in ,

ಖರ್ಜೂರ ತಿನ್ನುವುದರಿಂದ ಏನು ಲಾಭ ಇದೆ?

ಖರ್ಜೂರ
ಖರ್ಜೂರ

ಖರ್ಜೂರದ ಮರವು ಅರಿಕೇಸೀ ಕುಟುಂಬಕ್ಕೆ ಸೇರಿದ ಸುಪ್ರಸಿದ್ಧ ಹಣ್ಣಿನ ಮರ. ತೆಂಗು, ಈಚಲು ಮುಂತಾದ ಮರಗಳಿಗೆ ಬಲು ಹತ್ತಿರದ ಸಂಬಂಧಿ. ಸಸ್ಯಶಾಸ್ತ್ರೀಯ ಹೆಸರು ಫೀನಿಕ್ಸ್ ಡ್ಯಾಕ್ಟೈಲಿಫೆರ. ಇಂಗ್ಲಿಷಿನಲ್ಲಿ ಬಳಕೆಯ ಹೆಸರು ಡೇಟ್ ಪಾಮ್. ಇದರ ಹಣ್ಣನ್ನು ಸಂಸ್ಕøತದಲ್ಲಿ ಪಿಂಡ-ಖರ್ಜೂರ ಎಂದೂ ಕನ್ನಡದಲ್ಲಿ ಖರ್ಜೂರ, ಉತ್ತತ್ತಿ, ಕಾರೀಕ, ಗಿಜ್ಜಿರ ಹಣ್ಣು ಎಂದೂ ಕರೆಯುತ್ತಾರೆ.

ಖರ್ಜೂರದ ಮರ ಏಷ್ಯ ಮತ್ತು ಆಫ್ರಿಕಗಳ ಉಷ್ಣವಯಗಳಲ್ಲೆಲ್ಲ ಸ್ವಾಭಾವಿಕವಾಗಿ ಬೆಳೆಯುವುದಲ್ಲದೆ ಬೇಸಾಯದಲ್ಲೂ ಇದೆ. ಮೂಲತಃ ಎಲ್ಲಿಯದೆಂದು ಖಚಿತವಾಗಿ ತಿಳಿಯದಿದ್ದರೂ ಪರ್ಷಿಯದ ಖಾರಿ ಇಲ್ಲವೆ ಪಶ್ಚಿಮ ಪಾಕಿಸ್ತಾನ ಇದರ ಉಗಮಸ್ಥಾನವೆಂದು ನಂಬಲಾಗಿದೆ. ಅರಬ್ ದೇಶಗಳ ಮರುಭೂಮಿ ಪ್ರದೇಶಗಳಲ್ಲಿ ಸ್ವಾಭಾವಿಕವಾಗಿ ಇತಿಹಾಸಪೂರ್ವದಿಂದಲೂ ಬೆಳೆಯುತ್ತಿದ್ದ ಖರ್ಜೂರದ ಮರವನ್ನು ಸಹಸ್ರಾರು ವರ್ಷಗಳ ಹಿಂದೆಯೇ ಆ ದೇಶಗಳಲ್ಲಿ ವ್ಯಾಪಕವಾಗಿ ರೂಢಿಸಲಾಯಿತು. ಅಲ್ಲಿಂದ ಕಾಲಕ್ರಮೇಣ ಸ್ಪೇನಿಗೂ ನೈಲ್ ನದಿ ಕಣಿವೆಯ ಒಣ ಪ್ರದೇಶಗಳಿಗೂ ಕಾಲಿಟ್ಟಿತು.

ಖರ್ಜೂರ ತಿನ್ನುವುದರಿಂದ ಏನು ಲಾಭ ಇದೆ?
ಖರ್ಜೂರ ಮರ

ಎರಡು-ಮೂರು ಶತಮಾನಗಳ ಹಿಂದೆ ಸ್ಪೇನಿನಿಂದ ಅಮೆರಿಕಕ್ಕೆ ಇದನ್ನು ತರಲಾಯಿತು. ಈಗ ಅಮೆರಿಕದ ಉಷ್ಣವಲಯದ ಒಣ ಪ್ರದೇಶಗಳಲ್ಲಿ ಇದರ ಬೇಸಾಯ ದೊಡ್ಡಪ್ರಮಾಣದಲ್ಲಿ ನಡೆಯುತ್ತಿದೆ. ಕ್ಯಾಲಿಪೋರ್ನಿಯ ಹಾಗೂ ಆರಿಜ಼ೋನಗಳ ಒಳಪ್ರದೇಶಗಳಲ್ಲಿ 4,000 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಇದನ್ನು ಬೆಳೆಸಲಾಗುತ್ತಿದೆ. ಬಹುಶಃ ಭಾರತಕ್ಕೆ ದಂಡೆತ್ತಿ ಬಂದ ಮುಸ್ಲಿಮರ ತಮ್ಮ ಜೊತೆಯಲ್ಲಿ ಖರ್ಜೂರದ ಮರವನ್ನು ತಂದಿರಬೇಕು. ಅಂದಿನಿಂದಲೂ ಭಾರತದ ವಾಯವ್ಯ ಭಾಗದಲ್ಲಿ ಇದು ಕಾಣಬರುತ್ತದೆ. ಭಾರತದಲ್ಲಿ ಖರ್ಜೂರದ ಬೇಸಾಯ ಹೆಚ್ಚಾಗಿಲ್ಲ; ಗುಜರಾತ್, ರಾಜಸ್ಥಾನ್, ಪಂಜಾಬ್, ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಮೈಸೂರು ರಾಜ್ಯಗಳ ಜಿಲ್ಲೆಗಳಲ್ಲಿ ಸ್ವಲ್ಪಮಟ್ಟಿಗೆ ಇದನ್ನು ಬೆಳೆಸಲಾಗುತ್ತಿದೆ. ಅರಬ್ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಉತ್ಪಾದನೆಯಾಗುವ ಖರ್ಜೂರ ಕೊಂಚ ಕೀಳುದರ್ಜೆಯದು. ಇತ್ತೀಚೆಗೆ ವಾಯವ್ಯ ಏಷ್ಯದ ಕೆಲವು ದೇಶಗಳಿಂದ ಹಾಗೂ ಅಮೆರಿಕ ಸಂಯಕ್ತ ಸಂಸ್ಥಾನಗಳಿಂದ ಖರ್ಜೂರದ ಕೆಲವು ಉತ್ಕರ್ಷ ಬಗೆಗಳನ್ನು ತರಿಸಲಾಗಿದ್ದು ಅವನ್ನು ಪಂಜಾಬಿನ ಅಬೊಹಾರ್ ಮತ್ತು ಗುಜರಾತಿನ ಖೆಡಿಯೊಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಸುವ ಪ್ರಯತ್ನಗಳು ನಡೆದಿವೆ. ಖರ್ಜೂರದ ಬೆಳೆಗೆ ಇಂದು ಹೆಸರಾಗಿರುವ ದೇಶಗಳೆಂದರೆ ಇರಾಕ್, ಇರಾನ್, ಮೊರಾಕೊ ಮತ್ತು ಆಲ್ಜೀರಿಯಗಳು.

ಅತಿಹೆಚ್ಚು ನಾರಿನಂಶವನ್ನು ಒಳಗೊಂಡಿರುವ ಈ ಹಣ್ಣು ಜೀರ್ಣಾಂಗ ವ್ಯವಸ್ಥೆ ಹಾಗೂ ಕರುಳುಗಳು ಕ್ರಮಬದ್ಧವಾದ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಪ್ರತಿದಿನ ಕೇವಲ ಮೂರು ಖರ್ಜೂರವನ್ನು ತಿಂದರೆ ಸಾಕು. ದೇಹಕ್ಕೆ ಅಗತ್ಯವಾದ ಜೀವಸತ್ವ, ವಿಟಮಿನ್ ಹಾಗೂ ನಾರಿನಂಶವನ್ನು ಒದಗಿಸುತ್ತದೆ. ಅಲ್ಲದೆ ರಕ್ತ ಹೀನತೆ, ರಕ್ತದೊತ್ತಡ, ಕೊಲೆಸ್ಟ್ರಾಲ್ ಸೇರಿದಂತೆ ಇನ್ನಿತರ ರೋಗಗಳನ್ನು ಸಮತೋಲನದಲ್ಲಿರುವಂತೆ ನೋಡಿಕೊಳ್ಳುತ್ತದೆ.

ದೇಹದಲ್ಲಿ ಅತಿಯಾದ ಉಷ್ಣಾಂಶ ಹೊಂದಿರುವವರು ಹಾಲಿಗೆ ಕಲ್ಲುಸಕ್ಕರೆ ಹಾಕಿಕೊಂಡು ಕುಡಿಯುವುದು ಎಲ್ಲಾ ಕಡೆ ಚಾಲ್ತಿಯಲ್ಲಿರುವ ಅಭ್ಯಾಸ. ಆದರೆ ಹಾಲಿನ ಜೊತೆ ಖರ್ಜೂರಗಳನ್ನು ನೆನೆಸಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಅಪಾರವಾದ ಪ್ರಯೋಜನಗಳು ಸಿಗುತ್ತವೆ.

ಖರ್ಜೂರ ತಿನ್ನುವುದರಿಂದ ಏನು ಲಾಭ ಇದೆ?
ಖರ್ಜೂರ

ಖರ್ಜೂರದಲ್ಲಿ ಮ್ಯಾಂಗನೀಸ್ ಮತ್ತು ಮೆಗ್ನೀಷಿಯಂ ಇರುವುದರಿಂದ ಮೂಳೆಗಳು ಗಟ್ಟಿಮುಟ್ಟಾಗುತ್ತದೆ. ಇದರಲ್ಲಿರುವ ಸೆಲೆನಿಯಮ್ ಅಂಶ ಕ್ಯಾನ್ಸರ್​ ರೋಗವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಹೊಟ್ಟೆಯ ಭಾಗದಿಂದ ಹಿಡಿದು ಕರುಳಿನವರೆಗೂ ಖರ್ಜೂರ ಗಳ ಪ್ರಭಾವ ಇರುತ್ತದೆ. ಅಷ್ಟೇ ಅಲ್ಲದೆ ಮಧುಮೇಹ ಸಮಸ್ಯೆಯನ್ನು ಹೊಂದಿದವರು ಹಾಲಿಗೆ ಸಕ್ಕರೆ ಹಾಕಿಕೊಳ್ಳುವ ಬದಲು ಖರ್ಜೂರಗಳನ್ನು ಹಾಕಿ ಸೇವನೆ ಮಾಡಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಯಾವುದೇ ಕಾರಣಕ್ಕೂ ಏರಿಕೆ ಕಾಣುವುದಿಲ್ಲ.

ಕ್ಯಾಲ್ಸಿಯಂ ಭರಿತ ಖರ್ಜೂರ ಅತಿಸಾರವನ್ನು ನಿಲ್ಲಿಸಲು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪ್ರತಿದಿನ 3 ಖರ್ಜೂರವನ್ನು ನಿಯಮಿತವಾಗಿ ಸೇವಿಸಿದರೆ ಕರುಳಿನ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಅತಿಯಾದ ಕೆಮ್ಮು, ದೈಹಿಕ ಆಯಾಸ ಇತ್ಯಾದಿ ಸಮಸ್ಯೆಗಳಿಗೆ ಹಾಲಿನಲ್ಲಿ ನೆನೆಸಿದ ಖರ್ಜೂರ ಉತ್ತರವಾಗಿ ನಿಲ್ಲುತ್ತದೆ.

ಖರ್ಜೂರವನ್ನು ಜೇನುತುಪ್ಪ ಮತ್ತು ಉಗುರುಬೆಚ್ಚಗಿನ ತಾಪಮಾನದಲ್ಲಿರುವ ಬಿಸಿ ಹಾಲಿನಲ್ಲಿ ನೆನಸಬೇಕು.
ಇದು ಕಫವನ್ನು ಕಡಿಮೆ ಮಾಡುತ್ತದೆ ಮತ್ತು ದೀರ್ಘಕಾಲದಿಂದ ಇರುವ ಕೆಮ್ಮನ್ನು ಹೋಗಲಾಡಿಸುತ್ತದೆ.

ರಕ್ತ ಹೀನತೆ ಸಮಸ್ಯೆಯಿಂದ ಬಳಲುತ್ತಿರುವ ಗರ್ಭಿಣಿ ಮಹಿಳೆಯರು, ನರಗಳ ದೌರ್ಬಲ್ಯದಿಂದ ಬಳಲುತ್ತಿರುವ ಮಕ್ಕಳು ಹಾಗೂ ವೃದ್ಧರು ಜೊತೆಗೆ ನಿಮಿರುವಿಕೆಯ ಅಪಸಾಮಾನ್ಯ ಸಮಸ್ಯೆಯಿಂದ ಬಳಲುವ ಪುರುಷರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಸುಮಾರು 24 ಗಂಟೆಗಳ ಕಾಲ ಹಾಲಿನಲ್ಲಿ ನೆನೆಸಿದ ಖರ್ಜೂರ ಗಳನ್ನು ಸೇವನೆ ಮಾಡಬೇಕು.

ಅಜೀರ್ಣತೆ ಮತ್ತು ಎದೆಯುರಿ ಪರಿಹಾರವಾಗುತ್ತದೆ
ನಿಮ್ಮ ಮನೆಯಲ್ಲಿ ಒಂದು ವೇಳೆ ಕಪ್ಪು ಜೀರಿಗೆ ಲಭ್ಯವಿದ್ದರೆ, ಅದರ ಜೊತೆ ಒಣ ಖರ್ಜೂರಗಳನ್ನು ಚೆನ್ನಾಗಿ ಕುಟ್ಟಿ ಮಿಶ್ರಣ ಮಾಡಿಕೊಳ್ಳಿ.
ಆದರೆ ನೆನಪಿರಲಿ ಖರ್ಜೂರಗಳ ಪ್ರಮಾಣ ನೀವು ತೆಗೆದುಕೊಂಡ ಜೀರಿಗೆಗಿಂತ ದುಪ್ಪಟ್ಟಾಗಿ ಇರಬೇಕು. ಇದನ್ನು ಹಾಗೆ ಕೂಡ ತಿನ್ನಬಹುದು.

ಈ ಹಣ್ಣು ಕಣ್ಣಿನ ಆರೋಗ್ಯ ಹೆಚ್ಚಿಸುವ ವಿಟಮಿನ್ ಝೀಕ್ಸಾಥಿನ್ ಮತ್ತು ಲುಟೆಯಿನ್‍ಗಳನ್ನು ಒಳಗೊಂಡಿದೆ. ಈ ಎರಡು ವಿಟಮಿನ್‍ಗಳು ಕಣ್ಣಿನ ಮಕ್ಯುಲರ್ ಮತ್ತು ರೆಟಿನಲ್‍ನ ಆರೋಗ್ಯವನ್ನು ಕಾಪಾಡುತ್ತವೆ. ಅಲ್ಲದೆ ಅಕ್ಷಿಪಟಲಕ್ಕೆ ಉಂಟಾಗುವ ತೊಂದರೆಗಳನ್ನು ನಿಯಂತ್ರಿಸುತ್ತದೆ.

ರಾತ್ರಿ ಹಸುವಿನ ಹಾಲಿನಲ್ಲಿ ನೆನೆ ಹಾಕಿದ ಖರ್ಜೂರಗಳನ್ನು ಬೆಳಗಿನ ಸಮಯದಲ್ಲಿ ಬಾಣಂತಿ ಮಹಿಳೆಯರು ಸೇವನೆ ಮಾಡಬಹುದು ಮತ್ತು ತಮ್ಮ ಹಾಗೂ ತಮ್ಮ ಮಗುವಿನ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.

ಹಾಲಿನಲ್ಲಿ ನೆನೆಸಿದ ಖರ್ಜೂರಗಳನ್ನು ಸೇವನೆ ಮಾಡುವುದರಿಂದ ಸರಿಯಾದ ಪ್ರಮಾಣದಲ್ಲಿ ಹೃದಯಬಡಿತ ಇರುತ್ತದೆ ಎಂದು ಹೇಳುತ್ತಾರೆ. ಇದರಿಂದ ರಕ್ತದೊತ್ತಡ ಮತ್ತು ಮಧುಮೇಹ ಕೂಡ ಅಚ್ಚುಕಟ್ಟಾಗಿ ನಿಯಂತ್ರಣ ಆಗುತ್ತದೆ.

ಐದರಿಂದ ಎಂಟು ಖರ್ಜೂರಗಳನ್ನು ಅರ್ಧ ಲೀಟರ್ ಹಾಲಿನಲ್ಲಿ ನೆನೆಸಿ ಬೇಯಿಸಿ ಅದನ್ನು ತಣ್ಣಗಾದ ಮೇಲೆ ಬೆಳಗಿನ ಸಮಯದ ಖಾಲಿ ಹೊಟ್ಟೆಯಲ್ಲಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ಬೆಳಗಿನ ಉಪಾಹಾರದ ಸಮಯದಲ್ಲಿ ಬೇಕಾದರೂ ಇದನ್ನು ಸೇವನೆ ಮಾಡಬಹುದು.

ಬಿಪಿ ಇರುವವರಿಗೆ ತುಂಬಾ ಒಳ್ಳೆಯದು
ಯಾರು ಈಗಾಗಲೇ ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ, ಅಂತಹವರಿಗೆ ಸುಮಾರು 50ರಿಂದ 70 ಗ್ರಾಂ ಖರ್ಜೂರಗಳನ್ನು ಬೆಳಗಿನ ಸಮಯದ ಉಪಹಾರದ ಅರ್ಧಗಂಟೆ ಮುಂಚೆ ಹಾಲಿನಲ್ಲಿ ಹಾಕಿ ನೆನೆಸಿ ಸುಮಾರು
ಮೂರು ವಾರಗಳ ತನಕ ಸೇವನೆ ಮಾಡಲು ಕೊಡಬಹುದು. ಇದರಿಂದ ಕ್ರಮೇಣವಾಗಿ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.

ಖರ್ಜೂರ ತಿನ್ನುವುದರಿಂದ ಏನು ಲಾಭ ಇದೆ?
ಖರ್ಜೂರ, ಹಾಲು

ಒಂದು ಲೋಟ ಹಾಲು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಬಹುದು. ಇದು ಗ್ಯಾಸ್ಟ್ರಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಎಂದು ಹೇಳಬಹುದು.
ವಿಪರೀತ ದೈಹಿಕ ಆಯಾಸ ಪರಿಹಾರವಾಗುತ್ತದೆ
ಚೆನ್ನಾಗಿ ಆಹಾರ ಸೇವನೆ ಮಾಡಿದರೂ ಕೂಡ ಕೆಲವರಿಗೆ ದೈಹಿಕ ಆಯಾಸ ಮತ್ತು ಆಗಾಗ ನಿತ್ರಾಣ ಎದುರಾಗುವುದು ಸಾಮಾನ್ಯವಾಗಿರುತ್ತದೆ.
ಇದನ್ನು ಪರಿಹಾರ ಮಾಡಿಕೊಳ್ಳಲು ಖರ್ಜೂರಗಳನ್ನು ಹಾಲಿನಲ್ಲಿ ಹಾಕಿ ನೆನೆಸಿ ಅವುಗಳನ್ನು ಸೇವನೆ ಮಾಡುವ ಅಭ್ಯಾಸವಿಟ್ಟುಕೊಳ್ಳಬೇಕು. ಇದು ದೇಹಕ್ಕೆ ಹೊಸ ಚೈತನ್ಯ ಮತ್ತು ಹುರುಪನ್ನು ನೀಡುತ್ತದೆ.

ಖರ್ಜೂರಗಳನ್ನು ಸೇವನೆ ಮಾಡುವ ಬಾಣಂತಿ ಮಹಿಳೆಯರಿಗೆ ಮಗುವಿಗೆ ಹಾಲುಣಿಸಲು ಬೇಕಾದ ಪ್ರಮಾಣದಲ್ಲಿ ಹಾಲಿನ ಉತ್ಪತ್ತಿ ಆಗುತ್ತದೆ.

​ರಕ್ತಹೀನತೆಯಿಂದ ಬಳಲುತ್ತಿದ್ದವರು ಪ್ರತಿದಿನ ಖರ್ಜೂರವನ್ನು ತಿಂದರೆ ಸಮಸ್ಯೆ ಗುಣಮುಖವಾಗುತ್ತದೆ. ಪ್ರತಿ 100 ಗ್ರಾಂ ಖರ್ಜೂರದಲ್ಲಿ 0.90 ಗ್ರಾಂ ಕಬ್ಬಿಣಾಂಶ ಇದೆ. ಕೆಂಪು ರಕ್ತದ ಪ್ರಮಾಣವನ್ನು ಹೆಚ್ಚಿಸಿ ರಕ್ತಹೀನತೆಯ ಸೋಂಕನ್ನು ನಿವಾರಿಸುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಸುಭದ್ರ

ರೋಹಿಣಿ ದೇವಿಯಿಂದ ಜನಿಸಿದ ಸುಭದ್ರ

ಅಮೃತ ಬಳ್ಳಿ

ಹೆಸರಿನಲ್ಲಿದೆ ಅಮೃತ, ಬಳ್ಳಿಯಲ್ಲಿದೆ ಅಮೃತದ ಗುಣ : ಅಮೃತ ಬಳ್ಳಿ