ಮಾವಿನ ಹಣ್ಣು!!! ಅಬ್ಬಾ ಮಾವಿನ ಹಣ್ಣು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಹೆಸರು ಕೇಳ್ತಿದ್ದ ಹಾಗೆ ಬಾಯಲ್ಲಿ ನೀರು ಬಂದೇ ಬಿಡ್ತು. ಈ ಹಣ್ಣಿಗೆ ಹಣ್ಣುಗಳ ರಾಜ ಅಂತಾನೆ ಹೆಸರು ಬಂದಿದೆ. ರಾಜ ಅಂದಮೇಲೆ ಫ್ಯಾನ್ಸ್ ಕೂಡ ಜಾಸ್ತಿ ಇರ್ಲೇಬೇಕಲ್ವಾ? ಈ ಹಣ್ಣಿನ ರಾಜನಿಗೆ ನಾ ಮುಂದು ತಾ ಮುಂದು ಅಂತ ಮುಗಿಬೀಳೋರೆ ಜಾಸ್ತಿ. ನಂಗೂ ಗೊತ್ತು ನೀವು ಈ ಹಣ್ಣಿನ ರಾಜನ ಕಟ್ಟಾ ಅಭಿಮಾನಿ ಅಂತ.
ಮಾವಿನ ಹಣ್ಣಿನ ಸೀಸನ್ ಶುರು ಆಗೋದೇ ತಡ ಎಲ್ಲಾ ಅಂಗಡಿಗಳಲ್ಲೂ ಇದರದ್ದೇ ಹವಾ. ಅದ್ರಲ್ಲೂ ವೆರೈಟಿ ಕೇಳ್ಬೇಕಾ ನಮ್ಮ ಕರ್ನಾಟಕದ್ದೇ ತಳಿಯಾದ ರಸಪೂರಿ, ಬಾದಾಮಿ, ಬಂಗನಪಲ್ಲಿ, ಮಲ್ಲಿಕ, ಮಲಗೋವ,ತೋತಾಪುರಿ, ಸೇಂದೂರ. ಇವಲ್ಲದೆ ಇನ್ನೂ ಹಲವು ಬಗೆಯ ತಳಿಗಳಿವೆ. ಒಂದು ಬಗೆಯ ಹಣ್ಣು ತಗೊಂಡ್ರೆ ಇನ್ನೊಂದು ತರಹದ ಹಣ್ಣು ತಗೋಬೇಕು ಅನ್ಸತ್ತೆ, ಇನ್ನೊಂದು ತರಹದ ಹಣ್ಣು ತಗೊಂಡ್ರೆ ಮತ್ತೊಂದು ತರಹದ ಹಣ್ಣು ತಗೋಬೇಕು ಅನ್ಸತ್ತೆ. ಹೀಗೆ ಮಾವಿನ ಹಣ್ಣಿನ ಸೀಸನ್ ನಲ್ಲಿ ಮಾರ್ಕೆಟ್ ಹೋದ್ರೆ ಬುಟ್ಟಿ ತುಂಬ ಬಗೆಬಗೆಯ ಹಣ್ಣು ತುಂಬಿಸಿಕೊಂಡು ಬರೋದ್ರಲ್ಲಿ ಸಂಶಯನೇ ಇಲ್ಲ.
ಏಪ್ರಿಲ್ ತಿಂಗಳಿನಲ್ಲಿ ಇದರ ಅಬ್ಬರ ಶುರು ಆದ್ರೆ ಜೂನ್ ನಿಂದ ಜುಲೈ ತಿಂಗಳ ವರೆಗೂ ಸಿಗುತ್ತೆ. ಇದರಲ್ಲಿ ಅತ್ಯುತ್ತಮವಾದ ವಿಟಮಿನ್ಸ್ ಮತ್ತು ಮಿನರಲ್ಸ್ ಇದೆ. ಹಣ್ಣಿನ ಹಾಗೆಯೇ ಇದರ ಸಿಪ್ಪೆಯಲ್ಲಿ ಕೂಡ ಪೌಷ್ಟಿಕಾಂಶಗಳಿವೆ. ಇನ್ಯಾಕೆ ತಡ ಮಾಡಬೇಕು ಹತ್ತಿರದ ಮಾರ್ಕೆಟ್ ಗೆ ಹೋಗಿ ನಿಮಗಿಷ್ಟ ಆಗುವ ಮಾವಿನ ಹಣ್ಣನ್ನು ತಗೊಂಡು ಬಂದು ಈ ವರ್ಷದ ಕಂತನ್ನು ಓಪನ್ ಮಾಡ್ಬಿಡಿ..
GIPHY App Key not set. Please check settings