ಮರಗೆಣಸು ದಕ್ಷಿಣ ಅಮೆರಿಕಾ ಮೂಲದ ಪೊದೆಯಂತಹ ಸಸ್ಯ. ಇದರ ಬೇರು ಆಹಾರ ಪದಾರ್ಥವಾಗಿ ಉಪಯೋಗಿಸಲ್ಪಡುತ್ತದೆ. ಭಾರತದಲ್ಲಿ ಮುಖ್ಯವಾಗಿ ಕೇರಳದಲ್ಲಿ ಉಪಯೋಗದಲ್ಲಿದೆ. ಇದು ಪ್ರಪಂಚದ ಮೂರನೆಯ ಮುಖ್ಯ ಶರ್ಕರಪಿಷ್ಟದ ಮೂಲವಾಗಿದೆ. ನೈಜೀರಿಯ ದೇಶದಲ್ಲಿ ಪ್ರಪಂಚದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ.ಇದರ ಎಲೆಯನ್ನು ಜಾನುವಾರು ಮೇವಾಗಿ ಕೂಡಾ ಉಪಯೋಗಿಸುತ್ತಾರೆ. ಮರಗೆಣಸು ಸಿಹಿ ಅಥವಾ ಕಹಿ ಇರುತ್ತದೆ.
ಒಂದು ಕಾಲದಲ್ಲಿ ಜನರು ಕಾಡಿನಲ್ಲಿ ಗಡ್ಡೆ ಗೆಣಸುಗಳನ್ನು ತಿಂದು ಜೀವನ ಮಾಡುತ್ತಿದ್ದರು. ಆ ಕಾಲದಲ್ಲಿ ಮನುಷ್ಯನಿಗೆ ಯಾವುದೇ ರೋಗ – ರುಜಿನಗಳು, ಕಾಯಿಲೆ – ಕಸಾಲೆಗಳು ಕಾಣಿಸುತ್ತಿರಲಿಲ್ಲ. ಚೆನ್ನಾಗಿ ಕೆಲಸ ಮಾಡಿಕೊಂಡು, ತಮ್ಮ ಪಾಡಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಇನ್ನು ತಮ್ಮ ದೇಹ ಸದೃಢತೆಯ ವಿಚಾರದಲ್ಲಿ ಸಹ ನಮಗೆ ಹೋಲಿಸಿದರೆ ತುಂಬಾ ಶಕ್ತಿವಂತರಾಗಿ ಕಾಣುತ್ತಿದ್ದರು.
ಉಷ್ಣವಲಯದಲ್ಲಿನ ಆಹಾರ ಕಾರ್ಬೋಹೈಡ್ರೇಟ್ಗಳು ಅಕ್ಕಿ ಮತ್ತು ಮೆಕ್ಕೆ ಜೋಳದ ನಂತರ ಮರಗೆಣಸು ಮೂರನೇ ಅತಿದೊಡ್ಡ ಮೂಲವಾಗಿದೆ. ಮರಗೆಣಸು ಅಭಿವೃದ್ಧಿಶೀಲ ಪ್ರಪಂಚದಲ್ಲಿ ಒಂದು ಪ್ರಮುಖ ಆಹಾರವಾಗಿದೆ ಅರ್ಧ ಬಿಲಿಯನ್ ಜನರಿಗೆ ಮೂಲಭೂತ ಆಹಾರ ಒದಗಿಸುತ್ತದೆ. ಇದು ಅತ್ಯಂತ ಬರ ಸಹಿಷ್ಣು ಬೆಳೆಗಳಲ್ಲಿ ಒಂದಾಗಿದೆ. ಕನಿಷ್ಠ ಮಣ್ಣಿನ ಮೇಲೆ ಬೆಳೆಸುವ ಸಾಮರ್ಥ್ಯವನ್ನು ಹೊಂದಿದೆ. ನೈಜೀರಿಯಾ, ವಿಶ್ವದ ಅತಿದೊಡ್ಡ ಮರಗೆಣಸಿನ ಉತ್ಪಾದಕ. ಹಾಗೆಯೇ ಥೈಲ್ಯಾಂಡ್ ಒಣಗಿದ ಮರಗೆಣಸಿನ ಅತಿದೊಡ್ಡ ರಫ್ತುದಾರನಾಗಿದೆ.
ಮರಗೆಣಸನ್ನು ಕೇರಳದಲ್ಲಿ ಹೆಚ್ಚು ಉಪಯೋಗಿಸುತ್ತಾರೆ. ಪ್ರಪಂಚದಲ್ಲೇ ಮೂರನೇ ಶರ್ಕರ ಪಿಷ್ಟ ಎಂಬ ಖ್ಯಾತಿ ಮರಗೆಣಸಿಗೆ ಇದೆ. ಮರಗೆಣಸಿನ ಎಲೆಯನ್ನು ಜಾನುವಾರುಗಳಿಗೆ ಮೇವಾಗಿ ಉಪಯೋಗಿಸುತ್ತಾರೆ. ಮರಗೆಣಸು ಸಿಹಿ ಅಥವಾ ಕಹಿ ಇರುತ್ತದೆ. ತಿನ್ನಲು ಸಾಮಾನ್ಯವಾಗಿ ಸಿಹಿ ಮರಗೆಣಸನ್ನು ಉಪಯೋಗಿಸುತ್ತಾರೆ.
ಕಾಡಿನಲ್ಲಿ ಸಿಗುವ ಗೆಡ್ಡೆ ಗೆಣಸುಗಳಿಗೆ ಮಾದರಿಯಾಗಿ ಮರ ಗೆಣಸುಗಳು ಇಂದು ನಮ್ಮನ್ನು ಅವುಗಳತ್ತ ಆಕರ್ಷಣೆ ಮಾಡುತ್ತಿವೆ. ಬೇಯಿಸಿದ ನಂತರ ತುಂಬಾ ರುಚಿಕರವಾಗಿ ಮತ್ತು ಅಷ್ಟೇ ಆರೋಗ್ಯ ಭರಿತವಾಗಿ ನಮಗೆ ಒಳ್ಳೆಯ ಪ್ರಯೋಜನಗಳನ್ನು ತಂದು ಕೊಡುತ್ತವೆ.
ಆಗಾಗ ಕಾಡುವ ತಲೆ ನೋವಿನ ಸಮಸ್ಯೆ ಇದ್ದವರು ಮರಗೆಣಸನ್ನು ಬೇಯಿಸಿ ಸೇವನೆ ಮಾಡಿದರೆ ಅದರಿಂದ ಪರಿಹಾರ ಕಾಣಬಹುದು ಎಂದು ಹೇಳಲಾಗಿದೆ. ಇಲ್ಲಾಂದ್ರೆ ಮರ ಗೆಣಸಿನ ಎಲೆಗಳು ಅಥವಾ ಅದರ ಬೇರುಗಳನ್ನು ಮೊದಲು ಚೆನ್ನಾಗಿ ಶುದ್ಧ ಮಾಡಿ ನೀರಿನಲ್ಲಿ ಸುಮಾರು ಎರಡು ಗಂಟೆಗಳ ಕಾಲ ನೆನೆ ಹಾಕಿ ನಂತರ ಅದರಿಂದ ಜ್ಯೂಸ್ ತಯಾರಿಸಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ ತಲೆ ನೋವಿನ ಸಮಸ್ಯೆ ದೂರಾಗುತ್ತದೆ.
ಇದು ನಿಮ್ಮ ಕೂದಲನ್ನು ಬೇರುಗಳಿಂದ ತುದಿಗಳವರೆಗೆ ಪೋಷಿಸುತ್ತದೆ, ಹೈಡ್ರೇಟ್ ಮಾಡುತ್ತದೆ ಮತ್ತು ಕೂದಲು ಉದುರುವಿಕೆಯನ್ನು ನಿಯಂತ್ರಿಸುತ್ತದೆ, ಕೂದಲು ಉದುರುವಿಕೆಗೆ ಮೂಲ ಕಾರಣ ಹಾರ್ಮೋನ್ ಆಗಿಲ್ಲದಿದ್ದರೆ.
ನಿಯಮಿತವಾಗಿ ಮರಗೆಣಸನ್ನು ಆಹಾರಕ್ರಮದಲ್ಲಿ ಸೇರಿಸಿಕೊಂಡರೆ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಮರಗೆಣಸಲ್ಲಿ ವಿಟಮಿನ್ ಎ ಅಂಶ ಅಧಿಕವಾಗಿದ್ದು, ಕಣ್ಣು ಮಂಜಾಗುವ ಸಮಸ್ಯೆ ದೂರವಾಗುತ್ತದೆ.
ಮರಗೆಣಸಿನಲ್ಲಿ ಅಧಿಕ ಪ್ರಮಾಣದ ನಾರಿನಾಂಶ ಇದ್ದು, ದೇಹದ ಜೀರ್ಣಕ್ರಿಯೆ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ. ಆಹಾರದಲ್ಲಿನ ವಿಷಕಾರಿ ಅಂಶಗಳನ್ನು ತೆಗೆದು ಹಾಕಿ ಜಠರ ನಾಳದ ಉರಿಯೂತವನ್ನು ಕಡಿಮೆ ಮಾಡುತ್ತದೆ.
ಮರಗೆಣಸಿನ ಸೇವನೆ ದೇಹದಲ್ಲಿನ ಕೊಬ್ಬಿನ ಅಂಶವನ್ನು ತೆಗೆದು ಹಾಕುತ್ತದೆ. ದೇಹದಲ್ಲಿ ಬೊಜ್ಜು ಶೇಖರಣೆ ಆಗದಂತೆ ತಡೆಯುತ್ತದೆ. ಪದೇ ಪದೇ ತಿನ್ನುವ ಬಯಕೆ ಕಡಿಮೆಯಾಗಿ ದೇಹದ ತೂಕ ನಿಯಂತ್ರಣಕ್ಕೆ ಬರುವಂತೆ ಮಾಡುತ್ತದೆ.
ಮಲಬದ್ಧತೆಯಿಂದ ಹಾಗೂ ಅಜೀರ್ಣತೆಯಿಂದ ಹೊಟ್ಟೆ ಹಸಿವು ಇರುವುದಿಲ್ಲ ಅಥವಾ ಮತ್ತು ಆಹಾರ ಸೇವಿಸಬೇಕು ಅನಿಸುವುದಿಲ್ಲ. ಇದರ ಜೊತೆಗೆ ತಾವು ಯಾವುದೇ ಕೆಲಸವನ್ನು ಮಾಡದೆ ಒಂದೇ ಕಡೆ ಕುಳಿತಿರುತ್ತಾರೆ. ಅಂತಹವರು ತಾವು ಸೇವಿಸುವ ಆಹಾರದಲ್ಲಿ ಮರ ಗೆಣಸಿನ ಸಣ್ಣ ಸಣ್ಣ ಚೂರುಗಳನ್ನು ಮಿಶ್ರಣ ಮಾಡಿ ಸೇವಿಸಿದರೆ ಜೀರ್ಣ ಶಕ್ತಿ ಹೆಚ್ಚಾಗಿ ಹೊಟ್ಟೆ ಹಸಿವು ವೃದ್ಧಿಯಾಗುತ್ತದೆ ಎಂದು ಹೇಳುತ್ತಾರೆ.
ಬಹಳ ದಿನಗಳಿಂದ ತುಂಬಾ ದಪ್ಪನಾದ ದೇಹ ಹೊಂದಿ ತಮ್ಮ ದೇಹದ ತೂಕವನ್ನು ಕರಗಿಸಲು ಕಷ್ಟ ಪಡುತ್ತಿರುವ ಮಂದಿಗೆ ಮರ ಗೆಣಸಿನ ಖಾದ್ಯಗಳು ಸಾಕಷ್ಟು ಪ್ರಯೋಜನಕಾರಿ ಅನುಭವ ಉಂಟು ಮಾಡುತ್ತವೆ.
ಇದಕ್ಕೆ ಕಾರಣ ಮರ ಗೆಣಸಿನಲ್ಲಿ ಲಭ್ಯವಿರುವ ಯಥೇಚ್ಛವಾದ ನಾರಿನ ಅಂಶ. ನಿತ್ಯ ನಿಯಮಿತವಾಗಿ ಮರ ಗೆಣಸಿನ ಸೇವನೆಯಿಂದ ಅದಕ್ಕೆ ಸಂಬಂಧ ಪಟ್ಟ ಸಾಕಷ್ಟು ಸಮಸ್ಯೆಗಳು ಬಗೆಹರಿಯುತ್ತವೆ.
ಅತಿ ಮುಖ್ಯವಾಗಿ ದೇಹದಲ್ಲಿ ಕೆಟ್ಟ ಕೊಬ್ಬಿನ ಅಂಶ ಮತ್ತು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅಂಶ ನಿವಾರಣೆಯಾಗಿ ದೇಹದಲ್ಲಿ ಬೊಜ್ಜು ಶೇಖರಣೆ ಆಗದಂತೆ ತಡೆಯುವ ಎಲ್ಲಾ ಗುಣಲಕ್ಷಣಗಳು ಮರಗೆಣಸಿನಲ್ಲಿದೆ. ಅಲ್ಲದೇ ಪದೇ ಪದೇ ತಿನ್ನುವ ಬಯಕೆ ಕಡಿಮೆಯಾಗಿ ದೇಹದ ತೂಕ ನಿಯಂತ್ರಣಕ್ಕೆ ಬರುತ್ತದೆ.
ಒಂದು ವೇಳೆ ನಿಮಗೆ ಅತಿಸಾರ, ಆಮಶಂಕೆ ಮತ್ತು ಬೇಧಿ ರೀತಿಯ ಸಮಸ್ಯೆಗಳು ಇದಕ್ಕಿದ್ದಂತೆ ಎದುರಾಗಿ ನಿಮ್ಮ ಜೀವನವನ್ನು ಹೈರಾಣಾಗಿಸಿದ್ದರೆ, ಮರ ಗೆಣಸಿನ ಬೇರುಗಳನ್ನು ಚೆನ್ನಾಗಿ ನೀರಿನಲ್ಲಿ ಕುದಿಸಿ ತಯಾರಾಗುವ ಗಂಜಿಯ ರೀತಿಯ ದ್ರವವನ್ನು ಕುಡಿಯಲು ಆಹಾರ ತಜ್ಞರು ಸಲಹೆ ಕೊಡುತ್ತಾರೆ.
ಮರಗೆಣಸಿನ ಎಲೆಗಳು, ಕಾಂಡ ಮತ್ತು ಬೇರುಗಳು ನಮ್ಮ ದೇಹದ ಮೇಲಿನ ಗಾಯಗಳ ನಿವಾರಣೆಯಲ್ಲಿ ಸಾಕಷ್ಟು ಪ್ರಭಾವ ಬೀರುತ್ತದೆ. ಅದರಲ್ಲೂ ಮರಗೆಣಸಿನ ಗಿಡದ ಬೇರುಗಳು ಅಂದರೆ ಮರ ಗೆಣಸುಗಳು ಗಾಯಗಳ ನಿವಾರಣೆ ಮಾಡುವುದು ಮಾತ್ರವಲ್ಲದೆ ಇನ್ನಿತರ ಸೋಂಕುಗಳಿಗೆ ಒಳಗಾಗದಂತೆ ಆಂತರಿಕವಾಗಿ ನಮ್ಮ ದೇಹಕ್ಕೆ ರಕ್ಷಣೆ ಕೊಡುತ್ತವೆ.
ಕೂದಲು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ
ನಿಮ್ಮ ಕೂದಲಿನ ಸ್ಥಿತಿಯಿಂದ ನೀವು ದಣಿದಿದ್ದರೆ, ವಿಶೇಷವಾಗಿ ಅದರ ನಿಧಾನಗತಿಯ ಬೆಳವಣಿಗೆಯಿಂದಾಗಿ, ನಾನು ಖಂಡಿತವಾಗಿಯೂ ಕಸಾವವನ್ನು ಶಿಫಾರಸು ಮಾಡುತ್ತೇನೆ. ಇದರ ಬೇರುಗಳು ಮತ್ತು ಎಲೆಗಳನ್ನು ತಾಜಾ ಪೇಸ್ಟ್ ಮಾಡಲು ಬಳಸಬಹುದು, ಅದನ್ನು ತೊಳೆಯುವ ಒಂದು ಗಂಟೆ ಮೊದಲು ಎಣ್ಣೆ ಸವರಿದ ಕೂದಲಿನ ಮೇಲೆ ಅನ್ವಯಿಸಬಹುದು. ವಾರದಲ್ಲಿ ಎರಡು ಬಾರಿ ಹೀಗೆ ಮಾಡುವುದರಿಂದ ಬದಲಾವಣೆಗಳನ್ನು ಕಾಣಬಹುದು.
ಬೇಸಿಗೆ ಕಾಲದಿಂದ ಮಳೆಗಾಲಕ್ಕೆ ಬದಲಾಗುತ್ತಿರುವ ವಾತಾವರಣದಲ್ಲಿ ನಮಗೆ ಸಣ್ಣ ಪುಟ್ಟ ನೆಗಡಿ, ಶೀತ, ಜ್ವರ ಕಾಣಿಸಿಕೊಳ್ಳುವುದು ಸಾಮಾನ್ಯ. ಹಾಗಾಗಿ ಈ ಸಮಯದಲ್ಲಿ ನಮ್ಮ ದೇಹವನ್ನು ಸಾಕಷ್ಟು ಜಾಗರೂಕತೆಯಿಂದ ರಕ್ಷಣೆ ಮಾಡಿಕೊಳ್ಳಬೇಕು.
ದೇಹದಲ್ಲಿನ ಪರಾವಲಂಬಿ ಜೀವಿಗಳು ಸಾಯುತ್ತವೆ
ನಮ್ಮ ದೇಹದಲ್ಲಿ ನಮಗೆ ಗೊತ್ತಿಲ್ಲದೆ ಹಲವಾರು ಸಣ್ಣ ಪುಟ್ಟ ಕ್ರಿಮಿಗಳು ಜೀವಿಗಳು ಜಂತು ಹುಳುಗಳು ವಾಸವಿರುತ್ತವೆ. ಸಾಮಾನ್ಯವಾಗಿ ನಮ್ಮ ಹೊಟ್ಟೆ ಮತ್ತು ಕರುಳಿನ ಭಾಗದಲ್ಲಿ ಇವುಗಳು ಕಂಡು ಬಂದು ನಮ್ಮ ಆಹಾರದ ಅಲ್ಪ ಭಾಗವನ್ನು ಸೇವಿಸಿ ಜೀವಿಸುತ್ತಿರುತ್ತಾರೆ.
ಕೆಲವೊಮ್ಮೆ ನಮ್ಮ ಆರೋಗ್ಯಕ್ಕೂ ಸಾಕಷ್ಟು ರೀತಿಯಲ್ಲಿ ತೊಂದರೆ ಉಂಟು ಮಾಡುವಂತಹ ಹುಳುಗಳು ಇವುಗಳೇ ಆಗಿರುತ್ತವೆ ಎಂದರೆ ಆಶ್ಚರ್ಯವಾಗುತ್ತದೆ. ಹಾಗಾಗಿ ಇವುಗಳ ನಿವಾರಣೆಗೆ ಕೇವಲ ಜಂತು ಹುಳದ ಔಷಧಿ ಕೆಲಸ ಮಾಡುವುದಿಲ್ಲ.
ಮರ ಗೆಣಸಿನ ಬೇರಿನ ಕಷಾಯ ಅಥವಾ ಗಂಜಿಯನ್ನು ಬೆಳಗಿನ ಖಾಲಿ ಹೊಟ್ಟೆಯಲ್ಲಿ ಕುಡಿದು ಸ್ವಲ್ಪ ಹೊತ್ತು ವಾಕಿಂಗ್ ಮಾಡಿ ನಂತರ ಮಲ ವಿಸರ್ಜನೆಗೆ ಹೋಗುವುದರಿಂದ ಸಾಕಷ್ಟು ಪರಿಣಾಮಕಾರಿಯಾಗಿ ಇವುಗಳಿಂದ ಮುಕ್ತಿ ಪಡೆಯಬಹುದು.
ಧನ್ಯವಾದಗಳು.
GIPHY App Key not set. Please check settings