ಮಹಾಭಾರತದ ಕುರುಕ್ಷೇತ್ರ ಯುದ್ಧ ಅಂತಿಮ ರೋಚಕ ಘಟ್ಟ ತಲುಪಿದಾಗ ಮಹಾವೀರ ಕರ್ಣ ಹಾಗೂ ಮಧ್ಯಮ ಪಾಂಡವ ಅರ್ಜುನ ಎದುರುಬದುರಾಗುತ್ತಾರೆ. ಕರ್ಣನಿಗಿದ್ದ ಶಾಪಗಳೇ ಅಂತಿಮ ಯುದ್ಧದಲ್ಲಿ ಮುಳುವಾಗಿ ಪರಿಣಮಿಸುತ್ತವೆ. ಅವನ ರಥದ ಚಕ್ರವು ಭೂಮಿಯಲ್ಲಿ ಹೂತುಹೋಗುತ್ತದೆ. ಇದೆ ಸಂಕಟದ ಸಮಯದಲ್ಲಿ ಬಿಲ್ಲು ವಿದ್ಯೆಯ ಮಂತ್ರಗಳು ಮರೆತುಹೋಗುತ್ತವೆ. ಕರ್ಣನ ವಧೆ ಮಾಡಲು ಇದೇ ಸಮಯ ಸರಿ ಎಂದು ಶ್ರೀ ಕೃಷ್ಣ ನಿಶ್ಶಸ್ತ್ರದಾರಿಯಾದ ಕರ್ಣನ ಮೇಲೆ ಬಾಣ ಪ್ರಯೋಗ ಮಾಡು ಎಂದು ಅರ್ಜುನನಿಗೆ ಆದೇಶ ನೀಡುತ್ತಾನೆ. ಆದರೆ ಇದು ಅಧರ್ಮವೆಂದು ಸುಮ್ಮನಿದ್ದ ಅರ್ಜುನನಿಗೆ ಕರ್ಣ ಮಾಡಿದ ಅಧರ್ಮಗಳ ಬಗ್ಗೆ ನೆನಪಿಸುತ್ತಾನೆ ಕೃಷ್ಣ.
ಕೊನೆಗೂ ಮನಸ್ಸಿಲ್ಲದ ಮನಸ್ಸಿನಿಂದ ಅರ್ಜುನ ರಥದ ಚಕ್ರ ಎತ್ತುತ್ತಿದ್ದ ಕರ್ಣನ ಮೇಲೆ ಅಂಜಲಿಕಾಸ್ತ್ರ ಪ್ರಯೋಗ ಮಾಡಿ ಆ ಮಹಾರಥಿಯ ಅಂತ್ಯ ಮಾಡುತ್ತಾನೆ. ಇದಾದ ಬಳಿಕ ಕರ್ಣ ಬೇರೆ ಯಾರು ಅಲ್ಲ..ನಮ್ಮ ಜೇಷ್ಠ ಸಹೋದರ ಎಂದು ತಿಳಿದು ಕಣ್ಣೀರಿನ ಕೋಡಿ ಹರಿಸಿ ಕುಸಿದು ಹೋಗುತ್ತಾನೆ. ಇನ್ನು ಅದೇ ಕ್ಷಣ ತಾನು ಕರ್ಣನನ್ನ ಎಷ್ಟೋ ಬಾರಿ ನಿಂದಿಸಿದ್ದು, ಅವಮಾನ ಮಾಡಿದ್ದು ಅರ್ಜುನನಿಗೆ ನೆನಪಿಗೆ ಬರುತ್ತದೆ. ಇನ್ನು ಅಭಿಮನ್ಯುವಿನ ಸಾವಿಗೆ ಪ್ರತೀಕಾರವಾಗಿ ಪಾಂಡವರು ಕರ್ಣನ ಮಕ್ಕಳನ್ನ ಪರಲೋಕಕ್ಕೆ ಕಳುಹಿಸಿರುತ್ತಾರೆ. ಮಗನ ಸಾವಿನಿಂದ ಕ್ರಧನಾಗಿದ್ದ ಅರ್ಜುನ ವೃಷಸೇನ ಸೇರಿದಂತೆ ಕರ್ಣನ ಮೂರು ಮಕ್ಕಳನ್ನ ಕರ್ಣನ ಮುಂದೆಯೇ ವಧೆ ಮಾಡಿದ್ದ.
ನೀನು ನಾನಿಲ್ಲದಾಗ ನನ್ನ ಪುತ್ರ ಅಭಿಮನ್ಯುವನ್ನ ವಧೆ ಮಾಡಿದೆ. ಆದರೆ ನಾನು ನಿನ್ನ ಮುಂದೆಯೇ ನಿನ್ನ ಮಕ್ಕಳನ್ನ ಪರಲೋಕಕ್ಕೆ ಕಳಿಸಿರುವೆ. ಈಗ ಹೇಳು ನಿಜವಾದ ಶೂರ ಯಾರೆಂದು ಎಂದು ಕರ್ಣನನ್ನ ಅಣಕಿಸಿರುತ್ತಾನೆ. ಇದೆಲ್ಲವೂ ಅರ್ಜುನನಿಗೆ ನೆನಪಿಗೆ ಬಂದು ಹೋಗುತ್ತದೆ. ಪೂಜೆಗೆ ಯೋಗ್ಯವಾಗಿದ್ದ ನನ್ನ ಸಹೋದರನ ವಧೆ ಮಾಡಿದನಲ್ಲ ಎಂದು ಮಮ್ಮಲ ಮರುಗುತ್ತಾನೆ ಅರ್ಜುನ. ಇನ್ನು ಕುರುಕ್ಷೇತ್ರದ ಮಹಾಯುದ್ಧದಲ್ಲಿ ಬದುಕುಳಿದ ಏಕೈಕ ಕರ್ಣನ ಮಗನೆಂದರೆ ವೃಷಕೇತು. ಪಾಂಡವರ ಜೇಷ್ಠ ಸಹೋದರ ಕರ್ಣನ ಮಗನಾಗಿದ್ದ ವೃಷಕೇತು ತನ್ನ ಅಜ್ಜಿಯ ಜೊತೆಗಿದ್ದ ಕಾರಣ ಜೀವಂತವಾಗಿ ಉಳಿದುಕೊಂಡಿದ್ದ. ಇನ್ನು ಆ ಸಮಯಕ್ಕೆ ಹನ್ನೆರಡು ವರ್ಷದವನಾಗಿದ್ದ ವೃಷಕೇತುವಿಗೆ ಪಾಂಡವರ ಬಗ್ಗೆ ತಿಳಿದಿರಲಿಲ್ಲ.
ಆದರೆ ನನ್ನ ತಂದೆ ಸಾವಿಗೆ ಕಾರಣರಾದವರ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂಬುದು ವೃಷಕೇತುವಿನ ಮನದಲ್ಲಿತ್ತು. ಹೀಗೆ ಒಂದು ದಿನ ತನ್ನ ತಂದೆ ಕರ್ಣ ಪ್ರತಿದಿನವೂ ಸೂರ್ಯದೇವನಿಗೆ ಅರ್ಘ್ಯ ಕೊಟ್ಟು ಬ್ರಾಹ್ಮಣರಿಗೆ ದಾನ ಕೊಡುತ್ತಿದ್ದ ಗಂಗಾ ನದಿಯ ತಟಕ್ಕೆ ಬರುತ್ತಾನೆ ವೃಷಕೇತು. ತನ್ನ ತಂದೆಯನ್ನ ನೆನೆದು ಕಣ್ಣೀರುಡುತ್ತಾನೆ. ಅದೇ ಸಮಯಕ್ಕೆ ಅಲ್ಲಿಗೆ ಅಪರಿಚಿತ ವ್ಯಕ್ತಿಯೊಬ್ಬ ಬರುತ್ತಾನೆ. ಆತನನ್ನ ನೋಡಿ ಈತನೂ ಕೂಡ ತನ್ನಂತಯೇ ಯುದ್ಧದಲ್ಲಿ ಎಲ್ಲರನ್ನು ಕಳೆದುಕೊಂಡು ದುಃಖಿತನಾಗಿರಬಹುದು ಎಂದು ತಿಳಿಯುತ್ತಾನೆ. ಆದರೆ ವೃಷಕೇತುವಿನ ಎದುರಿಗೆ ಇದ್ದದ್ದು ಕರ್ಣನ ಅಂತ್ಯಕ್ಕೆ ಕಾರಣನಾಗಿದ್ದ ಅರ್ಜುನ. ವೃಷಕೇತುವನ್ನ ಕುರಿತು ನಾನು ನಿನ್ನನ್ನ ನೋಡಲೆಂದೇ ಬಂದಿರುವೆ.. ನಾನು ಕೂಡ ನಿನ್ನ ಹಾಗೆ ಸಂಬಂಧಿಕರನ್ನೆಲ್ಲಾ ಕಳೆದುಕೊಂಡಿರುವೆ. .ಸ್ವತಃ ನನ್ನ ಅಣ್ಣನನ್ನೇ ವಧೆ ಮಾಡಿರುವುದು ನನ್ನ ದುರ್ವಿಧಿಯಾಗಿದೆ ಎಂದು ಹೇಳುತ್ತಾನೆ.
ಆಗ ವೃಷಕೇತು.. ನೀನು ಹೀಗೇಕೆ ಮಾಡಿದೆ. ನಾನು ನಿನ್ನ ಜಾಗದಲ್ಲಿ ನಾನಿದ್ದದ್ದರೆ, ಯಾವ ಕಾರಣಕ್ಕೂ ಸಹೋದರನನ್ನ ವಧೆ ಮಾಡುವ ಕೆಲಸ ಮಾಡುತ್ತಿರಲಿಲ್ಲ ಎನ್ನುತ್ತಾನೆ. ಆಗ ಅರ್ಜುನ ಹೇಳುತ್ತಾನೆ.. ಶತ್ರುವೇ ಎಂದು ಅರಿತಿದ್ದ ನನಗೆ ಅವನು ನಮ್ಮ ಜೇಷ್ಠ ಎಂಬುದು ತಿಳಿದಿರಲಿಲ್ಲ. ಇನ್ನು ಇದನ್ನ ಕೇಳಿದ ವೃಷಕೇತು, ನೀನು ಇದನ್ನ ತಿಳಿಯದೆ ಮಾಡಿರುವೆ.. ನಿನ್ನ ಜೇಷ್ಠ ನಿನ್ನನ್ನ ಖಂಡಿತಾ ಕ್ಷಮಿಸುವ ಎನ್ನುತ್ತಾ ಮನೆಯ ಕಡೆ ಹೊರಡುತ್ತಾನೆ. ಇನ್ನು ಸ್ವಲ್ಪ ಮುಂದೆ ಹೋದ ವೃಷಕೇತು ಆತ ಯಾರು ಆತನ ಹೆಸರೇನೆಂದು ತಿಳಿಯುವ ಕುತೂಹಲವಾಗಿ ಮತ್ತೆ ಆ ವ್ಯಕ್ತಿ ಇದ್ದ ಕಡೆ ಬರುತ್ತಾನೆ. ಬಂದವನೇ ನೀನು ಯಾರು? ನಿನ್ನ ಹೆಸರನೆಂದು ಕೇಳುತ್ತಾನೆ. ಆಗ ಗಳಗಳನೆ ಅತ್ತ ಅರ್ಜುನ ಕೈಜೋಡಿಸುತ್ತಾ ವೃಷಕೇತು ನನ್ನನ್ನ ಕ್ಷಮಿಸು.. ನಾನೆ ನಿನ್ನ ತಂದೆಯ ಸಾವಿಗೆ ಕಾರಣದ ಅರ್ಜುನ.. ಆ ಕರ್ಣನೇ ನನ್ನ ಸಹೋದರ ಎಂದು ಹೇಳುತ್ತಾನೆ.
ವಿಷಯ ತಿಳಿದು ದಂಗಾದ ವೃಷಕೇತು ನಾನು ಯಾವ ವ್ಯಕ್ತಿಯ ಸಾವನ್ನ ನೋಡಬೇಕೆಂದು ಕೊಂಡಿದ್ದೇನೋ ಆ ವ್ಯಕ್ತಿ ನನ್ನ ಮುಂದೆ ಅಳುತ್ತಾ ಕೈ ಜೋಡಿಸಿ ಕ್ಷಮೆ ಕೇಳುತ್ತಿದ್ದಾನೆ ಎಂದು ಗೊಂದಲಕ್ಕೀಡಾದ ವೃಷಕೇತು ಭಾರದ ಮನಸ್ಸಿನೊಂದಿಗೆ ಮನೆಯ ಕಡೆ ಹೆಜ್ಜೆ ಹಾಕುತ್ತಾನೆ. ವೃಷಕೇತುವಿನ ಹಿಂದೆಯೇ ಅರ್ಜುನ ಕೂಡ ಹೋಗುತ್ತಾನೆ. ವೃಷಕೇತು ತನ್ನ ಮನೆಗೆ ತಲುಪಿದಾಗ ತನ್ನ ಅಜ್ಜಿ ರಾಧೆಯ ಜೊತೆ ಉಳಿದ ಪಾಂಡವರು ಹಾಗು ಕುಂತಿ ದೇವಿಯು ಮಾತನಾಡುತ್ತಿರುವುದನ್ನ ನೋಡುತ್ತಾನೆ. ಆಗ ಎಲ್ಲವನ್ನು ತಾನು ಅರ್ಥ ಮಾಡಿಕೊಳ್ಳುತ್ತಾನೆ. ವೃಷಕೇತುವನ್ನ ಕಂಡೊಡನೆ ಪಾಂಡವರು ಅವನ್ನ ಅಪ್ಪಿ ಮುದ್ದಾಡುತ್ತಾರೆ. ಇನ್ನು ಇಲ್ಲಿ ಗಮನಿಸುವ ಅಂಶವೇನೆಂದರೆ ಸಾಮ್ರಾಟ ಯುಧಿಷ್ಠಿರನ ಬಳಿಕ ಪಾಂಡವ ಜೇಷ್ಠ ಕರ್ಣ ಪುತ್ರ ವೃಷಕೇತುವೇ ರಾಜನಾಗಬೇಕಿತ್ತು. ಆದರೆ ಕರ್ಣನು ಕುಂತಿ ದೇವಿಯ ಮದುವೆಗೆ ಮುಂಚಿನ ಸಂತಾನವಾಗಿದ್ದರಿಂದ ಹಾಗೂ ವೃಷಕೇತುವಿನ ತಾಯಿ ವೃಷಾಲಿ ಸೂತ ಕುಲದವಳಾಗಿದ್ದ ಕಾರಣ ಕುರುಕುಲದ ಲೆಕ್ಕಕ್ಕೆ ಬಾರದ ಕಾರಣ ವೃಷಕೇತು ರಾಜನಾಗಲು ಸಾಧ್ಯವಾಗಲಿಲ್ಲ.
ಹಾಗಾಗಿ ಅರ್ಜುನನ ಮೊಮ್ಮಗ ಪರೀಕ್ಷಿತ್ ಧರ್ಮರಾಯನ ಬಳಿಕ ಹಸ್ತಿನಾಪುರದ ಸಿಂಹಾಸನಾಧೀಶನಾಗುತ್ತಾನೆ. ಆದರೂ ವೃಷಕೇತು ಎಂದರೆ ಪಾಂಡವರಿಗೆ ತುಂಬಾ ಅಚ್ಚುಮೆಚ್ಚಿದವನಾಗಿದ್ದ. ಅದರಲ್ಲೂ ಅರ್ಜುನ ವೃಷಕೇತುವಿನಲ್ಲಿ ತನ್ನ ಜೇಷ್ಠ ಕರ್ಣ ಹಾಗೂ ಪುತ್ರ ಅಭಿಮನ್ಯುವನ್ನ ಕಾಣುತ್ತಾನೆ. ತಾನೇ ಮುಂದೆ ನಿಂತು ಬಿಲ್ಲು ಗಾರಿಕೆ ಸೇರಿದಂತೆ ಅಸ್ತ್ರ ಶಸ್ತ್ರಗಳ ಸಕಲ ವಿಧ್ಯೆಯನ್ನ ಧಾರೆಯೆರೆಯುತ್ತಾನೆ. ಇಷ್ಟೇ ಅಲ್ಲದೆ ತನ್ನ ಸಕಲ ಅಸ್ತ್ರಗಳನ್ನ ವೃಷಕೇತುವಿಗೆ ಕೊಡುತ್ತಾನೆ ಅರ್ಜುನ. ಹೀಗೆ ತನ್ನ ಚಿಕ್ಕಪ್ಪ ಅರ್ಜುನನಿಂದ ಎಲ್ಲಾ ವಿಧ್ಯೆ ಕಲಿತ ವೃಷಕೇತು ಮಹಾ ಧನುರ್ಧಾರಿಯಾಗುತ್ತಾನೆ. ಇನ್ನು ಆ ಸಮಯಕ್ಕೆ ಬ್ರಹ್ಮಾಸ್ತ್ರ ಸೇರಿದಂತೆ ಹಲವಾರು ವಿನಾಶಕಾರಿ ಅಸ್ತ್ರಗಳನ್ನ ಹೊಂದಿದ ಏಕೈಕ ವೀರನಾಗಿದ್ದ ವೃಷಕೇತು.
ಆದರೆ ಈ ವಿನಾಶಕಾರಿ ಅಸ್ತ್ರಗಳು ಮತ್ತೆ ಭವಿಷ್ಯದಲ್ಲಿ ಯಾರಿಗೂ ಸಿಗಬಾರದೆಂಬ ಕಾರಣದಿಂದ, ಭೂಮಂಡದಲ್ಲಿ ಉಳಿಯಬಾರದೆಂದು, ವೃಷಕೇತುವಿನ ಜೊತೆಗೆ ನಾಶವಾಗಬೇಕೆಂದು ಸಂಕಲ್ಪ ಹೊಂದಿದ್ದ ವಾಸುದೇವ ಕೃಷ್ಣ. ಅದರಂತೆ ಒಮ್ಮೆ ಅರ್ಜುನನ ಸಂರಕ್ಷಣೆಯಲ್ಲಿದ್ದ ವೇಳೆ ವೃಷಕೇತುವಿನ ಸಾವು ಸಂಭವಿಸುತ್ತದೆ. ಹೌದು, ಪಾಂಡವರ ಅಶ್ವಮೇಗ ಯಾಗದ ಸಂದರ್ಭದಲ್ಲಿ ಮಣಿಪುರದ ರಾಜ ಬಬ್ರುವಾಹನ ಜೊತೆ ಅರ್ಜುನನಿಗೆ ಯುದ್ಧವಾಗುವುದು ಇದೆ ವೇಳೆ ಯುದ್ಧದಲ್ಲಿ ಬಬ್ರುವಾಹನ ವೃಷಕೇತುವಿನ ವಧೆ ಮಾಡುತ್ತಾನೆ. ಅಲ್ಲಿಗೆ ವೃಷಕೇತುವಿನ ಜೊತೆಗೆ ಬ್ರಹ್ಮಾಸ್ತ್ರ ಸೇರಿದಂತೆ ಎಲ್ಲಾ ಅಸ್ತ್ರಗಳ ನಾಶವಾಗುತ್ತದೆ ಎಂದು ಪುರಾಣದ ಕತೆ ಹೇಳುತ್ತದೆ.
ಧನ್ಯವಾದಗಳು.
GIPHY App Key not set. Please check settings