದ್ಧವಾಗಿರುತ್ತದೆ. ದಿನಕ್ಕೆ ಒಂದು ಗ್ಲಾಸ್ ಸೇಬು ರಸ ಅಥವಾ ದಾಳಿಂಬೆ ರಸವನ್ನು ಕುಡಿಯಬಹುದು. ಹೆಚ್ಚುವರಿ ಪರಿಮಳಕ್ಕಾಗಿ ಶುಂಠಿ, ನಿಂಬೆರಸವನ್ನು ಸೇರಿಸಿಕೊಳ್ಳಬಹುದು.

ಚೀನೀಕಾಯಿ ಬೀಜಗಳಲ್ಲಿ ಹಿಮೋಗ್ಲೋಬಿನ್‌ ಅಂಶಗಳು ಹೆಚ್ಚುಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕ್ಯಾಲ್ಸಿಯಂ, ಮ್ಯಾಗ್ನೇಶಿಯಂ, ಮ್ಯಾಂಗನೀಸ್‌ ಅಂಶಗಳು ಹೆಚ್ಚಾಗುವುದಕ್ಕೆ ಇವು ಸಹಾಯ ಮಾಡುತ್ತದೆ.

ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆ ಇದ್ದರೆ ಕೆಲವೊಂದು ಆಹಾರಗಳನ್ನು ಸೇವಿಸಿ
ಚೀನೀಕಾಯಿ ಬೀಜ

ದೇಹದಲ್ಲಿ ಕಬ್ಬಿಣಾಂಶ ಮತ್ತು ವಿಟಮಿನ್ ಸಿ ಎರಡರ ಸಂಯೋಜನೆಯು ಅತ್ಯಗತ್ಯ. ವಿಟಮಿನ್ ಸಿಯು ದೇಹದಲ್ಲಿ ಕಬ್ಬಿಣಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುವುದು. ವಿಟಮಿನ್ ಸಿ ಸಮೃದ್ಧವಾಗಿರುವ ಕಿತ್ತಳೆ ಹಣ್ಣು, ನಿಂಬೆ, ಸ್ಟ್ರಾಬೆರಿ, ಪಪ್ಪಾಯ, ಬೆಲ್ ಪೇಪರ್, ಬ್ರುಕೋಲಿ, ದ್ರಾಕ್ಷಿ ಹಾಗೂ ಟೊಮ್ಯಾಟೋ ಗಳನ್ನು ನಮ್ಮ ನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಆಗ ದೇಹದಲ್ಲಿ ವಿಟಮಿನ್ ಸಿ ಯ ಪ್ರಮಾಣ ಹಾಗೂ ಕಬ್ಬಿಣಾಂಶವು ಸಮ ಪ್ರಮಾಣದಲ್ಲಿ ಇರುವುದು.

ಒಣದ್ರಾಕ್ಷಿಯಲ್ಲಿ ಕಬ್ಬಿನಾಂಶ ಸಮೃದ್ಧವಾಗಿದೆ. ಇದು ಕೆಂಪು ರಕ್ತ ಕಣಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ.

ಫೋಲೇಟ್ ಒಂದು ರೀತಿಯ ವಿಟಮಿನ್ ಬಿ ಆಗಿದ್ದು ಅದು ಹಿಮೋಗ್ಲೋಬಿನ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆಮ್ಲಜನಕವನ್ನು ಸಾಗಿಸಲು ಸಹಾಯ ಮಾಡುವ ಹಿಮೋಗ್ಲೋಬಿನ್‌ನ ಒಂದು ಅಂಶವಾದ ಹೀಮ್ ಅನ್ನು ಉತ್ಪಾದಿಸಲು ದೇಹವು ಫೋಲೇಟ್ ಅನ್ನು ಬಳಸುತ್ತದೆ.

ಖರ್ಜೂರದಲ್ಲಿ ಕಬ್ಬಿಣದ ಅಂಶ ಹೇರಳವಾಗಿದೆ. ಇದರಲ್ಲಿ ವಿಟಮಿನ್ ಸಿ, ವಿಟಮಿನ್ ಬಿ ಕಾಂಪ್ಲೆಕ್ಸ್ ಮತ್ತು ಫೋಲಿಕ್ ಆಮ್ಲವೂ ಇದೆ. ರಕ್ತಹೀನತೆ ತಡೆಗಟ್ಟಲು ಈ ಆಹಾರಗಳನ್ನು ಸೇವಿಸಿ.

ಫೋಲಿಕ್ ಆಸಿಡ್ ಬಿ ಕಾಂಪ್ಲೆಕ್ಸ್ ವಿಟಮಿನ್, ಕೆಂಪು ರಕ್ತ ಕಣಗಳನ್ನು ತಯಾರಿಸಲು ಅತ್ಯಗತ್ಯ. ಫೋಲಿಕ್ ಆಮ್ಲದ ಕೊರತೆಯು ಸ್ವಯಂಚಾಲಿತವಾಗಿ ಕಡಿಮೆಯಾಗುವುದು. ಫೋಲಿಕ್ ಆಮ್ಲದ ಕೊರತೆಯು ಸ್ವಯಂಚಾಲಿತವಾಗಿ ಕಡಿಮೆಯಾಗುವುದು. ವೈದ್ಯರ ಪ್ರಕಾರ ಫೋಲಿಕ್ ಆಮ್ಲವು ಹಸಿರು ಎಲೆ, ಸೊಪ್ಪು, ತರಕಾರಿಗಳು, ಮೊಗ್ಗುಗಳು, ಒಣಗಿದ ಬೀನ್ಸ್, ಗೋಧಿ ಸೂಕ್ಷ್ಮಾಣು, ಕಡಲೆಕಾಯಿ, ಬಾಳೆ ಹಣ್ಣು, ಕೋಸುಗಡ್ಡೆ ಮತ್ತು ಚಿಕನ್ ಲಿವರ್ ಅನ್ನು ಸೇವಿಸಬೇಕು. ಇವುಗಳಲ್ಲಿ ಫೋಲಿಕ್ ಆಮ್ಲ, ಕಬ್ಬಿಣಾಂಶ, ಪೊಟ್ಯಾಸಿಯಂ ಮತ್ತು ಫೈಬರ್ ಅಧಿಕವಾಗಿ ಇರುತ್ತವೆ. ಇವು ದೇಹದಲ್ಲಿ ರಕ್ತಕಣಗಳು ಹೆಚ್ಚುವಂತೆ ಮಾಡುತ್ತವೆ. ನಿತ್ಯದ ಆಹಾರದಲ್ಲಿ ಬೀಟ್ರೂಟ್ ಅನ್ನು ಸೇರಿಸಿಕೊಳ್ಳಬೇಕು.

ಎಳ್ಳಿನಲ್ಲಿ ವಿವಿಧ ಪೋಷಕಾಂಶಗಳಿವೆ. ಕಬ್ಬಿಣ, ಫೋಲೇಟ್, ಫ್ಲೇವನಾಯ್ಡ್​​​ಗಳು, ತಾಮ್ರ ಮತ್ತು ಇತರ ಪೋಷಕಾಂಶಗಳನ್ನು ಎಳ್ಳು ಒಳಗೊಂಡಿದೆ. ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವಲ್ಲಿ ಅದು ಹೆಚ್ಚಿನ ಪಾತ್ರ ವಹಿಸುತ್ತದೆ.

ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆ ಇದ್ದರೆ ಕೆಲವೊಂದು ಆಹಾರಗಳನ್ನು ಸೇವಿಸಿ
ಬೀಟ್‌ರೂಟ್‌

ಬೀಟ್‌ರೂಟ್‌ ಸೇವನೆಯಿಂದ ಹಿಮೋಗ್ಲೋಬಿನ್‌ ಅಂಶ ಹೆಚ್ಚಾಗುತ್ತದೆ. ಇದು ಅಧಿಕ ಕಬ್ಬಿಣಾಂಶ, ಫೊಲಿಕ್‌ ಆ್ಯಸಿಡ್‌, ಪೊಟ್ಯಾಷಿಯಂ ಮತ್ತು ಫೈಬರ್‌ ಅಂಶಗಳನ್ನು ಪೂರೈಸುತ್ತದೆ. ಇದರ ಜ್ಯೂಸ್‌ ಸೇವನೆಯಿಂದ ಆರೋಗ್ಯಕರ ಕೆಂಪು ರಕ್ತಕಣಗಳು ವೃದ್ಧಿ ಸುತ್ತವೆ.

ದಾಳಿಂಬೆ ಹಣ್ಣಿನಲ್ಲಿ ಅಧಿಕ ಪ್ರಮಾಣದ ಕ್ಯಾಲ್ಸಿಯಂ, ಫೈಬರ್, ಪ್ರೋಟೀನ್ ಅನ್ನು ಒಳಗೊಂಡಿರುತ್ತದೆ. ಇದರ ಪೌಷ್ಟಿಕಾಂಶದ ಮೌಲ್ಯವು ಹಿಮೋಗ್ಲೋಬಿನ್ ಹೆಚ್ಚಿಸಲು ಸಹಾಯ ಮಾಡುವುದು. ಅಲ್ಲದೆ ಆರೋಗ್ಯಕರ ರಕ್ತದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುವುದು.

ಹಿಮೋಗ್ಲೋಬಿನ್‌ ಹೆಚ್ಚಾಗುವುದಕ್ಕೆ ವಿಟಮಿನ್‌ ಸಿ ಅಂಶ ಹೆಚ್ಚು ಉಪಯುಕ್ತ. ಕಿತ್ತಳೆ, ಲಿಂಬೆ, ಕ್ಯಾಪ್ಸಿಕಮ್‌, ಟೊಮೇಟೋ, ದ್ರಾಕ್ಷಿ ಮುಂತಾದವುಗಳಲ್ಲಿ ವಿಟಮಿನ್‌ ಸಿ ಅಂಶ ಹೆಚ್ಚಾಗಿರುತ್ತದೆ. ಇವುಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸುವುದರಿಂದ ಹಿಮೋಗ್ಲೋಬಿನ್‌ವನ್ನು ಹೆಚ್ಚಿಸಿ ಕೊಳ್ಳಬಹುದಾಗಿದೆ.

ನೆಟಲ್ ಸಸ್ಯದ ಟೀಯ ಸಮೃದ್ಧವಾದ ಬಿ ಜೀವಸತ್ವವನ್ನು ಒಳಗೊಂಡಿರುತ್ತದೆ. ಒಂದು ಕಪ್ ಬಿಸಿ ನೀರಿಗೆ 2 ಟೀ ಚಮಚ ಒಣಗಿದ ನೆಟಲ್ ಗಿಡದ ಎಲೆಗಳನ್ನು ಸೇರಿಸಬೇಕು. ನಂತರ 10 ನಿಮಿಷಗಳ ಕಾಲ ಕುದಿಸಿ ಕುಡಿಯಬೇಕು. ನಂತರ ತಳಿ ಮತ್ತು ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಕುಡಿಯಬಹುದು. ನಿತ್ಯವೂ ಈ ಟೀ ಅನ್ನು ಎರಡು ಬಾರಿ ಕುಡಿದರೆ ಆರೋಗ್ಯದಲ್ಲಿ ಸುಧಾರಣೆ ಹಾಗೂ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುವುದು.

ನೇರಳೆ ಹಣ್ಣು, ಡ್ರೈ ಏಪ್ರಿಕಾಟ್, ರಾಗಿ, ಬೇಳೆ ಕಾಳುಗಳು, ಹೆಸರು ಬೇಳೆ, ಹುಣಸೆ ಹಣ್ಣಿನ ತಿರುಳು, ಶೇಂಗಾ, ಬೆಲ್ಲ ಮುಂತಾದ ವಸ್ತುಗಳಲ್ಲಿ ಕೂಡಾ ಕಬ್ಬಿಣಾಂಶವಿದೆ. ಇದು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ.

ಸೂಕ್ತ ಪ್ರಮಾಣದ ವ್ಯಾಯಾಮ ಮಾಡುವುದರಿಂದ ಅಥವಾ ದೇಹವನ್ನು ದಂಡಿಸುವುದರಿಂದ ದೇಹದಾದ್ಯಂತ ಆಮ್ಲಜನಕದ ಸಂಚಾರ ಹೆಚ್ಚುವುದು. ಜೊತೆಗೆ ಹಿಮೋಗ್ಲೋಬಿನ್ ಪ್ರಮಾಣವು ಹೆಚ್ಚುವುದು. ದಿನನಿತ್ಯವೂ ಸಮತೋಲಿತ ಆಹಾರವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಅಗತ್ಯವಾದ ಪೋಷಣೆ ದೊರೆಯುವುದು. ಹಿಮೋಗ್ಲೋಬಿನ್ ಹಾಗೂ ರೋಗ ನಿರೋಧಕ ಶಕ್ತಿಯು ದ್ವಿಗುಣವಾಗುವುದು.

ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆ ಇದ್ದರೆ ಕೆಲವೊಂದು ಆಹಾರಗಳನ್ನು ಸೇವಿಸಿ
ಪಾಲಕ್ ಸೊಪ್ಪು

ಪಾಲಕ್ ಸೊಪ್ಪಿನಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ಕಬ್ಬಿಣವು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಹಾಗೇ ಹಿಮೋಗ್ಲೋಬಿನ್ ಅಂಶ ಮತ್ತು ಕೆಂಪು ರಕ್ತ ಕಣಗಳ ಸಂಖ್ಯೆಯನ್ನು ಹೆಚ್ಚಿಸಲು ಸಹಾಯಕಾರಿಯಾಗಿದೆ.

ಬ್ರೌನ್ ರೈಸ್ ಆರೋಗ್ಯಕರ ಸೂಪರ್‌ಫುಡ್‌ಗಳಲ್ಲಿ ಒಂದಾಗಿದೆ. ಇದು ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣವನ್ನು ಹೊಂದಿರುತ್ತದೆ, ಇದರಿಂದಾಗಿ ಹಿಮೋಗ್ಲೋಬಿನ್ ಪ್ರಮಾಣವು ಹೆಚ್ಚಾಗುತ್ತದೆ.

ಹಿಮೋಗ್ಲೋಬಿನ್ ಕಡಿಮೆ ಇರುವವರು ಕುಂಬಳಕಾಯಿ ಬೀಜಗಳನ್ನು ಸೇವಿಸಬೇಕು. ಏಕೆಂದರೆ ಇದರಲ್ಲಿರುವ ಪೋಷಕಾಂಶಗಳು ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸಲು ಕೆಲಸ ಮಾಡುತ್ತವೆ.

ತುಂಬಾ ಕಡಿಮೆ ಹಿಮೋಗ್ಲೋಬಿನ್ ಮಟ್ಟವನ್ನು ಹೊಂದಿರುವ ಜನರು ಮಾತ್ರೆಗಳನ್ನು ಅಥವಾ ಬೇರೆ ಔಷಧಗಳನ್ನು ತೆಗೆದುಕೊಳ್ಳುವುದು ಮತ್ತು ಆಹಾರವನ್ನು ಬದಲಾಯಿಸುವುದು ಯಾವುದೇ ಪರಿಣಾಮ ಬೀರದಿದ್ದಲ್ಲಿ ಹೆಚ್ಚುವರಿ ಚಿಕಿತ್ಸೆಯ ಅಗತ್ಯವಿರುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಭಾರತೀಯ ಸೇನಾ ದಿನಾಚರಣೆ

ಜನವರಿ 15ರಂದು, ಭಾರತೀಯ ಸೇನಾ ದಿನಾಚರಣೆಯನ್ನಾಗಿ ಆಚರಿಸುತ್ತೇವೆ

ಕಾರ್ತವೀರ್ಯ ಅರ್ಜುನ

ಕಾರ್ತವೀರ್ಯ ಅರ್ಜುನ