in ,

ಶುಭ ಹಾರೈಸಲು, ಅದರ ಅಂದ ಹೆಚ್ಚಿಸಲು ಆರ್ಕಿಡ್ ಹೂವುಗಳು ಬೇಕು

ಆರ್ಕಿಡ್ ಹೂವು
ಆರ್ಕಿಡ್ ಹೂವು

ಆರ್ಕೀಡ್ ಒಂದು ವಿಶಿಷ್ಟ ಬಗೆಯ ಹೂವುಗಳು. ಅವುಗಳು ಭಾರತದಲ್ಲಿ ಈಶಾನ್ಯ ಗಡಿ ರಾಜ್ಯಗಳಾದ ಅರುಣಾಚಲ ಪ್ರದೇಶ, ಆಸ್ಸಾಮ್, ಮತ್ತು ಮೇಘಾಲಯದಲ್ಲಿ ಹೇರಳವಾಗಿ ಬೆಳೆಯುತ್ತವೆ. ಆರ್ಕೀಡ್ ಗಳು ಅತ್ಯಂತ ಮನಮೋಹಕ ವೈವಿಧ್ಯಮಯ ಸುಂದರ ಬಣ್ಣಗಳಲ್ಲಿ ಕಣ್ಣು ಮತ್ತು ಮನಸ್ಸುಗಳಿಗೆ ಆನಂದವನ್ನು ನೀಡುತ್ತವೆ. ಎಲ್ಲ ಸಮಾರಂಭಗಳಿಗೆ ಶುಭ ಹಾರೈಸಲು ಅದರ ಅಂದ ಹೆಚ್ಚಿಸಲು ಆರ್ಕಿಡ್ ಬೇಕು. ಜಗತ್ತಿನಾದ್ಯಂತ ಆರ್ಕಿಡ್ ನ ಸಾವಿರಾರು ಪ್ರಭೇದಗಳಿವೆ. ಉಷ್ಣವಲಯದ ಅರಣ್ಯದಲ್ಲಿ ಈ ಸಂಖ್ಯೆ ಹೆಚ್ಚು. ಸುಮಾರು ೩೫ ಸಾವಿರಕ್ಕೂ ಹೆಚ್ಚಿನ ಪ್ರಭೇದಗಳಿವೆ. ಇದರಲ್ಲಿ ದುರ್ವಾಸನೆ ಬೀರುವ ಪ್ರಭೇದಗಳೂ ಇವೆ. ಇಲ್ಲಿ ಕೆಳಗೆ ಹಲವಾರು ಬಗೆಯ ಬಣ್ಣಗಳ ಆರ್ಕೀಡ್ ಚಿತ್ರಗಳನ್ನು ಕೊಡಲಾಗಿವೆ. ಹಿಮಾಲಯದ ಪರ್ವತ ಪ್ರದೇಶಗಳ್ಲ್ಲಿ ಅವುಗಳು ಹೆಚ್ಚಾಗಿ ಚೀನಾದ ಕೆಲವು ಪ್ರದೇಶದಲ್ಲಿಯೂ ಕಂಡು ಬರುತ್ತವೆ.

ಆರ್ಕೀಡ್ಗಳಿವೆಯೆಂದರೆ ಅವಿರುವ ಪ್ರದೇಶಗಳಲ್ಲಿ ಉತ್ತಮ ಮಳೆ ಬೀಳುತ್ತದೆ, ಸಹನೀಯ ತೇವಾಂಶವಿದೆಯೆಂದರ್ಥ. ಒಟ್ಟಾರೆ ನೀರಿಗೆ ಕೊರತೆಯಿರುವುದಿಲ್ಲ. ಆರ್ಕೀಡ್ಗಳನ್ನು ಉಳಿಸಿಕೊಳ್ಳುವುದೆಂದರೆ ಒಂದು ಒಳ್ಳೆಯ, ಆರೋಗ್ಯಪೂರ್ಣ, ಜೀವವೈವಿಧ್ಯದ ನೈಸರ್ಗಿಕ ಪರಿಸರವನ್ನು ಉಳಿಸಿಕೊಳ್ಳುವುದುಯೆಂದರ್ಥ. ಆರ್ಕೀಡನ್ನು ಸೀತಾಳೆ, ಸೀತೆ ಹೂವು ಎಂದು ಕನ್ನಡದಲ್ಲಿ ಕರೆಯುತ್ತಾರೆ.

ಇವು ನೆಲದ ಮೇಲೆ ಬೆಳೆಯುವುದಕ್ಕಿಂತ ಹೆಚ್ಚಾಗಿ ಮರದ ಮೇಲೆ ಪರೋಪಜೀವಿಯಂತೆ ಬೆಳೆಯುತ್ತದೆ. ಆದರೆ ತಾನು ಬೆಳೆದ ಮರದಿಂದ ಆಹಾರವನ್ನು ಪಡೆಯದೆ, ಆಹಾರ ತಯಾರಿಸಿಕೊಳ್ಳುತ್ತದೆ. ಪುಷ್ಪಪತ್ರಗಳು ಹೂ ಅರಳುವುದಕ್ಕೂ ಮುನ್ನ ಮೊಗ್ಗನ್ನು ಆವರಿಸಿರುತ್ತವೆ. ಎರಡು ಪುಷ್ಪದಳಗಳಲ್ಲಿ ಒಂದು ದಳ ತುಟಿಯಂತಿರುತ್ತದೆ.

ಶುಭ ಹಾರೈಸಲು, ಅದರ ಅಂದ ಹೆಚ್ಚಿಸಲು ಆರ್ಕಿಡ್ ಹೂವುಗಳು ಬೇಕು
ಆರ್ಕಿಡ್ ಹೂವು

ಆರ್ಕಿಡೇಸೀ ಕುಟುಂಬಕ್ಕೆ ಸೇರಿದ ಇವುಗಳು ಬಹುವಾರ್ಷಿಕ ಪರ್ಣ ಸಸ್ಯಗಳು. ಇವು ಕೆಲವು ಅಂಗುಲಗಳಿಂದ ಹಲವು ಅಡಿಗಳ ಎತ್ತರ ಬೆಳೆಯುತ್ತವೆ. ಇವು ಏಕದಳ ಸಸ್ಯಗಳು. ಆರ್ಕಿಡೇಸೀ ಕುಟುಂಬದಲ್ಲಿರುವಷ್ಟು ಹೂ ಬಿಡುವ ಸಸ್ಯಗಳು ಇಡೀ ಸಸ್ಯವರ್ಗದಲ್ಲೇ ಇಲ್ಲ. ಈ ಕುಟುಂಬದಲ್ಲಿ ೭೮೮ಕ್ಕೂ ಹೆಚ್ಚು ಗುರುತಿಸಲಾದ ಜಾತಿಗಳೂ ಮತ್ತು ೧೮೫೦೦ ಪ್ರಭೇದಗಳೂ ಇವೆ. ಜೊತೆಗೆ ಸಾವಿರಾರು ಅಡ್ಡತಳಿಗಳಿವೆ. ಆರ್ಕಿಡ್ಡುಗಳು ಬೆಳೆಯುವ ರೀತಿಯಲ್ಲಿ ಬಹಳ ವೈವಿಧ್ಯ ಇದೆ. ನೆಲದ ಮೇಲೆ ಬೆಳೆಯುವ ಭೂಸಸ್ಯಗಳು, ಕೊಳೆತು ಬಿದ್ದಿರುವ ಕೆಲವು ಸಸ್ಯಕಾಂಡಗಳ ಮೇಲೆ ಬೆಳೆಯುವ ಪುತಿಜನ್ಯ ಸಸ್ಯಗಳು, ಜೀವಂತವಾಗಿರುವ ಸಸ್ಯಗಳ ಮೇಲೆ ಬೆಳೆಯುವ ಅಪ್ಪು ಸಸ್ಯಗಳು, ಬಂಡೆಗಳ ಮೇಲೆ ಬೆಳೆಯುವ ಶಿಲಾ ಸಸ್ಯಗಳು ಆರ್ಕಿಡ್ಡುಗಳ ವಿವಿಧ ಪ್ರಕಾರಗಳಿಗೆ ನಿದರ್ಶನಗಳು. ಆರ್ಕಿಡ್ಡುಗಳು ಎಲ್ಲ ವಲಯಗಳಲ್ಲಿ ಬೆಳೆದರೂ ಉಷ್ಣ ಮತ್ತು ಸಮಶೀತೋಷ್ಣವಲಯ ಗಳಲ್ಲಿ ಚೆನ್ನಾಗಿ ಬೆಳೆಯುತ್ತವೆ. ಈ ವಲಯಗಳಲ್ಲಿ ಪ್ರಪಂಚದಲ್ಲಿ ಬೆಳೆಯುವವುಗಳಲ್ಲಿ ಅಪ್ಪು ಸಸ್ಯವಾಗಿ ಬೆಳೆಯುವ ಆರ್ಕಿಡ್ಡುಗಳೇ ಹೆಚ್ಚು. ಕೆಲವು ಆರ್ಕಿಡ್ಡುಗಳು ತಮ್ಮ ತವರೂರನ್ನು ಬಿಟ್ಟು ಬೇರೆ ಕಡೆ ಬೆಳೆಯುವುದಿಲ್ಲ. ಇವುಗಳ ಕಾಂಡ ಕವಲೊಡೆಯುವುದನ್ನು ಅನುಸರಿಸಿ ಆರ್ಕಿಡ್ಡುಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಿದೆ: ಏಕಕಾಂಡಗಳ ಗುಂಪು, ನಕಲಿ ಏಕಕಾಂಡಗಳ ಗುಂಪು ಮತ್ತು ಬಹು ಕವಲೊಡೆಯುವ ಕಾಂಡಗಳ ಗುಂಪು. ಆರ್ಕಿಡ್ಡುಗಳ ಎಲೆಗಳ ಆಕಾರ, ರಚನೆ, ಬಣ್ಣ ಇತ್ಯಾದಿಗಳಲ್ಲಿ ಬಹು ಭಿನ್ನತೆ ಇದೆ. ಇವು ಹೂಗೊಂಚಲುಗಳು ಮೂಲವಾಗಿ ಅಂತ್ಯಾರಂಭಿ ಮಾದರಿಯವಾಗಿವೆ. ಈ ವಿಧದಲ್ಲಿ ರೇಸೀಮ್, ಸ್ಪೈಕ್ ಮುಂತಾದ ಕೆಲವು ರೀತಿಗಳೂ ಇವೆ. ಆರ್ಕಿಡ್ಡುಗಳ ಹೂಗಳು ಏಕಲಿಂಗಿಗಳು ಇಲ್ಲಿವೆ ದ್ವಿಲಿಂಗಿಗಳು. ಇವುಗಳ ಹೂರಚನೆ ವಿಚಿತ್ರ. ಪುಷ್ಪಪತ್ರ ಮತ್ತು ದಳಗಳು ಕೂಡಿ ಪೆರಿಯಂತ್ ಆಗಿದ್ದು ಎರಡು ಸಾಲುಗಳಲ್ಲಿ ಇರುತ್ತವೆ. ಕೂಡಿಕೆಯ ಹೆಸರು ಲಿಪ್. ಆರ್ಕಿಡ್ ಹೂಗಳ ಗಂಡುಭಾಗ ಮತ್ತು ಹೆಣ್ಣುಭಾಗ ಕೂಡಿಕೊಂಡು ಹೂಕಂಬ ಆಗಿರುತ್ತದೆ. ಹಣ್ಣು ಕ್ಯಾಪ್ಸ್ಯೂಲುಗಳು.

ಇದನ್ನು ಶಾಸ್ತ್ರೋಕ್ತವಾಗಿ ಆರಂಭಿಸಿದವರಲ್ಲಿ ಸಸ್ಯವಿಜ್ಞಾನಿ ಲಿನೀಯೆಸ್ ಮೊದಲಿಗ. ಮುಂದೆ ಓಕ್ಸ್ ಎಮ್ಸ್, ಲಿಬರ್ಟಿ ಹೈಡ್ಬೈಲೆ. ಬೆಂತಮ್ ಮತ್ತು ಹೂಕರ್, ಫಿಟ್ಜರ್ ಮತ್ತು ಸ್ಕ್ಲಟ್ಜರ್ ಮುಂತಾದವರು ಹೆಚ್ಚಿನ ಅಧ್ಯಯನ ನಡೆಸಿದರು. ಇಂದು ಬಳಕೆಯಲ್ಲಿರುವ ವರ್ಗೀಕರಣ ಫಿಟ್ಜರ್ ಮತ್ತು ಸ್ಕ್ಲಟ್ಜರ್ ಇವರು ಮಾಡಿರುವ ವಿಧಾನ. ಇದರ ಪ್ರಕಾರ ಆರ್ಕಿಡ್ ಕುಟುಂಬದ ವರ್ಗೀಕರಣ ಆರು ಅಂಶಗಳ ಸಹಾಯದಿಂದ ಮಾಡಲಾಗಿದೆ.

ಬೆಳೆವಣಿಗೆಯ ವಿಧ.
ಹೂಗೊಂಚಲಿನ ಮತ್ತು ಹೂವಿನ ಆಕಾರ.
ಎಲೆ ಇರುವಿಕೆ ಅಥವಾ ಇಲ್ಲದಿರುವಿಕೆ.
ನಕಲಿ ಲಶುನ ಇರುವಿಕೆ ಅಥವಾ ಇಲ್ಲದಿರುವಿಕೆ.
ಪರಾಗ ಗುಂಪು ಆಗುವ ವಿಧಾನ ಮತ್ತು ಅವುಗಳ ಸಂಖ್ಯೆ ಮತ್ತು ಅಂಟಿಕೊಂಡಿರುವ ವಿಧಾನ.

ಗರ್ಭಧಾರಣೆ ವಿಧಾನ.
ಆರ್ಕಿಡೇಸೀ ಕುಟುಂಬವನ್ನು ಕೆಲವು ಕುಲ (ಟ್ರೈಬ್) ಮತ್ತು ಉಪಕುಲಗಳಾಗಿ (ಸಬ್ ಟ್ರೈಬ್) ವರ್ಗೀಕರಿಸಿದ್ದಾರೆ. ಪ್ರತಿ ಉಪಪ್ರಭೇದದಲ್ಲಿ ಕೆಲವು ಜಾತಿ (ಜೀನಸ್) ಮತ್ತು ಅನೇಕ ಪ್ರಭೇದಗಳು (ಸ್ಪಿಷೀಸ್) ಸೇರಿವೆ.

ಆರ್ಕಿಡ್ಡುಗಳನ್ನು ಬೀಜ, ಬೇರು ತುಂಡು, ಅಥವಾ ಸಕಲಿ ಲಶುನಗಳಿಂದ ವೃದ್ಧಿ ಮಾಡಬಹುದು. ವೃದ್ಧಿ ಸಾಮಾನ್ಯವಾಗಿ ಜಾತಿಗಳನ್ನು ಅನುಸರಿಸಿದೆ. ವೃದ್ಧಿಸಲು ಸಾಧಾರಣವಾಗಿ ಸುಪ್ತಾವಸ್ಥೆ ಯೋಗ್ಯವಾದ ಕಾಲ. ಮಧ್ಯ ಸುಪ್ತಾವಸ್ಥೆ ಕಾಲದಲ್ಲಿ ಇವನ್ನು ಇತರ ಸ್ಥಳಗಳಿಗೆ ಸುಲಭವಾಗಿ ಸಾಗಿಸಿ ವೃದ್ಧಿಸಬಹುದು. ಬೇರು ಅಥವಾ ಕಾಂಡ ಮತ್ತು ನಕಲಿ ಲಶುನಗಳನ್ನು ನೆಡುವುದಕ್ಕೆ ಮುಂಚೆ ಒಣ ಮತ್ತು ರೋಗಪೀಡಿತ ಭಾಗಗಳನ್ನು ತೆಗೆದುಹಾಕಬೇಕು. ತುಂಡುಗಳನ್ನು ತೇವ ಮಾಡಿದ ಸ್ಪಂಜಿನಿಂದ ಒರಸಿ ಕೆಲವು ದಿವಸಗಳ ಕಾಲ ತೇವಾಂಶ ಇರುವ ಸ್ಥಳಗಳಲ್ಲಿ ತೂಗು ಹಾಕಬೇಕು. ತುಂಡುಗಳನ್ನು ನೆಡುವ ಮೊದಲು ಶುದ್ಧೀಕರಣ ಮಾಡಿ ಅನಂತರ ಆರ್ಕಿಡ್ಡುಗಳನ್ನು ಬೆಳೆಸಬೇಕು.

ಆರ್ಕಿಡ್ ಹೂಗಳು ಎಷ್ಟು ಸುಂದರವೋ ಆರ್ಕಿಡ್ಡುಗಳ ಬೇಸಾಯ ಅಷ್ಟೇ ಕಷ್ಟ. ಇತರ ಎಲ್ಲ ಸಸ್ಯಗಳ ಬೇಸಾಯದಲ್ಲಿ ಪರಿಣಿತನಾದ ತೋಟಗಾರ ಆರ್ಕಿಡ್ಡುಗಳ ಬೇಸಾಯದಲ್ಲಿ ಕಷ್ಟ ಅನುಭವಿಸುವಂತಾಗುತ್ತದೆ. ಆರ್ಕಿಡ್ಡುಗಳನ್ನು ಅವು ಬೆಳೆಯುವ ಗುಣಗಳ ಆಧಾರದ ಮೇಲೆ ನಾಲ್ಕು ಗುಂಪುಗಳಾಗಿ ವಿಂಗಡಿಸಬಹುದು. *ಅಪ್ಪು ಸಸ್ಯಗಳು *ಶಿಲಾ ಸಸ್ಯಗಳು *ಪುತಿಜನ್ಯ ಸಸ್ಯಗಳು *ಭೂ ಸಸ್ಯಗಳು.

ಶುಭ ಹಾರೈಸಲು, ಅದರ ಅಂದ ಹೆಚ್ಚಿಸಲು ಆರ್ಕಿಡ್ ಹೂವುಗಳು ಬೇಕು
ಆರ್ಕಿಡ್ಡುಗಳ ಬೇಸಾಯ

ಸಾಧ್ಯವಾದಷ್ಟು ಮಟ್ಟಿಗೆ ಆರ್ಕಿಡ್ಡಿನ ಮೂಲಸ್ಥಾನದ ಹವಾ ಪರಿಸ್ಥಿತಿ ಕಲ್ಪಿಸುವ ಪ್ರಯತ್ನ ಮಾಡಬೇಕು. ಪ್ರತಿಜನ್ಯ ಆರ್ಕಿಡ್ಡನ್ನು ಒಣ ಮರದ ತುಂಡಿನ ಮೇಲೆ ಬೆಳೆಸಿ ಕಂಬಿಯಿಂದ ತೂಗುಹಾಕಬೇಕು. ಭೂ ಆರ್ಕಿಡ್ಡುಗಳನ್ನು ಕುಂಡಗಳಲ್ಲಿ ಬೆಳೆಸಬೇಕು. ಇವನ್ನು ಬೆಳೆಸುವ ಕುಂಡಗಳಿಗೆ ೧೦ ಸೆಮೀ. ಅಗಲದ ಅನೇಕ ರಂಧ್ರಗಳು ಇರಬೇಕು. ತೆಂಗಿನ ನಾರು ಅಥವಾ ಪಾಚಿಯನ್ನು ಜೌಗು ರಂಧ್ರದ ಮೇಲೆ ಹಾಕಬೇಕು. ೪ ಭಾಗ ಒಣ ಪಾಚಿ, ೨ ಭಾಗ ಸಣ್ಣ ಇಟ್ಟಿಗೆ ಚೂರು, ೧ ಭಾಗ ಇದ್ದಲು ಪುಡಿ, ೧ ಭಾಗ ಗೋಡು ಮಣ್ಣು, ೧ ಭಾಗ ಎಲೆ ಗೊಬ್ಬರದ ಮಿಶ್ರಣ ಮಾಡಿ ಕುಂಡಗಳಿಗೆ ತುಂಬಲು ಉಪಯೋಗಿಸ ಬೇಕು. ಸ್ವಚ್ಛತೆ ಇಲ್ಲದೆ ಆರ್ಕಿಡ್ಡುಗಳ ಬೇಸಾಯ ಸಾಧ್ಯವಿಲ್ಲ. ರೋಗಪೀಡಿತ ವಸ್ತುಗಳನ್ನು ಇವುಗಳ ಬೇಸಾಯಕ್ಕೆ ಉಪಯೋಗಿಸಿದಾಗ ರೋಗಕ್ಕೆ ಬಲಿಯಾಗಿ ನಾಶವಾಗುತ್ತವೆ. ಆದ್ದರಿಂದ ಮರದ ತುಂಡು ಮತ್ತು ಗೊಬ್ಬರ ಇತ್ಯಾದಿಗಳನ್ನು ಶುದ್ಧೀಕರಣ ಮಾಡಿ ಅನಂತರ ಬೇಸಾಯಕ್ಕೆ ಉಪಯೋಗಿಸಬೇಕು. ಸಾಮಾನ್ಯವಾಗಿ ಆರ್ಕಿಡ್ಡುಗಳು ತೇವಾಂಶ ಬಯಸುತ್ತವೆ. ಜಾಗರೂಕತೆಯಿಂದ ನೀರು ಕುಡಿಸಿದರೆ ಅವು ಸಮೃದ್ಧವಾಗಿ ಬೆಳೆಯುತ್ತವೆ. ಆರ್ಕಿಡ್ಡುಗಳ ಬೆಳೆವಣಿಗೆಯಲ್ಲಿ ಬಹಳ ವೈವಿಧ್ಯವಿದೆ. ಮಳೆಗಾಲದಲ್ಲಿ ಬೆಳೆವಣಿಗೆ ಇವುಗಳ ಮೊದಲನೆ ಹಂತ. ಈ ಹಂತದಲ್ಲಿ ಇವು ಆಹಾರ ಮತ್ತು ನೀರನ್ನು ತಮ್ಮ ನಕಲಿ ಲಶುನಗಳಲ್ಲಿ ಶೇಖರಿಸಿಟ್ಟುಕೊಳ್ಳುತ್ತವೆ. ಎರಡನೆಯ ಹಂತದಲ್ಲಿ ನವೆಂಬರ್ ತಿಂಗಳಿಂದ ಮಾರ್ಚ್ ತಿಂಗಳವರೆಗೆ ಸುಪ್ತಾವಸ್ಥೆಯನ್ನು ಮುಟ್ಟುತ್ತವೆ. ಕೊನೆಯ ಹಂತದಲ್ಲಿ ಸುಪ್ತಾವಸ್ಥೆಯಿಂದ ಚೇತರಿಸಿಕೊಂಡು ಹೂ ಬಿಡಲು ಪ್ರಾರಂಭಿಸುತ್ತವೆ. ಸುಪ್ತಾವಸ್ಥೆಯ ಕಾಲವನ್ನು ಸರಿಯಾಗಿ ತಿಳಿದ ಬೇಸಾಯಗಾರ ಮಾತ್ರ ಆರ್ಕಿಡ್ಡುಗಳ ಬೇಸಾಯವನ್ನು ಸುಗಮವಾಗಿ ಮಾಡಬಲ್ಲ.

ಸುಪ್ತಾವಸ್ಥೆಯಲ್ಲಿ ಆರ್ಕಿಡ್ಡುಗಳಿಗೆ ನೀರು ಕೊಡುವ ಅಗತ್ಯವಿಲ್ಲ. ಆದರೆ ಹೆಚ್ಚು ದಿವಸಗಳ ಅಂತರದಲ್ಲಿ ಸ್ವಲ್ಪ ನೀರು ಕೊಟ್ಟು ಅವುಗಳನ್ನು ಜೀವಿತವಾಗಿಟ್ಟಿರುವುದು ಬಹು ಮುಖ್ಯ ಅಂಶ. ಸುಪ್ತಾವಸ್ಥೆ ಮುಗಿದ ತಕ್ಷಣ ಕುಂಡ ಬದಲಾವಣೆ ಮಾಡಬೇಕು. ಉತ್ತಮ ಗೊಬ್ಬರ ಮಿಶ್ರಣ ಕೊಟ್ಟು ಧಾರಾಳವಾಗಿ ನೀರು ಕೊಡುವುದರಿಂದ ಆರ್ಕಿಡ್ಡುಗಳು ಮತ್ತೆ ತಮ್ಮ ಬೆಳೆವಣಿಗೆಯನ್ನು ಪ್ರಾರಂಭಿಸುತ್ತವೆ. ಸಾಮಾನ್ಯವಾಗಿ ಕೆಲವನ್ನು ಬಿಟ್ಟರೆ ಉಳಿದ ಆರ್ಕಿಡ್ಡುಗಳು ಪಾಶರ್ವ್ ನೆರೆಳಿನಲ್ಲಿ ಉತ್ಕೃಷ್ಟವಾಗಿ ಬೆಳೆಯುತ್ತವೆ. ಇವುಗಳ ಬೇಸಾಯಕ್ಕೆ ಸರಾಗವಾದ ಗಾಳಿ, ಬೆಳಕು ಅಗತ್ಯ. ಆಗತಾನೆ ವೃದ್ಧಿ ಮಾಡಿದ ಮತ್ತು ಸಣ್ಣ ಎಲೆಯುಳ್ಳ ಆರ್ಕಿಡ್ಡುಗಳು ಬಿಸಿಲನ್ನು ಸಹಿಸುವುದಿಲ್ಲ. ಪ್ರಾಪ್ತ ವಯಸ್ಸಿಗೆ ಬಂದ ಮತ್ತು ಅಗಲ ಎಲೆಯ ಆರ್ಕಿಡ್ಡುಗಳು ಸ್ವಲ್ಪ ಮಟ್ಟಿಗೆ ಬಿಸಿಲಿನ ತಾಪವನ್ನು ಸಹಿಸಬಲ್ಲುವು. ಆರ್ಕಿಡ್ಡುಗಳು ಕೃತಕ ಗೊಬ್ಬರಗಳಿಗೆ ವಿರುದ್ಧ ಪ್ರತಿಕ್ರಿಯೆ ವ್ಯಕ್ತ ಪಡಿಸುತ್ತವೆ. ವರ್ಷಕ್ಕೊಮ್ಮೆ ಅಗತ್ಯವಾಗಿ ಕುಂಡ ಬದಲಾಯಿಸಬೇಕು. ಆರ್ಕಿಡ್ಡುಗಳಿಗೆ ನುಸಿ, ಜೇಡರಹುಳು, ಗೊಂಡೆಹುಳು, ಬಸವನಹುಳು, ಬಿಳಿತಿಗಣೆ, ಜಿರಲೆ, ಶಲ್ಕ ಕೀಟಗಳು ಮುಂತಾದ ಕೀಟಗಳು ಬೀಳುತ್ತವೆ. ಈ ಕೀಟಗಳ ಹಾವಳಿಯನ್ನು ಸ್ವಚ್ಛವಾದ ಮುನ್ನೆಚ್ಚರಿಕೆ ಬೇಸಾಯದಿಂದ ತಪ್ಪಿಸಬಹುದು. ಗಿಡಗಳ ಮೇಲೆ ಆಗಾಗ ನೀರು ಸಿಂಪಡಿಸುವುದರಿಂದ ಆಕಸ್ಮಿಕವಾಗಿ ಬೀಳುವ ಕೀಟಗಳನ್ನು ತಪ್ಪಿಸಬಹುದು. ಆರ್ಕಿಡ್ಡುಗಳನ್ನು ಕಾಡುವ ರೋಗ ಇಲ್ಲ. ಕೆಲವು ಸಾರಿ ಒಣಗುವಿಕೆ ಕಾಣಿಸಿಕೊಳ್ಳುತ್ತದೆ. ಇದನ್ನು ಬೋರ್ಡೊ ದ್ರಾವಣದಿಂದ ತಡೆಗಟ್ಟಬಹುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

36 Comments

  1. The High Roller poker chips have no “$” on the chips, which makes them more flexible. For example, instead of the 5, 10 and 25 being only $5, $10 and $25 chips, they could be used as 5¢, 10¢, 25¢ chips too. So, whether you play low stakes and or high stakes, this chip style will work for both! JavaScript seems to be disabled in your browser. For the best experience on our site, be sure to turn on Javascript in your browser. We offer Next Day Air, 2nd Day Air, and 3 Day Select shipping for all items. – 100 chips value 5 _x000D_ _x000D_ _x000D_ _x000D_ _x000D_ Chip Weight Rating: (6 out of 10) This item is a set of Brand New 1000 Holographic Chip Professional Poker Game Set. Poker Chip Trays } is temporarily unavailable in California. These buttons are crystal clear, and the image is printed on the bottom side, where it can be seen through the top of the button.
    https://kowabana.jp/users/118745
    888 Dragon mempunyai nilai RTP Live juga termasuk tinggi yaitu sebesar 98,90%. Sehingga permainan ini juga sering dijadikan pilihan oleh para pemain slot online Indonesia. Game dari Pragmatic Play inilah merupakan yang paling terakhir dari urutan keenam game slot gacor. Pragmatic Play Ltd, a content provider to the iGaming industry, has a new slot game called “Aztec Blaze”. Game slot gacor urutan pertama yang telah di keluarkan oleh provider pragmatic play ini menjadi salah satu game slot gacor dengan tema yang sangat memukau pasti nya akan membuat anda menjadi betah untuk bermain lama di game slot gacor ini. Gates Of Olympus biasa di sebut juga kakek zeus slot atau slot kakek zeus. Banyak yang sudah mendapatkan jackpot besar-besar di game slot kakek zeus ini karena dengan RTP live 93,8% sangat lah mudah untuk anda mendapatkan jackpot nya.

  2. gamespotgiantbombmetacriticfandomfanatical Kodama Duo scores high on our “let’s play again” game meter for a few reasons. Coding Duo is recommended for ages 7-10 and is Osmo’s most advanced Coding game to date. The Coding Duo app no longer requires the physical Awbie and Mo blocks to play, but it still requires all of the Coding Awbie and Jam blocks. It also doesn’t help that the layout on the Surface Duo’s second screen is different for each game. Hopping between NieR: Automata and Hades, for example, required re-learning the whole control scheme. It baffled me that Microsoft has not instituted a universal input layout for Game Pass on Android. It’s downright disappointing. If you promise to stop (by clicking the Agree button below), we’ll unblock your connection for now, but we will immediately re-block it if we detect additional bad behavior.
    https://dantevjsc112222.aboutyoublog.com/28293451/bubblez-game-free-online
    Roulette is a lot of fun once you know the best online casino sites to play at. Our expert online roulette reviews, details about the best welcome bonuses, and key betting strategies will help you enjoy the game and boost your bankroll. From tips on how to choose an online casino, to roulette variations, to special offers and live-dealer options, we’ve got you covered.  Roulette is a classic of the casino and the iconic table game is just as fun to play online. Our experts have reviewed the best online casinos to play real money roulette with and picked out the top online casino bonuses available for you too. Roulette is a thrilling and fun game to play. If you need help to understand the game rules, features or options, you can easily find help.

  3. The world’s most popular forex pairs and cryptocurrencies, powerful platform tools and margin rates from just 2% on EUR USD. This credit card is not just good – it’s so exceptional that our experts use it personally. It features a lengthy 0% intro APR period, a cash back rate of up to 5%, and all somehow for no annual fee! Click here to read our full review for free and apply in just 2 minutes. quora thanks for the sources! will dive into it later. I consider no CEX as save, until we get some decent regulation. therefore I take my coins off the exchange. Cryptocurrency exchanges allegedly use wash trading to falsely signal their liquidity. We monitored twelve exchanges for metrics of web traffic and fo… Both brokers and exchanges are the gateways that you can use to trade in cryptocurrencies. If you want to access crypto markets and exchange crypto assets, then these are the places where you can buy and sell. Both brokers and exchanges offer forms of online marketplaces where you can do this. Of course, the way this is set up is different for each. Crypto exchanges provide access to the market where traders can make direct trades. Brokerages, on the other hand, act as an intermediary between the trader and the market.
    https://list-wiki.win/index.php?title=Litecoin_all_time_high
    Price 1 Standard Deviation provides a possible trading range around 68% of the time. So it is anticipated that roughly 2 out of 3 times the market will stay within Price 1 Standard Deviation support and resistance range for the next trading session, and only 1 out of 3 days will the market move outside of the support or resistance levels. The maximum amount of coins that will ever exist in the lifetime of the cryptocurrency. It is analogous to the fully diluted shares in the stock market. However, while Nakamoto was the original inventor of Bitcoin, as well as the author of its very first implementation, he handed the network alert key and control of the code repository to Gavin Andresen, who later became lead developer at the Bitcoin Foundation. Over the years a large number of people have contributed to improving the cryptocurrency’s software by patching vulnerabilities and adding new features.

ಜಾವರ್ ಗಣಿಗಾರಿಕೆ

ಜಾವರ್ ಗಣಿಗಳು

ಬಿಗ್ ಬಾಸ್ ಕನ್ನಡ ಒ ಟಿ ಟಿ ಮೊದಲ ಸೀಸನ್

ಈ ಬಾರಿ ಬಿಗ್ ಬಾಸ್ ಕನ್ನಡ ಒ ಟಿ ಟಿ ಮೊದಲ ಸೀಸನ್ ವಿನ್ನರ್ ಮಂಗಳೂರಿನಿಂದ ರೂಪೇಶ್ ಶೆಟ್ಟಿ