in

ಸುಕ್ರೋಸ್ ಅಂದರೆ ಪುಡಿ ಸಕ್ಕರೆ

ಸುಕ್ರೋಸ್
ಸುಕ್ರೋಸ್

ಸುಕ್ರೋಸ್‌‌ ಎಂಬುದು ಕಾರ್ಬನಿಕ ಸಂಯುಕ್ತವಾಗಿದ್ದು, ಪುಡಿ ಸಕ್ಕರೆ ಎಂಬ ಹೆಸರಿನಿಂದ ಇದು ಸಾಮಾನ್ಯವಾಗಿ ಚಿರಪರಿಚಿತವಾಗಿದೆ ಮತ್ತು ಕೆಲವೊಮ್ಮೆ ಇದನ್ನು ಸ್ಯಾಕರೋಸ್‌‌ ಎಂದೂ ಕರೆಯಲಾಗುತ್ತದೆ. ಈ ಬಿಳಿಯದಾದ, ವಾಸನೆಯಿಲ್ಲದ, ಸ್ಫಟಿಕೀಯ ಪುಡಿಯು ಒಂದು ಹಿತಕರವಾದ, ಸಿಹಿರುಚಿಯನ್ನು ಹೊಂದಿದೆ. ಮಾನವ ಪೋಷಣೆಯಲ್ಲಿ ತಾನು ವಹಿಸುವ ಪಾತ್ರಕ್ಕೆ ಸಂಬಂಧಿಸಿದಂತೆ ಇದು ಹೆಚ್ಚು ಚಿರಪರಿಚಿತವಾಗಿದೆ. ಇದರ ಕಣವು ಒಂದು ಡೈಸ್ಯಾಕರೈಡ್‌‌ ಆಗಿದ್ದು, ಗ್ಲೂಕೋಸ್ ಮತ್ತು ಫ್ರಕ್ಟೋಸ್‌ನಿಂದ ಇದು ಜನ್ಯವಾಗಿದೆ.

ಸಂಸ್ಕರಿಸಿದ ಸಕ್ಕರೆಯು ಮೂಲತಃ ಒಂದು ಭೋಗ ಸಾಮಗ್ರಿಯಾಗಿತ್ತಾದರೂ, ಸಕ್ಕರೆಯು ಅಂತಿಮವಾಗಿ ಸಾಕಷ್ಟು ಅಗ್ಗವಾಗಿ ಪರಿಣಮಿಸಿತು ಮತ್ತು ಶಿಷ್ಟ ಪಾಕಪದ್ಧತಿಯ ಮೇಲೆ ಪ್ರಭಾವ ಬೀರಬಲ್ಲಷ್ಟು ಸಾಮಾನ್ಯವಾಗಿಹೋಯಿತು. ಸಕ್ಕರೆಯ ಬಳಕೆಯು ನಿರ್ದಿಷ್ಟವಾಗಿ ಎದ್ದುಕಾಣುವಂಥ ಪಾಕಪದ್ಧತಿಗಳನ್ನು ಬ್ರಿಟನ್‌‌ ಮತ್ತು ಕೆರಿಬಿಯನ್‌ ದ್ವೀಪಗಳು ಹೊಂದಿವೆ.

ಮಿಠಾಯಿ ತಯಾರಿಕೆ ಮತ್ತು ಸಿಹಿಭಕ್ಷ್ಯಗಳಲ್ಲಿ ಸಕ್ಕರೆಯು ಒಂದು ಪ್ರಮುಖ ಘಟಕವಾಗಿದೆ. ಬಾಣಸಿಗರು ಇದನ್ನು ಸಿಹಿಗೊಳಿಸುವಿಕೆಗಾಗಿ ಬಳಸುತ್ತಾರೆ, ಮತ್ತು ಸಾಕಷ್ಟು ಸಾಂದ್ರತೆಗಳಲ್ಲಿ ಬಳಸಲ್ಪಟ್ಟಾಗ ಇದು ಒಂದು ಆಹಾರ ಸಂರಕ್ಷಕದ ಪಾತ್ರವನ್ನೂ ವಹಿಸಬಲ್ಲದು. ಬಿಸ್ಕತ್ತುಗಳು ಹಾಗೂ ಚಪ್ಪಟೆ ಬಿಸ್ಕತ್ತುಗಳು, ಕೇಕುಗಳು ಹಾಗೂ ಹೂರಣಗಡುಬುಗಳು, ಸಕ್ಕರೆ ಮಿಠಾಯಿ, ಮತ್ತು ಐಸ್‌ಕ್ರೀಮ್‌‌ ಹಾಗೂ ಶರಬತ್ತುಗಳನ್ನು ಒಳಗೊಂಡಂತೆ ಅನೇಕ ಆಹಾರಗಳ ತಯಾರಿಕೆಯಲ್ಲಿ ಸುಕ್ರೋಸ್‌‌ ಪ್ರಮುಖವಾದ ಅಂಗಭಾಗವಾಗಿದೆ. ಅನೇಕ ಸಂಸ್ಕರಿತ ಆಹಾರ ಪದಾರ್ಥಗಳು ಮತ್ತು “ಕುರುಕಲು ತಿಂಡಿ” ಗಳಲ್ಲಿ ಇದು ಒಂದು ಸಾಮಾನ್ಯ ಘಟಕಾಂಶವಾಗಿದೆ.

ಸುಕ್ರೋಸ್ ಅಂದರೆ ಪುಡಿ ಸಕ್ಕರೆ
ಐಸ್‌ಕ್ರೀಮ್‌‌

ಮಾನವ ಜೀವಿಗಳು ಬಹಳ ಹಿಂದೆಯೇ ಸಕ್ಕರೆಯ ಬಗೆಗಳನ್ನು ಆವಿಷ್ಕರಿಸಿದ್ದರೂ ಸಹ, ಕಾಡುಜೇನನ್ನು ಹೊರತುಪಡಿಸಿ, ಆಧುನಿಕ ಆಹಾರಕ್ರಮವನ್ನು ನಿರೂಪಿಸುವಷ್ಟು ಬೃಹತ್‌‌ ಪ್ರಮಾಣಗಳು ಅವರ ಕೈಗೆಟುಕಿರಲಿಲ್ಲ. ಸ್ಥೂಲಕಾಯತೆ ಹಾಗೂ ದಂತ ಕ್ಷಯವನ್ನು ಒಳಗೊಂಡಂತಿರುವ ಆರೋಗ್ಯ ಅಪಾಯಗಳು ಹಾಗೂ ಸಂಸ್ಕರಿತ ಸಕ್ಕರೆಯ ಸೇವನೆಯ ನಡುವಿನ ಸಂಭಾವ್ಯ ಕೊಂಡಿಗಳನ್ನು ಅಧ್ಯಯನಗಳು ಸೂಚಿಸಿವೆ. ಸಕ್ಕರೆ ಮತ್ತು ಸಂಸ್ಕರಿಸಿದ ಸಿಹಿಕಾರಕಗಳ ಸೇವನೆಯು ಹೃದಯ ರಕ್ತನಾಳಗಳ ಕಾಯಿಲೆಯೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿದೆ ಎಂಬುದನ್ನು ಜಾನ್‌ ಯುಡ್ಕಿನ್ ಎಂಬಾತ ತೋರಿಸಿದ. ಇದು ಅಂತರ್ವರ್ಧಕ ಗ್ಲೈಕೇಷನ್‌‌ ಪ್ರಕ್ರಿಯೆಗಳ ಒಂದು ಮೂಲವಾಗಿಯೂ ಪರಿಗಣಿಸಲ್ಪಟ್ಟಿದೆ.

ದಂತ ಕ್ಷಯವು ಚರ್ಚಾಸ್ಪದವಾದ ರೀತಿಯಲ್ಲಿ, ಸಕ್ಕರೆಯ ಸೇವನೆಯೊಂದಿಗೆ ಸಂಬಂಧವನ್ನು ಹೊಂದಿರುವ ಅತ್ಯಂತ ಎದ್ದುಕಾಣುವ ಆರೋಗ್ಯದ ಅಪಾಯವಾಗಿ ಪರಿಣಮಿಸಿದೆ. ಸ್ಟ್ರೆಪ್ಟೋಕಾಕಸ್‌ ಮ್ಯುಟಾನ್ಸ್ ನಂಥ, ಬಾಯಿಯಲ್ಲಿ ಕಂಡುಬರುವ ಬ್ಯಾಕ್ಟೀರಿಯಾಗಳು ಹಲ್ಲಿನ ಲೋಳೆಯ ನಿಕ್ಷೇಪದಲ್ಲಿ ವಾಸಿಸುತ್ತವೆ ಮತ್ತು ಯಾವುದೇ ಸಕ್ಕರೆಗಳನ್ನು ಲ್ಯಾಕ್ಟಿಕ್‌‌ ಆಮ್ಲವಾಗಿ ಚಯಾಪಚಯಿಸುತ್ತವೆ. ಆಮ್ಲದ ಉನ್ನತ ಸಾಂದ್ರತೆಗಳು ಹಲ್ಲಿನ ಮೇಲ್ಮೈ ಮೇಲೆ ರೂಪುಗೊಳ್ಳಬಹುದು; ಇದರಿಂದಾಗಿ ಹಲ್ಲಿನ ವಿಖನಿಜೀಕರಣವು ಉಂಟಾಗುತ್ತದೆ.

ಎಲ್ಲಾ 6-ಇಂಗಾಲದ ಸಕ್ಕರೆಗಳು ಮತ್ತು 6-ಇಂಗಾಲದ ಸಕ್ಕರೆಗಳನ್ನು ಆಧರಿಸಿರುವ ಡೈಸ್ಯಾಕರೈಡ್‌ಗಳನ್ನು, ಹಲ್ಲಿನ ಲೋಳೆಯ ನಿಕ್ಷೇಪದ ಬ್ಯಾಕ್ಟೀರಿಯಾ ಆಮ್ಲವಾಗಿ ಪರಿವರ್ತಿಸಬಲ್ಲವು; ಈ ಆಮ್ಲವು ಹಲ್ಲುಗಳನ್ನು ವಿಖನಿಜೀಕರಿಸುತ್ತದೆ. ಆದರೆ ಸ್ಟ್ರೆಪ್ಟೋಕಾಕಸ್‌ ಮ್ಯುಟಾನ್ಸ್‌‌ಗೆ ಸುಕ್ರೋಸ್‌‌ ಅನನ್ಯವಾದ ರೀತಿಯಲ್ಲಿ ಪ್ರಯೋಜನಕಾರಿಯಾಗಿ ಕಂಡುಬರಬಹುದು. ಸುಕ್ರೋಸ್‌‌, ಡೆಕ್ಸ್‌‌ಟ್ರಾನ್‌‌ ಆಗಿ ಅತ್ಯಂತ ಪರಿಣಾಮಕಾರಿಯಾಗಿ ಪರಿವರ್ತಿಸಲ್ಪಡಬಹುದಾದ ಸಕ್ಕರೆಯಾಗಿರಬಹುದು, ಈ ಡೆಕ್ಸ್‌‌ಟ್ರಾನ್‌‌ನೊಂದಿಗೆ ಬ್ಯಾಕ್ಟೀರಿಯಾ ಸ್ವತಃ ಹಲ್ಲುಗಳ ಮೇಲ್ಮೈಗೆ ಅಂಟಿಕೊಳ್ಳುತ್ತವೆ. ಈ ರೀತಿಯಾಗಿ, ಹೆಚ್ಚು ಬಲವಾಗಿ ಅಂಟಿಕೊಳ್ಳುವಲ್ಲಿ ಸ್ಟ್ರೆಪ್ಟೋಕಾಕಸ್‌ ಮ್ಯುಟಾನ್ಸ್‌ ಬ್ಯಾಕ್ಟೀರಿಯಾಗಳಿಗೆ ಸುಕ್ರೋಸ್‌‌ ನೆರವಾಗಬಹುದು ಮತ್ತು ತೆಗೆಯುವಿಕೆಗೆ ಸಂಬಂಧಿಸಿದ ಪ್ರಯತ್ನಗಳನ್ನು ಇದು ಪ್ರತಿರೋಧಿಸಬಹುದು. ಬ್ಯಾಕ್ಟೀರಿಯಾಗೆ ಸಂಬಂಧಿಸಿದ ಒಂದು ಮೀಸಲು ಆಹಾರ ಪೂರೈಕೆಯಾಗಿಯೂ ಸಹ ಡೆಕ್ಸ್‌‌ಟ್ರಾನ್‌ ಸ್ವತಃ ಪಾತ್ರ ವಹಿಸುತ್ತದೆ. ಅತ್ಯಂತ ಅಪೇಕ್ಷಣೀಯ ಸಿಹಿಕಾರಕ ವಸ್ತುವಾಗಿ ಸುಕ್ರೋಸ್‌ನ ಹೆಚ್ಚೂಕಮ್ಮಿ ಸಾರ್ವತ್ರಿಕವಾಗಿರುವ ಬಳಕೆಯನ್ನು ಪರಿಗಣಿಸಿದಾಗ, ದಂತ ಕ್ಷಯದ ರೂಪುಗೊಳ್ಳುವಿಕೆಯಲ್ಲಿನ ಸುಕ್ರೋಸ್‌ನ ಇಂಥದೊಂದು ವಿಶೇಷ ಪಾತ್ರವು ಹೆಚ್ಚು ಗಮನಾರ್ಹವಾಗಿ ಕಂಡುಬರುತ್ತದೆ.

ದೇಹವು ಸಕ್ಕರೆಯ ಚಯಾಪಚಯ ಕ್ರಿಯೆಯನ್ನು ಕಳಪೆಯಾಗಿ ನಿರ್ವಹಿಸುವಂತೆ ಮಾಡುವಲ್ಲಿನ ಒಂದು ಕಾಯಿಲೆಯಾಗಿರುವ ಮಧುಮೇಹವು ಸಂಭವಿಸಲು ಈ ಕೆಳಗಿನ ಎರಡರಲ್ಲಿ ಒಂದು ಕಾರಣವಾಗಬಹುದು.

ಸುಕ್ರೋಸ್ ಅಂದರೆ ಪುಡಿ ಸಕ್ಕರೆ
ಸಕ್ಕರೆ

*ದೇಹದ ಜೀವಕೋಶಗಳಲ್ಲಿ ಸಕ್ಕರೆಯ ಚಯಾಪಚಯ ಕ್ರಿಯೆಯು ನಡೆಯಲು ಅನುವುಮಾಡಿಕೊಡುವ ರಾಸಾಯನಿಕವಾದ ಇನ್‌‌ಸುಲಿನ್‌ನ್ನು ಉತ್ಪಾದಿಸುವ ಜೀವಕೋಶಗಳ ಮೇಲೆ ದೇಹವು ದಾಳಿಮಾಡುವುದು ಒಂದು ಕಾರಣವಾಗಿದೆ.

*ದೇಹದ ಜೀವಕೋಶಗಳು ಇನ್‌‌ಸುಲಿನ್ ಕಡೆಗೆ ದುರ್ಬಲಗೊಳಿಸಲ್ಪಟ್ಟ ಪ್ರತಿಕ್ರಿಯೆಗಳನ್ನು ಪ್ರದರ್ಶಿಸುವುದು ಮತ್ತೊಂದು ಕಾರಣ.

*ರಕ್ತಪ್ರವಾಹದಲ್ಲಿ ಗ್ಲೂಕೋಸ್‌ ಪ್ರಮಾಣವು ಒಟ್ಟುಗೂಡುತ್ತಾ ಹೋದಾಗ, ಅದು ಎರಡು ಸಮಸ್ಯೆಗಳನ್ನು ಉಂಟುಮಾಡಬಲ್ಲದು.

*ಅಲ್ಪಾವಧಿಯಲ್ಲಿ, ಜೀವಕೋಶಗಳು ಶಕ್ತಿಯ ಅಭಾವದಿಂದ ನರಳುತ್ತವೆ,ಏಕೆಂದರೆ ಅವಕ್ಕೆ ಗ್ಲೂಕೋಸ್ನ ಸಂಪರ್ಕವಿರುವುದಿಲ್ಲ.

*ದೀರ್ಘಾವಧಿಯಲ್ಲಿ, ಆಗಿಂದಾಗ್ಗೆ ಆಗುವ ಗ್ಲೂಕೋಸ್ನ ಒಟ್ಟುಗೂಡುವಿಕೆಯು ರಕ್ತದ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ; ಇದರಿಂದಾಗಿ ದೇಹದ ಅನೇಕ ಅಂಗಗಳಿಗೆ ಹಾನಿಯಾಗುತ್ತದೆ. ಕಣ್ಣುಗಳು, ಮೂತ್ರಪಿಂಡಗಳು, ನರಗಳು ಮತ್ತು/ಅಥವಾ ಹೃದಯಕ್ಕೆ ಆಗುವ ಹಾನಿಗಳು ಇದರಲ್ಲಿ ಸೇರಿವೆ.

*ಪ್ರತಿಕೂಲ ಪರಿಣಾಮಗಳನ್ನು ತಡೆಗಟ್ಟುವ ದೃಷ್ಟಿಯಿಂದ ಸಕ್ಕರೆಯು-ಸಮೃದ್ಧವಾಗಿರುವ ಆಹಾರಗಳನ್ನು ತಪ್ಪಿಸುವಂತೆ ಮಧುಮೇಹಿಗಳಿಗೆ ಪರಿಣತರು ಸಲಹೆ ನೀಡುತ್ತಾರೆ.

ಕಬ್ಬಿನ ಮಾಧುರ್ಯವನ್ನು ಸವಿಯಲು ಜನರು ಕಚ್ಚಾ ಕಬ್ಬನ್ನು ಅಗಿಯುತ್ತಾರೆ. ಸಕ್ಕರೆಯನ್ನು ಸ್ಫಟಿಕೀಕರಿಸುವುದು ಅಥವಾ ಹರಳಾಗಿಸುವುದು ಹೇಗೆ ಎಂಬುದನ್ನು ಗುಪ್ತ ರಾಜವಂಶದ ಅವಧಿಯಲ್ಲಿ ಭಾರತೀಯರು ಕಂಡುಹಿಡಿದರು.

ಕಬ್ಬು ಮೂಲತಃ, ಉಷ್ಣವಲಯದ ಪ್ರದೇಶಗಳಾದ ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾಗಳಿಗೆ ಸೇರಿದ ಬೆಳೆಯಾಗಿತ್ತು. ವಿಭಿನ್ನ ತಾಣಗಳಲ್ಲಿ ವಿಭಿನ್ನ ಜಾತಿಗಳು ಹುಟ್ಟಿಕೊಂಡವು ಎಂದು ತೋರುತ್ತದೆ. ಎಸ್.ಬಾರ್ಬೆರಿ ಜಾತಿಯು ಭಾರತದಲ್ಲಿ ಹುಟ್ಟಿಕೊಂಡರೆ, ಎಸ್ ಎಡ್ಯೂಲ್‌‌ ಮತ್ತು ಎಸ್.ಅಫಿಷಿಯನೇರಮ್‌ ಜಾತಿಗಳು ನ್ಯೂಗಿನಿಯಾದ ಮೂಲವನ್ನು ಹೊಂದಿದ್ದವು.

ಭಾರತದಲ್ಲಿ ಆಚರಣೆಯಲ್ಲಿದ್ದ ಸಕ್ಕರೆಯ ಉತ್ಪಾದನೆಯ ಕೌಶಲಗಳನ್ನು ಮುಸ್ಲಿಂ ಕೃಷಿ ಕ್ರಾಂತಿಯ ಅವಧಿಯಲ್ಲಿ ಅರಬ್‌‌ ಉದ್ಯಮಿಗಳು ಅಳವಡಿಸಿಕೊಂಡರು ಮತ್ತು ಅವನ್ನು ನಂತರ ಪರಿಷ್ಕರಿಸಿ, ಒಂದು ಬೃಹತ್‌‌-ಪ್ರಮಾಣದ ಉದ್ಯಮವಾಗಿ ರೂಪಾಂತರಿಸಿದರು. ಮೊದಲ ಬೃಹತ್‌‌ ಪ್ರಮಾಣದ ಸಕ್ಕರೆ ಗಿರಣಿಗಳು, ಸಂಸ್ಕರಣಾಗಾರಗಳು, ಕಾರ್ಖಾನೆಗಳು ಮತ್ತು ನೆಡುತೋಪುಗಳನ್ನು ಅರಬರು ಸ್ಥಾಪಿಸಿದರು.

ಸುಕ್ರೋಸ್ ಅಂದರೆ ಪುಡಿ ಸಕ್ಕರೆ
ಸಕ್ಕರೆಯ ಉತ್ಪಾದನೆ

1390ರ ದಶಕದಲ್ಲಿ ಉತ್ತಮವಾದ ಗಾಣವೊಂದರ ಬೆಳವಣಿಗೆಯು ಕಂಡುಬಂದು, ಅದು ಕಬ್ಬಿನಿಂದ ಪಡೆಯಲಾದ ರಸದ ಪ್ರಮಾಣವನ್ನು ದ್ವಿಗುಣಗೊಳಿಸಿತು. ಸಕ್ಕರೆ ಸಂಬಂಧಿತ ಸಸ್ಯಗಳ ನೆಡುತೋಪುಗಳ ಆರ್ಥಿಕ ವಿಸ್ತರಣೆಯು ಆಂಡಲ್ಯೂಸಿಯಾಗೆ ಮತ್ತು ಆಲ್‌ಗಾರ್ವೆಗೆ ಆಗುವಲ್ಲಿ ಇದು ಅನುವುಮಾಡಿಕೊಟ್ಟಿತು. 1420ರ ದಶಕದಲ್ಲಿ ಸಕ್ಕರೆಯ ಉತ್ಪಾದನೆಯು ಕೆನರಿ ದ್ವೀಪಗಳು, ಮದೀರಾ ಮತ್ತು ಅಜೋರ್ಸ್‌‌ ಪ್ರದೇಶಗಳಿಗೆ ವಿಸ್ತರಿಸಲ್ಪಟ್ಟಿತು.

ಪೋರ್ಚುಗೀಸರು ಸಕ್ಕರೆಯನ್ನು ಬ್ರೆಜಿಲ್ಗೆ ತೆಗೆದುಕೊಂಡು ಹೋದರು. 1555ರಲ್ಲಿ ಪ್ರಕಟಗೊಂಡ ಲೇಖನವೊಂದರಲ್ಲಿ ಹಾನ್ಸ್‌ ಸ್ಟೇಡನ್‌ ಎಂಬಾತ, 1540ರ ವೇಳೆಗೆ ಸಾಂಟಾ ಕ್ಯಾಟರೀನಾ ದ್ವೀಪದಲ್ಲಿ 800 ಸಕ್ಕರೆ ಗಿರಣಿಗಳಿದ್ದವು ಮತ್ತು ಬ್ರೆಜಿಲ್‌ನ ಉತ್ತರ ತೀರ, ಡೆಮರಾರಾ ಮತ್ತು ಸುರಿನೇಮ್‌‌ ಪ್ರದೇಶಗಳಲ್ಲಿ ಮತ್ತೊಂದು 2,000 ದಷ್ಟು ಸಕ್ಕರೆ ಗಿರಣಿಗಳಿದ್ದವು ಎಂದು ತಿಳಿಸುತ್ತಾನೆ.
ಉತ್ತರ ಅಮೆರಿಕಾ ಮತ್ತು ದಕ್ಷಿಣ ಅಮೆರಿಕಾಗಳಲ್ಲಿ 1550ರ ದಶಕಕ್ಕೂ ಮುಂಚಿತವಾಗಿ ಸರಿಸುಮಾರು 3,000 ಸಣ್ಣ ಗಿರಣಿಗಳು ನಿರ್ಮಾಣಗೊಂಡು, ಬೀಡು ಕಬ್ಬಿಣ ಗಿಯರ್‌ಗಳು, ಮೀಟುಗೋಲುಗಳು, ಅಚ್ಚುಗಳು ಮತ್ತು ಇತರ ಸಾಧನಗಳಿಗೆ ಸಂಬಂಧಿಸಿದಂತೆ ಒಂದು ಅಭೂತಪೂರ್ವ ಬೇಡಿಕೆಯನ್ನು ಸೃಷ್ಟಿಸಿದವು. ಸಕ್ಕರೆಯ ಉತ್ಪಾದನೆಯ ವಿಸ್ತರಣೆಯ ಕಾರಣದಿಂದಾಗಿ, ಎರಕದ ಅಚ್ಚು-ತಯಾರಿಸುವಿಕೆ ಮತ್ತು ಕಬ್ಬಿಣದ-ಎರಕದಲ್ಲಿನ ಪರಿಣತ ವೃತ್ತಿಗಳು ಯುರೋಪ್‌ನಲ್ಲಿ ಅಭಿವೃದ್ಧಿಯಾದವು. ಆಗತಾನೇ ರೂಪುಗೊಳ್ಳುತ್ತಿದ್ದ ಒಂದು ಕೈಗಾರಿಕಾ ಕ್ರಾಂತಿಗಾಗಿ ಅಗತ್ಯವಾಗಿದ್ದ ತಂತ್ರಜ್ಞಾನದ ಪರಿಣತಿಗಳನ್ನು 17ನೇ ಶತಮಾನದ ಆರಂಭದಲ್ಲಿ ಸಕ್ಕರೆ ಗಿರಣಿಯ ನಿರ್ಮಾಣವು ಅಭಿವೃದ್ಧಿಪಡಿಸಿತು.

1625ರ ನಂತರ, ಕಬ್ಬನ್ನು ದಕ್ಷಿಣ ಅಮೆರಿಕಾದಿಂದ ಕೆರಿಬಿಯನ್‌ ದ್ವೀಪಗಳಿಗೆ ಡಚ್ಚರು ಒಯ್ದರು ; ಅಲ್ಲಿ ಕಬ್ಬು ನಂತರ ಬಾರ್ಬಡೋಸ್ನಿಂದ ವರ್ಜಿನ್‌ ದ್ವೀಪಗಳವರೆಗೆ ಬೆಳೆಯಲ್ಪಟ್ಟಿತು. ಅಮೆರಿಕಾ ಖಂಡಗಳಲ್ಲಿ ಯುರೋಪಿಯನ್ನರ ವಸಾಹತುಗಾರಿಕೆಯು ಕಂಡುಬರುವುದರೊಂದಿಗೆ, ಕೆರಿಬಿಯನ್‌‌ ದ್ವೀಪಗಳು ಪ್ರಪಂಚದಲ್ಲೇ ಸಕ್ಕರೆಯ ಅತಿದೊಡ್ಡ ಮೂಲವಾಗಿ ಹೊರಹೊಮ್ಮಿದವು. ಗುಲಾಮ ಕಾರ್ಮಿಕರನ್ನು ಬಳಸಿಕೊಂಡು ಕಬ್ಬನ್ನು ಪೂರೈಸುವಲ್ಲಿ ಈ ದ್ವೀಪಗಳು ಸಮರ್ಥವಾದವು ಮತ್ತು ಪೂರ್ವ ದೇಶಗಳಿಂದ ಆಮದು ಮಾಡಿಕೊಳ್ಳಲ್ಪಟ್ಟ ಕಬ್ಬಿನ ಸಕ್ಕರೆಗಿಂತಲೂ ಬಹಳಷ್ಟು ಕಡಿಮೆ ಬೆಲೆಗಳಲ್ಲಿ ಸಕ್ಕರೆಯನ್ನು ಇವು ಉತ್ಪಾದಿಸಿದವು.

ಹದಿನೆಂಟನೇ ಶತಮಾನದ ಅವಧಿಯಲ್ಲಿ, ಸಕ್ಕರೆಯು ಅಗಾಧವಾಗಿ ಜನಪ್ರಿಯವಾಯಿತು ಮತ್ತು ಸಕ್ಕರೆ ಮಾರುಕಟ್ಟೆಯು ಉತ್ಕರ್ಷಗಳ ಒಂದು ಸರಣಿಯನ್ನೇ ಕಂಡಿತು. ಬೃಹತ್ತಾದ ಕೆರಿಬಿಯನ್‌ ದ್ವೀಪಗಳಲ್ಲಿ ಸಕ್ಕರೆ ತಯಾರಿಕೆಗೆ ಸಂಬಂಧಿಸಿದ ಸಸ್ಯಗಳ ನೆಡುತೋಪುಗಳನ್ನು ಯುರೋಪಿಯನ್ನರು ಹುಟ್ಟುಹಾಕುತ್ತಿದ್ದಂತೆ, ಬೆಲೆಗಳು ಕುಸಿದವು, ವಿಶೇಷವಾಗಿ ಬ್ರಿಟನ್‌ನಲ್ಲಿ ಈ ಸನ್ನಿವೇಶವು ಕಂಡುಬಂತು. ಹದಿನೆಂಟನೇ ಶತಮಾನದ ವೇಳೆಗೆ, ಸಮಾಜದ ಎಲ್ಲಾ ವರ್ಗಗಳೂ ಸಹ ಹಿಂದೆ ಭೋಗಸಾಮಗ್ರಿಯ ಸ್ವರೂಪದ ಉತ್ಪನ್ನವೆನಿಸಿಕೊಂಡಿದ್ದ ಸಕ್ಕರೆಯ ಸಾಮಾನ್ಯ ಬಳಕೆದಾರರಾಗಿದ್ದವು. ಮೊದಲಿಗೆ ಬ್ರಿಟನ್‌‌ನಲ್ಲಿನ ಬಹುಪಾಲು ಸಕ್ಕರೆಯು ಚಹಾದ ವಲಯದ ಕಡೆಗೆ ತೆರಳಿತಾದರೂ, ನಂತರದಲ್ಲಿ ಮಿಠಾಯಿ ತಯಾರಿಕೆ ಮತ್ತು ಚಾಕೊಲೇಟ್‌ಗಳು ಅತೀವವಾಗಿ ಜನಪ್ರಿಯವಾದವು. ಪೂರೈಕೆದಾರರು ಸಾಮಾನ್ಯವಾಗಿ ಘನ ಶಂಕುಗಳ ಸ್ವರೂಪದಲ್ಲಿ ಸಕ್ಕರೆಯನ್ನು ಮಾರಾಟ ಮಾಡಿದರು ಮತ್ತು ಅವನ್ನು ತುಣುಕುಗಳಾಗಿ ಒಡೆಯಲು ಬಳಕೆದಾರರಿಗೆ ಸಕ್ಕರೆ ಗುಬುಟು ಎಂದು ಕರೆಯಲ್ಪಡುವ ಒಂದು ಚಿಮುಟದ-ರೀತಿಯ ಸಾಧನದ ಅಗತ್ಯವು ಕಂಡುಬಂದಿತು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕೆಳದಿ ರಾಜವಂಶ

ಪ್ರಸ್ತುತ ಕರ್ನಾಟಕ ರಾಜ್ಯದ ಪ್ರದೇಶಗಳನ್ನು ಆಳಿದ್ದ ರಾಜವಂಶ : ಕೆಳದಿ ನಾಯಕರು

ಸಾಮಾನ್ಯ ಹೊಟ್ಟೆ ನೋವು

ಸಾಮಾನ್ಯ ಹೊಟ್ಟೆನೋವಿಗೆ ಮನೆಯಲ್ಲಿಯೇ ಸುಲಭ ಪರಿಹಾರಗಳು