in

ಅವಲಕ್ಕಿಯು ಏಷಿಯಾದಲ್ಲಿ ಜನಪ್ರಿಯ ತಿನಿಸಾಗಿದೆ

ಅವಲಕ್ಕಿ
ಅವಲಕ್ಕಿ

ಅವಲಕ್ಕಿಯು ಚಪ್ಪಟೆಯಾದ, ಹಗುರ ಮತ್ತು ಒಣ ಚೂರುಗಳಾಗಿ ಮಟ್ಟವಾಗಿಸಲಾದ ತಳಿಸಿದ ಅಕ್ಕಿ. ಅಕ್ಕಿಯ ಈ ಚೂರುಗಳು, ಬಿಸಿ ಅಥವಾ ತಣ್ಣನೆಯ, ದ್ರವಕ್ಕೆ ಸೇರಿಸಿದೊಡನೆ, ನೀರು, ಹಾಲು ಅಥವಾ ಇತರ ದ್ರವಗಳನ್ನು ಹೀರಿಕೊಳ್ಳುವುದರಿಂದ ಉಬ್ಬುತ್ತವೆ. ಬಹುತೇಕ ತೆಳು ಅವಲಕ್ಕಿಯಿಂದ ಸಾಮಾನ್ಯ ಅಕ್ಕಿಕಾಳಿನ ನಾಲ್ಕು ಪಟ್ಟು ದಪ್ಪವಿರುವ ಅವಲಕ್ಕಿಯವರೆಗೆ ಈ ಚೂರುಗಳ ದಪ್ಪ ಬದಲಾಗುತ್ತದೆ. ಅವಲಕ್ಕಿಯನ್ನು ಹಲವು ತಿಂಗಳುಗಳ ಕಾಲ ಕೆಡದಂತೆ ಇಡಬಹುದು. ಭಾರತದ ಹಲವು ರಾಜ್ಯಗಳಲ್ಲಿ ಅವಲಕ್ಕಿಯನ್ನು ವಿವಿಧ ರೀತಿಯ ತಿನಿಸುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ತುಸುಬೇಯಿಸಿದ ಅಕ್ಕಿಯಷ್ಟೇ ವಿಟಮಿನ್ ಅಂಶಗಳು ಇದರಲ್ಲಿರುತ್ತದೆ ಮತ್ತು ಪಾಲಿಶ್ ಮಾಡದೇ ಇರುವುದರಿಂದ ಪೋಷಕಾಂಶಗಳೂ ಇರುತ್ತವೆ. ಬಿ ಕಾಂಪ್ಲೆಕ್ಸ್ ವಿಟಮಿನ್ ನಿಯಾಸಿನ್ ಮತ್ತು ಕಬ್ಬಿಣದ ಅಂಶ ಹೇರಳವಾಗಿರುತ್ತದೆ. ಅವಲಕ್ಕಿಯನ್ನು ಮುಖ್ಯವಾಗಿ ಒಂದು ಲಘುತಿಂಡಿಯನ್ನಾಗಿ ಬಳಸಲಾಗುತ್ತದೆ. ಅವಲಕ್ಕಿಯು ಏಷಿಯಾದಲ್ಲಿ ಜನಪ್ರಿಯ ತಿನಿಸಾಗಿದೆ. ಇದಕ್ಕೆ ಹಲವು ರೀತಿಯ ಒಗ್ಗರಣೆ, ಮಸಾಲೆ, ಸಿಹಿ ಮುಂತಾದವುಗಳನ್ನು ಸೇರಿಸಿ ಹಲವು ಬಗೆಯ ತಿನಿಸುಗಳನ್ನು ತಯಾರಿಸಲಾಗುತ್ತದೆ. ಇದನ್ನು ಮೆದುವಾಗಿ, ಒಣದಾಗಿ ಅಥವಾ ಎಣ್ಣೆಯಲ್ಲಿ ಕರಿದು ಬಳಸಬಹುದು. ನೀರಿನಲ್ಲಿ ನೆನೆಸಿ ತೆಗೆದು ಅದಕ್ಕೆ ಹಾಲು ಅಥವಾ ಮೊಸರನ್ನು ಸೇರಿಸಿ ತಿನ್ನಬಹುದು. ಒಣ ಅವಲಕ್ಕಿಯ ಜೊತೆ ಬೆಲ್ಲ ಹಾಗೂ ಕೊಬ್ಬರಿಯನ್ನು ಸೇರಿಸಿ ತಿನ್ನಬಹುದು. ತಿನ್ನುವ ವಿಧಾನದಿಂದ ಹಿಡಿದು ಅವಲಕ್ಕಿ ಬಾತ್, ಒಗ್ಗರಣೆ ಅವಲಕ್ಕಿ, ಅವಲಕ್ಕಿ ಉಪ್ಪಿಟ್ಟು, ಅವಲಕ್ಕಿ ಶಿರಾ, ಅವಲಕ್ಕಿ ಪೊಂಗಲ್ ಮುಂತಾದ ತಿನಿಸುಗಳನ್ನು ಅವಲಕ್ಕಿಯಿಂದ ತಯಾರು ಮಾಡಬಹುದು. ಪಾಶ್ಚಾತ್ಯ ದೇಶಗಳಲ್ಲಿ ಇದನ್ನು ತಿಂಡಿಯಾಗಿ ಮಾರಾಟಮಾಡಲು ವಾಣಿಜ್ಯೋದ್ದೇಶದಿಂದ ತಯಾರಿಸಲಾಗುತ್ತದೆ.

ಇದರಲ್ಲಿ ಮೂರೂ ವಿಧಗಳಿವೆ ಪೇಪರ್ ಅವಲಕ್ಕಿ, ಮೀಡಿಯಂ ಅವಲಕ್ಕಿ, ದಪ್ಪ ಅವಲಕ್ಕಿ ಎಂದು ಕರೆಯುತ್ತಾರೆ. ಇದು ಭಾರತ ದೇಶದ ಕೆಲವು ಕಡೆ ದೊರೆಯುತ್ತದೆ. ಇದು ರೆಡಿ ಕುಕ್ ತರ, ನೀರಲ್ಲಿ ಹಾಕಿದರೆ ಮೆತ್ತಗಾಗುತ್ತದೆ. ಇದನ್ನು ಹಾಗೆಯೇ ತಿನ್ನಬಹುದು. ಇದನ್ನು ಬೇರೆ ಬೇರೆ ಊರುಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ.

ಬೆಳ್ತಿಗೆ ಅಕ್ಕಿಗಿಂತ ಇದು ಉತ್ತಮ. ಅಕ್ಕಿಗೆ ಪಾಲಿಶ್ ಮಾಡಲಾಗಿರುತ್ತದೆ. ಹಾಗಾಗಿ ಆದರಲ್ಲಿನ ನಾರಿನ ಅಂಶ ಕಡಿಮೆ ಆಗಿರುತ್ತದೆ. ಅವಲಕ್ಕಿ ಮಾಡುವ ವಿಧಾನ ಬೇರೆ. ಅದರಲ್ಲಿ ಶೇಕಡಾ 70 % ರಷ್ಟು ಕಾರ್ಬೋಹೈಡ್ರೇಡ್, 30 % ಫ್ಯಾಟ್ ಇದೆ. ಹಾಗಾಗಿ ತೂಕ ಇಳಿಸಿ ಕೊಳ್ಳುವವರು ಇದರನ್ನು ಉಪಯೋಗಿಸಬಹುದು.

ಸಾಂಪ್ರದಾಯಿಕ ತಯಾರಿಕೆಯ ವಿಧಾನ :

ಮೊದಲಿಗೆ ಕಾಳುಗಳನ್ನು ಮೆದುಗೊಳಿಸಲು ಭತ್ತವನ್ನು ೨-೩ ದಿನಗಳ ಕಾಲ ನೀರಿನಲ್ಲಿ ನೆನೆಸಲಾಗುತ್ತದೆ. ಅನಂತರ ಕೆಲವು ನಿಮಿಷಗಳ ಕಾಲ ನೀರಿನಲ್ಲಿ ಕುದಿಸಲಾಗುತ್ತದೆ. ಇದಾದಮೇಲೆ ನೀರನ್ನು ಬಸಿದು ಭತ್ತವನ್ನು ಮಣ್ಣಿನ ಪಾತ್ರೆಗಳಲ್ಲಿ ಬಿಸಿಮಾಡಲಾಗುತ್ತದೆ. ಇದರಿಂದ ಸಿಪ್ಪೆ ಬಿರಿಯುತ್ತದೆ. ಇದನ್ನು ಮರದ ಒನಕೆಯಿಂದ ಬಡಿಯಲಾಗುತ್ತದೆ. ಇದರಿಂದ ಭತ್ತವು ಚಪ್ಪಟೆಯಾಗುವುದರ ಜೊತೆಗೆ ಸಿಪ್ಪೆಯೂ ಬೇರ್ಪಡುತ್ತದೆ. ಈ ಬಡಿಯುವ ವಿಧಾನದಲ್ಲಿ ಬಳಸಲಾಗುವ ವಿವಿಧ ಒತ್ತಡದ ಮೇಲೆ ಅವಲಕ್ಕಿಯ ದಪ್ಪ ಬದಲಾಗುತ್ತದೆ. ಹೀಗೆ ತಯಾರಾಗುವ ಅವಲಕ್ಕಿಯು ತೆಳುವಾಗಿ ಬಿಳಿಬಣ್ಣದ್ದಾಗಿರುತ್ತದೆ.

ಅವಲಕ್ಕಿಯಿಂದ ತಯಾರಿಸಲಾಗುವ ಭಕ್ಷ್ಯಗಳು

ಅವಲಕ್ಕಿಯು ಏಷಿಯಾದಲ್ಲಿ ಜನಪ್ರಿಯ ತಿನಿಸಾಗಿದೆ
ಅವಲಕ್ಕಿ ಚಿತ್ರಾನ್ನ

• ಅವಿಲ್ ನಾನಚಾತು(ಕೇರಳ) : ಅವಲಕ್ಕಿಯನ್ನು ಹಾಲು, ಸಕ್ಕರೆ, ತೆಂಗಿನತುರಿ ಮತ್ತು ಬಾಳೆಹಣ್ಣಿನ ತುಂಡುಗಳೊಂದಿಗೆ ಬೆರೆಸಿ ಮಾಡಲಾಗುತ್ತದೆ. ಕಡಲೆಕಾಯಿ ಅಥವಾ ಗೋಡಂಬಿಯನ್ನೂ ಸಹ ಬಳಸಬಹುದು.

*ಅವಿಲ್ ವಿಲೈಚಾತು (ಕೇರಳ) : ತುಪ್ಪದಲ್ಲಿ ಅವಲಕ್ಕಿಯನ್ನು ಹುರಿದು ಮತ್ತು ಬೆಲ್ಲ, ದಾಲ್, ಗೋಡಂಬಿ, ಕಡಲೆಕಾಯಿ ಮತ್ತು ತೆಂಗಿನತುರಿ ಬಳಸಿ ಈ ಖಾದ್ಯವನ್ನು ಮಾಡಲಾಗುತ್ತದೆ.

*ದಾಹಿ ಚಿಯುರಾ (ನೇಪಾಳಿ): ಮಾಗಿದ ಬಾಳೆಹಣ್ಣು, ಮೊಸರು ಮತ್ತು ಸಕ್ಕರೆಯೊಂದಿಗೆ ಅವಲಕ್ಕಿಯನ್ನು ಬೆರೆಸಿ ಈ ಖಾದ್ಯವನ್ನು ತಯಾರಿಸಲಾಗುತ್ತದೆ. ಇದನ್ನು ಯಾವಾಗ ಬೇಕಾದರೂ ಲಘು ಆಹಾರವಾಗಿ ಸೇವಿಸಬಹುದು. ಇದನ್ನು ಸಾಂಪ್ರದಾಯಿಕವಾಗಿ ನೇಪಾಳದಲ್ಲಿ ಭತ್ತದ ನಾಟಿ ಮಾಡುವ ಸಮಯದಲ್ಲಿ ರೈತರು ತಿನ್ನುತ್ತಾರೆ.

*ಕಾಂದ ಪೋಹ : ಬೇಯಿಸಿದ ಆಲೂಗಡ್ಡೆ, ಈರುಳ್ಳಿ, ಸಾಸಿವೆ, ಅರಿಶಿನ ಮತ್ತು ಕೆಂಪು ಮೆಣಸಿನಕಾಯಿಯ ಸಣ್ಣ ತುಂಡುಗಳನ್ನು ಹಾಕಿ ಅವಲಕ್ಕಿಯೊಂದಿಗೆ ಬೆರೆಸಿ ಬಿಸಿಬಿಸಿಯಾಗಿ ಬಡಿಸಲಾಗುತ್ತದೆ.

*ಚಿವಡಾ ಪೋಹ, ಗೊಜ್ಜವಲ್ಲಕ್ಕಿ, ಅವಲಕ್ಕಿ ಚಿತ್ರಾನ್ನ ಮೊಸರವಲ್ಲಕ್ಕಿ, ಬಾತ್, ವಡೆ, ಟಿಕ್ಕಾ, ದೇವರಿಗೆ ಮಾಡುವ ಬೆಲ್ಲದ ಅವಲಕ್ಕಿ ಪ್ರಸಾದ ಹೀಗೆ ಹೇಳುತ್ತಾ ಹೋದರೆ ಅನೇಕ ವಿಧದ ತಿಂಡಿಗಳನ್ನ ಮಾಡಬಹುದು.

*ಆರೋಗ್ಯ ದೃಷ್ಟಿಯಿಂದ ನೋಡಿದರೆ ಇದು ಬಹಳ ಒಳ್ಳೆದು. ತೂಕ ಇಳಿಸಲು ಉಪಯೋಗಿಸಬಹುದು. ಇದು ಕಡಿಮೆ ಕ್ಯಾಲೋರಿ ಹೊಂದಿರುವ ಆಹಾರ. ಇದನ್ನು ಸ್ವಲ್ಪ ತಿಂದರೂ ಹೊಟ್ಟೆ ಪೂರ್ತಿ ಆಗುತ್ತದೆ.

ಆರೋಗ್ಯಕ್ಕೆ ಆಗುವ ಪ್ರಯೋಜನಗಳು :

ಜೀರ್ಣಿಸಿಕೊಳ್ಳಲು ಸುಲಭವಾದ ಕಾರಣ ಇದು ಹೊಟ್ಟೆ ಉಬ್ಬಿಸಿರಿಕೊಳ್ಳುವಂತಹ ಯಾವುದೇ ಸಮಸ್ಯೆಯನ್ನು ಉಂಟುಮಾಡುವುದಿಲ್ಲ ಹಾಗೂ ನಿಮಗೆ ಹೆಚ್ಚು ಸಮಯದವರೆಗೆ ಹೊಟ್ಟೆ ಹಸಿವಾಗುವುದಿಲ್ಲ. ದೆಹಲಿಯ ಅಪೋಲೋ ಸ್ಪೆಕ್ಟ್ರಾ ಆಸ್ಪತ್ರೆಗಳ ಹಿರಿಯ ಪೌಷ್ಟಿಕತಜ್ಞ ಮತ್ತು ಆಹಾರ ಪದ್ಧತಿ ಡಾ. ದಿವ್ಯಾ ಮಲಿಕ್, ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಲು ಮತ್ತು ಆ್ಯಸಿಡಿಟಿ ತಪ್ಪಿಸಲು ನೀವು ಬಯಸಿದರೆ ಇದು ಆರೋಗ್ಯಕರ ಮತ್ತು ಸೂಕ್ತವಾದ ಉಪಹಾರವಾಗಿದೆ.

ಆಹಾರದ ನಾರಿನಾಂಶವು ಅಧಿಕವಾಗಿ ಇರುವಂತಹ ಅವಲಕ್ಕಿಯು ತೂಕ ಇಳಿಸಿಕೊಳ್ಳಬೇಕು ಎಂದು ಬಯಸುವವರಿಗೆ ಪರಿಣಾಮಕಾರಿ ಆಗಿದೆ. ಬೆಳಗ್ಗೆ ಉಪಾಹಾರಕ್ಕೆ ಅವಲಕ್ಕಿ ತಿಂದರೆ ಆಗ ಪದೇ ಪದೇ ಹಸಿವಾಗುವುದು ತಪ್ಪುವುದು ಮತ್ತು ದಿನವಿಡಿ ಅತಿಯಾಗಿ ತಿನ್ನುವುದನ್ನು ಇದು ತಡೆಯುವುದು.

ಅವಲಕ್ಕಿಯು ಏಷಿಯಾದಲ್ಲಿ ಜನಪ್ರಿಯ ತಿನಿಸಾಗಿದೆ
ಅವಲಕ್ಕಿ

ಇದರಲ್ಲಿ ವಿಟಮಿನ್ ಬಿ ಜತೆಗೆ ವಿಟಮಿನ್ ಎ, ಕಬ್ಬಿಣದಂಶ, ಕ್ಯಾಲ್ಶಿಯಂ, ಪೋಸ್ಪರಸ್ ಇರುವುದರಿಂದ ಹೃದಯದ ಆರೋಗ್ಯಕ್ಕೂ ಒಳ್ಳೆಯದು.

ಕಬ್ಬಿಣದ ಕೊರತೆಯಿರುವವರು ಈಗಲೇ ನಿಮ್ಮ ಉಪಾಹಾರ ಮೆನುಗೆ ಅವಲಕ್ಕಿ ಸೇರಿಸಿ ಇದು ಕಬ್ಬಿಣದ ಕೊರತೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.”ಈ ಖಾದ್ಯವು ಗರ್ಭಿಣಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸಹ ಪ್ರಯೋಜನಕಾರಿಯಾಗಿದೆ. ಉತ್ತಮ ಕಬ್ಬಿಣದ ಅಂಶವನ್ನು ದೇಹದಲ್ಲಿ ಹೆಚ್ಚಿಸಲು, ನೀವು ಅವಲಕ್ಕಿಹೊಂದಿಗೆ ನಿಂಬೆ ರಸವನ್ನು ಸೇರಿಸಿ ತಿನ್ನಬೇಕು.

ಅವಲಕ್ಕಿಯಲ್ಲಿ ಪೋಷಕಾಂಶಗಳು ಏನೂ ಇಲ್ಲದಿದ್ದರೂ, ಅದಕ್ಕೆ ಕೊಂಚ ತರಕಾರಿ ಹಾಕಿ ಉಪ್ಪಿಟ್ಟು ಮಾಡಿಕೊಂಡು ತಿನ್ನುವುದರಿಂದ ರುಚಿಕರ ಮತ್ತು ಆರೋಗ್ಯಕರವಾಗುವುದು ಅಕ್ಕಿ ಬಳಸಿ ಮಾಡುವುದರಿಂದ ಇದು ಬೇಗನೇ ಜೀರ್ಣವಾಗುವುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಸವದತ್ತಿ ಕೋಟೆ

ಸವದತ್ತಿ ಕೋಟೆ

ರಾಮನಗರ ಕೋಟೆ

ಮೊಘಲ್ ಶೈಲಿಯಲ್ಲಿ ಇದೆ ರಾಮನಗರ ಕೋಟೆ