in

ಜನವರಿ 13ರಂದು ಹೊಸ ಇತಿಹಾಸ ಬರೆಯಲು ಭಾರತ ಸಜ್ಜಾಗಿದೆ

ಕ್ರೂಸ್‌ 'ಗಂಗಾ ವಿಲಾಸ್‌' ಉದ್ಘಾಟನೆ
ಕ್ರೂಸ್‌ 'ಗಂಗಾ ವಿಲಾಸ್‌' ಉದ್ಘಾಟನೆ

ಜನವರಿ 13ಕ್ಕೆ ವಿಶ್ವದ ಅತಿ ಉದ್ದದ ನದಿ ಕ್ರೂಸ್‌ ‘ಗಂಗಾ ವಿಲಾಸ್‌’ ಉದ್ಘಾಟನೆ. ವಾರಣಾಸಿಯಲ್ಲಿ ವಿಶ್ವದ ಅತಿ ಉದ್ದದ ನದಿ ಕ್ರೂಸ್ ಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 13 ರಂದು ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿ ವಿಶ್ವದ ಅತಿ ಉದ್ದದ ನದಿ ಕ್ರೂಸ್ ‘ಗಂಗಾ ವಿಲಾಸ್’ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ್ ಅವರು ಭಾಗವಹಿಸಲಿದ್ದಾರೆ.

ಉದ್ಘಾಟನೆಯ ನಂತರ, ಗಂಗಾ ವಿಲಾಸ್ ಕ್ರೂಸ್ ಸ್ವಿಟ್ಜರ್ಲೆಂಡ್‌ನ 32 ಮತ್ತು ಜರ್ಮನಿಯ ಒಬ್ಬ ಸೇರಿದಂತೆ 33 ಪ್ರವಾಸಿಗರೊಂದಿಗೆ ದಿಬ್ರುಗಢಕ್ಕೆ ಹೊರಡಲಿದೆ. 62.5 ಮೀ(ಉದ್ದ), 12.8 ಮೀ(ಅಗಲ) ಮತ್ತು 1.35 ಮೀ (ಡ್ರಾಫ್ಟ್) ಅಳತೆಯ ಈ ಹಡಗು ಭಾರತ ಮತ್ತು ಬಾಂಗ್ಲಾದೇಶದ 27 ನದಿಗಳನ್ನು ದಾಟುವ ಮೂಲಕ 3200 ಕಿಮೀ ದೂರವನ್ನು ಕ್ರಮಿಸಲಿದೆ.

ಜನವರಿ 13ರಂದು ಹೊಸ ಇತಿಹಾಸ ಬರೆಯಲು ಭಾರತ ಸಜ್ಜಾಗಿದೆ
ಕ್ರೂಸ್ ಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ

ಈ ಕ್ರೂಸ್‌ ಹಡಗು ಸುದೀರ್ಘವಾದ 50 ದಿನಗಳ ಪ್ರಯಾಣ ಕೈಗೊಳ್ಳಲಿದೆ. ಯಾನದ ಸಂದರ್ಭದಲ್ಲಿ ಈ ಕ್ರೂಸ್‌ ಹಲವು ಹೆರಿಟೇಜ್‌ ತಾಣಗಳಲ್ಲಿ ನಿಂತು ಪ್ರಯಾಣ ಮುಂದುವರೆಸಲಿದೆ.

ಪ್ರಯಾಣಿಕರಿಗೆ ಪ್ರಯಾಣದ ದರ ಕೇಳದರೆ ಮಾತ್ರ ಶಾಕ್‌ ಆಗೋದು ಮಾತ್ರ ಪಕ್ಕಾ. 51 ದಿನಗಳ ಪ್ರವಾಸಕ್ಕೆ 3,200 ಕಿ.ಮೀಟರ್‌ಗೆ ಬರೋಬ್ಬರಿ ಹನ್ನೆರಡುವರೆ ಲಕ್ಷ ಹಣ ಖರ್ಚಾಗಲಿದೆ.   

ಈ ಕ್ರೂಸ್, 51 ದಿನಗಳ ಕಾಲ 3,200 ಕಿ.ಮೀ ಗಿಂತಲೂ ಹೆಚ್ಚು ದೂರವನ್ನು ಕ್ರಮಿಸಿದ ನಂತರ ದಿಬ್ರುಗಢವನ್ನು ತಲುಪಲಿದೆ ಮತ್ತು ಈ ಪ್ರಯಾಣಕ್ಕೆ 12.59 ಲಕ್ಷ ರೂಪಾಯಿಗೂ ಹೆಚ್ಚು ವೆಚ್ಚವಾಗಲಿದೆ. ಈ ಹಡಗು 62 ಮೀಟರ್ ಉದ್ದ ಮತ್ತು 12 ಮೀಟರ್ ಅಗಲವಾಗಿದ್ದು, ಮೂರು ಡೆಕ್‌ಗಳು, 36 ಪ್ರಯಾಣಿಕರ ಸಾಮರ್ಥ್ಯದ 18 ಸೂಟ್‌ಗಳು ಮತ್ತು ಐಷಾರಾಮಿ ಅನುಭವ ನೀಡುವ ಎಲ್ಲಾ ಸೌಕರ್ಯಗಳನ್ನು ಹೊಂದಿದೆ.

ಪ್ರಯಾಣಿಸಲಿರುವ ಎಲ್ಲಾ 36 ಪ್ರಯಾಣಿಕರು ಸ್ವಿಸ್ ಪ್ರಜೆಗಳಾಗಿದ್ದಾರೆ. ಅವರಲ್ಲಿ ಹದಿನಾಲ್ಕು ಮಂದಿ ಕೋಲ್ಕತ್ತಾದಲ್ಲಿ ಇಳಿಯಲಿದ್ದು, ಅಲ್ಲೆ ಮತ್ತೆ 14 ಮಂದಿ ಅದನ್ನು ಹತ್ತಲಿದ್ದಾರೆ. ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಬಾಂಗ್ಲಾದೇಶ ಮತ್ತು ಅಸ್ಸಾಂ ಮೂಲಕ ಕ್ರೂಸ್ ಸಾಗಲಿದೆ. ಇದು ಭಾರತದ ಈ ರಾಜ್ಯಗಳು ಮತ್ತು ಬಾಂಗ್ಲಾದೇಶದಲ್ಲಿ 50 ಸ್ಥಳಗಳಲ್ಲಿ ನಿಲ್ಲುತ್ತದೆ. ಪ್ರವಾಸಿಗರು ನಿಲುಗಡೆ ಸಮಯದಲ್ಲಿ ಸ್ಥಳೀಯ ಸಾಂಸ್ಕೃತಿಕ ಮತ್ತು ಪಾರಂಪರಿಕ ತಾಣಗಳಿಗೆ ಭೇಟಿ ನೀಡಲಿದ್ದಾರೆ.

ವಿಶ್ವ ಪರಂಪರೆಯ ತಾಣಗಳು, ರಾಷ್ಟ್ರೀಯ ಉದ್ಯಾನವನಗಳು, ನದಿ ಘಟ್ಟಗಳು, ಬಿಹಾರದ ಪಾಟ್ನಾ, ಜಾರ್ಖಂಡ್‌ನ ಸಾಹಿಬ್‌ಗಂಜ್, ಪಶ್ಚಿಮ ಬಂಗಾಳದ ಕೊಲ್ಕತ್ತಾ, ಬಾಂಗ್ಲಾದೇಶದ ಢಾಕಾ, ಅಸ್ಸಾಂನ ಗುವಾಹಟಿಯಂತಹ ಪ್ರಮುಖ ನಗರಗಳು ಸೇರಿದಂತೆ 50 ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮೂಲಕ 51 ದಿನಗಳ ವಿಹಾರ ಮಾಡಲಿದೆ. ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯ ಸ್ಥಳಗಳಲ್ಲಿ ಸ್ಟಾಪ್ ಓವರ್‌ಗಳೊಂದಿಗೆ ಭಾರತದ ಶ್ರೀಮಂತ ಪರಂಪರೆಯನ್ನು ಪ್ರದರ್ಶಿಸಲು ವಾರಾಣಸಿಯ ಗಂಗಾ ಆರತಿಯನ್ನು ಇಲ್ಲಿ ಪ್ರದರ್ಶಿಸಲಾಗುವುದು. ಈ ಗಂಗಾ ವಿಲಾಸ್ ವಿಹಾರ ಬೌದ್ಧ ಧರ್ಮದ ಪವಿತ್ರ ಸ್ಥಳವಾದ ಸಾರನಾಥದಲ್ಲೂ ನಿಲ್ಲುತ್ತದೆ.

ಜನವರಿ 13ರಂದು ಹೊಸ ಇತಿಹಾಸ ಬರೆಯಲು ಭಾರತ ಸಜ್ಜಾಗಿದೆ
ಕ್ರೂಸ್ ಒಳಗಿನ ವ್ಯವಸ್ಥೆ ಹೀಗಿದೆ

ತಾಂತ್ರಿಕ ಕರಕುಶಲತೆಗೆ ಹೆಸರುವಾಸಿಯಾದ ಮಯೋಂಗ್ ಮತ್ತು ಅಸ್ಸಾಂನ ಅತಿದೊಡ್ಡ ನದಿ ದ್ವೀಪ ಮತ್ತು ವೈಷ್ಣವ ಸಂಸ್ಕೃತಿಯ ಕೇಂದ್ರವಾದ ಮಜುಲಿಯಲ್ಲೂ ಸಂಚರಿಸಲಿದ್ದು, ಪ್ರವಾಸಿಗರು ಬಿಹಾರ ಸ್ಕೂಲ್ ಆಫ್ ಯೋಗ ಮತ್ತು ವಿಕ್ರಮಶಿಲಾ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡುತ್ತಾರೆ. ಇದು ಆಧ್ಯಾತ್ಮಿಕತೆ ಮತ್ತು ಜ್ಞಾನದಲ್ಲಿ ಶ್ರೀಮಂತ ಭಾರತೀಯ ಪರಂಪರೆಯನ್ನ ತಿಳಿದುಕೊಳ್ಳಲು ಅನುಕೂಲ ಮಾಡಿಕೊಡುತ್ತದೆ. ಬೆಂಗಾಲ್ ಟೈಗರ್ಸ್‌ಗೆ ಹೆಸರುವಾಸಿಯಾದ ಬಂಗಾಳದ ಕೊಲ್ಲಿ ಡೆಲ್ಟಾದಲ್ಲಿರುವ ಸುಂದರ್‌ಬನ್ಸ್‌ನ ಜೀವವೈವಿಧ್ಯ ತಾಣಕ್ಕೂ ಭೇಟಿ ನೀಡಲಿದೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಮೂಲಕ ಈ ವಿಹಾರ ಮುಂದುವರೆಯುತ್ತದೆ. ಇದು ಬಾಂಗ್ಲಾದೇಶದಲ್ಲಿ 50 ಸ್ಥಳಗಳಲ್ಲಿ ನಿಲ್ಲುತ್ತದೆ. ಪ್ರವಾಸಿಗರು ನಿಲುಗಡೆ ಸಮಯದಲ್ಲಿ ಸ್ಥಳೀಯ ಸಾಂಸ್ಕೃತಿಕ ಮತ್ತು ಪಾರಂಪರಿಕ ತಾಣಗಳಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಿಕೊಡಲಾಗುವುದು.

ಹೆಚ್ಚಿನ ವಿವರ : 

*ವಾರಣಾಸಿಯಿಂದ ಪ್ರಯಾಣ ಆರಂಭಿಸಿ ಘಾಜಿಪುರ, ಬುಕ್ಸಾರ್ ಮತ್ತು ಪಾಟ್ನಾ ಮೂಲಕ ಕೊಲ್ಕತ್ತಾ ಗೆ ಪ್ರಯಾಣ ಬೆಳೆಸಲಿದೆ. ಒಂದು ರಾತ್ರಿ ಬಾಂಗ್ಲಾದೇಶದ ನದಿಯಲ್ಲಿ ಉಳಿದು ಬಳಿ ಮೂಲಕ ದಿಬ್ರು ಗಢಕ್ಕೆ ಹಿಂತಿರುಗಲಿದೆ.

*ಪ್ರಯಾಣದ ಸಮಯದಲ್ಲಿ ಕ್ರೂಸ್ ಸುಮಾರು 50ಕ್ಕೂ ಹೆಚ್ಚು ಸ್ಥಳದಲ್ಲಿ ನಿಲ್ಲಲಿದೆ ಎನ್ನುವ ಮಾಹಿತಿ, ಅಂದರೆ ವಿಶ್ವ ಪಾರಂಪರಿಕ ತಾಣಗಳಲ್ಲಿ ಪ್ರಮುಖ ಧಾಮಗಳಲ್ಲಿ ನಿಂತು ಪ್ರಯಾಣ ಮುಂದುವರಿಸಲಿದೆ.

• ಪ್ರವಾಸದ ಸಮಯದಲ್ಲಿ ಪವಿತ್ರ ಗಂಗಾ ಆರತಿ, ವಿಶ್ವದ ಅತಿ ದೊಡ್ಡ ಮ್ಯಾಂಗ್ರೋವ್ ಕಾಡಿನ ನೈಸರ್ಗಿಕ ಅದ್ಭುತಗಳನ್ನು ಕೂಡ ನೋಡಬಹುದಾಗಿದೆ. ಭಾರತದ ಬ್ಲಾಕ್ ಮ್ಯಾಜಿಕ್ ತೊಟ್ಟಿಲು ಎಂದೇ ಹೆಸರುವಾಸಿಯಾಗಿರುವ ಮ ಮಯೋಂಗ್ ಗೂ ಕೂಡ ಭೇಟಿ ನೀಡಬಹುದು ಎನ್ನಲಾಗಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

One Comment

ಪುರಾಣದಲ್ಲಿ ಅಮರಾವತಿ ಇಂದ್ರ ದೇವನ ರಾಜಧಾನಿ

ಪುರಾಣದಲ್ಲಿ ಅಮರಾವತಿ ಇಂದ್ರ ದೇವನ ರಾಜಧಾನಿಯಾಗಿತ್ತಂತೆ

ಬಾಯಿ ಒಣಗುತ್ತಿದೆ ಅಂದರೆ ಹೀಗೆ ಮಾಡಿ

ಬಾಯಿ ಒಣಗುತ್ತಿದೆ ಅಂದರೆ ಹೀಗೆ ಮಾಡಿ ನೋಡಿ