ಪಾಲ್ಟ ಅಥವಾ ಅಗ್ವಕಟೆ,ಬಟರ್ ಪಿಯರ್ ಅಥವಾ ಅಲಿಗೇಟರ್ ಪಿಯರ್ ಎಂದೂ ಕರೆಯುವ ಆವಕಾಡೊ ಪರ್ಸಿಯಾ ಅಮೇರಿಕಾನ ಮೆಕ್ಸಿಕೋದ ಕ್ಯಾರಿಬೀನ್ ತವರಿಗೆ ಸೇರಿದ ಒಂದು ಮರ. ಇದು ದಕ್ಷಿಣ ಅಮೇರಿಕಾ ಮತ್ತು ಮಧ್ಯ ಅಮೇರಿಕಾದಲ್ಲಿಯೂ ಕಂಡುಬರುತ್ತದೆ. ದಾಲ್ಚಿನ್ನಿ, ಕರ್ಪೂರ ಮತ್ತು ಬೇ ಲಾರೆಲ್ ಮೊದಲಾದವುಗಳೊಂದಿಗೆ ಇದೂ ಹೂ ಬಿಡುವ ಒಂದು ಸಸ್ಯ ವಾಗಿದ್ದು ಲಾರಸಿಯೆಯಲ್ಲಿ ಇದು ಕಂಡುಬರುತ್ತದೆ.
ಈ ಮರದ ಹಣ್ಣನ್ನು “ಆವಕಾಡೊ” ಎಂಬ ಹೆಸರಿನಿಂದಲೇ ಕರೆಯುತ್ತಾರೆ, ಇದು ಅಂಡಾಕಾರದಲ್ಲಿ ಅಥವಾ ಗೋಲಾಕಾರದಲ್ಲಿ ಇರುತ್ತದೆ. ವಾಣಿಜ್ಯ ದೃಷ್ಟಿಯಿಂದ ಆವಕಾಡೊಗಳು ತುಂಬಾ ಬೆಲೆ ಬಾಳುವ ಹಣ್ಣುಗಳು, ಇವನ್ನು ಪ್ರಪಂಚದಾದ್ಯಂತ ಉಷ್ಣವಲಯದ ಹವಾಮಾನದಲ್ಲಿ ಬೆಳೆಯಲಾಗುತ್ತದೆ. ಹಸಿರು-ಸಿಪ್ಪೆಯ, ಪೇರು ಹಣ್ಣಿನ ಆಕಾರದಲ್ಲಿರುವ ಇದು ಕಟಾವು ಮಾಡಿದ ನಂತರ ಪಕ್ವವಾಗುತ್ತದೆ. ಸ್ವಂತವಾಗಿ ಆಂಶಿಕ ಪರಾಗಸ್ಪರ್ಶ ಮಾಡಿಕೊಳ್ಳುವ ಇವುಗಳನ್ನು ಹಣ್ಣಿನ ಅಪೇಕ್ಷಿತ ಗುಣಮಟ್ಟ ಮತ್ತು ಅಧಿಕ ಇಳುವರಿ ಪಡೆಯಲು ಕಸಿ ಮಾಡುವ ಮೂಲಕ ಸಂತಾನವೃದ್ಧಿ ಮಾಡಲಾಗುತ್ತದೆ.
ಅಮೇರಿಕಾನ ಅಥವಾ ಆವಕಾಡೊವನ್ನು ಮಧ್ಯ ಮತ್ತು ದಕ್ಷಿಣ ಅಮೇರಿಕಾದಲ್ಲಿ ಬಹುಹಿಂದಿನಿಂದಲೂ ಬೆಳೆಸಲಾಗುತ್ತಿದೆ.
‘ಆವಕಾಡೊ’ ಪದವು ನಾವಾಟಲ್ ಶಬ್ಧ ‘ಅವಾಕಾಟಲ್’ ಎಂಬುದರಿಂದ ಬಂದಿದೆ.ಹಿಂದೆ ಆವಕಾಡೊಗಳು ಲೈಂಗಿಕ ಪ್ರಚೋದಕವಾಗಿ ಉದ್ದವಾದ ಶಲಾಕಾಗ್ರವನ್ನು ಹೊಂದಿದ್ದವು. ಅದಕ್ಕಿರುವ ಲೈಂಗಿಕ ಆಕಾರದಿಂದಾಗಿ ‘ಮಡಿವಂತರ್ಯಾರೂ’ ಅದನ್ನು ಖರೀದಿಸುತ್ತಿರಲಿಲ್ಲ ಅಥವಾ ಬಳಸುತ್ತಿರಲಿಲ್ಲ. ಅಜ್ಟೆಕ್ ಜನರು ಆವಕಾಡೊಗಳನ್ನು ‘ಫಲವಂತತೆಯ ಹಣ್ಣು’ ಎಂದು ಕರೆದಿದ್ದಾರೆ. ಅರ್ಜೆಂಟೀನಾ, ಬೋಲಿವಿಯಾ, ಚಿಲಿ, ಪೆರು, ಮತ್ತು ಉರುಗ್ವೆ ಮೊದಲಾದ ದಕ್ಷಿಣ ಅಮೇರಿಕಾದ ಕೆಲವು ರಾಷ್ಟ್ರಗಳಲ್ಲಿ ಆವಕಾಡೊ ಅದರ ಕೆಚ್ವ ‘ಪಾಲ್ಟ’ ಎಂದು ಕರೆಯಲ್ಪಟ್ಟಿದೆ. ಇತರ ಸ್ಪ್ಯಾನಿಶ್-ಮಾತನಾಡುವ ರಾಷ್ಟ್ರಗಳಲ್ಲಿ ಇದನ್ನು ಅಗ್ವಕಟೆ ಎಂದೂ, ಪೋರ್ಚುಗೀಸ್ ಭಾಷೆಯ ದೇಶಗಳಲ್ಲಿ ಅಬಕಟೆ ಎಂದೂ ಕರೆಯುತ್ತಾರೆ. ಈ ಹಣ್ಣನ್ನು ಕೆಲವೊಮ್ಮೆ ಆವಕಾಡೊ ಪಿಯರ್ ಅಥವಾ ಅವಿಗೇಟರ್ ಪಿಯರ್ ಎನ್ನುತ್ತಾರೆ. ನಾವಾಟಲ್ ಪದ ಅವಾಕಾಟಲ್ ಅನ್ನು ಇತರ ಪದಗಳೊಂದಿಗೆ ಸಂಯೋಗ ಮಾಡಬಹುದು, ‘ಆವಕಾಡೊ ಸಾರು ಅಥವಾ ಸಾಂಬಾರು’ ಎಂಬರ್ಥವಿರುವ ಅವಾಕಾಮೊಲ್ಲಿ ಶಬ್ಧದಲ್ಲಿ ಇದನ್ನು ಸೇರಿಸಲಾಗಿದೆ ಹಾಗೂ ಮೆಕ್ಸಿಕೊ ದೇಶದ ಸ್ಪ್ಯಾನಿಶ್ ಪದ ಗ್ವಾಕಮೋಲ್ ಅನ್ನು ಇದರಿಂದಲೇ ನಿಷ್ಪನ್ನವಾಗಿದೆ.
ಹೂವಿನಲ್ಲಿ ಡೈಕೊಗಾಮಿಗುಣ ಇರುವುದರಿಂದ ಸ್ವ-ಪರಾಗಸ್ಪರ್ಶ ಮಾಡಿಕೊಳ್ಳಲು ಅವು ಭಾಗಶಃ ಮಾತ್ರ ಸಮರ್ಥವಾಗಿವೆ. ಈ ಮಿತಿಯಿಂದಾಗಿ ಇದರ ಬಾಲ್ಯಾವಸ್ಥೆಯ ಅವಧಿಯನ್ನು ಹೆಚ್ಚಿಸಿ ಬೆಳವಣಿಗೆಗೆ ಅಡ್ಡಿಯನ್ನುಂಟುಮಾಡುತ್ತದೆ. ಹೆಚ್ಚಿನ ತಳಿಗಳಲ್ಲಿ ಮೊಳಕೆಯೊಡೆವ ಗಿಡಗಳನ್ನು ಯಾದೃಚ್ಛಿಕವಾಗಿ ಕಸಿ ಮಾಡುವುದರಿಂದ ಅಥವಾ ಪ್ರಭೇದಗಳಿಂದ ಪಡೆದ ಹೊಸ ಪರಿವರ್ತನೆಯಿಂದ ಸಂತಾನವೃದ್ಧಿ ಮಾಡಲಾಗುತ್ತದೆ. ಮಿಶ್ರ-ಪರಾಗಸ್ಪರ್ಶ ನಡೆಯುವ ಸಂಭವ ಕಡಿಮೆಯಿರುತ್ತದೆಂದು ಭಾವಿಸಿ ಆಧುನಿಕ ಬೆಳೆಗಾರರು ಪ್ರತ್ಯೇಕ ಪ್ರದೇಶದಲ್ಲಿ ಬೆಳಸಲಾರಂಭಿಸಿದರು. ರಿವರ್ಸೈಡ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ ಹಾಗೂ ವೋಲ್ಕನಿ ಸೆಂಟರ್ ಮತ್ತು ಚಿಲಿಯ ಇನ್‌ಸ್ಟಿಟ್ಯೂಟೊ ಡಿ ಇನ್ವೆಸ್ಟಿಗೇಶನೆಸ್ ಅಗ್ರೋಪೆಕ್ವರಿಯಾಸ್ ಮೊದಲಾದವು ಈ ರೀತಿಯ ಕ್ರಮಗಳನ್ನೇ ಉಪಯೋಗಿಸಿಕೊಂಡವು. ಗಂಡು ಮತ್ತು ಹೆಣ್ಣು ಹೂವಾಗುವ ಸಮಯವು ತಳಿಗಳಿಂದ ತಳಿಗಳಿಗೆ ಬೇರೆಬೇರೆ ಆಗಿರುವುದರಿಂದ ಆವಕಾಡೊದ್ದೊಂದು ವೈಶಿಷ್ಟ್ಯ.
ಪ್ರಾಣಿಗಳಿಗೆ ವಿಷಕಾರಿ
ಬೆಕ್ಕು, ನಾಯಿ, ಕರು, ಆಡು, ಮೊಲ, ಇಲಿ, ಪಕ್ಷಿ, ಮೀನು ಮತ್ತು ಕುದುರೆ ಮೊದಲಾದ ಜೀವಿಗಳು ಆವಕಾಡೊ ಎಲೆ, ತೊಗಟೆ, ಸಿಪ್ಪೆ ಅಥವಾ ಬೀಜಗಳನ್ನು ತಿಂದರೆ ಅವುಗಳು ತೀವ್ರ ಅನಾರೋಗ್ಯಕ್ಕೆ ತುತ್ತಾಗುತ್ತವೆ ಅಥವಾ ಅವು ಸಾವನ್ನಪ್ಪುವ ಸಾಧ್ಯತೆಯೂ ಉಂಟು. ಆವಕಾಡೊ ಹಣ್ಣು ಕೆಲವು ಪಕ್ಷಿಗಳ ಪಾಲಿಗೆ ವಿಷಪೂರಿತವಾಗಿದೆ. ಬೆಕ್ಕು, ನಾಯಿ ಮತ್ತು ಕುದುರೆಗಳಂತಹ ಹಲವು ಪ್ರಾಣಿಗಳಿಗೂ ಇದು ವಿಷಕಾರಿಯಾಗಿದೆ .
ಆವಕಾಡೊಗಳನ್ನು ಹಾಗೆಯೇ ತಿನ್ನಬಹುದಾದರೂ, ಹೆಚ್ಚಾಗಿ ಅದ್ದಿ ತಿನ್ನುವಂಥ ದ್ರವರೂಪಿ ಆಹಾರ ತಯಾರಿಕೆಯಲ್ಲಿ ಬಳಸುತ್ತಾರೆ. ಗ್ವಾಕಮೋಲ್ ಆವಕಾಡೊಗಳಿಂದ ಮಾಡುವ ಜನಪ್ರಿಯ ತಿನಿಸುಗಳಲ್ಲೊಂದು. ಆವಕಾಡೊಗಳನ್ನು ಬೆಳೆಯುವ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಟೋಸ್ಟ್ ಮೇಲೆ ಈ ಹಣ್ಣಿನಿಂದ ಮಾಡಿದ ಪದಾರ್ಥವನ್ನು ಹಾಕಿ ಬೆಳಗಿನ ಉಪಾಹಾರಕ್ಕೆ ತಿನ್ನುತ್ತಾರೆ. ಇದನ್ನು ನಿಂಬೆ ಹಣ್ಣಿನ ರಸ, ಉಪ್ಪು ಮತ್ತು ಕಾಳುಮೆಣಸಿನೊಂದಿಗೆ ಆವಕಾಡೊವನ್ನು ಬೆರೆಸಿ, ಸುಟ್ಟ ಬಿಸಿ ಬ್ರೆಡ್‌ನ ಮೇಲೆ ಹರಡಿ ನೀಡುತ್ತಾರೆ. ಆವಕಾಡೊ ಹೋಳುಗಳನ್ನು ಹೆಚ್ಚಾಗಿ ಹ್ಯಾಮ್‌ಬರ್ಗರ್, ಟೋರ್ಟಾಸ್, ಹಾಟ್ ಡಾಗ್ ಮತ್ತು ಕಾರ್ನೆ ಅಸಾಡ ಮೊದಲಾದವುಗಳಲ್ಲಿ ಸೇರಿಸುತ್ತಾರೆ. ಆವಕಾಡೊಗಳನ್ನು ಮೊಟ್ಟೆ ಪದಾರ್ಥಗಳೊಂದಿಗೂ ಜತೆಗೂಡಿಸುತ್ತಾರೆ. ಆವಕಾಡೊವನ್ನು ಕಹಿಯಾಗದ ರೀತಿಯಲ್ಲಿ ಬೇಯಿಸಬಹುದಾದರೂ, ಸಾಮಾನ್ಯವಾಗಿ ಹಸಿಯಾಗಿಯೇ ನೀಡಲಾಗುತ್ತದೆ.
ಆವಕಾಡೊಗಳು ಕರುಳನ್ನು ಶಾಂತಗೊಳಿಸುವ ಮೂಲಕ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಆವಕಾಡೊ ಜೀರ್ಣಾಂಗ ವ್ಯವಸ್ಥೆಯನ್ನು ಸರಾಗವಾಗಿ ನಡೆಸುತ್ತದೆ.
ಆವಕಾಡೊದಲ್ಲಿರುವ ಆ್ಯಂಟಿಆ್ಯಕ್ಸಿಡೆಂಟ್ಗಳು ದೇಹವನ್ನು ಸ್ವತಂತ್ರ ರಾಡಿಕಲ್ಸ್ನಿಂದ ರಕ್ಷಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿಟಮಿನ್ ಸಿ ಇದರಲ್ಲಿರುತ್ತದೆ. ವಿಟಮಿನ್ ಬಿ ಹೊಂದಿದ್ದು ಇದು ಚರ್ಮದ ಆರೋಗ್ಯವನ್ನು ರಕ್ಷಿಸುತ್ತದೆ.
ಆವಕಾಡೊಗಳು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.
ಇದು ಲುಟೀನ್ ಮತ್ತು ಜಿಯಾಕ್ಸಾಂಥಿನ್ ಅನ್ನು ಹೊಂದಿರುತ್ತವೆ.ದೃಷ್ಟಿ ದೋಷದಂತಹ ಸಮಸ್ಯೆಗೆ ಈ ಹಣ್ಣು ಚಿಕಿತ್ಸೆ ನೀಡುತ್ತದೆ.ಆವಕಾಡೊದಲ್ಲಿರುವ ಉತ್ಕರ್ಷಣ ನಿರೋಧಕಗಳು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ ಮತ್ತು ಕುರುಡುತನದಂತಹ ಅಪಾಯವನ್ನು ಕಡಿಮೆ ಮಾಡುತ್ತದೆ.ಹಾಗಾಗಿ ಪ್ರತಿನಿತ್ಯ ನಿಯಮಿತವಾಗಿ ಆವಕಾಡೊಗಳನ್ನು ಸೇವನೆ ಮಾಡುವುದರಿಂದ ಉತ್ತಮವಾದ ಕಣ್ಣುಗಳನ್ನು ಪಡೆಯಬಹುದು.
ಆವಕಾಡೊ ಎಣ್ಣೆಯು ಚರ್ಮ ಮತ್ತು ಕೂದಲು ಆರೋಗ್ಯವನ್ನು ಕಾಪಾಡುತ್ತದೆ. ಆವಕಾಡೊ ಹಣ್ಣುಗಳನ್ನು ತಿನ್ನುವುದು ಒಂದು ರೀತಿಯಾದರೆ ಆವಕಾಡೊದಿಂದ ತಯಾರಿಸಿದ ಎಣ್ಣೆಯನ್ನು ದೇಹಕ್ಕೆ ಹಚ್ಚಿಕೊಳ್ಳುವ ಮೂಲಕ ಚರ್ಮ ಹೊಳಪು ಪಡೆಯುತ್ತದೆ.. ಜತೆಗೆ ತಲೆ ಕೂದಲು ಬುಡದಿಂದ ಸದೃಢವಾಗಿ ಬೆಳೆಯಲು ಸಹಾಯಕವಾಗಿದೆ.
ಆವಕಾಡೊ ಹಣ್ಣುಗಳು ಹೆಚ್ಚಿನ ಕೊಬ್ಬನ್ನು ಹೊಂದಿದ್ದರೂ ಆರೋಗ್ಯರಕವಾದ ಮೊನೊಸಾಚುರೇಟೆಡ್ ಕೊಬ್ಬನ್ನು ಹೊಂದಿದೆ.ಆವಕಾಡೊಗಳ ಸೇವನೆಯು ಸೊಂಟದ ಸುತ್ತಲಿರುವ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದು ಅಂಗಾಂಶಗಳು, ಕೀಲುಗಳು ಮತ್ತು ಸ್ನಾಯುಗಳಲ್ಲಿ ಉರಿಯೂತವನ್ನು ತಡೆಯುತ್ತದೆ. ಮತ್ತೆ, ಒಂದು ಅಧ್ಯಯನವು 300 ಮಿಗ್ರಾಂ ಆವಕಾಡೊ ಮತ್ತು ಸೋಯಾಬೀನ್ ಆಧಾರಿತ ಆಹಾರ ಪೂರಕವು ಸೊಂಟ ಅಥವಾ ಮೊಣಕಾಲಿನ ಅಸ್ಥಿಸಂಧಿವಾತ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ ಎಂದು ತೋರಿಸಿದೆ.
ಧನ್ಯವಾದಗಳು.
GIPHY App Key not set. Please check settings