in ,

ಕಹಿಯಾದ ಹಾಗಲಕಾಯಿ, ಸಿಹಿಯಾದ ಆರೋಗ್ಯ

ಹಾಗಲಕಾಯಿ
ಹಾಗಲಕಾಯಿ

ಮೊಮೊರ್ಡಿಕಾ ಚರಾಂತಿಯ, ಇಂಗ್ಲಿಷ್ ನಲ್ಲಿ ಬಿಟರ್ ಮೆಲನ್ ಅಥವಾ ಬಿಟರ್ ಗೌರ್ಡ್ ಎಂದು ಕರೆಯಲಾಗುವ ಇದು, ಸೌತೆಕಾಯಿಯಂತಹ ಕ್ಯುಕರ್ಬಿಟೇಸಿಯೆ ಜಾತಿಗೆ ಸೇರಿದ ಉಷ್ಣವಲಯ ಹಾಗು ಉಪೋಷ್ಣವಲಯದ ಬಳ್ಳಿಯಾಗಿದೆ. ಇದು ತಿನ್ನಲು ಯೋಗ್ಯವಾದ ಹಣ್ಣನ್ನು ಹೊಂದಿರುವ ಕಾರಣಕ್ಕೆ ಏಷಿಯಾ, ಆಫ್ರಿಕಾ, ಹಾಗು ಕ್ಯಾರೆಬಿಯನ್ ಅಂದರೆ ವೆಸ್ಟ್ ಇಂಡೀಸ್ ದ್ವೀಪ ಪ್ರದೇಶಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಇದರ ಹಣ್ಣು ಇತರ ಎಲ್ಲ ಹಣ್ಣುಗಳಿಗಿಂತ ಅತ್ಯಧಿಕ ಕಹಿಯಾಗಿರುತ್ತದೆ. ಇದರಲ್ಲಿಯೂ ಮೂಲಭೂತವಾಗಿ ಹಣ್ಣಿನ ಆಕಾರ ಹಾಗು ಕಹಿಯಲ್ಲಿ ವ್ಯತ್ಯಾಸ ಹೊಂದಿರುವ ಹಲವು ಪ್ರಭೇದಗಳಿವೆ.

ಇದು ಉಷ್ಣವಲಯಗಳಲ್ಲಿನ ಸಸ್ಯವಾಗಿದ್ದರೂ, ಇದರ ಮೂಲ ನೆಲೆಯ ಬಗ್ಗೆ ತಿಳಿದುಬಂದಿಲ್ಲ. ಇದು ಬೇಸಿಗೆ ಕಾಲದ ಮೈಧನ ಪ್ರದೇಶಗಳಲ್ಲಿ ಬೆಳೆಯುವ ಬಹುವಿದ ಧಾನ್ಯಗಳಲ್ಲಿ ಒಂದು ಬಗೆ.

ಇದು ಔಷಧೀಯ ಮೂಲದ, ಈ ದಾರುವಿಲ್ಲದ, ಎಲೆರಹಿತ ಸಸ್ಯಾಂಗವನ್ನು ಹೊಂದಿರುವ ಬಳ್ಳಿಯು ಐದು ಮೀಟರ್ ಗಳವರೆಗೂ ಬೆಳೆಯಬಲ್ಲದು. ಇದು ಸರಳವಾದ, ೪–೧೨ ಸೆಂನಷ್ಟು ಅಡ್ಡವಾಗಿ ಪರ್ಯಾಯ ಎಲೆಗಳನ್ನು, ಜೊತೆಗೆ ೩–೭ರಷ್ಟು ಆಳವಾಗಿ ಪ್ರತ್ಯೇಕಗೊಂಡ ಹಾಲೆಗಳನ್ನು ಹೊಂದಿರುತ್ತದೆ. ಪ್ರತಿ ಸಸ್ಯವೂ, ಪ್ರತ್ಯೇಕವಾದ ಹಳದಿ ಗಂಡು ಹಾಗು ಹೆಣ್ಣು ಹೂವುಗಳನ್ನು ಹೊಂದಿರುತ್ತದೆ. ಉತ್ತರ ಖಗೋಳಾರ್ಧದಲ್ಲಿ, ಜೂನ್ ನಿಂದ ಜುಲೈ ತಿಂಗಳೊಳಗೆ ಇದು ಹೂಬಿಡುತ್ತದೆ, ಹಾಗು ಸೆಪ್ಟೆಂಬರ್ ನಿಂದ ನವೆಂಬರ್ ನ ಅವಧಿಯಲ್ಲಿ ಹಣ್ಣು ಬಿಡುತ್ತದೆ.

ಹಣ್ಣಿನ ಹೊರಭಾಗವು ಗಂಟುಳ್ಳ ಕಾಯಿಯಾಗಿರುತ್ತದಲ್ಲದೇ ಅದು ವಿಶಿಷ್ಟವಾಗಿ ಆಯತಾಕಾರ ಹೊಂದಿರುತ್ತದೆ. ಇದು ಅಡ್ಡಭಾಗದಲ್ಲಿ ಟೊಳ್ಳಾಗಿರುತ್ತದೆ. ದೊಡ್ಡದಾದ ಚಪ್ಪಟೆಯಾಕಾರದ ಬೀಜಗಳು ಹಾಗು ಕಾಂಡದಿಂದ ಭರ್ತಿಯಾದ ಮಧ್ಯಭಾಗದ ಬೀಜದ ಕುಳಿಯನ್ನು ತುಲನಾತ್ಮಕವಾಗಿ ತೆಳುವಾದ ತಿರುಳು ಹೊಂದಿರುವ ಚರ್ಮವು ಇದಕ್ಕೆ ಸುತ್ತುವರೆದಿರುತ್ತದೆ. ಹಣ್ಣನ್ನು ಸಾಮಾನ್ಯವಾಗಿ ಹಸಿರಾಗಿರುವಾಗ, ಅಥವಾ ಹಳದಿ ಬಣ್ಣಕ್ಕೆ ತಿರುಗಲು ಆರಂಭವಾದಾಗ ಸೇವಿಸಲಾಗುತ್ತದೆ. ಈ ಹಂತದಲ್ಲಿ, ಹಣ್ಣಿನ ತಿರುಳಿನ ರಚನೆಯು ಸುಲಭವಾಗಿ ಒಡೆಯುವಂತಿರುವುದರ ಜೊತೆಗೆ ನೀರನ್ನೂ ಒಳಗೊಂಡಿರುತ್ತದೆ. ಇದು ಸೌತೆಕಾಯಿ, ಚಯೋಟೆ ಅಥವಾ ಹಸಿರು ದಪ್ಪಮೆಣಸಿನಕಾಯಿಯ ಮಾದರಿಯನ್ನು ಹೋಲುತ್ತದೆಯಾದರೂ, ಬಹಳ ಕಹಿಯಾಗಿರುತ್ತದೆ. ಕಾಯಿಯ ಹೊರಭಾಗವು ಬಹಳ ತೆಳುವಾಗಿರುವುದರ ಜೊತೆಗೆ ಖಾದ್ಯವಾಗಿಯೂ ಬಳಸಬಹುದು. ಬೀಜಗಳು ಹಾಗು ಕಾಂಡವು ಇನ್ನೂ ಪಕ್ವವಾಗದ ಹಣ್ಣುಗಳಲ್ಲಿ ಬಿಳಿಯ ಅಂಟು ಬಣ್ಣದಲ್ಲಿ ಕಂಡುಬರುತ್ತವೆ. ಇವುಗಳು ತೀವ್ರತರವಾದ ಕಡು ಕಹಿ ಹೊಂದಿರುವುದಿಲ್ಲ, ಅಲ್ಲದೇ ಬೇಯಿಸುವ ಮುಂಚೆ ಇದರ ಕಹಿಯನ್ನು ತೆಗೆಯಬಹುದು.

ಹಣ್ಣು ಪಕ್ವವಾಗುತ್ತಿದ್ದಂತೆ, ತಿರುಳು ದಪ್ಪವಾಗಿ, ಹೆಚ್ಚು ಕಹಿಯಾಗುತ್ತದೆ, ಹಾಗು ತಿನ್ನಲು ಬಹಳ ಅರೋಚಕವಾಗಿರುತ್ತದೆ. ಮತ್ತೊಂದೆಡೆ, ತಿರುಳು ಬಹಳ ಮಧುರ ಹಾಗು ತೀಕ್ಷ್ಣ ಕೆಂಪಾಗಾಗುತ್ತದೆ. ಈ ಹಂತದಲ್ಲಿ ಇದನ್ನು ಬೇಯಿಸದೇ ಹಾಗೆ ತಿನ್ನಬಹುದು, ಹಾಗು ಕೆಲವು ಆಗ್ನೇಯ ಏಶಿಯನ್ ಸಲಾಡ್ ಗಳಲ್ಲಿ ಇದು ಅತ್ಯಂತ ಜನಪ್ರಿಯವಾಗಿದೆ.

ಹಣ್ಣು ಸಂಪೂರ್ಣ ಪಕ್ವಗೊಂಡಾಗ, ಇದು ಕಿತ್ತಳೆ ಬಣ್ಣಕ್ಕೆ ತಿರುಗುವುದರ ಜೊತೆಗೆ ಮೆತ್ತಗಿರುತ್ತದೆ, ಹಾಗು ವಿವಿಧ ಭಾಗಗಳಾಗಿ ಬೇರ್ಪಟ್ಟಿರುತ್ತದೆ. ಇವುಗಳು ಗಾಢವಾದ ಕೆಂಪು ತಿರುಳಿನಲ್ಲಿ ಸುತ್ತುವರಿದ ಬೀಜಗಳನ್ನು ಪ್ರಕಟಿಸಲು ಆಕರ್ಷಕವಾಗಿ ಹಿಂದಕ್ಕೆ ಸುರುಟಿಕೊಂಡಿರುತ್ತವೆ.

ಕಹಿಯಾದ ಹಾಗಲಕಾಯಿ, ಸಿಹಿಯಾದ ಆರೋಗ್ಯ
ಹಾಗಲಕಾಯಿ

ಹಾಗಲಕಾಯಿಯನ್ನು ಸಾಧಾರಣವಾಗಿ ಅದು ಹಸಿರಾಗಿರುವಾಗ ಅಥವಾ ಹಳದಿ ಬಣ್ಣಕ್ಕೆ ತಿರುಗುವ ಆರಂಭಿಕ ಹಂತದಲ್ಲೇ ಸೇವಿಸಲಾಗುತ್ತದೆ. ಹಾಗಲಕಾಯಿಯ ಎಳೆಯದಾದ ಚಿಗುರು ಬಳ್ಳಿಗಳು ಹಾಗು ಎಲೆಗಳನ್ನೂ ಸಹ ಸೊಪ್ಪಿನ ಪದಾರ್ಥವಾಗಿ ಸೇವಿಸಬಹುದು.

ಹಾಗಲಕಾಯಿಯನ್ನು ಅದರ ಕಹಿ ಸ್ವಾದಕ್ಕಾಗಿ ಸಾಮಾನ್ಯವಾಗಿ ಚೈನೀಸ್ ಅಡುಗೆಯಲ್ಲಿ ಬಳಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಅದನ್ನು ಹುರಿದು ತಿನಿಸನ್ನು ತಯಾರಿಸಲಾಗುತ್ತದೆ.

ಇದು ದಕ್ಷಿಣ ಏಷಿಯಾದುದ್ದಕ್ಕೂ ಬಹಳ ಜನಪ್ರಿಯವಾಗಿದೆ. ಉತ್ತರ ಭಾರತದಲ್ಲಿ, ಇದನ್ನು ಸಾಮಾನ್ಯವಾಗಿ ಆಲೂಗಡ್ಡೆಯೊಂದಿಗೆ ತಯಾರಿಸಲಾಗುತ್ತದೆ, ಹಾಗು ಕಹಿ ತಡೆಗಟ್ಟಲು ಮೊಸರಿನೊಂದಿಗೆ ಬಡಿಸಲಾಗುತ್ತದೆ, ಅಥವಾ ಇದನ್ನು ಪಲ್ಯೆ, ಸಬ್ಜಿ ಯಲ್ಲಿಯೂ ಬಳಸಲಾಗುತ್ತದೆ. ಪಂಜಾಬಿ ಪಾಕಪದ್ಧತಿಯಲ್ಲಿ, ಇದಕ್ಕೆ ಮಸಾಲೆ ತುಂಬಿ, ನಂತರ ಎಣ್ಣೆಯಲ್ಲಿ ಕರಿಯಲಾಗುತ್ತದೆ. ದಕ್ಷಿಣ ಭಾರತದಲ್ಲಿ ಇದನ್ನು ತುರಿದ ತೆಂಗಿನಕಾಯಿಯೊಂದಿಗೆ ಮಿಶ್ರಣ ಮಾಡಲಾಗುತ್ತದೆ. ಹುರಿದ ಕೊಬ್ಬರಿಯೊಂದಿಗೆ ಬೇಯಿಸಲಾಗುತ್ತದೆ ಹಾಗು ಪಚಡಿ, ಇದು ಡಯಾಬಿಟಿಸ್ ಗೆ ಔಷಧೀಯ ಆಹಾರವೆಂದು ಪರಿಗಣಿಸಲಾಗುತ್ತದೆ ಮಾಡಲು ಬಳಸಲಾಗುತ್ತದೆ. ಇತರ ಜನಪ್ರಿಯ ಖಾದ್ಯಗಳಲ್ಲಿ, ಇದನ್ನು ಪಲ್ಯದಲ್ಲಿ, ಕಡಲೆಬೀಜದೊಂದಿಗೆ ಅಥವಾ ಇತರ ನೆಲಗಡಲೆಗಳೊಂದಿಗೆ ಹುರಿಯಲಾಗುತ್ತದೆ. ಅಲ್ಲದೇ ಪಚ್ಚಿ ಪುಲುಸು ಹುರಿದ ಈರುಳ್ಳಿ ಹಾಗು ಇತರ ಮಸಾಲೆಗಳೊಂದಿಗೆ ತಯಾರಾದ ಒಂದು ಬಗೆಯ ಸೂಪ್ ಇದಾಗಿದೆ. ಪಾಕಿಸ್ತಾನ ಹಾಗು ಬಾಂಗ್ಲಾದೇಶಗಳಲ್ಲಿ, ಹಾಗಲಕಾಯಿಯನ್ನು ಸಾಧಾರಣವಾಗಿ ಈರುಳ್ಳಿ, ಕೆಂಪು ಮೆಣಸಿನಕಾಯಿ ಪುಡಿ, ಅರಿಶಿನದ ಪುಡಿ, ಉಪ್ಪು, ಧನಿಯಾ ಪುಡಿ, ಹಾಗು ಚಿಟಿಕೆ ಜೀರಿಗೆ ಕಾಳುಗಳನ್ನು ಹಾಕಿ ಬೇಯಿಸಲಾಗುತ್ತದೆ.

ಹಾಗಲಕಾಯಿಯು ದ್ವೀಪ ಪ್ರದೇಶಗಳಲ್ಲಿನ ಜನರ ಒಕಿನವನ್ ಪಾಕಪದ್ಧತಿಯ ಮಹತ್ವದ ತರಕಾರಿಯಾಗಿದೆ. ಅದಲ್ಲದೇ ಜಪಾನ್ ನ ಪ್ರಮುಖ ಭಾಗದಲ್ಲಿ ಅಧಿಕವಾಗಿ ಬಳಸಲಾಗುತ್ತದೆ. ದೀರ್ಘಾಯುಷಿಗಳಾದ ಜಪಾನೀಸ್ ಗಳಿಗಿಂತ ಇದನ್ನು ಸೇವಿಸುವ ಒಕಿನವನ್ ಗಳು ಇನ್ನೂ ಹೆಚ್ಚಿನ ದೀರ್ಘಾಯುಷಿಗಳೆಂದು ಜನಪ್ರಿಯವಾಗಿ ಹೇಳಲಾಗುತ್ತದೆ.

ಇಂಡೋನೆಷಿಯಾದಲ್ಲಿ, ಹಾಗಲಕಾಯಿಯನ್ನು ಹಲವಾರು ಖಾದ್ಯಗಳನ್ನು ತಯಾರಿಸಲು ಬಳಸುತ್ತಾರೆ, ಉದಾಹರಣೆಗೆ ಗಡೋ-ಗಡೋ, ಹಾಗು ಇದನ್ನು ಹುರಿಯಲಾಗುತ್ತದೆ. ತೆಂಗಿನಕಾಯಿಯ ಹಾಲಿನಲ್ಲಿ ಬೇಯಿಸಲಾಗುತ್ತದೆ, ಅಥವಾ ಆವಿಯಲ್ಲಿ ಬೇಯಿಸಲಾಗುತ್ತದೆ.

ವಿಯೆಟ್ನಾಂನಲ್ಲಿ, ಹಸಿಯಾದ ಹಾಗಲಕಾಯಿ ತುಂಡುಗಳನ್ನು ಒಣಗಿದ ಮಾಂಸದೊಂದಿಗೆ ಹಾಗು ಹಾಗಲಕಾಯಿಯ ಸೂಪನ್ನು ಸೀಗಡಿಯೊಂದಿಗೆ ಸೇವಿಸುವುದು ಬಹಳ ಜನಪ್ರಿಯವಾಗಿದೆ. ದಕ್ಷಿಣದಲ್ಲಿ, ರುಬ್ಬಿ ಹಂದಿಮಾಂಸಕ್ಕೆ ಸೇರಿಸಲಾದ ಹಾಗಲಕಾಯಿಯನ್ನು ಬೇಸಿಗೆಯಲ್ಲಿ ಜನಪ್ರಿಯಾದ ಸೂಪ್ ಆಗಿ ನೀಡಲಾಗುತ್ತದೆ. ಇದನ್ನು “ಬೇಯಿಸಿದ ಹಾಗಲಕಾಯಿಯ” ಪ್ರಮುಖ ಪದಾರ್ಥವಾಗಿಯೂ ಸಹ ಬಳಸಲಾಗುತ್ತದೆ. ಈ ಖಾದ್ಯವನ್ನು ಸಾಮಾನ್ಯವಾಗಿ ವಿಯೆಟ್ನಾಮಿಗಳ ಟೆಟ್ ರಜಾದಿವಸಕ್ಕಾಗಿ,ವರ್ಷಾಚರಣೆ ಸಂದರ್ಭದಲ್ಲಿ ತಯಾರಿಸಲಾಗುತ್ತದೆ.

ಲುಜೊನ್ ನ ಇಲೋಕಾಸ್ ಪ್ರದೇಶದಲ್ಲಿ ಜನಪ್ರಿಯವಾಗಿರುವ ಪಿನಕ್ಬೆಟ್ ಖಾದ್ಯವು, ಮುಖ್ಯವಾಗಿ ಹಾಗಲಕಾಯಿ, ಬಿಳಿಬದನೆ, ಬೆಂಡೆಕಾಯಿ, ನಾರು ಹುರುಳಿಕಾಯಿ, ಟೊಮೇಟೊಗಳು, ಲಿಮಾ ಬೀನ್ಸ್, ಪೆರುವಿನ ರಾಜಧಾನಿ ಲಿಮಾದಲ್ಲಿ ಬೆಳೆಯಲಾಗುತ್ತದೆ. ಹಾಗು ಇತರ ಹಲವಾರು ಸ್ಥಳೀಯ ತರಕಾರಿಗಳೊಂದಿಗೆ ಸ್ವಲ್ಪ ಬಗೂಂಗ್ ನ ಗಂಜಿಯಲ್ಲಿ ಒಟ್ಟಾಗಿ ಬೇಯಿಸಲಾಗುತ್ತದೆ.

ಕಹಿಯಾದ ಹಾಗಲಕಾಯಿ, ಸಿಹಿಯಾದ ಆರೋಗ್ಯ
ಹಾಗಲಕಾಯಿ ಉಪ್ಪಿನಕಾಯಿ

ನೇಪಾಳದಲ್ಲಿ, ಅಚಾರ್ ಎಂದು ಕರೆಯಲಾಗುವ, ಹಾಗಲಕಾಯಿಯಿಂದ ತಾಜಾ ಉಪ್ಪಿನಕಾಯಿ ತಯಾರಿಸಲಾಗುತ್ತದೆ. ಈ ಹಾಗಲಕಾಯಿಯನ್ನು ಹೋಳುಗಳಾಗಿ ಅಥವಾ ಗುಂಡಗೆ ಕತ್ತರಿಸಿಕೊಂಡು, ಎಣ್ಣೆಯಲ್ಲಿ ಬಾಡಿಸಿ, ಅದಕ್ಕೆ ನೀರನ್ನು ಚಿಮುಕಿಸಲಾಗುತ್ತದೆ. ಇದು ಮೆತ್ತಗಾಗಿ, ಕುಂದಿದಾಗ, ಇದನ್ನು ಬೆಳ್ಳುಳ್ಳಿ ಎಸಳುಗಳು, ಉಪ್ಪು ಹಾಗು ಕೆಂಪು ಅಥವಾ ಹಸಿರು ಮೆಣಸಿನಕಾಯಿ ಹಾಕಿ ಒರಳಿನಲ್ಲಿ ಹಾಕಿ ಸಣ್ಣ ಹೋಳುಗಳಾಗಿ ಕೊಚ್ಚಲಾಗುತ್ತದೆ. ಇದನ್ನು ಕೆಂಬಣ್ಣ ಬರುವವರೆಗೂ ಬಾಡಿಸಲಾಗುತ್ತದೆ, ಅದಕ್ಕೆ ಮಸಾಲೆ ತುಂಬಿ, ಅಥವಾ ಬಟಾಟೆಯೊಂದಿಗೆ ಪಲ್ಯವಾಗಿ ಬಡಿಸಲಾಗುತ್ತದೆ.

ಔಷಧೀಯ ಉಪಯೋಗಗಳು

ಜೀರ್ಣಿಸಲು ಸಹಕಾರಿ
ಕಹಿಯ ರುಚಿಯಿರುವ ಇತರ ಆಹಾರಗಳ ಮಾದರಿ, ಹಾಗಲಕಾಯಿಯು ಆಹಾರ ಪಚನಶಕ್ತಿಯನ್ನು ಚುರುಕುಗೊಳಿಸುತ್ತದೆಂದು ಹೇಳಲಾಗುತ್ತದೆ. ಅಲ್ಲದೇ ಈ ರೀತಿಯಾಗಿ ಅಜೀರ್ಣ ಹಾಗು ಮಲಬದ್ಧತೆಯ ಚಿಕಿತ್ಸೆಗೆ ಸಹಕಾರಿಯಾಗಿದೆ.

ಲಾಡಿಹುಳ ನಿರೋಧಕ
ಹಾಗಲಕಾಯಿಯನ್ನು, ಜಠರಗರುಳಿನ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಟೊಗೊನಲ್ಲಿ ಜನಪದೀಯ ಔಷಧವನ್ನಾಗಿ ಬಳಸಲಾಗುತ್ತದೆ. ಹಾಗು ಇದರ ರಸವು, ನೇಮಟೋಡ್ ವರ್ಗದ ಲಾಡಿಯಂತಹ ಹುಳು ಕಯೇನೋರ್ಹಬ್ಡಿಟಿಸ್ ಎಲೆಗನ್ಸ್ ವಿರುದ್ಧ ವಿಟ್ರೋನಲ್ಲಿ ಚುರುಕುಗೊಂಡಿರುವುದು ಕಂಡುಬಂದಿದೆ.

ಮಲೇರಿಯಾ ನಿರೋಧಕ
ಹಾಗಲಕಾಯಿಗೆ ಕಹಿಯು ಕ್ವಿನೈನ್ ಎಂಬ ಸಂಯುಕ್ತದಿಂದ ಬರುತ್ತದೆಂದು ಹೇಳಲಾಗುತ್ತದೆ. ಹಾಗಲಕಾಯಿಯು ಮಲೇರಿಯಾ ರೋಗವನ್ನು ತಡೆಗಟ್ಟುವಲ್ಲಿ ಹಾಗು ರೋಗಕ್ಕೆ ಚಿಕಿತ್ಸೆ ನೀಡುವಲ್ಲಿ ಸಹಕಾರಿಯಾಗಿದೆಯೆಂದು ಏಷಿಯಾದಲ್ಲಿ ಸಾಂಪ್ರದಾಯಿಕವಾಗಿ ಪರಿಗಣಿಸಲಾಗುತ್ತದೆ.

ವೈರಸ್ ನಿರೋಧಕ
ಟೊಗೊನಲ್ಲಿ, ಸಿಡುಬು ಹಾಗು ದಡಾರದಂತಹ ರೋಗಗಳ ವಿರುದ್ಧ ಈ ಜಾತಿ ಸಸ್ಯವನ್ನು ಸಾಂಪ್ರದಾಯಿಕವಾಗಿ ಬಳಸಲಾಗುತ್ತದೆ. ಎಲೆಯ ರಸದಲ್ಲಿ ನಡೆಸಲಾದ ಪರೀಕ್ಷೆಗಳು ಹರ್ಪಿಸ್ ಸಿಂಪ್ಲೆಕ್ಸ್ ಟೈಪ್ ೧ ವೈರಸ್ ನ ವಿರುದ್ಧ ವಿಟ್ರೋ ಚಟುವಟಿಕೆ ನಡೆಸುತ್ತದೆಂದು ಹೇಳಲಾಗಿದೆ.

ಕಹಿಯಾದ ಹಾಗಲಕಾಯಿ, ಸಿಹಿಯಾದ ಆರೋಗ್ಯ
ಹಾಗಲಕಾಯಿ

ಹಾಗಲಕಾಯಿಯಲ್ಲಿರುವ ಸಂಯುಕ್ತಗಳು HIV ಸೋಂಕಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆಂದು ಪ್ರಾಯೋಗಿಕ ಪರೀಕ್ಷೆಗಳು ಸೂಚಿಸುತ್ತವೆ. HIV ಸೋಂಕಿನ ಮೇಲೆ ಪರಿಣಾಮ ಬೀರುವ ಹಾಗಲಕಾಯಿಂದ ಬೇರ್ಪಡಿಸಲಾದ ಹೆಚ್ಚಿನ ಸಂಯುಕ್ತಗಳು, ಪ್ರೋಟೀನ್ ಗಳು ಅಥವಾ ಲೆಕ್ಟಿನ್ ಗಳಾಗಿರುತ್ತವೆ. ಇವೆರಡರಲ್ಲಿ ಯಾವುದನ್ನು ಸರಿಯಾಗಿ ಹೀರಿಕೊಳ್ಳಲಾಗುವುದಿಲ್ಲ, ಇದಕ್ಕಿಂತ ಭಿನ್ನವಾಗಿ ಹಾಗಲಕಾಯಿಯ ರಸವನ್ನು ಕುಡಿದರೆ ಸೋಂಕಿತ ಜನರಲ್ಲಿ HIV ಹರಡುವುದು ನಿಧಾನಗೊಳ್ಳುತ್ತದೆ. ಹಾಗಲ ಕಾಯಿಯ ರಸವನ್ನು ಸೇವಿಸಿದರೆ, ಅದು HIV ನಿರೋಧಕ ಔಷಧಿಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು.

ಮಧುಮೇಹ
ಹಾಗಲಕಾಯಿಯು ಡಯಾಬಿಟಿಸ್ ಮೆಲ್ಲಿಟಸ್ ಟೈಪ್ ೨ವನ್ನು ತಡೆಗಟ್ಟಲು ಅಥವಾ ಅದನ್ನು ನಿಷ್ಫಲಗೊಳಿಸಲು ಸಹಾಯಕವಾಗಿದೆಯೆಂದು ಜನಪದೀಯ ಚಿಕಿತ್ಸಾ ವಿಧಾನದ ಜ್ಞಾನವು ಸೂಚಿಸುತ್ತದೆ.

ಹಾಗಲಕಾಯಿಯು, ಇನ್ಸುಲಿನ್ ಹೀರಲು ಒಟ್ಟಾರೆಯಾಗಿ ಬಂಧಿಸುವ ಪ್ರೋಟೀನ್ ಅಲ್ಲದ ನಿರ್ದಿಷ್ಟ ಪೂರಕದ ಕಾರಣದಿಂದಾಗಿ ಇನ್ಸುಲಿನ್-ಮಾದರಿಯ ಚಟುವಟಿಕೆಯನ್ನು ಹೊಂದಿರುವ ಲೆಕ್ಟಿನ್ ನನ್ನೂ ರೋಗ ನಿರೋಧಕವಲ್ಲದಿದ್ದರೂ ಅದರಂತೆ ವರ್ತಿಸುವುದು ಸಹ ಒಳಗೊಂಡಿದೆ. ಈ ಲೆಕ್ಟಿನ್, ಹೊರಮೈಯಿನ ಕೋಶಗಳ ಮೇಲೆ ಪರಿಣಾಮ ಬೀರುವ ಮೂಲಕ ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ತಗ್ಗಿಸುತ್ತದೆ. ಇದು ಮಿದುಳು, ಹಸಿವಿನ ಅಪೇಕ್ಷೆಯನ್ನು ನಿಗ್ರಹಿಸುವ ಇನ್ಸುಲಿನ್ ನ ಪರಿಣಾಮಕ್ಕೆ ಸದೃಶವಾಗಿದೆ. ಈ ಲೆಕ್ಟಿನ್, ಹಾಗಲಕಾಯಿಯನ್ನು ತಿಂದ ನಂತರ ಬೆಳವಣಿಗೆಯಾಗುವ ಹೈಪೋಗ್ಲೈಸೆಮಿಕ್ ಪರಿಣಾಮಕ್ಕೆ ಪೂರಕವೆನ್ನುವಂತೆ ಪ್ರಮುಖವಾಗಿರುವ ಪರಿಣಾಮ ಬೀರುತ್ತದೆ.

ಹಾಗಲಕಾಯಿಯನ್ನು ಭೇದಿ, ಉದರಶೂಲೆ, ಜ್ವರಗಳು, ಸುಟ್ಟಗಾಯಗಳು, ನೋವಿನಿಂದ ಕೂಡಿದ ರಜಃಸ್ರಾವ, ತುರಿಗಜ್ಜಿ ಹಾಗು ಚರ್ಮದ ಇತರ ಸಮಸ್ಯೆಗಳನ್ನು ಒಳಗೊಂಡಂತೆ ಹಲವಾರು ಇತರ ಅಸ್ವಸ್ಥತೆಗಳಿಗಾಗಿ ಸಾಂಪ್ರದಾಯಿಕ ಔಷಧಪದ್ಧತಿಯಲ್ಲಿ ಬಳಸಲಾಗುತ್ತದೆ. ಇದನ್ನು ಸಂತಾನ ನಿಯಂತ್ರಣದಲ್ಲಿ ಗರ್ಭಸ್ರಾವಕವಾಗಿ, ಹಾಗು ಶಿಶುವಿನ ಜನನಕ್ಕೆ ಸಹಕಾರಿಯಾಗಲು ಸಹ ಬಳಸಲಾಗುತ್ತದೆ. ಕಣ್ಣು ಮತ್ತು ಚರ್ಮ ರೋಗಗಳು, ಗೌಟ್, ಮೂಲವ್ಯಾಧಿ ಹಾಗೂ ಉಸಿರಾಟದ ತೊಂದರೆಗಳನ್ನು ನಿಯಂತ್ರಿಸಬಲ್ಲದು. ಹಾಗಲಕಾಯಿ ಲಿವರ್ ಟಾನಿಕ್ ಆಗಿಯೂ ಕಾರ್ಯನಿರ್ವಹಿಸುತ್ತದೆ.

ಹಾಗಲಕಾಯಿಯ ಬೀಜಗಳು ವಿಷಕಾರಿಯೆನಿಸಿದ ವಿಸಿನೆಯನ್ನು ಒಳಗೊಂಡಿರುತ್ತವೆ, ಕೆಲವೊಮ್ಮೆ ಈ ರೀತಿಯಾಗಿ ಇದಕ್ಕೆ ಈಡಾಗುವ ವ್ಯಕ್ತಿಗಳಲ್ಲಿ ರಕ್ತಹೀನತೆಯ ಫಾವಿಸಂನ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇದರ ಜೊತೆಯಲ್ಲಿ, ಬೀಜಗಳ ಕೆಂಪು ರಸಲೆಗಳು ಮಕ್ಕಳಿಗೆ ವಿಷಕಾರಿಯೆಂದು ವರದಿಯಾಗಿದೆ, ಹಾಗು ಹಣ್ಣನ್ನು ಗರ್ಭಧಾರಣೆಯ ಸಮಯದಲ್ಲಿ ಸೇವಿಸುವುದು ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಜೂನ್ 23 ಗುರುವಾರ ಈ 8 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ. ತಿರುಕನು ಕುಬೇರ ನಾಗುತ್ತಾನೇ.

ಜೂನ್ 23 ಗುರುವಾರ ಈ 8 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ. ತಿರುಕನು ಕುಬೇರ ನಾಗುತ್ತಾನೇ.

ನಾಳೆ ಜೂನ್ 24 ಶುಕ್ರವಾರ 3 ರಾಶಿಯವರಿಗೆ ಚಾಮುಂಡೇಶ್ವರಿ ಕೃಪೆ ಸಿಗಲಿದೆ.

ನಾಳೆ ಜೂನ್ 24 ಶುಕ್ರವಾರ 3 ರಾಶಿಯವರಿಗೆ ಚಾಮುಂಡೇಶ್ವರಿ ಕೃಪೆ ಸಿಗಲಿದೆ.