ಪ್ಲಮ್ ಹಣ್ಣುಗಳು ನೋಡಲು ಸುಂದರವಾಗಿದೆ ಮತ್ತು ಇದರ ರುಚಿಯು ತುಂಬಾ ಅದ್ಭುತವಾಗಿದೆ. ಇದರ ಜೊತೆಗೆ ಈ ಹಣ್ಣು ಆರೋಗ್ಯಕ್ಕೂ ವಿವಿಧ ರೀತಿಯಲ್ಲಿ ಪ್ರಭಾವವನ್ನು ಉಂಟು ಮಾಡುತ್ತದೆ. ಪ್ಲಮ್ ನ್ನು ಪ್ರತಿದಿನ ತಿನ್ನುವುದರಿಂದ ಆರೋಗ್ಯವನ್ನು ವೃದ್ಧಿಸುತ್ತದೆ.
ಪಕ್ವ ಪ್ಲಮ್ ಹಣ್ಣು ಅದಕ್ಕೆ ಮಾಸಲು ಬೂದು ಹಸಿರು ರೂಪವನ್ನು ಕೊಡುವ ಬೂದು-ಬಿಳಿ ಲೇಪವನ್ನು ಹೊಂದಿರುತ್ತದೆ. ಪ್ಲಮ್ ಹಣ್ಣು ಆರೋಗ್ಯಕರ ಗುಣಗಳಿಂದಲೇ ಹೆಸರು ಪಡೆದಿದೆ, ಆದರೆ ದುಬಾರಿ.
ಪ್ಲಮ್ ಹಣ್ಣುಗಳು ಪೋಷಕಾಂಶಗಳ ಸಹಿತ ಕರಗದ ನಾರಿನಂಶವನ್ನೂ ಸಮೃದ್ಧವಾಗಿ ಹೊಂದಿದ್ದು ಮಲಬದ್ದತೆ ನಿವಾರಿಸುವ ಹಾಗೂ ಇತರ ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ.
ಪ್ಲಮ್‌ಹಣ್ಣಿನಲ್ಲಿ ಆರೋಗ್ಯ ಸಮತೋಲನಕ್ಕೆ ಅತ್ಯವಶ್ಯಕವಾಗಿರುವ ಆ್ಯಂಟಿಯಾಕ್ಸಿಡಂಟ್ ಅಂಶಗಳು ಹೇರಳವಾಗಿವೆ.
ವಿಶ್ವದಾದ್ಯಂತ ಸೇಬಿನ ಹೊರತಾಗಿ ಹೆಚ್ಚಿನ ಜನರು ಆಯ್ದುಕೊಳ್ಳುವ ಇನ್ನೊಂದು ಹಣ್ಣು ಎಂದರೆ ಪ್ಲಮ್. ನೋಡಲಿಕ್ಕೆ ಇದು ಸೇಬುಹಣ್ಣಿಗೆ ಒಂದು ಬದಿ ದಾರದಿಂದ ಸೆಳೆದು ಕಟ್ಟಿದ್ದಂತೆ ಮಡಿಕೆ ಇರುವ, ಗಾಢ ನೇರಳೆಮಿಶ್ರಿತ ಕೆಂಪು ಬಣ್ಣದ ಹಣ್ಣಾಗಿದೆ. ಸಿಪ್ಪೆಯ ಒಳಗಿನ ತಿರುಳು ಮಾತ್ರ ಹಸಿರು ಮಿಶ್ರಿತ ಹಳದಿ ಬಣ್ಣದಲ್ಲಿರುತ್ತದೆ.
ಪ್ಲಮ್ ಹಣ್ಣುಗಳಲ್ಲಿ ಕ್ಯಾಲೋರಿಗಳು ಅತಿ ಕಡಿಮೆ ಇವೆ ಹಾಗೂ ಪೋಷಕಾಂಶಗಳು ಅತಿ ಹೆಚ್ಚಾಗಿವೆ. ವಿಟಮಿನ್ ಎ, ಸಿ ಕೆ , ತಾಮ್ರ, ಮ್ಯಾಂಗನೀಸ್, ರಂಜಕ ಹಾಗೂ ಮೆಗ್ನೀಶಿಯಂ ಇವುಗಳಲ್ಲಿ ಪ್ರಮುಖವಾದವು. ಕರಗುವ ಮತ್ತು ಕರಗದ ನಾರಿನಂಶವೂ ಉತ್ತಮವಾಗಿಯೇ ಇದೆ. ಪ್ಲಂ ಹಣ್ಣುಗಳಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಉರಿಯೂತ ನಿವಾರಕ ಗುಣಗಳೂ ಇವೆ. ಇವೆಲ್ಲವೂ ಹೃದಯದ ಹಾಗೂ ಹಾಗೂ ಜೀರ್ಣಾಂಗಗಳ ಆರೋಗ್ಯವನ್ನು ಹೆಚ್ಚಿಸುತ್ತವೆ.
ಪ್ಲಮ್ ಮುಖದ ನೈಸರ್ಗಿಕ ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪ್ಲಮ್‌ನಲ್ಲಿರುವ ಉತ್ಕರ್ಷಣ ನಿರೋಧಕ ಅಂಶವು ಹಾನಿಕಾರಕ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ ಮತ್ತು ಚರ್ಮಕ್ಕೆ ಹಾನಿಯಾಗುವುದನ್ನು ತಡೆಯುತ್ತದೆ. ಹಣ್ಣಿನಲ್ಲಿರುವ ವಿಟಮಿನ್ ಎ ಅಂಶವು ಮೊಡವೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ಮೊಡವೆ ಕಲೆಗಳನ್ನು ಹಗುರಗೊಳಿಸಲು ಸಹಾಯ ಮಾಡುತ್ತದೆ. ಮುಖದ ಕಪ್ಪು ಕಲೆಗಳನ್ನು ತೆಗೆದುಹಾಕುವುದರ ಜೊತೆಗೆ ಚರ್ಮದ ಬಣ್ಣವನ್ನು ಸುಧಾರಿಸುತ್ತದೆ.
ಹಣ್ಣಿನ ತಿರುಳಿನಲ್ಲಿ ಕ್ಯಾಲ್ಸಿಯಂ, ಮೆಗ್ನೀಶಿಯಂ, ರಂಜಕ, ಫೋಲೇಟ್, ಪೊಟ್ಯಾಶಿಯಂ ಹಾಗೂ ವಿಟಮಿನ್ ಎ, ಸಿ ಮತ್ತು ಕೆ ಸಹಿತ ಇನ್ನೂ ಹಲವಾರು ಪ್ರಮುಖ ಪೋಷಕಾಂಶಗಳಿವೆ. ಜೊತೆಗೇ ಕರಗುವ ಮತ್ತು ಕರಗದ ನಾರಿನಂಶವೂ ಉತ್ತಮವಾಗಿಯೇ ಇದೆ.
ಪ್ಲಮ್ ಅನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟ ಮತ್ತು ಗಂಭೀರ ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು. ಹೆಚ್ಚಿನ ಫೈಬರ್ ಮತ್ತು ಆಂಟಿಆಕ್ಸಿಡೆಂಟ್ ಅಂಶದಿಂದಾಗಿ, ಪ್ಲಮ್ ಎಲ್ಲಾ ರೀತಿಯ ಹೃದಯ ಕಾಯಿಲೆಗಳಿಂದ ಹೃದಯದ ಆರೋಗ್ಯವನ್ನು ರಕ್ಷಿಸುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದರ ಜೊತೆಗೆ ದೇಹದಲ್ಲಿನ ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ. ನಿಮ್ಮ ಆಹಾರದಲ್ಲಿ ಇದನ್ನು ಸೇರಿಸುವುದರಿಂದ ಹೃದಯವನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ.
ಹೃದ್ರೋಗಗಳ ಸಾಧ್ಯತೆ ಕಡಿಮೆಯಾಗಿಸುವುದು, ರಕ್ತದಲ್ಲಿ ಸಕ್ಕರೆಯ ಮಟ್ಟ ಧಿಡೀರನೇ ಏರದಂತೆ ತಡೆಯುವುದು ಇತ್ಯಾದಿ. ಪ್ಲಮ್ ಹಣ್ಣುಗಳನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಒಟ್ಟಾರೆ ಆರೋಗ್ಯಕ್ಕೂ ಒಳ್ಳೆಯದು. ಈ ಹಣ್ಣನ್ನು ಪ್ರತ್ಯೇಕವಾಗಿಯೂ ತಿನ್ನಬಹುದು, ಚಿಕ್ಕ ಚೂರುಗಳಾಗಿಸಿ ಸಾಲಾಡ್ ನೊಂದಿಗೆ ಬೆರೆಸಿಯೂ ತಿನ್ನಬಹುದು ಅಥವಾ ತಿರುಳನ್ನು ಗೊಟಾಯಿಸಿ ಸ್ಮೂಥಿ ಮಾಡಿಕೊಂಡೂ ಕುಡಿಯಬಹುದು. ಅಷ್ಟೇ ಅಲ್ಲ, ಈ ಹಣ್ಣನ್ನು ಬೇಯಿಸಿ, ಹುರಿದು ಅಥವಾ ಗ್ರಿಲ್ ಮಾಡಿಕೊಂಡು ಸೇವಿಸಬಹುದು.
ಪ್ಲಮ್‌ಗಳು ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು. ಇದು ನಿಮ್ಮ ಮೂಳೆಯ ಬಲವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಆಸ್ಟಿಯೊಪೊರೋಸಿಸ್, ಸಂಧಿವಾತ ಮತ್ತು ಆಸ್ಟಿಯೋಪೆನಿಯಾದಂತಹ ಕಾಯಿಲೆಗಳಿಗೆ ಬಲಿಯಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ರಂಜಕ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಅಂಶವು ಮೂಳೆಗಳ ರಚನೆಗೆ ಸಹಾಯ ಮಾಡುತ್ತದೆ.
ಪ್ಲಮ್ ಹಣ್ಣುಗಳು ಕರಗದ ನಾರಿನಂಶದ ಉತ್ತಮ ಮೂಲವಾಗಿದೆ. ಅಂದರೆ, ಈ ನಾರಿನಂಶ ನಮ್ಮ ಜೀರ್ಣಾಂಗಗಳಲ್ಲಿ ಹಾದು ಹೋಗುವಾಗ ಜೀರ್ಣಗೊಳ್ಳದೇ ಮೂಲರೂಪವನ್ನು ಉಳಿಸಿಕೊಳ್ಳುತ್ತದೆ ಹಾಗೂ ನೀರಿನಲ್ಲಿಯೂ ಕರಗುವುದಿಲ್ಲ. ನಮ್ಮ ಜೀರ್ಣ ಕ್ರಿಯೆ ಸರಾಗವಾಗಿ ಜರುಗಲು ಈ ನಾರಿನಂಶ ಅತಿ ಅವಶ್ಯವಾಗಿದೆ. ಕಲ್ಮಶಗಳಲ್ಲಿ ಬೆರೆತು ಮಲವನ್ನು ಮೆದುವಾಗಿಸಿ ಸುಲಭ ವಿಸರ್ಜನೆಗೆ ನೆರವಾಗುತ್ತದೆ. ನಾರಿನಂಶದ ಕೊರತೆ ಎದುರಾದಾಗಲೇ ಮಲಬದ್ದತೆಯ ತೊಂದರೆಯೂ ಕಾಣಿಸಿಕೊಳ್ಳುತ್ತದೆ.
ಪ್ಲಮ್ಸ್ ಫೈಬರ್ ಗಳಿಂದ ತುಂಬಿರುತ್ತದೆ ಮತ್ತು ಇದು ಜೀರ್ಣಾಂಗ ವ್ಯವಸ್ಥೆಗೆ ಉತ್ತಮವಾಗಿರುತ್ತದೆ. ಇದರಲ್ಲಿ ನಾರಿನ ಅಂಶವಿದ್ದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಅದು ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಮಲಬದ್ಧತೆ ಮತ್ತು ಅಜೀರ್ಣದಿಂದ ಪರಿಹಾರವನ್ನು ನೀಡುತ್ತದೆ.
ಪ್ಲಂ ಹಣ್ಣುಗಳ ಸೇವನೆಗೂ ಅಡಿಪೋನೆಕ್ಟಿನ್ ಎಂಬ ರಸದೂತದ ಮಟ್ಟಕ್ಕೂ ನಿಕಟ ಸಂಬಂಧವಿದೆ. ಈ ರಸದೂತ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ. ವರ್ಲ್ಡ್ ಜರ್ನಲ್ ಆಫ್ ಡಯಾಬಿಟೀಸ್ ಎಂಬ ವೈದ್ಯಕೀಯ ಮಾಧ್ಯಮದಲ್ಲಿ ಪ್ರಕಟವಾದ ವರದಿಯ ಪ್ರಕಾರ. ಪ್ಲಂ ಹಣ್ಣಿನಲ್ಲಿರುವ ನಾರಿನಂಶ ಊಟದ ಬಳಿಕ ದೇಹ ಕಾರ್ಬೋಹೈಡ್ರೇಟುಗಳನ್ನು ಹೀರಿಕೊಳ್ಳುವ ಗತಿಯನ್ನು ನಿಧಾನಿಸುತ್ತದೆ, ತನ್ಮೂಲಕ ರಕ್ತದಲ್ಲಿ ಸಕ್ಕರೆಯ ಮಟ್ಟ ಅತಿ ನಿಧಾನವಾಗಿ ಏರುವಂತೆ ನೋಡಿಕೊಳ್ಳುತ್ತದೆ. ಈ ಮೂಲಕ ರಕ್ತದಲ್ಲಿ ಧಿಡೀರನೇ ಏರುವ ಸಕ್ಕರೆಯ ಮಟ್ಟದ ಮೂಲಕ ಎದುರಾಗಬಹುದಾದ ತೊಂದರೆಗಳಿಂದ ರಕ್ಷಣೆ ಒದಗಿಸುತ್ತದೆ.
ಪ್ಲಮ್ ಗಳು ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ. ಈ ಹಣ್ಣು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ ಮತ್ತು ಹೆಚ್ಚಿನ ವಿಟಮಿನ್ ಗಳನ್ನು ಹೊಂದಿದೆ. ವಿಟಮಿನ್ ಎ, ಸಿ ಅಥವಾ ಕೆ, ಈ ಹಣ್ಣಿನಲ್ಲಿದೆ. ನಿಮ್ಮ ದೇಹವು ಸೋಂಕುಗಳು ಮತ್ತು ರೋಗಗಳ ವಿರುದ್ಧ ಹೋರಾಡಲು ಸಾಕಷ್ಟು ಶಕ್ತಿಯನ್ನು ನೀಡುತ್ತದೆ.
ಪ್ಲಮ್ ವಿಟಮಿನ್ ಕೆ, ತಾಮ್ರ, ಪೊಟ್ಯಾಸಿಯಮ್ ಮತ್ತು ಬೋರಾನ್ ಅನ್ನು ಹೊಂದಿರುತ್ತದೆ. ವಿಟಮಿನ್ ಕೆ ಮೂಳೆಯ ಖನಿಜೀಕರಣಕ್ಕೆ ಸಹಾಯ ಮಾಡುತ್ತದೆ ಮತ್ತು ಮೂಳೆ ಖನಿಜ ಸಾಂದ್ರತೆಯನ್ನು ಕಾಪಾಡಿಕೊಳ್ಳಲು ಪೊಟ್ಯಾಸಿಯಮ್ ಸಹಾಯ ಮಾಡುತ್ತದೆ. ಪ್ಲಮ್ನ ಆಲ್ಕೋಹಾಲ್ ಸಾರಗಳು ಮೂಳೆಯ ಮರುಹೀರಿಕೆಯನ್ನು ಪ್ರತಿಬಂಧಿಸುತ್ತದೆ ಮತ್ತು ಪ್ರಯೋಗಾಲಯದ ಪ್ರಯೋಗದ ಸಮಯದಲ್ಲಿ ಮೂಳೆಯ ರಚನೆಯನ್ನು ಹೆಚ್ಚಿಸುತ್ತದೆ ಎಂದು ತೋರಿಸಲಾಗಿದೆ.
ಪ್ಲಮ್ ಹಣ್ಣುಗಳಲ್ಲಿ ಆಂಟಿ ಆಕ್ಸಿಡೆಂಟುಗಳು ಸಮೃದ್ಧವಾಗಿವೆ ಹಾಗೂ ಉರಿಯೂತ ನಿವಾರಕ ಗುಣಗಳೂ ಪ್ರಬಲವಾಗಿವೆ. ಇವು ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳಿಂದ ನಮ್ಮ ದೇಹದ ಪ್ರತಿ ಜೀವಕೋಶವನ್ನೂ ರಕ್ಷಿಸುತ್ತವೆ. ಅಲ್ಲದೇ ಪ್ಲಂನಲ್ಲಿ ಅಧಿಕ ಪ್ರಮಾಣದ ಪಾಲಿಫಿನಾಲ್ ಆಂಟಿ ಆಕ್ಸಿಡೆಂಟುಗಳಿವೆ. ಇವು ಮೂಳೆಗಳ ಆರೋಗ್ಯ ಉತ್ತಮಗೊಳಿಸುವಿಕೆಗೆ ನೆರವಾಗುತ್ತವೆ. ಅಲ್ಲದೇ ಹೃದ್ರೋಗ ಮತ್ತು ಮಧುಮೇಹ ಆವರಿಸುವ ಸಾಧ್ಯತೆಯನ್ನೂ ತಗ್ಗಿಸುತ್ತವೆ. ಇದರಲ್ಲಿರುವ ವಿವಿಧ ಬಗೆಯ ಆಂಟಿ ಆಕ್ಸಿಡೆಂಟುಗಳು ಮೆದುಳಿಗೆ ಸಂಬಂಧಿಸಿದ ಅಲ್ಝಿಮರ್ಸ್ ಕಾಯಿಲೆ, ಪಾರ್ಕಿನ್ಸನ್ಸ್ ಕಾಯಿಲೆ ಹಾಗೂ ಕ್ಯಾನ್ಸರ್ ನಿಂದಲೂ ರಕ್ಷಣೆ ಒದಗಿಸುತ್ತದೆ.
ಮಲಬದ್ಧತೆ ಮತ್ತು ವಾಯು, ಅಜೀರ್ಣ, ಉಬ್ಬುವುದು ಮತ್ತು ಎದೆಯುರಿ ಮುಂತಾದ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಪ್ಲಮ್ ಸಹಾಯ ಮಾಡುತ್ತದೆ. ಪ್ಲಮ್ ಅನ್ನು ಸೌಮ್ಯ ವಿರೇಚಕವಾಗಿ ಬಳಸಲಾಗುತ್ತದೆ. ಒಣಗಿದ ಪ್ಲಮ್ನಿಂದ ತಯಾರಿಸಿದ ಜಾಮ್ ಕರುಳಿನ ಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಔಷಧಿಗಳ ಬಳಕೆಯನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ ಎಂದು ತೋರಿಸಲಾಗಿದೆ. ಒಣಗಿದ ಪ್ಲಮ್ಗಳು ಮಲವನ್ನು ಮೃದುಗೊಳಿಸಲು ಸಹ ಸಹಾಯ ಮಾಡುತ್ತದೆ, ಇದು ಮಲಬದ್ಧತೆ ಮತ್ತು ಕೆರಳಿಸುವ ಕರುಳಿನ ಸಹಲಕ್ಷಣಗಳೊಂದಿಗಿನ ಜನರಿಗೆ ಸಹಾಯ ಮಾಡುತ್ತದೆ.
ಧನ್ಯವಾದಗಳು.
GIPHY App Key not set. Please check settings