in

ಆಹಾರದಲ್ಲಿ ನೇರಳೆ ಬಣ್ಣದ ಹಣ್ಣು-ತರಕಾರಿಗಳನ್ನು ಸೇರಿಸಿ

ನೇರಳೆ ಬಣ್ಣದ ಹಣ್ಣು-ತರಕಾರಿ
ನೇರಳೆ ಬಣ್ಣದ ಹಣ್ಣು-ತರಕಾರಿ

ನೇರಳೆ ಬಣ್ಣದ ಹಣ್ಣುಗಳು ಮತ್ತು ತರಕಾರಿಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ ಎಂದು ಕಂಡುಬಂದಿದೆ ಮತ್ತು ಆದ್ದರಿಂದ ಅಸ್ತಿತ್ವದಲ್ಲಿರುವ ತರಕಾರಿಗಳನ್ನು ನಿಧಾನವಾಗಿ ಬದಲಾಯಿಸಲು ಪ್ರಾರಂಭಿಸಿದೆ, ಏಕೆಂದರೆ ಇವುಗಳು ಸಾಮಾನ್ಯ ವಸ್ತುಗಳ ವಿಭಿನ್ನ ರೂಪಾಂತರಗಳಾಗಿವೆ.

ಪ್ರತಿ ದಿನ ಒಂದೇ ಬಗೆಯ ಆಹಾರ ಪದ್ಧತಿ ಎಂತಹವರಿಗೂ ಬೇಸರ. ಹಾಗಾಗಿ ಸ್ವಲ್ಪ ಬೇರೆ ಬಣ್ಣದ ತರಕಾರಿಗಳಿಗೆ ಪ್ರಮುಖ್ಯತೆ ಕೊಟ್ಟರೆ ಆರೋಗ್ಯ ಸಹ ವೃದ್ಧಿಸುತ್ತದೆ.

ಮಾಂಸಹಾರಿಗಳು ಸಹ ಪ್ರತಿ ದಿನ ಮಾಂಸಾಹಾರವನ್ನು ಸೇವನೆ ಮಾಡುವುದಿಲ್ಲ. ತರಕಾರಿಗಳ ಬಳಕೆಗೆ ಪ್ರತಿಯೊಬ್ಬರೂ ಪ್ರಾಮುಖ್ಯತೆ ನೀಡುತ್ತದೆ.

ತರಕಾರಿಗಳ ನಿಜವಾದ ಬಳಕೆ ಹೇಗಿರಬೇಕು ಎಂಬುದನ್ನು ನಾವು ನಿಜವಾಗಲು ವಿದೇಶಿಯರಿಂದ ಕಲಿತುಕೊಳ್ಳಬೇಕು. ಬೇರೆ ಬೇರೆ ಬಗೆಯಲ್ಲಿ ವಿವಿಧ ಶೈಲಿಗಳಲ್ಲಿ ತರಕಾರಿಗಳನ್ನು ನಮಗಿಂತಲೂ ಹೆಚ್ಚು ಆರೋಗ್ಯಕರವಾಗಿ ಅವರು ಸೇವಿಸುತ್ತಾರೆ. ಇರುವ ತರಕಾರಿಗಳನ್ನು ವಿಭಿನ್ನ ರೀತಿಯಲ್ಲಿ ಪ್ರಾಯೋಗಿಕವಾಗಿ ಬೆಳೆದು ಜಗತ್ತಿಗೆ ತೋರಿಸಿದ್ದಾರೆ. ಇದಕ್ಕೆ ಒಂದು ನೈಜ ಉದಾಹರಣೆಯೆಂದರೆ ನೇರಳೆ ಬಣ್ಣದ ಎಲೆಕೋಸು.

ಆಹಾರದಲ್ಲಿ ನೇರಳೆ ಬಣ್ಣದ ಹಣ್ಣು-ತರಕಾರಿಗಳನ್ನು ಸೇರಿಸಿ
ನೇರಳೆ ಬಣ್ಣದ ಹಣ್ಣುಗಳು

ಇತ್ತೀಚಿನ ದಿನಗಳಲ್ಲಿ ನೇರಳೆ ಬಣ್ಣದ ತರಕಾರಿಗಳ ಕ್ರೇಜ್ ಬಹಳಷ್ಟು ಹೆಚ್ಚಾಗಿದೆ ಏಕೆಂದರೆ ಅವುಗಳು ಟೇಸ್ಟಿ ಮಾತ್ರವಲ್ಲದೆ ಆರೋಗ್ಯದ ದೃಷ್ಟಿಯಿಂದ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

ಭಾರತದ ಜನಸಂಖ್ಯೆಗೆ ಹೋಲಿಸಿದರೆ ಊಟದಲ್ಲಿ ನೇರಳೆ ಆಹಾರಗಳ ಬಳಕೆಯು ಇನ್ನೂ ತುಲನಾತ್ಮಕವಾಗಿ ಕಡಿಮೆಯಾಗಿದೆ. ಅವರ ಪ್ರಯೋಜನಗಳಿಗೆ ನಾವು ತೆರೆದುಕೊಂಡಿಲ್ಲ. ಇದು ಕ್ರಮೇಣ ಬೆಳವಣಿಗೆಯ ಪ್ರಕ್ರಿಯೆಯಾಗಿದೆ, ಆದರೆ ನೇರಳೆ ಅಕ್ಕಿ ಮತ್ತು ದಾಳಿಂಬೆಯಂತಹ ಈ ವಸ್ತುಗಳನ್ನು ನಮ್ಮ ಆಹಾರಕ್ರಮದಲ್ಲಿ ಸೇರಿಸುವ ಮೊದಲು ಇದು ಕೇವಲ ಸಮಯದ ವಿಷಯವಾಗಿದೆ. ಸಲಾಡ್‌ಗಳಲ್ಲಿ ಲೆಟಿಸ್‌ನ ಹೆಚ್ಚಿದ ಬಳಕೆಯಂತಹ ಉತ್ತೇಜಕ ಚಿಹ್ನೆಗಳು ಇದರ ಮೊದಲ ಹಂತಗಳಾಗಿವೆ ಮತ್ತು ಕಾಲಾನಂತರದಲ್ಲಿ ಜನರು ಭಕ್ಷ್ಯದ ರುಚಿಯನ್ನು ಮತ್ತು ಅದರ ಆರೋಗ್ಯ ಪ್ರಯೋಜನಗಳನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ಗುರುತಿಸುತ್ತಾರೆ.

ಕೆನ್ನೀಲಿ ಬಣ್ಣದ ಎಲೆ ಕೋಸು

ಆಹಾರದಲ್ಲಿ ನೇರಳೆ ಬಣ್ಣದ ಹಣ್ಣು-ತರಕಾರಿಗಳನ್ನು ಸೇರಿಸಿ
ಎಲೆ ಕೋಸು

ಸಾಧಾರಣವಾಗಿ ನಾವು ನಮ್ಮ ಭಾರತ ದೇಶದಲ್ಲಿ ಮನೆಯ ಹೊರಗಡೆ ಮಾರುಕಟ್ಟೆಗಳಲ್ಲಿ ನೋಡುವ ಎಲೆ ಕೋಸು ಹಸಿರು ಅಥವಾ ಬಿಳಿ ಬಣ್ಣದಿಂದ ಕೂಡಿರುತ್ತದೆ. ಆದರೆ ಹೊರ ದೇಶಗಳಲ್ಲಿ ನೇರಳೆ ಬಣ್ಣದ ಎಲೆ ಕೋಸು ಹೇರಳವಾಗಿ ಸಿಗುತ್ತದೆ. ಇತ್ತೀಚಿಗೆ ನಮ್ಮಲ್ಲಿಯೂ ಕೂಡ ಕೆಲವು ಸೂಪರ್ಮಾರ್ಕೆಟ್ ಗಳಲ್ಲಿ ಹೊಸ ಬಗೆಯ ಇಂತಹ ತರಕಾರಿಗಳು, ಬಣ್ಣ ಬಣ್ಣದ ಕ್ಯಾಪ್ಸಿಕಂ ಗಳು ಜನರಿಗೆ ಲಭ್ಯವಿವೆ. ಈಗ ನೇರಳೆ ಬಣ್ಣದ ಎಲೆ ಕೋಸಿನ ವಿಚಾರಕ್ಕೆ ಬರುವುದಾದರೆ, ನೀವು ತಯಾರು ಮಾಡುವ ಪಿಜ್ಜಾ ಅಥವಾ ಪಾಸ್ತಾ ಗಳಲ್ಲಿ ಇದನ್ನು ಬಳಕೆ ಮಾಡಬಹುದು.

ನೇರಳೆ ಬಣ್ಣದ ಎಲೆ ಕೋಸಿನಲ್ಲಿ ಪ್ರೊ ವಿಟಮಿನ್ ‘ ಎ ‘ ಅಂಶ, ವಿಟಮಿನ್ ‘ ಸಿ ‘ ಅಂಶ ಮತ್ತು ನಾರಿನ ಅಂಶ ಅಪಾರ ಪ್ರಮಾಣದಲ್ಲಿ ಕಂಡು ಬರುತ್ತದೆ. ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಒದಗಿಸುವ ನೇರಳೆ ಎಲೆ ಕೋಸು ತನ್ನಲ್ಲಿ ಅಂತೋ ಸೈಯಾನಿನ್ ಅಂಶಗಳನ್ನು ಹೆಚ್ಚಾಗಿ ಒಳಗೊಂಡಿದೆ. ಇದರ ಜೊತೆಗೆ ಆಂಟಿ – ಇನ್ಫಾಮೇಟರಿ ಗುಣ – ಲಕ್ಷಣಗಳನ್ನು ಸಹ ಒಳಗೊಂಡಿದ್ದು, ಹಸಿರು ಬಣ್ಣದ ಎಲೆಕೋಸು ಸೇವನೆಯ ರೀತಿ ಇದನ್ನು ಸಹ ಸಲಾಡ್ ಅಥವಾ ಇನ್ನಿತರ ಅಡುಗೆ ಪದಾರ್ಥಗಳನ್ನು ತಯಾರು ಮಾಡಿಕೊಂಡು ಸ್ವಾದಿಷ್ಟಕರವಾಗಿ ಸವಿಯಬಹುದು.

ನೆರಳೆ ಬದನೆ

ಆಹಾರದಲ್ಲಿ ನೇರಳೆ ಬಣ್ಣದ ಹಣ್ಣು-ತರಕಾರಿಗಳನ್ನು ಸೇರಿಸಿ
ನೆರಳೆ ಬದನೆ

ಹೆಚ್ಚು ಕಡಿಮೆ ನೆರಳೆ ಬಣ್ಣದಲ್ಲಿ ಕಂಡು ಬರುವ ಬದನೆಕಾಯಿಗೆ ಸಾಮಾನ್ಯವಾಗಿ ಜನರು ನೀಲಿ ಬದನೆಕಾಯಿ ಎಂದು ಕರೆಯುತ್ತಾರೆ. ಮಾರುಕಟ್ಟೆಗಳಲ್ಲಿ ಹೇರಳವಾಗಿ ಇದರ ಲಭ್ಯತೆ ಇರುತ್ತದೆ. ಬದನೆಕಾಯಿಗಳಲ್ಲಿ ಅಪಾರ ಪ್ರಮಾಣದ ನಾರಿನ ಅಂಶ ಮತ್ತು ಆಂಟಿ – ಆಕ್ಸಿಡೆಂಟ್ ಅಂಶಗಳು ಸಿಗುತ್ತವೆ. ಆರೋಗ್ಯ ತಜ್ಞರನ್ನು ಕೇಳಿದರೆ, ಪ್ರತಿಯೊಬ್ಬರೂ ತಮ್ಮ ಆಹಾರ ಪದ್ಧತಿಯಲ್ಲಿ ದಿನ ಬಿಟ್ಟು ದಿನ ಬದನೆಕಾಯಿ ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು ಎಂದು ಅತ್ಯುತ್ತಮ ಸಲಹೆಯನ್ನು ಕೊಡುತ್ತಾರೆ.

ದೇಹದ ಮೆಟಬಾಲಿಸಂ ಪ್ರಕ್ರಿಯೆಗೆ ಹಾಗೂ ಮೂಳೆಗಳ ಆರೋಗ್ಯಕ್ಕೆ ಇದು ಹೆಚ್ಚು ಸೂಕ್ತವಾದ ತರಕಾರಿ ಎಂಬ ಮಾತಿದೆ. ಇಷ್ಟೇ ಅಲ್ಲದೆ ನೀಲಿ ಬದನೆಕಾಯಿಯಲ್ಲಿ ಮ್ಯಾಂಗನೀಸ್, ಥಯಾಮಿನ್, ತಾಮ್ರ ಮತ್ತು ವಿಟಮಿನ್ ‘ ಬಿ6 ‘ ಅಂಶಗಳು ಯಥೇಚ್ಛವಾಗಿ ಸಿಗುತ್ತವೆ.

ನೇರಳೆ ಕ್ಯಾರೆಟ್

ಆಹಾರದಲ್ಲಿ ನೇರಳೆ ಬಣ್ಣದ ಹಣ್ಣು-ತರಕಾರಿಗಳನ್ನು ಸೇರಿಸಿ
ನೇರಳೆ ಕ್ಯಾರೆಟ್

ಅನೇಕ ಬಾರಿ ಕೆಂಪು ಮತ್ತು ಕಿತ್ತಳೆ ಕ್ಯಾರೆಟ್ ಅನ್ನು ತಿಂದಿರಬಹುದು, ಆದರೆ ನೇರಳೆ ಕ್ಯಾರೆಟ್ ಅನ್ನು ಒಮ್ಮೆ ಪ್ರಯತ್ನಿಸಬೇಕು. ಇದನ್ನು ತಿನ್ನುವುದರಿಂದ ಆರೋಗ್ಯವು ತುಂಬಾ ಹೆಚ್ಚುತ್ತದೆ. ಜೀರ್ಣಕ್ರಿಯೆಯು ಉತ್ತಮವಾಗಿರುತ್ತದೆ ಮತ್ತು ಹೊಟ್ಟೆಯ ಸಮಸ್ಯೆಗಳು ಇರುವುದಿಲ್ಲ.

ನಾವು ಸೇವನೆ ಮಾಡುವ ಕಿತ್ತಳೆ ಬಣ್ಣದ ಕ್ಯಾರೆಟ್ ಗೆ ಹೋಲಿಸಿದರೆ ನೇರಳೆ ಬಣ್ಣದ ಕ್ಯಾರೆಟ್ ತನ್ನಲ್ಲಿ ಬಗೆ ಬಗೆಯ ಪೌಷ್ಟಿಕಾಂಶಗಳನ್ನು ಒಳಗೊಂಡಿರುವುದರ ಜೊತೆಗೆ ವಿಟಮಿನ್ ‘ ಸಿ ‘ , ವಿಟಮಿನ್ ‘ ಎ ‘ , ಮ್ಯಾಂಗನೀಸ್, ಪೊಟ್ಯಾಶಿಯಂ ಮತ್ತು ನಾರಿನಾಂಶವನ್ನು ಸಹ ಸೇರಿಸಿಕೊಂಡಿದೆ. ಶಕ್ತಿಯುತವಾದ ಆಂಟಿ – ಆಕ್ಸಿಡೆಂಟ್ ಅಂಶಗಳು, ಕ್ಯಾರೋಟಿನ್ ಅಂಶಗಳು ನೇರಳೆ ಬಣ್ಣದ ಕ್ಯಾರೆಟ್ ನಲ್ಲಿ ಸಿಗುತ್ತವೆ ಎಂದು ನಂಬಬಹುದು.

 ಪ್ಯಾಶನ್ ಹಣ್ಣು

ಆಹಾರದಲ್ಲಿ ನೇರಳೆ ಬಣ್ಣದ ಹಣ್ಣು-ತರಕಾರಿಗಳನ್ನು ಸೇರಿಸಿ
 ಪ್ಯಾಶನ್ ಹಣ್ಣು

 ನೋಡಲು ದುಂಡನೆಯ ಆಕಾರ ಹೊಂದಿದ್ದು, ‘ಮೇಲೆ ಒರಟು ಒಳಗೆ ಮೃದು’ ಎನ್ನುವ ಸ್ವಭಾವ ತನ್ನದಾಗಿಸಿಕೊಂಡ ಹಣ್ಣಾಗಿದೆ. ಈ ಹಣ್ಣನ್ನು ಹೋಳು ಮಾಡಿ ನೋಡಿದರೆ ಮೇಲ್ಭಾಗದಲ್ಲಿ ನೇರಳೆ ಬಣ್ಣದ ಗಟ್ಟಿಯಾದ ಸಿಪ್ಪೆ ಮತ್ತು ಒಳಭಾಗದಲ್ಲಿ ತುಂಬಾ ಮೃದುವಾದ, ಹಣ್ಣಿನ ತಿರುಳು ಜೊತೆಗೆ ಅಲ್ಲಲ್ಲಿ ಬಾಯಿಗೆ ಸಿಗುವಂತೆ ಬೀಜಗಳು ಇರುತ್ತವೆ. ಸಾಕಷ್ಟು ರುಚಿಕರವಾಗಿ ಈ ಹಣ್ಣನ್ನು ಸವಿಯಬಹುದು ಎಂದು ಹೇಳುತ್ತಾರೆ. ಪ್ಯಾಶನ್ ಹಣ್ಣಿನಲ್ಲಿ ವಿಶೇಷವಾದ ಪಾಲಿಫಿನಾಲ್ ಆಂಟಿ – ಆಕ್ಸಿಡೆಂಟ್ ಅಂಶ ಕಂಡು ಬರುತ್ತದೆ.

ತ್ವಚೆಯ ಆರೋಗ್ಯಕ್ಕೆ ತುಂಬಾ ಸೂಕ್ತವಾದ ಮತ್ತು ಸೌಂದರ್ಯವನ್ನು ಹೆಚ್ಚಿಸುವ ಹಣ್ಣು ಇದಾಗಿದೆ ಎಂದು ಹೇಳುತ್ತಾರೆ. ಈ ಹಣ್ಣು ಸೇವನೆಯಿಂದ ದೇಹಕ್ಕೆ ವಿಟಮಿನ್ ಎ ಅಂಶ ಮತ್ತು ವಿಟಮಿನ್- ‘ ಸಿ ‘ ಅಂಶ ಸಿಗಲಿದ್ದು, ದೇಹದ ರೋಗ – ನಿರೋಧಕ ವ್ಯವಸ್ಥೆಯನ್ನು ಹೆಚ್ಚು ಮಾಡಲಿದೆ ಎಂದು ಹೇಳಬಹುದು.

 ನೇರಳೆ ಬೀಟ್ರೂಟ್

ಆಹಾರದಲ್ಲಿ ನೇರಳೆ ಬಣ್ಣದ ಹಣ್ಣು-ತರಕಾರಿಗಳನ್ನು ಸೇರಿಸಿ
ನೇರಳೆ ಬೀಟ್ರೂಟ್

ಬೀಟ್ರೂಟ್ ಅನ್ನು ಆರೋಗ್ಯಕರ ಆಹಾರದಲ್ಲಿ ಸೇರಿಸಲಾಗಿದೆ. ಇದು ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಅನೇಕ ಆರೋಗ್ಯ ತಜ್ಞರು ಇದನ್ನು ತೂಕ ಇಳಿಸುವ ಆಹಾರವಾಗಿ ತಿನ್ನಲು ಶಿಫಾರಸು ಮಾಡುತ್ತಾರೆ. ಇದು ರಕ್ತದಲ್ಲಿ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ.

​ಅಕೈ ಹಣ್ಣುಗಳು

ದಕ್ಷಿಣ ಹಾಗೂ ಮಧ್ಯ ಅಮೇರಿಕಾದ ದಟ್ಟವಾದ ಕಾಡು ಪ್ರದೇಶಗಳಲ್ಲಿ ನೇರಳೆ ಬಣ್ಣದ ಅಕೈ ಬೆರ್ರಿ ಹಣ್ಣುಗಳು ಸಿಗುತ್ತವೆ. ಈ ಹಣ್ಣುಗಳ ವಿಶೇಷವಾದ ಗುಣ ಎಂದರೆ ಬಹಳ ಬೇಗನೆ ಹಣ್ಣಾಗಿ ಒಣಗಿ ಹೋಗುತ್ತವೆ. ಹಾಗಾಗಿ ಬಹಳ ಕಡಿಮೆ ಅವಧಿಯಲ್ಲಿ ಇವುಗಳು ಸೇವನೆಗೆ ಅರ್ಹ ಎಂದು ಹೇಳಬಹುದು. ಹಾಗಾಗಿ ಅಲ್ಲಿನ ಜನರು ಇವುಗಳಿಂದ ಜ್ಯೂಸ್ ತಯಾರು ಮಾಡಿ ಅಥವಾ ಒಣಗಿಸಿ ಪುಡಿ ಮಾಡಿ ಬೇರೆ ಬೇರೆ ದೇಶಗಳಿಗೆ ರಫ್ತು ಮಾಡುತ್ತಾರೆ.

ಆಹಾರದಲ್ಲಿ ನೇರಳೆ ಬಣ್ಣದ ಹಣ್ಣು-ತರಕಾರಿಗಳನ್ನು ಸೇರಿಸಿ
​ಅಕೈ ಹಣ್ಣುಗಳು

ಅಕೈ ಬೆರ್ರಿ ಹಣ್ಣುಗಳಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳು ಮತ್ತು ಅಪಾರ ಪ್ರಮಾಣದ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಪೌಷ್ಟಿಕ ಸತ್ವಗಳು ಸಿಗುತ್ತವೆ. ದೇಹದಲ್ಲಿ ಅತಿ ಹೆಚ್ಚಿನ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ನಿಯಂತ್ರಣ ಮಾಡುವ ಮತ್ತು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ತಗ್ಗಿಸುವ ಗುಣ – ಲಕ್ಷಣವನ್ನು ಅಕೈ ಹಣ್ಣುಗಳು ಹೊಂದಿವೆ. ಹಣ್ಣುಗಳ ಸ್ಮೂತಿಗಳ ತಯಾರಿಯಲ್ಲಿ ಅಕೈ ಹಣ್ಣುಗಳನ್ನು ಸಹ ಬಳಕೆ ಮಾಡಬಹುದು.

ನೇರಳೆ ಆಹಾರಗಳ ಪ್ರಮುಖ ಲಕ್ಷಣವೆಂದರೆ ಜೀವಕೋಶದ ಹಾನಿಯನ್ನು ಸರಿಪಡಿಸಲು ಮತ್ತು ಸರಿಪಡಿಸಲು ಸಹಾಯ ಮಾಡುವ ಸಾಮರ್ಥ್ಯ. ಈ ಎಲ್ಲಾ ವಸ್ತುಗಳು ಈಗಾಗಲೇ ಸಾಂಪ್ರದಾಯಿಕ ಆಹಾರ ವ್ಯವಸ್ಥೆಯಲ್ಲಿತ್ತು, ಆದರೆ ಇತ್ತೀಚಿನ ವೈಜ್ಞಾನಿಕ ಬೆಂಬಲವು ಅದನ್ನು ಮುಂಚೂಣಿಗೆ ಹೆಚ್ಚಿಸಿದೆ.

ವಿಶೇಷವಾಗಿ ನೇರಳೆ ಆಹಾರಗಳ ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸಬೇಕು, ಭಾರತೀಯ ಜನಸಂಖ್ಯೆಗೆ ಅದರ ಪ್ರಯೋಜನಗಳನ್ನು ನೀಡಬೇಕು. ಸ್ಥಳೀಯ ಮಟ್ಟದಲ್ಲಿ ಜಾಗೃತಿಯ ದೃಷ್ಟಿಯಿಂದ, ನೇರಳೆ ಹಣ್ಣು ಮತ್ತು ತರಕಾರಿಗಳು ಕೆಟ್ಟದಾಗಿ ಹೋಗಿರುವ ಸಾಮಾನ್ಯ ವಸ್ತುಗಳಲ್ಲ ಎಂಬ ಅಂಶವನ್ನು ಜನರು ಜಾಗೃತಗೊಳಿಸಬೇಕು. ಒಬ್ಬರ ದೈನಂದಿನ ಜೀವನದಲ್ಲಿ ಈ ವಸ್ತುಗಳನ್ನು ಬಳಸುವುದನ್ನು ಪ್ರೋತ್ಸಾಹಿಸುವ ಮೂಲಕ, ಈ ತರಕಾರಿಗಳನ್ನು ಬೆಳೆಸಲು ಮತ್ತು ಹೆಚ್ಚುತ್ತಿರುವ ಬೇಡಿಕೆಗೆ ಕೊಡುಗೆ ನೀಡಲು ಮನವರಿಕೆಯಾಗುತ್ತದೆ.

ಆಹಾರದಲ್ಲಿ ಎಷ್ಟು ನೇರಳೆ ಬಣ್ಣವನ್ನು ಸೇರಿಸಬೇಕು ಎಂಬುದನ್ನು ನೀವು ನಿರ್ಧರಿಸಬಹುದು. ಕ್ಯಾನ್ಸರ್ ಅನ್ನು ಎದುರಿಸುವ ಸಾಮರ್ಥ್ಯಕ್ಕೆ ಬಂದಾಗ ಈ ಉತ್ಕರ್ಷಣ ನಿರೋಧಕಗಳು ಹೆಚ್ಚು ಮುಖ್ಯವಾಗುತ್ತವೆ. ಹಿಂದೆ, ತಯಾರಿಕೆಯ ಸಮಯದಲ್ಲಿ ನಾವು ಹಣ್ಣುಗಳು ಮತ್ತು ದ್ರಾಕ್ಷಿಗಳ ಚರ್ಮವನ್ನು ತಿರಸ್ಕರಿಸುತ್ತೇವೆ ಮತ್ತು ತಿರುಳನ್ನು ಮಾತ್ರ ಬಳಸುತ್ತೇವೆ. ಚರ್ಮವು ಒಳಗೊಂಡಿರುವ ಪ್ರಯೋಜನಗಳ ಆವಿಷ್ಕಾರವು ಈಗ ಸಾಮಾನ್ಯವಾಗಿ ಸಾರ್ವಜನಿಕರಿಗೆ ಮತ್ತು ಗರಿಷ್ಠ ಪೌಷ್ಟಿಕಾಂಶದ ಪ್ರಭಾವಕ್ಕಾಗಿ ಅವುಗಳನ್ನು ಒಟ್ಟಾರೆಯಾಗಿ ತಿನ್ನಲು ನಮಗೆ ಮನವರಿಕೆ ಮಾಡಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ರಾತ್ರಿ ತಡವಾಗಿ ಪ್ರವಾಸಗಳನ್ನು ಅನುಭವಿಸಬಹುದಾದ ಕೆಲವೊಂದು ನಗರಗಳು

ಭಾರತದ ರಾತ್ರಿ ತಡವಾಗಿ ಪ್ರವಾಸಗಳನ್ನು ಅನುಭವಿಸಬಹುದಾದ ಕೆಲವೊಂದು ನಗರಗಳು

ಸುಷ್ಮಾ ಸ್ವರಾಜ್ ಜನ್ಮದಿನ

ಫೆಬ್ರವರಿ 14 ರಂದು, ಭಾರತೀಯ ರಾಜಕಾರಣಿ ಮತ್ತು ಸುಪ್ರೀಂ ಕೋರ್ಟ್ ವಕೀಲರಾಗಿದ್ದ “ಸುಷ್ಮಾ ಸ್ವರಾಜ್” ಜನ್ಮದಿನ