in

ದೇಹದಲ್ಲಿ ಕೆಂಪು ರಕ್ತಕಣಗಳು ಕಡಿಮೆ ಇದ್ದರೆ ಹೀಗೆ ಮಾಡಿ

ಕೆಂಪು ರಕ್ತಕಣಗಳು
ಕೆಂಪು ರಕ್ತಕಣಗಳು

ಕಣ್ಣಿನ ಮೂಲಕ ನಮ್ಮ ದೇಃದಲ್ಲಿ ರಕ್ತದ ಕೊರತೆ ಇದೆಯೇ ಎನ್ನುವುದನ್ನು ಕಂಡುಹಿಡಿಯಬಹುದಂತೆ. ಸಾಮಾನ್ಯವಾಗಿ, ಸಾಮಾನ್ಯ ಕಣ್ಣು ತೆಳು ಗುಲಾಬಿ ಬಣ್ಣದಲ್ಲಿ ಕಾಣುತ್ತದೆ. ಆದಾಗ್ಯೂ, ನೀವು ದೇಹದಲ್ಲಿ ಕಬ್ಬಿಣದ ಕೊರತೆಯನ್ನು ಹೊಂದಿದ್ದರೆ, ನಿಮ್ಮ ಒಳಗಿನ ಕಣ್ಣುರೆಪ್ಪೆಯು ಹೆಚ್ಚು ಬಿಳಿಯಾಗಿ ಕಾಣಿಸಬಹುದು.

ಆರೋಗ್ಯವಂತ ಮನುಷ್ಯನ ದೇಹದಲ್ಲಿ 5 ಲೀಟರ್ ರಕ್ತ ಇರಬೇಕು ಎಂದು ನಾವು ಬಾಲ್ಯದಲ್ಲಿ ಪುಸ್ತಕಗಳಲ್ಲಿ ಓದಿದ್ದೇವೆ. ದೇಹದಲ್ಲಿ ರಕ್ತ ಕಡಿಮೆಯಾದರೆ ಹಿಂದಿನ ಡೋಸ್ ಕಬ್ಬಿಣಾಂಶ ಇಲ್ಲದೇ ಇದ್ದರೆ ನಾನಾ ರೋಗಗಳಿಗೆ ತುತ್ತಾಗುವ ಅಪಾಯವಿದೆ. ರಕ್ತಹೀನತೆ ಸಮಸ್ಯೆ ಬರುತ್ತದೆ. ಆದ್ದರಿಂದಲೇ ದೇಹದಲ್ಲಿ ರಕ್ತ ಕಡಿಮೆಯಾಗದಂತೆ ಎಚ್ಚರಿಕೆ ವಹಿಸಬೇಕು. ಅದರಲ್ಲೂ ಕೆಲವೊಂದು ಆಹಾರಗಳನ್ನು ಸೇವನೆ ಮಾಡಬೇಕು. ಯಾವುವು ಆ ಆಹಾರಗಳು ಎಂಬುದು ಇಲ್ಲಿದೆ.

ರಕ್ತಹೀನತೆಯಿಂದಾಗಿ ತುಂಬಾ ದುರ್ಬಲವಾಗುವಂತೆ ಮಾಡುತ್ತದೆ. ಯಾವಾಗಲೂ ಆಯಾಸವಾಗುತ್ತದೆ. ಆಗಾಗ್ಗೆ ತಲೆನೋವು ಬರುತ್ತದೆ. ದೇಹದಲ್ಲಿ ರಕ್ತ ಕಡಿಮೆ ಇದ್ದಾಗ ಕೆಲವು ರೀತಿಯ ಆಹಾರ ಸೇವಿಸಿದರೆ ರಕ್ತ ಚೆನ್ನಾಗಿ ಹೆಚ್ಚುತ್ತದೆ. ಸಾಮಾನ್ಯ ಕ್ಕೆ ಹೋಲಿಸಿದರೆ ದೇಹದಲ್ಲಿ ಕೆಂಪು ರಕ್ತ ಕಣಗಳು ಕಡಿಮೆಯಾದಾಗ ದೇಹದಲ್ಲಿ ರಕ್ತಸ್ರಾವ ಶುರುವಾಗುತ್ತದೆ. ಇದನ್ನು ರಕ್ತಹೀನತೆ ಎನ್ನುತ್ತಾರೆ. ದೇಹದಲ್ಲಿ ರಕ್ತಹೀನತೆಯು ತಲೆ ತಿರುಗುವಿಕೆ, ದೌರ್ಬಲ್ಯ, ಮೂರ್ಛೆ ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ, ಇದು ಅನೇಕ ಗಂಭೀರ ರೋಗಗಳಿಗೆ ಕಾರಣವಾಗಬಹುದು. ಇದಕ್ಕೆ ದೇಹದಲ್ಲಿ ಕಬ್ಬಿಣ ಕೊರತೆ ಕಾರಣ ಎಂದು ಹೇಳಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವದ ಸುಮಾರು 80 ಪ್ರತಿಶತ ಜನರು ಕಬ್ಬಿಣದ ಕೊರತೆಯಿಂದ ಬಳಲುತ್ತಿದ್ದಾರೆ, ಆದರೆ ಅವರಲ್ಲಿ 30 ಪ್ರತಿಶತ ಜನರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ.

ದೇಹದಲ್ಲಿ ಕೆಂಪು ರಕ್ತಕಣಗಳು ಕಡಿಮೆ ಇದ್ದರೆ ಹೀಗೆ ಮಾಡಿ
ಕೆಂಪು ರಕ್ತಕಣಗಳ ತೊಂದರೆಯಿಂದ ಸುಸ್ತು ಆಗುವುದು

ಕೆಲವರು ಕಬ್ಬಿಣಾಂಶವನ್ನು ಸರಿದೂಗಿಸಲು ಪೂರಕಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ನೀವು ಪೂರಕವನ್ನು ತೆಗೆದುಕೊಳ್ಳಬೇಕೋ, ಬೇಡವೋ ಎನ್ನುವುದು ನಿಮ್ಮ ದೇಹದಲ್ಲಿ ಕಬ್ಬಿಣದ ಕೊರತೆ ಎಷ್ಟು ತೀವ್ರವಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಆಯಾಸ, ಉಸಿರಾಟದ ತೊಂದರೆ ಅಥವಾ ಎದೆ ನೋವು ಕಾಣಿಸಿಕೊಳ್ಳಬಹುದು. ಇದಲ್ಲದೆ, ಕಬ್ಬಿಣದ ಕೊರತೆಯು ತಲೆತಿರುಗುವಿಕೆ, ಶೀತ ಕೈ ಮತ್ತು ಪಾದಗಳು, ತೆಳು ಚರ್ಮ, ಸುಲಭವಾಗಿ ಉಗುರುಗಳು ಮುರಿಯುವುದು ಮತ್ತು ನಾಲಿಗೆಯ ಉರಿಯೂತ ಸೇರಿದಂತೆ ಇತರ ರೋಗಲಕ್ಷಣಗಳನ್ನು ಉಂಟುಮಾಡಬಹುದು.

ರಕ್ತಹೀನತೆಯಿಂದಾಗಿ ತುಂಬಾ ದುರ್ಬಲವಾಗುವಂತೆ ಮಾಡುತ್ತದೆ. ಯಾವಾಗಲೂ ಆಯಾಸವಾಗುತ್ತದೆ. ಆಗಾಗ್ಗೆ ತಲೆನೋವು ಬರುತ್ತದೆ. ದೇಹದಲ್ಲಿ ರಕ್ತ ಕಡಿಮೆ ಇದ್ದಾಗ ಕೆಲವು ರೀತಿಯ ಆಹಾರ ಸೇವಿಸಿದರೆ ರಕ್ತ ಚೆನ್ನಾಗಿ ಹೆಚ್ಚುತ್ತದೆ.

ಫೋಲೇಟ್ ಕೊರತೆಯ ರಕ್ತಹೀನತೆ ಹೊಂದಿರುವ ಗರ್ಭಿಣಿ ಮಹಿಳೆಯರಿಗೆ ಅಕಾಲಿಕ ಜನನದಂತಹ ತೊಡಕುಗಳು ಉಂಟಾಗುವ ಸಾಧ್ಯತೆ ಹೆಚ್ಚು ಮಾಡುತ್ತದೆ.

ಕೆಂಪು ರಕ್ತ ಕಣಗಳಲ್ಲಿರುವ ಹಿಮೋಗ್ಲೋಬಿನ್ ರಕ್ತಕ್ಕೆ ಅದರ ಬಣ್ಣವನ್ನು ನೀಡುತ್ತದೆ. ಆದ್ದರಿಂದ, ಕಡಿಮೆ ಮಟ್ಟಗಳು ಅಥವಾ ದೇಹದಲ್ಲಿ ಕಬ್ಬಿಣದ ಕೊರತೆಯು ನಿಮ್ಮ ರಕ್ತವನ್ನು ಕಡಿಮೆ ಮಾಡುತ್ತದೆ.

ಕಬ್ಬಿಣದ ಕೊರತೆಯು ದೇಹದಲ್ಲಿನ ಕೆಂಪು ರಕ್ತ ಕಣಗಳ ಆರೋಗ್ಯಕರ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಹಲವಾರು ದೈಹಿಕ ಕಾರ್ಯಗಳನ್ನು ಅಡ್ಡಿಪಡಿಸುತ್ತದೆ. ಈ ಖನಿಜದ ಕೊರತೆಯು ಒಬ್ಬರ ಕಣ್ಣಿನ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರಬಹುದು.

ಬೀಟ್ರೂಟ್ ದೇಹದಲ್ಲಿ ರಕ್ತದ ಬೆಳವಣಿಗೆಗೆ ಕೊಡುಗೆ ನೀಡುತ್ತದೆ. ಇದರಲ್ಲಿ ಕಬ್ಬಿಣಾಂಶ ಅಧಿಕವಾಗಿದೆ. ಇದು ದೇಹದಿಂದ ಕಲ್ಮಶಗಳನ್ನು ತೆಗೆದುಹಾಕುತ್ತದೆ ಮತ್ತು ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ.

ದೇಹದಲ್ಲಿ ಕೆಂಪು ರಕ್ತಕಣಗಳು ಕಡಿಮೆ ಇದ್ದರೆ ಹೀಗೆ ಮಾಡಿ
ದೇಹದಲ್ಲಿರುವ ಕೆಂಪು ರಕ್ತ ಕಣಗಳು ಮತ್ತು ಬಿಳಿ ರಕ್ತಕಣಗಳು

ರಕ್ತಹೀನತೆಯು ತ್ವರಿತ ಅಥವಾ ಅನಿಯಮಿತ ಹೃದಯ ಬಡಿತಕ್ಕೆ (ಅರಿಥ್ಮಿಯಾ) ಕಾರಣವಾಗಬಹುದು. ರಕ್ತಹೀನತೆಯ ಸಮಯದಲ್ಲಿ ರಕ್ತದಲ್ಲಿ ಆಮ್ಲಜನಕದ ಕೊರತೆಯನ್ನು ಸರಿದೂಗಿಸಲುಹೃದಯವು ಹೆಚ್ಚಿನ ರಕ್ತವನ್ನು ಪಂಪ್ ಮಾಡಬೇಕು. ಇದು ವಿಸ್ತೃತ ಹೃದಯ ಅಥವಾ ಹೃದಯ ವೈಫಲ್ಯಕ್ಕೆ ಕಾರಣವಾಗಬಹುದು.

ಕಬ್ಬಿಣಾಂಶದಿಂದ ಕೂಡಿರುವ ಆಹಾರ ಸೇವಿಸಿದೇಹದಲ್ಲಿ ಕಬ್ಬಿಣದ ಮಟ್ಟವನ್ನು ಹೆಚ್ಚಿಸುವ ಹಲವಾರು ಆಹಾರಗಳಿವೆ. ಕೆಂಪು ಮಾಂಸ, ಸಮುದ್ರಾಹಾರ, ಬೀನ್ಸ್, ಪಾಲಕ್, ಡ್ರೈ ಫ್ರೂಟ್ಸ್‌ಗಳು ಕಬ್ಬಿಣದ ಅತ್ಯುತ್ತಮ ಆಹಾರ ಮೂಲಗಳಾಗಿವೆ. ಇದಲ್ಲದೆ, ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸಲು, ವಿಟಮಿನ್ ಸಿ, ಅಥವಾ ಆಸ್ಕೋರ್ಬಿಕ್ ಆಮ್ಲದಲ್ಲಿ ಸಮೃದ್ಧವಾಗಿರುವ ಆಹಾರಗಳನ್ನು ಸೇರಿಸಿ.

ಆಪಲ್‌ ಸೇವನೆ ಮಾಡುವುದರಿಂದ ಎಲ್ಲಾ ರೀತಿಯ ಪ್ರಯೋಜನಗಳಿವೆ. ಸೇಬು ನಮ್ಮನ್ನು ಆರೋಗ್ಯವಾಗಿರಿಸು ಸಹಾಯ ಮಾಡುತ್ತದೆ ಮತ್ತು ರಕ್ತದಲ್ಲಿ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ.

ದೇಹದಲ್ಲಿ ಕೆಂಪು ರಕ್ತಕಣಗಳು ಕಡಿಮೆ ಇದ್ದರೆ ಹೀಗೆ ಮಾಡಿ
ಸೇಬು ರಕ್ತಕಣಗಳನ್ನು ಹೆಚ್ಚಿಸುತ್ತದೆ

ಕೆಂಪಾಗಿ ಕಾಣುವ ದಾಳಿಂಬೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಸೋಡಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕಬ್ಬಿಣ ಮತ್ತು ವಿಟಮಿನ್ಗಳಲ್ಲಿ ಸಮೃದ್ಧವಾಗಿದೆ. ದಾಳಿಂಬೆಯನ್ನು ಪ್ರತಿನಿತ್ಯ ತಿನ್ನುವುದರಿಂದ ದೇಹದಲ್ಲಿ ರಕ್ತ ವೃದ್ಧಿಯಾಗುತ್ತದೆ.

ಒಣದ್ರಾಕ್ಷಿ ಬಳಕೆರಕ್ತಹೀನತೆಯನ್ನು ನಿವಾರಿಸಲು 4 ರಿಂದ 5 ಒಣದ್ರಾಕ್ಷಿಗಳನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಚೆನ್ನಾಗಿ ತೊಳೆದು ನಂತರ ಅವುಗಳನ್ನು ಕುಡಿಯಲು ಯೋಗ್ಯವಾದ ಹಾಲಿಗೆ ಸೇರಿಸಿ ಕುದಿಸಿ. ಉಗುರು ಬೆಚ್ಚಗಿದ್ದಾಗ ಇದನ್ನು ಸೇವಿಸಿ.ಖರ್ಜೂರ, ಬಾದಾಮಿ ಮತ್ತು ವಾಲ್‌ನಟ್‌ಗಳಂತಹ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅವುಗಳ ಸೇವನೆಯು ಕ್ರಮೇಣ ರಕ್ತದಲ್ಲಿನ ಕೆಂಪು ರಕ್ತ ಕಣಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಕಡಿಮೆ ರಕ್ತ ಇದ್ದರೆ, ನೀವು ಖಂಡಿತವಾಗಿಯೂ ನಿಮ್ಮ ಆಹಾರದಲ್ಲಿ ಪಾಲಕವನ್ನು ಸೇರಿಸಿಕೊಳ್ಳಬೇಕು. ಇದರಲ್ಲಿ ಕಬ್ಬಿಣಾಂಶ ಹೆಚ್ಚಿದ್ದು ರಕ್ತದಲ್ಲಿ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ.

ಟೊಮೆಟೊ ಬಳಸುವುದು ದೇಹದಲ್ಲಿ ರಕ್ತಹೀನತೆ ಗುಣಪಡಿಸಲು ಟೊಮೆಟೊಗಳು ತುಂಬಾ ಉಪಯುಕ್ತ. ನೀವು ಅದನ್ನು ಸಲಾಡ್ ಆಗಿ ಅಥವಾ ತರಕಾರಿ ಮತ್ತು ಸೂಪ್ ಆಗಿ ಪ್ರತಿದಿನ ಸೇವಿಸಬೇಕು.

ಬಾಳೆಹಣ್ಣನ್ನು ಬಳಸುವುದು, ಬಾಳೆಹಣ್ಣಿನಲ್ಲಿ ಸಾಕಷ್ಟು ಕಬ್ಬಿಣ ಮತ್ತು ಪೊಟ್ಯಾಷಿಯಮ್ ಇದೆ, ಇದು ದೇಹದಲ್ಲಿ ವೇಗವಾಗಿ ರಕ್ತ ರಚನೆಗೆ ಕಾರಣವಾಗಬಹುದು ಮತ್ತು ರಕ್ತಹೀನತೆಯ ಕೊರತೆಗಳನ್ನು ನಿವಾರಿಸುತ್ತದೆ.

ಧನ್ಯವಾದಗಳು. ​​​

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಜಾರಂದಾಯ

ಜಾರಂದಾಯ

ಸತ್ಯದೇವತೆ ಎಂಬ ಹೆಣ್ಣು ಶಕ್ತಿ