in ,

ಜನವರಿ 15ರಂದು, ಭಾರತೀಯ ಸೇನಾ ದಿನಾಚರಣೆಯನ್ನಾಗಿ ಆಚರಿಸುತ್ತೇವೆ

ಭಾರತೀಯ ಸೇನಾ ದಿನಾಚರಣೆ
ಭಾರತೀಯ ಸೇನಾ ದಿನಾಚರಣೆ

ಫೀಲ್ಡ್ ಮಾರ್ಷಲ್ ಕೆ. ಎಂ ಕಾರ್ಯಪ್ಪ ಅವರು ಭಾರತೀಯ ಸೇನೆಯ ಮೊದಲ ಕಮಾಂಡರ್-ಇನ್-ಚೀಫ್ ಆಗಿ 1949 ಜನವರಿ 15ರಂದು ಅಧಿಕಾರ ಸ್ವೀಕರಿಸಿದರು. ಅದರ ಗುರುತಾಗಿ ಪ್ರತೀವರ್ಷ ಸೇನಾ ದಿನವನ್ನಾಗಿ ಆಚರಿಸುತ್ತಾ ಬರುತ್ತಿದೆ.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಕರ್ನಾಟಕದ ಕೊಡಗು ಜಿಲ್ಲೆಯ ವೀರ ಪುತ್ರ ಎಂಬುವುದೇ ನಮ್ಮ ಹೆಮ್ಮೆ.

 ರಾಷ್ಟ್ರಕ್ಕೇ ನಿಸ್ವಾರ್ಥ ಸೇವೆ ಸಲ್ಲಿಸಿದ ಸೈನಿಕರನ್ನು ಗೌರವಿಸಲಾಗುತ್ತದೆ. ಈ ದಿನವನ್ನು ಎಲ್ಲಾ ಸೇನಾ ಕಮಾಂಡ್ ಪ್ರಧಾನ ಕಚೇರಿಗಳಲ್ಲಿ ಆಚರಣೆ ಮಾಡಲಾಗುತ್ತದೆ.

1949ರ ಜನವರಿ 15ರಂದು ಭಾರತೀಯ ಸೇನೆಯ ಮೊದಲ ಜನರಲ್ ಫೀಲ್ಡ್ ಮಾರ್ಷಲ್ ಆಗಿ ಕೆಎಂ ಕಾರ್ಯಪ್ಪ ಅವರು ಅಧಿಕಾರ ಸ್ವೀಕರಿಸಿದ್ದರು. ಈ ಹಿನ್ನೆಲೆಯಲ್ಲಿ ಜನವರಿ 15ನ್ನು ಐತಿಹಾಸಿಕ ದಿನವನ್ನಾಗಿ ಆಚರಿಸಲಾಗುತ್ತಿದೆ. ದೇಶದ ಆರ್ಮಿಯ ಕೊನೆಯ ಬ್ರಿಟಿಷ್ ಕಮಾಂಡರ್ ಜನರಲ್ ಸರ್ ಫ್ರಾನ್ಸಿಸ್ ರೋಬರ್ಟ್ ರಾಯ್ ಬುಚರ್ ಅವರ ನಂತರ ಭಾರತದ ಮೊದಲ ಜನರಲ್ ಆಗಿ ಅಧಿಕಾರ ಸ್ವೀಕರಿಸಿದ್ದರು.

ಜನವರಿ 15ರಂದು, ಭಾರತೀಯ ಸೇನಾ ದಿನಾಚರಣೆಯನ್ನಾಗಿ ಆಚರಿಸುತ್ತೇವೆ
ಫೀಲ್ಡ್ ಮಾರ್ಷಲ್ ಕೆ. ಎಂ ಕಾರ್ಯಪ್ಪ

ಭಾರತಕ್ಕೆ ಸ್ವತಂತ್ರ್ಯ ಸಿಕ್ಕ ಬಳಿಕ ಭಾರತದ ಸೇನಾ ಕಮಾಂಡರ್-ಇನ್-ಚೀಫ್ ಅಧಿಕಾರ ವಹಿಸಿಕೊಂಡವರೇ ಫೀಲ್ಡ್ ಮಾರ್ಷಲ್ ಕೊದಂಡ ಮಾದಪ್ಪ ಕಾರ್ಯಪ್ಪ. ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ ಹಾಗೂ ಕೆ ಎಂ ಕಾರ್ಯಪ್ಪ, ಭಾರತೀಯ ಸೇನೆಯ ಪಂಚತಾರಾ ಶ್ರೇಣಿ ಅಧಿಕಾರಿಗಳಾಗಿದ್ದರು. ಭಾರತಕ್ಕೆ ಇವರು ಸಲ್ಲಿಸಿದ ಸೇವೆ ಎಂದೆಂದಿಗೂ ಸ್ಮರಿಸುವಂಥದ್ದು. 1920 ರಿಂದ 1950ರವರೆಗೆ 3 ದಶಕಗಳವರೆಗೆ ಭಾರತ ಮಾತೆಯ ಸೇವೆ ಮಾಡಿದ್ದಾರೆ. 1947ರಲ್ಲಿ ಯುನೈಟೆಡ್ ಕಿಂಗಡಮ್‌‌ನ ಕಿಂಬೆರ್ಲಿಯಲ್ಲಿರುವ ಇಂಪೆರಿಯಲ್ ಡಿಫೆನ್ಸ್ ಕಾಲೇಜಿನಲ್ಲಿ ಯುದ್ಧದ ಉನ್ನತ ಮಟ್ಟದ ತಂತ್ರಗಳ ಬಗ್ಗೆ ತರಬೇತಿ ಪಡೆದ, ಮೊದಲ ಭಾರತೀಯ ಕಾರ್ಯಪ್ಪ ಅವರು ಆಗಿದ್ದಾರೆ. ಇವರು ಜನವರಿ 15ರಂದು ಸೇನೆಯ ಕಮಾಂಡರ್-ಇನ್-ಚೀಫ್ ಆಗಿ ಅಧಿಕಾರ ವಹಿಸಿಕೊಂಡರು. ಈ ದಿನವನ್ನು ಭಾರತೀಯರು ಹೆಮ್ಮೆಯಿಂದ ಆಚರಿಸುತ್ತಾರೆ.

ಭಾರತೀಯ ಸೇನಾ ದಿನಾಚರಣೆಯ ಅಂಗವಾಗಿ ಪ್ರತಿವರ್ಷ ಸೇನಾ ಪರೇಡ್, ವೀರಯೋಧರಿಗೆ ಪ್ರಶಸ್ತಿ ಪ್ರದಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. 2023 ರಲ್ಲಿ 75ನೇ ಭಾರತೀಯ ಸೇನಾ ದಿನವನ್ನು ಬೆಂಗಳೂರಿನಲ್ಲಿ ಆಚರಣೆ ಮಾಡಲಾಗುತ್ತಿದ್ದು, ಆಚರಣೆಗೆ ಸಕಲ ಸಿದ್ಧತೆ ಭರದಿಂದ ಸಾಗಿವೆ.

ಬ್ರಿಟಿಷ್ ಅಧಿಕಾರಿಯಿಂದ ಅಧಿಕಾರ ಹಸ್ತಾಂತರವಾದ ದಿನವು ಭಾರತದ ಇತಿಹಾಸದಲ್ಲೇ ಮಹತ್ವ ಪಡೆದುಕೊಂಡಿದ್ದು, ಇದರ ಜ್ಞಾಪಕಾರ್ಥವಾಗಿ ಭಾರತೀಯ ಸೇನಾ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಬ್ರಿಟಿಷರಿಂದ ಭಾರತಕ್ಕೆ ಅಧಿಕಾರ ಹಸ್ತಾಂತರವು ಭಾರತದ ಇತಿಹಾಸದಲ್ಲಿ ಮತ್ತು ವಿದೇಶಿ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದ ಅತ್ಯಂತ ಪ್ರಮುಖ ಅಧ್ಯಾಯವಾಗಿದೆ.

ಈ ದಿನದಂದು ಎಲ್ಲಾ ಕಮಾಂಡ್ ಹೆಡ್‌ಕ್ವಾರ್ಟರ್‌ಗಳು ಮತ್ತು ನವದೆಹಲಿಯ ಪ್ರಧಾನ ಕಚೇರಿಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಮೀಲಿಟರಿ ಮೆರವಣಿಗೆಗಳು ಮತ್ತು ಭಾರತೀಯ ಸೇನೆಯಲ್ಲಿ ಇತ್ತೀಚೆಗೆ ಅಳವಡಿಸಿಕೊಂಡಿರುವ ತಂತ್ರಜ್ಞಾನದ ಪ್ರದರ್ಶಗಳು ಇರುತ್ತವೆ.

ಭಾರತೀಯ ಸೇನೆಯಲ್ಲಿ ಸೇನಾ ದಿನಾಚರಣೆಯನ್ನು ಅದ್ದೂರಿಯಾಗಿ ಜನವರಿ 15ರಂದು ಆಚರಿಸಲಾಗುತ್ತಿದೆ. ಇಂದು ಸೇನಾ ಕಮಾಂಡ್ ಗಳ ಪ್ರಧಾನ ಕಚೇರಿಯಲ್ಲಿ ಸಾಂಪ್ರದಾಯಿಕ ಸೇನಾ ದಿನಾಚರಣೆಯ ಪರೇಡ್ ನಡೆಯಲಿದೆ. ಅಲ್ಲದೇ ದಿಲ್ಲಿ ಕಂಟೋನ್ಮೆಂಟ್ ನ ಮೈದಾನದಲ್ಲಿ ನಡೆಯಲಿರುವ ಪರೇಡ್ ನಲ್ಲಿ ಆರ್ಮಿ ಜನರಲ್ ಎಂಎಂ ನರಾವಣೆ ಹಾಗೂ ಸೇನಾ ವರಿಷ್ಠರು ಭಾಗವಹಿಸಿ ಪರಿಶೀಲನೆ ನಡೆಸಲಿದ್ದಾರೆ. ಸೇನಾ ದಿನಾಚರಣೆ ಹಿನ್ನೆಲೆಯಲ್ಲಿ ಯೋಧರಿಂದ ಬೈಕ್ ಸ್ಟಂಟ್, ವೈಮಾನಿಕ ಕಸರತ್ತು ಪ್ರದರ್ಶನ ನಡೆಯಲಿದೆ. ಇಂದು ಶೌರ್ಯ ಪ್ರಶಸ್ತಿ, ಸೇನಾ ಪದಕಗಳನ್ನು ನೀಡಿ ಗೌರವಿಸಲಾಗುತ್ತದೆ.

ಜನವರಿ 15ರಂದು, ಭಾರತೀಯ ಸೇನಾ ದಿನಾಚರಣೆಯನ್ನಾಗಿ ಆಚರಿಸುತ್ತೇವೆ
ಸೇನಾ ದಿನಾಚರಣೆ ಯೋಧರ ಕಸರತ್ತು

ಬ್ರಿಟಿಷ್ ಆಳ್ವಿಕೆ ಕಾಲದಲ್ಲಿ ಮೊದಲ ಬಾರಿಗೆ 1859 ಏಪ್ರಿಲ್ 1 ರಂದು ಭಾರತೀಯ ಸೇನೆಯನ್ನು ಸ್ಥಾಪಿಸಲಾಗಿತ್ತು. ಅಂದು ಅದನ್ನು ಬ್ರಿಟಿಷ್ ಭಾರತೀಯ ಸೇನೆ ಎಂದು ಕರೆಯಲಾಗುತ್ತಿತ್ತು.

1947 ಆಗಸ್ಟ್ 15 ರಂದು ಭಾರತವು ಬ್ರಿಟಷರಿಂದ ಸ್ವಾತಂತ್ರ್ಯವನ್ನು ಪಡೆದುಕೊಂಡಿತು. ಆದರೆ ಜನವರಿ 15, 1949 ರಲ್ಲಿ ಮೊದಲ ಬಾರಿಗೆ ಕೆ.ಎಂ.ಕಾರ್ಯಪ್ಪ ಅವರು ಭಾರತೀಯ ಸೇನೆಯ ಕಮಾಂಡರ್ ಇನ್ ಚೀಫ್‌ ಆಗಿ ಅಧಿಕಾರ ವಹಿಸಿಕೊಂಡರು. ಅಂದು ಫ್ರಾನ್ಸಿಸ್ ಬಟ್ಟರ್ ಅವರು ಕೆ.ಎಂ.ಕಾರ್ಯಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಫೀಲ್ಡ್ ಮಾರ್ಷಲ್ ಕೋದಂಡೇರ ಎಂ. ಕರಿಯಪ್ಪ ಅವರು ಜನರಲ್ ಫ್ರಾನ್ಸಿಸ್ ರಾಯ್ ಬುಚೆರ್ ಅವರಿಂದ ಭಾರತೀಯ ಸೇನೆಯ ಮೊದಲ ಕಮಾಂಡರ್-ಇನ್-ಚೀಫ್ ಆಗಿ ಅಧಿಕಾರ ವಹಿಸಿಕೊಂಡಿದ್ದನ್ನು ಗುರುತಿಸಿ, ಭಾರತದಲ್ಲಿ ಪ್ರತಿ ವರ್ಷ ಜನವರಿ 15 ರಂದು ಸೇನಾ ದಿನವನ್ನು ಆಚರಿಸಲಾಗುತ್ತದೆ . ಭಾರತದ ಕೊನೆಯ ಬ್ರಿಟಿಷ್ ಕಮಾಂಡರ್-ಇನ್-ಚೀಫ್ , 15 ಜನವರಿ 1949 ಈ ದಿನವನ್ನು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮತ್ತು ಎಲ್ಲಾ ಪ್ರಧಾನ ಕಚೇರಿಗಳಲ್ಲಿ ಮೆರವಣಿಗೆಗಳು ಮತ್ತು ಇತರ ಮಿಲಿಟರಿ ಪ್ರದರ್ಶನಗಳ ರೂಪದಲ್ಲಿ ಆಚರಿಸಲಾಗುತ್ತದೆ. 15 ಜನವರಿ 2022 ರಂದು, ಭಾರತವು ತನ್ನ 74 ನೇ ಭಾರತೀಯ ಸೇನಾ ದಿನವನ್ನು ನವದೆಹಲಿಯಲ್ಲಿ ಆಚರಿಸಿತ್ತು. ದೇಶವನ್ನು ಮತ್ತು ಅದರ ನಾಗರಿಕರನ್ನು ರಕ್ಷಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ವೀರ ಸೈನಿಕರಿಗೆ ಗೌರವ ಸಲ್ಲಿಸುವ ದಿನವನ್ನು ಸೇನಾ ದಿನವನ್ನು ಗುರುತಿಸಲಾಗುತ್ತದೆ. 

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ದಿ ಕ್ವೀನ್ ಆಫ್ ಪೆಪ್ಪರ್

ಪೋರ್ಚುಗೀಸರಿಂದ ‘ ದಿ ಕ್ವೀನ್ ಆಫ್ ಪೆಪ್ಪರ್ ‘ ಎಂದು ಕರೆಸಿಕೊಂಡ ರಾಣಿ ಚೆನ್ನಭೈರಾದೇವಿ

ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆ ಇದ್ದರೆ ಕೆಲವೊಂದು ಆಹಾರಗಳನ್ನು ಸೇವಿಸಿ

ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆ ಇದ್ದರೆ ಕೆಲವೊಂದು ಆಹಾರಗಳನ್ನು ಸೇವಿಸಿ