in

ಮದುವೆಯಲ್ಲಿ ಇಡುವ ಸಪ್ತಪದಿ ಅರ್ಥ ಹೀಗಿದೆ

ಸಪ್ತಪದಿ ಅರ್ಥ ಹೀಗಿದೆ
ಸಪ್ತಪದಿ ಅರ್ಥ ಹೀಗಿದೆ

ಸಪ್ತಪದಿ ಎಂದರೆ “ಏಳು ಮೆಟ್ಟಿಲುಗಳು”. ಮಂಗಳಸೂತ್ರವನ್ನು ಕಟ್ಟಿದ ನಂತರ , ನವವಿವಾಹಿತರು ಏಳು ಹೆಜ್ಜೆಗಳನ್ನು ಇಡುತ್ತಾರೆ, ಅದನ್ನು ಸಪ್ತಪದಿ ಎಂದು ಕರೆಯಲಾಗುತ್ತದೆ. ಏಳನೇ ಹಂತದ ನಂತರ, ದಂಪತಿಗಳು ಕಾನೂನುಬದ್ಧವಾಗಿ ಗಂಡ ಮತ್ತು ಹೆಂಡತಿಯಾಗುತ್ತಾರೆ.

ಹಿಂದೂ ವಿವಾಹಗಳಲ್ಲಿ ಆಚರಿಸಲಾಗುವ ಸಪ್ತಪದಿ ಸಂಪ್ರದಾಯಕ್ಕೆ ಅದರದ್ದೇ ಅರ್ಥವಿದೆ, ಅದರದ್ದೇ ಆದ ಮಹತ್ವವಿದೆ. ಹಿಂದೂ ವಿವಾಹಗಳಲ್ಲಿ ಸಪ್ತಪದಿಯನ್ನು ಯಾಕೆ ಮಾಡಲಾಗುತ್ತದೆ? ಸಪ್ತಪದಿಯಲ್ಲಿನ 7 ಹೆಜ್ಜೆಗಳ ಅರ್ಥವೇನು?

1961 ರಲ್ಲಿ, ಅಜೋಯ್ ಕರ್ ನಿರ್ದೇಶಿಸಿದ ಸಪ್ತಪದಿ ಎಂಬ ಬಂಗಾಳಿ ಚಲನಚಿತ್ರವು ಟಾಲಿವುಡ್‌ನಲ್ಲಿ ಬಿಡುಗಡೆಯಾಯಿತು. ಇದು ಸ್ವತಂತ್ರ ಪೂರ್ವ ಭಾರತದಲ್ಲಿ ಬಂಗಾಳದಲ್ಲಿ ಒಂದು ಟ್ವಿಸ್ಟ್ ಹೊಂದಿರುವ ಪ್ರೇಮಕಥೆಯಾಗಿದೆ; ಭಾರತೀಯ ಯುವ ವಿದ್ಯಾರ್ಥಿಗಳು ಶಿಕ್ಷಣವಾಗಲಿ ಅಥವಾ ಕ್ರೀಡೆಯಾಗಲಿ ಎಲ್ಲಾ ಕ್ಷೇತ್ರಗಳಲ್ಲಿ ಬ್ರಿಟಿಷ್ ‘ಗೋರಾ’ಗಳೊಂದಿಗೆ ಸಮಾನವಾಗಿ ಸ್ಪರ್ಧಿಸುತ್ತಿದ್ದ ಸಮಯ.

1981 ರಲ್ಲಿ ಕಾಸಿನಾಥನಿ ವಿಶ್ವನಾಥ್ ನಿರ್ದೇಶಿಸಿದ ಸಪ್ತಪದಿ ಎಂಬ ತೆಲುಗು ಚಲನಚಿತ್ರ ಬಿಡುಗಡೆಯಾಯಿತು ; ಈ ಚಿತ್ರವು ಭಾರತೀಯ ಚಲನಚಿತ್ರಗಳಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಹಿಂದೂ ವಿವಾಹಗಳಲ್ಲಿ ವಧು – ವರರು ಕೈ ಹಿಡಿದು ಅಗ್ನಿ ಕುಂಡಕ್ಕೆ 7 ಸುತ್ತು ಬರುವ ಆಚರಣೆಯು ವಧು – ವರರ ವೈವಾಹಿಕ ಜೀವನದ ಆರಂಭವನ್ನು ಸೂಚಿಸುತ್ತದೆ. ಈ 7 ಹೆಜ್ಜೆಗಳಲ್ಲಿ ಪ್ರತಿಯೊಂದು ಹೆಜ್ಜೆಯು ತನ್ನದೇ ಆದ ಮಹತ್ವವನ್ನು ಹೊಂದಿದೆ. ವಧು – ವರರು ಜೊತೆಯಾಗಿ ಇಡುವ 7 ಹೆಜ್ಜೆಗಳನ್ನು ಸಪ್ತಪದಿ ಎನ್ನಲಾಗುತ್ತದೆ. ಏಳು ಹೆಜ್ಜೆಗಳು ಏಳು ಪ್ರತಿಜ್ಞೆಯನ್ನು ಸೂಚಿಸುತ್ತದೆ. ಎಷ್ಟೇ ಕಠಿಣ ಸಂದರ್ಭದಲ್ಲೂ ಜೊತೆಯಾಗಿ ಹೆಜ್ಜೆಯಿಡುವೆ ಎನ್ನುವುದನ್ನು ಸೂಚಿಸುತ್ತದೆ. ಏಳೇಳು ಜನ್ಮದಲ್ಲೂ ನಿನ್ನ ಜೊತೆಯಾಗಿರುವ ಎನ್ನುವುದನ್ನು ಸಂಕೇತಿಸುತ್ತದೆ.

ಮೊದಲ ಹೆಜ್ಜೆ

ಸಪ್ತಪದಿಯ ಮೊದಲ ಹೆಜ್ಜೆಯು ಬಹಳ ಪ್ರಮುಖವಾದ ಸಂದೇಶವನ್ನು ನೀಡುತ್ತದೆ. ಸಪ್ತಪದಿಯ ಮೊದಲ ಹೆಜ್ಜೆಯಲ್ಲಿ ವರನು ವಧುವಿಗೆ ನಿನ್ನೆಲ್ಲಾ ನೋವಿನಲ್ಲೂ, ನಗುವಿನಲ್ಲೂ ನಿನ್ನೊಂದಿಗಿರುವೆ ಎನ್ನುವ ಪ್ರತಿಜ್ಞೆಯನ್ನು ಮಾಡುತ್ತಾನೆ. ತನ್ನ ಹೆಂಡತಿ ಮತ್ತು ಮಕ್ಕಳಿಗೆ ಸಂತೋಷವನ್ನು ನೀಡುತ್ತೇನೆ, ಅವರ ಅಭಿವೃದ್ಧಿಯನ್ನು ಬಯಸುತ್ತೇನೆಂದು ಪ್ರತಿಜ್ಞೆಯನ್ನು ಮಾಡುತ್ತಾನೆ. ಹಾಗೇ ವಧು ಕೂಡ ವರನಿಗೆ ಕುಟುಂಬದವರನ್ನು ನೋಡಿಕೊಳ್ಳುವ ಜವಬ್ಧಾರಿ ನನ್ನದು ಎಂದು ಭರವಸೆಯನ್ನು ನೀಡುತ್ತಾಳೆ. ದಾಂಪತ್ಯ ಜೀವನದಲ್ಲಿ ಎದುರಿಸುವಂತಹ ಯಾವುದೇ ಸಮಸ್ಯೆಗಳನ್ನು ಪರಸ್ಪರರು ಹೊಂದಾಣಿಕೆ ಮಾಡಿಕೊಂಡು ನಿಭಾಯಿಸುತ್ತೇವೆ ಎಂದು ಶಪಥ ಮಾಡಿಕೊಳ್ಳುತ್ತಾರೆ. ವರನು ವಧುವಿನಿಂದ ಆಹಾರವನ್ನು ಪಡೆಯುವ ಬೇಡಿಕೆಯನ್ನು ಇಟ್ಟರೆ ವಧು ತನ್ನ ಹಾಗೂ ತಮ್ಮ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿ ಪಡೆದುಕೊಳ್ಳಬೇಕೆಂಬ ಆಶ್ವಾಸನೆಯನ್ನು ಪಡೆಯುತ್ತಾಳೆ. ಇಲ್ಲಿ ವಧುವು ಅನ್ನಪೂರ್ಣೆ ಹಾಗೂ ವರನು ಯಜ್ಞೇಶ್ವರನು.

ಮದುವೆಯಲ್ಲಿ ಇಡುವ ಸಪ್ತಪದಿ ಅರ್ಥ ಹೀಗಿದೆ
ಗಂಡು ತನ್ನ ಸಂಗಾತಿಗೆ ಸಪ್ತಪದಿ ತುಳಿಸುವ ಕ್ರಮ

ಎರಡನೇ ಹೆಜ್ಜೆ

ಸಪ್ತಪದಿಯ ಎರಡನೇ ಹೆಜ್ಜೆಯಲ್ಲಿ ವರನು ತನ್ನ ವಧುವಿಗೆ ಜೀವನದಲ್ಲಿ ನಂಬಿಕೆಗೆ ಅರ್ಹನಾಗಿ, ನಿಷ್ಠಾವಂತನಾಗಿ ಇರುತ್ತೇನೆ ಎನ್ನುವ ಭರವಸೆಯನ್ನು ನೀಡುತ್ತಾನೆ. ಹೆಂಡತಿಯ ಸಂತೋಷ ಮತ್ತು ದುಃಖ ಈ ಎರಡರಲ್ಲೂ ನಿನ್ನ ಬೆನ್ನೆಲುಬಾಗಿ ಇರುತ್ತೇನೆಂದು ಹೇಳುತ್ತಾನೆ. ಸುಖ ಜೀವನ ಹಾಗೂ ಮಗುವನ್ನು ಪಡೆಯಬೇಕೆಂದು ವಧುವಿನಿಂದ ವರನು ಮಾತನ್ನು ಪಡೆದುಕೊಳ್ಳುತ್ತಾನೆ. ಈ ಮಾತನ್ನು ಸಂತೋಷದಿಂದ ಒಪ್ಪಿಕೊಳ್ಳುವ ವಧು, ವರನಿಂದ ಕೇವಲ ಪ್ರೀತಿಯನ್ನು ಬಯಸುತ್ತಾಳೆ. ಇಲ್ಲಿ ವಧುವರರು ರತಿಮನ್ಮಥರಾಗುತ್ತಾರೆ. ವರನು ವಧುವಿನ ಕುಟುಂಬಕ್ಕೆ ಮಾನಸಿಕ, ದೈಹಿಕ ಮತ್ತು ಆರ್ಥಿಕ ಸ್ಥಿರತೆಯನ್ನು ಹಾಗೂ ಸುರಕ್ಷತೆಯನ್ನು ನೀಡುತ್ತೇನೆಂದು ಭರವಸೆಯನ್ನು ನಿಡುತ್ತಾನೆ. ವಧು ತನ್ನ ಎರಡನೇ ಹೆಜ್ಜೆಯಲ್ಲಿ ವರನೊಂದಿಗೆ ತನ್ನೆಲ್ಲಾ ಜವಬ್ದಾರಿಗಳನ್ನು ಹಂಚಿಕೊಳ್ಳುತ್ತೇನೆ ಮತ್ತು ಪ್ರತಿಯೊಂದು ಸಂದರ್ಭದಲ್ಲೂ ಅವನೊಂದಿಗೆ ಇರುತ್ತೇನೆಂಬ ಪ್ರತಿಜ್ಞೆಯನ್ನು ಮಾಡುತ್ತಾಳೆ.

ಮೂರನೇ ಹೆಜ್ಜೆ

ಸಪ್ತಪದಿಯ ಮೂರನೇ ಹೆಜ್ಜೆಯಲ್ಲಿ ವಧು ತನ್ನ ಪತ್ನಿಗೆ ತಾನು ಕಷ್ಟಪಟ್ಟು ಕೆಲಸವನ್ನು ಮಾಡುತ್ತೇನೆ. ಹಾಗೂ ಮನೆಯಲ್ಲಿ ಸಿರಿ, ಸಂಪತ್ತು, ಸಮೃದ್ಧಿಯನ್ನು ತರಲು, ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಲು ತನ್ನ ಕೈಲಾದ ಪ್ರಯತ್ನವನ್ನು ಮಾಡುತ್ತೇನೆಂದು ಭರವಸೆಯನ್ನು ನೀಡುತ್ತಾನೆ. ವಧು ತನ್ನ ಮೂರನೇ ಹೆಜ್ಜೆಯಲ್ಲಿ ತಾನು ತನ್ನ ಗಂಡನಿಗೆ ನಿಷ್ಠಳಾಗುರುತ್ತೇನೆಂದು ಹೇಳುತ್ತಾಳೆ. ಪತಿ ಕಷ್ಟ ಪಟ್ಟು ಸಂಪಾದಿಸಿದ ಸಂಪತ್ತನ್ನು ಜವಾಬ್ದಾರಿಯಿಂದ ನೋಡಿಕೊಳ್ಳುತ್ತೇನೆಂಬ ಭರವಸೆಯನ್ನು ನೀಡುತ್ತಾಳೆ. ಜತೆಯಾಗಿರಲು ಮತ್ತು ಬೆಳೆಯಲು ಒಳ್ಳೆಯ ಸಂಪತ್ತು ಮತ್ತು ಶಕ್ತಿ ಕೊಡು ಎಂದು ದೇವರಲ್ಲಿ ಪ್ರಾರ್ಥಿಸಲಾಗುತ್ತದೆ. ಪರಪುರುಷನು ತನ್ನ ಗಂಡನಿಗೆ ದ್ವೀತಿಯನೆಂದು ವಧು ಪ್ರತಿಜ್ಞೆ ಮಾಡುತ್ತಾಳೆ. ಹಾಗೇ ಪರನಾರಿಯು ತನಗೆ ಸಹೋದರಿಯ ಸಮಾನ ಎಂದು ವರನು ಶಪಥ ಮಾಡುತ್ತಾನೆ. ಇಲ್ಲಿ ವಧುವರರು ಲಕ್ಷ್ಮಿನಾರಾಯಣರಾಗುತ್ತಾರೆ.

ನಾಲ್ಕನೇ ಹೆಜ್ಜೆ

ಸಪ್ತಪದಿಯ ನಾಲ್ಕನೇ ಹೆಜ್ಜೆಯಲ್ಲಿ ವರನು ವಧುವಿಗೆ ತನ್ನ ಜೀವನವನ್ನು ಸುಂದರಗೊಳಿಸಿದ್ದಕ್ಕೆ ಹಾಗೂ ಪರಿಪೂರ್ಣಗೊಳಿಸಿದ್ದಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತಾನೆ. ತಮ್ಮ ಪ್ರೀತಿ ಹೆಚ್ಚಾಗುತ್ತಾ ಇರಲಿ ಮತ್ತು ಗೌರವವು ಸ್ಥಿರವಾಗಿರಲಿ ಎಂದು ನಾಲ್ಕನೇ ಸುತ್ತಿನಲ್ಲಿ ವಧು ಹಾಗೂ ವರ ಬೇಡಿಕೊಳ್ಳುವರು. ದಂಪತಿ ತಮ್ಮ ಸಾಮಾಜಿಕ ಜವಾಬ್ದಾರಿ ಮತ್ತು ಪ್ರತಿಯೊಬ್ಬರ ಕುಟುಂಬದ ಜವಾಬ್ದಾರಿ ತೆಗೆದುಕೊಳ್ಳುವ ಬಗ್ಗೆ ತಿಳಿದುಕೊಳ್ಳುವರು. ಇಲ್ಲಿ ವಧುವರರು ಸರಸ್ವತೀ- ಬ್ರಹ್ಮರಾಗುವರು. ವರನು ಪತ್ನಿಗೆ ತನ್ನ ಎರಡೂ ಕುಟುಂಬವನ್ನು ಅಂದರೆ ತನ್ನ ಕುಟುಂಬವನ್ನು ಹಾಗೂ ವಧುವಿನ ಕುಟುಂಬವನ್ನು ಗೌರವಿಸುವುದಾಗಿ ಮತ್ತು ಅವರ ಎಲ್ಲಾ ಆಸೆಗಳನ್ನು ಪೂರೈಸುವುದಾಗಿ ಹಾಗೂ ತಾನು ತೆಗೆದುಕೊಳ್ಳುವ ಪ್ರಮುಖ ನಿರ್ಧಾರಗಳಲ್ಲಿ ಅವರನ್ನೂ ಕೂಡ ಸೇರಿಸಿಕೊಳ್ಳುವುದಾಗಿ ಮಾತನ್ನು ನೀಡುತ್ತಾನೆ. ವಧು ತನ್ನ ನಾಲ್ಕನೇ ಹೆಜ್ಜೆಯಲ್ಲಿ ತನ್ನ ಪತಿಯ ಎಲ್ಲಾ ನಿರ್ಧಾರಗಳಲ್ಲೂ ಕೈಜೋಡಿಸುವುದಾಗಿ ಪ್ರತಿಜ್ಞೆಯನ್ನು ನೀಡುತ್ತಾಳೆ.

ಮದುವೆಯಲ್ಲಿ ಇಡುವ ಸಪ್ತಪದಿ ಅರ್ಥ ಹೀಗಿದೆ
ದಂಪತಿಗಳಿಬ್ಬರು ಜೊತೆಯಾಗಿ

ಐದನೇ ಹೆಜ್ಜೆ

ಸಪ್ತಪದಿಯ ಐದನೇ ಹೆಜ್ಜೆಯಲ್ಲಿ ದಂಪತಿಗಳು ಪರಸ್ಪರ ಜೊತೆಯಾಗಿಯೇ ಇರುತ್ತೇವೆ ಮತ್ತು ತಮ್ಮ ಸಂತೋಷ, ದುಃಖಗಳನ್ನು ಇಬ್ಬರೂ ಪರಸ್ಪರ ಹಂಚಿಕೊಳ್ಳುತ್ತೇವೆಂದು ಭರವಸೆಯನ್ನು ನೀಡುತ್ತಾರೆ. ಹಾಗೂ ಅವರಿಬ್ಬರೂ ಜೊತೆಯಾಗಿ ಆರೋಗ್ಯಕರ ಮಕ್ಕಳನ್ನು ಆಶೀರ್ವದಿಸುವಂತೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಕರುಣಿಸುವಂತೆ ದೇವರನ್ನು ಪ್ರಾರ್ಥಿಸುತ್ತಾರೆ.

ಆರನೇ ಹೆಜ್ಜೆ

ಸಪ್ತಪದಿಯ ಆರನೇ ಹೆಜ್ಜೆಯಲ್ಲಿ ದಂಪತಿಗಳಿಬ್ಬರು ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ, ಗೌರವಿಸುತ್ತೇವೆ, ಎಷ್ಟೇ ಕಠಿಣ ಸಂದರ್ಭದಲ್ಲೂ ಜೊತೆಯಾಗಿ ನಿಲ್ಲುತ್ತೇವೆಂದು ಹೇಳುತ್ತಾರೆ. ಸಂತೋಷಕರ ಜೀವನಕ್ಕಾಗಿ ದೇವರನ್ನು ಜೊತೆಯಾಗಿ ಪ್ರಾರ್ಥಿಸುತ್ತಾರೆ. ಎಲ್ಲಾ ಜವಬ್ದಾರಿಗಳನ್ನು, ಎಲ್ಲಾ ಕರ್ತವ್ಯಗಳನ್ನು ಜೊತೆಯಾಗಿ ನಿಭಾಯಿಸುತ್ತೇವೆಂದು ಹೇಳುತ್ತಾರೆ. ವಧು ಹಾಗೂ ವರ ಆರೋಗ್ಯಕರ ಮತ್ತು ಕಾಯಿಲೆ ಮುಕ್ತ ಜೀವನ ಸಿಗಲಿ ಎಂದು ಬೇಡುತ್ತಾರೆ. ಜೀವನ ಸುಖಮಯವಾಗಲು ಪರಸ್ಪರರ ನೋವು ಹಾಗೂ ನಲಿವನ್ನು ಹಂಚಿಕೊಳ್ಳುವುದಾಗಿ ಮಾತು ಕೊಡುತ್ತಾರೆ.

ಏಳನೇ ಹೆಜ್ಜೆ

ಮದುವೆಯಲ್ಲಿ ಇಡುವ ಸಪ್ತಪದಿ ಅರ್ಥ ಹೀಗಿದೆ
ಸಪ್ತಪದಿ

ಸಪ್ತಪದಿಯ ಏಳನೇ ಹಾಗೂ ಕೊನೆಯ ಹೆಜ್ಜೆಯಲ್ಲಿ ವಧು – ವರರಿಬ್ಬರೂ ಈ ಮೇಲಿನ ಎಲ್ಲಾ 6 ಪ್ರತಿಜ್ಞೆಯನ್ನು ಚಾಚು ತಪ್ಪದೇ ಪಾಲಿಸುತ್ತೇವೆಂದು ಭರವಸೆಯನ್ನು ನೀಡುತ್ತಾರೆ. ಏಳನೇ ಸುತ್ತು ಅವರಿಬ್ಬರು ಪವಿತ್ರ ಬಂಧನದಲ್ಲಿರುವುದನ್ನು ತಿಳಿಸುವುದು. ಜೀವನದ ಅಂತ್ಯದ ತನಕ ಅವರಿಬ್ಬರು ಜತೆಯಾಗಿರುವರು ಎಂದು ಈ ಸುತ್ತು ಹೇಳುತ್ತದೆ. ದಂಪತಿ ಪರಸ್ಪರರನ್ನು ಗೌರವಿಸುವರು ಮತ್ತು ಪೋಷಿಸುವರು. ತಮ್ಮ ಪ್ರೀತಿಯು ಸಮಯಕ್ಕೆ ತಕ್ಕಂತೆ ಪ್ರೌಢವಾಗಲಿ ಎಂದು ಬೇಡಿಕೊಳ್ಳುವರು. ಸದ್ಗುಣ ಹಾಗು ವಿಧೇಯಕವಾಗಿರುವ ಮಕ್ಕಳು ತಮಗೆ ಹುಟ್ಟಲಿ ಎಂದು ಐದನೇ ಸುತ್ತಿನಲ್ಲಿ ಬೇಡಿಕೊಳ್ಳಲಾಗುತ್ತದೆ. ಮಕ್ಕಳಿಂದ ಜೀವನವು ಯಾವಾಗಲೂ ಸಂತೋಷಮಯವಾಗಿರಲಿ ಹಾಗೂ ತಾವು ಏಕಾಂಗಿಗಳು ಎನ್ನುವ ಭಾವನೆ ತಮಗೆ ಮೂಡದಿರಲಿ ಎನ್ನುವುದು ಇದರರ್ಥ. ಇಲ್ಲಿ ವಧೂವರರು ಶಚಿ ಹಾಗೂ ಇಂದ್ರರಾಗುವರು. ನಮ್ಮ ಎರಡೂ ಕುಟುಂಬಗಳನ್ನು ಒಂದೇ ಎನ್ನುವ ಭಾವನೆಯನ್ನು ಹೊಂದುತ್ತೇವೆಂದು ಹೇಳುತ್ತಾರೆ. ಜೀವನದಲ್ಲಿ ಒಬ್ಬರನ್ನೊಬ್ಬರು ಎಂತಹುದೇ ಪರಿಸ್ಥಿತಿಯಲ್ಲಿ ಬಿಟ್ಟುಕೊಡಲಾರೆವು ಎಂದು ಭರವಸೆಯನ್ನು ನೀಡುತ್ತಾರೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಎಸ್.ನಿಜಲಿಂಗಪ್ಪ

ಕರ್ನಾಟಕದ ಮೊದಲ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಜನ್ಮದಿನ

ಚೆಸ್ ಆಟಗಾರ ವಿಶ್ವನಾಥನ್ ಹುಟ್ಟಿದ ದಿನ

ಭಾರತೀಯ ಚೆಸ್ ಆಟಗಾರ ವಿಶ್ವನಾಥನ್ ಹುಟ್ಟಿದ ದಿನ