in ,

ಹರಿವೆ ಸೊಪ್ಪಿನಲ್ಲಿದೆ ಸಾಕಷ್ಟು ಆರೋಗ್ಯ ಲಾಭ

ಹರಿವೆ ಸೊಪ್ಪು
ಹರಿವೆ ಸೊಪ್ಪು

ಹರಿವೆ ಉಷ್ಣವಲಯದಲ್ಲಿ ಬೆಳೆಯುವು ಸೊಪ್ಪು ತರಕಾರಿ. ಇದರಲ್ಲಿ ಅಧಿಕವಾಗಿರುವ ಪೌಷ್ಟಿಕಾಂಶ, ಔಷಧೀಯ ಗುಣ ದೇಹಾರೋಗ್ಯ ಕಾಪಾಡಲು ಸಹರಕಾರಿ. ಇದು ಹರಿವೆಯ ಹಿರಿಮೆ ಕೂಡ. ಹರಿವೆ ಕಾಂಡವು ಅಷ್ಟು ಗಟ್ಟಿಯಾಗಿರುವುದಿಲ್ಲ. ಗಿಡದಲ್ಲಿ ಹಲವಾರು ಕವಲೊಡೆದು ರೆಂಬೆಗಳು ಹುಟ್ಟಿಕೊಳ್ಳುವುದು. ಇದರಿಂದ ಪೊದೆಯಂತೆ ಹರಡಿ ಬೆಳೆಯುವುದು.

ಹಸಿರೆಲೆ ತರಕಾರಿಗಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ನಮಗೆಲ್ಲರಿಗೂ ತಿಳಿದೇ ಇದೆ. ಇಂತಹ ತರಕಾರಿಗಳನ್ನು ನಾವು ದೈನಂದಿನ ಆಹಾರ ಕ್ರಮದಲ್ಲಿ ಬಳಸಿಕೊಂಡರೆ ಆಗ ಖಂಡಿತವಾಗಿಯೂ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಸಿರೆಲೆ ತರಕಾರಿಗಳು ನೈಸರ್ಗಿಕವಾಗಿದ್ದು, ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ. ಇವುಗಳು ನಮ್ಮ ದೇಹವನ್ನು ಆರೋಗ್ಯವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇಂತಹ ಹಸಿರೆಲೆ ತರಕಾರಿಯಲ್ಲಿ ಹರಿವೆ ಸೊಪ್ಪು ಒಂದಾಗಿದೆ.

ಹರಿವೆ ಒಂದು ರೀತಿಯಲ್ಲಿ ಬಸಳೆ ಸೊಪ್ಪಿನಂತೆಯೇ ಇದೆ. ಇದು ದಕ್ಷಿಣ ಭಾರತದ ಕರಾವಳಿ ಪ್ರದೇಶ ಹಾಗೂ ಹಿಮಾಲಯದ ತಪ್ಪಲಿನಲ್ಲಿ ಕಾಣಲು ಸಿಗುತ್ತದೆ. ಇದು ಬಂಗಾರ, ಕೆಂಪು, ಹಸಿರು ಮತ್ತು ನೇರಳೆ ಬಣ್ಣದಲ್ಲಿ ಲಭ್ಯವಿದ್ದು. ಇದರಿಂದ ಹಲವಾರು ರೀತಿಯ ಲಾಭಗಳು ಸಿಗುವುದು.

ಹರಿವೆ ಸೊಪ್ಪನ್ನು ಹಲವು ರೀತಿಯಲ್ಲಿ ಆಹಾರ ಪದಾರ್ಥಗಳಲ್ಲಿ ಸೇರಿಸಬಹುದು. ಇದನ್ನು ಸೊಪ್ಪಿನ ಸಾಂಬರ್, ಹೆಸರು ಕಾಳು ಪಲ್ಯಗಳ ಜೊತೆಗೆ, ಸಲಾಡ್‌ಗಳಲ್ಲಿ, ಪರೋಟ, ಆಲೂಗಡ್ಡೆ ಮಿಶ್ರಿತ ಪಲ್ಯದ ಜೊತೆಗೆ, ತಂಬೂಳಿಯಾಗಿಯೂ ಮಾಡಬಹುದು. ಸೊಪ್ಪಿನ ಪಲ್ಯ ಒಂದನ್ನೇ ಮಾಡಿ ತಿನ್ನುವುದು ಇನ್ನೂ ಒಳ್ಳೆಯದು ಹಾಗೂ ರುಚಿಯಾಗಿರುತ್ತದೆ.

ಹರಿವೆ ಸೊಪ್ಪಿನಲ್ಲಿ ಹೀರಿಕೊಳ್ಳುವ ಮತ್ತು ಹೀರಿಕೊಳ್ಳದ ನಾರಿನಾಂಶವು ಅತ್ಯಧಿಕ ಮಟ್ಟದಲ್ಲಿ ಇದೆ. ನಾರಿನಾಂಶವನ್ನು ತಿನ್ನುವುದರಿಂದ ತೂಕ ಇಳಿಸಲು ಮತ್ತು ಕೊಲೆಸ್ಟ್ರಾಲ್ ತಗ್ಗಿಸುವ ಪರಿಣಾಮ ಹೃದಯದ ಕಾಯಿಲೆ ನಿವಾರಣೆ ಮಾಡಲು ನೆರವಾಗುವುದು. ಅಧಿಕ ಪ್ರೋಟೀನ್ ಮತ್ತು ನಾರಿನಾಂಶವನ್ನು ಹೊಂದಿರುವಂತಹ ಹರಿವೆ ಸೊಪ್ಪು ಹಸಿವು ಕಡಿಮೆ ಮಾಡುವುದು ಮತ್ತು ತೂಕ ಇಳಿಸುವುದು.

ಹರಿವೆ ಸೊಪ್ಪಿನಲ್ಲಿದೆ ಸಾಕಷ್ಟು ಆರೋಗ್ಯ ಲಾಭ
ಹರಿವೆ ಸೊಪ್ಪು

ಹರಿವೆ ಸೊಪ್ಪಿನ ಬೀಜದಿಂದಲೂ ಆರೋಗ್ಯ ಸದೃಢವಾಗಿಟ್ಟುಕೊಳ್ಳಬಹುದು. ಹೌದು ಇದರ ಬೀಜದಲ್ಲಿ ಕ್ಯಾಲ್ಶಿಯಂ ಪ್ರಮಾಣ ಹೇರಳವಾಗಿದ್ದು, ಮೂಳೆ ಬಲಿಷ್ಠವಾಗಿರುವಂತೆ ನೋಡಿಕೊಳ್ಳುತ್ತದೆ.

ಹರಿವೆ ಸೊಪ್ಪಿನಲ್ಲಿ ಪ್ರೋಟೀನ್ ಅತ್ಯಧಿಕವಾಗಿದೆ. ಇದರಲ್ಲಿ ಓಟ್ಸ್ ಗಿಂತಲೂ ಹೆಚ್ಚಿನ ಪ್ರೋಟೀನ್ ಇದೆ. ಪ್ರಾಣಿಜನ್ಯ ಪ್ರೋಟೀನ್ ಸೇವನೆ ಮಾಡುವುದಕ್ಕಿಂತಲೂ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಕಡಿಮೆ ಇರುವ ಸಸ್ಯಜನ್ಯ ಪ್ರೋಟೀನ್ ದೇಹಕ್ಕೆ ತುಂಬಾ ಒಳ್ಳೆಯದು.

ಮೂಳೆ ಗಟ್ಟಿಗೊಳಿಸುತ್ತದೆ. ನಾವು ಸಧೃಡವಾಗಿರುವಂತೆ ನೋಡಿಕೊಳ್ಳುತ್ತದೆ. ಹರಿವೆ ಸೊಪ್ಪಿನ ಸೂಪ್ ಮಾಡಿಯೂ ಕುಡಿಯಬಹುದು. ಸೂಪ್‌ನಲ್ಲಿ ಒಂದು ಸ್ಪೂನ್ ತುಪ್ಪ ಅಥವಾ ಕೊಂಚ ಬೆಣ್ಣೆ ಬಳಸಬಹುದು. ಇದರಿಂದ ಸೂಪ್ ಟೇಸ್ಟಿಯಾಗಿರುತ್ತದೆ ಅಲ್ಲದೇ ದೇಹಕ್ಕೆ ಶಕ್ತಿಯೂ ಸಿಗುತ್ತದೆ.

ಟೈಪ್ 2 ಡಯಾಬಿಟಿಸ್ ಹೊಂದಿರುವವರಿಗೆ ರಕ್ತದಲ್ಲಿನ ಶುಗರ್ ಕಡಿಮೆ ಮಾಡುತ್ತದೆ. ಜೊತೆಗೆ ಇದರ ಎಲೆಗಳಲ್ಲಿ ಪ್ರೋಟೀನ್ ಹೆಚ್ಚಿದ್ದು ಇನ್ಸುಲಿನ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ಹರಿವೆ ಸೊಪ್ಪಿನಲ್ಲಿ ಪ್ರಮುಖ ಪೋಷಕಾಂಶಗಳು ಹಾಗೂ ಆಂಟಿಆಕ್ಸಿಡೆಂಟ್ ಗಳು ಲಭ್ಯವಿದ್ದು, ಇದು ಉರಿಯೂತ ತಗ್ಗಿಸುವುದು ಮತ್ತು ಆರೋಗ್ಯಕ್ಕೆ ಪೋಷಕಾಂಶಗಳನ್ನು ನೀಡುವುದು.

ಹರಿವೆ ಸೊಪ್ಪಿನಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್‌ ಇಲ್ಲ. ತೂಕವನ್ನು ಕಡಿಮೆ ಮಾಡಲು ಬಯಸುವವರು ಹರಿವೆ ಸೊಪ್ಪಿನ ಪಲ್ಯ ತಿನ್ನುವುದು ಸೂಕ್ತ. ಹರಿವೆ ಸೊಪ್ಪನಲ್ಲಿ ಕರಗಬಲ್ಲ ಮತ್ತು ಕರಗದ ನಾರಿನಂಶವಿದೆ. ಈ ಸೊಪ್ಪನ್ನು ತಿನ್ನುವುದರಿಂದ ನಮ್ಮ ತೂಕವನ್ನು ಕಡಿಮೆಯಾಗುತ್ತದೆ. ರಕ್ತದಲ್ಲಿನ ಕೊಲೆಸ್ಟ್ರಾಲ್‌ ಕಡಿಮೆಗೊಳಿಸುವುದರಿಂದ ಹೃದ್ರೋಗವನ್ನು ನಿವಾರಿಸುತ್ತದೆ.

ಹರಿವೆ ಸೊಪ್ಪು ಬಿ ಗುಂಪಿನ ಜೀವಸತ್ವಗಳಿಂದ ತುಂಬಿರುತ್ತವೆ. ಫೋಲೇಟ್‌ಗಳು, ರಿಬೋಫ್ಲಾವಿನ್‌, ನಿಯಾಸಿನ್‌, ಥಯಾಮಿನ್‌, ವಿಟಮಿನ್‌ ಬಿ 6 ಈ ಸೊಪ್ಪಿನಲ್ಲಿ ಕಂಡುಬರುತ್ತವೆ. ನವಜಾತ ಶಿಶುಗಳಲ್ಲಿನ ಜನ್ಮ ದೋಷಗಳನ್ನು ತಡೆಗಟ್ಟಲು ಸಹಾಯ ಮಾಡುತ್ತವೆ.

ಹರಿವೆ ಸೊಪ್ಪು ಫೈಟೊನ್ಯೂಟ್ರಿಯೆಂಟ್ಸ್‌ ಮತ್ತು ಆ್ಯಂಟಿ ಆಕ್ಸಿಡೆಂಟ್‌ಗಳ ಉಗ್ರಾಣವಾಗಿದ್ದು, ಇದು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ರಕ್ತದಲ್ಲಿನ ಕೊಬ್ಬಿನಾಂಶವನ್ನು ಕಡಿಮೆ ಮಾಡುವ ಶಕ್ತಿ ಈ ಹರಿವೆ ಸೊಪ್ಪಿನಲ್ಲಿದೆ. ಫೈಬರ್ ಹೆಚ್ಚಿನ ಪ್ರಮಾಣದಲ್ಲಿದ್ದು, ಇದನ್ನು ದೈನಂದಿನ ಆಹಾರ ಪದಾರ್ಥಗಳಲ್ಲಿ ಸೇವಿಸಿದರೆ ಒಳ್ಳೆಯ ರಿಸಲ್ಟ್ ಪಡೆಯಬಹುದು.

ಬೇರೆಲ್ಲಾ ರೀತಿಯ ಹಸಿರೆಲೆ ತರಕಾರಿಗಳಿಗಿಂತಲೂ ಹರಿವೆ ಸೊಪ್ಪಿನಲ್ಲಿ ವಿಟಮಿನ್ ಕೆ ಹೆಚ್ಚಿದೆ. ವಿಟಮಿನ್ ಮೂಳೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಇದು ರಕ್ತ ಹೆಪ್ಪುಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಆಸ್ಟಿಯೋಬ್ಲಾಸ್ಟ್ ಚಟುವಟಿಕೆ ವೃದ್ಧಿಸುವುದು ಮತ್ತು ಮೂಳೆಯ ದ್ರವ್ಯರಾಶಿಯನ್ನು ಬಲಪಡಿಸುವುದು. ಇದು ಅಲ್ಝೈಮರ್ ಕಾಯಿಲೆಯಿಂದ ಬಳಲುತ್ತಿರುವವರಿಗೆ ತುಂಬಾ ಒಳ್ಳೆಯದು.

ಹರಿವೆ ಸೊಪ್ಪಿನಲ್ಲಿದೆ ಸಾಕಷ್ಟು ಆರೋಗ್ಯ ಲಾಭ
ಹರಿವೆ ಸೊಪ್ಪು

ಗರ್ಭಿಣಿಯರಿಗೆ ಹರಿವೆ ಸೊಪ್ಪನ್ನ ತಿನ್ನಲು ಹೇಳಲಾಗುತ್ತದೆ. ಇದರಿಂದ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಹೊಟ್ಟೆಯಲ್ಲಿರುವ ಮಗುವಿನ ಬೆಳವಣಿಗೆಯೂ ಉತ್ತಮವಾಗುತ್ತದೆ. ಇನ್ನು ತೂಕ ಇಳಿಸೋಕ್ಕೆ ಪ್ರಯತ್ನ ಪಡುತ್ತಿರುವವರು, ಹರಿವೆ ಸೊಪ್ಪಿನ ಸೇವನೆ ಮಾಡೋದು ಒಳ್ಳೆಯದು. ನೀವು ಎರಡು ತಿಂಗಳು, ವಾರಕ್ಕೆರಡು ಬಾರಿಯಾದ್ರೂ ಹರಿವೆ ಸೊಪ್ಪು ತಿಂದ್ರೆ, 3 ರಿಂದ 4 ಕೆಜಿ ತೂಕ ಇಳಿಸಿಕೊಳ್ಳುತ್ತೀರಿ. ಇದರ ಪಲ್ಯ ಮಾಡಿ ತಿಂದರೆ ಉತ್ತಮ. ಆದ್ರೆ ಅದಕ್ಕೆ ಹೆಚ್ಚು ಎಣ್ಣೆ, ಉಪ್ಪು, ಖಾರ ಬಳಸಬೇಡಿ.

ಕೀಲು ನೋವಿನ ಸಮಸ್ಯೆ, ಮೂಳೆ ನೋವು ಸಮಸ್ಯೆ ಇದ್ದಲ್ಲಿ ಹರಿವೆ ಸೊಪ್ಪಿನ ಸೇವನೆ ಮಾಡಿ. ಇದು ನಮ್ಮ ದೇಹಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತದೆ.

ವಿಟಮಿನ್ ಸಿ ಸೇರಿಸಿದರೆ ದೇಹವು ಹೆಚ್ಚಿನ ಪ್ರಮಾಣದ ಕಬ್ಬಿನಾಂಶವನ್ನು ಹೀರಿಕೊಳ್ಳಲು ಸಹಕಾರಿ ಆಗಿರುವುದು. ಹೀಗಾಗಿ ಲಿಂಬೆ ರಸವನ್ನು ಹರಿವೆ ಸೊಪ್ಪಿನ ಖಾದ್ಯಕ್ಕೆ ಹಾಕಿ ಮತ್ತು ರಕ್ತಹೀನತೆ ಸಮಸ್ಯೆ ಇರುವವರಿಗೆ ಇದು ತುಂಬಾ ಸಹಕಾರಿ ಆಗಿರುವುದು.

ಈ ಸೊಪ್ಪಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನ್ಯೂಟ್ರೀಷನ್ ಹಾಗೂ ಆಯಂಟಿ ಆಕ್ಸಿಡೆಂಟ್ ಇದ್ದು, ಉರಿಯೂತವನ್ನು. ಕಡಿಮೆ ಮಾಡುತ್ತದೆ. ಜೊತೆಗೆ ಹೇರಳವಾದ ನ್ಯೂಟ್ರೀಶನ್ ಒದಗಿಸುತ್ತದೆ.

ಹರಿವೆ ಸೊಪ್ಪಿನಲ್ಲಿ ಕ್ಯಾಲ್ಸಿಯಂ ಅಧಿಕವಾಗಿದೆ ಮತ್ತು ಅಸ್ಥಿರಂಧ್ರತೆ ಮತ್ತು ಮೂಳೆಗೆ ಸಂಬಂಧಿಸಿದ ಇತರ ಸಮಸ್ಯೆ ಎದುರಿಸುತ್ತಿರುವವರಿಗೆ ಇದು ತುಂಬಾ ಪರಿಣಾಮಕಾರಿ. ಕ್ಯಾಲ್ಸಿಯಂ ಕೊರತೆಯನ್ನು ಇದು ನೀಗಿಸುವುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

36 Comments

ತಲಕಾಡು ಯಾತ್ರಾ ಸ್ಥಳ

ತಲಕಾಡು ಮೈಸೂರು ಜಿಲ್ಲೆಯ ಪ್ರಮುಖ ಯಾತ್ರಾ ಸ್ಥಳ

ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ

ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ