in

ಎಣ್ಣೆಯುಕ್ತ  ಮುಖದ ಚರ್ಮಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳು ಹೀಗಿವೆ

ಎಣ್ಣೆಯುಕ್ತ  ಮುಖದ ಚರ್ಮಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳು ಹೀಗಿವೆ
ಎಣ್ಣೆಯುಕ್ತ  ಮುಖದ ಚರ್ಮಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳು ಹೀಗಿವೆ

ಹಣೆಯ-ಮೂಗು-ಗಲ್ಲದ ಭಾಗ. ಈ ಭಾಗದ ಚರ್ಮವು ಎಣ್ಣೆಯುಕ್ತವಾಗಿದ್ದರೆ ಮತ್ತು ಹಲವಾರು ಪ್ರಯತ್ನಗಳ ನಂತರವೂ, ಮುಖದ ಈ ಭಾಗವು ಮತ್ತೆ ಮತ್ತೆ ಎಣ್ಣೆಯುಕ್ತವಾಗುತ್ತಲೇ ಇದ್ದರೆ ತುಂಬಾ ಕಿರಿ ಕಿರಿ ಆಗುತ್ತೆ.

ಎಣ್ಣೆ ಚರ್ಮದ ಸಮಸ್ಯೆ ಎದುರಿಸುವುದು ತುಂಬಾ ಕಠಿಣ ಕೆಲಸವಾಗಿದ್ದು, ಈ ಸಮಸ್ಯೆಯಿಂದ ಬಿಳಿ ಕಲೆ, ಕಪ್ಪು ಕಲೆ, ಮೊಡವೆಗಳನ್ನು ಹೊಂದುವ ಸಾಧ್ಯತೆ ಕೂಡ ಇದೆ. ಎಣ್ಣೆ ಚರ್ಮದ ಸಮಸ್ಯೆ ನಿವಾರಿಸಲು ಚರ್ಮದ ಬಗ್ಗೆ ಕೇರ್ ತೆಗೆದುಕೊಳ್ಳುವುದು ಅಗತ್ಯ. ಇದಕ್ಕಾಗಿ ಫೇಷಿಯಲ್ ಮಾಡುವುದು ಒಂದು ಉತ್ತಮ ಅನುಭವ. ಆದ್ದರಿಂದ ಫೇಶಿಯಲ್‌ಗಾಗಿ ವಾರದಲ್ಲಿ ಒಂದು ದಿನವಾದರೂ ಮೀಸಲಿಡುವುದು ಉತ್ತಮ. 

ಚರ್ಮವು ನಿರ್ಜಲೀಕರಣಗೊಂಡಾಗ, ತೇವಾಂಶದ ನಷ್ಟವನ್ನು ಸರಿದೂಗಿಸಲು ತೈಲವನ್ನು ಅಧಿಕವಾಗಿ ಉತ್ಪಾದಿಸುತ್ತದೆ, ಇದರಿಂದಾಗಿ ಬ್ಲ್ಯಾಕ್ ಹೆಡ್ಸ್, ಮೊಡವೆಗಳು ಮತ್ತು ಇತರ ಚರ್ಮದ ಒಡೆಯುವಿಕೆಗೆ ಒಳಗಾಗುವ ರಂಧ್ರಗಳು ವಿಸ್ತರಿಸುತ್ತವೆ.

ಎಣ್ಣೆಯುಕ್ತ  ಮುಖದ ಚರ್ಮಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳು ಹೀಗಿವೆ
ಚರ್ಮದಲ್ಲಿ ಎಣ್ಣೆಯ ಅಂಶ ವಿವಿಧ ಸಮಸ್ಯೆಗಳಿಗೆ ಕಾರಣವಾಗುತ್ತದೆ

“ಎಣ್ಣೆಯುಕ್ತ ಚರ್ಮ ಅಂತ ಹೇಗೆ ಅರ್ಥಮಾಡಿಕೊಳ್ಳುವುದು ಅಂದರೆ,  ಚರ್ಮವು ಅತಿಯಾದ ಎಣ್ಣೆಯನ್ನು ಉತ್ಪಾದಿಸುತ್ತದೆ, ಇದು ಚರ್ಮದಲ್ಲಿ ವಿವಿಧ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಂದರೆ ಮೊಡವೆಗಳು, ಮೊಡವೆ ಗುರುತುಗಳು ಮತ್ತು ಮೇದೋಗ್ರಂಥಿಗಳ ಸ್ರಾವ ಇತ್ಯಾದಿ.

ಪ್ರತಿಯೊಬ್ಬರ ಮುಖದ ಗುಣಲಕ್ಷಣಗಳು ಬೇರೆ ಬೇರೆಯಾಗಿ ಇರುತ್ತದೆ. ಇದನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಎಣ್ಣೆ ಅಂಶ ಮುಖದ ಮೇಲೆ ಹೆಚ್ಚಿನ ಮಟ್ಟದಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿಗಳು ತಮ್ಮ ತ್ವಚೆಯ ಬಗ್ಗೆ ಕಾಳಜಿಯನ್ನು ವಹಿಸಬೇಕು. ಇಂಥಹ ತ್ವಚೆಗೆ ನೈಸರ್ಗಿಕವಾಗಿ ತಯಾರಿಸಿದ ಸಾಮಗ್ರಿಗಳನ್ನು ಅಥವಾ ಮುಖ ಲೇಪನವನ್ನು ಬಳಸಬೇಕು. ಮಾರುಕಟ್ಟೆಯಲ್ಲಿ ಹಲವಾರು ರಾಸಾಯನಿಕ ಕೃತಕವಾಗಿ ತಯಾರಿಸಿದ ಕ್ರೀಮ್ ಗಳನ್ನು ಉಪಯೋಗಿಸಿದರೆ ಅವು ಕೇವಲ ಅಲ್ಪ ಸಮಯದವರೆಗೆ ಮಾತ್ರ ಶಮನಗೊಳಿಸುತ್ತವೆ. ಜೊತೆಗೆ ದೀರ್ಘ ಕಾಲದವರೆಗೆ ಹಾನಿಯನ್ನು ಉಂಟು ಮಾಡುತ್ತದೆ.

ಎಣ್ಣೆ ಚರ್ಮದ ಸಮಸ್ಯೆ ಮುಖ್ಯವಾಗಿ ಎಣ್ಣೆ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಕಾಣಿಸುತ್ತದೆ. ಆದ್ದರಿಂದ ಈ ಸಮಸ್ಯೆ ಇರುವವರು ತ್ವಚೆಯ ಆರೋಗ್ಯಕ್ಕೆ ಮತ್ತು ಆರೈಕೆಗೆ ಹೆಚ್ಚಿನ ಪ್ರಾಮುಖ್ಯತೆ ಮತ್ತು ಕಾಳಜಿಯನ್ನು ವಹಿಸಬೇಕು. ಮುಖದ ಮೇಲೆ ಎಣ್ಣೆಯ ಅಂಶ ಆವರಿಸಿರುವುದರಿಂದ ಮುಖದ ಅಂದವು ಹಾಳಾಗುವುದರ ಜೊತೆಗೆ ಮುಖದ ಮೇಲೆ ನೀರಿನಿಂದ ಕೂಡಿರುವ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.

ಕ್ಲೆನ್ಸರ್ ಬಳಸಿ ಚರ್ಮವನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಎಣ್ಣೆ ತ್ವಚೆಗಾಗಿ ಅನುಸರಿಸುವ ತ್ವಚೆಯ ಆರೈಕೆಯಲ್ಲಿ ಇದು ಅತ್ಯಂತ ಪ್ರಮುಖವಾದುದು. ಇದು ಎಲ್ಲಾ ಕಲ್ಮಶಗಳನ್ನು ಮತ್ತು ಸತ್ತ ಚರ್ಮವನ್ನು ತೆಗೆದು ಹಾಕುವುದು ಮತ್ತು ಸೋಂಕುಗಳನ್ನು ತಡೆಗಟ್ಟಲು ಸಹಾಯ ಮಾಡುವುದು.

ಮುಖದ ಮೇಲೆ ಅತಿಯಾದ ಎಣ್ಣೆಯ ಸಮಸ್ಯೆಯನ್ನು ನಿಯಂತ್ರಿಸಲು ಮತ್ತು ಈ ಎಣ್ಣೆಯಿಂದಾಗಿ ಇತರ ಚರ್ಮದ ಸಮಸ್ಯೆಗಳನ್ನು ತಪ್ಪಿಸಲು,  ದಿನಕ್ಕೆ ಕನಿಷ್ಠ 5 ಬಾರಿಯಾದರೂ  ಮುಖವನ್ನು ತೊಳೆಯಬೇಕು. ಆದರೆ ಪ್ರತಿ ಬಾರಿಯೂ ಫೇಸ್ ವಾಶ್ ಬಳಸುವ ಅಗತ್ಯವಿಲ್ಲ. ಬದಲಿಗೆ ಫೇಸ್ ವಾಶ್ ಅನ್ನು ಕೇವಲ 2 ಬಾರಿ ಬಳಸಿ ಮತ್ತು ಫೇಸ್ ವಾಶ್ ಇಲ್ಲದೆ ಮೂರು ಬಾರಿ ಮುಖವನ್ನು ತಾಜಾ ನೀರು ಅಥವಾ ಉಗುರುಬೆಚ್ಚಗಿನ ನೀರಿನಿಂದ ತೊಳೆಯಬೇಕು.

ಎಣ್ಣೆಯುಕ್ತ  ಮುಖದ ಚರ್ಮಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳು ಹೀಗಿವೆ
ಆಗಾಗ ಮುಖವನ್ನು ನೀರಿನಲ್ಲಿ ತೊಳೆಯಬೇಕು

ಎಣ್ಣೆಯುಕ್ತ ಚರ್ಮದ ಕಾರಣ ಚರ್ಮದ ಆರೈಕೆಯಲ್ಲಿ ಮಹಿಳೆಯರು ಮಾಡುವ ದೊಡ್ಡ ತಪ್ಪು ಎಂದರೆ ಅವರು ಮಾಯಿಶ್ಚರೈಸರ್ ಹಚ್ಚುವುದನ್ನು ನಿಲ್ಲಿಸುವುದು ಅಥವಾ ಕಡಿಮೆ ಮಾಡುವುದು. ಆದರೆ ಹಾಗೆ ಮಾಡುವುದರಿಂದ  ಚರ್ಮವು ಕೆಟ್ಟ ಸ್ಥಿತಿಯಲ್ಲಿರುತ್ತದೆ. ಖಂಡಿತವಾಗಿಯೂ ಮಾಯಿಶ್ಚರೈಸರ್ ಅನ್ನು ಹಚ್ಚಬೇಕು.

ಮುಖದ ಮೇಲೆ ಇರುವ ಎಣ್ಣೆ ಅಂಶವನ್ನೂ ನಿವಾರಿಸಲು ಬಾಳೆಹಣ್ಣು ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಬಾಳೆ ಹಣ್ಣು ತೆಗೆದುಕೊಂಡು ಅದನ್ನು ಕೈ ಯಿಂದ ಸ್ಮ್ಯಾಶ್ ಮಾಡಿ ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿಕೊಳ್ಳಿ. ಮತ್ತು ಜೊತೆಗೆ ನಿಂಬೆ ರಸವನ್ನು ಸೇರಿಸಿಕೊಳ್ಳಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ. ಅರ್ಧ ಗಂಟೆಯ ಬಳಿಕ ಮುಖವನ್ನು ತೊಳೆದುಕೊಳ್ಳಬೇಕು. ಇದರಿಂದ ಎಣ್ಣೆಯ ಅಂಶ ನಿವಾರಣೆಯಾಗುತ್ತದೆ.

ಒಂದು ಬೌಲ್ ನ್ನು  ಬಿಸಿ ನೀರಿನಿಂದ ತುಂಬಿಸಿ, ಅದರ ಮೇಲೆ ಮುಖವನ್ನು ಇಟ್ಟು, ಟವೆಲ್ ನಿಂದ ಆವಿಯು ಹೊರಗೆ ಹೋಗದಂತೆ ಕವರ್ ಮಾಡಿ.  ಇದು ಚರ್ಮದ ರಂಧ್ರಗಳನ್ನು ತೆರೆದು ಕೊಳೆಯನ್ನು ತೆಗೆದು ಹಾಕಬಹುದು. 

ಬೆಳಿಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ಫೇಸ್ ವಾಶ್‌ನಿಂದ ಮುಖವನ್ನು ಸ್ವಚ್ಛಗೊಳಿಸಬೇಕು. ಆದ್ದರಿಂದ ರಾತ್ರಿ ಮಲಗುವ ಮುನ್ನ ಚರ್ಮವು ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ. ಅಲ್ಲದೆ, ಹೆಚ್ಚಿನ ತೈಲವು ಟಿ ವಲಯದಲ್ಲಿ ರಾತ್ರಿಯಿಡೀ ಬರುತ್ತದೆ, ಇದರಿಂದಾಗಿ ಚರ್ಮದ ಮೇಲೆ ಇತರ ಸಮಸ್ಯೆಗಳು ಉಂಟಾಗಬಾರದು. ಆದ್ದರಿಂದ ಬೆಳಿಗ್ಗೆ ಫೇಸ್ ವಾಶ್ ಮಾದುವುದು ಉತ್ತಮ.

ದಿನಕ್ಕೆ ಎರಡರಿಂದ ಮೂರು ಬಾರಿ ಕಡಲೆ ಹಿಟ್ಟಿನಿಂದ ಮುಖವನ್ನು ತೊಳೆಯುವುದರಿಂದ ಮುಖದಲ್ಲಿ ಆವರಿಸಿರುವ ಎಣ್ಣೆಯ ಅಂಶವನ್ನೂ ಕಡಿಮೆ ಮಾಡುತ್ತದೆ.

ಎಣ್ಣೆ ಚರ್ಮವು ಸಾಮಾನ್ಯವಾಗಿ ಹೆಚ್ಚು ಧೂಳು, ಕೊಳೆ ಮತ್ತು ಇತರ ಕಲ್ಮಶಗಳನ್ನು ಪರಿಸರದಲ್ಲಿ ಆಕರ್ಷಿಸುತ್ತದೆ. ಈ ಕಲ್ಮಶಗಳು ಮುಖದ ಚರ್ಮದ ಮೇಲೆ ಪದರದಂತೆ ರೂಪುಗೊಳ್ಳಬಹುದು. ಈ ಕೊಳೆ ಪದರವನ್ನು ಹೋಗಲಾಡಿಸಲು ಖಂಡಿತವಾಗಿಯೂ ಎಕ್ಸ್ ಫೋಲಿಯೇಷನ್ ಅಗತ್ಯ. 

ಎಣ್ಣೆಯುಕ್ತ  ಮುಖದ ಚರ್ಮಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳು ಹೀಗಿವೆ
ನೈಸರ್ಗಿಕ ಸಾಮಾಗ್ರಿಗಳನ್ನು ಬಳಸಿ

ಬಾಳೆಹಣ್ಣು ಇದರಿಂದ ಮುಖದ ಸೌಂದರ್ಯ ಹೆಚ್ಚಾಗುತ್ತದೆ. ಪಪ್ಪಾಯಿ ಹಣ್ಣು ಮತ್ತು ಕಲ್ಲಂಗಡಿ ಹಣ್ಣುಗಳಿಂದ ಮುಖಕ್ಕೆ ಮಸಾಜ್ ಮಾಡುವುದರಿಂದ ಎಣ್ಣೆಯ ಚರ್ಮ ನಿವಾರಣೆಯಾಗಿ ಸೌಂದರ್ಯ ಹೆಚ್ಚಾಗುತ್ತದೆ.

ಬಾದಾಮಿ ಎಣ್ಣೆ, ನಿಂಬೆ ರಸ ಮತ್ತು ಮೊಟ್ಟೆ ಬಿಳಿ ಬಣ್ಣದಿಂದ ಮಾಯಿಶ್ಚರೈಸರ್ ತಯಾರಿಸಬಹುದು. ಇದನ್ನು ಮುಖ ಮತ್ತು ಕುತ್ತಿಗೆಯ ಸುತ್ತ ಚೆನ್ನಾಗಿ ಹಚ್ಚಿ, ಅದು ಡ್ರೈ ಆಗುವವರೆಗೂ ಹಾಗೆಯೇ ಬಿಟ್ಟು ನಂತರ ತೊಳೆಯಿರಿ.

ಕಿತ್ತಳೆ ಅಥವಾ ನಿಂಬೆ ಹಣ್ಣಿನ ಸಿಪ್ಪೆಯನ್ನು ಪುಡಿ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಬೇಕು. ಇದರಿಂದಲೂ ಮುಖದ ಎಣ್ಣೆಯ ಸಮಸ್ಯೆ ನಿವಾರಣೆ ಆಗುತ್ತದೆ. 

2 ಚಮಚ ಓಟ್ಸ್ ಅನ್ನು ನುಣ್ಣಗೆ ಅರೆದು, ಇದನ್ನು ಸ್ವಲ್ಪ ತಾಜಾ ಅಲೋ ಜೆಲ್‌ನೊಂದಿಗೆ ಸೇರಿಸಿ. ಮುಖಕ್ಕೆ ಹಚ್ಚುವ ಮೂಲಕ ಎಕ್ಸ್ ಫೋಲಿಯೇಟ್ ಮಾಡಬಹುದು. 

ಮುಖವನ್ನು ಉಜ್ಜಿದ ತಕ್ಷಣ,  ರಂಧ್ರಗಳು ತೆರೆದುಕೊಳ್ಳುತ್ತದೆ. ಈ ಸಂದರ್ಭದಲ್ಲಿ ಮುಖವನ್ನು ಶಾಂತಗೊಳಿಸುವ ಫೇಸ್ ಪ್ಯಾಕ್ ಮಾಡಬೇಕು. ಇನ್ನೊಂದು ಕಡೆ, ಇದು ಎಣ್ಣೆಯ ಸಮತೋಲನದ ಫೇಸ್ ಪ್ಯಾಕ್ ಆಗಿರಬೇಕು, ಇದು ಹೆಚ್ಚುವರಿ ಸೆಬಮ್ ಉತ್ಪಾದನೆಯನ್ನು ನಿಯಂತ್ರಿಸಬಹುದು. 

ಪಪ್ಪಾಯಿ, ಟೊಮೆಟೊ, ಅಲೋವೆರಾ ಜೆಲ್, ಶ್ರೀಗಂಧದ ಪುಡಿ ಮತ್ತು ಜೇನುತುಪ್ಪದಂತಹ ನೈಸರ್ಗಿಕ ಸಾಮಾಗ್ರಿಗಳನ್ನು ಬಳಸಿ ಮಾಸ್ಕ್ ತಯಾರಿಸಿ 15-20 ನಿಮಿಷ ಕಾಲ ಹಾಗೆಯೇ ಇರಿಸಿ ನಂತರ ಬೆಚ್ಚಗಿನ ನೀರಿನಿಂದ ತೊಳೆಯಬೇಕು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

One Comment

ಭಾರತವು ಗಣರಾಜ್ಯವಾದ ದಿನ

ಜನವರಿ 26 ರಂದು, ಭಾರತೀಯ ಸಂವಿಧಾನ ಜಾರಿಗೆ ಬಂದು ಭಾರತವು ಗಣರಾಜ್ಯವಾದ ದಿನ

ತುಳಸಿ ಗಿಡ ಒಣಗುತ್ತಿದೆ ಅಂದರೆ ಹೀಗೆ ಮಾಡಿ

ತುಳಸಿ ಗಿಡ ಒಣಗುತ್ತಿದೆ ಅಂದರೆ ಹೀಗೆ ಮಾಡಿ ನೋಡಿ