ರಾಮಾಯಣದಲ್ಲಿ ರಾಮನ ಪಾತ್ರದಷ್ಟೇ ಪ್ರಮುಖವಾದುದ್ದು ಲಕ್ಷ್ಮಣನ ಪಾತ್ರ. ರಾಮ ವಿಷ್ಣುವಿನ ಅವತಾರವಾದರೆ ಲಕ್ಷ್ಮಣ ಆದಿಶೇಷನ ಅವತಾರ.
ರಾಮಾಯಣದಲ್ಲಿ ರಾಮನ ಪಾತ್ರವೇ ಪ್ರಮುಖವಾದುದ್ದೆಂದು ಹೇಳಲಾಗುತ್ತದೆ. ಆದರೆ ಲಕ್ಷ್ಮಣನೂ ಕೂಡ ರಾಮಾಯಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾನೆ. ಲಕ್ಷ್ಮಣನೆಂಬ ಶಬ್ಧವು ರಾಮನಿಂದ ಬೇರ್ಪಡಿಸಲಾಗದ ಬಾಂಧವ್ಯ. ಲಕ್ಷ್ಮಣನ ನಿಷ್ಠೆ, ಪ್ರಾಮಾಣಿಕತೆ ಮತ್ತು ಆತನ ಮಧುರ ಬಾಂಧವ್ಯ ರಾಮಾಯಣದಲ್ಲಿ ಬೇರಾರಲ್ಲೂ ಕಾಣಲು ಸಾಧ್ಯವಿಲ್ಲ. ರಾಮಾಯಣದಲ್ಲಿ ಹನುಮನ ಪಾತ್ರ ಎಷ್ಟು ಮುಖ್ಯವೋ ಅಷ್ಟೇ ಲಕ್ಷ್ಮಣನ ಪಾತ್ರ ಕೂಡ ಮುಖ್ಯವಾಗಿದೆ.
ಲಕ್ಷ್ಮಣನನ್ನು ಶೇಷನಾಗನ ಅವತಾರವೆಂದು ಪರಿಗಣಿಸಲಾಗುತ್ತದೆ. ವಿಷ್ಣು ಕ್ಷೀರಸಾಗರದಲ್ಲಿ ವಿಶ್ರಮಿಸುವುದು ಕೂಡ ಇದೇ ಶೇಷನಾಗನ ಮೇಲೆ. ಅಷ್ಟು ಮಾತ್ರವಲ್ಲ, ಇಡೀ ಬ್ರಹ್ಮಾಂಡವನ್ನೇ ತನ್ನ ಹೆಡೆಯ ಮೇಲಿಟ್ಟುಕೊಂಡವನೂ ಇವನೇ. ಶೇಷನಾಗನನ್ನು ಸರ್ಪಗಳ ರಾಜನೆಂದು ಹೇಳಲಾಗುತ್ತದೆ. ಭಗವಾನ್ ವಿಷ್ಣು ರಾಮನಾಗಿ ಭೂಮಿಯಲ್ಲಿ ಅವತರಿಸಿದಾಗ ತನ್ನ ಪ್ರಭು ವಿಷ್ಣುವನ್ನು ಅನುಸರಿಸಿಕೊಂಡು ಲಕ್ಷ್ಮಣನ ಅವತಾರದಲ್ಲಿ ಭೂಮಿಗೆ ಕಾಲಿಟ್ಟವನು ಶೇಷನಾಗ. ಮಿಥಿಲಾಳನ್ನು ಕೊಲ್ಲಲು ಬಂದ ರಾವಣನ ಸರ್ಪವು ಲಕ್ಷ್ಮಣನನ್ನು ಕಂಡು ಓಡಿ ಹೋಗಿದ್ದೂ ಕೂಡ ಲಕ್ಷ್ಮಣ ದೈತ್ಯ ಸರ್ಪವೆಂಬ ಕಾರಣಕ್ಕೆ ಎನ್ನಲಾಗಿದೆ.
ರಾಮನು ವನವಾಸಕ್ಕೆ ತೆರಳುವುದು ನಿಶ್ಚಯವಾದಾಗ ರಾಮನು ತನ್ನ ಪತ್ನಿಯ ಬಳಿ ರಾಜ್ಯದಲ್ಲೇ ಇರುವಂತೆ ಹೇಳುತ್ತಾನೆ ಆದರೆ ಸೀತಾದೇವಿಯು ಇದಕ್ಕೆ ಒಪ್ಪುವುದಿಲ್ಲ. ಆದರೆ ರಾಮನು ಲಕ್ಷ್ಮಣನ ಬಳಿ ರಾಜ್ಯದಲ್ಲಿ ಇರುವಂತೆ ಹೇಳುವುದಿಲ್ಲ. ಯಾಕೆಂದರೆ ರಾಮನಿಗೆ ತಾನು ಎಲ್ಲಿ ಹೋದರೂ ಲಕ್ಷ್ಮಣನು ತನ್ನನ್ನು ಹಿಂಬಾಲಿಸುತ್ತಾನೆಂಬುದೂ ತಿಳಿದಿತ್ತು. ಲಕ್ಷ್ಮಣನಿಗೆ ರಾಮನನ್ನು ಹೊರತುಪಡಿಸಿ ಬೇರೆ ಪ್ರಪಂಚವೇ ಇರಲಿಲ್ಲ.
ಅಣ್ಣ ರಾಮನ ಬಗ್ಗೆ ಆತನಿಗೆ ಅಪರಿಮಿತವಾದ ಭಕ್ತಿಭಾವ. ರಾಮ ಸೀತೆಯನ್ನು ಮದುವೆಯಾದಾಗ, ಆಕೆಯ ಸಹೋದರಿ ಎನಿಸಿಕೊಂಡಿದ್ದ ಊರ್ಮಿಳಳನ್ನು ಲಕ್ಷ್ಮಣ ವಿವಾಹವಾಗಿದ್ದ. ರಾಮ ಕಾಡಿಗೆ ಹೋಗಲು ಹೊರಟು ನಿಂತಾಗ ಲಕ್ಷ್ಮಣ ಕೂಡಾ ತನ್ನ ಪತ್ನಿ ಊರ್ಮಿಳಾಳನ್ನು ಬಿಟ್ಟು ರಾಮನ ಜೊತೆ ವನವಾಸಕ್ಕೆ ತೆರಳಿದ್ದ. ಕಾಡಿಗೆ ಹೋದ ಮೊದಲನೇ ದಿನ ಶ್ರೀ ರಾಮ ಮತ್ತು ಸೀತೆಗಾಗಿ ಲಕ್ಷ್ಮಣ ತನ್ನ ಕೈಯಾರೆ ಗುಡಿಸಲನ್ನು ನಿರ್ಮಾಣ ಮಾಡುತ್ತಾನೆ.. ಆ ಗುಡಿಸಿಲಲ್ಲಿ ಶ್ರೀ ರಾಮ ಮತ್ತು ಸೀತೆ ವಿಶ್ರಾಂತಿ ಪಡೆಯುತ್ತಾರೆ.. ಗುಡಿಸಿಲಿನ ಹೊರಗಡೆ ನಿಂತು ಲಕ್ಷ್ಮಣ ತನ್ನ ಅಣ್ಣ ಅತ್ತಿಗೆ ರಕ್ಷಣೆಯಾಗಿ ನೀಡುತ್ತಿದ್ದನು..
ಲಕ್ಷ್ಮಣನಿಗೆ ರಾಮನ ಮೇಲೆ ಎಲ್ಲಿಲ್ಲದ ಪ್ರೀತಿ, ಗೌರವವಿತ್ತು. ಲಕ್ಷ್ಮಣನು ತನಗಾಗಿ ಬದುಕುವುದಕ್ಕಿಂತ ರಾಮನ ಸೇವೆಗಾಗಿ ಬದುಕುತ್ತಿದ್ದನು. ರಾಮನಿಗೂ ಕೂಡ ಲಕ್ಷ್ಮಣನೆಂದರೆ ಅಷ್ಟೇ ಪ್ರೀತಿಯಿತ್ತು. ಒಮ್ಮೆ ಯುದ್ಧಭೂಮಿಯಲ್ಲಿ ಲಕ್ಷ್ಮಣ ಗಾಯಗೊಂಡು, ಬಹುತೇಕ ಜನರು ಮರಣಹೊಂದುತ್ತಾರೆ. ಲಕ್ಷ್ಮಣನಿಗಾದ ಗಾಯವನ್ನು ಕಂಡು ರಾಮನು ಅಳುತ್ತಾ ನಾನು ಸಿರಿ, ಸಂಪತ್ತಿಲ್ಲದೇ, ಅಯೋಧ್ಯೆಯಿಲ್ಲದೇ, ಸೀತೆಯಿಲ್ಲದೇ ಬೇಕಾದರೂ ಬದುಕುತ್ತೇನೆ ಆದರೆ ನೀನಿಲ್ಲದೇ ನಾನು ಬದುಕಲು ಸಾಧ್ಯವಿಲ್ಲವೆಂದು ರಾಮನು ಗೋಗರೆಯುತ್ತಾನೆ.
ರಾವಣನ ಮಗ ಮೇಘನಾದ ಅತ್ಯಂತ ಶಕ್ತಿಶಾಲಿ ಮತ್ತು ಪ್ರಭಲನಾಗಿದ್ದನು. ಯಾವುದೇ ತರದ ಯುದ್ಧದಲ್ಲಿಯೂ ಸಹ ಯಾರು ಕೂಡ ಅವನನ್ನು ಸೋಲಿಸಲು ಆಗುತ್ತಿರಲಿಲ್ಲ. ಆದರೆ ಲಕ್ಷ್ಮಣ ಒಬ್ಬನಿಂದ ಮಾತ್ರ ಈ ಕೆಲಸ ಸಾಧ್ಯವಾಯಿತು ಯಾಕೆಂದರೆ ಅವನಿಗೆ 14 ವರ್ಷಗಳ ನಿದ್ರೆಯಿಲ್ಲದ್ದಿದ್ದರಿಂದ, ಇದೇ ಕಾರಣದಿಂದಾಗಿಯೇ ಸುಲಭವಾಗಿ ಅಜೇಯನಾದ ಮೇಘನಾದಾನನ್ನು ಸೋಲಿಸಿ ಒಡೆದು ಉರುಳಿಸಿದನು ಕೊನೆಗೆ ಲಕ್ಷ್ಮಣನ ಕೈಯಿಂದಲೇ ಹತನಾದನು.ಇದ್ಯಾವುದೂ ಕೂಡ ಅಷ್ಟು ಸುಲಭವಾಗಿರಲಿಲ್ಲ ಇದೆಲ್ಲವೂ ಆಗಿದ್ದು ಊರ್ಮಿಳೆಯ ಸಹಾಯದಿಂದಲೇ.
ರಾಮನು ಲಕ್ಷ್ಮಣನಿಗಿಂತ ದೊಡ್ಡವನಾಗಿದ್ದಾಗ ರಾಮನು ಲಕ್ಷ್ಮಣನಿಗೆ ಕೆಲವೊಂದು ವಿಷಯದಲ್ಲಿ ಆಜ್ಞೆಯನ್ನು ನೀಡುತ್ತಿದ್ದನು ಆಗ ಲಕ್ಷ್ಮಣನಿಗೂ ಕೂಡ ನಾನು ಅಣ್ಣನಾಗಬೇಕೆಂಬ ಆಸೆಯಾಗುತ್ತದೆ. ಲಕ್ಷ್ಮಣನ ಆಸೆ ಅವನ ಮುಂದಿನ ಜನ್ಮದಲ್ಲಿ ಈಡೇರುತ್ತದೆ. ಮುಂದಿನ ಜನ್ಮದಲ್ಲಿ ಭಗವಾನ್ ವಿಷ್ಣು ಕೃಷ್ಣನಾಗಿ ಜನ್ಮ ತಾಳಿದಾಗ ಲಕ್ಷ್ಮಣನು ಬಲರಾಮನ ಅವತಾರದಲ್ಲಿ ಅವನ ಅಣ್ಣನಾಗಿ ಜನ್ಮ ತಾಳುತ್ತಾನೆ. ಶೇಷನಾಗ ಹಾಗೂ ಭಗವಾನ್ ವಿಷ್ಣುವಿನ ನಡುವೆ ಅವಿನಾಭಾವ ಸಂಬಂಧವಿದ್ದುದರಿಂದ ವಿಷ್ಣು ಎಲ್ಲಿರುತ್ತಾನೋ ಅಲ್ಲಿ ಶೇಷನಾಗನಿರುತ್ತಿದ್ದನು. ವಿಷ್ಣು ರಾಮನಾಗಿ ಭೂಮಿಗಿಳಿದಾಗ ಶೇಷನಾಗನು ಲಕ್ಷ್ಮಣನಾಗಿ ಭೂಮಿಗಿಳಿಯುತ್ತಾನೆ. ವಿಷ್ಣು ಕೃಷ್ಣನಾಗಿ ಭೂಮಿಗಿಳಿದಾಗ ಶೇಷನಾಗ ಬಲರಾಮನಾಗಿ ಭೂಮಿಗಿಳಿಯುತ್ತಾನೆ.
ಸೀತೆಯು ವನವಾಸದ ಸಮಯದಲ್ಲಿ ಕಣ್ಮರೆಯಾದಾಗ ರಾಮನು ಖಿನ್ನತೆಗೆ ಒಳಗಾಗುತ್ತಾನೆ. ಆದರೆ ಲಕ್ಷ್ಮಣನು ತನ್ನ ಅಣ್ಣನಿಗೆ ಯಾವಾಗಲು ಬೆನ್ನೆಲುಬಾಗಿ ನಿಂತು ಅವನನ್ನು ಸಮಾಧಾನ ಪಡಿಸಲು ಪ್ರಯತ್ನಿಸುತ್ತಿದ್ದನು. ರಾಮನು ಕಾಡಿನಲ್ಲಿದ್ದ ಮರ, ಗಿಡ, ಪ್ರಾಣಿ, ಪಕ್ಷಿಗಳಲ್ಲಿ ತನ್ನ ಪತ್ನಿ ಸೀತೆ ಎಲ್ಲಿ ಎಂದು ಕೇಳುತ್ತಿದ್ದಾಗ ಲಕ್ಷ್ಮಣನು ರಾಮನಿಗೆ ಧೈರ್ಯ ತುಂಬುತ್ತಿದ್ದನು. ಸೀತೆಯನ್ನು ಹುಡುಕಿ ಹೊರಟಿದ್ದ ರಾಮ ಮೂರ್ಛೆ ತಪ್ಪಿ ಬಿದ್ದಾಗ ಲಕ್ಷ್ಮಣನು ಆತನೊಂದಿಗಿದ್ದು, ಮಾತನಾಡಿಸುತ್ತಾ ಆ ಘಟನೆಯಿಂದ ಹೊರತರಲು ಪ್ರಯತ್ನಿಸುತ್ತಿದ್ದನು.
ಲಕ್ಷ್ಮಣನ ಗುರು ಆತನ ಸಹೋದರ ರಾಮನೇ ಆಗಿದ್ದರು. ರಾಮ ಕೇವಲ ಲಕ್ಷ್ಮಣನ ಸಹೋದರ ಮಾತ್ರನಾಗಿರಲಿಲ್ಲ. ಆತನಿಗೆ ತಂದೆಯ ಸ್ಥಾನವನ್ನು, ಗುರುವಿನ ಸ್ಥಾನವನ್ನು ತುಂಬಿದ್ದನು. ವಿಶ್ವಾಮಿತ್ರ ಮುನಿಗಳು ರಾಮನಿಗೆ ಅಸ್ತ್ರಗಳ ಬಗ್ಗೆ, ಶಾಸ್ತ್ರಗಳ ಬಗ್ಗೆ ಉಪದೇಶ ನೀಡಿದಾಗ ಅದನ್ನು ರಾಮನು ಲಕ್ಷ್ಮಣನಿಗೂ ಕಲಿಸಿಕೊಡುತ್ತಿದ್ದನು.
ಲಕ್ಷ್ಮಣನು ನಿಜವಾದ ಸದ್ಗುಣಗಳುಳ್ಳ ವ್ಯಕ್ತಿ. 14 ವರ್ಷಗಳ ವನವಾಸದ ಸಮಯದಲ್ಲಿ ಲಕ್ಷ್ಮಣನು ತನ್ನ ಅಣ್ಣ ರಾಮ ಮತ್ತು ಅತ್ತಿಗೆ ಸೀತೆಯೊಂದಿಗೆ ಇದ್ದನಾದರೂ ಒಂದು ದಿನವೂ ಕೂಡ ಸೀತೆಯನ್ನು ಕಣ್ಣೆತ್ತಿ ನೋಡಿದವನಲ್ಲ. ಲಕ್ಷ್ಮಣನು ಯಾವಾಗಲು ಸೀತೆಯೊಂದಿಗೆ ವ್ಯವಹರಿಸುವಾಗ ಆಕೆಯ ಪಾದವನ್ನು ನೋಡಿಕೊಂಡೇ ವ್ಯವಹರಿಸುತ್ತಿದ್ದನು. ರಾವಣನು ಸೀತೆಯನ್ನು ಲಂಕಾಗೆ ಅಪಹರಿಸಿದಾಗ ಆಕೆ ಎಸೆದ ಆಭರಣಗಳನ್ನು, ಆಕೆಯ ಪಾದದ ಗುರುತುಗಳನ್ನು ಲಕ್ಷ್ಮಣನು ನೋಡಿದ ಮೆಲೆ ಅದು ತನ್ನ ಅತ್ತಿಗೆಯ ಪಾದದ ಗುರುತೆಂದು ಗುರುತಿಸುತ್ತಾನೆ.
14 ವರ್ಷಗಳ ಕಾಲ ಲಕ್ಷ್ಮಣ ನಿದ್ರೆಯನ್ನು ತ್ಯಜಿಸಿರುವುದರಿಂದ ಆತನನ್ನು ಗುಡಾಕೇಶ ಎಂದು ಕರೆಯಲಾಗುತ್ತದೆ. ಹಾಗೂ ಲಕ್ಷ್ಮಣನು ಸುದೀರ್ಘ ವರ್ಷಗಳವರೆಗೆ ನಿದ್ರೆಯನ್ನು ತ್ಯಜಿಸಿದವರಿಂದ ಮಾತ್ರ ನಿನ್ನ ಸಾವು ಸಂಭವಿಸಲಿದೆ ಎಂದು ವರವನ್ನು ಪಡೆದ ಮೇಘನಾದನನ್ನು ಕೊಲ್ಲಲು ಸಹಕಾರಿಯಾಯಿತು. ಗುಡಾಕೇಶ ಎಂದರೆ ನಿದ್ರೆಯನ್ನು ಗೆದ್ದವನು ಎಂದರ್ಥ.
ರಾಮ ಮತ್ತು ಲಕ್ಷ್ಮಣ ಮತ್ತೆ ವೈಕುಂಠಕ್ಕೆ ಹೋಗುವ ಸಮಯ ಯಮನು ಋಷಿಯ ವೇಷದಲ್ಲಿ ಬಂದು ರಾಮನನ್ನು ಖಾಸಗಿಯಾಗಿ ಭೇಟಿಯಾಗಲು ಕೇಳಿಕೊಂಡನು. ಈ ಭೇಟಿ ಖಾಸಗಿಯಾಗಿರಬೇಕು ಎಂದು ಬಯಸಿದ ಇಬ್ಬರೂ ಒಳಗೆ ಬರುವವರು ಯಾರೇ ಆದರೂ ಅವರಿಗೆ ಮರಣ ದಂಡನೆ ವಿಧಿಸಬೇಕೆಂದು ಹೇಳಿದರು. ಸ್ವಲ್ಪ ಹೊತ್ತಿನಲ್ಲಿ ದುರ್ವಾಸ ಮುನಿಗಳು ಅಲ್ಲಿಗೆ ಬಂದರು. ಬಾಗಿಲ ಬಳಿ ಕಾವಲು ಕಾಯುತ್ತಿದ್ದ ಲಕ್ಷ್ಮಣನನ್ನು ತನ್ನನ್ನು ಒಳಗೆ ಬಿಡುವಂತೆ ಕೇಳಿಕೊಂಡರು. ಆದರೆ, ಲಕ್ಷ್ಮಣ ಅದಕ್ಕೆ ಒಪ್ಪಲಿಲ್ಲ. ಒಳಗೆ ಬಿಡದಿದ್ದರೆ ಇಡೀ ಅಯೋಧ್ಯೆಯನ್ನು ನಾಶ ಮಾಡುವುದಾಗಿ ದುರ್ವಾಸರು ಹೇಳಿದರು. ಇದನ್ನು ಕೇಳಿದ ಲಕ್ಷ್ಮಣ ತನ್ನ ಊರು ನಾಶವಾಗುವುದಕ್ಕಿಂತ ತನ್ನ ಮರಣದಂಡನೆ ಆಗುವುದೇ ಸರಿಯೆಂದು ಬಗೆದು ರಾಮ-ಋಷಿ ರೂಪದಲ್ಲಿದ್ದ ಯಮ ಇರುವ ಕೋಣೆಗೆ ಬಂದ. ಆಗ ರಾಮನಿಗೆ ತನ್ನ ಸಹೋದರನಿಗೇ ಮರಣ ದಂಡನೆ ವಿಧಿಸುವ ಸವಾಲು ಎದುರಾಯಿತು. ದುರ್ವಾಸರನ್ನು ಈ ಕುರಿತು ಕೇಳಿದಾಗ ಪ್ರೀತಿಪಾತ್ರರನ್ನು ನಿರಾಕರಿಸುವುದೂ ಮರಣದಂಡನೆಗೆ ಸಮಾನ ಎಂದು ಹೇಳಿದರು. ಅದಕ್ಕಾಗಿಯೇ ರಾಮ ಲಕ್ಷ್ಮಣನನ್ನು ಬಿಟ್ಟು ವೈಕುಂಠಕ್ಕೆ ಒಬ್ಬನೇ ಹೋದ.ರಾಮನಿಗಿಂತ ಮೊದಲು ಲಕ್ಷ್ಮಣನು ಸಾವನ್ನಪ್ಪುತ್ತಾನೆ.
ಅಣ್ಣ ಅತ್ತಿಗೆಯ ಸೇವೆ ಮಾಡುತ್ತಾ ರಾತ್ರಿಯಾದರೂ ಲಕ್ಷ್ಮಣ ನಿದ್ರೆ ಮಾಡಲಿಲ್ಲ ಹೀಗಾಗಿ ನಿದ್ರಾ ದೇವತೆ ಲಕ್ಷ್ಮಣ ಮುಂದೆ ಪ್ರತ್ಯಕ್ಷವಾಗಿ ಲಕ್ಷ್ಮಣನಿಗೆ ನಮಸ್ಕರಿಸುತ್ತಾಳೆ ಆಗ ಲಕ್ಷ್ಮಣ ಹದಿನಾಲ್ಕು ವರ್ಷಗಳ ಕಾಲ ನನಗೆ ನಿದ್ರೆಯಿಂದ ಮುಕ್ತಿ ನೀಡುವಂತೆ ನಿದ್ರಾ ದೇವಿಯ ಬಳಿ ಬೇಡಿಕೊಳ್ಳುತ್ತಾನೆ.. ಲಕ್ಷ್ಮಣನ ಬೇಡಿಕೆಯನ್ನು ನಿದ್ರಾ ದೇವತೆ ಒಪ್ಪಿಕೊಳ್ಳುತ್ತಾರೆ ನಂತರ ಆದರೆ ನಿದ್ರಾ ದೇವಿ ನಿನ್ನ ಪಾಲಿನ ನಿದ್ರೆಯನ್ನ ಬೇರೆ ಯಾರಾದರೂ ಪಡೆಯಬೇಕು ಅಂತ ಹೇಳ್ತಾರೆ.
ಆಗ ಲಕ್ಷ್ಮಣ ನನ್ನ ಪಾಲಿನ ನಿದ್ರೆಯನ್ನ ಪತ್ನಿ ಊರ್ಮಿಳಾಗೆ ಕೊಡುವಂತೆ ದೇವಿಯ ಮುಂದೆ ಹೇಳುತ್ತಾರೆ.. ನಿದ್ರಾದೇವಿಯ ಲಕ್ಷ್ಮಣನ ಈ ವಾರದಿಂದ ಊರ್ಮಿಳಾ ಹದಿನಾಲ್ಕು ವರ್ಷಗಳ ಕಾಲ ನಿದ್ದೆ ಮಾಡುತ್ತಿದ್ದರು.. ಅತ್ತ ಲಕ್ಷ್ಮಣ ಹದಿನಾಲ್ಕು ವರ್ಷಗಳ ಕಾಲ ಎಚ್ಚರವಿದ್ದು ರಾಮ ಮತ್ತು ಸೀತೆಯ ಸೇವೆ ಮಾಡುತ್ತಾನೆ.
ಧನ್ಯವಾದಗಳು.
GIPHY App Key not set. Please check settings