in ,

ಇತಿಹಾಸದಲ್ಲಿ ಇಂದು ಭೊಪಾಲ್‌ ವಿಷಾನಿಲ ದುರಂತ ನಡೆದಿತ್ತು 

ಭೊಪಾಲ್‌ ವಿಷಾನಿಲ ದುರಂತ
ಭೊಪಾಲ್‌ ವಿಷಾನಿಲ ದುರಂತ

ಭಾರತದಲ್ಲಿ ೧೯೮೪ ರಲ್ಲಿ ನಡೆದ ಭೊಪಾಲ್‌ ವಿಷಾನಿಲ ದುರಂತವು ಮಾನವ ಸಮಾಜದ ಮಾಲಿನ್ಯ ಘಟನೆಯಾಗಿದೆ. ಯುನಿಯನ್‌ ಕಾರ್ಬೈಡ್‌ ಫ್ಯಾಕ್ಟರಿ (UCIL) ೧೯೬೮ ರಲ್ಲಿ ಸ್ಥಾಪನೆ ಆಗಿತ್ತು. ೧೯೮೪ ಡಿಸೆಂಬರ್ ೨-೩ರ ರಾತ್ರಿ ಮಿಥೈಲ್ ಐಸೋಸೈನೇಟ್ ಅನಿಲ ಸೋರಿಕೆಗೆ ಅನೇಕರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು.

ಭಾರತ ದೇಶದ ಹೃದಯದಂತಿರುವ ರಾಜ್ಯದ ರಾಜಧಾನಿ, ಸರೋವರಗಳ ನಗರ, ದೇಶದಲ್ಲೇ ಹಸಿರು ನಗರವೆಂಬ ಖ್ಯಾತಿಗೆ ಪಾತ್ರವಾಗಿದ್ದ ಸುಂದರ ಊರು, ಭಾರತದಲ್ಲಿರುವ ದೊಡ್ಡ ನಗರಗಳಲ್ಲೇ ಅದಕ್ಕೆ 16ನೇ ಸ್ಥಾನವಿದೆ, ಅಷ್ಟೇಕೆ ವಿಶ್ವದ ಅತೀದೊಡ್ಡ ನಗರಗಳ ಪಟ್ಟಿಯನ್ನು ನೋಡುವುದಾದರೆ ಅಲ್ಲೂ ಈ ನಗರದ ಹೆಸರು 131ನೇ ಸ್ಥಾನದಲ್ಲಿ ಕಾಣಸಿಗುತ್ತದೆ.

1984ನೇ ಇಸವಿಯ ಡಿಸೆಂಬರ್ 3ರ ಬೆಳ್ಳಂಬೆಳಿಗ್ಗೆ ಇಲ್ಲಿನ ಕ್ರಿಮಿನಾಶಕ ತಯಾರಿಕಾ ಕಂಪೆನಿ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ ನ (UCIL) ಸ್ಥಾವರದಿಂದ ಹೊರಬಿದ್ದ ಮಿಥೈಲ್ ಐಸೋಸೈನೇಟ್ ಎಂಬ ವಿಷಾನಿಲವು ಭೋಪಾಲ ನಗರದ ಸ್ವಚ್ಛ ಗಾಳಿಯನ್ನು ಸೇರಿ ಆ ನಗರದ ಸುತ್ತ ಮುತ್ತಲಿನ ಜನರು ಮತ್ತು ಪ್ರಾಣಿ-ಪಕ್ಷಿಗಳ ಶ್ವಾಸಕೋಶವನ್ನು ಹೊಕ್ಕು ಬಹುದೊಡ್ಡ ವಿನಾಶಕ್ಕೆ ಮುನ್ನುಡಿ ಬರೆಯಿತು.

ಇತಿಹಾಸದಲ್ಲಿ ಇಂದು ಭೊಪಾಲ್‌ ವಿಷಾನಿಲ ದುರಂತ ನಡೆದಿತ್ತು 
ಎಂ ಆರ್ ಪಿ ಎಲ್ ನಲ್ಲಿ ಅನಿಲ ಸೋರಿಕೆಯ ಸ್ಮರಣಾರ್ಥ ಅಣುಕು  ಪ್ರದರ್ಶನ

ಆವತ್ತು ಅಲ್ಲಿ ಏನಾಗಿತ್ತು?

ಅನಿಲ ಹೊರಸೂಸುವಿಕೆಯ ಅಪಾಯದ ಸಂದರ್ಭದಲ್ಲಿ ಸುರಕ್ಷತಾ ಸಾಧನವಾಗಿ ಕಾರ್ಯನಿರ್ವಹಿಸಬೇಕಾಗಿದ್ದ ವೆಂಟ್ ಗ್ಯಾಸ್ ಸ್ಕ್ರಬ್ಬರ್ ಸಾಧನ ಆ ದಿನ ಕಾರ್ಯನಿರ್ವಹಿಸದ ಸ್ಥಿತಿಯಲ್ಲಿತ್ತು.

ಇಷ್ಟೆಲ್ಲಾ ಆಗುವಷ್ಟರಲ್ಲಿ ಎಲ್ಲವೂ ಕೈಜಾರಿತ್ತು ಮತ್ತು ಸರಿಸುಮಾರು 30 ಟನ್ ಗಳಷ್ಟು ಮಿಥೇಲ್ ಐಸೋಸೈನೇಟ್ ಅನಿಲ ಇ610 ಟ್ಯಾಂಕಿನ ಭದ್ರ ಗರ್ಭವನ್ನು ಬೇಧಿಸಿ ಕೇವಲ 45 ರಿಂದ 60 ನಿಮಿಷಗಳ ಒಳಗೆ ಭೋಪಾಲ್ ಪಟ್ಟಣದ ಸ್ವಚ್ಛ ಪರಿಸರಕ್ಕೆ ಹರಡಿಕೊಂಡು ಬಿಟ್ಟಿತ್ತು.

ಅಪಾಯದ ಮುನ್ಸೂಚನೆಯನ್ನು ಅರಿತ ಪ್ಲ್ಯಾಂಟ್ ಉದ್ಯೋಗಿಯೊಬ್ಬ ಅದಾಗಲೇ ಎರಡು ಅಲರಾಂಗಳನ್ನು ಮೊಳಗಿಸಿಬಿಟ್ಟಿದ್ದ. ಒಂದು ಕಂಪೆನಿಯೊಳಗ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರಿಗೆ ಎಚ್ಚರಿಕೆ ಸೂಚನೆಯಾಗಿ ಹಾಗೂ ಇನ್ನೊಂದು ಭೋಪಾಲ್ ನಗರದ ನಿವಾಸಿಗಳಿಗೆ ಅಪಾಯದ ಮುನ್ಸೂಚನೆಯನ್ನು ಕೊಡುವ ಸಲುವಾಗಿ.

ಇಷ್ಟುಹೊತ್ತಿಗಾಗಲೇ ಈ ಪ್ಲ್ಯಾಂಟ್ ನ ಸಮೀಪದಲ್ಲೇ ಇದ್ದ ಖೋಲಾ ಎಂಬ ಪ್ರದೇಶದ ಜನರಿಗೆ ಮಧ್ಯರಾತ್ರಿ 1 ಗಂಟೆಯಷ್ಟೊತ್ತಿಗಾಗಲೇ ಗ್ಯಾಸ್ ಸೋರಿಕೆಯ ಸಣ್ಣ ವಾಸನೆ ಬರಲಾರಂಭಿಸಿತ್ತು.

UCIL ಹಾಗೂ ಸ್ಥಳೀಯಾಡಳಿತಗಳ ನಡುವೆ ಸಮಂಜಸ ಹೊಂದಾಣಿಕೆಯ ಕೊರತೆಯಿಂದ ಸೋರಿಕೆಯಾಗಿರುವ ರಾಸಾಯನಿಕ ಅನಿಲವಾದರೂ ಯಾವುದು ಎಂಬ ಮಾಹಿತಿ ಸರಿಯಾಗಿ ಲಭಿಸಿರಲೇ ಇಲ್ಲ. ಇದರಿಂದಾಗಿ ಇನ್ನು ಕೆಲವೇ ಹೊತ್ತಿನಲ್ಲಿ ನಗರದಲ್ಲಿರುವ ಹಮೀದಿಯಾ ಆಸ್ಪತ್ರೆಯಲ್ಲಿ ಬಂದು ಸೇರಬಹುದಾಗಿದ್ದ ಸಂತ್ರಸ್ತರಿಗೆ ಸೂಕ್ತ ಚಿಕಿತ್ಸೆಗೂ ವ್ಯವಸ್ಥೆ ಮಾಡಿಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಪ್ರಾರಂಭದಲ್ಲಿ ಅಮೋನಿಯಾ ಸೋರಿಕೆಯಾಗಿದೆ ಎಂದು ಶಂಕಿಸಲಾಗಿದ್ದರೆ ಬಳಿಕ ಫಾಸ್ಜೇನ್ ಎಂದು ಶಂಕಿಸಲಾಯಿತು. ಆದರೆ ಅಲ್ಲಿ ನಿಜವಾಗಿಯೂ ಗಾಳಿಯ ಒಡಲು ಸೇರಿದ್ದಿದ್ದು ಇವೆರಡಕ್ಕಿಂತ ಹತ್ತುಪಟ್ಟು ಅಪಾಯಕಾರಿಯಾಗಿದ್ದ ಮಿಥೇಲ್ ಐಸೋಸೈನೇಟ್.

ಇತಿಹಾಸದಲ್ಲಿ ಇಂದು ಭೊಪಾಲ್‌ ವಿಷಾನಿಲ ದುರಂತ ನಡೆದಿತ್ತು 
ಅನಿಲ ದುರಂತಕ್ಕೆ 36 ವರ್ಷ: ಇನ್ನೂ ನ್ಯಾಯಕ್ಕಾಗಿ ಕಾಯುತ್ತಿರುವ ಸಂತ್ರಸ್ತರು ಇದ್ದಾರೆ

ಭೂಪಾಲ ಅನಿಲ ಸೋರಿಕೆ ದುರಂತದ ಸಂತ್ರಸ್ತರಿಗೆ ಇಪ್ಪತ್ತೆರಡು ವರ್ಷಗಳ ನಂತರ ಪರಿಹಾರ ಧನದ ಕೊನೆಯ ಕಂತು ಲಭಿಸಿದೆ.

ಸುರಕ್ಷತೆಯ ವ್ಯವಸ್ಥೆಗಳು ಒಂದು ಸೋರಿಕೆಯನ್ನು ಉಂಟುಮಾಡುವುದರಿಂದ ಆ ಪ್ರಮಾಣದ ರಾಸಾಯನಿಕ ಪ್ರತಿಕ್ರಿಯೆಯನ್ನು ತಡೆಗಟ್ಟುವುದಕ್ಕೆ ಸಾಧ್ಯವಾಗಲಿಲ್ಲ ಎಂದು ಕಂಪನಿಯು ಒಪ್ಪಿಕೊಂಡಿದೆ. ಕಾರ್ಬೈಡ್ನ ಪ್ರಕಾರ, “ಸಸ್ಯದ ಸುರಕ್ಷತಾ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸುವುದರಲ್ಲಿ, ಈ ಪ್ರಮಾಣದ ರಾಸಾಯನಿಕ ಕ್ರಿಯೆಯು ಕಾರಣವಾಗಲಿಲ್ಲ” ಏಕೆಂದರೆ “ಟ್ಯಾಂಕ್ನ ಅನಿಲ ಸಂಗ್ರಹಣಾ ವ್ಯವಸ್ಥೆಯು ಅಷ್ಟು ದೊಡ್ಡ ಪ್ರಮಾಣದ ನೀರನ್ನು ಸ್ವಯಂಚಾಲಿತವಾಗಿ ವ್ಯವಸ್ಥೆಯಲ್ಲಿ ಪರಿಚಯಿಸುವುದನ್ನು ತಡೆಯಲು ವಿನ್ಯಾಸಗೊಳಿಸಲಾಗಿದೆ” ಮತ್ತು “ಪ್ರಕ್ರಿಯೆ ಸುರಕ್ಷತೆ ವ್ಯವಸ್ಥೆಗಳು-ಸ್ಥಳದಲ್ಲಿ ಮತ್ತು ಕಾರ್ಯಾಚರಣೆಯು ನೀರನ್ನು ಆಕಸ್ಮಿಕವಾಗಿ ಪ್ರವೇಶಿಸುವುದನ್ನು ತಡೆಗಟ್ಟಿದೆ”. ಬದಲಾಗಿ, “ನೌಕರರ ವಿಧ್ವಂಸಕ-ದೋಷಯುಕ್ತ ವಿನ್ಯಾಸ ಅಥವಾ ಕಾರ್ಯಾಚರಣೆ ಅಲ್ಲ-ದುರಂತದ ಕಾರಣವಾಗಿದೆ” ಎಂದು ಅವರು ಹೇಳಿದರು.

ಧನ್ಯವಾದಗಳು.

What do you think?

-1 Points
Upvote Downvote

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಸಾಸಿವೆ ಎಣ್ಣೆಯಿಂದ ಆರೋಗ್ಯ

ಸಾಸಿವೆ ಎಣ್ಣೆಯಿಂದ ಆರೋಗ್ಯ ಉಪಚಾರ

ಮರಗೆಣಸು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ

ಮರಗೆಣಸು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ, ಮುಖ್ಯವಾಗಿ ಕೇರಳದಲ್ಲಿ  ಹೆಚ್ಚು ಉಪಯೋಗದಲ್ಲಿದೆ