ಪ್ರತಿಯೊಂದು ಹೆಣ್ಣಿನ ಬದುಕಿನ ಅತ್ಯಂತ ಸಂತಸದ ಸಮಯವೆಂದರೆ ಅದು ಗರ್ಭಾವಸ್ಥೆಯ ಸಮಯ. ಈಗ ಹೆರಿಗೆ ಅಂದರೆ ಅಷ್ಟೇ ಭಯ ಕೂಡ ಇದೆ. ಹಿಂದೆ ಹೀಗಿರಲಿಲ್ಲ, ಅವಿಭಕ್ತ ಕುಟುಂಬಗಳ ನಡುವೆ ಕೂಸು ಹುಟ್ಟುವುದು ಹೊಸ ವಿಷಯವಾದರೂ ಉಳಿದೆಲ್ಲ ಪ್ರಕ್ರಿಯೆಗಳು ತಂತಾನೆ ನಡೆದುಹೋಗುತ್ತಿತ್ತು, ಅದು ಗರ್ಭಾವಸ್ಥೆಯಾಗಲಿ, ಬಾಣಂತನವಾಗಲಿ ಉಸ್ತುವಾರಿ ನೋಡಿಕೊಳ್ಳಲು ಮನೆಯಲ್ಲಿ ಮಹಿಳೆಯರ ದೊಡ್ಡ ಸಮೂಹವೇ ಇರುತ್ತಿತ್ತು. ಅಮ್ಮ, ದೊಡ್ಡಮ್ಮ, ಚಿಕ್ಕಮ್ಮ, ಅಜ್ಜಿ, ಮುಂತಾದವರು.
ಪ್ರಗ್ನೆನ್ಸಿ ಕನ್ಫರ್ಮ್ ಆದ ಮೊದಲ ದಿನದಿಂದ ಆರಂಭವಾಗುವ ಡಾಕ್ಟರ್ ವಿಸಿಟ್, ಅವರ ಸಲಹೆ, ಸೂಚನೆ, ವಿವಿಧ ಪರೀಕ್ಷೆಗಳು, ಸ್ಕ್ಯಾನಿಂಗ್, ಮಾತ್ರೆ ಇತ್ಯಾದಿಗಳ ಫಾಲೋ ಅಪ್ ಒಂದು ಕಡೆಯಾದರೆ, ನಡೆದರೆ ಏನಾಗುವುದೋ ಎನ್ನುವ ಗಂಡನ ಆತಂಕ ಮತ್ತೊಂದೆಡೆ! ಮಗುವನ್ನು ಹೊತ್ತಿರುವ ಹೆಂಡತಿಗಿರುವ ಧೈರ್ಯ ಪಕ್ಕದಲ್ಲಿರುವ ಗಂಡನಿಗೆ ಅನೇಕ ಸಂದರ್ಭಗಳಲ್ಲಿ ಇರುವುದಿಲ್ಲ.
ಈಗಿನ ಕಾಲದಲ್ಲಿ ಸಹಜ ಹೆರಿಗೆ ಎನ್ನುವುದು ಅಪರೂಪ ಎಂದು ಹೇಳಬಹುದು. ಹಿಂದೆಲ್ಲಾ ಸಹಜ ಹೆರಿಗೆಯಾಗುತ್ತಲೇ ಇತ್ತು. ಈಗಿನವರನ್ನು ಹೀಯಾಳಿಸುವುದು ಉಂಟು. ನಾವೆಲ್ಲ ಹತ್ತು ಮಕ್ಕಳನ್ನು ಹೆತ್ತಿದೀವಿ ನೀವು ಒಂದು ಹೆರಲು ಇಷ್ಟು ಕಷ್ಟಪಡ್ತಿರ? ಏನು ಮಾಡೋದು ಯಾರ ತೊಂದರೆ ಅಂತ ಹೇಳುವುದು? ಒಂದು ಅಧ್ಯಯನದ ಪ್ರಕಾರ 85% ರಷ್ಟು ಗರ್ಭವತಿಯರು ಸಹಜ ಹೆರಿಗೆಯಾಗುವ ಸಾಧ್ಯತೆ ಹೊಂದಿರುತ್ತಾರೆ. ಉಳಿದ ಹದಿನೈದು ಶೇಖಡಾ ಗರ್ಭವತಿಯರಿಗೆ ಮಾತ್ರವೇ ಸಿಸರೇನಿಯನ್ ಅಥವಾ ಸಿ ಸೆಕ್ಷನ್ ಹೆರಿಗೆಯಾಗುವ ಅಗತ್ಯ ಬೀಳಬಹುದು.
ಆದರೆ, ಅಂಕಿ ಅಂಶಗಳ ಪ್ರಕಾರ ಇಂದು ಮೂವರಲ್ಲೊಬ್ಬರಿಗೆ ಅಂದರೆ ಶೇ ಮೂವತ್ತಕ್ಕೂ ಹೆಚ್ಚಿನ ಗರ್ಭವತಿಯರು ಹೆರಿಗೆಯ ನೋವು ಮತ್ತು ಆತಂಕದಿಂದ ಪಾರಾಗಲು ಸಿ ಸೆಕ್ಷನ್ ಹೆರಿಗೆಗೆ ಒಳಗಾಗುತ್ತಿದ್ದಾರೆ. ಆದರೆ ಈ ಕ್ರಿಯೆ ಹೇಳಿದಷ್ಟು ಸುಲಭವೇನೂ ಅಲ್ಲ. ಹೆರಿಗೆಯ ಸಮಯದ ಸಹಿತ ಹೆರಿಗಯ ಬಳಿಕವೂ ಕೆಲವಾರು ತೊಂದರೆಗಳು ಎದುರಾಗುತ್ತವೆ ಹಾಗೂ ವೈದ್ಯರಿಗೂ ಸಮಸ್ಯೆಯನ್ನು ಕ್ಲಿಷ್ಟವಾಗಿಸುತ್ತವೆ. ಸಿಸರೇನಿಯನ್ ಹೆರಿಗೆಯಿಂದ ಚೇತರಿಸಿಕೊಳ್ಳಲು ಸಹಜ ಹೆರಿಗೆಗಿಂತಲೂ ಬಹಳವೇ ಹೆಚ್ಚಿನ ಸಮಯ ಬೇಕಾಗುತ್ತದೆ.
ಸಾಮಾನ್ಯ ಹೆರಿಗೆ/ನಾರ್ಮಲ್ ಹೆರಿಗೆ:
ಸಾಮಾನ್ಯ ಹೆರಿಗೆ ಎಂದರೆ ಮಗುವನ್ನು ಈ ಜಗತ್ತಿಗೆ ತರುವ ನೈಸರ್ಗಿಕ ವಿಧಾನವಾಗಿದೆ. ನೀವು ಕೆಲವು ಅನಾರೋಗ್ಯದ ಪರಿಸ್ಥಿತಿಗಳನ್ನು ಹೊಂದಿಲ್ಲದಿದ್ದರೆ ನೈಸರ್ಗಿಕ ಮತ್ತು ಸಾಮಾನ್ಯ ಹೆರಿಗೆಯನ್ನು ಪಡೆಯುವುದು ಕಷ್ಟವೇನಲ್ಲ. ಇದಲ್ಲದೆ, ನೈಸರ್ಗಿಕ ಜನನ ಪ್ರಕ್ರಿಯೆಯು ಆರೋಗ್ಯಕರ ಮಗುವನ್ನು ಪಡೆಯಲು ಸಹಾಯ ಮಾಡುತ್ತದೆ ಮತ್ತು ಬಾಣಂತಿ ಶೀಘ್ರವಾಗಿ ಚೇತರಿಸಿಕೊಳ್ಳುತ್ತಾಳೆ. ಸಾಮಾನ್ಯ ಹೆರಿಗೆಯನ್ನು ಪಡೆಯಲು ಯಾವುದೇ ಸೂತ್ರ ಅಥವಾ ಕಿರುಮಾರ್ಗ ಇಲ್ಲವಾದರೂ, ಕೆಲವು ಕ್ರಮಗಳನ್ನು ಅನುಸರಿಸುವ ಮೂಲಕ ಆರೋಗ್ಯಕರ ಮತ್ತು ನೈಸರ್ಗಿಕ ಹೆರಿಗೆಯಾಗುವ ಸಾಧ್ಯತೆಯನ್ನು ಹೆಚ್ಚಿಸಬಹುದು.
ಸಾಮಾನ್ಯ ಹೆರಿಗೆ ಆಗಲು ಕಾರಣಗಳು ಏನಿರಬಹುದು?
ನಿಮ್ಮ ಹಿಂದಿನ ಹೆರಿಗೆಗಳು ಸಾಮಾನ್ಯ ಹೆರಿಗೆಯಾಗಿದ್ದರೆ, ಮುಂದೆ ಕೂಡಾ ಸಾಮಾನ್ಯ ಹೆರಿಗೆ ಸಾಧ್ಯತೆ ಇರುತ್ತದೆ. ನಿಮಗೆ ಬೇರಾವುದೋ ಗಂಭೀರ ಆರೋಗ್ಯ ಸಮಸ್ಯೆ ಇಲ್ಲದಿದ್ದರೆ ಕೂಡ ಇದು ಸಾಧ್ಯ. ನಿಮ್ಮ ದೇಹದ ತೂಕ ಸಹಜವಾಗಿದ್ದರೆ, ಅಂದರೆ ಸಾಮಾನ್ಯಕ್ಕಿಂತಲೂ ಹೆಚ್ಚು ಅಥವಾ ಕಡಿಮೆ ಇರದೇ ಇದ್ದರೆ ಸಾಮಾನ್ಯ ಹೆರಿಗೆ ಸಾಧ್ಯ. ವಿಶೇಷವಾಗಿ ಸ್ಥೂಲದೇಹದ ಮಹಿಳೆಯರಿಗೆ ಜನಿಸುವ ಮಕ್ಕಳ ಗಾತ್ರವೂ ಕೊಂಚ ಹೆಚ್ಚೇ ಇದ್ದು ಹೆರಿಗೆಯನ್ನು ಕಷ್ಟಕರವಾಗಿಸುತ್ತವೆ. ನಿಮ್ಮ ಗರ್ಭಾವಸ್ಥೆ ಯಾವುದೇ ಹೆಚ್ಚಿನ ತೊಂದರೆ ಇಲ್ಲದೇ ಸುಗಮವಾಗಿ ಮುಂದುವರೆಯುತ್ತಿದ್ದರೆ ಗರ್ಭಾವಸ್ಥೆಯಲ್ಲಿ ನೀವು ದೈಹಿಕವಾಗಿ ಚಟುವಟಿಕೆಯಿಂದಿದ್ದು ಉತ್ತಮ ಆರೋಗ್ಯ ಹೊಂದಿದ್ದರೆ. ಹೆಚ್ಚು ಚಟುವಟಿಕೆ ಇದ್ದಷ್ಟೂ ಸಹಜ ಹೆರಿಗೆಯಾಗುವ ಸಾಧ್ಯತೆ ಹೆಚ್ಚು. ನಿಮ್ಮ ಆರೋಗ್ಯದ ಸ್ಥಿತಿಗಳು, ರಕ್ತದೊತ್ತಡ, ರಕ್ತದಲ್ಲಿ ಸಕ್ಕರೆಯ ಮಟ್ಟ, ಹೀಮೋಗ್ಲೋಬಿನ್ ಎಲ್ಲವೂ ನಿಯಂತ್ರಣದಲ್ಲಿದ್ದರೆ ಕೂಡ ಸಾಮಾನ್ಯ ಹೆರಿಗೆ ಸಾಧ್ಯತೆ ಇರುತ್ತದೆ.
ಸಾಮಾನ್ಯವಾಗಿ ಮಹಿಳೆಯರು ತನಗೆ ಸಿ ಸೆಕ್ಷನ್ ಹೆರಿಗೆ ಆಗಲಿ ಎಂದು ಬಯಸುವುದಿಲ್ಲ. ಆದರೆ ಕೆಲವು ಸಂದರ್ಭಗಳು ಆಕೆಗೆ ಯೋಜಿತ ಸಿ ಸೆಕ್ಷನ್ ಇರಲಿ, ತುರ್ತು ಸಿ ಸೆಕ್ಷನ್ ಆಗುವಂತೆ ಮಾಡುತ್ತವೆ. ಉದಾಹರಣೆಗೆ ಭ್ರೂಣದ ತೊಂದರೆ, ಹೆರಿಗೆ ನೋವು ಹಠಾತ್ತನೆ ನಿಲ್ಲುವುದು, ಅಸಮರ್ಥ ಗರ್ಭಕಂಠ ಇತ್ಯಾದಿ ಆಗಿರಬಹುದು. ಇನ್ನು ಕೆಲವು ಮಹಿಳೆಯರು ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಸಿ ಸೆಕ್ಷನ್ ಮಾಡಿಸಿಕೊಳ್ಳಲು ವ್ಯವಸ್ಥೆ ಮಾಡಲಾಗುತ್ತದೆ.
ಯೋಜಿತ ಸಿ ಸೆಕ್ಷನ್ ಮತ್ತು ತುರ್ತು ಸಿ-ಸೆಕ್ಷನ್ ನಡುವೆ ಅಂಥಹ ವ್ಯತ್ಯಾಸಗಳೇನಿಲ್ಲ. ಭ್ರೂಣದ (ಮಗುವಿನ) ಯೋಗಕ್ಷೇಮಕ್ಕಾಗಿ ಅನೇಕ ಬಾರಿ ತುರ್ತು ಸಿ ಸೆಕ್ಷನ್ ಮಾಡಲಾಗುತ್ತದೆ. ತುರ್ತು ಸಿ ಸೆಕ್ಷನ್ ಮಾಡುವಾಗ ತಾಯಿಗೆ ಬೆನ್ನುಮೂಳೆಯ ಅರಿವಳಿಕೆಗೆ ಬದಲು ಸಾಮಾನ್ಯ ಅರಿವಳಿಕೆ ನೀಡಬಹುದು, ಅಂದರೆ ಆಪರೇಶನ್ ಸಮಯದಲ್ಲಿ ಅವಳು ಪ್ರಜ್ಞಾಹೀನಳಾಗಿರುತ್ತಾಳೆ ಮತ್ತು ಜನನದ ನಂತರ ತನ್ನ ಮಗುವನ್ನು ನೋಡಲು ಸಾಧ್ಯವಾಗುವುದಿಲ್ಲ.
ಯೋಜಿತ ಸಿ ಸೆಕ್ಷನ್:
ಸಿಸೇರಿಯನ್ ಅಗತ್ಯವಿದೆಯೆಂದು ನಿಮಗೆ ಮತ್ತು ನಿಮ್ಮ ವೈದ್ಯರಿಗೆ ಮೊದಲೇ ತಿಳಿದಿದ್ದರೆ ಇದನ್ನು ಯೋಜಿತ ಸಿ ಸೆಕ್ಷನ್ ಎಂದು ಕರೆಯಲಾಗುತ್ತದೆ. ಯೋಜಿತ ಸಿ ಸೆಕ್ಷನ್ ಅನ್ನು ಕೆಲವೊಂದು ಸಂದರ್ಭಗಳಲ್ಲಿ ಮಾಡಲಾಗುತ್ತದೆ.
೧. ಹಿಂದೆಯೂ ಸಿ ಸೆಕ್ಷನ್ ಹೆರಿಗೆಯಾಗಿದ್ದರೆ ಗರ್ಭಾಶಯವನ್ನು ಕ್ಲಾಸಿಕ್ ಕಟ್ ಅಂದರೆ ಲಂಬವಾಗಿ ಕಟ್ ಮಾಡಿದ್ದರೆ.
೨. ನೀವು ಅವಳಿ ಮಕ್ಕಳನ್ನು ಹೊಂದಿದ್ದರೆ ಅಥವಾ ತ್ರಿವಳಿ ಅಥವಾ ಹೆಚ್ಚಿನ ಬಹುಗರ್ಭಧಾರಣೆಯನ್ನು ಹೊಂದಿದ್ದರೆ.
೩. ನಿಮ್ಮ ಮಗು ಗರ್ಭಾಶಯದ ಪಕಕ್ಕೆ ಮಲಗಿದ್ದರೆ.
೪. ಜರಾಯು ಪ್ರೆವಿಯಾ ಸಂಭವಿಸಿದರೆ ಅಂದರೆ ನಿಮ್ಮ ಜರಾಯು ಗರ್ಭಾಶಯದ ಕೆಳಭಾಗದಲ್ಲಿದ್ದರೆ ಅದು ನಿಮ್ಮ ಮಗು ಗರ್ಭದಿಂದ ನಿರ್ಗಮಿಸುವುದನ್ನು ನಿರ್ಬಂಧಿಸಬಹುದು ಅಥವಾ ಹೆರಿಗೆಯ ಸಮಯದಲ್ಲಿ ಭಾರೀ ರಕ್ತಸ್ರಾವವಾಗಬಹುದು.
೫. ನಿಮಗೆ ವೈದ್ಯಕೀಯ ಸಮಸ್ಯೆ ಇದ್ದರೆ, ಉದಾಹರಣೆಗೆ ಅಧಿಕ ರಕ್ತದೊತ್ತಡ, ಮೂತ್ರಪಿಂಡ ಕಾಯಿಲೆ, ಹೃದ್ರೋಗ ಅಥವಾ ಮಧುಮೇಹ ಇದ್ದರೆ ಇದು ಗರ್ಭಧಾರಣೆಯ ತೊಂದರೆಗಳಿಗೆ ಕಾರಣವಾಗಬಹುದು.
೬. ಮೊದಲು ತಲೆಗೆ ಬದಲಾಗಿ ಮಗುವಿನ ಕಾಲುಗಳು ಹೊರಮುಖವಾಗಿದ್ದು, ನಿಮ್ಮ ವೈದ್ಯರು ಮಗುವನ್ನು ತಿರುಗಿಸಲು ಸಾಧ್ಯವಾಗದಿದ್ದರೆ, ಸಿ-ಸೆಕ್ಷನ್ ಸುರಕ್ಷಿತ ಮಾರ್ಗವಾಗಿದೆ.
ತುರ್ತು ಸಿಸೇರಿಯನ್:
ತುರ್ತು ಸಿಸೇರಿಯನ್ ಅನ್ನು ಸಾಮಾನ್ಯವಾಗಿ ನಾರ್ಮಲ್ ಡೆಲಿವರಿಯಾಗದೆ ಡೆಲಿವರಿಯಾಗುವ ಸಮಯ ಧೀರ್ಘಕಾಲ ತೆಗೆದುಕೊಂಡರೆ, ಹೆರಿಗೆಯ ಸಮಯದಲ್ಲಿ ಮಗು ತೊಂದರೆಗೀಡಾದರೆ, ತಾಯಿಯು ತೀವ್ರವಾದ ಅಧಿಕ ರಕ್ತದೊತ್ತಡ ಅಥವಾ ಹೆರಿಗೆ ಸಮಯದಲ್ಲಿ ಹಠಾತ್ ರಕ್ತಸ್ರಾವದಂತಹ ಯಾವುದೇ ಸಮಸ್ಯೆಗಳನ್ನು ಹೊಂದಿದ್ದರೆ ಮಾಡಲಾಗುತ್ತದೆ. ನಾರ್ಮಲ್ ಡೆಲಿವರಿ ಕೆಲವೊಮ್ಮೆ ತಾಯಿಯ ಅಥವಾ ಮಗುವಿನ ಆರೋಗ್ಯಕ್ಕೆ ಅಪಾಯಕಾರಿ. ಆದ್ದರಿಂದ ಡೆಲಿವರಿ ಸಮಯದಲ್ಲಿ ಸಮಸ್ಯೆಗಳು ಉದ್ಭವಿಸಿದರೆ, ತುರ್ತು ಸಿ-ಸೆಕ್ಷನ್ ಸುರಕ್ಷಿತ ಎಂದು ವೈದ್ಯರು ನಿರ್ಧರಿಸಬಹುದು. ತುರ್ತು ಸಿ-ಸೆಕ್ಷನ್’ಗೆ ಮುಖ್ಯ ಕಾರಣಗಳು ಏನಿರಬಹುದು?
೧. ಸರಿಯಾದ ಸಮಯಕ್ಕೆ ಮಗು ಜನಿಸದಿದ್ದರೆ ಇದು ತಾಯಿಗೆ ಸೋಂಕಿನ ಅಪಾಯವನ್ನುಂಟು ಮಾಡುತ್ತದೆ.
೨. ನಿಮ್ಮ ಮಗುವಿನ ತಲೆಯು ತುಂಬಾ ದೊಡ್ಡದಾಗಿದ್ದರೆ
೩. ಮಗುವಿನ ಹೃದಯ ಬಡಿತದಲ್ಲಿ ತೊಂದರೆಯಾದರೆ
೪. ಜರಾಯು ನಿಮ್ಮ ಗರ್ಭಾಶಯದ ಗೋಡೆಯಿಂದ ಬೇರ್ಪಡಲು ಪ್ರಾರಂಭಿಸುತ್ತದೆ. ಇದು ನಿಮ್ಮ ಮಗುವಿಗೆ ಭಾರೀ ರಕ್ತಸ್ರಾವ ಮತ್ತು ತೊಂದರೆಗಳನ್ನು ಉಂಟುಮಾಡುತ್ತದೆ.
೫. ಹಿಂದಿನ ಸಿ-ಸೆಕ್ಷನ್ ಗಾಯದ ಗುರುತುಗಳು ತೆರೆದಿದ್ದರೆ.
ಹೆರಿಗೆ ಯಾವುದೇ ರೀತಿಯಲ್ಲಿ ಆಗಿರಲಿ ಅದು ನಾರ್ಮಲ್ ಅಥವಾ ಸಿ ಸೆಕ್ಷನ್ , ತಾಯಿ ಮಗುವಿನ ಆರೋಗ್ಯ, ಆರೈಕೆ ಮುಖ್ಯ.
brillx официальный сайт
брилкс казино
Ощутите адреналин и азарт настоящей игры вместе с нами. Будьте готовы к захватывающим приключениям и невероятным сюрпризам. Brillx Казино приглашает вас испытать удачу и погрузиться в мир бесконечных возможностей. Не упустите шанс стать частью нашей игровой семьи и почувствовать всю прелесть игры в игровые аппараты в 2023 году!Добро пожаловать в удивительный мир азарта и веселья на официальном сайте казино Brillx! Год 2023 принес нам новые горизонты в мире азартных развлечений, и Brillx на переднем крае этой революции. Если вы ищете непередаваемые ощущения и возможность сорвать джекпот, то вы пришли по адресу.