in

ಪ್ರತೀ ವರ್ಷ ಮಕರಜ್ಯೋತಿಯ ರೂಪದಲ್ಲಿ ಶಬರಿಮಲೆಯ ಸ್ವಾಮಿ ಅಯ್ಯಪ್ಪ ಕಾಣಿಸಿಕೊಳ್ಳುವುದು ನಿಜಾನಾ?

ಮಕರಜ್ಯೋತಿಯ ರೂಪದಲ್ಲಿ ಶಬರಿಮಲೆಯ ಸ್ವಾಮಿ ಅಯ್ಯಪ್ಪ
ಮಕರಜ್ಯೋತಿಯ ರೂಪದಲ್ಲಿ ಶಬರಿಮಲೆಯ ಸ್ವಾಮಿ ಅಯ್ಯಪ್ಪ

ಮಕರ ಸಂಕ್ರಾತಿ ಮೊನ್ನೆಯಷ್ಟೆ ಆಚರಣೆ ಮಾಡಲಾಯಿತು. ಮಕರ ಸಂಕ್ರಾತಿ ವಿಶೇಷತೆ ಎಂದರೆ ಪ್ರತಿ ವರ್ಷ ಅಯ್ಯಪ್ಪ ಶಬರಿಮಲೆಯಲ್ಲಿ ಮಕರ ಜ್ಯೋತಿಯ ರೂಪದಲ್ಲಿ ಬಂದು ದರ್ಶನ ನೀಡುವುದು. ಈ ಕಲಿಯುಗದಲ್ಲಿ ಕೂಡ ನಂಬಲು ಸಾಧ್ಯವಾಗದಿರುವ ಮಹಿಮೆ.

ಆಕಾಶದಲ್ಲಿ, ನಾವು 12 ರಾಶಿಗಳು ಅಥವಾ ರಾಶಿಚಕ್ರ ಚಿಹ್ನೆಗಳು ಅಥವಾ ನಕ್ಷತ್ರಪುಂಜಗಳನ್ನು ಹೊಂದಿದ್ದೇವೆ. ಸೂರ್ಯನು ಒಂದು ತಿಂಗಳ ಕಾಲ ಒಂದು ರಾಶಿಯಲ್ಲಿದ್ದಾನೆ ಮತ್ತು ಮುಂದಿನ ತಿಂಗಳು ಮುಂದಿನ ರಾಶಿಗೆ ಸಾಗುತ್ತಾನೆ ಮತ್ತು ಹೀಗೆ ಸೂರ್ಯನು ಒಂದು ವರ್ಷದಲ್ಲಿ ಎಲ್ಲಾ 12 ರಾಶಿಗಳನ್ನು ಆವರಿಸುತ್ತಾನೆ. ಭಾರತೀಯ ಕ್ಯಾಲೆಂಡರ್ ಪ್ರಕಾರ, ಸೂರ್ಯನು ಜನವರಿ 14 ಅಥವಾ 15 ರಂದು ಮಕರ ರಾಶಿಗೆ ಚಲಿಸುತ್ತಾನೆ. ಸೂರ್ಯನು ಮಕರ ರಾಶಿಯಲ್ಲಿ ಚಲಿಸುವ ಈ ಚಲನೆಯನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ.

ಪ್ರತೀ ವರ್ಷ ಮಕರಜ್ಯೋತಿಯ ರೂಪದಲ್ಲಿ ಶಬರಿಮಲೆಯ ಸ್ವಾಮಿ ಅಯ್ಯಪ್ಪ ಕಾಣಿಸಿಕೊಳ್ಳುವುದು ನಿಜಾನಾ?
ಶಬರಿಮಲೆ ದೇವಸ್ಥಾನ

ಮಕರ ಜ್ಯೋತಿಯನ್ನು ನೋಡಲು ಸಾವಿರಾರು ಮಾಲಾಧಾರಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. 41 ದಿನಗಳ ಕಠಿಣ ವ್ರತವನ್ನು ಆಚರಿಸಿದ ಭಕ್ತನು ಶಬರಿಮಲೆಯ ಪೊನ್ನಂಬಲ ಮೇಡುವಿನಲ್ಲಿ ಕಾಣಿಸುವ ಮಕರ ಜ್ಯೋತಿಯನ್ನು ಕಂಡು ಧನ್ಯನಾಗುತ್ತಾನೆ.

ಶಬರಿಗಿರಿಯ ವಿರುದ್ಧದಿಕ್ಕಿನಲ್ಲಿರುವ ಗಿರಿಯೇ ಪೊನ್ನಂಬಲಮೇಡು. ಈ ಪೊನ್ನಂಬಲಮೇಡು ಗಿರಿಯ ತುತ್ತ ತುದಿಯಲ್ಲಿ ಈ ಮಕರ ಜ್ಯೋತಿಯು ಕಾಣಿಸಿಕೊಳ್ಳುತ್ತದೆ. ಮಕರ ಜ್ಯೋತಿಯ ಸಮಯದಲ್ಲಿ ಇಲ್ಲಿ ವೇದಿಕೆಯನ್ನು ನಿರ್ಮಿಸಿ, ಬೃಹತ್‌ ಬಾಣಲೆಗೆ ಕರ್ಪೂರವನ್ನು ಹಾಕಿ ಮೂರು ಬಾರಿ ಉರಿಸಲಾಗುತ್ತದೆ ಎಂದು ಹೇಳಲಾಗುತ್ತದೆ.

ಶಬರಿಮಲೆಯಿಂದ 4 ಕಿ.ಮೀ ದೂರದಲ್ಲಿರುವ ಪೊನ್ನಂಬಲೆಮೇಡುವಿನಿಂದ ಸಂಜೆ 06:00 ರಿಂದ ರಾತ್ರಿ 08:00 ರವರೆಗೆ ಮಕರವಿಳಕ್ಕು ಬರುತ್ತದೆ.

ಮಕರ ಜ್ಯೋತಿಯಂದು ಪಂದಳಂ ರಾಜನ ಅರಮನೆಯಿಂದ ತಿರುವಾಭರಣಗಳನ್ನು ಮಕರ ಸಂಕ್ರಾಂತಿಯಂದು ತಂದು ಅಯ್ಯಪ್ಪನಿಗೆ ಅಲಂಕಾರ ಮಾಡಲಾಗುತ್ತದೆ. ವರ್ಷದಲ್ಲಿ ಒಂದು ಬಾರಿ ಮಾತ್ರ ಮಕರ ಸಂಕ್ರಾಂತಿಯಂದು ಅಯ್ಯಪ್ಪನಿಗೆ ಈ ತಿರುವಾಭರಣಗಳಿಂದ ಅಲಂಕರಿಸುತ್ತಾರೆ. ಪೂಜನೀಯವಾದ ಈ ಆಭರಣಗಳು ಪಂದಳ ರಾಜರು ತಮ್ಮ ವಂಶಸ್ಥನಾದ ಅಯ್ಯಪ್ಪನಿಗೆ ಪ್ರೀತಿಯಿಂದ ಮಾಡಿಸಿದ ಒಡವೆಗಳಾಗಿವೆ. ಇದನ್ನು ಸಂಕ್ರಾಂತಿಯಂದು ಅಯ್ಯಪ್ಪ ಸನ್ನಿಧಾನಕ್ಕೆ ತೆಗೆದುಕೊಂಡು ಹೋಗುವ ಹಾಗೂ ಅಲ್ಲಿಂದ ಮರಳಿ ಅರಮನೆಗೆ ಸೇರಿಸುವ ಜವಾಬ್ದಾರಿಯೂ ಈ ಪಂದಳ ಮನೆತನದವರದೇ ಆಗಿರುತ್ತದೆ. ಇರುಮುಡಿ ಇಲ್ಲದಿದ್ದರೂ ಹದಿನೆಂಟು ಮೆಟ್ಟಲನ್ನು ಹತ್ತುವ ಅವಕಾಶ ಪಂದಳ ರಾಜಮನೆತನಕ್ಕೆ ಮಾತ್ರ ಇದೆ.

ಮೂರು ಆಭರಣಗಳ ಪೆಟ್ಟಿಗೆಯಲ್ಲಿ ಒಂದು ಅಯ್ಯಪ್ಪನ ಆಭರಣದ ಪೆಟ್ಟಿಗೆಯಾದರೆ ಇನ್ನೆರಡು ಪೆಟ್ಟಿಗೆಯಲ್ಲಿ ಮಾತೆಯ ಆಭರಣಗಳಿರುತ್ತದೆ. ಪಂದಳ ಅರಮನೆಯಲ್ಲಿ ಪೂಜೆಯು ನೆರವೇರಿಸಿದ ನಂತರ ಪಲ್ಲಕ್ಕಿಯಲ್ಲಿರಿಸಿ ಶಬರಿಗಿರಿಗೆ ಹೊತ್ತೊಯ್ಯಲಾಗುತ್ತದೆ. ಹೀಗೆ ಅಯ್ಯಪ್ಪನ ಆಭರಣಗಳನ್ನು ತೆಗೆದುಕೊಂಡು ಹೋಗುವವರೂ ಕೂಡಾ ಅಯ್ಯಪ್ಪ ದೀಕ್ಷೆ ತೆಗೆದುಕೊಳ್ಳುವುದು ಕಡ್ಡಾಯ.

ಪಂದಳ ಅರಮನೆಯಿಂದ ಆಭರಣಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವಾಗ ಗರುಡವೂ ಕಾವಲು ಕಾಯುತ್ತದೆ ಎನ್ನುತ್ತಾರೆ. ಇದರಂತೆ ಸಮಯಕ್ಕೆ ಸರಿಯಾಗಿ ಗರುಡನೂ ಕಾಣಿಸಿಕೊಳ್ಳುತ್ತದೆ. ಹೀಗೆ ಆಭರಣಗಳು ಅರಮನೆಯಿಂದ ಅಯ್ಯಪ್ಪನ ಸನ್ನಿಧಾನಕ್ಕೆ ಸಂಕ್ರಾಂತಿಯಂದು ಸಂಜೆ ಬಂದು ಸೇರುತ್ತದೆ. ಈ ಚಿನ್ನದ ಆಭರಣಗಳಿಂದ ಅಯ್ಯಪ್ಪನ್ನು ಅಲಂಕರಿಸಿ ದ್ವಾರವನ್ನು ತೆರೆಯುವ ಸಮಯಕ್ಕೆ ಪೊನ್ನಂಬಲಮೇಡು ಗಿರಿಯಲ್ಲಿ ಮಕರ ಜ್ಯೋತಿಯೂ ಕಾಣಿಸಿಕೊಳ್ಳುತ್ತದೆ. ಈ ಮಕರ ಜ್ಯೋತಿಯು ಮೂರು ಬಾರಿ ಬೆಳಗುತ್ತದೆ. ಇದನ್ನೇ ಮಕರವಿಲಕ್ಕು ಎಂದು ಕರೆಯುತ್ತಾರೆ.

ಪ್ರತೀ ವರ್ಷ ಮಕರಜ್ಯೋತಿಯ ರೂಪದಲ್ಲಿ ಶಬರಿಮಲೆಯ ಸ್ವಾಮಿ ಅಯ್ಯಪ್ಪ ಕಾಣಿಸಿಕೊಳ್ಳುವುದು ನಿಜಾನಾ?
ಪಂದಳ ಅರಮನೆಯಿಂದ ಆಭರಣಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವುದು

ಮಕರವಿಳಕ್ಕು ದೇವಸ್ಥಾನಕ್ಕೆ ನಾಲ್ಕು ಕಿಮೀ ದೂರದಲ್ಲಿರುವ ಪೊನ್ನಂಬಲಮೇಡು ಬೆಟ್ಟದ ಮೇಲೆ ಮೂರು ಬಾರಿ ಕಾಣಿಸಿಕೊಳ್ಳುವ ದೀಪವಾಗಿದೆ. ಹಿಂದಿನ ವರ್ಷಗಳಲ್ಲಿ, ಇದು ಪೊನ್ನಂಬಲಮೇಡುವಿನಲ್ಲಿ ಮಕರಜ್ಯೋತಿಯ ದಿನದಂದು ಬುಡಕಟ್ಟು ಜನಾಂಗದವರು ಮಾಡುವ ಪೂಜೆಯಾಗಿತ್ತು. ಈಗ ಇದನ್ನು ಕೇರಳ ಸರ್ಕಾರವು ತಿರುವಾಂಕೂರು ದೇವಸ್ವಂ ಮಂಡಳಿ ಮತ್ತು ಅರಣ್ಯ ಇಲಾಖೆಯ ಬೆಂಬಲದೊಂದಿಗೆ ಮಾಡಿದೆ. ಕೇರಳ ಹೈಕೋರ್ಟ್ ಈ ವಿಷಯವನ್ನು ದೃಢಪಡಿಸಿದೆ. ಕೇರಳದ ಪ್ರಸಿದ್ಧ ಶಬರಿಮಲೆ ದೇವಸ್ಥಾನದಲ್ಲಿರುವ ‘ಮಕರವಿಳಕ್ಕು’ ಮಾನವ ನಿರ್ಮಿತವಾಗಿದೆ ಎಂದು ಕೇರಳ ಹೈಕೋರ್ಟ್‌ಗೆ ಸಲ್ಲಿಸಿದ ತನ್ನ ಸಲ್ಲಿಕೆಯಲ್ಲಿ ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ದೇವಸ್ಥಾನವನ್ನು ನಡೆಸುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ  ದೃಢಪಡಿಸಿದೆ. ಇದು ಸಾಂಪ್ರದಾಯಿಕ ಆಚರಣೆಯಾಗಿರುವುದರಿಂದ ಅದನ್ನು ತೊಡೆದುಹಾಕಲು ಸಾಧ್ಯವಿಲ್ಲ ಎಂದು ಮಂಡಳಿಯು ನ್ಯಾಯಾಲಯಕ್ಕೆ ತಿಳಿಸಿದೆ. ನ್ಯಾಯಮೂರ್ತಿಗಳಾದ ತೊಟ್ಟತ್ತಿಲ್ ರಾಧಾಕೃಷ್ಣನ್ ಮತ್ತು ಶೇಖರ್ ಅವರನ್ನೊಳಗೊಂಡ ಪೀಠವು ದೀಪಾರಾಧನೆ  ನಡೆಸಲು ಮಂಡಳಿಯ ಮನವಿಗೆ ಅನುಮತಿ ನೀಡಿತು. ಪೂಜೆ ಪೊನ್ನಂಬಲಮೇಡುವಿನಲ್ಲಿ ಮಕರವಿಳಕ್ಕು ಬದಲಿಗೆ, ಅಲ್ಲಿ ಬೆಳಕು ಕಾಣಿಸಿಕೊಳ್ಳುತ್ತದೆ. ಮಕರವಿಳಕ್ಕು ಕುರಿತು ಮಂಡಳಿಯು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ, ಈ ವಿಷಯದ ಬಗ್ಗೆ ಹೆಚ್ಚಿನ ತನಿಖೆಯ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಎಷ್ಟೇ ವಾದಗಳು- ವಿವಾದಗಳು ನಡೆದರೂ ಅಯ್ಯಪ್ಪನ ಮೇಲಿರುವ ಭಕ್ತರ ನಂಬಿಕೆಗೆ ಎಳ್ಳಷ್ಟೂ ಅಡ್ಡಿಯಾಗಿಲ್ಲ ಎನ್ನುವುದು ಕಠಿಣ ವ್ರತವನ್ನು ಪಾಲಿಸಿ, ಬರಿಗಾಲಿನಲ್ಲಿ ಕಲ್ಲು ಮುಳ್ಳುಗಳನ್ನು ತುಳಿದು, ಬೆಟ್ಟವನ್ನು ಹತ್ತಿ, ಮಕರ ಜ್ಯೋತಿಯನ್ನು ಕಂಡು ಭಕ್ತಿಯ ಪರಾಕಾಷ್ಟೆಯನ್ನು ತಲುಪಿ ‘ ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂದು ಉದ್ಘರಿಸುವ ಧ್ವನಿಗಳಲ್ಲಿ ಕಂಡುಬರುತ್ತದೆ.

41 ದಿನಗಳ ಕಠಿಣ ವ್ರತವನ್ನು ಆಚರಿಸಿದ ಭಕ್ತನು ಶಬರಿಮಲೆಯ ಪೊನ್ನಂಬಲ ಮೇಡುವಿನಲ್ಲಿ ಕಾಣಿಸುವ ಮಕರ ಜ್ಯೋತಿಯನ್ನು ಕಂಡು ಧನ್ಯನಾಗುತ್ತಾನೆ.

ಕೆಲವೊಂದು ಮಂದಿ ಆ ಮಕರ ಜ್ಯೋತಿ ಸುಳ್ಳು ಎಂದು ಹೇಳಿದರೆ ಮತ್ತಷ್ಟು ಮಂದಿ ಅದನ್ನು ಸತ್ಯ ಎಂದು ವಾದಿಸುತ್ತಾರೆ. ಅದನ್ನು ನಂಬುವುದು ಬಿಡುವುದು ನಿಮಗೆ ಬಿಟ್ಟಿರುವ ವಿಚಾರ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಬಿಳಿಸೆರಗು ಸಾಮಾನ್ಯವಾಗಿ ಎಲ್ಲಾ ಮಹಿಳೆಯರಲ್ಲಿ ಕಂಡುಬರುವ ಸಮಸ್ಯೆ

ಬಿಳಿಸೆರಗು ಸಾಮಾನ್ಯವಾಗಿ ಎಲ್ಲಾ ಮಹಿಳೆಯರಲ್ಲಿ ಕಂಡುಬರುವ ಸಮಸ್ಯೆ

ರಾಷ್ಟ್ರೀಯ ಗೌರ್ಮೆಟ್ ಕಾಫಿ ದಿನ

ಪ್ರತಿ ವರ್ಷ ಜನವರಿ 18 ರಂದು, ರಾಷ್ಟ್ರೀಯ ಗೌರ್ಮೆಟ್ ಕಾಫಿ ದಿನ