ಕೃಷ್ಣ ಮಠ – ಕರ್ನಾಟಕದ ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ಒಂದಾದ ಉಡುಪಿಯಲ್ಲಿದೆ. ಇಲ್ಲಿರುವ ಶ್ರೀ ಕೃಷ್ಣನ ದೇವಾಲಯವನ್ನೇ ಕೃಷ್ಣ ಮಠ ಎಂದು ಕರೆಯಲಾಗುತ್ತದೆ. ಇಲ್ಲಿರುವ ಕೃಷ್ಣನ ಪ್ರತಿಮೆಯನ್ನು ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದರು.
ಉಡುಪಿಯ ಕೃಷ್ಣನನ್ನು ದ್ವಾಪರ ಯುಗದಲ್ಲಿ ದ್ವಾರಕೆಯ ರುಕ್ಮಿಣಿ ಪೂಜಿಸಲ್ಪಡುತ್ತಿದ್ದು ದೇವಶಿಲ್ಪಿ ವಿಶ್ವಕರ್ಮನಿಂದ ರಚಿಸಲ್ಪಟ್ಟಿದೆ.
ಶ್ರೀ ಕೃಷ್ಣ ಮಠವನ್ನು ವೈಷ್ಣವರ ಸಂತ ಜಗದ್ಗುರು ಶ್ರೀ ಮಧ್ವಾಚಾರ್ಯರು ೧೩ ನೇ ಶತಮಾನದಲ್ಲಿ ಸ್ಥಾಪಿಸಿದರು. ಇವರು ದ್ವೈತ ವೇದಾಂತ ಶಾಲೆಯ ಸ್ಥಾಪಕರೂ ಕೂಡ. ಮಧ್ವರಿಗೆ ಗೋಪಿಚಂದನದಲ್ಲಿ ಶ್ರೀ ಕೃಷ್ಣನ ವಿಗ್ರಹ ಸಿಕ್ಕಿತೆಂಬ ನಂಬಿಕೆ ಇದೆ. ತಮ್ಮ ತಂತ್ರಸಾರ ಸಂಗ್ರಹದಲ್ಲಿ ಮಧ್ವರೇ ಹೇಳಿರುವ ಹಾಗೆ ವಿಗ್ರಹವು ಪಶ್ಚಿಮಭಿಮುಖವಾಗಿತ್ತು. ಅಷ್ಟ ಮಠಗಳಲ್ಲಿ ಕೂಡ ದೇವರ ವಿಗ್ರಹ ಪಶ್ಚಿಮಕ್ಕೆ ಮುಖ ಹಾಕಿದೆ. ಭಕ್ತರು ದೇವರ ದರ್ಶನವನ್ನು ಒಳಗಿನ ನವಗ್ರಹ ಕಿಂಡಿ ಅಥವಾ ಹೊರಗಿನ ಕನಕನ ಕಿಂಡಿಯ ಮೂಲಕ ಪಡೆಯಬಹುದು. ಮಠವು ಬೆಳಗಿನ ಜಾವ ೫:೩೦ಕ್ಕೆ ತೆರೆಯುತ್ತದೆ. ದೇವರಿಗೆ ೯ ತೂತುಗಳಿರುವ ಬೆಳ್ಳಿಯಿಂದ ಲೇಪಿತವಾದ ಕಿಂಡಿಯಿಂದ ಪೂಜೆ ಮಾಡುವುದು ಇಲ್ಲಿನ ವಿಶೇಷತೆ. ಪ್ರತಿದಿನ ಬಂದ ಭಕ್ತರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯೂ ಇಲ್ಲಿದೆ.
೨ ವರ್ಷಕೊಮ್ಮೆ ನಡೆಯುವ ಪರ್ಯಾಯ ಮಹೋತ್ಸವದಂದು ಮಠದ ಆಡಳಿತವನ್ನು ಮುಂದಿನ ಮಠಕ್ಕೆ ಹಸ್ತಾಂತರಿಸಲಾಗುತ್ತದೆ. ಪ್ರತಿಯೊಂದು ಮಠಕ್ಕೂ ಒಂದು ಸ್ವಾಮಿಗಳು ಇರುತ್ತಾರೆ ಹಾಗೂ ಪರ್ಯಾಯದ ಸಮಯದಲ್ಲಿ ಅವರು ಅಧಿಕಾರದಲ್ಲಿರುತ್ತಾರೆ. ಪರ್ಯಾಯವು ೨೦೦೮,೨೦೧೦,೨೦೧೩ ರಂತೆ ಸಹ ವರ್ಷಗಳಲ್ಲಿ ಇರುತ್ತದೆ. ಮಕರ ಸಂಕ್ರಾಂತಿ,ರಥಸಪ್ತಮಿ,ಮಧ್ವ ನವಮಿ,ಹನುಮಾನ ಜಯಂತಿ,ಶ್ರೀ ಕೃಷ್ಣ ಜನ್ಮಾಷ್ಟಮಿ,ನವರಾತ್ರಿ ಮಹೋತ್ಸವ,ವಿಜಯ ದಶಮಿ,ನರಕ ಚತುರ್ದಶಿ,ದೀಪಾವಳಿ,ಗೀತಾ ಜಯಂತಿ ಅಂತಹ ಹಬ್ಬಗಳನ್ನು ಪರ್ಯಾಯ ಮಠವು ಬಹಳ ವಿಜೃಂಭಣೆಯಿಂದ ಆಚರಿಸುತ್ತದೆ.
ಶ್ರೀ ಕೃಷ್ಣ ಉಡುಪಿಯಲ್ಲಿ ಬಂದು ನೆಲೆಸಿರುವ ಕಥೆ :
ದ್ವಾಪರ ಯುಗದಲ್ಲಿ ಕೃಷ್ಣ ಯಶೋದೆಯ ಮಡಿಲಲ್ಲಿ ತನ್ನ ಬಾಲ್ಯವನ್ನು ಕಳೆದ. ತನ್ನ ಲೀಲಾ ವಿನೋದಗಳಿಂದ ನಂದ ಗೋಕುಲವನ್ನು ಪಾವನಗೊಳಿಸಿದ. ಕೃಷ್ಣನ ಬಾಲ ಲೀಲೆಯು ನಂದ ಯಶೋದಾ ಗೋಕುಲ ಜನರಿಗೆ ಸ್ವರ್ಗದ ಅನುಭೂತಿ ಸಿಗುವಂತೆ ಮಾಡಿತ್ತು. ಆದರೆ ಇದರಿಂದ ವಂಚಿತಳಾದ ನತದೃಷ್ಟೆ ಮಾತ್ರ ತಾಯಿ ದೇವಕಿ. ಸ್ವಂತ ಮಗನ ಗುಣಗಾನವನ್ನು ಅಷ್ಟ ದಿಕ್ಕುಗಳಿಂದ ಕೇಳುತ್ತಿದ್ದಳಾದರೂ ಅದನ್ನು ನೋಡಿ ಅನುಭವಿಸುವ ಭಾಗ್ಯ ಅವಳಿಗೆ ಇರಲಿಲ್ಲ. ಮುಂದೊಂದು ದಿನ ಕೃಷ್ಣ ಬೆಳೆದು ದೊಡ್ಡವನಾಗಿ ದ್ವಾರಕೆಯಲ್ಲಿ ನೆಲೆಸಿದ. ತನ್ನ ತಾಯಿ ದೇವಕಿಯ ನೋವನ್ನು ನಿವಾರಿಸಲು ಅವಳ ಕೋರಿಕೆಯ ಮೇರೆಗೆ ಒಂದು ದಿನದ ಮಟ್ಟಿಗೆ ತನ್ನ ಬಾಲ ರೂಪವನ್ನು ತಾಳಿದ.ತನ್ನ ಮಗನ ಬಾಲ ರೂಪವನ್ನು ಕಂಡು ದೇವಕಿಗೆ ಪರಮಾನದಂದವಾಯಿತು. ಪುಟ್ಟ ಮಗನಿಗೆ ಸ್ನಾನ ಮಾಡಿಸಿದಳು ಗಂಧದ ಲೇಪನ ಇಟ್ಟಳು. ಹೊಸ ಬಟ್ಟೆ ತೊಡಿಸಿದಳು. ತನ್ನ ಪುಟ್ಟ ಕೃಷ್ಣನಿಗೆ ಪ್ರಿಯವಾದ ಬೆಣ್ಣೆಯನ್ನು ತಯಾರಿಸಲು ಮಜ್ಜಿಗೆಯ ಕಡೆಯಲು ಕಡೆಗೋಲನ್ನು ಹಿಡಿದು ತಯಾರಾದಳು. ಅಷ್ಟರಲ್ಲಿ ತುಂಟ ಕೃಷ್ಣ ಮಜ್ಜಿಗೆಯ ಕಡೆಗೋಲು ಮತ್ತು ಹಗ್ಗವನ್ನು ಹಿಡಿದು ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಟ್ಟುಕೊಂಡು ಓಡಿದನು. ಅವನನ್ನು ಹಿಡಿಯಲು ತಾಯಿ ದೇವಕಿ ಮನೆಯಲ್ಲ ಓಡಾಡಿದಳು. ಸೃಷ್ಟಿಯಲ್ಲಿನ ಅದ್ಭುತವಾದ ಈ ದೃಶ್ಯವನ್ನು ಮರೆಯಲ್ಲಿ ನಿಂತು ನೋಡಿದ ಕೃಷ್ಣನ ಮಡದಿ ರಾಣಿ ರುಕ್ಮಿಣಿ ಕೃಷ್ಣ ಈ ಬಾಲ ರೂಪ ಮತ್ತು ಅವನ ಅಂದ, ಮನ ಮೋಹಕ ನೋಟಕ್ಕೆ ಮನಸೋತಳು.
ಒಂದು ದಿನ ರುಕ್ಮಿಣಿ ತಾನು ಕಂಡ ಕೃಷ್ಣನ ಮನ್ ಮೋಹಕ ಬಾಲ ರೂಪವನ್ನು ತಾನು ಪೂಜಿಸಬೇಕೆಂದು ಕೃಷ್ಣ ನಲ್ಲಿ ವಿನಂತಿಸಿದಳು. ಆಗ ಕೃಷ್ಣ ಜಗತ್ತಿನ ಶ್ರೇಷ್ಠ ಶಿಲ್ಪಿ ವಿಶ್ವಕರ್ಮರನ್ನು ಕರೆಸಿ ಕೈಯಲ್ಲಿ ಕಡೆಗೋಲು ಮಜ್ಜಿಗೆಯ ಹಗ್ಗವನ್ನು ಹಿಡಿದಿರುವ ಬಾಲ ಕೃಷ್ಣನ ಮೂರ್ತಿಯನ್ನು ಸಾಲಿಗ್ರಾಮ ಶಿಲೆಯಲ್ಲಿ ಮಾಡಿಸಿದನು. ರುಕ್ಮಿಣಿಯು ಆ ವಿಗ್ರಹಕ್ಕೆ ದಿನವೂ ಪೂಜೆ ಮಾಡುತ್ತಾ ಕೃಷ್ಣನನ್ನು ಆರಾಧಿಸುತ್ತಿದ್ದರು. ದ್ವಾಪರಯುಗ ಅಂತ್ಯವಾದ ನಂತರ ಕಲಿಯುಗದಲ್ಲಿ ಮಧ್ವಾಚಾರ್ಯರ ಜನನವಾಯಿತು. ಒಮ್ಮೆ ಮಲ್ಪೆಯ ಕಡಲತೀರದಲ್ಲಿ ದೋಣಿಯೊಂದು ಪ್ರಕೃತಿ ವಿಕೋಪಕ್ಕೆ ಸಿಲುಕಿ ಮುಳುಗುತ್ತಿತ್ತು. ಇದನ್ನು ಕಂಡ ಮಧ್ವಾಚಾರ್ಯರು ತಮ್ಮ ತಪೋಬಲದಿಂದ ನಾವೆಯನ್ನು ಮತ್ತು ನಾವಿಕರನ್ನು ರಕ್ಷಿಸಿದರು.
ಜೀವ ಉಳಿಸಿದ ಕೃತಜ್ಞತೆಯಿಂದ ನಾವಿಕನು ಹಡಗಿನಲ್ಲಿ ದ್ವಾರಕೆಯಿಂದ ತಂದಿದ್ದ ಎಲ್ಲಾ ಸರಕು ಸಾಮಗ್ರಿಗಳನ್ನು ಮಧ್ವಾಚಾರ್ಯರಿಗೆ ನೀಡಲು ಮುಂದಾದರು. ಆದರೆ ಅವರು ಏನನ್ನು ಸ್ವೀಕರಿಸಲಿಲ್ಲ. ಕೃಷ್ಣ ನೆಟ್ಟಿದ್ದ ದ್ವಾರಕೆಯ ಮಣ್ಣನ್ನು ಮತ್ತು ಹಡಗಿನಲ್ಲಿದ್ದ ರುಕ್ಮಿಣಿಯು ಪೂಜಿಸುತ್ತಿದ್ದ ವಿಗ್ರಹವನ್ನು ಮಾತ್ರ ತೆಗೆದುಕೊಂಡರು. ಹೀಗೆ ಆ ವಿಗ್ರಹವು ಉಡುಪಿಗೆ ಬಂದು ಸೇರಿತು. ನಂತರ ಮಧ್ವಾಚಾರ್ಯರು ಸಕಲ ಶಾಸ್ತ್ರೋಪ್ತಗಳೊಂದಿಗೆ ಕೃಷ್ಣನ ವಿಗ್ರಹವನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು. ಹೀಗೆ ದ್ವಾರಕೆಯಿಂದ ಬಂದ ವಾಸುದೇವ ಶ್ರೀ ಕೃಷ್ಣ ಉಡುಪಿಯಲ್ಲಿ ನೆಲಸಿ ಕಲಿಯುಗದಲ್ಲೂ ಕೂಡ ತನ್ನ ಭಕ್ತ ಸಮೂಹವನ್ನು ಸದಾ ರಕ್ಷಿಸುತ್ತಿರುವನು.
ದೇವಾಲಯದ ಪೂಜೆಯನ್ನು ಉಡುಪಿಯಲ್ಲಿರುವ ಅಷ್ಟ ಮಠಗಳು ನೋಡಿಕೊಳ್ಳುತ್ತವೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಒಂದು ಮಠದಿಂದ ಇನ್ನೊಂದು ಮಠಕ್ಕೆ ಕೃಷ್ಣ ಮಠದ ಪೂಜೆ ಹಸ್ತಾಂತರವಾಗುತ್ತದೆ. ಈ ಸಂದರ್ಭವನ್ನು ಪರ್ಯಾಯ ಮಹೋತ್ಸವ ಎಂದು ಅತಿ ವೈಭವದಿಂದ ಆಚರಿಸಲಾಗುತ್ತದೆ. ಜನವರಿ ೧೮ರ ಬೆಳಗ್ಗೆ ನಡೆಯುವ ಈ ಉತ್ಸವವನ್ನು ಮೈಸೂರಿನ ದಸರ ಹಬ್ಬದ ಮಾದರಿಯಲ್ಲಿ ವಿಜ್ರಂಭಣೆಯಿಂದ ಆಚರಿಸಲಾಗುವುದು. ಒಮ್ಮೆ ಪರ್ಯಾಯ ಪೂರೈಸಿದ ಮಠಕ್ಕೆ,ಮತ್ತೊಮ್ಮೆ ಕೃಷ್ಣ ಮಠ ಪೂಜೆಯ ಅಧಿಕಾರ ಸಿಗಲು ಹದಿನಾಲ್ಕು (೧೪) ವರ್ಷಗಳು ಹಿಡಿಯುತ್ತವೆ. ಶ್ರೀ ಮಧ್ವಾಚಾರ್ಯರು ಪ್ರಾರಂಭಿಸಿದ ಈ ಪದ್ಧತಿ ಇವತ್ತಿನವರೆಗೂ ಚಾಚೂ ತಪ್ಪದೆ ಮುಂದುವರೆದುಕೊಂಡು ಬಂದಿದೆ.
ಧನ್ಯವಾದಗಳು.
GIPHY App Key not set. Please check settings