ಮೊಡವೆ ಮುಖದಲ್ಲಿ ಏಳುವ ಚಿಕ್ಕ ಚಿಕ್ಕ ಗುಳ್ಳೆಗಳು. ಇವು ಹೆಚ್ಚಾಗಿ ಹದಿ ಹರೆಯದವರಲ್ಲಿ ಕಂಡು ಬರುತ್ತೆ. ಇಂಗ್ಲೀಷಿನಲ್ಲಿ ಇದನ್ನು ಪಿಮ್ಪಲ್ಸ್ ಎಂದು ಕರೆಯುತ್ತಾರೆ. ಮಹಿಳೆಯರಲ್ಲಿ ಇದೊಂದು ಸೌಂದರ್ಯದ ಸಮಸ್ಯೆಯಾಗಿದೆ.
ಮೊಡವೆ ಎಂಬುದು ಹದಿಹರೆಯದವರು ಹಾಗೂ ವಯಸ್ಕರನ್ನು ಕಾಡುವ ಸಹಜ ಹಾಗೂ ಸರ್ವೇಸಾಮಾನ್ಯವಾದ ಚರ್ಮದ ತೊಂದರೆ. ಚರ್ಮದಲ್ಲಿರುವ ಕೂದಲಿನ, ಜಿಡ್ಡಿನ ಹಾಗೂ ಬೆವರಿನ ಗ್ರಂಥಿಗಳಲ್ಲಿ ಆಗುವ ಬದಲಾವಣೆಯೇ ಇದಕ್ಕೆ ಕಾರಣ.
ಈ ಗ್ರಂಥಿಗಳಿಂದ ಒಸರುವ ಅತಿಯಾದ ಜಿಡ್ಡು, ಹಾಗೂ ಚರ್ಮದಲ್ಲಿ ಅಸುನೀಗಿದ ಜೀವಕೋಶಗಳು (ಡೆಡ್ ಸೆಲ್ಸ್) ಕೂದಲಿನ ಗ್ರಂಥಿಗಳ ದ್ವಾರವನ್ನು ಮುಚ್ಚುವುದರಿಂದ ಜಿಡ್ಡು ಶೇಖರವಾಗಿ, ಬ್ಯಾಕ್ಟೀರಿಯಾಗಳು ವೃದ್ಧಿಯಾಗಲು ಅನುಕೂಲಕರ ವಾತಾವರಣ ಉಂಟಾಗುತ್ತದೆ. ಇದರಿಂದ ಚರ್ಮ ಹೊತ್ತಿ ಉರಿಯುವಂತಹ ಮಾರ್ಪಾಡಾಗಿ, ಕಣ್ಣಿಗೆ ಕಾಣಿಸುವ ಗುಳ್ಳೆಗಳಾಗುತ್ತವೆ.
ಪ್ರೌಢಾವಸ್ಥೆಯಲ್ಲಿ ಬಹಳ ಬೇಗ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಇದನ್ನು `ಕಾಮ ಕುರು’ ಎಂದು ಸಹ ಕರೆಯುತ್ತಾರೆ. ಹೆಣ್ಣು ಮಕ್ಕಳು ಋತುಮತಿಯಾಗುವ ಒಂದು ವರ್ಷದಷ್ಟು ಮೊದಲೇ ಮೊಡವೆಗಳು ಕಾಣಿಸಬಹುದು. ಹದಿಹರೆಯದಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುವ ಈ ಮೊಡವೆಗಳು ವಯಸ್ಸಾದಂತೆ ಕ್ರಮೇಣ ಮಾಯವಾಗುತ್ತವೆ.

ಸಣ್ಣ ಸಣ್ಣ ಕೆಂಪಾದ ಗುಳ್ಳೆಗಳು, ಕೀವು ತುಂಬಿದ, ಕಪ್ಪಗಾದ, ಬೆಳ್ಳಗಿನ ಗುಳ್ಳೆಗಳು, ಗಂಟುಗಳು ಹೀಗೆ ನಾನಾ ರೂಪುಗಳಲ್ಲಿ ಗೋಚರವಾಗುವ ಮೊಡವೆಗಳನ್ನು ನಾವೆಲ್ಲಾ ದಿನನಿತ್ಯ ಹಲವರಲ್ಲಿ ನೋಡುತ್ತಿರುತ್ತೇವೆ.
ಮುದ್ದಾದ ಮುಖಕ್ಕೆ ಕುಂದು ತರುವಂತಹ ಈ ತೊಂದರೆ ಅತಿಯಾದರೆ, ಮಾನಸಿಕ ಬಳಲಿಕೆ ಹಾಗೂ ಖಿನ್ನತೆಗೆ ಕಾರಣವಾಗುತ್ತದೆ. ಮುಖದಲ್ಲಲ್ಲದೆ ಮೊಡವೆಗಳು ಬೆನ್ನು, ಎದೆಯ ಮೇಲ್ಭಾಗ ಹಾಗೂ ಭುಜದ ಮೇಲೂ ಕಾಣಿಸಿಕೊಳ್ಳುತ್ತವೆ.ಹೆಣ್ಣು ಮಕ್ಕಳಲ್ಲಿ ಮೊಡವೆ ಕಾಣಿಸಿಕೊಂಡ ಒಂದು ವರ್ಷದೊಳಗೆ ಖಿನ್ನತೆಗೆ ಒಳಗಾಗುವ ಪ್ರಮಾಣ ಶೇಕಡಾ 63ರಷ್ಟಿರುತ್ತದೆ.
ಮೊಡವೆಯಿಲ್ಲದವರಿಗೆ ಖಿನ್ನತೆ ಕಡಿಮೆಯಾಗಿರುತ್ತದೆ ಮತ್ತು ಮೊಡವೆ ಕಾಣಿಸಿಕೊಂಡು ಕೆಲವು ವರ್ಷಗಳ ನಂತರ ಅದು ಕಡಿಮೆಯಾಗುತ್ತಾ ಹೋಗುತ್ತದೆ.
ಮೊಡವೆಗೆ ಕಾರಣಯಾಕೆ ಮೊಡವೆಗಳು ಕೆಲವರನ್ನಷ್ಟೇ ಕಾಡುತ್ತವೆ ಎಂಬುದಕ್ಕೆ ಸರಿಯಾದ ಕಾರಣ ತಿಳಿದಿಲ್ಲ. ಅನುವಂಶೀಯತೆ (ಶೇ-5ರಷ್ಟು ಜನರಲ್ಲಿ ತಾಯಿ ಅಥವಾ ತಂದೆ ಯಾರಾದರೂ ಮೊಡವೆಗೆ ತುತ್ತಾಗಿರುತ್ತಾರೆ.) ಒಂದು ಕಾರಣವಾದರೆ,

ಇನ್ನಿತರ ಕಾರಣಗಳು ಈ ರೀತಿ ಇವೆ :
*ಹಾರ್ಮೋನುಗಳು (ಉದಾ: ಋತುಚಕ್ರ ಹಾಗೂ ಹರೆಯದಲ್ಲಾಗುವ ಏರುಪೇರು).
*ಒತ್ತಡದಿಂದ ಅಡ್ರೆನಲ್ ಗ್ರಂಥಿಯಿಂದ ಉತ್ಪತ್ತಿಯಾಗುವ ಹೆಚ್ಚಾದ ಪ್ರಮಾಣದ ಹಾರ್ಮೋನುಗಳು. ಇಂತಹ ಹಾರ್ಮೋನುಗಳು ಜಿಡ್ಡಿನ ಗ್ರಂಥಿಗಳು ಹೆಚ್ಚಾಗಿ ಕೆಲಸ ಮಾಡುವಂತೆ ಪ್ರಚೋದಿಸುತ್ತವೆ.
*ಚರ್ಮದಲ್ಲಿ ಮೃತ ಜೀವಕೋಶಗಳ ಶೇಖರಣೆ (ಕೆರಾಟಿನ್).
*ಬ್ಯಾಕ್ಟೀರಿಯಾಗಳು ಗ್ರಂಥಿಗಳ ರಂಧ್ರದಲ್ಲಿದ್ದು ಅಲರ್ಜಿ ಉಂಟು ಮಾಡುವುದು.
*ಚರ್ಮದಲ್ಲಾಗುವ ಕಿರಿಕಿರಿ, ತುರಿಕೆ ಉಂಟುಮಾಡುವ ಬದಲಾವಣೆ.
*ದೇಹದಾರ್ಢ್ಯಕ್ಕಾಗಿ ಬಳಸುವ ಅನಬಾಲಿಕ್ ಹಾರ್ಮೋನುಗಳು.
*ಇತರ ರೋಗಗಳ ಚಿಕಿತ್ಸೆಗೆ ಬಳಸುವ ಔಷಧಿಗಳು (ಮಾನಸಿಕ ಅಸ್ವಸ್ಥತೆಗೆ ಬಳಸುವ ಲಿಥಿಯಮ್, ಮೂರ್ಛೆ ರೋಗದ ಔಷಧಿಗಳಾದ ಫಿನೈಟಾಯಿನ್ ಹಾಗೂ ಬಾರ್ಬಿಚುರೇಟ್ಸ್, ಸ್ಟೀರಾಯಿಡ್ ಹಾರ್ಮೋನುಗಳು)ಹಾರ‌್ಮೋನುಗಳ ಏರುಪೇರಿನಿಂದ ಉಂಟಾಗುವ ಇತರ ರೋಗಗಳು.

ಮನೆಮದ್ದುಗಳು :
ಶ್ರೀಗಂಧ, ಮಂಗಳೂರಿನ ಹೆಂಚಿನಿಂದ ತೆಗೆದ ಗಂಧ, ಕೆಮ್ಮಣ್ಣು, ಬೆಳ್ಳುಳ್ಳಿಯ ರಸ, ಎರೆಹುಳುವಿನ ಮಣ್ಣು, ರುಬ್ಬಿದ ಮೆಂತ್ಯದ ಪೇಸ್ಟ್, ಅರಿಶಿನ ಮತ್ತು ಮೊಸರು, ಕಡಲೆಹಿಟ್ಟು ಈ ರೀತಿ ಮೊಡವೆಗಳಿಗೆ ಹಚ್ಚಲು ಬಹಳಷ್ಟು ಮನೆಯ ಔಷಧಿಗಳು ಲಭ್ಯ. ಇವನ್ನೆಲ್ಲ ಹಚ್ಚಿದರೂ, ಮೊಡವೆಗಳಿಗೆ ಬ್ಯಾಕ್ಟೀರಿಯಾ ಸೋಂಕು ತಗುಲದಂತೆ ಸ್ವಚ್ಛತೆ ಕಾಪಾಡುವುದು ಮುಖ್ಯವಾದ ಅಂಶ
ಧನ್ಯವಾದಗಳು.
GIPHY App Key not set. Please check settings