in

ಬಾಯಿ ಒಣಗುತ್ತಿದೆ ಅಂದರೆ ಹೀಗೆ ಮಾಡಿ ನೋಡಿ

ಬಾಯಿ ಒಣಗುತ್ತಿದೆ ಅಂದರೆ ಹೀಗೆ ಮಾಡಿ
ಬಾಯಿ ಒಣಗುತ್ತಿದೆ ಅಂದರೆ ಹೀಗೆ ಮಾಡಿ

ಒಣಗಿದ ಬಾಯಿ ಎಂಬ ಪದಕ್ಕೆ ವೈದ್ಯಕೀಯ ಭಾಷೆಯಲ್ಲಿ ಜೆರೋಸ್ಟೊಮಿಯಾ ಎಂದು ಹೇಳಲಾಗುತ್ತದೆ. ಇದು ನಮ್ಮ ಭಾಯಿಯಲ್ಲಿರುವ ಲಾಲಾರಸದಲ್ಲಿ ಕೊರತೆ ಉಂಟಾದರೆ ಸಂಭವಿಸುತ್ತದೆ. ಏಕೆಂದರೆ ಲಾಲಾರಸಕ್ಕೆ ಬಾಯಿ ಒಣಗದಂತೆ ತಡೆಯುವ ಶಕ್ತಿ ಇರುತ್ತದೆ.

ಬೆಳಗ್ಗೆ ಏಳುತ್ತಲೇ ಬಾಯಿ ಒಣಗಿದ ಅನುಭವವಾಗುತ್ತದೆ. ನೀರು ಕುಡಿಯಬೇಕು ಎನಿಸುತ್ತದೆ. ಯಾರಿಗಾದರೂ ಎದ್ದ ಕೂಡಲೇ ಬಾಯಿ ಒಣಗುತ್ತಿದೆ ಎಂದು ಅನಿಸುತ್ತಿದ್ದರೆ, ಇದು ನಿಯಮಿತವಾ ಗಿದ್ದಲ್ಲಿ, ಇದರ ಹಿಂದಿನ ಕಾರಣಗಳನ್ನು ತಿಳಿಯಬೇಕು.

ಬಾಯಿ ಸದಾ ತೇವವಾಗಿಯೇ ಇರಬೇಕು. ಇದಕ್ಕಾಗಿ ಸದಾ ಲಾಲಾರಸ ಸ್ರವಿಸುತ್ತಲೇ ಇರುತ್ತದೆ. ಊಟದ ಸಮಯದಲ್ಲಿ ಈ ಸ್ರವಿಕೆ ಹೆಚ್ಚಾಗುತ್ತದೆ ಹಾಗೂ ಆಹಾರವನ್ನು ಮೃದುಗೊಳಿಸುತ್ತದೆ. ಲಾಲಾರಸದ ಸ್ರವಿಕೆ ಕಡಿಮೆಯಾಗುವ ಸ್ಥಿತಿಯೇ ಬಾಯಿ ಒಣಗುವಿಕೆ, ಇದನ್ನು ವೈದ್ಯರು ಕ್ಸೆರೋಸ್ಟೋಮಿಯಾ ಎಂದು ಗುರುತಿಸುತ್ತಾರೆ.

ಬಾಯಿ ಒಣಗುತ್ತಿದೆ ಅಂದರೆ ಹೀಗೆ ಮಾಡಿ ನೋಡಿ
ಸಾಕಷ್ಟು ನೀರು ಕುಡಿಯಬೇಕು

ದೇಹದಲ್ಲಿ ನೀರಿನ ಕೊರತೆ ಉಂಟಾದಾಗ ಮೊದಲಾಗಿ ಬಾಯಿ ಒಣಗುತ್ತದೆ ಹಾಗೂ ಈ ಮೂಲಕ ದೇಹ ನೀರಿನ ಪೂರೈಕೆಗೆ ಬೇಡಿಕೆ ಒಡ್ಡುತ್ತದೆ. ದಿನಕ್ಕೆ ಎಂಟರಿಂದ ಹತ್ತು ಲೋಟ ನೀರು ಕುಡಿಯಬೇಕು ಹಾಗೂ ಈ ಪ್ರಮಾಣವನ್ನು ಕೊಂಚ ಕೊಂಚವಾಗಿ ದಿನದಲ್ಲಿ ಹಲವಾರು ಬಾರಿ ಎಂಬಂತೆ ಕುಡಿಯಬೇಕು. ಜೊತೆಗೇ ಸಾಕಷ್ಟು ದ್ರವಾಹಾರಗಳನ್ನೂ ಸೇವಿಸಬೇಕು. ಗಿಡಮೂಲಿಕೆಗಳ ಟೀ, ಸೂಪ್ ಅಥವಾ ತಾಜಾ ಹಣ್ಣುಗಳ ಸ್ಮೂಥಿ ಜ್ಯೂಸ್ ಮೊದಲಾದವುಗಳನ್ನೂ ಸೇವಿಸಬೇಕು.

ಬಹಳ ಸಮಯ ನೀರು ಕುಡಿಯದಿದ್ದರೆ ಬಾಯಿ ಒಣಗುತ್ತದೆ. ಆದರೆ, ಸಾಕಷ್ಟು ನೀರು ಕುಡಿಯುತ್ತಿದ್ದರೂ ಬಾಯಿ ಒಣಗುತ್ತಿದ್ದರೆ ಕಾಯಿಲೆಗಳ ಲಕ್ಷಣ ಇರಬಹುದು.

ನಿದ್ದೆಯಲ್ಲಿದ್ದ ವೇಳೆ ಬಾಯಿಯಿಂದ ಉಸಿರಾಡುವ ಅಭ್ಯಾಸ ರೂಢಿಸಿಕೊಂಡಿದ್ದರೆ ಇದು ಹೈಪೊಸಲಿವೇಶನ್‍ನ ಸಾಮಾನ್ಯ ಕಾರಣವಾಗಿದೆ. ಈ ರೀತಿ ಮಾಡುತ್ತಿದ್ದರೆ ನಅಭ್ಯಾಸ ಬಿಡುವುದು ಉತ್ತಮ. ಗೊರಕೆ ಹೊಡೆಯುತ್ತಿರುವವರಿಗೂ ಬಾಯಿ ಒಣಗುವ ಸಾಧ್ಯತೆ ಇರುತ್ತದೆ.

ಎಣ್ಣೆಯ ಮುಕ್ಕಳಿಕೆ, ಇದೊಂದು ಆಯುರ್ವೇದೀಯ ಪರಿಹಾರವಾಗಿದೆ ಹಾಗೂ ಬಾಯಿ ಮತ್ತು ಹಲ್ಲುಗಳ ಆರೋಗ್ಯವನ್ನು ವೃದ್ದಿಸಲು ನೆರವಾಗುತ್ತದೆ. ಇದಕ್ಕಾಗಿ ಸುಮಾರು ಎರಡು ದೊಡ್ಡ ಚಮಚದಷ್ಟು ಕೊಬ್ಬರಿ, ಸಾಸಿವೆ, ಎಳ್ಳೆಣ್ಣೆ ಅಥವಾ ಸೂರ್ಯಕಾಂತಿ ಎಣ್ಣೆ ಇವುಗಳಲ್ಲಿ ಒಂದನ್ನು ಬಾಯಿಗೆ ಹಾಕಿಕೊಂಡು ಸುಮಾರು ಇಪ್ಪತ್ತು ನಿಮಿಷಗಳವರೆಗೆ ಮುಕ್ಕಳಿಸುತ್ತಾ ಇರಬೇಕು, ನುಂಗಬಾರದು ಹಾಗೂ ಬಳಿಕ ಉಗಿಯಬೇಕು. ನಂತರ ಉಗುರುಬೆಚ್ಚನೆಯ ನೀರಿನಲ್ಲಿ ಚೆನ್ನಾಗಿ ಮುಕ್ಕಳಿಸಿ ಎಂದಿನಂತೆ ಹಲ್ಲುಗಳನ್ನು ಉಜ್ಜಿಕೊಳ್ಳಬೇಕು. ಇದೊಂದು ವ್ಯಾಯಾಮವೂ ಆಗಿದ್ದು ದವಡೆಯ ಸ್ನಾಯುಗಳನ್ನು ಹುರಿಗಟ್ಟಿಸುತ್ತದೆ ಹಾಗೂ ಬಾಯಿಯನ್ನು ತೇವದಿಂದ ಇರಿಸಲು ನೆರವಾಗುತ್ತದೆ. ಈ ಅಭ್ಯಾಸವನ್ನು ಪ್ರತಿದಿನವೂ ನಿರ್ವಹಿಸಬಹುದು.

ಬಾಯಿ ಒಣಗುತ್ತಿದೆ ಅಂದರೆ ಹೀಗೆ ಮಾಡಿ ನೋಡಿ
ಏಲಕ್ಕಿಯನ್ನು ಬಾಯಿಗೆ ಹಾಕಿ ಜಗಿಯುತ್ತಾ ಸೇವಿಸಬಹುದು

ಏಲಕ್ಕಿ ಸುಗಂಧಕಾರಕ ಹಾಗೂ ಬಾಯಿಯ ದುರ್ವಾಸನೆಯನ್ನು ತಕ್ಷಣವೇ ನಿವಾರಿಸಬಲ್ಲ ಮಸಾಲೆ ವಸ್ತುವಾಗಿದೆ. ಪ್ರತಿ ಊಟದ ಬಳಿಕ ಒಂದು ಏಲಕ್ಕಿಯನ್ನು ಬಾಯಿಗೆ ಹಾಕಿ ಜಗಿಯುತ್ತಾ ಪೂರ್ಣ ನೀರಾಗುವವರೆಗೆ ಇರಿಸಿ ಬಳಿಕ ನುಂಗಿ ಬಿಡಬೇಕು. ಪರ್ಯಾಯವಾಗಿ ಒಂದು ಲೀಟರ್ ನೀರನ್ನು ಕುದಿಸಿ ಇದಕ್ಕೆ ಮೂರರಿಂದ ನಾಲ್ಕು ಚಿಕ್ಕ ಚಮಚ ಏಲಕ್ಕಿ ಪುಡಿಯನ್ನು ಬೆರೆಸಿ ನಾಲ್ಕಾರು ನಿಮಿಷ ಚಿಕ್ಕ ಉರಿಯಲ್ಲಿ ಕುದಿಸಿ. ಬಳಿಕ ಉರಿ ಆರಿಸಿ ತಣಿಯಲು ಬಿಡಿ. ತಣಿದ ನೀರನ್ನು ಒಂದು ಬಾಟಲಿಯಲ್ಲಿ ಸಂಗ್ರಹಿಸಿ ದಿನವಿಡೀ ಕುಡಿಯುತ್ತಾ ಇದನ್ನು ಖಾಲಿಮಾಡಿ. ಜೊತೆಗೇ, ನಿಮ್ಮ ನಿತ್ಯದ ಟೀಗಳಲ್ಲಿಯೂ ಎರಡು ಅಥವಾ ಮೂರು ಏಲಕ್ಕಿಗಳನ್ನು ಕುಟ್ಟಿ ಪುಡಿ ಮಾಡಿ ಬೆರೆಸಿ ಸೇವಿಸಬಹುದು.

ಶುಂಠಿಯು ಲಾಲಾರಸದ ಉತ್ಪಾದನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ, ಇದು ಒಣ ಬಾಯಿ ಸಮಸ್ಯೆಗೆ ಸಹಾಯ ಮಾಡುತ್ತದೆ. ಇದಕ್ಕಾಗಿ, ಹಸಿಶುಂಠಿಯ ಒಂದು ಚಿಕ್ಕ ತುಂಡನ್ನು ಸಿಪ್ಪೆ ಸುಲಿದು ಬಾಯಿಗೆ ಹಾಕಿಕೊಂಡು ಕೆಲವು ನಿಮಿಷಗಳ ಕಾಲ ಚೀಪುತ್ತಿರಿ. ಕೊಂಚ ಖಾರ ಎನಿಸಬಹುದು, ಆದರೆ ಒಂದೇ ದಿನದಲ್ಲಿ ಇದು ಅಭ್ಯಾಸವಾಗಿಬಿಡುತ್ತದೆ. ದಿನವಿಡೀ ನಿಮಗೆ ಸಾಧ್ಯವಿದ್ದಷ್ಟು ಬಾರಿ ಸೇವಿಸಿ. ಜೊತೆಗೇ ನಿತ್ಯದ ಟೀ ಯೊಂದಿಗೆ ಬೆರೆಸಿಯೂ ಸೇವಿಸಬಹುದು.

ಸಿಗರೇಟ್ ಸೇದುವುದರಿಂದ ಶ್ವಾಸಕೋಶದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು ಮಾತ್ರವಲ್ಲ, ಬಾಯಿಯಲ್ಲಿರುವ ಸಲೈವಾ ಅಂಶ ಕಡಿಮೆ ಮಾಡುತ್ತದೆ. ಇದರಿಂದ ಬಾಯಿ ಒಣಗಲು ಶುರುವಾಗುತ್ತದೆ. ಜರ್ನಲ್ ಆಫ್ ಡೆಂಟಲ್ ರಿಸರ್ಚ್, ಡೆಂಟಲ್ ಕ್ಲಿನಿಕ್ಸ್, ಡೆಂಟಲ್ ಪ್ರಾಸ್ಪೆಕ್ಟ್‌ನಲ್ಲಿ ಪ್ರಕಟವಾದ ಅಧ್ಯಯನವು, ತಂಬಾಕು ಧೂಮಪಾನಿಗಳಲ್ಲಿ ಶೇಕಡಾ 39 ರಷ್ಟು ಮಂದಿ ಒಣಬಾಯಿ ಸಮಸ್ಯೆಯಿಂದ ನರಳುತ್ತಿದ್ದಾರೆ.

ಲೋಳೆಸರ ತ್ವಚೆಗೆ ಅತ್ಯುತ್ತಮವಾದ ಪೋಷಣೆಯನ್ನು ಒದಗಿಸುತ್ತದೆ. ಇದರ ಶಮನಕಾರಿ ಗುಣಗಳು ಬಾಯಿಯನ್ನು ತೇವದಿಂದ ಇರಿಸಲೂ ನೆರವಾಗುತ್ತವೆ. ಅಷ್ಟೇ ಅಲ್ಲ, ಬಾಯಿಯ ಒಳಗಿನ ಸೂಕ್ಷ್ಮ ಅಂಗಾಂಶಗಳನ್ನು ಕಾಪಾಡುತ್ತದೆ ಹಾಗೂ ನಾಲಿಗೆಯ ರುಚಿಮೊಗ್ಗುಗಳನ್ನು ಚುರುಕುಗೊಳಿಸುತ್ತದೆ. ಇದಕ್ಕಾಗಿ, ನಿತ್ಯವೂ ಬೆಳಿಗ್ಗೆದ್ದ ತಕ್ಷಣ ಕಾಲು ಕಪ್ ನಷ್ಟು ಲೋಳೆಸರದ ರಸವನ್ನು ಕುಡಿಯಿರಿ ಹಾಗೂ ದಿನವಿಡೀ ಕೊಂಚ ಪ್ರಮಾಣವನ್ನು ನೀರಿನೊಂದಿಗೆ ಬೆರೆಸಿ ಬಾಯಿಯನ್ನು ಮುಕ್ಕಳಿಸುತ್ತಾ ಇರಬೇಕು.

ನಿಯಮಿತವಾಗಿ ಹಾಗೂ ದೇಹಕ್ಕೆ ಬೇಕಾಗುವಷ್ಟೂ ನೀರು ಕುಡಿಯುವುದರಿಂದ ಬಾಯಿ ಒಣಗುವುದು ಕಡಿಮೆ ಮಾಡುತ್ತದೆ. ಸಾಕಷ್ಟು ನೀರು ಕುಡಿಯದಿದ್ದರೆ, ದೇಹವು ನಿರ್ಜಲೀಕರಣಗೊಳ್ಳುತ್ತದೆ ಮತ್ತು ಬಾಯಿಯೂ ಸಹ ಒಣಗುತ್ತದೆ. ಆದ್ದರಿಂದ, ಪ್ರತಿದಿನ ಕನಿಷ್ಠ 8 ಗ್ಲಾಸ್ ನೀರನ್ನು ಕುಡಿಯುವ ಅಭ್ಯಾಸ ಒಳ್ಳೆಯದು.

ಅನೇಕ ಗಿಡಮೂಲಿಕೆಗಳು ಲಾಲಾ ರಸದ ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ಒಣ ಬಾಯಿಯನ್ನು ತಾತ್ಕಾಲಿಕ ವಾಗಿ ನಿವಾರಿಸಲು ಸಹಾಯ ಮಾಡುತ್ತದೆ.

ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚುವುದರಿಂದ ಅಥವಾ ಅದಕ್ಕಾಗಿ ತೆಗೆದುಕೊಳ್ಳುತ್ತಿರುವ ಔಷಧಿಗಳ ಕಾರಣದಿಂದಾಗಿ ಬಾಯಿ ಒಣಗುತ್ತಿರಬಹುದು. ಆದ್ದರಿಂದ, ಮಧುಮೇಹವನ್ನು ನಿಯಂತ್ರಣದಲ್ಲಿಡಬೇಕು ಮತ್ತು ರೋಗಲಕ್ಷಣಗಳ ಸಮರ್ಪಕ ನಿರ್ವಹಣೆಗೆ ವೈದ್ಯರ ಸಲಹೆ ಪಡೆದುಕೊಂಡರೆ ಒಳ್ಳೆಯದು.

ಉದ್ವೇಗ, ಭಯ, ಆತಂಕ ಮೊದಲಾದ ಸಂದರ್ಭದಲ್ಲಿ ಬಾಯಿ ಒಣಗುವುದು ತಾತ್ಕಾಲಿಕವಾಗಿದೆ. ಉಳಿದಂತೆ ನಿರ್ಜಲೀಕರಣ, ಧೂಮಪಾನ ಮದ್ಯಪಾನ ಮೊದಲಾದ ಕಾರಣದಿಂದಲೂ ಎದುರಾಗಬಹುದು. ವಯಸ್ಸಾದಂತೆ ಬಾಯಿ ಒಣಗುವುದೂ ಸಾಮಾನ್ಯ. ಗರ್ಭಿಣಿಯರು ಗರ್ಭಾವಸ್ಥೆಯ ಕಡೆಯ ದಿನಗಳಲ್ಲಿ ಹಾಗೂ ಬಾಣಂತನದ ಸಮಯದಲ್ಲಿ ಬಾಯಿ ಒಣಗುವುದನ್ನು ಅನುಭವಿಸಬಹುದು.

ದೊಡ್ಡ ಜೀರಿಗೆ ಕಾಳುಗಳಿಗೆ ಲಾಲಾರಸ ಉತ್ಪಾದನೆಯನ್ನು ಹೆಚ್ಚಿಸುವ ಗುಣವಿದೆ. ಅಷ್ಟೇ ಅಲ್ಲ, ಬಾಯಿಯ ದುರ್ವಾಸನೆಯನ್ನೂ ನಿವಾರಿಸುತ್ತವೆ. ಬಾಯಿಯ ಒಣಗುವಿಕೆ ಇರುವ ವ್ಯಕ್ತಿಗಳು ದಿನಕ್ಕೆ ಎರಡರಿಂದ ಮೂರು ಬಾರಿ ಸುಮಾರು ಅರ್ಧ ಚಮಚದಷ್ಟು ದೊಡ್ಡ ಜೀರಿಗೆಗಳನ್ನು ಚೆನ್ನಾಗಿ ಜಗಿದು ನೀರಾಗಿಸಿ ನುಂಗಬೇಕು.

ಬಾಯಿ ಒಣಗುತ್ತಿದೆ ಅಂದರೆ ಹೀಗೆ ಮಾಡಿ ನೋಡಿ
ಸೋಂಪು ನೀರು ಒಳ್ಳೆಯದು ಒಣ ಬಾಯಿಗೆ

 ಅಥವಾ ಎರಡು ದೊಡ್ಡ ಚಮಚದಷ್ಟು ಪ್ರಮಾಣವನ್ನು ಒಂದು ಲೋಟದಲ್ಲಿ ಚೆನ್ನಾಗಿ ಕುದಿಸಿ. ಕೆಲವು ನಿಮಿಷಗಳ ಕುದಿಯುವಿಕೆಯ ಬಳಿಕ ಉರಿ ಆರಿಸಿ ತಣಿಯಲು ಬಿಡಿ. ತಣಿದ ಬಳಿಕ ಈ ನೀರನ್ನು ಕೊಂಚ ಕೊಂಚವಾಗಿ ಇಡಿಯ ದಿನ ಕುಡಿಯುತ್ತಾ ಖಾಲಿ ಮಾಡಿ.

ಆಲ್ಕೋಹಾಲ್‌ ಮತ್ತು ಧೂಮಪಾನ ದಂತೆ, ಸಕ್ಕರೆ ಕೂಡ ನಿಮ್ಮ ಬಾಯಿಯ ಒಣ ಸಮಸ್ಯೆಗೆ ಕಾರಣವಾಗುತ್ತದೆ. ನಿಮಗೆ ಸಾಧ್ಯವಾದರೆ, ಒಣ ಬಾಯಿ ಸಮಸ್ಯೆಗಳನ್ನು ಕಡಿಮೆ ಮಾಡಲು ಸಕ್ಕರೆ ಆಹಾರವನ್ನು ಕಡಿಮೆ ಮಾಡಿ.

ನಿಂಬೆರಸಕ್ಕೆ ಲಾಲಾರಸ ಉತ್ಪಾದನೆಯನ್ನು ಪ್ರಚೋದಿಸುವ ಗುಣವಿದೆ. ಈ ಮೂಲಕ ಬಾಯಿ ತೇವದಿಂದಿರಲು ಸಾಧ್ಯವಾಗುತ್ತದೆ. ಜೊತೆಗೇ ಇದರ ಆಮ್ಲೀಯ ಮತ್ತು ಬ್ಯಾಕ್ಟೀರಿಯಾನಿವಾರಕ ಗುಣಗಳು ಬಾಯಿಯ ದುರ್ವಾಸನೆಯನ್ನು ನಿವಾರಿಸಲೂ ನೆರವಾಗುತ್ತವೆ. ಇದಕ್ಕಾಗಿ, ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಅರ್ಧ ನಿಂಬೆಯ ರಸವನ್ನು ಬೆರೆಸಿ. ರುಚಿಗೆ ಕೆಲವು ತೊಟ್ಟು ಜೇನನ್ನು ಬೆರೆಸಿ.

ಈ ನೀರನ್ನು ದಿನವಿಡೀ ಕೊಂಚ ಕೊಂಚವಾಗಿ ಕುಡಿಯುತ್ತಿರಬೇಕು. ಇದು ಸಾಧ್ಯವಾಗದೇ ಇದ್ದರೆ, ಒಂದು ನಿಂಬೆಯನ್ನು ಅಡ್ಡಲಾಗಿ ಬಿಲ್ಲೆಗಳಂತೆ ಕತ್ತರಿಸಿ ಆಗಾಗ ಒಂದೊಂದು ಬಿಲ್ಲೆಯನ್ನು ಕೊಂಚ ಉಪ್ಪು ಸಿಂಪಡಿಸಿ ನಾಲಿಗೆಯ ಮೇಲಿರಿಸಿ ಚೀಪುತ್ತಾ ರಸವನ್ನು ನುಂಗಿ. ದಿನದಲ್ಲಿ ಹೀಗೆ ಮೂರು ಬಿಲ್ಲೆಗಳನ್ನು ಸೇವಿಸಿ.

ಧನ್ಯವಾದಗಳು.

​ 

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕ್ರೂಸ್‌ 'ಗಂಗಾ ವಿಲಾಸ್‌' ಉದ್ಘಾಟನೆ

ಜನವರಿ 13ರಂದು ಹೊಸ ಇತಿಹಾಸ ಬರೆಯಲು ಭಾರತ ಸಜ್ಜಾಗಿದೆ

ವಿಘ್ನ ವಿನಾಶಕನ ಆನೆಯ ತಲೆ

ವಿಘ್ನ ವಿನಾಶಕನ ಆನೆಯ ತಲೆಯ ಬಗ್ಗೆ ಈ ಕಥೆ ಕೇಳಿದ್ದೀರಾ?