in

ಸಾಕು ಪ್ರಾಣಿ ನಾಯಿಯ ಬಗ್ಗೆ

ಸಾಕು ಪ್ರಾಣಿ ನಾಯಿ
ಸಾಕು ಪ್ರಾಣಿ ನಾಯಿ

ನಾಯಿಯು ತೋಳದ ಜಾತಿಗೆ ಸೇರಿದ ಒಂದು ಪ್ರಾಣಿ. ಆದರೆ ನಾಯಿಯು ತನ್ನ ಗೆಳೆಯ ಸಮಾನನಾದ ಮಾಲೀಕನ ಮಾತನ್ನು ಕೇಳುವ, ಆಜ್ಞೆಯನ್ನು ಪಾಲಿಸುವ ನಿಯತ್ತಿನ ಪ್ರಾಣಿ. ನಾಯಿ ಒಂದು ಸಾಕು ಪ್ರಾಣಿ. ಮನೆ ನಾಯಿಗೂ, ಬೀದಿ ನಾಯಿಗೂ ಅಜಗಜಾಂತರ ವ್ಯತ್ಯಾಸ ಇರುತ್ತದೆ. ಶಿಕಾರಿಗಾಗಿಯೂ, ಮನೆಯನ್ನು ರಕ್ಷಿಸಲು, ಹೊಲ-ಗದ್ದೆಗಳನ್ನು ಕಾಯಲು ನಾಯಿಯನ್ನು ಸಾಕಲಾಗುತ್ತದೆ. ಕುವೆಂಪು ಅವರ ಕಾದಂಬರಿಯೊಂದರ ‘ಗುತ್ತಿ’ ನಾಯಿ, ತೇಜಸ್ವೀಯವರ ‘ಕಿವಿ’ ನಾಯಿ ಬೇಟೆನಾಯಿಗಳಾ ಗಿದ್ದುವು.

ನಾಯಿಯಲ್ಲೂ ಹಲವು ವಿಧಗಳಿವೆ:
*ಮುಧೋಳ ನಾಯಿ
*ಜರ್ಮ್ನನ್ ಶೆಫೆರ್ಡ್
*ಅಕಿತಿ ಇನು
*ಅಕ್ಬಾಶ್
*ಆಲ್ಫಿನ್ ಸ್ಪಾನಿಯಳ್
*ಅಮೇರಿಕನ್ ಅಕಿತ
*ಭಾರ್ಬೆಟ್
*ಬೀಗಲ್
*ಪಮೇರಿಯನ್
*ಅಮೆರಿಕದ ಡೆನಿಸಿ ಡೂರ್ಲಾಗ್(ಅತಿ ಎತ್ತರದ ನಾಯಿ)

ಅಮೆರಿಕದ ಡೆನಿಸಿ ಡೂರ್ಲಾಗ್‌ಳು ತನ್ನ ಸಾಕು ನಾಯಿಯೊಡನೆ ರಸ್ತೆಯಲ್ಲಿ ಹೋಗುವಾಗ ನಾಯಿಯನ್ನು ನೋಡಿದವರೆಲ್ಲರೂ ಮೊದಲು ಕೇಳುವ ಪ್ರಶ್ನೆ ಎಂದರೆ ‘ಇದು ನಾಯಿನಾ ಅಥವಾ ಕುದುರೆನಾ?’ ಎಂದು. ಯಾಕೆಂದರೆ ಗ್ರೇಟ್ ಡೆನ್ ತಳಿಯ ಈಕೆಯ ನಾಯಿ ಬರೋಬ್ಬರಿ ಸುಮಾರು ಮೂರು ಮುಕ್ಕಾಲು ಅಡಿ ಎತ್ತರವಿದೆ. ಮೂರು ವರ್ಷ ವಯಸ್ಸಿನ ಈ ನಾಯಿ, ತನ್ನ ಹಿಂಗಾಲುಗಳ ಮೇಲೆ ನಿಂತರೆ ಸಾಕು 7 ಅಡಿ 4 ಇಂಚಿನಷ್ಟು ಉದ್ದವಾಗಿ ತೋರುತ್ತದೆ.
ಜೂಸ್ ಹೆಸರಿನ ಈ ನಾಯಿಗೆ ಇದೀಗ ಪ್ರಪಂಚದಲ್ಲೇ ಅತಿ ಎತ್ತರದ ಶ್ವಾನವೆಂಬ ಗಿನ್ನಿಸ್ ವಿಶ್ವ ದಾಖಲೆಯ ಮನ್ನಣೆ ದೊರಕಿದೆ. ಇದರಿಂದ ಅಮೆರಿಕಾದ ಮಿಚಿಗನ್‌ನಲ್ಲಿರುವ ಶ್ವಾನದೊಡತಿ ಡೂರ್ಲಾಗ್‌ಳ ಮನೆಯವರ ಸಂಭ್ರಮ ಮುಗಿಲು ಮುಟ್ಟಿದೆ.
70.3 ಕೆ.ಜಿ. ತೂಕವಿರುವ ಜೂಸ್ ದಿನಾಲು ಸುಮಾರು 14 ಕೆ.ಜಿ. ಅಹಾರವನ್ನು ತಿನ್ನುತ್ತದೆಯಂತೆ. ಈ ನಾಯಿಯನ್ನು ಕರೆದುಕೊಂಡು ವಾಕಿಂಗ್ ಹೋಗುತ್ತಿರುವಾಗ ‘ನಿಮ್ಮ ಕುದುರೆಗೇಕೆ ಜೀನನ್ನು ಹಾಕಿಲ್ಲ?’ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಮಕ್ಕಳಂತೂ ಜೂಸ್‌ನನ್ನು ಕುದುರೆ ಮರಿಯಂದೇ ತಿಳಿದುಕೊಳ್ಳುತ್ತಾರೆ.
‘ನಮ್ಮ ನಾಯಿಯ ಬಗ್ಗೆ ಹೀಗೆಲ್ಲ ಜನರು ಪ್ರಶ್ನೆಗಳನ್ನು ಕೇಳುವುದು ನನಗೆ ತುಂಬಾ ತಮಾಷೆ ಎನ್ನಿಸುತ್ತದೆ’ ಎಂದು ಡೂರ್ಲಾಗ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅಂದ ಹಾಗೆ ಇದುವರೆಗಿನ ಗಿನ್ನಿಸ್ ವಿಶ್ವ ದಾಖಲೆ ಜಯಿಂಟ್ ಜಾರ್ಜ್ ಹೆಸರಿನ ಗ್ರೇಟ್ ಡೆನ್ ತಳಿಯ ನಾಯಿಯದಾಗಿತ್ತು. ಇದಕ್ಕಿಂತ ಒಂದು ಇಂಚು ಉದ್ದವಾಗಿರುವ ಜೂಸ್, ಜಯಿಂಟ್ ಜಾರ್ಜ್ ನಾಯಿಯ ಎತ್ತರದ ದಾಖಲೆಯನ್ನು ಮುರಿದು ಹೊಸ ದಾಖಲೆ ಮಾಡಿದೆ.

ಸಾಕು ಪ್ರಾಣಿ ನಾಯಿಯ ಬಗ್ಗೆ
ಪ್ರಪಂಚದಲ್ಲೇ ಅತಿ ಎತ್ತರದ ಶ್ವಾನ

ನಾಯಿ ಸಾಕುದರಿಂದ ಅನುಕೂಲಗಳು :

೧. ಮನೆಯನ್ನು ಕಳ್ಳರಿಂದ ಕಾಪಾಡಲು, ಇತರೆ ಪ್ರಾಣಿಗಳು ಬರದಂತೆ ಎಚ್ಚರ ವಹಿಸುತ್ತವೆ.
೨. ಮನೆಯವರಿಗೆ ತನ್ನ ತುಂಟ-ತರಲೆ ಆಟಗಳಿಂದ ಮನಸನ್ನು ಆನಂದವಾಗಿಡುತ್ತದೆ.
೩. ಅಪರಿಚಿತರ ಆಗಮನವನ್ನು ಸಾರುತ್ತದೆ.
೪. ಪರಿಚಿತರಿಗೆ ಆತ್ಮೀಯ, ಅಪರಿಚಿತರಿಗೆ ಖಳನಾಗಿ ವರ್ತಿಸುತ್ತದೆ.

ಅನಾನುಕೂಲಗಳು ಕೂಡಾ ಇದೆ :

೧. ನಾಯಿ ಕಚ್ಚಿದರೆ ತಕ್ಷಣ ಆಸ್ಪತ್ರೆಗೆ ತೋರಿಸಬೇಕು.
೨. ನಾಯಿ ತನ್ನ ಮಾಲೀಕನ ಮಾತನ್ನು ಮಾತ್ರ ಕೇಳುತ್ತವೆ.
೩. ಇತರರನ್ನು ಕಂಡರೆ ಬೊಗಳುವುದು, ಕಚ್ಚುವುದು ಮಾಡುತ್ತವೆ.
೪. ನಾಯಿಯಿಂದ ಕಚ್ಚಿಸಿ ಕೊಂಡವ ಸರ್ಕಾರಿ ಉದ್ಯೋಗಿಯಾಗಿದ್ದರೆ ಅಂತಹವರಿಗೆ ವಿಶೇಷ ರಜೆ ಸಿಗುತ್ತದೆ.

ಬೆಂಗಳೂರಿನಲ್ಲಿ ನಾಯಿಗಳ ಸಮಸ್ಯೆ

ಬೆಂಗಳೂರು ನಗರ ಪಾಲಿಕೆ ಗಣತಿಯ ಅಂಕಿ–ಅಂಶಗಳ ಪ್ರಕಾರ ನಗರದಲ್ಲಿ ಬೀದಿನಾಯಿಗಳ ಸಂಖ್ಯೆ 2019 ಡಿಸೆಂಬರಿಗೆ 3.10 ಲಕ್ಷ ಇದೆ. ಆ ಪೈಕಿ 1.42 ಲಕ್ಷ ನಾಯಿಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಆಗಿಲ್ಲ. ನಾಯಿಗಳು ಹುಟ್ಟಿ 10 ತಿಂಗಳು ಕಳೆಯುವಷ್ಟರಲ್ಲಿ ನಾಯಿಗಳು ಸಂತಾನೋತ್ಪಾದನೆಯ ಸಾಮರ್ಥ್ಯ ಪಡೆಯುತ್ತವೆ. ಅವುಗಳು ವರ್ಷದಲ್ಲಿ ಎರಡು ಬಾರಿ ಬೆದೆಗೆ ಬರುತ್ತವೆ. ಅವುಗಳಲ್ಲಿ ಗರ್ಭಧಾರಣೆಯಾಗಿ ಮರಿ ಹಾಕುವ ನಡುವಿನ ಅವಧಿ ಕೇವಲ 64 ದಿನಗಳು. ಬೀದಿನಾಯಿಗಳ ಒಂದು ಜೋಡಿಯಿಂದ ಕೇವಲ ಆರೇ ವರ್ಷಗಳಲ್ಲಿ 60 ಸಾವಿರ ನಾಯಿಗಳು ಹುಟ್ಟಬಲ್ಲವು.

ಸಾಕು ಪ್ರಾಣಿ ನಾಯಿಯ ಬಗ್ಗೆ
ಸಾಕು ಪ್ರಾಣಿ ನಾಯಿ

ಪುರಾಣದಲ್ಲಿ ನಾಯಿಯ ಬಗ್ಗೆ :

ನಾಯಿಯು ಅನೇಕ ದೇವತೆಗಳೊಂದಿಗೆ ಸಂಬಂಧ ಹೊಂದಿದೆ. ನಾಯಿಯ ಕೋರಿಕೆಯ ಮೇರೆಗೆ ಶಿವನು ನಾಯಿಗೆ ಬ್ರಹ್ಮನ ಜ್ಞಾನವನ್ನು ಪಡೆಯಲು ಅನುಗ್ರಹಿಸಿದನು ಎಂಬ ಐತಿಹ್ಯವಿದೆ. ಬ್ರಹ್ಮನ ಜ್ಞಾನವನ್ನು ಪಡೆದ ನಂತರ, ಆ ನಾಯಿಯು ನಂತರ ಶಿವನ ಭಾಗವೆಂದು ಪರಿಗಣಿಸಲ್ಪಟ್ಟ ಭಗವಾನ್ ಭೈರವನ ವಾಹನವಾಯಿತು. ಅದಕ್ಕಾಗಿಯೇ ಭೈರವನಿಗೆ ಕಪ್ಪು ನಾಯಿ ಕೂಡ ಇಷ್ಟ ಎಂದು ಹೇಳಲಾಗುತ್ತದೆ. ಅವುಗಳಿಗೆ ಸೇವೆ ಮತ್ತು ಆಹಾರವನ್ನು ನೀಡುವ ಮೂಲಕ ಭೈರವ ಬಾಬಾನು ಸಂತೋಷಪಡುತ್ತಾನೆ ಮತ್ತು ಆಶೀರ್ವಾದವನ್ನು ಕರುಣಿಸುತ್ತಾನೆ ಎನ್ನುವ ನಂಬಿಕೆಯಿದೆ.

ನಾಯಿಗೂ ದತ್ತಾತ್ರೇಯನಿಗೂ ವಿಶೇಷವಾದ ಸಂಬಂಧವಿದೆ. ಭಗವಾನ್ ದತ್ತಾತ್ರೇಯನೊಂದಿಗಿನ ಛಾಯಾಚಿತ್ರಗಳು ಮತ್ತು ಶಿಲ್ಪಗಳಲ್ಲಿ ನಾಲ್ಕು ನಾಯಿಗಳನ್ನು ತೋರಿಸಲಾಗಿದೆ. ಇವುಗಳು ನಾಯಿಗಳಲ್ಲ ಆದರೆ ನಾಲ್ಕು ವೇದಗಳು ಎಂದು ಶಾಸ್ತ್ರಗಳಲ್ಲಿ ವಿವರಿಸಲಾಗಿದೆ, ಆದ್ದರಿಂದ ದತ್ತಾತ್ರೇಯನು ಕಲಿಯುಗದಲ್ಲಿ ಯಾವಾಗಲೂ ಒಟ್ಟಿಗೆ ಇರುತ್ತಾನೆ ಏಕೆಂದರೆ ಭಗವಾನ್ ವಿಷ್ಣುವು ವೇದಗಳನ್ನು ರಕ್ಷಿಸುವುದಾಗಿ ಭರವಸೆ ನೀಡಿದ್ದನು. ಏಕೆಂದರೆ ಕಲಿಯುಗದಲ್ಲಿ ವೇದಗಳು ಕಣ್ಮರೆಯಾಗುವ ಭೀತಿ ಇತ್ತು.

ಆದರೂ ನಾಯಿಗಳು ಮನುಷ್ಯನಿಗಿಂತ ಏನೂ ಡೇಂಜರಸ್ ಅಲ್ಲ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ವಾಲ್ಮೀಕಿ ಮತ್ತು ವೇದವ್ಯಾಸರು

ಹಿಂದೂ ಋಷಿಗಳು ವಾಲ್ಮೀಕಿ ಮತ್ತು ವೇದವ್ಯಾಸರು

ವಿಷ್ಣು ವಾಹನ ಬಿಳಿ ಗರುಡ

ವಿಷ್ಣು ವಾಹನ ಬಿಳಿ ಗರುಡನ ವಿಶೇಷತೆ