in

ವಿಷ್ಣು ವಾಹನ ಬಿಳಿ ಗರುಡನ ವಿಶೇಷತೆ

ವಿಷ್ಣು ವಾಹನ ಬಿಳಿ ಗರುಡ
ವಿಷ್ಣು ವಾಹನ ಬಿಳಿ ಗರುಡ

ಬ್ರಾಹ್ಮಿನಿ ಕೈಟ್, ಬಿಳಿ ಗರುಡ, ಹಾಲಿಯಸ್ಟರ್‌ ಇಂಡಸ್‌ ಇದನ್ನು ಕೆಂಪು ಬೆನ್ನಿನ ಸಮುದ್ರ ಹದ್ದು ಎಂದೂ ಕರೆಯುತ್ತಾರೆ. ಇದೊಂದು ಮಧ್ಯಮ ಗಾತ್ರದ ಅಳಿವಿನಂಚಿನಲ್ಲಿರುವ ಪಕ್ಷಿಯಾಗಿದ್ದು ಆಕ್ಸಿಪಿಟ್ರಿಡೆ ಕುಟುಂಬಕ್ಕೆ ಸೇರಿದ ಇತರ ಪಕ್ಷಿ ರಣಹದ್ದು, ಕಡಲ ಡೆಗೆ, ಹ್ಯಾರಿಸ್‌ ಡೆಗೆ ಮುಂತಾದ ಪಕ್ಷಿಗಳ ಸಾಲಿನಲ್ಲಿ ಸೇರುತ್ತದೆ.

ಇವು ಪ್ರಮುಖವಾಗಿ ಭಾರತದ ಉಪಖಂಡಗಳಲ್ಲಿ, ಆಗ್ನೇಯ ಏಷ್ಯಾದಲ್ಲಿ ಮತ್ತು ಆಸ್ಟ್ರೇಲಿಯಾಗಳಲ್ಲಿ ಕಂಡುಬರುತ್ತವೆ. ಇವು ಹೆಚ್ಚಾಗಿ ಸತ್ತ ಮೀನುಗಳು ಮತ್ತು ಸುಲಭವಾಗಿ ಬೇಟೆ ಸಿಗುವ ಕರಾವಳಿ ಪ್ರದೇಶಗಳು ಮತ್ತು ಆರ್ದ್ರತೆ ಇರುವ ಒಳನಾಡುಗಳಲ್ಲಿ ಕಂಡುಬರುತ್ತವೆ. ಬೆಳೆದ ಹಕ್ಕಿಗಳು ಕೆಂಪು ಮಿಶ್ರಿತ ಕಂದುಬಣ್ಣದ ಗರಿಗಳನ್ನು ಹೊಂದಿರುತ್ತವೆ ಮತ್ತು ಅದಕ್ಕೆ ತದ್ವಿರುದ್ದವಾದ ಬಿಳಿಯ ತಲೆ ಮತ್ತು ಎದೆಯನ್ನು ಹೊಂದಿ ಇತರ ಬೇಟೆಯಾಡುವ ಪಕ್ಷಿಗಳಿಗಿಂತ ಬಿನ್ನವಾಗಿದೆ.

ಬಿಳಿ ಗರುಡ ಒಂದು ವಿಶಿಷ್ಟವಾದ ಮತ್ತು ತದ್ವಿರುದ್ದವಾದ ಬಣ್ಣಗಳನ್ನು ಹೊಂದಿದ, ಬಿಳಿಯಾದ ತಲೆ, ಎದೆ ಮತ್ತು ರೆಕ್ಕೆಯ ಮೊನೆಯಲ್ಲಿನ ಕಪ್ಪು ಬಣ್ಣವನ್ನು ಹೊರತುಪಡಿಸಿ ಕಡುಕೆಂಪು ಬಣ್ಣದ ಗರಿಗಳನ್ನು ಹೊಂದಿರುವ ಪಕ್ಷಿಯಾಗಿದೆ. ಎಳೆಯ ಮರಿಗಳು ಕಂದುಬಣ್ಣದಲ್ಲಿರುತ್ತವೆ ಆದರೆ ಏಷ್ಯಾದಿಂದ ವಲಸೆ ಬರುವ ಕಪ್ಪು ಹದ್ದುಗಳ ನಿಸ್ತೇಜ ವರ್ಣಕ್ಕಿಂತ ಇವು ಬೇರೆಯಾಗಿದ್ದು ಸರಳವಾಗಿ ಗುರುತಿಸಬಹುದಾಗಿದೆ ಮತ್ತು ಅವುಗಳು ಗಿಡ್ಡನೆಯ ರೆಕ್ಕೆಗಳು ಮತ್ತು ವರ್ತುಲಾಕಾರದ ಬಾಲವನ್ನು ಹೊಂದಿರುತ್ತವೆ. ಇವುಗಳ ಮಣಿಕಟ್ಟು ಮತ್ತು ರೆಕ್ಕೆಯ ಕೆಳಪದರದಲ್ಲಿ ಚೌಕಾಕಾರದ ಆಕಾರವಿದ್ದು ಬ್ಯುಟಿಯೋ ಡೆಗೆಗಳಿಗಿಂತ ಬಿನ್ನವಾಗಿವೆ.

ವಿಷ್ಣು ವಾಹನ ಬಿಳಿ ಗರುಡನ ವಿಶೇಷತೆ
ಬಿಳಿ ಗರುಡ

ಹಲಿಯಸ್ತೂರ್‌ನ ಕೊಕ್ಕು ಗೋಲಾಕಾರದ ಮೂಗಿನ ಹೊರಳೆಯನ್ನು ತೋರಿಸುತ್ತದೆ. ಬಿಳಿ ಗರುಡ ಸಾಮಾನ್ಯವಾಗಿ ಬ್ಲ್ಯಾಕ್‌ ಕೈಟ್‌ನಷ್ಟೇ ಆಕಾರವನ್ನು ಹೊಂದಿದ್ದು ಅಷ್ಟೇ ಒಂದು ಕೋನದಲ್ಲಿ ರೆಕ್ಕೆಗಳನ್ನು ಹೊಂದಿ ಹಾರಾಡುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಇವುಗಳ ಬಾಲವು ವೃತ್ತಾಕಾರದಲ್ಲಿದ್ದು ಮಿಲ್ವಸ್‌ ವರ್ಗಗಳಿಗಿಂತ ಬಿನ್ನವಾಗಿದೆ. ಹೋಲಿಕೆಯಲ್ಲಿ ಅತ್ಯಂತ ಸಾಮೀಪ್ಯವಿರುವ ರೆಡ್‌ ಕೈಟ್‌ ಮತ್ತು ಬ್ಲ್ಯಾಕ್‌ಕೈಟ್‌ಗಳ ಬಾಲವು ಸೀಳಿರುತ್ತವೆ. ಈ ಎರಡೂ ಪಂಗಡಗಳು ಹೆಚ್ಚು ಕಡಿಮೆ ಸಮಾನವಾಗಿವೆ. ಇದು ಕಿಂಯಾಂವ್ ಎಂದು ಕೂಗುತ್ತದೆ.

ಬಿಳಿ ಗರುಡ ಮೊದಲ ಬಾರಿಗೆ ಡಚ್‌ ಪರಿಸರವಾದಿಯಾದ ಪಿಟರ್‌ ಬೊಡ್ಡಾಯೆರ್ಟ್‌‌ ರಿಂದ ೧೭೮೩ರಲ್ಲಿ ವ್ಯಾಖ್ಯಾನಿಸಲ್ಪಟ್ಟಿತು.

ನಾಲ್ಕು ಉಪ ವರ್ಗಗಳು ಹೀಗಿವೆ :
*ಇಂಡಸ್‌ (ಬೊಡ್ಡೆಯೆರ್ಟ್‌, ೧೭೮೩) ಇವು ಉತ್ತರ ಏಷ್ಯಾಗಳಲ್ಲಿ ಕಂಡುಬರುತ್ತವೆ.
*ಪ್ಲೆವಿರೊಸ್ಟ್ರಿಸ್‌ (ಕೊಂನ್ಡೊನ್‌ & ಅಮಾಡೊನ್‌, ೧೯೫೪) ಇವು ಸೊಲೊಮನ್‌ ದ್ವೀಪಗಳಲ್ಲಿ ಕಂಡುಬರುತ್ತವೆ.
*ಗಿರೆನೆರಾ (ವೈಲಾಟ್‌, ೧೮೨೨) ಇವು ನ್ಯೂಗಿನಿಯಾ, ಬಿಸ್ಮಾರ್ಕ್‌ ಆರ್ಚಿಪೆಲಾಗೊ ಮತ್ತು ಆಸ್ಟ್ರೇಲಿಯಾಗಳಲ್ಲಿ ಕಂಡುಬರುತ್ತವೆ.
*ಇಂಟರ್‌ಮಿಡಿಸ್‌ ಬ್ಲೈತ್‌, ೧೮೬೫ ಇವು ಮಲೈ ಪೆನಿನ್‌ಸುಲಾ ಮತ್ತು ಸಂದಾಸ್‌ನ ಐಲ್ಯಾಂಡ್‌ಗಳಲ್ಲಿ, ಸುಲಾವೆಸಿ ಮತ್ತು ಫಿಲಿಫೈನ್ಸ್‌ಗಳಲ್ಲಿ ಕಂಡುಬರುತ್ತವೆ

ಇವುಗಳು ಸರ್ವೆಸಾಮಾನ್ಯವಾಗಿ ಶ್ರಿಲಂಕಾ, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಉತ್ತರಪೂರ್ವ ಏಷ್ಯಾ ದೇಶಗಳ ಆಕಾಶದಲ್ಲಿ ಕಾಣಸಿಗುವ ಪಕ್ಷಿಯಾಗಿದೆ. ನ್ಯೂ ಸೌತ್‌ ವಾಲೆಸ್‌ನ ಉತ್ತರ ಭಾಗದಲ್ಲಿ, ಆಸ್ಟ್ರೇಲಿಯಾಗಳಲ್ಲಿ ಹರಡಿಕೊಂಡು ವಾಸಮಾಡುತ್ತವೆ. ಅವು ಮಳೆಗಾಲಕ್ಕೆ ಅನುಗುಣವಾಗಿ ಅವುಗಳ ಪ್ರಾಂತ್ಯದೊಳಗೆ ಸ್ಥಳ ಬದಲಾವಣೆ ಮಾಡುತ್ತಿರುತ್ತವೆ. ಇವು ಸಾಮಾನ್ಯವಾಗಿ ಬರಿದಾದ ಆಗಸದಲ್ಲಿ ಕಾಣಸಿಗುತ್ತವೆ ಆದರೆ ಕೆಲವು ಬಾರಿ ಹಿಮಾಲಯದ ೫೦೦೦ ಅಡಿ ಎತ್ತರದ ಪ್ರದೇಶಗಳಲ್ಲಿ ಕೂಡ ಕಾಣಸಿಗುತ್ತವೆ.

ಉತ್ತರ ಏಷ್ಯಾಗಳಲ್ಲಿ ಸಂತಾನೋತ್ಪತ್ತಿಯ ಕಾಲವು ಡಿಸೆಂಬರ್‌ನಿಂದ ಏಪ್ರಿಲ್‌ನ ವರೆಗೆ ಆಗಿರುತ್ತದೆ. ಉತ್ತರ ಮತ್ತು ಪಶ್ಚಿಮ ಆಸ್ಟ್ರೇಲಿಯಾಗಳಲ್ಲಿ ಈ ಕಾಲವು ಅಗಸ್ಟ್‌ನಿಂದ ಅಕ್ಟೋಬರ್‌ ಆಗಿರುತ್ತದೆ. ಮತ್ತು ದಕ್ಷಿಣ ಮತ್ತು ಪೂರ್ವ ಆಸ್ಟ್ರೇಲಿಯಾದಲ್ಲಿ ಎಪ್ರಿಲ್‌ನಿಂದ ಜೂನ್‌ ಆಗಿರುತ್ತದೆ. ಇವುಗಳು ಗೂಡನ್ನು ಮರದ ಸಣ್ಣ ರೆಂಬೆಗಳು ಮತ್ತು ಚಿಕ್ಕ ಕೋಲುಗಳಿಂದ ಮಾಡಿದ್ದು ಎಲೆಗಳಿಂದ ಒಳಗಡೆ ವೃತ್ತಾಕಾರದಲ್ಲಿ ಹೆಣೆದಿರುತ್ತವೆ ಮತ್ತು ಇವುಗಳನ್ನು ಬೇರೆ ಬೇರೆ ಮರಗಳಲ್ಲಿ ಇಟ್ಟಿರುತ್ತವೆ ಆದರೆ ಕಂದಾಳ ಮರದಲ್ಲಿ ಹೆಚ್ಚಾಗಿ ಗೂಡು ಕಟ್ಟುವುದು ಕಂಡುಬರುತ್ತದೆ. ಅವುಗಳು ಪ್ರತೀ ವರ್ಷವೂ ನಿಷ್ಠೆಯಿಂದ ಒಂದೇ ಪ್ರದೇಶದಲ್ಲಿ ಗೂಡನ್ನು ಕಟ್ಟುವುದು ಕಂಡುಬರುತ್ತವೆ. ಕೆಲವು ಅಪರೂಪದ ಸಂದರ್ಭದಲ್ಲಿ ಮರದ ಕೆಳಗಿನ ಮಣ್ಣಿನಲ್ಲಿಯೂ ಗೂಡು ಕಟ್ಟುವುದು ಕಂಡುಬರುತ್ತದೆ. ಕಂದು ಬಿಳಿಯ ಅಥವಾ ಸ್ವಲ್ಪ ನೀಲಿ ಬಣ್ಣವನ್ನು ಹೋಲುವ ೫೨ x ೪೧ಮಿಮಿ ಗಾತ್ರದ ಗುಂಡನೆಯ ಎರಡು ಮೊಟ್ಟೆಗಳನ್ನು ಸಮನಾಗಿ ಜೋಡಿಸಿದಂತೆ ಗೂಡಿನಲ್ಲಿ ಇಡುತ್ತದೆ. ಎರಡೂ ಪಾಲಕ ಪಕ್ಷಿಗಳು ಗೂಡು ಕಟ್ಟುವಲ್ಲಿ ಕೆಲಸ ಮಾಡುತ್ತವೆ ಮತ್ತು ಮರಿಯನ್ನು ಬೆಳೆಸುವಲ್ಲಿಯೂ ಕೂಡ ಸಮನಾಗಿ ಕೆಲಸ ಮಾಡುತ್ತವೆ ಆದರೆ ಮೊಟ್ಟೆಗೆ ಕಾವು ಕೊಡುವಲ್ಲಿ ಹೆಣ್ಣು ಪಕ್ಷಿಯ ಪಾತ್ರವು ಪ್ರಮುಖವಾಗಿರುತ್ತದೆ. ಮೊಟ್ಟೆಗೆ ಕಾವು ಕೊಡುವ ಅವಧಿಯು ೨೬ ರಿಂದ ೨೭ ದಿನಗಳಾಗಿರುತ್ತವೆ.

ವಿಷ್ಣು ವಾಹನ ಬಿಳಿ ಗರುಡನ ವಿಶೇಷತೆ
ಸತ್ತ ಮೀನುಗಳು ಮತ್ತು ಏಡಿಗಳನ್ನು ತಂದು ಮರಿಗಳಿಗೆ ತಿನ್ನಿಸುತ್ತವೆ

ಇದೊಂದು ಮೂಲತಃ ಕೊಳೆತ ಮಾಂಸವನ್ನು ತಿನ್ನುವ ಪಕ್ಷಿಯಾಗಿದ್ದು ಮರಿಗಳನ್ನು ಬೆಳೆಸಲು ಆರ್ದ್ರ ಪ್ರದೇಶ ಮತ್ತು ಜವುಗು ಪ್ರದೇಶಗಳನ್ನು ಆಯ್ದು ಕೊಳ್ಳುತ್ತವೆ. ಸತ್ತ ಮೀನುಗಳು ಮತ್ತು ಏಡಿಗಳನ್ನು ತಂದು ಮರಿಗಳಿಗೆ ತಿನ್ನಿಸುತ್ತವೆ. ಮತ್ತು ಅಪರೂಪಕ್ಕೆ ಮೊಲಗಳನ್ನು ಮತ್ತು ಬಾವಲಿಗಳಂತಹ ಪ್ರಾಣಿಗಳನ್ನು ಬೇಟೆಯಾಡಿ ತರುತ್ತವೆ. ಮತ್ತು ಬೇರೆ ಪಕ್ಷಿಗಳ ಬೇಟೆಗಳನ್ನು ಕದ್ದು ತರುವ ಮೂಲಕವೂ ತನ್ನ ಆಹಾರದ ದಾಹವನ್ನು ತೀರಿಸಿಕೊಳ್ಳುತ್ತವೆ. ಅಪರೂಪದ ಪ್ರಸಂಗದಲ್ಲಿ ಆಪಿಸ್‌ ಫ್ಲೋರಿಯಾ ದಲ್ಲಿ ಜೇನುಗೂಡಿನಿಂದ ಜೇನು ತುಪ್ಪವನ್ನು ತಂದು ಮರಿಗಳನ್ನು ಬೆಳೆಸುವ ಉದಾಹರಣೆಗಳೂ ದೊರೆತಿವೆ.

ಇವು ಪ್ರಾಯ ಕಾಲದಲ್ಲಿ ಆಟವಾಡುವ ವರ್ತನೆಯನ್ನು ಹೊಂದಿದ್ದು ಮರದ ಎಲೆಗಳನ್ನು ಬೀಳಿಸಿ ಗಾಳಿಯಲ್ಲಿ ಹಿಡಿಯುವುದು ಮುಂತಾದವುಗಳನ್ನು ಮಾಡುತ್ತವೆ. ನೀರಿನಲ್ಲಿ ಮೀನಿನ ಬೇಟೆಯಾಡುವ ಸಂದರ್ಭಗಳಲ್ಲಿ ಅವು ಕೆಲವು ಕಾಲ ನೀರಿನ ಮೇಲೆ ಆರಾಮವಾಗಿ ಈಜುತ್ತಾ ನಿಲ್ಲಬಲ್ಲವುಗಳಾಗಿದ್ದು ಯಾವುದೇ ಪರಿಶ್ರಮವನ್ನು ತೆಗೆದುಕೊಳ್ಳುವುದಿಲ್ಲ.

ಅವುಗಳು ಬಹಳಷ್ಟು ಪಕ್ಷಿಗಳು ಒಂದೇ ಮರದ ಮೇಲೆ ಅಥವಾ ಅಕ್ಕಪಕ್ಕದಲ್ಲಿ ಕುಳಿತುಕೊಳ್ಳುವ ರೂಡಿಯನ್ನು ಹೊಂದಿದ್ದು ಒಂದೇ ಸ್ಥಳದಲ್ಲಿ ೬೦೦ರಷ್ಟು ಪಕ್ಷಿಗಳು ಕಂಡ ಉದಾಹರಣೆ ಇದೆ.

ಅಕ್ವಿಲಾ ಹದ್ದುಗಳಂತೆ ಇವು ಕೂಡ ಗುಂಪಾಗಿ ಬೇಟೆಯಾಡುವ ರೂಢಿಯನ್ನೂ ಹೊಂದಿವೆ. ಕೆಲವು ಸಂದರ್ಭಗಳಲ್ಲಿ ಬಿಳಿ ಗರುಡಗಳು ಗುಂಪುಗೂಡಿ ಏಷ್ಯಾದ ಹುಲ್ಲುಗಾವಲಿನ ಹದ್ದುಗಳ ಮೇಲೆ ದಾಳಿಮಾಡಿ ಅವುಗಳನ್ನು ಗಾಯಗೊಳಿಸುತ್ತವೆ ಅಥವಾ ಕೊಲ್ಲುವ ಸಂದರ್ಭಗಳೂ ಇವೆ.

ಬಹಳಷ್ಟು ಈ ಪಕ್ಷಿಗಳು ಕುರೋಡಿಯಾ ಪರಾವಲಂಬಿ ಪ್ರಧಾನ ಜಾತಿಯ ಉಪಜಾತಿಯವುಗಳಾಗಿವೆ, ಕೊಲ್ಪೊಸೆಫಾಲಮ್‌ ಮತ್ತು ಡಿಗಿರಿಯೆಲ್ಲಾ ಇವುಗಳನ್ನು ಸಹ ಈ ಗುಂಪಿನಲ್ಲಿ ಗುರುತಿಸಲಾಗಿದೆ.

ಇಂಡೋನೇಷಿಯಾದಲ್ಲಿ ಇವುಗಳನ್ನು ಇಲಾಂಗ್‌ ಬೊಂಡೊಲ್‌ ಎಂದು ಕರೆಯುತ್ತಾರೆ, ಬಿಳಿ ಗರುಡ ಜಕಾರ್ತಾದ ಅಧಿಕೃತ ಲಾಂಚನವಾಗಿದೆ. ಭಾರತದಲ್ಲಿ ಇದನ್ನು ವಿಷ್ಣುವಿನ ವಾಹನವಾದ ಗರುಡ ಪಕ್ಷಿಯ ಪ್ರತಿರೂಪವೆಂದು ನಂಬಲಾಗಿದೆ. ಮಲೇಷ್ಯಿಯಾದಲ್ಲಿ ಲಾಂಗ್‌ಕವಿ ಎಂಬ ಐಲ್ಯಾಂಡನ್ನು ಈ ಪಕ್ಷಿಯ ಹೆಸರಿನಿಂದಲೇ ಕರೆಯಲಾಗುತ್ತದೆ. ಕಿವಿ ಎಂದರೆ ಗಡಿಗೆಗಳಂತಹ ವಸ್ತುಗಳನ್ನು ಮಾಡಲು ಬಳಸುವ ಗಟ್ಟಿಯಾದ ಕಂದು ಬಣ್ಣದ ಜೆಡಿ ಮಣ್ಣು ಎಂಬ ಅರ್ಥವಾಗುತ್ತದೆ, ಮತ್ತು ಇದು ಈ ಪಕ್ಷಿಯ ಮೂಲ ಗರಿಗಳ ಬಣ್ಣವನ್ನು ಸೂಚಿಸುತ್ತದೆ.

ಮಧ್ಯ ಬೌಗಾನವಿಲ್ಲೆಯಲ್ಲಿನ ಕಟ್ಟು ಕಥೆಯೊಂದರ ಪ್ರಕಾರ ತಾಯಿಯೊಂದು ತೋಟದ ಕೆಲಸ ಮಾಡುವಾಗ ತನ್ನ ಮಗುವನ್ನು ಬಾಳೆ ಮರದ ಕೆಳಗೆ ಬಿಟ್ಟಿದ್ದಳಂತೆ, ಮತ್ತು ಆ ಮಗುವು ಕೂಗುತ್ತಾ ಆಕಾಶಕ್ಕೆ ನೆಗೆದು ಕಾನಾಂಗ್‌ ಆಗಿ ಪರಿವರ್ತನೆಯಾಯಿತಂತೆ ಆ ಪಕ್ಷಿಯೇ ಪಕ್ಷಿಗಳ ಜಗತ್ತಿನ ಕಂಠಹಾರದಂತೆ ಶೋಭಿಸುವ ಬಿಳಿ ಗರುಡ ಆಗಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಸಾಕು ಪ್ರಾಣಿ ನಾಯಿ

ಸಾಕು ಪ್ರಾಣಿ ನಾಯಿಯ ಬಗ್ಗೆ

ದ್ರೌಪದಿ ಮುರ್ಮ

ಭಾರತದ ಹೊಸತಾಗಿ ನೇಮಕಗೊಂಡ ದ್ರೌಪದಿ ಮುರ್ಮ