ಮಧ್ಯಮ ಗಾತ್ರದ, ಚಳಿಗಾಲದಲ್ಲಿ ಎಲೆಗಳು ಉದುರುವ ಚಿಕ್ಕ ಚಿಕ್ಕ ಎಲೆಗಳುಳ್ಳ ಮರ. ತೊಗಟೆಯು ಬಿಳಿ ಮಾಸು ಹಸಿರು ಹಳದಿ ಬಣ್ಣದ ಸಣ್ಣ ಸಣ್ಣ ಹೂಗಳು. ಕಾಯಿಗಳು ಗುಂಡಗೆ ಹಸಿರಾಗಿರುವುದು. ಬಲಿತ ಹಣ್ಣು ಹೊಳಪಿನಿಂದ ಕೂಡಿರುತ್ತದೆ. ಹಣ್ಣಿನ ಮೇಲೆ ಸ್ಪಷ್ಟವಾದ ಕಾಣುವ ಆರು ರೇಖೆಗಳಿರುತ್ತದೆ. ಒಣಗಿದ ಕಾಯಿ ಕಪ್ಪಾಗಿದ್ದು, ಒಗರು ಹುಳಿಯಾಗಿರುತ್ತದೆ. ಇದನ್ನು ನೆಲ್ಲಿಚೆಟ್ಟು ಎನ್ನುತ್ತಾರೆ.
ದೇಹದ ಆರೋಗ್ಯ ರಕ್ಷಣೆಯಲ್ಲಿ ಕೆಲವೊಂದು ಹಣ್ಣುಗಳು ತುಂಬಾ ನೆರವಾಗುವುದು. ಹಿಂದೆ ಬೆಟ್ಟ ಗುಡ್ಡಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನೆಲ್ಲಿಕಾಯಿ ಮರಗಳು ಇದು ಹೈಬ್ರಿಡ್ ಆಗಿ ಬೆಳೆಯಲಾಗುತ್ತಿದೆ. ನೆಲ್ಲಿಕಾಯಿಯಲ್ಲಿ ಇರುವಂತಹ ಅಂಶಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಅದರಲ್ಲೂ ಬೆಟ್ಟದ ನೆಲ್ಲಿಕಾಯಿಯನ್ನು ಸೇವನೆ ಮಾಡಿದರೆ, ಅದು ಇನ್ನಷ್ಟು ಲಾಭಕಾರಿ. ನೆಲ್ಲಿಕಾಯಿಯನ್ನು ಆಯುರ್ವೇದದಲ್ಲಿ ಹಿಂದಿನಿಂದಲೂ ಔಷಧಿಯಾಗಿ ಬಳಕೆ ಮಾಡಿಕೊಂಡು ಬರಲಾಗುತ್ತಿದೆ.
ನೆಲ್ಲಿಕಾಯಿಯನ್ನು ಕೆಲವು ಆಯುರ್ವೇದ ಚಿಕಿತ್ಸಕಗಳಲ್ಲಿಯೂ ಬಳಸಲಾಗುತ್ತದೆ. ಅದಲ್ಲದೇ ಸೌಂದರ್ಯ ವರ್ಧಕದ ತಯಾರಿಕೆಯಲ್ಲಿಯೂ ಇದನ್ನು ಬಳಸಲಾಗುತ್ತಿದೆ.
ಕೂದಲು ಬಿಳಿಯಾಗುವ ಸಮಸ್ಯೆಯನ್ನು ನೆಲ್ಲಿಕಾಯಿ ಜ್ಯೂಸ್ ನಿವಾರಣೆ ಮಾಡುವುದು. ಇದನ್ನು ಪ್ರತಿನಿತ್ಯವೂ ಸೇವನೆ ಮಾಡಿದರೆ, ತುಂಬಾ ಲಾಭಕಾರಿ. ಇಷ್ಟು ಮಾತ್ರವಲ್ಲದೆ, ನೆಲ್ಲಿಕಾಯಿ ಜ್ಯೂಸ್ ನ್ನು ತಲೆಬುರುಡೆಗೆ ಹಚ್ಚಿಕೊಂಡರೆ ಆಗ ಇದು ಕೂದಲನ್ನು ರಕ್ಷಿಸುವುದು.
ನೆಲ್ಲಿಕಾಯಿ ರಸವನ್ನು ನೀರಿಗೆ ಬೆರೆಸಿಕೊಂಡು ಅದನ್ನು ತಲೆಬುರುಡೆಗೆ ಹಚ್ಚಿ ಸರಿಯಾಗಿ ಮಸಾಜ್ ಮಾಡಿ. ಇದನ್ನು 15 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ಕೂದಲಿನ ಆರೋಗ್ಯವನ್ನು ಇದು ರಕ್ಷಣೆ ಮಾಡುವುದು ಮತ್ತು ತಲೆಹೊಟ್ಟನ್ನು ನಿಯಂತ್ರಿಸುವುದು.
ನೆಲ್ಲಿಕಾಯಿಯಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಇದು ಮಧುಮೇಹ, ಕೂದಲು ಉದುರುವಿಕೆ ಮತ್ತು ಅಜೀರ್ಣ ಸಮಸ್ಯೆಗೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು.
ವಿಟಮಿನ್ ಸಿ ಸಮೃದ್ಧವಾಗಿ ಹೊಂದಿರುವ ನೆಲ್ಲಿಕಾಯಿಯನ್ನು ಅಕಾಲಿಕವಾಗಿ ವಯಸ್ಸಾಗುವ ಲಕ್ಷಣಗಳನ್ನು ದೂರ ಮಾಡಲು ಬಳಸಬಹುದು. ಇದು ಎಷ್ಟೇ ಒಣಗಿದರೂ ಅದರಲ್ಲಿನ ವಿಟಮಿನ್ ಸಿ ಅಂಶಕ್ಕೆ ಯಾವುದೇ ರೀತಿಯ ತೊಂದರೆಯೂ ಆಗದು. ಇದರಿಂದ ನೆಲ್ಲಿಕಾಯಿಯನ್ನು ಹಲವಾರು ತಿಂಗಳುಗಳ ಕಾಲ ಬಳಕೆ ಮಾಡಬಹುದು.
ನೆಲ್ಲಿಕಾಯಿಯು ಕೈ ಮತ್ತು ಕಾಲುಗಳ ಊತವನ್ನು ಕಡಿಮೆ ಮಾಡುತ್ತದೆ. ಇದು ಉತ್ಕರ್ಷಣಾ ನಿರೋಧಿ ಅಂಶಗಳನ್ನು ಹೊಂದಿದ್ದು ಅಧಿಕ ತೂಕದಿಂದ ಉಂಟಾಗುವ ಕೈ ಕಾಲುಗಳ ಬಾವನ್ನು ಇದು ನಿವಾರಿಸುತ್ತದೆ.
ನೆಲ್ಲಿಕಾಯಿ ಎಣ್ಣೆಯನ್ನು ಕೂದಲಿಗೆ ಹಚ್ಚಿಕೊಂಡರೆ ಅದು ಕೂದಲಿನ ರಕ್ಷಣೆ ಮಾಡುವುದು ಮತ್ತು ಕೂದಲಿನ ಬೆಳವಣಿಗೆಗೆ ಇದು ಸಹಕಾರಿ.
ತಲೆಬುರುಡೆಯಲ್ಲಿ ಇರುವಂತಹ ತಲೆಹೊಟ್ಟನ್ನು ಇದು ನಿವಾರಣೆ ಮಾಡುವುದು. ಅದೇ ರೀತಿಯಾಗಿ ಇದು ತಲೆಬುರುಡೆಯ ಆರೋಗ್ಯವನ್ನು ಕಾಪಾಡುವುದು.
ಬೆಟ್ಟದ ನೆಲ್ಲಿಕಾಯಿಯ ಸೇವನೆಯು ಗರ್ಭಿಣಿಯರಲ್ಲಿ ಕಂಡುಬರುವ ಮೂಡ್ ಸ್ವಿಂಗ್ ಅಥವಾ ಬೇಸರವನ್ನು ನಿಯಂತ್ರಿಸುತ್ತದೆ.
ಚಿಟಿಕೆ ಉಪ್ಪು ಹಾಗೂ ಪೇಪ್ಪರ್ ಜೊತೆ ಒಂದು ಗ್ಲಾಸ್ ನೆಲ್ಲಿಕಾಯಿ ರಸ ಕುಡಿದರೆ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಹಸಿವನ್ನು ನೀಗಿಸಲು ಸಹಾಯ ಮಾಡುತ್ತದೆ. ತೂಕ ನಿರ್ವಹಣೆ ಸಹಾಯಮಾಡುವ ನೆಲ್ಲಿಕಾಯಿಯನ್ನು ಊಟಕ್ಕೆ ಮುಂಚಿತವಾಗಿ ಇದರ ರಸವನ್ನು ಸೇವಿಸುವುದರಿಂದ ಪೋಷಕಾಂಶಗಳನ್ನು ಉತ್ತಮವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿ ಫೈಬರ್ ಅಂಶ ಹೆಚ್ಚಾಗಿದೆ.
ನೆಲ್ಲಿಕಾಯಿ ಸೇವನೆ ಮಾಡಿದರೆ ಅದರಿಂದ ದೇಹದಲ್ಲಿ ಪ್ರತಿರೋಧಕ ಶಕ್ತಿ ವೃದ್ಧಿ ಆಗುವುದು ಮತ್ತು ಕಾಯಿಲೆಗಳ ವಿರುದ್ಧ ರಕ್ಷಣೆ ಸಿಗುವುದು. ಕೆಮ್ಮು, ಶೀತ ಮತ್ತು ಶ್ವಾಸಕೋಸದ ಸಮಸ್ಯೆಗಳನ್ನು ಇದು ದೂರವಿಡುವುದು. ಕೂದಲು ಉದುರುವಿಕೆ, ಬಿಳಿಯಾಗುವ ಸಮಸ್ಯೆಗೂ ಇದು ಪರಿಣಾಮಕಾರಿ.
ನೆಲ್ಲಿಕಾಯಿಯ ಎಣ್ಣೆಯು ಕೂದಲಿನ ಆಳಕ್ಕೆ ಇಳಿದು ಕೂದಲನ್ನು ಸದೃಢವಾಗಿಸುವುದಲ್ಲದೇ ಇವು ನೆರೆಗೂದಲು ಆಗುವುದನ್ನು ತಡೆಯುತ್ತದೆ. ಈ ಎಣ್ಣೆಯನ್ನು ನಿತ್ಯವೂ ಬಳಸುವುದರಿಂದ ಕೂದಲಿನ ಅರೋಗ್ಯವೂ ಕೂಡಾ ವರ್ಧಿಸುತ್ತದೆ. ಇದರಲ್ಲಿ ಇರುವಂತಹ ಪ್ರಬಲ ಆಂಟಿಆಕ್ಸಿಡೆಂಟ್ ಅಮಶವು ಕೂದಲು ಮತ್ತು ಚರ್ಮವನ್ನು ರಕ್ಷಿಸುವುದು. ಹೊಸ ಅಂಗಾಂಶಗಳು ಬೆಳೆಯಲು ಇದು ಸಹಕಾರಿ ಕೂಡ. ಕೂದಲು ಗಂಟು ಕಟ್ಟುವುದು, ಬಿಸಿಲಿನ ಸುಟ್ಟು ಕಲೆಗಳೂ ಮತ್ತು ಬಿಸಿಲಿನಿಂದ ಆಗಿರುವ ಹಾನಿಯನ್ನು ಇದು ತಡೆಯುವುದು.
ಅಂಗಾಲು ಉರಿಯುತ್ತಿದ್ದರೆ ನೆಲ್ಲಿಕಾಯಿ ಪುಡಿಯನ್ನು ಪೇಸ್ಟ್‌ನಂತೆ ಮಾಡಿಕೊಂಡು ಅಂಗಾಲು, ಹಿಮ್ಮಡಿ, ಅಂಗೈಗಳಿಗೆ ಲೇಪಿಸಿದರೆ ಉರಿ ಕಡಿಮೆಯಾಗುತ್ತದೆ.
ಒಣಗಿಸಿದ ಮತ್ತು ಹಸಿ ನೆಲ್ಲಿಕಾಯಿಯನ್ನು ಔಷಧಿಗಳಿಗಾಗಿ ಬಳಸಿಕೊಳ್ಳಲಾಗುತ್ತದೆ. ನೆಲ್ಲಿಕಾಯಿ ಮರದ ಹಣ್ಣು, ಹೂವು, ಕಾಯಿ, ಎಲೆಗಳು, ಬೇರು ಮತ್ತು ತೊಗಟೆ ತುಂಬಾ ಔಷಧೀಯ ಗುಣ ಹೊಂದಿದೆ. ಆದರೆ ನೆಲ್ಲಿಕಾಯಿಯನ್ನು ಅತಿಯಾಗಿ ಸೇವಿಸಿದರೆ ಆಗ ಅದರಿಂದ ದುಷ್ಪರಿಣಾಮಗಳು ಉಂಟಾಗಬಹುದು.
ನೆಲ್ಲಿಕಾಯಿಯಲ್ಲಿರುವ ವಿಟಮಿನ್ ಸಿಯು ರಕ್ತನಾಳಗಳ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಬಹುದು. ಇದರಿಂದ ರಕ್ತಸಂಚಾರವು ಸರಾಗವಾಗಿ ಆಗಲು ನೆರವಾಗುವುದು ಮತ್ತು ಇದರಿಂದ ರಕ್ತದೊತ್ತಡವು ತಗ್ಗುವುದು. ನಿಮಗೆ ರಕ್ತಸ್ರಾವವಾಗುವ ಸಮಸ್ಯೆಯಿದ್ದರೆ ಅಥವಾ ರಕ್ತಹೆಪ್ಪುಗಟ್ಟುವ ಮಾತ್ರೆ ಸೇವನೆ ಮಾಡುತ್ತಲಿದ್ದರೆ ಆಗ ನೀವು ನೆಲ್ಲಿಕಾಯಿ ಸೇವಿಸುವಾಗ ನೀವು ಎಚ್ಚರಿಕೆ ವಹಿಸಬೇಕು.
ನೆಲ್ಲಿಕಾಯಿಯು ಮಗುವಿನ ನೆನಪಿನ ಶಕ್ತಿಯನ್ನು ಹೆಚ್ಚಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಮೂತ್ರದಲ್ಲಿ ರಕ್ತ ಹೋಗುತ್ತಿದ್ದರೆ ನೆಲ್ಲಿಚೆಟ್ಟಿನ ಕಷಾಯಕ್ಕೆ ಸಕ್ಕರೆ ಬೆರೆಸಿ 3 ಬಾರಿ ಕುಡಿಯುವುದರಿಂದ ರಕ್ತ ಹೋಗುವುದು ನಿಂತು ಹೋಗುತ್ತದೆ.
ಗರ್ಭದಲ್ಲಿರುವ ಮಗುವಿನ ಮೂಳೆ ಮತ್ತು ಹಲ್ಲುಗಳ ಬೆಳವಣಿಗೆಯಲ್ಲಿ ಕ್ಯಾಲ್ಸಿಯಂ ಅತ್ಯವಶ್ಯವಾಗಿರುತ್ತದೆ. ಈ ಸಮಯದಲ್ಲಿ ನೆಲ್ಲಿಕಾಯಿಯನ್ನು ಸೇವಿಸುವುದರಿಂದ ಮಗುವಿಗೆ ಕ್ಯಾಲ್ಯಿಯಂ ಸಿಗುತ್ತದೆ.
ಚಿಕ್ಕ ನೆಲ್ಲಿಯಿಂದ ಇಷ್ಟೊಂದು ಲಾಭ ಇದೆ ಎಂದರೆ ಯಾಕೆ ತಡ? ಈಗಲೇ ಶುರು ಮಾಡಿ, ನೆಲ್ಲಿ ಆಹಾರದಲ್ಲಿ ಸೇರಿಸಿ.
ಧನ್ಯವಾದಗಳು.
GIPHY App Key not set. Please check settings