in ,

ಟೊಮೋಟೊ ಇಲ್ಲದ ಅಡುಗೆ ಕಮ್ಮಿ

ಟೊಮೋಟೊ
ಟೊಮೋಟೊ

ಟೊಮೇಟೊ ಸೋಲನೇಸಿ ಕುಟುಂಬಕ್ಕೆ ಸೇರಿದ ಒಂದು ಗಿಡ. ಮೂಲ – ಮಧ್ಯ ಅಮೇರಿಕ ಹಾಗೂ ದಕ್ಷಿಣ ಅಮೇರಿಕ. ಇದು ಅಲ್ಪಾಯುಶಿ ಗಿಡ – ವರ್ಷಕ್ಕೊಮ್ಮೆ ಬೆಳೆಯಲಾಗುತ್ತದೆ. ೧ – ೩ ಮೀ ಎತ್ತರ ಬೆಳೆಯುವ ಈ ಗಿಡ ತೆಳು ಕಾಂಡವನ್ನು ಹೊಂದಿದ್ದು ಉಳಿದ ಗಿಡಗಳ ಮೇಲೆ ಸುಲಭವಾಗಿ ಹರಡಿಕೊಳ್ಳುತ್ತದೆ. ಇದರ ಎಲೆಗಳು ೧೦-೨೫ ಸೆ ಮೀ ಉದ್ದವಿದ್ದು, ಎಲೆಗಳ ಮಧ್ಯೆ ತೆಳು ಪದರಗಳಿದ್ದು, ೮ -೯ಸೆ ಮೀ ನಷ್ಟು ಅಗಲವುಳ್ಳ ೫ – ೯ ಎಲೆಗಳ ಗುಂಪಿನಂತೆ ಕಾಣಸಿಗುತ್ತವೆ.

ಟೊಮೇಟೊ ಹೇಗೋ ದಕ್ಷಿಣ ಅಮೇರಿಕಕ್ಕೆ ಹೊರಗಿನಿಂದ ಬಂದದ್ದು ಎಂದು ಹೇಳಲಾಗುತ್ತದೆ. ಮಾಯಾ ಮತ್ತು ಇತರ ಪಂಗಡಗಳ ಜನ ಈ‌ ಹಣ್ಣನ್ನು ಅಡುಗೆಯಲ್ಲುಪಯೋಗಿಸುತ್ತಿದ್ದರಂತೆ. ದಕ್ಷಿಣ ಮೆಕ್ಸಿಕೊದಲ್ಲಿ ೧೬ನೇ ಶತಮಾನದಲ್ಲಿ ಇದನ್ನು ಬೆಳೆಸುತ್ತಿದ್ದರಂತೆ.

ಅನೇಕ ಭಕ್ಷ್ಯಗಳು, ಸಾಸ್ಗಳು, ಸಲಾಡ್ಗಳು ಮತ್ತು ಪಾನೀಯಗಳಲ್ಲಿನ ಒಂದು ಅಂಶವಾಗಿ ಕಚ್ಚಾ ಸೇರಿದಂತೆ ಟೊಮೇಟೊ ವೈವಿಧ್ಯಮಯ ರೀತಿಯಲ್ಲಿ ಸೇವಿಸಲಾಗುತ್ತದೆ. ಟೊಮೆಟೊಗಳು ಸಸ್ಯವಿಜ್ಞಾನದ ಬೆರ್ರಿ-ರೀತಿಯ ಹಣ್ಣುಗಳಾಗಿರುತ್ತವೆಯಾದರೂ, ಅವುಗಳನ್ನು ಪಾಕಶಾಲೆಯ ತರಕಾರಿಗಳನ್ನು ರುಚಿಕರವಾದ ಊಟಕ್ಕೆ ಅಥವಾ ಘಟಕಾಂಶದ ಆಹಾರವಾಗಿ ಭಕ್ಷ್ಯವಾಗಿ ಪರಿಗಣಿಸಲಾಗುತ್ತದೆ. ವರ್ಷವಿಡೀ ಅದರ ಉತ್ಪಾದನೆಗೆ ಹಸಿರುಮನೆಗಳನ್ನು ಅನುಮತಿಸುವ ಮೂಲಕ ಹಲವಾರು ವಿಧದ ಟೊಮೆಟೊಗಳನ್ನು ವ್ಯಾಪಕವಾಗಿ ಪ್ರಪಂಚದಾದ್ಯಂತ ಸಮಶೀತೋಷ್ಣ ಹವಾಮಾನಗಳಲ್ಲಿ ಬೆಳೆಯಲಾಗುತ್ತದೆ.

ಟೊಮೋಟೊ ಇಲ್ಲದ ಅಡುಗೆ ಕಮ್ಮಿ
ಟೊಮೋಟೊ ಬೆಳೆ

ಭಾರತದಲ್ಲಿ ಟೊಮೆಟೊ ಬೆಳೆಯನ್ನು ಸುಮಾರು 880 ಸಾವಿರ ಹೆಕ್ಟೇರ್‌ ಭೂ ವಿಸ್ತೀರ್ಣದಲ್ಲಿ ಬೆಳೆಯಲಾಗುತ್ತದೆ. ಪ್ರತಿ ಹೆಕ್ಟೇರ್‌ಗೆ 20.7 ಮೆಟ್ರಿಕ್ ಟನ್ ಸರಾಸರಿ ಉತ್ಪತ್ತಿಯಿಂದ ಒಟ್ಟು 18,227 ಸಾವಿರ ಮೆಟ್ರಿಕ್ ಟನ್ ಉತ್ಪಾದನೆಯೊಂದಿಗೆ ವಿಶ್ವದ ಒಟ್ಟು ಉತ್ಪಾದನೆಯಲ್ಲಿ ದ್ವಿತೀಯ ಸ್ಥಾನ ಪಡೆದಿದೆ.

ಅಡುಗೆಗೆ ಮಾತ್ರವಲ್ಲದೇ ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಕಾರಣ, ಟೊಮೆಟೊಗೆ ಎಲ್ಲಾ ಕಾಲದಲ್ಲಿಯೂ ಬೇಡಿಕೆ ಇದ್ದದ್ದೇ. ಹೀಗೆ ಬಹು ಬೇಡಿಕೆಯಿರುವ ಟೊಮೆಟೊಗೆ ಕಾಯಿ ಕೊರೆಯುವ ಹುಳುಗಳು ಬಹು ದೊಡ್ಡ ಸವಾಲು. ಈ ಕೀಟಗಳು ಸುಮಾರು ಶೇ 50ಕ್ಕಿಂತಲೂ ಹೆಚ್ಚು ಬೆಳೆನಾಶಪಡಿಸಿ ದೊಡ್ಡ ಮೊತ್ತದ ನಷ್ಟ ಉಂಟುಮಾಡುತ್ತದೆ.

ಅರೋಗ್ಯಕ್ಕೆ ಟೊಮೆಟೋ :

ಪ್ರತಿ ಮುಂಜಾನೆ ತಿಂಡಿಗೂ ಮುನ್ನ ಒಂದೆರಡು ಟೊಮೆಟೊ ತಿಂದು ಬೊಜ್ಜನ್ನು ಕರಗಿಸಿಕೊಳ್ಳಬಹುದು. ಟೊಮೆಟೊ ಪ್ರತಿನಿತ್ಯ ಸೇವಿಸಿದರೆ ಹೃದಯವನ್ನು, ಲಿವರನ್ನು ಉತ್ತಮ ಸ್ಥಿತಿಯಲ್ಲಿಡುತ್ತದೆ. ಸೂರ್ಯ ಕಿರಣಗಳಿಂದಾಗುವ ಚರ್ಮದ ತೊಂದರೆಗಳನ್ನು ಕೂಡ ಟೊಮೆಟೊ ದೂರವಿಡುತ್ತದೆ. ಅಲ್ಲದೆ ಗರ್ಭಿಣಿಯರು ಟೊಮೆಟೊವನ್ನು ಸರಿಯಾದ ಪ್ರಮಾಣದಲ್ಲಿ ಸೇವನೆ ಮಾಡಿದರೆ ಶಿಶುವನ್ನು ನರ ಸಂಬಂಧ ಕಾಯಿಲೆಯಿಂದ ದೂರವಿಡಲು ನೆರವಾಗುತ್ತದೆ.

ಟೊಮೆಟೊದಲ್ಲಿರುವ ಲಿಕೊಪೀನ್ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ. ವಿಶೇಷವಾಗಿ ಕೊಲೊನ್, ಸ್ತನಗಳು ಮತ್ತು ಶ್ವಾಸಕೋಶಗಳಲ್ಲಿ. ಆಂಟಿಆಕ್ಸಿಡೆಂಟ್ಗಳು ದೇಹದಲ್ಲಿ ಮತ್ತಷ್ಟು ಕಾರ್ಸಿನೋಜೆನಿಕ್ ಪ್ರತಿಕ್ರಿಯೆಗಳು ನಿಲ್ಲಿಸುತ್ತವೆ.

ಟೊಮೆಟೋ ಗರ್ಭಿಣಿ ಮಹಿಳೆಯರಿಗೆ ತುಂಬಾ ಒಳ್ಳೆಯದು. ಇದರಲ್ಲಿರುವ ಪೋಷಕಾಂಶಗಳು ಮಗು ಮತ್ತು ಮಹಿಳೆ ಇಬ್ಬರಿಗೂ ಅತ್ಯಗತ್ಯ. ಅದಕ್ಕಾಗಿಯೇ ಗರ್ಭಿಣಿಯರು ತಮ್ಮ ಆಹಾರದಲ್ಲಿ ಟೊಮೆಟೋವನ್ನು ಹೆಚ್ಚು ತೆಗೆದುಕೊಳ್ಳಬೇಕು.

ಇದರಲ್ಲಿ ಇರುವಂತಹ ಸೋಂಕು ನಿವಾರಕ ಅಂಶಗಳು ಅತಿಸಾರದಿಂದ ದೇಹವನ್ನು ರಕ್ಷಿಸುವುದು ಮತ್ತು ಕಿಡ್ನಿಯಲ್ಲಿ, ಮೂತ್ರಕೋಶದ ಕಲ್ಲುಗಳು ಆಗದಂತೆ ತಡೆಯುವುದು. ಮೂತ್ರಕೋಶದಲ್ಲಿನ ಸಮಸ್ಯೆಗಳನ್ನು ಇದು ನಿವಾರಣೆ ಮಾಡುವುದು.

ಟೊಮೋಟೊ ಇಲ್ಲದ ಅಡುಗೆ ಕಮ್ಮಿ
ಟೊಮೋಟೊ

ಟೊಮೆಟೊದಲ್ಲಿರುವ ಲಿಕೊಪೀನ್ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ. ವಿಶೇಷವಾಗಿ ಕೊಲೊನ್, ಸ್ತನಗಳು ಮತ್ತು ಶ್ವಾಸಕೋಶಗಳಲ್ಲಿ. ಆಂಟಿಆಕ್ಸಿಡೆಂಟ್ಗಳು ದೇಹದಲ್ಲಿ ಮತ್ತಷ್ಟು ಕಾರ್ಸಿನೋಜೆನಿಕ್ ಪ್ರತಿಕ್ರಿಯೆಗಳು ನಿಲ್ಲಿಸುತ್ತವೆ.

ಟೊಮೆಟೋ ಆರೋಗ್ಯಕ್ಕೆ ಹಾಗೂ ಚರ್ಮಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರುವ ಲೈಕೋಪೀನ್ ಸೂರ್ಯನ ಹಾನಿಕಾರಕ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಟೊಮೆಟೋ ರಸವನ್ನು ಚರ್ಮದ ಮೇಲೆ ಹಚ್ಚಿದರೆ, ಚರ್ಮದ ಹೊಳಪು ಹೆಚ್ಚಾಗುತ್ತದೆ ಮತ್ತು ಚರ್ಮ ಮೃದುವಾಗುತ್ತದೆ.

ರಕ್ತದ ಹೆಪ್ಪುಗಟ್ಟುವಿಕೆಯಿಂದ ಉಂಟಾಗುವ ಹೃದಯ ಕಾಯಿಲೆಯಿಂದಾಗಿ ಅನೇಕ ಸಾವುಗಳು ಸಂಭವಿಸಿರುವ ವರದಿಗಳಿವೆ. ಟೊಮೆಟೊ ಈ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಟೊಮ್ಯಾಟೊ ಬೀಜಗಳು ಫ್ರಟ್ಲೋ ಎಂಬ ದಪ್ಪ ಲೋಳೆಯ ಪದರದಿಂದ ಸುತ್ತುವರಿದಿದೆ. ಲಿಕೊಪೀನ್ ಮತ್ತು ಫ್ರೂಟ್ಲೊವು ರಕ್ತದ ಯಾವುದೇ ಹೆಪ್ಪುಗಟ್ಟುವಿಕೆ ರಚನೆಯನ್ನು ತಡೆಗಟ್ಟಲು ಮತ್ತು ಅನಿರ್ಬಂಧಿಸುತ್ತದೆ.

ಟೊಮೆಟೊಗಳ ಬೀಜಗಳು ಕೊಲೆಸ್ಟರಾಲ್ ಅನ್ನು ಹೊಂದಿರುವುದಿಲ್ಲ. ಬದಲಾಗಿ, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ನೆರವಾಗುವ ನಾರನ್ನು ಹೊಂದಿರುತ್ತವೆ. ಇದರಲ್ಲಿರುವ ಪೊಟ್ಯಾಶಿಯಂ ಯಾವುದೇ ಹೃದಯ ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ.

ಸಿಗರೇಟ್ ನ ಧೂಮದಿಂದಾಗಿ ದೇಹದಲ್ಲಿ ಉಂಟಾಗುವಂತಹ ಕ್ಯಾನ್ಸರ್ ಕಾರಕ ಅಂಶಗಳಿಂದ ಟೊಮೆಟೊದಲ್ಲಿ ಇರುವಂತಹ ಕೂಮರಿಕ್ ಆಮ್ಲ ಮತ್ತು ಕ್ಲೋರೊಜೆನಿಕ್ ಆಮ್ಲ ರಕ್ಷಿಸುವುದು.

ಟೊಮೆಟೊ ರಸ ಹೊಟ್ಟೆಯನ್ನು ಸ್ವಚ್ಛ ಮಾಡುತ್ತದೆ. ಅಜೀರ್ಣ, ವಾಯು, ಮಲಬದ್ಧತೆ ಟೊಮೆಟೊ ನಿವಾರಿಸುತ್ತದೆ. ಟೊಮೆಟೊದಲ್ಲಿ ಕಬ್ಬಿಣ ಅಂಶವಿರುತ್ತದೆ. ಆದ್ದರಿಂದ ರಕ್ತಹೀನತೆಯಿಂದ ಬಳಲುತ್ತಿದ್ದವರಿಗೆ ಇದು ಒಳ್ಳೆಯ ಮದ್ದಾಗಿದೆ.

ಟೊಮೆಟೊದಲ್ಲಿ ಫೈಬರ್ ಸಮೃದ್ಧವಾಗಿದ್ದು ಕರುಳನ್ನು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಟೊಮ್ಯಾಟೋ ದಲ್ಲಿ ವಿಟಮಿನ್-ಸಿ ಸಮೃದ್ಧವಾಗಿದೆ ಇದು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

ಸಪ್ತರ್ಷಿಗಳು

ಸಪ್ತರ್ಷಿಗಳು ಯಾರು?

ಗೋಡಂಬಿ

ಗೋಡಂಬಿ ಯಾರಿಗೆ ತಾನೆ ಇಷ್ಟ ಇಲ್ಲ?