in

ಪ್ರಥಮ ಚಿಕಿತ್ಸೆಯು ಎಷ್ಟು ಮುಖ್ಯವಾಗಿರುತ್ತದೆ

ಪ್ರಥಮ ಚಿಕಿತ್ಸೆಯು ಎಷ್ಟು ಮುಖ್ಯ
ಪ್ರಥಮ ಚಿಕಿತ್ಸೆಯು ಎಷ್ಟು ಮುಖ್ಯ

ಪ್ರಥಮ ಚಿಕಿತ್ಸೆ ಎಂದರೆ, ಗಾಯ ಅಥವಾ ಅವಘಡಗಳಾದಾಗ ಒದಗಿಸುವ ಆರಂಭಿಕ ಆರೈಕೆ. ಸಾಮಾನ್ಯವಾಗಿ, ಈ ಆರೈಕೆಯನ್ನು ತಜ್ಞರಲ್ಲದ, ಆದರೆ ತರಬೇತಾದ ವೃತ್ತಿಪರ ವ್ಯಕ್ತಿಗಳು ರೋಗಿಗೆ ಅಥವಾ ಗಾಯಾಳಿಗೆ, ಸರಿಯಾದ ವೈದ್ಯಕೀಯ ಚಿಕಿತ್ಸೆ ದೊರೆಯುವವರೆಗೆ ಒದಗಿಸುವುದು. ಪ್ರಥಮ ಚಿಕಿತ್ಸೆ ಎಂಬುದು ಕೆಲವು ಸಂದರ್ಭಗಳಲ್ಲಿ ಸರಳ ಚಿಕಿತ್ಸೆಗಳ ಸರಣಿಯಾಗಿದ್ದರೆ, ಇನ್ನು ಕೆಲವು ಸಂದರ್ಭಗಳಲ್ಲಿ ಮಹತ್ವದ ಜೀವರಕ್ಷಕ ತಂತ್ರವಾಗಿರುತ್ತದೆ. ತರಬೇತಾದ ಒಬ್ಬ ವ್ಯಕ್ತಿಯು, ಲಭ್ಯವಿರುವ ಕೆಲವು ಉಪಕರಣಗಳ ಮೂಲಕ ಈ ಚಿಕಿತ್ಸೆಯನ್ನು ರೋಗಿ ಅಥವಾ ಗಾಯಾಳುವಿಗೆ ಒದಗಿಸಿ, ಆ ಅಮೂಲ್ಯ ಜೀವವನ್ನು ರಕ್ಷಿಸಬಲ್ಲ.

ಪ್ರಥಮ ಚಿಕಿತ್ಸೆಯ ವಿಧಾನವು 1859ರಲ್ಲಿ ಆರಂಭವಾಯಿತು. ಯುದ್ಧ ಭೂಮಿಯ ಭಯಾನಕತೆಯನ್ನು ಕಂಡು ಹೆನ್ರಿ ಡ್ಯುನಾಂಟ್‌ ಎಂಬವರು ರೆಡ್‌ಕ್ರಾಸ್‌ ಸಂಸ್ಥೆಯನ್ನು ಆರಂಭಿಸಿದಾಗ, ಪ್ರಥಮ ಚಿಕಿತ್ಸೆಯ ಪ್ರಕ್ರಿಯೆಯೂ ಸಹ ಅದರೊಂದಿಗೇ ಆರಂಭಗೊಂಡಿತು. ವೈದ್ಯಕೀಯ ಅರಿವಿನ ಅಭಿವೃದ್ಧಿ ಆದಂತೆಲ್ಲಾ, ಜಗತ್ತಿನ ಅನೇಕ ಕಡೆಗಳಲ್ಲಿ ಪ್ರಥಮ ಚಿಕಿತ್ಸೆಯ ತರಬೇತಿಯು ದೊರಕುವಂತಾಯಿತು.

ಪ್ರಥಮ ಚಿಕಿತ್ಸೆಯು ಎಷ್ಟು ಮುಖ್ಯವಾಗಿರುತ್ತದೆ
ಪ್ರಥಮ ಚಿಕಿತ್ಸೆಯ ವಿಧಾನವು 1859ರಲ್ಲಿ ಆರಂಭವಾಯಿತು

ನಿತ್ಯ ಜೀವನದಲ್ಲಿ ಸ್ವತಃ ನಮಗೆ ಅಥವಾ ಇನ್ನೊಬ್ಬರಿಗೆ, ನಮ್ಮ ಮನೆಯಲ್ಲಿ ಅಥವಾ ಹೊರಗಡೆ, ಸಣ್ಣ-ಪುಟ್ಟ ನೋವು, ಹೊಡೆತ, ಜಖಂ, ಅವಘಡಗಳು ಆಗುವುದನ್ನು ನಾವು ಆಗಾಗ ನೋಡುತ್ತಿರುತ್ತೇವೆ. ಈ ಅವಘಡಗಳು ಸಣ್ಣ ಪುಟ್ಟ ಗಾಯಗಳ ರೂಪದಲ್ಲಿ ಇರಬಹುದು, ಅಥವಾ ದೊಡ್ಡ ರೀತಿಯ ಜಖಂ, ಸುಟ್ಟ ಗಾಯ, ಬಿಸಿ ನೀರು, ಬಿಸಿ ಗಾಳಿ, ವಿದ್ಯುತ್‌ ಅಥವಾ ರಾಸಾಯನಿಕಗಳು, ಮುರಿತಗಳಿಂದ ಆಗುವ ಗಾಯಗಳು, ಪ್ರಾಣಿಗಳ ಇರಿತ, ಕಡಿತ ಅಥವಾ ವಿಷದಿಂದಲೇ ಆಗಿದ್ದಿರಬಹುದು. ಈ ಎಲ್ಲಾ ಅವಘಡಗಳ ಸಂದರ್ಭಗಳಲ್ಲಿ ಆಗಬಹುದಾದ ಶಾಶ್ವತ ವೈಕಲ್ಯಗಳು ಅಥವಾ ಮರಣದಂತಹ ಪರಿಣಾಮಗಳನ್ನು ತಡೆಯಲು, ಸಂದರ್ಭಗಳನ್ನು ತಕ್ಷಣವೇ ಸರಿಯಾಗಿ ಹಾಗೂ ಸುಸೂತ್ರವಾಗಿ ನಿಭಾಯಿಸುವುದು ಅತ್ಯವಶ್ಯಕ. ಹೆಚ್ಚಾಗಿ ಮರಣಾಂತಿಕವಾದ ಈ ಎಲ್ಲಾ ಸಂದರ್ಭಗಳಲ್ಲಿ, ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವುದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ರೋಗಿ ಘಟನಾ ಸ್ಥಳದಿಂದ ಆಸ್ಪತ್ರೆಗೆ ವರ್ಗಾವಣೆಗೊಳ್ಳುವ ಮಧ್ಯದ ಕಾಲಾವ—ಯಲ್ಲಿ ಗಾಯಾಳುವಿಗೆ ಒದಗಿಸಬಹುದಾದ ತುರ್ತು ಸೇವೆಯ ಬಗ್ಗೆ, ಅಂದರೆ ಪ್ರಥಮ ಚಿಕಿತ್ಸೆಯ ಬಗ್ಗೆ ಪ್ರತಿಯೊಬ್ಬರೂ ತರಬೇತಿ ಪಡೆಯಬೇಕಾದುದು, ಅಥವಾ ಎಲ್ಲರಿಗೂ ಅದರ ಬಗ್ಗೆ ಅರಿವಿರಬೇಕಾದುದು ಅತ್ಯವಶ್ಯಕ.

ಪ್ರಥಮ ಚಿಕಿತ್ಸೆ ಯ ಉದ್ಧೇಶಗಳು :

*ಜೀವವನ್ನು ಉಳಿಸುವುದು ಹಾಗೂ ಕಾಪಾಡುವುದು.

*ಅವಘಡಕ್ಕೆ ಕಾರಣವಾಗಿರುವ ಪರಿಸ್ಥಿತಿಯಿಂದ ಗಾಯಾಳನ್ನು ಸಂರಕ್ಷಿಸುವುದು ಅಥವಾ ದೂರವಿರಿಸುವುದು, ಆಗಿರುವ ಅವಘಡವು ತೀವ್ರವಾಗದಂತೆ ತಡೆಯುವುದು, ಅಂದರೆ ಉದಾಹರಣೆಗೆ ಗಾಯವಾಗಿ ತೀವ್ರ ರಕ್ತ ಸ್ರಾವವಾಗುತ್ತಿದ್ದರೆ, ರಕ್ತಸ್ರಾವವನ್ನು ತಡೆಯುವ ಚಿಕಿತ್ಸೆ ನೀಡುವುದು.

*ಉಪಶಮನ ಕಾರ್ಯ ಕೈಗೊಳ್ಳುವುದು, ಅಂದರೆ ಗಾಯಗಳಿಗೆ ಬ್ಯಾಂಡೇಜ್‌ ಸುತ್ತುವುದು, ಮೂಳೆ ಮುರಿತವಾಗಿದ್ದರೆ ಆಧಾರವಾಗಿ ಅದಕ್ಕೆ ದಬ್ಬೆ ಕಟ್ಟುವುದು… ಇತ್ಯಾದಿ.

ಕೆಲವೊಂದು ಘಟನೆಗಳಿಗೆ ಪ್ರಥಮ ಚಿಕಿತ್ಸೆಗಳು l:

*ಬಿದ್ದು ಅಥವಾ ಇತರ ಕಾರಣದಿಂದ ದೇಹದಲ್ಲಿ ಗಾಯಗಳಾದಾಗ ಒತ್ತಡ ಕ್ರಮದ ಮೂಲಕ ರಕ್ತಸ್ರಾವವನ್ನು ತಡೆಯಬಹುದು. ರಕ್ತಸ್ರಾವ ನಿಂತ ಅನಂತರ ಸೋಪು ಹಾಗೂ ನೀರಿನಲ್ಲಿ ಗಾಯವನ್ನು ಹದವಾಗಿ ತೊಳೆಯಬೇಕು. ಶುದ್ಧವಾದ ಬಟ್ಟೆಯಿಂದ ಉಜ್ಜಿ ರಕ್ತಪರಿಚಲನೆಗೆ ತೊಂದರೆಯಾಗದಂತೆ ಬ್ಯಾಂಡೇಜ್‌ ಸುತ್ತಬೇಕು.

ಪ್ರಥಮ ಚಿಕಿತ್ಸೆಯು ಎಷ್ಟು ಮುಖ್ಯವಾಗಿರುತ್ತದೆ
ನಾಡಿಬಡಿತ ಸಮಸ್ಯೆ ಎಂದು ಗೊತ್ತಾದಾಗ

*ನಾಡಿಬಡಿತವನ್ನು ಪರೀಕ್ಷಿಸಿ, ಒಂದು ವೇಳೆ ರಕ್ತ ಪರಿಚಲನೆ ನಿಂತು ಹೋಗಿದ್ದರೆ, ಹೃದಯದಿಂದ ರಕ್ತವು ಹೊರಹೋಗಲು ಅನುಕೂಲವಾಗುವಂತೆ, ಕೂಡಲೇ ಎದೆಯನ್ನು ದಬ್ಬಿ, ಒಂದು ವೇಳೆ ಆಘಾತಕ್ಕೊಳಗಾದ ವ್ಯಕ್ತಿಯು ಉಸಿರಾಡುತ್ತಿಲ್ಲವಾದರೆ, ತಕ್ಷಣವೇ ಎದೆಯನ್ನು ದಬ್ಬಲು ಆರಂಭಿಸಬೇಕು.

*ವ್ಯಕ್ತಿಯ ಉಸಿರಾಟ ಹಾಗೂ ರಕ್ತ ಪರಿಚಲನೆಗಳು ಸರಿಯಾಗಿವೆ ಎಂದು ಗೊತ್ತುಪಡಿಸಿಕೊಂಡು, ವಿಷ ಸೇವಿಸಿದ ವ್ಯಕ್ತಿಯನ್ನು ತುರ್ತಾಗಿ ಆಸ್ಪತ್ರೆಗೆ ಸೇರಿಸಬೇಕು. ವ್ಯಕ್ತಿ ಸೇವಿಸಿರುವ ವಿಷದ ಪಾತ್ರೆ, ಬಾಟಲಿ ಇತ್ಯಾದಿಗಳೇನಾದರೂ ಸಿಕ್ಕಿದ್ದರೆ, ಅದನ್ನೂ ಸಹ ಜೊತೆಗೇ ಒಯ್ಯಬೇಕು. ವಿಷದ ಹಾವು ಹಾಗೂ ಇನ್ನಿತರ ಪ್ರಾಣಿಗಳು ಕಚ್ಚಿದಾಗಲೂ ಸಹ ಇದೇ ಕ್ರಮವನ್ನು ಅನುಸರಿಸಬೇಕು.

*ಬಿದ್ದು ಏಟಾಗಿದ್ದರೆ ಅಥವಾ ರಸ್ತೆ ಅಪಘಾತವಾಗಿದ್ದರೆ, ವ್ಯಕ್ತಿಯ ಕತ್ತಿನ ಮೂಳೆ ಮುರಿದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು, ಶ್ವಾಸನಾಳವನ್ನು ತೆರವುಗೊಳಿಸಲು, ಆತನ ದವಡೆಯನ್ನು ಮೇಲಕ್ಕೆ ಎಳೆಯಿರಿ. ಸಾಕಷ್ಟು ಪ್ರಮಾಣದ ಉಸಿರಾಟ ಇದೆಯೇ ಗಮನಿಸಿ. ಅಗತ್ಯವಿದ್ದರೆ, ಸಂರಕ್ಷಕ ಉಸಿರಾಟವನ್ನು ಒದಗಿಸಿ.

*ರಾಸಾಯನಿಕಗಳ ಕಾರಣದಿಂದಾಗಿ ಸುಟ್ಟ ಗಾಯಗಳಾಗಿದ್ದರೆ, ಯಥೇತ್ಛವಾಗಿ ನೀರನ್ನು ಹಾಯಿಸಿ, ವ್ಯಕ್ತಿಯ ಮೈ-ಕೈ ಅಥವಾ ಕಣ್ಣಿನಲ್ಲಿರುವ ರಾಸಾಯನಿಕಗಳನ್ನು ನಿವಾರಿಸಿ. ಗಾಯಾಳುವಿನ ಮೈಮೇಲೆ ಇರುವ ರಾಸಾಯನಿಕವಿರುವ ಬಟ್ಟೆಯನ್ನು ತೆಗೆದು ಹಾಕಿ. ರಾಸಾಯನಿಕವು ದೇಹದ ಇತರ ಭಾಗಗಳಿಗೆ ಅಥವಾ ಸ್ವತಃ ನಿಮಗೆ ತಗಲದಂತೆ ಎಚ್ಚರಿಕೆ ವಹಿಸಿ.

*ಸುಟ್ಟ ಗಾಯಗಳಾದ ಸಂದರ್ಭದಲ್ಲಿ ಉರಿ ಶಮನಕ್ಕಾಗಿ ಗಾಯದ ಮೇಲೆ ಸಾಕಷ್ಟು ನೀರು ಹಾಯಿಸಬೇಕು. ಅನಂತರ ಒಣಬಟ್ಟೆಯಿಂದ ಸಡಿಲವಾಗಿ ಸುತ್ತಿ ವೈದ್ಯರಲ್ಲಿಗೆ ಕರೆದುಕೊಂಡು ಹೋಗಬೇಕು. ಯಾವುದೇ ಕಾರಣಕ್ಕೂ ಮನೆ ಮದ್ದಾಗಲೀ, ಮಂಜುಗಡ್ಡೆಯಾಗಲಿ ಹಚ್ಚಬಾರದು. ಇದರಿಂದ ಗಾಯ ಜಾಸ್ತಿಯಾಗುವ ಸಾಧ್ಯತೆ ಇದೆ.

ಪ್ರಥಮ ಚಿಕಿತ್ಸೆಯು ಎಷ್ಟು ಮುಖ್ಯವಾಗಿರುತ್ತದೆ
ಸುಟ್ಟ ಗಾಯಗಳಾದ ಸಂದರ್ಭದಲ್ಲಿ ಉರಿ ಶಮನಕ್ಕಾಗಿ ಗಾಯದ ಮೇಲೆ ಸಾಕಷ್ಟು ನೀರು ಹಾಯಿಸಬೇಕು

*ವಿದ್ಯುತ್‌ ಆಘಾತವಾಗಿದ್ದರೆ, ವಿದ್ಯುತ್‌ ಪ್ರವಾಹವು ನಿಂತು ಹೋಗಿರುವುದು ಖಚಿತವಾಗು ವವರೆಗೂ, ಆಘಾತವಾಗಿರುವ ವ್ಯಕ್ತಿಯ ಹತ್ತಿರ ಹೋಗಬಾರದು. ಆಘಾತವಾಗಿರುವ ವ್ಯಕ್ತಿಯು ಪ್ರಜ್ಞಾಹೀನನಾಗಿದ್ದರೆ, ಆತನ ಉಸಿರಾಟ ಹಾಗೂ ನಾಡಿಬಡಿತವನ್ನು ಪರೀಕ್ಷಿಸಿ. ಬೇರೆ ಯಾವುದಾದರೂ ಗಾಯಗಳಾಗಿವೆಯೇ ಎಂದು ಪರೀಕ್ಷಿಸಿ. ಆತನ ಬೆನ್ನೆಲುಬಿಗೆ ಏಟಾಗಿರುವ ಸಾಧ್ಯತೆಗಳಿರುವುದರಿಂದ, ವ್ಯಕ್ತಿಯನ್ನು ಅತ್ತಿತ್ತ ಅಲುಗಾಡಿಸದಿರಿ. ವಿದ್ಯುತ್‌ ಆಘಾತದಿಂದ ಆದ ಸುಟ್ಟ ಗಾಯವನ್ನು ಒಣ, ಕ್ರಿಮಿಮುಕ್ತ ಬಟ್ಟೆಯಿಂದ ಸುತ್ತಿ. ಗಾಯದ ಮೇಲೆ ಮಂಜುಗಡ್ಡೆ ಇರಿಸಬೇಡಿ. ವ್ಯಕ್ತಿಗೆ ಥಂಡಿಯಾಗದಂತೆ ನೋಡಿಕೊಳ್ಳಿ. ಆ ವ್ಯಕ್ತಿಯ ಮೈಮೇಲೆ ಒಂದು ಕಡೆ ವಿದ್ಯುತ್‌ ಆಘಾತವಾಗಿರುವ ಹಾಗೂ ಮತ್ತೂಂದು ಕಡೆಯಲ್ಲಿ ದೇಹದಿಂದ ವಿದ್ಯುತ್‌ ಹೊರಬಂದಿರುವ, ಹೀಗೆ ಎರಡು ಗಾಯಗಳಿರುವ ಸಾಧ್ಯತೆಗಳಿವೆ. ವ್ಯಕ್ತಿಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿ.

*ಸರಿಸುಮಾರು ಪ್ರತಿ ಮನೆಯಲ್ಲಿಯೂ ಕೊಂಚವಾದರೂ ಜೇನು ಇದ್ದೇ ಇರುತ್ತದೆ. ಇದರ ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ನಿವಾರಕ ಗುಣಗಳು ಚಿಕ್ಕ ಪುಟ್ಟ ಸುಟ್ಟ ಗಾಯಗಳಿಗೆ ಉತ್ತಮ ಔಷಧಿಯಂತೆ ಕಾರ್ಯ ನಿರ್ವಹಿಸುತ್ತವೆ. ಜೇನನ್ನು ಹಚ್ಚಿದ ಬಳಿಕ ನೋವು ಮತ್ತು ಊತ ಕಡಿಮೆಯಾಗುತ್ತದೆ ಹಾಗೂ ಉರಿಯೂ ಇಲ್ಲವಾಗುತ್ತದೆ. ಉರಿಯೂತ ಕಡಿಮೆಯಾಗುವ ಮೂಲಕ ಊತವನ್ನೂ ಶೀಘ್ರದಲ್ಲಿ ಕಡಿಮೆ ಮಾಡಿ ಹೊಸ ಚರ್ಮ ಶೀಘ್ರವಾಗಿ ಬೆಳೆಯಲು ಜೇನು ಸಹಕಾರಿಯಾಗಿದೆ.

ತೀವ್ರ ಮೂಳೆ ಮುರಿತವಾಗಿರುವ ಸಂದರ್ಭಗಳಲ್ಲಿ , ಅನಗತ್ಯವಾಗಿ ವ್ಯಕ್ತಿಯನ್ನು ಅತ್ತಿತ್ತ ಅಲುಗಾಡಿಸಬಾರದು. ಮುರಿದಿರುವ ಮೂಳೆಯ ಎರಡೂ ಬದಿಗಳಿಗೆ ಮಡಚಿದ ಪತ್ರಿಕೆ, ಕಾರ್ಡ್‌ಬೋರ್ಡ್‌, ಕರವಸ್ತ್ರ ಅಥವಾ ಲೋಹದ ತಂತಿಗಳನ್ನು ಉಪಯೋಗಿಸಿಕೊಂಡು ಆಧಾರ ದಬ್ಬೆಯನ್ನು ಕಟ್ಟಿ ಅಥವಾ ದಬ್ಬೆಯು ಹಾನಿಯಾದ ಕೈಯ ಭಾಗಗಳಿಗೆ ಆಧಾರವನ್ನು ನೀಡುವಂತೆ ತ್ರಿಕೋನಾಕೃತಿಯ ಬ್ಯಾಂಡೇಜ್‌ ಅನ್ನು ಕಟ್ಟಿ. ದಬ್ಬೆಯನ್ನು ತೀರಾ ಬಿಗಿಯಾಗಿರದಂತೆ, ಸುರಕ್ಷಿತವಾಗಿ ಕಟ್ಟಿ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

One Comment

ಓಲ್ಡ್ ರಾಕ್ ಡೇ

“ಓಲ್ಡ್ ರಾಕ್ ಡೇ” ಎನ್ನುವುದು ಪ್ರತಿ ವರ್ಷ ಜನವರಿ 7 ರಂದು ಆಚರಿಸಲಾಗುವ ವಾರ್ಷಿಕ ಆಚರಣೆಯಾಗಿದೆ

ಪ್ಲಮ್ ಹಣ್ಣು

ನೋಡಲು ಸೇಬು ಹಣ್ಣಿನ ತರ ಇರುತ್ತೆ ಪ್ಲಮ್ ಹಣ್ಣು, ಆದರೆ ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ