in ,

ಎದೆಹಾಲು ಹೆಚ್ಚಿಸಿಕೊಳ್ಳಲು ಕೆಲವು ಆಹಾರಗಳು

ತಾಯಿ ಮಗು
ತಾಯಿ ಮಗು

ಮಗುವಿಗೆ ತಾಯಿಯ ಎದೆ ಹಾಲು ಅಮೃತಕ್ಕೆ ಸಾಮಾನ. ಎದೆ ಹಾಲು ಇಲ್ಲದೆ ಬೆಳೆಯುವ ಮುಗುವು ಸಾಕಷ್ಟು ಆರೋಗ್ಯ ಸಮಸ್ಯೆಗೆ ಒಳಗಾಗುವುದು. ತಾಯಿ ಸೇವಿಸುವ ಆಹಾರಗಳಿಂದಲೇ ತಯಾರಾಗುವ ಹಾಲು ಮಗುವಿಗೆ ಜೀವಾಮೃತ ವಾಗುತ್ತದೆ. ಮಗುವಿನ ಹಸಿವನ್ನು ತಣಿಸುವಷ್ಟು ಎದೆಹಾಲಿನ ಪೂರೈಕೆ ಇದ್ದರೆ ಮಗುವು ಆರೋಗ್ಯವಾಗಿ ಬೆಳೆಯುವುದರ ಜೊತೆಗೆ ಮೆದುಳು, ಜೀರ್ಣಾಂಗ ವ್ಯವಸ್ಥೆ, ಮೂಳೆಗಳು ಗಟ್ಟಿಯಾಗುತ್ತಾ ಹೋಗುತ್ತವೆ. ಎಲ್ಲದಕ್ಕೂ ಹೆಚ್ಚಾಗಿ ಮಗುವಿಗೆ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವುದು.

ಗಟ್ಟಿ ಪದಾರ್ಥಗಳನ್ನು ಮತ್ತು ಘನಾಹಾರಗಳನ್ನು ಸೇವಿಸಲು ಸಾಧ್ಯವಾಗದಂತಹ ಪುಟ್ಟ ಕಂದನಿಗೆ ತಾಯಿಯ ಎದೆಹಾಲು ಶ್ರೇಷ್ಠವಾದ ಅಮೃತ ಇದ್ದಂತೆ . ಅನೇಕ ಪೋಷಕಾಂಶಗಳನ್ನು ಹೊತ್ತ ಎದೆಹಾಲು ಮಗುವಿಗೆ ರಕ್ಷಾಕವಚವೇ ಸರಿ . ಎದೆಹಾಲಿನಲ್ಲಿ ಪ್ರೊಟೀನ್ , ಕಾರ್ಬೊಹೈಡ್ರೇಡ್ , ವಿಟಮಿನ್ ಗಳಂತಹ ಮಹಾಪೂರವೇ ಇದೆ . ಮಗುವಿನ ಮಾನಸಿಕ , ದೈಹಿಕ ಮತ್ತು ರೋಗನಿರೋಧಕ ಶಕ್ತಿಯ ಬೆಳವಣಿಗೆಗೆ ಇದು ಬಹಳಷ್ಟು ಸಹಕಾರಿ . ಮಗುವಿನ ದೇಹದೊಳಗಿನ ಎಳೆಯ ಮೂಳೆಗಳಿಗೆ ಕೂಡ ಇದು ಬಹಳಷ್ಟು ಉಪಕಾರಿ . ಸಸ್ತನಿ ಗ್ರಂಥಿಗಳ ಮೂಲಕ ಉತ್ಪತ್ತಿಯಾಗುವ ಹಾಲನ್ನು ಮಗು ಹುಟ್ಟಿದ ಅರ್ಧ ಗಂಟೆಯ ಒಳಗೆ ಮಗುವಿಗೆ ಉಣಿಸಲೇಬೇಕು ಎಂಬ ನಿಯಮವಿದೆ .

ಎದೆಹಾಲು ಹೆಚ್ಚಿಸಿಕೊಳ್ಳಲು ಕೆಲವು ಆಹಾರಗಳು
ತಾಯಿ ಮಗು

ಮಗುವಿನ ಹೊಟ್ಟೆ ಹಸಿವನ್ನು ನೀಗಿಸಲು ಮಗುವಿಗೆ ಶಕ್ತಿ ಒದಗಿಸಲು ಅಗತ್ಯವಾದಷ್ಟು ಹಾಲನ್ನು ತಾಯಿ ತನ್ನಲ್ಲಿ ಉತ್ಪತ್ತಿ ಮಾಡಲೇಬೇಕು . ಇಲ್ಲವೆಂದರೆ ಮಗು ಶಕ್ತಿ ಹೀನವಾಗಿ ಅದರಲ್ಲಿ ರೋಗ ನಿರೋಧಕ ಶಕ್ತಿ ಕೂಡ ಕುಂದು ಹೋಗಿ ಮಗು ನಾನಾ ರೋಗಗಳಿಗೆ ತುತ್ತಾಗುತ್ತದೆ . ಆದರೆ ಹಲವಾರು ತಾಯಂದಿರ ಪರಿಸ್ಥಿತಿ ಹಾಗಿರುವುದಿಲ್ಲ . ಏಕೆಂದರೆ ಕೆಲವರಿಗೆ ತನ್ನ ಮಗುವಿಗಷ್ಟೇ ಅಲ್ಲದೆ ಬೇರೆ ಮಗುವಿಗೂ ಕೊಡುವಷ್ಟು ಜಾಸ್ತಿ ಹಾಲು ಉತ್ಪತ್ತಿ ಆದರೆ ಇನ್ನೂ ಕೆಲವರಿಗೆ ತನ್ನದೇ ಆದ ಒಂದು ಮಗುವಿಗೂ ಕೊಡಲು ಹಾಲಿರುವುದಿಲ್ಲ . ತಾಯಂದಿರಿಗೆ ಹಾಲು ಉತ್ಪತ್ತಿ ಆಗಲು ‘ ಪ್ರೊಲಾಕ್ಟಿನ್ ‘ ಮತ್ತು ‘ ಒಕ್ಸಿಟೋಸಿನ್ ‘ ಎಂಬ ಎರಡು ಹಾರ್ಮೋನುಗಳ ಸರಿಯಾದ ಕಾರ್ಯ ನಿರ್ವಹಣೆ ಬಹಳ ಅವಶ್ಯಕ . ಹಾಲಿನ ಶೇಖರಣೆ ಮತ್ತು ನೀಡುವಿಕೆಯಲ್ಲಿ ವ್ಯತ್ಯಾಸವಾಗುವುದು ಈ ಎರಡು ಹಾರ್ಮೋನುಗಳಿಂದಲೇ . ಈ ಹಾರ್ಮೋನುಗಳ ಅಸಮತೋಲನದಿಂದ ಅನೇಕ ತಾಯಂದಿರು ತಮ್ಮ ಮಗುವಿನ ದಷ್ಟ ಪುಷ್ಟವಾದ ಬೆಳವಣಿಗೆಗೆ ಆಹಾರದ ರೂಪದಲ್ಲಿ ಇರುವ ಹಾಲನ್ನು ಕೊಡಲಾಗುತ್ತಿಲ್ಲ ಎಂದು ಹವಣಿಸುತ್ತಾರೆ . ಹಾಲಿಲ್ಲದೆ ಮಕ್ಕಳನ್ನು ಸುಧಾರಿಸುವುದು ಬಹಳ ಕಷ್ಟವಾದ ಕೆಲಸವೇ ಸರಿ . ಆದ್ದರಿಂದ ಮನೆಯಲ್ಲೇ ಮಗುವಿಗೆ ಬೇಕಾದ ಹಾಲನ್ನು ತನ್ನಲ್ಲಿ ಉತ್ಪತ್ತಿಗೊಳಿಸಲು ಕೆಲವೊಂದು ಆಹಾರಗಳು ಇಲ್ಲಿವೆ.

ಮೆಂತೆಕಾಳು
ಮೆಂತೆ ಕಾಳಿನಲ್ಲಿ ‘ ಫೈಟೋ ಈಸ್ಟ್ರೋಜೆನ್ ‘ ಮತ್ತು ‘ ಗ್ಯಾಲಾಕ್ಟ್ಯಾಗೊಗ್ ‘ ಅಂಶಗಳು ಹೆಚ್ಚಾಗಿದ್ದು ನವಜಾತ ಶಿಶುವಿಗೆ ಮತ್ತು ತಾಯಂದಿರ ಲೋಕಕ್ಕೆ ಆಗ ತಾನೇ ಕಾಲಿಟ್ಟಿರುವ ತಾಯಿಯರಿಗೆ ಬಹಳ ಉಪಯುಕ್ತ . ಎದೆ ಹಾಲು ಕ್ರಮೇಣ ಹೆಚ್ಚು ಮಾಡುವ ಅನೇಕ ಪದಾರ್ಥಗಳಲ್ಲಿ ಮೆಂತ್ಯ ಕಾಳುಗಳೂ ಇವೆ .
1 ಟೀ ಸ್ಪೂನ್ ಮೆಂತ್ಯ ಕಾಳು
1 ಕಪ್ ನೀರು .
ಸ್ವಲ್ಪ ಜೇನು ತುಪ್ಪ ರುಚಿಗೆ .

ಎದೆಹಾಲು ಹೆಚ್ಚಿಸಿಕೊಳ್ಳಲು ಕೆಲವು ಆಹಾರಗಳು
ಮೆಂತೆಕಾಳು

ತಯಾರು ಮಾಡುವುದು
ಮೊದಲು ನೀರು ಕುದಿ ಬರುವವರೆಗೆ ಕಾಯಿಸಿ . ಅದಕ್ಕೆ ಒಂದು ಟೀ ಸ್ಪೂನ್ ಮೆಂತ್ಯ ಕಾಳು ಸೇರಿಸಿ ಮತ್ತೆ ಚೆನ್ನಾಗಿ ಕುದಿಸಿ . ಸ್ಟವ್ ಆರಿಸಿ ಮೆಂತ್ಯ ಕಾಳುಗಳನ್ನು ನೀರಿನಿಂದ ಬೇರೆ ಮಾಡಿ . ಈ ನೀರನ್ನು ಸ್ವಲ್ಪ ಆರಲು ಬಿಟ್ಟು ಕುಡಿಯಲು ಯೋಗ್ಯವಾದಷ್ಟು ಬಿಸಿ ಇರುವಾಗ ಅದಕ್ಕೆ ಸ್ವಲ್ಪ ಜೇನು ತುಪ್ಪ ಸೇರಿಸಿ ಚೆನ್ನಾಗಿ ಕಲಸಿ . ದಿನಕ್ಕೆ 3 ಬಾರಿ ಈ ನೀರನ್ನು ಸೇವಿಸುತ್ತಾ ಬನ್ನಿ . ಎದೆ ಹಾಲು ನಿಧಾನವಾಗಿ ಹೆಚ್ಚಾಗುತ್ತಾ ಬರುತ್ತದೆ .

ಶುಂಠಿ

ಶುಂಠಿ ಬಹುತೇಕ ಎಲ್ಲದಕ್ಕೂ ಪರಿಹಾರವೆಂದು ತೋರುತ್ತದೆ. ಹಾಲುಣಿಸುವ ತಾಯಂದಿರಿಗೆ ಇದು ನಿಜವಾಗಿಯೂ ಸಹಾಯ ಮಾಡುತ್ತದೆ. ಎದೆ ಹಾಲು ಉತ್ಪಾದನೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಶುಂಠಿ ಹೊಂದಿದೆ. ತಾಜಾ ಶುಂಠಿ ಆಹಾರ ಕ್ರಮಕ್ಕೆ ಬಹಳ ಪರಿಣಾಮಕಾರಿ ಸೇರ್ಪಡೆಯಾಗಿದೆ ಮತ್ತು ಸರಿಯಾಗಿ ಸೇವಿಸಿದಾಗ ತಾಯಂದಿರು ಮತ್ತು ಅವರ ಮಕ್ಕಳಿಗೆ ಸುರಕ್ಷಿತವಾಗಿದೆ.

ನುಗ್ಗೆಕಾಯಿ
ನುಗ್ಗೆ ಕಾಯಿಯಲ್ಲಿ ಬೇಕಾದಷ್ಟು ಪೋಷಕಾಂಶಗಳಿವೆ ಎಂದು ನಮಗೆಲ್ಲಾ ತಿಳಿದೇ ಇದೆ . ಇದು ತಾಯಂದಿರಿಗೆ ಕೂಡ ಬಹಳ ಅನುಕೂಲ . ಅವರ ಸಸ್ತನಿ ಗ್ರಂಥಿಗಳನ್ನು ಉತ್ತೇಜಿಸಿ ಹಾಲು ಉತ್ಪತ್ತಿ ಮಾಡುವಂತೆ ಪ್ರೇರೇಪಿಸುತ್ತದೆ . ನುಗ್ಗೆ ಕಾಯಿ ಜ್ಯೂಸು ಕುಡಿದರೆ ದೇಹದಲ್ಲಿ ರಕ್ತ ಸಂಚಾರ ಮೊದಲಿಗಿಂತ ವೃದ್ಧಿಯಾಗುತ್ತದೆ .
1 / 2 ಕಪ್ ಫ್ರೆಶ್ ಆದ ನುಗ್ಗೆ ಕಾಯಿ ಜ್ಯೂಸು .
ಪ್ರತಿ ದಿನ 1 / 2 ಕಪ್ ನುಗ್ಗೆ ಕಾಯಿ ಜ್ಯೂಸು ಅನ್ನು ಊಟ ಆದ ಮೇಲೆ ಸೇವಿಸುತ್ತಾ ಬನ್ನಿ .

ಬೆಳ್ಳುಳ್ಳಿ
ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುವ ಮತ್ತು ಪೋಷಕಾಂಶಗಳನ್ನು ಒದಗಿಸುವ ಆಹಾರ ವಸ್ತು ಬೆಳ್ಳುಳ್ಳಿ. ಇದು ಗ್ಯಾಲಕ್ಟಾಗೋಗ್ (ಎದೆಹಾಲಿನ ಹರಿವನ್ನು ಹೆಚ್ಚಿಸುವ ಆಹಾರ) ಎನ್ನುವ ಅಂಶವನ್ನು ಸಮೃದ್ಧವಾಗಿ ಪಡೆದುಕೊಂಡಿದೆ. ಬೆಳ್ಳುಳ್ಳಿ ನೈಸರ್ಗಿಕವಾಗಿ ಬಲವಾದ ವಾಸನೆಯನ್ನು ಪಡೆದುಕೊಂಡಿರುತ್ತದೆ. ಇದರ ಸೇವನೆಯಿಂದ ಎದೆ ಹಾಲಿನ ಪ್ರಮಾಣ ಹೆಚ್ಚಾಗುವುದು. ಆದರೆ ಹಾಲು ಸಹ ಬೆಳ್ಳುಳ್ಳಿಯ ವಾಸನೆ ಹೊಂದುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ತುಳಸಿ
ತುಳಸಿ ವೈದ್ಯಕೀಯ ಶಾಸ್ತ್ರ ಹಾಗೂ ಧಾರ್ಮಿಕ ವಿಷಯದಲ್ಲಿ ಅತ್ಯಂತ ಶ್ರೇಷ್ಠ ಸ್ಥಾನವನ್ನು ಪಡೆದುಕೊಂಡಿದೆ. ತುಳಸಿಯ ಪ್ರಯೋಜನಗಳು ಅಪಾರ. ಅದ್ಭುತ ಶಕ್ತಿಯನ್ನು ಹೊಂದಿರುವ ತುಳಸಿಯು ತಾಯಿಯ ಎದೆಹಾಲನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಎದೆಹಾಲಿನ ಸಮಸ್ಯೆಯನ್ನು ಎದುರಿಸುತ್ತಿರುವ ಮಹಿಳೆಯರು ತುಳಸಿ ಎಲೆಯ ಕಷಾಯ ಅಥವಾ ಚಹಾದಲ್ಲಿ ತುಳಸಿ ಎಲೆಯನ್ನು ಸೇರಿಸಿ, ಸವಿಯಬಹುದು. ತುಳಸಿ ಎಲೆಯು ಹಾಲಿನ ಉತ್ಪಾದನೆ ಹೆಚ್ಚಿಸುವುದರ ಜೊತೆಗೆ ಕರುಳಿನ ಚಲನೆಯನ್ನು ಸಹ ಉತ್ತೇಜಿಸುತ್ತದೆ.

ಪಪ್ಪಾಯ
ಎಲ್ಲಾ ಕಾಲ ಮಾನದಲ್ಲೂ ಸಾಮಾನ್ಯವಾಗಿ ದೊರೆಯುವ ಹಣ್ಣು ಪಪ್ಪಾಯ. ಈ ಹಣ್ಣು ಪ್ರಸವದ ನಂತರ ತಾಯಿಗೆ ಅದ್ಭುತ ಪೋಷಣೆ ಹಾಗೂ ಪೋಷಕಾಂಶಗಳನ್ನು ನೀಡುತ್ತದೆ. ಇದರಲ್ಲಿ ಗ್ಯಾಲಕ್ಟಾಗೋಗ್ ಪ್ರಮಾಣ ಅಧಿಕವಾಗಿದ್ದು, ಎದೆಹಾಲನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ತಾಯಂದಿರು ಪ್ರಸವದ ನಂತರ ಪಪ್ಪಾಯ ಹಣ್ಣನ್ನು ಜೂಸ್ ಮೂಲಕ, ಸಲಾಡ್‍ನ ರೀತಿಯಲ್ಲಿ, ಆಹಾರ ಪದಾರ್ಥಗಳನ್ನು ತಯಾರಿಸಿ ಅಥವಾ ಕಚ್ಚಾ ಹಣ್ಣುಗಳನ್ನು ಸಹ ಹಾಗೆಯೇ ತಿನ್ನಬಹುದು. ಮಗುವಿನ ಬೆಳವಣಿಗೆಗೆ, ಕಣ್ಣುಗಳ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ.

ಬಾದಾಮಿ

ಎದೆಹಾಲು ಹೆಚ್ಚಿಸಿಕೊಳ್ಳಲು ಕೆಲವು ಆಹಾರಗಳು
ಬಾದಾಮಿ


ಬಾದಾಮಿಯು ಕೊಂಚ ದುಬಾರಿಯಾಗಿರಬಹುದು. ಆದರೆ ಅದರಲ್ಲಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿವೆ. ಇದನ್ನು ನಿತ್ಯವೂ ಗಣನೀಯವಾಗಿ ಸೇವಿಸಿದರೆ ತಾಯಿಯ ಎದೆಹಾಲು ಹೆಚ್ಚುವುದು. ಜೊತೆಗೆ ಮಗುವಿನ ಬೆಳವಣಿಗೆಗೆ ಬೇಕಾದ ಪ್ರೋಟೀನ್ ಮತ್ತು ಪೋಷಕಾಂಶವು ದೊರೆಯುವುದು. ಬಾಣಂತಿಯರು ಬಾದಾಮಿಯನ್ನು ನೀರಿನಲ್ಲಿ ನೆನೆಸಿ ಸವಿಯಬಹುದು. ಇಲ್ಲವೇ ಬಾದಾಮಿ ಪುಡಿಯನ್ನು ಹಾಲಿನಲ್ಲಿ ಬೆರೆಸಿಕೊಂಡು ಕುಡಿಯಬಹುದು.

ಹಾಲು
ಹಾಲಿನಲ್ಲಿ ಸಮೃದ್ಧವಾದ ಫೋಲಿಕ್ ಆಮ್ಲ, ಕ್ಯಾಲ್ಸಿಯಂ, ಆರೋಗ್ಯಕರವಾದ ಕೊಬ್ಬುಗಳು ಅಧಿಕವಾಗಿರುತ್ತವೆ. ಅವು ಮಗುವಿನ ಬೆಳವಣಿಗೆ ಹಾಗೂ ತಾಯಿಯ ಎದೆಹಾಲಿನ ಉತ್ಪಾದನೆಗೆ ಸಹಾಯ ಮಾಡುತ್ತದೆ. ತಾಯಿ ಅಧಿಕ ಹಾಲನ್ನು ಕುಡಿಯುವುದರಿಂದ ಮಗುವಿಗೆ ಮಗುವಿಗೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ಸಮತೋಲನದಲ್ಲಿ ಇಡುವಂತೆ ಮಾಡುತ್ತದೆ. ಹಾಗಾಗಿ ಎದೆಹಾಲನ್ನು ಹೆಚ್ಚಿಸಿಕೊಳ್ಳಲು ತಾಯಂದಿರು ದಿನಕ್ಕೆ ಎರಡು ಗ್ಲಾಸ್ ಹಾಲನ್ನು ಕುಡಿಯಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

ದಿನ ಭವಿಷ್ಯ : 27, ಏಪ್ರಿಲ್‌ 2022 ದೈನಂದಿನ ರಾಶಿ ಭವಿಷ್ಯ

ದಿನ ಭವಿಷ್ಯ : 27, ಏಪ್ರಿಲ್‌ 2022 ದೈನಂದಿನ ರಾಶಿ ಭವಿಷ್ಯ

ಕಲಂಗಡಿ ಹಣ್ಣು ಇವತ್ತಿ ತಿನ್ನಿ ಜನ್ಮದಲ್ಲಿ ಈ ಸಮಸ್ಯೆಗಳು ಇರಲ್ಲ.

ಕಲಂಗಡಿ ಹಣ್ಣು ಇವತ್ತಿ ತಿನ್ನಿ ಜನ್ಮದಲ್ಲಿ ಈ ಸಮಸ್ಯೆಗಳು ಇರಲ್ಲ.