ಅಕ್ಕಿ ಪತಂಗ

ಶೇಖರಣೆ ಮಾಡಿದ ಖಾದ್ಯ ವಸ್ತುಗಳಿಗೆ ಅತ್ಯಂತ ಹಾನಿಯನ್ನುಂಟು ಮಾಡುವ ಪತಂಗದ ಗುಂಪಿಗೆ ಸೇರಿದ ಜೀವಿಯೆಂದರೆ ಅಕ್ಕಿ ಚಿಟ್ಟೆ. ಕಾರ್ಸೈರಾ ಕಿಫಲೋನಿಕ ಎಂಬ ಹೆಸರುಳ್ಳ ಈ ಕೀಟ ಲೆಪಿಡಾಪ್ಟಿರ ಗಣದ ಪೈರಾಲಿಡೀ ಕುಟುಂಬಕ್ಕೆ ಸೇರಿದ್ದು. ಈ ಹುಳುವಿನ ಕಾಟಕ್ಕೆ ತುತ್ತಾಗುವ ಆಹಾರ ಪದಾರ್ಥಗಳ ಶ್ರೇಣಿ ಅತ್ಯಂತ ವಿಸ್ತಾರ. ಉದಾಹರಣೆಗೆ: ಆಹಾರ ಧಾನ್ಯಗಳು ಅದರಲ್ಲೂ ಒಡೆದು ಬೀಸಿದವು (ನುಚ್ಚು, ತರಿ, ರವೆ, ಹಿಟ್ಟು, ಆಟ್ಟ, ಬೂಸ, ಬೇಸಿನ್, ಮೈದಾ, ಇತ್ಯಾದಿ), ಸಾಂಬಾರ ವಸ್ತುಗಳು, ಸೇಂಗಾ ಬೀಜ, ಒಣ ಹಣ್ಣುಗಳು, ಬಿಸ್ಕತ್, ಹಿಂಡಿ, ಕೋಕೋ, ಇತ್ಯಾದಿಗಳು. ತಿಂದು ಮುಗಿಸುವುದಕ್ಕಿಂತ ಹೆಚ್ಚಾಗಿ ನೂಲು ಎಳೆಗಳಿಂದ ಆಹಾರ ಪದಾರ್ಥಗಳ ಆದ್ಯಂತ ದಟ್ಟವಾದ ಬಲೆ ಕಟ್ಟುವುದರಿಂದ, ಹುಳುಬಿದ್ದ ಖಾದ್ಯ ವಸ್ತುಗಳನ್ನು ಶುಚಿಮಾಡಿ ಉಪಯೋಗಿಸಲು ಸಾಧ್ಯವಿಲ್ಲವಾಗುವುದು. ಪ್ರಾಯದ ಚಿಟ್ಟೆ ಕಂದು ಬಣ್ಣದ್ದು; ರೆಕ್ಕೆ ಪುರ್ತಿ ಪಸರಿಸಿದಾಗ ತುದಿಯಿಂದ ತುದಿಗೆ 1.25 – 2 ಸೆಂಮೀ ಇರುತ್ತದೆ. ಗಂಡು ಚಿಟ್ಟೆ ಹೆಣ್ಣಿಗಿಂತ ಚಿಕ್ಕದು. ಹಗಲಿನಲ್ಲಿ ಉಗ್ರಾಣದ ಕತ್ತಲು ಪ್ರದೇಶಗಳಲ್ಲಿ ಅಂದರೆ ಗೋಡೆ, ಚಾವಣಿ, ಮೂಟೆ ಮುಂತಾದ ಜಾಗಗಳಲ್ಲಿ ಕುಳಿತಿದ್ದು, ರಾತ್ರಿಕಾಲದಲ್ಲಿ ಚಟುವಟಿಕೆಯಿಂದ ಹಾರಾಡುತ್ತದೆ. ತಾಯಿ ಚಿಟ್ಟೆ ಸು. 200 ದುಂಡುತತ್ತಿಗಳನ್ನು ಒಂಟಿ ಒಂಟಿಯಾಗಿ ಆಹಾರ ವಸ್ತುಗಳ ಬಳಿ ಇಡುತ್ತದೆ. ಮರಿಹುಳು ರೇಷ್ಮೆನೂಲಿನ ಬಲೆಯಿಂದ ಆಹಾರವನ್ನು ಆವರಿಸಿ, ಒಳಗೆ ಮೇಯುತ್ತಾ ಪ್ರವರ್ಧಮಾನಕ್ಕೆ ಬರುತ್ತದೆ. ಈ ರೀತಿ ಬಲೆಯಿಂದ ಆವರಿಸುವುದಕ್ಕೆ ತೆಂಡೆ ಕಟ್ಟುವುದು ಎಂದು ಕರೆಯುತ್ತಾರೆ. ಮರಿ ಹುಳ ನಸು ಹಳದಿಬಣ್ಣದ್ದು; ಇದು ರೂಪಪರಿವರ್ತನೆಯಾಗಿ ಹೊರಬರಲು ಸು. 6 ವಾರ ಬೇಕು; ವರ್ಷಕ್ಕೆ 6-8 ಬಾರಿ ಸಂತಾನೋತ್ಪತ್ತಿ ಮಾಡುತ್ತವೆ.
ಕಿತ್ತಳೆ ತುದಿ ಚಿಟ್ಟೆ

ಕಿತ್ತಳೆ ತುದಿ ಪ್ಯೆರಿಡೆಕುಟುಂಬಕ್ಕೆ ಸೇರಿದ ಒಂದು ಚಿಟ್ಟ. ಗಂಡು ಜಾತಿಯ ಕಿತ್ತಳೆ ತುದಿ ಚಿಟ್ಟೆಗೆ ರೆಕ್ಕೆ ಮುಂಬಾಗ ಉಜ್ವಲ ಕಿತ್ತಳೆ ಬಣ್ಣ ಇದ್ದಿದ್ದರಿಂದ ಕಿತ್ತಳೆ ತುದಿಯೆಂದು ಕರೆಯುತ್ತಾರೆ. ಗಂಡು ಜಾತಿಯ ಕಿತ್ತಳೆ ತುದಿ ವಸಂತ ಕಾಲದ್ದಲ್ಲಿ ಸಾಧಾರಣವಾಗಿ ಕಂಡು ಬರುತ್ತವೆ.ಇವು ಹುಲ್ಲುಹಾಸು ಹಾಗು ಬೇಲಿಸಾಲುಗಳಲ್ಲಿ ಸಾಮಾನ್ಯವಾಗಿ ಹಾರಾಡುತ್ತಾ ಹೆಣ್ಣು ಚಿಟ್ಟೆಯನ್ನು ಹುಡುಕುತ್ತವೆ. ಹೆಣ್ಣು ಕಿತ್ತಳೆ ತುದಿ ಚಿಟ್ಟೆಯಲ್ಲಿ ಕಿತ್ತಳೆ ಬಣ್ಣ ಮಾಸಿದ್ದು ಬೇರೆ ಜಾತಿಯ ಬಿಳೀ ಚಿಟ್ಟೆಯೆಂದು ಹಲವು ಬಾರಿ ತಪ್ಪು ತಿಳಿಯಲ್ಪಟ್ಟಿದೆ. ಗಂಡು ಕಿತ್ತಳೆ ತುದಿಯು ವಿರಾಮದಲ್ಲಿದ್ದಾಗ ತನ್ನ ಕಿತ್ತಳೆ ಬಣ್ಣದ ಮುಂಬಾಗದ ರೆಕ್ಕೆಯನ್ನು ಹಿಂಬಾಗದ ರೆಕ್ಕೆಯಿಂದ ಮುಚ್ಚಿಡುತ್ತದೆ. ರೆಕ್ಕೆ ಮೇಲ್ಭಾಗದ ಚುಕ್ಕಿಯನ್ನು ಸೂಕ್ಶ್ಮವಾಗಿ ನೋಡಿದಾಗ ಹಸಿರು ಬಣ್ಣವು ಕಪ್ಪು ಮತ್ತು ಹಳದಿ ಮಿಶ್ರಿತ ತ್ರಾಸು ಎಂದು ಗೊತ್ತಾಗುತ್ತದೆ. ಇವು ಯುರೊಪ್, ಸಮಶೀತೋಷ್ಣ (ಎಶಿಯ) ಹಾಗು ಜಪಾನ್ ವಲಯದಲ್ಲಿ ಕಂಡುಬರುತ್ತದೆ. ಕಳೆದ ೩೦ ವರ್ಷದಲ್ಲಿ ಕಿತ್ತಳೆ ತುದಿ ಜಾತಿಯಲ್ಲಿ ಹೆಚ್ಚು ಎರಿಕೆ ಕಂಡು ಬಂದಿದ್ದು ಸ್ಕೊಟ್ಲನ್ಡ್ ದೇಷದಲ್ಲಿ.
ಪತಂಗ

ಪತಂಗಗಳು ಲೆಪಿಡಾಪ್ಟೆರಾ ಶ್ರೇಣಿಯ ಸದಸ್ಯರಾದ ಚಿಟ್ಟೆಗಳ ಗುಂಪಿಗೆ ಸೇರುತ್ತವೆ. ಪತಂಗ ಮತ್ತು ಚಿಟ್ಟೆ ಕೀಟ ಪ್ರಭೇಧದ ಕೇಂದ್ರಬಿಂದುಗಳಾಗಿದ್ದು, ಸುಂದರ ಬಣ್ಣ ಮತ್ತು ಆಕಾರಗಳಿಂದ ಕೂಡಿದ್ದು ಆಕರ್ಷಣೀಯವಾಗಿ ಜನರ ಕಣ್ಣಿಗೆ ಕಾಣುತ್ತವೆ. ಜಗತ್ತಿನಾದ್ಯಂತ ಸರಿಸುಮಾರು ೧,೬೦,೦೦೦ ವರ್ಗಗಳ ಪತಂಗಗಳನ್ನು ಗುರುತಿಸಿದ್ದಾರೆ. ಅದರಲ್ಲಿ ಹಲವು ವರ್ಗಗಳನ್ನು ಇನ್ನೂ ಹೆಸರಿಸಿಲ್ಲ. ಪತಂಗಗಳು ಬಹುತೇಕ ನಿಶಾಚರಿಗಳಾಗಿದ್ದು, ಕೆಲವು ಮುಂಜಾನೆ ಮತ್ತು ಮುಸ್ಸಂಜೆ ಮತ್ತು ಕೆಲವು ದಿನಚರಿಗಳಾಗಿವೆ.
ಚಿಟ್ಟೆಗಳು ಮತ್ತು ಪತಂಗಗಳನ್ನು ಗುರುತಿಸಲು ನಿಯಮಗಳನ್ನು ಸ್ಥಾಪಿಸಿಲ್ಲವಾದರೂ, ಒಂದು ಸುಲಭ ಮಾರ್ಗವೆಂದರೆ ಅದರ ಸ್ಪರ್ಶತಂತುಗಳನ್ನು ನೋಡುವುದು. ಚಿಟ್ಟೆಗಳ ಸ್ಪರ್ಶತಂತುಗಳು ಸಣ್ಣದಾಗಿದ್ದು, ಅದರ ಅಂಚಿನಲ್ಲಿ ಒಂದು ಗೋಳವಿರುತ್ತದೆ. ಪತಂಗದ ಸ್ಪರ್ಶತಂತು ಹಲವು ವಿಧದಲ್ಲಿ ಇರುತ್ತವೆ ಮತ್ತು ಅದರ ಅಂಚಿನಲ್ಲಿ ಗೋಳವಿರುವುದಿಲ್ಲ. ಅವುಗಳ ವಿಂಗಡನೆ, ಈ ತತ್ವದ ಸಹಾಯದಿಂದ ಪಡೆದುಕೊಳ್ಳಬಹುದು.
ಕಂಬಳಿಹುಳ

ಕಂಬಳಿಹುಳುಗಳ ಮೈಕಟ್ಟು ಮೃದುವಾಗಿದ್ದು, ಇವು ಅತಿವೇಗವಾಗಿ ಬೆಳೆಯಬಲ್ಲದು. ತಲೆಯ ಭಾಗ ದೃಢವಾಗಿದ್ದು, ದವಡೆಗಳು ದೃಢವಾಗಿರುತ್ತದೆ, ಇದು ಎಲೆಗಳನ್ನು ಅರೆದು ತಿನ್ನಲು ಸಹಾಯವಾಗುತ್ತದೆ. ಈ ದವಡೆಯ ಹಿಂದೆಯೇ, ರೇಷ್ಮೆಯನ್ನು ಉತ್ಪಾದಿಸುವಂತಹ ಸ್ಪಿನ್ನೆರ್ಟ್ಸ್ ಎನ್ನುವ ಅಂಗಗಳು ಇರುತ್ತವೆ, ಈ ಅಂಗಗಳು ಅವುಗಳಿಗೆ ಪ್ರೌಢಾವಸ್ಥೆಗೆ ತಲುಪಿದ ಮೇಲೆ ಕೋಶವನ್ನು ನಿರ್ಮಿಸಲು ಸಹಾಯ ಮಾಡುತ್ತವೆ. ೯೦ ಪ್ರತಿಷತ ಕಂಬಳಿ ಹುಳಗಳು ಸಸ್ಯಹಾರಿ, ಅದರ ಮೂಲ ಆಹಾರ ಎಲೆಗಳು. ಕೆಲವು ಕಂಬಳಿ ಹುಳಗಳು ಚಿಕ್ಕ ಪುಟ್ಟ ಹುಳಗಳನ್ನು ತಿನ್ನುತ್ತವೆ ಹಾಗು ಕೆಲವು ಜಾತಿಯ ಕಂಬಳಿ ಹುಳಗಳು ಸ್ವಜಾತಿ ಭಕ್ಷಕ.
ಪತಂಗಗಳು, ಚಿಟ್ಟೆಗಳಿಗೂ ಮುನ್ನ ವಿಕಸಿತಗೊಂಡಿವೆ, ೧೯೦ ಮಿಲಿಯನ್ ವರ್ಷಗಳ ಹಿಂದಿನ ಪಳೆಯುಳಿಕೆಗಳು ದೊರಕಿವೆ. ಹೂವಿನ ಗಿಡಗಳ ಜೊತೆಗೆ ಇವುಗಳು ವಿಕಸಿತಗೊಂಡಿವೆ, ಯಾಕೆಂದರೆ ಹಲವು ಪತಂಗಗಳು, ಚಿಟ್ಟೆಗಳು ಹೂವಿನ ಮಕರಂದದ ಮೇಲೆ ಆಹಾರಕ್ಕೆ ಅವಲಂಬಿತವಾಗಿದೆ.
ಚೈನೀಸ್ ಓಕ್ ಪತಂಗ

ಕೆಲವು ಪತಂಗಗಳು ವಾಣಿಜ್ಯ ದೃಷ್ಠಿಯಿಂದ ಪ್ರಾಮುಖ್ಯತೆಯನ್ನು ಪಡೆದಿದೆ, ಅದರಲ್ಲಿ ರೇಷ್ಮೆ ಹುಳು ಮತ್ತು ಅದರ ಕೃಷಿ ಪ್ರಮುಖವಾದುದು. ಬೊಂಬೈಕ್ಸ್ ಮೊರಿ ಎಂಬ ಹುಳವನ್ನು ಈ ಕ್ಷೇತ್ರದಲ್ಲಿ ಬಳಸಲಾಗುತ್ತದೆ. ಅದರ ಕೋಶವನ್ನು ಉಪಯೋಗಿಸಿ ರೇಷ್ಮೆಯನ್ನು ಉತ್ಪಾದಿಸಲಾಗುತ್ತದೆ. ಇದಲ್ಲದೆ ಐಲ್ಯಾನ್ತಸ್ ಪತಂಗ, ಚೈನೀಸ್ ಓಕ್ ಪತಂಗ ಮತ್ತು ಅಸ್ಸಾಮ್ ಸಿಲ್ಕ್ ಪತಂಗ ಇವುಗಳನ್ನು ಕೂಡ ರೇಷ್ಮೆ ಕೃಷಿಗೆ ಉಪಯೋಗಿಸಲಾಗುತ್ತದೆ. ಕಂಬಳಿಹುಳಗಳನ್ನು ಆಹಾರವಾಗಿಯೂ ಉಪಯೋಗಿಸುತ್ತಾರೆ, ಆಫ್ರಿಕದಲ್ಲಿ ಪ್ರಮುಖವಾಗಿ ಉಪಯೋಗಿಸುತ್ತಾರೆ, ಇದು ಪ್ರಮುಖ ಪೋಶಕಾಂಶಗಳ ಮೂಲವಾಗಿದೆ. ಆಫ್ರಿಕ ಖಂಡದ ಕಾಂಗೋ ದೇಶ ಒಂದರಲ್ಲೇ ೩೦ ಪ್ರಭೇದದ ಪತಂಗಗಳನ್ನು ಆಹಾರಕ್ಕಾಗಿಯೆ ಬೆಳಸುತ್ತಾರೆ.
ಟೈಗರ್ ಪತಂಗ

ಹಲವು ನಿಶಾಚರಿಗಳು ಪತಂಗಗಳನ್ನು ತಿನ್ನುತ್ತವೆ. ಇದರಲ್ಲಿ ಬಾವಲಿ, ಕೆಲವು ವರ್ಗದ ಗೂಬೆಗಳು ಮತ್ತು ಹಕ್ಕಿಗಳು ಪ್ರಮುಖವಾದುದು. ಕೆಲವು ವರ್ಗದ ಹಲ್ಲಿಗಳು, ಬೆಕ್ಕು, ನಾಯಿ ಮತ್ತು ಹೆಗ್ಗಣಗಳಿಗೆ ಪತಂಗಗಳು ಆಹಾರವಾಗುತ್ತವೆ. ಬಾವಲಿಗಳು ಬೇಟೆಯಾಡುವಾಗ ಶ್ರವಣಾತೀತ ಧ್ವನಿಯನ್ನು ಹೊರ ಹೊಮ್ಮಿಸುತ್ತವೆ, ಪತಂಗಗಳು ಈ ಧ್ವನಿಯನ್ನು ಗ್ರಹಿಸಿ, ಹಾರುವ ದಿಕ್ಕನ್ನು ಬದಲಾಯಿಸಿ, ಬಾವಲಿಗಳಿಂದ ತಪ್ಪಿಸಿಕೊಳ್ಳುತ್ತವೆ ಎಂಬ ಪುರಾವೆಗಳು ದೊರಕಿವೆ. ಶ್ರವಣಾತೀತ ಕಂಪನಾಂಕಗಳು ಪ್ರತಿಫಲವಾಗಿ ಪತಂಗಗಳು ಅವು ಹಾರುವ ಎತ್ತರದಿಂದ ತಕ್ಷಣ ಒಂದಷ್ಟು ಇಂಚು ಕೆಳಗೆ ಹೋಗಿ ಬಾವಲಿಯ ಆಕ್ರಮಣದಿಂದ ತಪ್ಪಿಸಿಕೊಳುತ್ತದೆ. ಟೈಗರ್ ಪತಂಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಚಿಟಿಕೆ ಹೊಡೆಯುವ ಹಾಗೆ ಸದ್ದು ಮಾಡಿ, ಅದರ ಕಂಪನಾಂಕಗಳಿಗೆ ಹಾನಿ ಮಾಡಿ ಬಾವಲಿಯನ್ನು ಗೊಂದಲಕ್ಕೀಡು ಮಾಡುತ್ತದೆ.
ಧನ್ಯವಾದಗಳು.
GIPHY App Key not set. Please check settings