in ,

ಕ್ಯಾರಟ್ ದೇಹದ ಪೂರ್ಣ ಆರೋಗ್ಯಕ್ಕೆ ಸೂಕ್ತವಾದ ತರಕಾರಿ

ಕ್ಯಾರಟ್ ದೇಹದ ಪೂರ್ಣ ಆರೋಗ್ಯಕ್ಕೆ
ಕ್ಯಾರಟ್ ದೇಹದ ಪೂರ್ಣ ಆರೋಗ್ಯಕ್ಕೆ

ಕ್ಯಾರೆಟ್ ವಿಶ್ವದ ಅತ್ಯಂತ ವ್ಯಾಪಕವಾಗಿ ಬಳಸಲಾಗುವ ಮತ್ತು ಪ್ರಮುಖವಾದ ತರಕಾರಿಗಳಿಲ್ಲಿ ಒಂದಾಗಿದೆ, ಏಕೆಂದರೆ ಅವು ಬೆಳೆಯುವುದು ಸುಲಭ ಹಾಗೂ ವಿವಿಧ ಭಕ್ಷ್ಯಗಳು ಮತ್ತು ಸಾಂಸ್ಕೃತಿಕ ಪಾಕಪದ್ಧತಿಗಳಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತವೆ.

ಗ್ರೀಕ್ ಭಾಷೆಯ “ಕರಟಾನ್” ಪದದಿಂದ ಬಂದಿದೆ. ಸಂಯುಕ್ತ ರಾಷ್ಟ್ರಗಳ ಕೃಷಿ ಇಲಾಖೆಯ ಪ್ರಕಾರ ಒಂದು ಕ್ಯಾರೆಟ್ ಅಥವಾ ಕತ್ತರಿಸಿದ ಅರ್ಧ ಕಪ್ ಕ್ಯಾರೆಟ್‍ನಲ್ಲಿ 25 ಕ್ಯಾಲೊರಿ, 6 ಗ್ರಾಂ ಕಾರ್ಬೋಹೈಡ್ರೇಟ್, 3 ಗ್ರಾಂ ಸಕ್ಕರೆ ಮತ್ತು 1 ಗ್ರಾಂ ಪ್ರೋಟಿನ್ ದೊರೆಯುತ್ತದೆಯಂತೆ. ಕ್ಯಾರೆಟ್‍ನಲ್ಲಿ ವಿಟಮಿನ್ ಎ, ಕ್ಯಾಲ್ಸಿಯಂ, ಕಬ್ಬಿಣಾಂಶ, ವಿಟಮಿನ್ ಇ, ನಾರಿನಂಶ, ವಿಟಮಿನ್ ಕೆ, ಪೊಟಾಶಿಯಂ, ವಿಟಮಿನ್ ಸಿ, ಪೊಟಾಶಿಯಂ, ಮೆಗ್ನಿಶಿಯಂ, ಫೋಲೆಟ್, ಮ್ಯಾಂಗನೀಸ್, ವಿಟಮಿನ್ ಇ ಮತ್ತು ಸತು ಇರುತ್ತದೆಯಂತೆ. ಸಾಮಾನ್ಯವಾಗಿ ಕೇಸರಿ ಬಣ್ಣ ಇರುವಂತೆ ತಯಾರಿಸುವ, ಆಹಾರಗಳಲ್ಲಿ ಕೇಸರಿ ಬಣ್ಣಕ್ಕೆ ಗಜ್ಜರಿಯೇ ಪ್ರಥಮ ಆಯ್ಕೆ. ಆದರೆ ಇವು ಕೇವಲ ಕೇಸರಿ ಬಣ್ಣದಲ್ಲಿ ಮಾತ್ರವಲ್ಲ, ಹಳದಿ, ಬಿಳಿ, ಕೆಂಪು ಮತ್ತು ನೇರಳೆ ಬಣ್ಣದ ಗಜ್ಜರಿಗಳೂ ಇವೆ.

ಕ್ಯಾರಟ್ ದೇಹದ ಪೂರ್ಣ ಆರೋಗ್ಯಕ್ಕೆ ಸೂಕ್ತವಾದ ತರಕಾರಿ
ಕೆಂಪು ಕ್ಯಾರೆಟ್

ಕ್ಯಾರೆಟ್ಟುಗಳ ಜೀವಕೋಶಗಳ ಹೊರಕೋಶ ಹೆಚ್ಚು ದೃಢವಾಗಿದ್ದು ಒಳಗಿನ ಪೋಷಕಾಂಶಗಳನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಕ್ಯಾರೆಟ್ಟುಗಳನ್ನು ಬೇಯಿಸುವ ಮೂಲಕ ಈ ಪದರ ಮೃದುವಾಗಿ ಕರಗಿ ಹೋಗುತ್ತದೆ, ತನ್ಮೂಲಕ ಪೋಷಕಾಂಶಗಳನ್ನು ಜೀರ್ಣೀಸಿಕೊಳ್ಳಲು ಸುಲಭವಾಗುತ್ತದೆ.

ಕ್ಯಾರೆಟ್ ಪ್ರಮುಖ ತರಕಾರಿಗಳಲ್ಲಿ ಒಂದಾಗಿದೆ. ರುಚಿಯಾದ ಮತ್ತು ಗರಿಗರಿಯ ಅನುಭವ ನೀಡುವ ಕ್ಯಾರೆಟ್ ನ್ನು ಎಲ್ಲರೂ ಇಷ್ಟಪಡುತ್ತಾರೆ. ಈ ತರಕಾರಿ ಜೀವಸತ್ವಗಳು, ಖನಿಜಗಳು ಮತ್ತು ಫೈಬರ್ನಲ್ಲಿ ಸಮೃದ್ಧವಾಗಿದೆ. ಕಣ್ಣು, ಚರ್ಮ, ಹೃದಯ, ಜೀರ್ಣಕ್ರಿಯೆಗೆ ಇದು ಉಪಯೋಗಕಾರಿಯಾಗಿದೆ.

ಸೋಂಕನ್ನು ತಡೆಗಟ್ಟಲು ಕ್ಯಾರೆಟ್ ಉತ್ತಮ ಗಿಡಮೂಲಿಕೆ. ಕ್ಯಾರೇಟ್ನ್ನು ಬೇಯಿಸಿ ಅಥವಾ ಹಾಗೆಯೇ ಸೇವಿಸಬಹುದು.

ಕ್ಯಾರೆಟ್ ವಿಟಮಿನ್ ಎ ಮತ್ತು ಬೀಟಾ-ಕ್ಯಾರೋಟಿನ್ ನ ಅತ್ಯುತ್ತಮ ಮೂಲವಾಗಿದೆ. ಈ ಪೋಷಕಾಂಶಗಳ ಜೊತೆಗೆ ಇದು ವಿಟಮಿನ್ ಸಿ, ಲುಟೀನ್, ಜಿಯಾಕ್ಸಾಂಥಿನ್, ವಿಟಮಿನ್ ಕೆ, ಡಯೆಟರಿ ಫೈಬರ್ ಇತ್ಯಾದಿಗಳ ಉತ್ತಮ ಮೂಲವಾಗಿದೆ.

ಕ್ಯಾರೆಟ್ಟುಗಳಲ್ಲಿ ಕರಗುವ ನಾರು ಹೆಚ್ಚಿನ ಪ್ರಮಾಣದಲ್ಲಿದ್ದು ಇವುಗಳ ಸೇವನೆಯಿಂದ ಸಕ್ಕರೆ ಹಾಗೂ ಪಿಷ್ಟದ ಜೀರ್ಣಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತದೆ ಹಾಗೂ ಈ ಮೂಲಕ ರಕ್ತದಲ್ಲಿ ಸಕ್ಕರೆಯನ್ನು ನಿಧಾನವಾಗಿ ಪ್ರವಹಿಸಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಕ್ಯಾರೆಟ್ಟುಗಳಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಸಹಾ ಇದೆ. ಇವುಗಳು ಮಲಬದ್ದತೆಯಾಗದಂತೆ ನೆರವಾಗುತ್ತವೆ ಹಾಗೂ ಕರುಳುಗಳಲ್ಲಿ ಆಹಾರದ ಚಲನೆ ಸುಲಭವಾಗಿಸಿ ಆರೋಗ್ಯ ವೃದ್ದಿಸುತ್ತವೆ. ಅಲ್ಲದೇ ಇವುಗಳು ನಿಧಾನವಾಗಿ ಸಕ್ಕರೆಯನ್ನು ರಕ್ತಕ್ಕೆ ಸೇರಿಸುವುದರಿಂದ ಇವುಗಳ ಗ್ಲೈಸೆಮಿಕ್ ಕೋಷ್ಟಕದ ಮಟ್ಟವೂ ಕಡಿಮೆಯೇ ಇದೆ.

ಕ್ಯಾರಟ್ ದೇಹದ ಪೂರ್ಣ ಆರೋಗ್ಯಕ್ಕೆ ಸೂಕ್ತವಾದ ತರಕಾರಿ
ಕಪ್ಪು ಕ್ಯಾರೆಟ್

ಕ್ಯಾರೆಟ್‍ಗಳು ಅರಿವಿನ ಬೆಳಲವಣಿಗೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತವೆ. ಅದರಲ್ಲಿರುವ ಲುಟಿಯೋಲಿನ್ ಎಂಬ ಸಂಯುಕ್ತ ,ಮೆದುಳಿನ ಉರಿಯೂತ ಮತ್ತು ವಯಸ್ಸಾದಂತೆ ಕ್ರಮೇಣ ಬರುವ ಮರೆವನ್ನು ತಡೆಯುತ್ತದೆ.

ಶ್ವಾಸಕೋಶದ ಕ್ಯಾನ್ಸರ್ , ಸ್ತನ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ ದೂರ ಮಾಡಲು ಕ್ಯಾರೆಟ್ ಸಹಾಯ ಮಾಡುತ್ತದೆ.

ಒಂದು ಕಪ್ ಕ್ಯಾರೆಟ್‌ಗಳು ಕಡಿಮೆ ಪ್ರಮಾಣದ ಕ್ಯಾಲೊರಿಗಳನ್ನು ನೀಡುತ್ತದೆ ಅಲ್ಲದೆ ಇದರಲ್ಲಿರುವ ಪೋಷಕಾಂಶಗಳು ಹೆಚ್ಚು ಸಮಯ ಹೊಟ್ಟೆ ತುಂಬಿರುವ ಅನುಭವ ನೀಡುತ್ತದೆ.  ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಆಹಾರದಲ್ಲಿ ಕ್ಯಾರೆಟ್ಗಳನ್ನು ಸೇರಿಸಲು ಪ್ರಯತ್ನಿಸಿ.

ಮಕ್ಕಳಲ್ಲಿನ ಅತಿಸಾರವನ್ನು ಕ್ಯಾರೆಟ್ ಬಹುಬೇಗನೆ ಮತ್ತು ಪರಿಣಾಮಕಾರಿಯಾಗಿ ಗುಣಪಡಿಸುತ್ತದೆ. ಅದಕ್ಕಾಗಿ, ದಿನಕ್ಕೆ ಹಲವು ಬಾರಿ ಕ್ಯಾರೆಟ್ ಸೂಪ್ ಅಥವಾ ಜ್ಯೂಸ್ ಕುಡಿಯಿರಿ.

ಕ್ಯಾರೆಟ್‌ನಲ್ಲಿರುವ ವಿಟಮಿನ್ ಸಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಕ್ಯಾರೆಟ್ ತರಕಾರಿಗಳಲ್ಲಿರುವ ವಿಟಮಿನ್ ಎ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸಹ ಬೆಂಬಲಿಸುತ್ತದೆ ಮತ್ತು ಲೋಳೆಯ ಪೊರೆಗಳ ರಚನೆ ಮತ್ತು ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಇದು ದೇಹದಿಂದ ಸೂಕ್ಷ್ಮಜೀವಿಗಳನ್ನು ಹೊರಗಿಡಲು ತಡೆಗೋಡೆಗಳಾಗಿ ಕಾರ್ಯನಿರ್ವಹಿಸುತ್ತದೆ.

ಕ್ಯಾರೆಟ್ಟುಗಳಲ್ಲಿರುವ ಅವಶ್ಯಕ ಪೋಷಕಾಂಶಗಳು ಕೂದಲನ್ನು ಬುಡದಿಂದ ದೃಢಗೊಳಿಸಿ ಕೂದಲ ಬೆಳವಣಿಗೆಗೆ ನೆರವಾಗುತ್ತದೆ. ಅಲ್ಲದೇ ಕ್ಯಾರೆಟ್ಟುಗಳಲ್ಲಿರುವ ವಿಟಮಿನ್ ಸಿ, ಮತ್ತು ಇ ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ.

ಲಿವರ್‍ನಿಂದ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಕೊಬ್ಬನ್ನು ನಿವಾರಿಸಲು ಹಾಗೂ ದೇಹದಲ್ಲಿನ ವಿಷಕಾರಿ ಅಮಶಗಳನ್ನು ಹೊರ ಹಾಕಲು ಕ್ಯಾರೆಟ್ ಸಹಕರಿಸುತ್ತದೆ.

ಊಟವಾದ ಬಳಿಕ ಹಸಿ ಕ್ಯಾರೆಟ್ ಜಗಿಯಿರಿ, ಹಲ್ಲನ್ನು ಅವು ಸ್ವಚ್ಚಗೊಳಿಸುತ್ತವೆ ಮತ್ತು ದುರ್ವಾಸನೆಯನ್ನು ನಿವಾರಿಸುತ್ತವೆ. ಹಲ್ಲು ಹುಳುಕಾಗಂತೆ ತಡೆಯುತ್ತವೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ರಾಶ್ ಬಿಹಾರಿ ಬೋಸ್ ಅವರ ಪುಣ್ಯತಿಥಿ

ಜನವರಿ 21ರಂದು, ರಾಶ್ ಬಿಹಾರಿ ಬೋಸ್ ಅವರ ಪುಣ್ಯತಿಥಿ

ಮಹಾ ವಿಷ್ಣು ವಿನಿಂದ ಸಂಹರಿಸಲ್ಪಟ್ಟ ಇಬ್ಬರು ದೈತ್ಯ ರಾಕ್ಷಸರು

ಮಹಾ ವಿಷ್ಣು ವಿನಿಂದ ಸಂಹರಿಸಲ್ಪಟ್ಟ ಇಬ್ಬರು ದೈತ್ಯ ರಾಕ್ಷಸರು ಮಧು ಮತ್ತು ಕೈಟಭ