ಭಾರತ ದೇಶದ ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ಒಂದು ತಾಲೂಕು ಬ್ಯಾಡಗಿ. ಈ ಪ್ರದೇಶದಲ್ಲಿ ಬೆಳೆಯುವ ಮೆಣಸಿನ ಕಾಯಿಗೆ ಬ್ಯಾಡಗಿ ಮೆಣಸು ಎಂದು ಕರೆಯುತ್ತಾರೆ. ಬ್ಯಾಡಗಿ ಮೆಣಸನ್ನು ಇಂಗ್ಲಿಷ್ ಭಾಷೆಯಲ್ಲಿ “ಬ್ಯಾಡಗಿ ಚಿಲ್ಲಿ” ಎಂದು ಕರೆಯುತ್ತಾರೆ. ಬ್ಯಾಡಗಿ ಮೆಣಸು ಒಂದು ವಿಶೇಷ ವಿಧದ ಮೆಣಸು. ಇದು ಮುಖ್ಯವಾಗಿ ಭಾರತದ ಕರ್ನಾಟಕ ಕಾಣಸಿಗುವ ಬೆಳೆ. ಬ್ಯಾಡಗಿ ಮೆಣಸು ಗಾಢ ಕೆಂಪು ಬಣ್ಣವನ್ನು ಹೊಂದಿದೆ ಮತ್ತು ಕಡಿಮೆ ಖಾರವನ್ನು ಹೊಂದಿದೆ. ಆದುದರಿಂದ ದಕ್ಷಿಣ ಭಾರತದಲ್ಲಿ ಬೇರೆಬೇರೆ ಆಹಾರಗಳಲ್ಲಿ ಬ್ಯಾಡಗಿ ಮೆಣಸು ಬಳಕೆಯಾಗುತ್ತಿದೆ. ಈ ಕಾರಣಗಳಿಂದಾಗಿ ಬ್ಯಾಡಗಿ ಮೆಣಸು ಭೌಗೋಳಿಕ ಚಿಹ್ನೆಗಳಲ್ಲಿ ೨೦೧೧ನೇ ಫೆಬ್ರವರಿಯಲ್ಲಿ ಗುರುತಿಸಿಕೊಂಡಿದೆ. ಇದರ ಚಿಹ್ನೆ ಸಂಖ್ಯೆ ೧೪೪ ಎಂದು ಗುರುತಿಸಲಾಗಿದೆ. ಬ್ಯಾಡಗಿ ಎಂಬ ಪ್ರದೇಶದಲ್ಲಿ ಬೆಳೆಯುವ ಮೆಣಸಿಗೆ ಬ್ಯಾಡಗಿ ಮೆಣಸು ಎಂಬ ಹೆಸರು ಬಂತಾದರೂ ಇದರ ಉಪಯೋಗದಲ್ಲೂ ಬಹಳ ವೈಶಿಷ್ಟ್ಯವಿದೆ.
ಕರ್ನಾಟಕ ರಾಜ್ಯದ ಬ್ಯಾಡಗಿ ಮೆಣಸು ಭಾರತದ ಎಲ್ಲಾ ಮೆಣಸುಗಳ ಸಾಲಿನಲ್ಲಿ, ಮತ್ತು ವ್ಯವಹಾರದಲ್ಲಿ ಎರಡನೆಯ ಸ್ಥಾನವನ್ನು ಪಡೆದಿದೆ. ಈ ಮೆಣಸನ್ನು ಉಪಯೋಗಿಸಿ ಒಂದು ಎಣ್ಣೆ ತಯಾರಿಸುತ್ತಾರೆ. ಇದರಿಂದ ನೈಲ್‍ಪಾಲಿಶ್ ಮತ್ತು ಲಿಪ್ಸ್‌ಟಿಕ್ ತಯಾರಿಸುತ್ತಾರೆ.
ಬ್ಯಾಡಗಿ ಮೆಣಸಿನ ಗಿಡಗಳನ್ನು ನೆಟ್ಟು ೪೦ ದಿನಗಳಲ್ಲಿ ಹೂವು ಬಿಡುತ್ತದೆ. ೬೦ ರಿಂದ ೮೦ ದಿನಗಳಲ್ಲಿ ಗಿಡ ಸಂಪೂರ್ಣ ಹೂವು ಬಿಡುತ್ತದೆ. ಹೆಚ್ಚಾಗಿ ಜನವರಿಯಲ್ಲಿ ನೆಟ್ಟರೆ ಮೇ ತಿಂಗಳಲ್ಲಿ ಕೊಯಿಲು ಆಗುತ್ತದೆ. ಒಂದು ವರ್ಷಕ್ಕೆ ಸುಮಾರು ೨೧,೦೦೦ದಷ್ಟು ಬ್ಯಾಡಗಿ ಮೆಣಸಿನ ಉತ್ಪತ್ತಿ ಆಗುತ್ತದೆ. ಅಧಿಕ ಕೆಂಪು ಬಣ್ಣವನ್ನು ಹೊಂದಿದ್ದು, ತುಂಬ ಉತ್ತಮ ಗುಣಮಟ್ಟದ ಮೆಣಸು ಉತ್ಪಾದನೆಯಾಗುವುದರಿಂದ ಬ್ಯಾಡಗಿ ಮೆಣಸಿಗೆ ಮಾರ್ಕೆಟ್‌ನಲ್ಲಿ ಹೆಚ್ಚು ಬೆಲೆಯಿದೆ. ಬ್ಯಾಡಗಿ ಮೆಣಸನ್ನು ದಾಸ್ತಾನು ಮಾಡುವುದರಲ್ಲಿ ಉದಾಸಿನ ಮಾಡಿದರೂ ಉಳಿದ ಮೆಣಸುಗಳಂತೆ ಬೇಗ ಹಾಳಾಗುವುದಿಲ್ಲ. ಬೂಸ್ಟು ಬರುವುದಿಲ್ಲ.
ಅಂತರರಾಷ್ಟ್ರೀಯ ಖ್ಯಾತಿಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯು (ಎಪಿಎಂಸಿ) ಹೊಸ ಆರ್ಥಿಕ ವರ್ಷದ (2016–17) ವಹಿವಾಟಿನ ಮೊದಲ ದಿನವೇ ದಾಖಲೆ ಬರೆದಿದೆ. ಮಾರುಕಟ್ಟೆಯ 68 ವರ್ಷದ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದೇ ದಿನ 2,00,111 ಚೀಲ,60 ಸಾವಿರ ಕ್ವಿಂಟಲ್‌ಗೂ ಹೆಚ್ಚು ಮೆಣಸಿನಕಾಯಿ ಆವಕವಾಯಿತು. ಆದರೆ ದರ ಸ್ವಲ್ಪ ಕುಸಿತ ಕಂಡಿದೆ. ಮೆಣಸಿನಕಾಯಿ ಸಾಂಬಾರು ಪದಾರ್ಥವಾಗಿ ಮಾತ್ರವಲ್ಲದೇ ಇಲ್ಲಿನ ಮೆಣಸಿನಕಾಯಿಯಲ್ಲಿ ಎಣ್ಣೆ, ರಾಳ, ಸೌಂದರ್ಯ ವರ್ಧಕ, ಔಷಧಿ ಮತ್ತಿತರ ಅಂಶಗಳು ಹೇರಳವಾಗಿರುವ ಕಾರಣ ಜಾಗತಿಕ ಮಟ್ಟದಲ್ಲಿ ಬೇಡಿಕೆ ಇದೆ. ಈ ಪೈಕಿ ಬ್ಯಾಡಗಿ ಡಬ್ಬಿ, ಕಡ್ಡಿ ಮತ್ತು ಗುಂಟೂರು ತಳಿಗೆ ಅಧಿಕ ಬೇಡಿಕೆ ಹೆಚ್ಚು.
ಬ್ಯಾಡಗಿ ಮಾರುಕಟ್ಟೆಯಲ್ಲಿ ಇ–ಟೆಂಡರಿಂಗ್ ಇದ್ದು, ಅದೇ ದಿನ ಹಣ ಪಾವತಿ ಆಗುತ್ತದೆ. ಅಲ್ಲದೇ, ಪಟ್ಟಣದಲ್ಲಿ 19 ಶೈತ್ಯಾಗಾರಗಳಿವೆ. ವಿದೇಶಿ ಕಂಪೆನಿಗಳೂ ಖರೀದಿಗೆ ಬರುತ್ತಿದ್ದು, ಉಳಿದೆಡೆಗಿಂತ ಇಲ್ಲಿ ಉತ್ತಮ ಬೆಲೆ ಸಿಗುತ್ತಿದೆ. ಮಾರುಕಟ್ಟೆಯ 78 ಎಕರೆ ಪ್ರಾಂಗಣ ಪ್ರಸ್ತುತ ವಹಿವಾಟಿಗೆ ಸಾಕಾಗುತ್ತಿಲ್ಲ. ಅದನ್ನು ಇನ್ನೂ 50 ಎಕರೆಗೆ ವಿಸ್ತರಿಸಬೇಕು ಎಂಬ ಬೇಡಿಕೆ ಕೇಳಿಬಂದಿದೆ. ಮಾರುಕಟ್ಟೆಯನ್ನು ಅವಲಂಬಿಸಿದ 50 ಸಾವಿರಕ್ಕೂ ಹೆಚ್ಚು ಜನ ಜಮಾಯಿಸುತ್ತಾರೆ. ಇದು ಬ್ಯಾಡಗಿ ಪಟ್ಟಣದ ಜನಸಂಖ್ಯೆಯ (30 ಸಾವಿರ) ಸುಮಾರು ಎರಡು ಪಟ್ಟು. ಇವರಿಗೆ ಬೇಕಾದ ಶೌಚಾಲಯ, ಸಮುದಾಯಭವನ ಮತ್ತಿತರ ಮೂಲಸೌಕರ್ಯದ ಅಗತ್ಯವಿದೆ.
ಭುತ್ ಜೊಲೊಕಿಯಾ
ಭುತ್ ಜೊಲೊಕಿಯಾವನ್ನು ‘ಘೋಸ್ಟ್ ಪೆಪ್ಪರ್’ ಎಂದೂ ಕರೆಯಲಾಗುತ್ತದೆ. 2007 ರಲ್ಲಿ ಗಿನ್ನೆಸ್ ಪುಸ್ತಕದಲ್ಲಿ ವಿಶ್ವದ ಅತ್ಯಂತ ಖಾರವಾದ ಮೆಣಸಿನಕಾಯಿ ಎಂದು ದಾಖಲಾಗಿದೆ. ಅರುಣಾಚಲ ಪ್ರದೇಶ, ಅಸ್ಸಾಂ, ನಾಗಾಲ್ಯಾಂಡ್ ಮತ್ತು ಮಣಿಪುರದಲ್ಲಿ ಈ ಮೆಣಸಿನಕಾಯಿಯನ್ನು ಬೆಳೆಯಲಾಗುತ್ತದೆ. ನಾವು ತಿನ್ನುವ ಮಾಮೂಲಿ ಮೆಣಸಿನ ಕಾಯಿಗಿಂದ 400 ಪಟ್ಟು ಹೆಚ್ಚು ಖಾರವಾಗಿ ಇರುತ್ತವೆ ಇದು.
ಗುಂಟೂರು ಮೆಣಸಿನಕಾಯಿ
ಗುಂಟೂರು ಶ್ರೀಲಂಕಾ, ಬಾಂಗ್ಲಾದೇಶ, ಮಧ್ಯಪ್ರಾಚ್ಯ, ದಕ್ಷಿಣ ಕೊರಿಯಾ, ಯುನೈಟೆಡ್ ಕಿಂಗ್ ಡಮ್, ಯುಎಸ್ಎ ಮತ್ತು ಲ್ಯಾಟಿನ್ ಅಮೆರಿಕಾದಲ್ಲಿ ಹೆಚ್ಚು ಬೆಳೆಸಲಾಗುತ್ತದೆ. ಈ ತಳಿಯು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ವಿಶೇಷವಾಗಿ ಇದನ್ನು ಹೆಚ್ಚಾಗಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಬೆಳೆಸಲಾಗುತ್ತದೆ.
ಕಾಶ್ಮೀರಿ ಮೆಣಸಿನಕಾಯಿ
ಈ ಮೆಣಸಿನಕಾಯಿಯು ಭಾರತದಲ್ಲಿ ಕೆಂಪು ಮೆಣಸಿನಕಾಯಿ ಎಂದೇ ಹೆಸರಾಗಿದೆ. ಕಾಶ್ಮೀರಿ ಮಿರ್ಚ್ ಪೌಡರ್ ಇಲ್ಲದ ಭಾರತೀಯ ಅಡುಗೆ ಅಪೂರ್ಣವಾಗಿದೆ, ಇದು ಪ್ರತಿಯೊಬ್ಬ ಮನೆಯ ಅಡುಗೆಯವರ ಬಾಯಲ್ಲಿ ನೀರೂರಿಸುವ ಅಡಿಗೆಯಲ್ಲಿ ಬಣ್ಣವನ್ನು ತರುತ್ತದೆ. ಭಾರತದಲ್ಲಿ ಕಂಡುಬರುವ ಇತರ ರೂಪಾಂತರಗಳಿಗೆ ವ್ಯತಿರಿಕ್ತವಾಗಿ, ಇದು ಕಡಿಮೆ ಖಾರವಿರುತ್ತದೆ.
ಬ್ಯಾಡಗಿ ಮೆಣಸಿನಕಾಯಿ
ಇದು ಪ್ರಸಿದ್ಧ ಮೆಣಸಿನಕಾಯಿ ಪ್ರಭೇದವಾಗಿದ್ದು, ಹೆಚ್ಚಾಗಿ ಕರ್ನಾಟಕದಲ್ಲಿ ಬೆಳೆಯಲಾಗುತ್ತದೆ. ಬ್ಯಾಡಗಿ ಮೆಣಸಿನ ಕಾಯಿಯನ್ನು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ ಅತೀ ಹೆಚ್ಚು ಬೆಳೆಸಲಾಗುತ್ತದೆ. ಹಾಗಾಗಿ ಇದನ್ನು ಬ್ಯಾಡಗಿ ಎಂದು ಕರೆಯಲಾಗುತ್ತದೆ. ಇದು ಗಾಢವಾದ ಕೆಂಪುಬಣ್ಣಹೊಂದಿದೆ.
ಇಂಡೋ-5 ಮೆಣಸಿನಕಾಯಿ
ಇದು ಭಾರತದ ಅತ್ಯಂತ ಪ್ರಸಿದ್ಧ ಕೆಂಪು ಮೆಣಸಿನಕಾಯಿಗಳಲ್ಲಿ ಒಂದಾಗಿದೆ, ಇದನ್ನು ಇಂಡೋಮ್-5, ಯುಎಸ್-5 ಮತ್ತು ಎಂಡೋ-5 ಮೆಣಸಿನಕಾಯಿ ಎಂದು ಕರೆಯಲಾಗುತ್ತದೆ ಮತ್ತು ಪ್ರಪಂಚದಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ರವಾನಿಸಲಾಗುತ್ತದೆ. ಭಾರತದಲ್ಲಿ ಇಂಡೋ 5 ಕೆಂಪು ಮೆಣಸಿನಕಾಯಿಯನ್ನು ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದಲ್ಲಿ ಹೆಚ್ಚು ಬೆಳೆಯಲಾಗುತ್ತದೆ.
ವಾರಂಗಲ್ ಚಪ್ಪಟಾ
ಸಣ್ಣ ಮತ್ತು ಆಳವಾದ ಕೆಂಪು ಬಣ್ಣ, ಕಡಿಮೆ ನಯವಾದ ಮತ್ತು ಮಧ್ಯಮ ರುಚಿ, ಚಿಲ್ಲಿ ಟೊಮೆಟೊ ಅಥವಾ ಚಪ್ಪಟಾ ವಾರಂಗಲ್ ತುಂಬಾ ಬಣ್ಣ ಮತ್ತು ಕಡಿಮೆ ಖಾರ ಹೊಂದಿದೆ, ಇದನ್ನು ಸಾಮಾನ್ಯವಾಗಿ ಬಣ್ಣ ಹೊರತೆಗೆಯುವಲ್ಲಿ ಬಳಸಲಾಗುತ್ತದೆ.
ಧನ್ಯವಾದಗಳು.
Pretty! This has been a really wonderful article. Thank you for providing these details.
zooma казино сайт зума казино