in

ಉತ್ತಮ ಆರೋಗ್ಯಕ್ಕೆ ಬಸಳೆ ಸೊಪ್ಪು

ದಿನವೂ ತಿನ್ನಬಹುದು ಬಸಳೆ ಸೊಪ್ಪು, ಅಷ್ಟೊಂದು ಆರೋಗ್ಯ ಇದೆ ಇದರಲ್ಲಿ

ನಗರಗಳಲ್ಲಿ ಚಿಕ್ಕ ಚಿಕ್ಕ ಮಣ್ಣಿನ ಕುಡಿಕೆಗಳಲ್ಲಿ ಬಸಳೆ ಸೊಪ್ಪನ್ನು ಬೆಳೆಸಿದರೆ. ಹಳ್ಳಿಗಳಲ್ಲಿ ಮನೆಯ ಹಿತ್ತಲಲ್ಲಿ ಈ ಸೊಪ್ಪನ್ನು ಬೆಳೆಸುತ್ತಾರೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಈ ಸೊಪ್ಪನ್ನು ಹೆಚ್ಚಾಗಿ ಬೆಳೆಯುತ್ತಾರೆ. ಆಯುರ್ವೇದದ ಪ್ರಕಾರ ಬಸಳೆ ಸೊಪ್ಪು ರಕ್ತಹೀನತೆ ಮತ್ತು ಭೇದಿ ಸಮಸ್ಯೆಯನ್ನು ನಿವಾರಿಸಲು ನೆರವಾಗುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ಭಾರತದ ಬಹುತೇಕ ಎಲ್ಲ ಭಾಗಗಳಲ್ಲಿ ದಾಲ್, ಚಟ್ನಿ, ಸೂಪ್, ಕರಿ ಮತ್ತು ವಿವಿಧ ರೂಪಗಳಲ್ಲಿ ಸೇವಿಸಲಾಗುತ್ತದೆ. ಹೆಚ್ಚಾಗಿ ನಮ್ಮ ಭಾರತದಲ್ಲಿ ಕಂಡು ಬರುವ ಈ ಸಸ್ಯ ಪಕ್ಕದ ಚೀನಾ, ಸಿಲೋನ್, ಮಲೇಷ್ಯಾ, ಆಫ್ರಿಕಾ, ಅಮೇರಿಕಾ ಮತ್ತು ಬ್ರೆಜಿಲ್ ದೇಶಗಳಲ್ಲಿ ಸಹ ಬೆಳವಣಿಗೆ ಹೊಂದಿರುವುದನ್ನು ಕಾಣಬಹುದು. ಇದೊಂದು ಸದಾ ಕಾಲ ಹಚ್ಚ ಹಸಿರಿನಿಂದ ಕಂಗೊಳಿಸುವ ಬಳ್ಳಿಯಾಗಿದ್ದು, ಸುಮಾರು  ಮೀಟರ್ ಎತ್ತರ ಬೆಳೆಯಬಲ್ಲದು. ಬಸಳೆ ಬಳ್ಳಿಯ ಎಲೆಗಳು ನೋಡಲು ವೀಳ್ಯದ ಎಲೆಗಳಂತೆ ಇರುತ್ತದೆ.

ಬಸಳೆ ಸೊಪ್ಪು ತನ್ನಲ್ಲಿರುವ ಹಲವಾರು ಬಗೆಯ ಪೌಷ್ಟಿಕ ಸತ್ವಗಳಿಂದ ಮನುಷ್ಯನ ಆರೋಗ್ಯಕ್ಕೆ ಬಹಳಷ್ಟು ಬಗೆಯಲ್ಲಿ ಸಹಕಾರಿ ಎಂದು ತಿಳಿದು ಬಂದಿದೆ. ಬೇರೆಲ್ಲಾ ಹಸಿರು ಎಲೆ ತರಕಾರಿಗಳನ್ನು ಮೀರಿಸುವಂತಹ ಸತ್ವಗಳು ಬಸಳೆ ಸೊಪ್ಪಿನಲ್ಲಿ ಅಡಗಿವೆ. ಇದರಲ್ಲಿ ಕಡಿಮೆ ಕ್ಯಾಲೋರಿ ಅಂಶವಿದ್ದು, ವಿಟಮಿನ್ ‘ ಎ ‘, ವಿಟಮಿನ್ ‘ ಸಿ ‘, ವಿಟಮಿನ್ ‘ ಬಿ9 ‘, ಕಬ್ಬಿಣ, ಕ್ಯಾಲ್ಸಿಯಂ, ತಾಮ್ರ, ಮೆಗ್ನೀಷಿಯಂ, ಪೋಸ್ಫ್ಯಾರಸ್, ಪೊಟ್ಯಾಸಿಯಂ ಮತ್ತು ಇನ್ನಿತರ ಖನಿಜಾಂಶಗಳು ಸೇರಿವೆ. ಜೊತೆಗೆ ಲ್ಯೂಟೀನ್ ಮತ್ತು ಬೀಟಾ – ಕೆರೋಟಿನ್ ಎಂಬ ಎರಡು ಆಂಟಿ – ಓಕ್ಸಿಡೆಂಟ್ ಗಳು ಸಹ ಇವೆ.

ಬಸಳೆ ಸೊಪ್ಪಿನಲ್ಲಿ ಎಷ್ಟು ವಿಧ

ಉತ್ತಮ ಆರೋಗ್ಯಕ್ಕೆ ಬಸಳೆ ಸೊಪ್ಪು

ಅಮೈನೋ ಆಮ್ಲಗಳು,  ಅರ್ಜಿನೈನ್, ಲ್ಯೂಸಿನ್, ಐಸೊಲ್ಯೂಸಿನ್, ಲೈಸಿನ್, ಥ್ರೆಯೋನಿನ್ ಮತ್ತು ಟ್ರಿಪ್ಟೊಫಾನ್ ಸೇರಿದಂತೆ ಅನೇಕ ಸಂಯುಕ್ತಗಳನ್ನು ಹೊಂದಿರುವ ಬಸಳೆ ಸೊಪ್ಪಿನಲ್ಲಿ ಎರಡು ತಳಿಗಳಿವೆ.

ಕೆಂಪು ವಿಧ:(Basella rubra ) : ಇದು ನೇರಳೆ ಅಥವಾ ಕಡು ಗುಲಾಬಿ ಬಣ್ಣದ ಕಾಂಡಗಳು ಹಸಿರು ಎಲೆಗಳನ್ನು ಹೊಂದಿರುತ್ತದೆ.

ಹಸಿರು ವಿಧ: (Basella alba) : ಇದು ಹಸಿರು ಕಾಂಡಗಳು ಮತ್ತು ಹಸಿರು ಎಲೆಗಳಿಂದ ಕೂಡಿರುತ್ತದೆ.

ಬಸಳೆ ಸೊಪ್ಪಿನ ಉಪಯೋಗ

ಉತ್ತಮ ಆರೋಗ್ಯಕ್ಕೆ ಬಸಳೆ ಸೊಪ್ಪು

1.ಬಾಯಿಯಲ್ಲಿ ಉಂಟಾಗುವ ಹುಣ್ಣಿನಿಂದ ಹಿಡಿದು ಸರ್ವರೋಗಕ್ಕೂ ಮದ್ದು ಎಂಬ ಖ್ಯಾತಿ ಬಸಳೆ ಸೊಪ್ಪಿಗಿದೆ. ಬಹಳ ಹಿಂದಿನಿಂದಲೂ ನಮ್ಮ ಹಿರಿಯರು ಬಸಳೆ ಸೊಪ್ಪನ್ನು ತಮ್ಮ ದಿನ ನಿತ್ಯ ಮಾಡುವ ಅಡುಗೆ ಪದಾರ್ಥಗಳಲ್ಲಿ ಬಳಸುತ್ತಾ ಬಂದಿದ್ದಾರೆ. ಈ ಲೇಖನದಲ್ಲಿ ಮನುಷ್ಯನಿಗೆ ಬಸಳೆ ಸೊಪ್ಪಿನ ಸೇವನೆಯಿಂದ ಉಂಟಾಗುವ ಕೆಲವು ಆರೋಗ್ಯ ಪ್ರಯೋಜನಗಳನ್ನು ವಿವರಿಸಲಾಗಿದೆ.

2 ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಬಸಳೆ ಸೊಪ್ಪಿನಲ್ಲಿರುವ ರಸ ಸರಿಯಾದ ಜೀರ್ಣಕ್ರಿಯೆ ಮತ್ತು ಕರುಳಿನ ಚಲನೆಗೆ ಸಹಾಯ ಮಾಡುತ್ತದೆ. ಇದು ಆಮ್ಲೀಯತೆಯ ಸಮಸ್ಯೆಗಳನ್ನು ತಟಸ್ಥಗೊಳಿಸುತ್ತದೆ. ಹೊಟ್ಟೆ ಉಬ್ಬರ, ಉಗ್ರಾಮ್ಲ, ಹುಳಿತೇಗು ಮುಂತಾದ ಸಮಸ್ಯೆಗಳನ್ನು ನಿವಾರಿಸುತ್ತದೆ. ಅಲ್ಲದೆ ಹೊಟ್ಟೆ ಹುಣ್ಣು(ಅಲ್ಸರ್) ಚಿಕಿತ್ಸೆಗೆ ಇದು ಬಲು ಸಹಕಾರಿಯಾದ ಸೊಪ್ಪಾಗಿದೆ. ಹಸಿವೆಯನ್ನು ಹೆಚ್ಚಿಸಲು ಬಸಳೆಯು ಸಹಕಾರಿ. ವಾರದಲ್ಲಿ ಮೂರರಿಂದ ನಾಲ್ಕು ದಿನ ಬಸಳೆ ಸೊಪ್ಪನ್ನು ಆಹಾರದಲ್ಲಿ ಬಳಸುವುದರಿಂದ ಜೀರ್ಣ ಕ್ರಿಯೆಯ ವೇಗ ಹೆಚ್ಚಾಗುತ್ತದೆ. ಆದ್ದರಿಂದ ಇದು ಹಸಿವನ್ನು ಹೆಚ್ಚಿಸುತ್ತದೆ.

3. ಬಸಳೆಯ ರಸವು ಗುಳ್ಳೆಗಳು ಅಥವಾ ಯಾವುದೇ ಹುಣ್ಣುಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದರಲ್ಲಿರು ರಸ ಕರುಳಿನಲ್ಲಿ ಉಂಟಾಗುವ ಹುಣ್ಣುಗಳನ್ನು ನಿವಾರಿಸಲು ನೆರವಾಗುತ್ತದೆ. ಬಾಯಿ ಹುಣ್ಣು ಸಾಮಾನ್ಯವಾಗಿ ಹೊಟ್ಟೆ ಅಥವಾ ಕರುಳಿನಲ್ಲಿ ಉಂಟಾಗುವ ಒತ್ತಡ, ಹುಣ್ಣುಗಳನ್ನು ಪ್ರತಿನಿಧಿಸುತ್ತದೆ. ಬಾಯಿ ಹುಣ್ಣಿನ ಅರ್ಧ ಕರುಳಿನ ಹುಣ್ಣು ಎಂಬುದಾಗಿದೆ.

4.ಬಸಳೆ ಸೊಪ್ಪಿನಲ್ಲಿ ಸಿ ಅನ್ನಾಂಗ ಕಬ್ಬಿಣ ಹಾಗೂ ರಂಜಕದ ಅಂಶವು ಹೆಚ್ಚಾಗಿರುವುದರಿಂದ ಇದರ ಸೇವನೆಯು ಮಲವಿಸರ್ಜನೆಗೆ ಸುಲಭ ಸಾಧಕ ಎನಿಸುವುದು ಮಕ್ಕಳು ಮತ್ತು ಗರ್ಭಿಣಿಯರ ಆರೋಗ್ಯ ದೃಷ್ಟಿಯಿಂದ ಬಸಳೆಸೊಪ್ಪು ತುಂಬಾ ಒಳ್ಳೆಯದು .

5.ಚಿಕ್ಕ ಮಕ್ಕಳಲ್ಲಿ ರಕ್ತ ಹೀನತೆಯ ಕೊರತೆ ಇದ್ದರೆ ಈ ಬಸಳೆ ಸೊಪ್ಪಿನ ತಿಂಡಿಯನ್ನು ಮಕ್ಕಳಿಗೆ ಕೊಡುವುದರಿಂದ ರಕ್ತಹೀನತೆ ನಿವಾರಣೆ ಆಗುತ್ತದೆ .

6.ನಿಮಗೆ ಜ್ಞಾಪಕ ಶಕ್ತಿಯ ಕೊರತೆ ಇದೆಯಾ ಅಥವಾ ನಿಮ್ಮ ಮಕ್ಕಳಿಗೆ ಎಷ್ಟು ಓದಿದರೂ ನೆನಪಿನಲ್ಲಿ ಉಳಿಯುತ್ತಿಲ್ಲವೇ. ಹಾಗಾದರೆ ವಾರದಲ್ಲಿ 2 ಬಾರಿಯಾದರೂ ಬಸಳೆ ಸೊಪ್ಪಿನಿಂದ ತಯಾರಾಗಿರುವ ಅಡುಗೆಯನ್ನು ಸೇವಿಸುವುದರಿಂದ ನಿಮ್ಮ ಜ್ಞಾಪಕ ಶಕ್ತಿ ವೃದ್ಧಿ ಆಗುತ್ತದೆ.

7.ನೀವು ನಿದ್ರಾ ಹೀನತೆಯಿಂದ ಬಳಲುತ್ತಿದ್ದರೆ ಬಸಳೆ ಸೊಪ್ಪಿನ ಸೇವನೆಯಿಂದ ನಿದ್ರಾಹೀನತೆ ಕೊರತೆ ದೂರವಾಗುತ್ತದೆ.

8.ಅಂಗಾಲಿನ ಉರಿಯನ್ನು ಕಡಿಮೆ ಮಾಡಲು, ಬಸಳೆ ಸೊಪ್ಪನ್ನು ಅರೆದು, ಆ ಮಿಶ್ರಣವನ್ನು ರಾತ್ರೆ ಮಲಗುವಾಗ ಅಂಗಾಲಿಗೆ ಹಚ್ಚಿಕೊಂಡು ಮಲಗಿದರೆ, ಅಂಗಾಲುಗಳ ಉರಿ ಕಡಿಮೆಯಾಗುತ್ತದೆ. ಹಾಗು ಕಾಲು ತಂಪಾಗಿರುತ್ತದೆ.

9.ಒಣ ಚರ್ಮಕ್ಕೆ ಬಸಳೆಯನ್ನು ಉಪಯೋಗಿಸಬಹುದಾಗಿದೆ. ಕೆಲವೊಮ್ಮೆ ಚರ್ಮವು ಒಣಗಿದಂತಾಗುತ್ತದೆ. ಆಗ ಬಸಳೆಯನ್ನು ಅರೆದು ಹಚ್ಚಿಕೊಳ್ಳುವುದರಿಂದ ಒಣ ಚರ್ಮವು ತನ್ನ ಹೊಳಪನ್ನು ಪುನಃ ಪಡೆದು ಕಾಂತಿಯುತವಾಗಿ ಕಾಣುತ್ತದೆ. ಜೊತೆಗೆ ಒಣ ಚರ್ಮದ ಕಾರಣದಿಂದ ತುರಿಕೆ ಉಂಟಾಗಿದ್ದರೂ ಕೂಡ ನಿವಾರಣೆಯಾಗುತ್ತದೆ.

10.ಮಕ್ಕಳನ್ನು ಹೊಂದಲು ಬಯಸುವ ಮಹಿಳೆಯರು ತಮ್ಮ ದೈನಂದಿನ ಆಹಾರದಲ್ಲಿ ಬಸಲೆ ಸೊಪ್ಪನ್ನು ಸೇರಿಸಿಕೊಳ್ಳಬಹುದು. ಇದು ಗರ್ಭಪಾತವನ್ನು ತಡೆಯಲು ನೆರವಾಗುತ್ತದೆ. ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು ಹಾಲು ಉತ್ಪಾದನೆಗೆ ಹೆಚ್ಚಿಸಿಕೊಳ್ಳಲು ಬಸಳೆ ಎಲೆಗಳನ್ನು ಸೇವಿಸಬೇಕು. ಇದು ಮಹಿಳೆಯರಲ್ಲಿ ಗರ್ಭಾವಸ್ಥೆಯಲ್ಲಿ ಕಾಡುವ ಮಲಬದ್ಧತೆಯನ್ನು ತಡೆಯುತ್ತದೆ.

11.ಇದರಲ್ಲಿ ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂ ಕೂಡ ಸಮೃದ್ಧವಾಗಿದೆ. ಈ ಖನಿಜಗಳು ಹೃದಯದ ತಡೆಗಳನ್ನು ತೆಗೆದುಹಾಕಲು ಮತ್ತು ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. ಹೃದಯ ಸ್ನಾಯುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ರಕ್ತದೊತ್ತಡವನ್ನು ನಿರ್ವಹಿಸುತ್ತದೆ. ಇದು ಪಾರ್ಶ್ವವಾಯು ಸಾಧ್ಯತೆಗಳನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಹಿತ್ತಲ ಗಿಡಗಳ ಔಷಧಿ ಗುಣಗಳು

ಹಿತ್ತಲ ಗಿಡಗಳ ಔಷಧಿ ಗುಣಗಳು

ಮಹಾಭಾರತದಲ್ಲಿ ಬರುವ ಶಕುನಿ ಪಾತ್ರವೇ ಕುರುಕ್ಷೇತ್ರ ಯುದ್ಧಕ್ಕೆ ಪ್ರಮುಖ ಕಾರಣ