in

ಬಾಯಿಯಿಂದ ದುರ್ವಾಸನೆ ಬರುವುದೇ? ಕಾರಣ ಏನಿರಬಹುದು? ಸುಲಭದಲ್ಲಿ ಪರಿಹಾರ ಕಂಡುಕೊಳ್ಳಿ

ಬಾಯಿಯಿಂದ ದುರ್ವಾಸನೆ ಬರುವುದೇ? ಕಾರಣ ಏನಿರಬಹುದು? ಸುಲಭದಲ್ಲಿ ಪರಿಹಾರ
ಬಾಯಿಯಿಂದ ದುರ್ವಾಸನೆ ಬರುವುದೇ? ಕಾರಣ ಏನಿರಬಹುದು? ಸುಲಭದಲ್ಲಿ ಪರಿಹಾರ

ಹೆಚ್ಚಿನ ಜನರು ಬೇರೆಯವರೊಂದಿಗೆ ಮಾತನಾಡಲು ಹಿಂಜರಿಯುತ್ತಾರೆ ಕಾರಣ ಇಷ್ಟೇ ಬೆಳಗಿನ ಸಮಯದಲ್ಲಿ ಬಾಯಿಂದ ಹೊರಹೊಮ್ಮುವ ದುರ್ವಾಸನೆಯಿಂದ ಇತರರಿಗೆ ಕಿರಿಕಿರಿ ಆಗಬಾರದು ಎಂದು. ನಾವು ರಾತ್ರಿ ಇಡೀ ಮಲಗಿರುವಾಗ ಬ್ಯಾಕ್ಟೀರಿಯಾಗಳು ನಮ್ಮ ಬಾಯಿಯಲ್ಲಿ ತಮ್ಮ ಕೆಲಸ ಮುಂದುವರೆಸುತ್ತವೆ, ಈ ಕಾರಣದಿಂದಾಗಿ ಬೆಳಗ್ಗೆ ಎದ್ದು ಯಾರೊಂದಿಗಾದರೂ ಮಾತನಾಡಲು ಬಾಯಿ ತೆರೆದಾಗ ಬಾಯಿಯಿಂದ ದುರ್ಗಂಧ ಹೊರಹೊಮ್ಮುತ್ತದೆ.

ಜನರ ನಡುವೆ ಮಾತನಾಡಲು ಬಾಯಿ ತೆರೆದಾಗ ಜನರು ನಿಮ್ಮಿಂದ ದೂರ ಸರಿದರೆ ಅದು ನಿಜಕ್ಕೂ ಮುಜುಗರವನ್ನುಂಟು ಮಾಡುತ್ತದೆ.

ಜೊತೆಗೆ ಆತ್ಮವಿಶ್ವಾಸವನ್ನು ಸಹ ಕಸಿದುಕೊಳ್ಳುತ್ತದೆ. ಅಷ್ಟೇ ಅಲ್ಲದೇ ದೊಡ್ಡ ಚಿಂತೆಯಾಗಿ ಬಾಧಿಸಲು ಆರಂಭಿಸುತ್ತದೆ. ಅನಾರೋಗ್ಯಕರ ಜೀವನ ಶೈಲಿ, ಕೆಟ್ಟ ಅಭ್ಯಾಸಗಳು ಕೆಟ್ಟ ಉಸಿರನ್ನು ಹೊರ ಹಾಕುತ್ತಿರಬಹುದು. ಕೆಲವೊಮ್ಮೆ ಮೌತ್ವಾಶ್ಗಳು ಈ ದುರ್ವಾಸನೆಯನ್ನು ನಿಯಂತ್ರಿಸಬಹುದು. ಆದರೆ ಇದು ತಾತ್ಕಾಲಿಕ ಪರಿಹಾರವಷ್ಟೇ.

ಅಗತ್ಯವಿದ್ದಷ್ಟು ನೀರು ಕುಡಿಯದಿರುವುದು

ಬಾಯಿಯಿಂದ ದುರ್ವಾಸನೆ ಬರುವುದೇ? ಕಾರಣ ಏನಿರಬಹುದು? ಸುಲಭದಲ್ಲಿ ಪರಿಹಾರ ಕಂಡುಕೊಳ್ಳಿ
ಅಗತ್ಯವಿದ್ದಷ್ಟು ನೀರು ಕುಡಿಯದಿರುವುದು

ಈಗ ನಾವು ನಮ್ಮ ಜೀರ್ಣಕ್ರಿಯೆಗೆ ಅಗತ್ಯವಾಗುವಷ್ಟು ನೀರನ್ನು ಕುಡಿಯುವುದಿಲ್ಲ. ನಮ್ಮ ಜೀರ್ಣ ಶಕ್ತಿ ಕಡಿಮೆಯಾಗಿದ್ದರೂ ಸಹ ಬಾಯಿಯ ದುರ್ವಾಸನೆ ಬರುತ್ತದೆ. ಐ ಟಿ ಕೆಲಸ, ಒತ್ತಡದಿಂದಾಗಿ ಸರಿಯಾದ ಸಮಯದಲ್ಲಿ ಊಟ ಮಾಡದಿರುವುದು, ಹೆಚ್ಚು ನೀರು ಕುಡಿಯದೇ ಇರುವುದು ಈ ಎಲ್ಲಾ ಕಾರಣಗಳಿಂದಲೂ ಬಾಯಿಯಲ್ಲಿ ದುರ್ವಾಸನೆ ಕಾಣಿಸಿಕೊಳ್ಳಬಹುದು.

ಮಸಾಲೆ ಆಹಾರದಿಂದಲೂ ದುರ್ವಾಸನೆ

ಕೆಲವರಿಗೆ ಸಿಂಪಲ್ ಆಗಿ ಈರುಳ್ಳಿ, ಬೆಳ್ಳುಳ್ಳಿ, ಕ್ಯಾಬೇಜ್, ಹೂಕೋಸು ಈ ರೀತಿಯ ಆಹಾರ ಸೇವಿಸಿದಾಗಲೂ ಸಹ ಬಾಯಿ ವಾಸನೆಯುಂಟಾಗುತ್ತದೆ. ಸಮಯಕ್ಕೆ ಸರಿಯಾಗಿ ಯಥೇಚ್ಚವಾಗಿ ನೀರು ಕುಡಿಯಬೇಕು, 15 ನಿಮಿಷಕ್ಕೊಮ್ಮೆ ಬಾಯಿ ತೆರೆದು ಮಾತನಾಡಬೇಕು. ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರಿಗೂ ಬಾಯಿ ದುರ್ವಾಸನೆ ಸಮಸ್ಯೆ ತಪ್ಪಿದ್ದಲ್ಲ.

ಸಾಮಾನ್ಯವಾಗಿ ಹಲ್ಲು ಮತ್ತು ಒಸಡುಗಳಲ್ಲಿ ಬ್ಯಾಕ್ಟೀರಿಯಾಗಳ ಹೆಚ್ಚಳದಿಂದ ಉಂಟಾಗುತ್ತದೆ. ಹಲ್ಲುಗಳು ಕೊಳಕು ಮತ್ತು ಧೂಮಪಾನದಿಂದ ಈ ಸಮಸ್ಯೆ ಉಂಟಾಗುತ್ತದೆ. ಡಯಟ್ ಮತ್ತು ಅಸಿಡಿಟಿ ಸಮಸ್ಯೆಗಳೂ ಬಾಯಿ ದುರ್ವಾಸನೆಗೆ ಕಾರಣವಾಗಬಹುದು.

ಲವಂಗ ಬಳಸುವುದರಿಂದ ಹಲವಾರು ಉಪಯೋಗಗಳಿವೆ. ಬಾಯಿಯಲ್ಲಿ ತುಂಬಿಕೊಂಡಿರುವ ಕೀಟಾಣುಗಳಿಂದ ಮುಕ್ತಿ ಪಡೆಯಬೇಕು ಎಂದರೆ ಲವಂಗ ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಆಂಟಿ ಬ್ಯಾಕ್ಟೀರಿಯಲ್ ಗುಣ ಲವಂಗದಲ್ಲಿ ಇರುವ ಕಾರಣ ಇದು ಹಲವಾರು ರೋಗಾಣುಗಳನ್ನು ನಾಶ ಮಾಡುತ್ತದೆ. ಜೊತೆಗೆ ಬಾಯಿಗೆ ಸಂಬಂಧಿಸಿದ ಸಮಸ್ಯೆಯನ್ನು ದೂರ ಮಾಡುತ್ತದೆ. ಉದಾಹರಣೆಗೆ ಹಲ್ಲಿನಲ್ಲಿ ರಕ್ತಸ್ರಾವವಾಗುವುದು, ಆಗಾಗ ಹಲ್ಲು ನೋವು ಕಾಣಿಸಿಕೊಳ್ಳುವುದು- ಹೀಗೆ ಇನ್ನು ಕೆಲವು ಹಲ್ಲಿನ ಸಮಸ್ಯೆಯನ್ನು ಲವಂಗ ನಿವಾರಣೆ ಮಾಡುತ್ತದೆ.

ಜೇನುತುಪ್ಪ ಮತ್ತು ದಾಲ್ಚಿನ್ನಿ ಮಿಶ್ರಣವನ್ನು ಬಾಯಿಯ ದುರ್ವಾಸನೆ ಹೋಗಲಾಡಿಸಲು ಮೌತ್ ಫ್ರೆಶ್ನರ್ ಆಗಿ ಬಳಸಬಹುದು. ಎರಡರಲ್ಲೂ ಸಾಕಷ್ಟು ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ದಾಲ್ಚಿನ್ನಿ ಪುಡಿಯೊಂದಿಗೆ ಜೇನುತುಪ್ಪವನ್ನು ಮಿಶ್ರಣ ಮಾಡಿ ಮತ್ತು ಪೇಸ್ಟ್ ಅನ್ನು ಹಲ್ಲು ಮತ್ತು ವಸಡುಗಳಿಗೆ ಹಚ್ಚಿ ಮಸಾಜ್ ಮಾಡಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ಹಲ್ಲಿನ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

​ಸ್ವಲ್ಪ ಬೆಚ್ಚಗಿನ ನೀರಿಗೆ ಉಪ್ಪನ್ನು ಹಾಕಿಕೊಂಡು ಬಾಯಿ ಮುಕ್ಕಳಿಸುವುದರಿಂದ ಬಾಯಿಂದ ಹೊರ ಹೊಮ್ಮುವ ದುರ್ವಾಸನೆಯನ್ನು ಖಂಡಿತವಾಗಿಯೂ ನಿವಾರಣೆ ಮಾಡಿಕೊಳ್ಳಬಹುದು. ಬರೀ ಬಾಯಿ ವಾಸನೆ ಅಷ್ಟೇ ಅಲ್ಲ, ನಿಮಗೆ ಸ್ವಲ್ಪ ಗಂಟಲಿನಲ್ಲಿ ಕಿರಿಕಿರಿ ಅಥವಾ ಗಂಟಲು ನೋವು ಕಾಣಿಸಿಕೊಳ್ಳುತ್ತದೆ ಎಂದಾಗ ಬೆಚ್ಚಗಿನ ಉಪ್ಪು ನೀರನ್ನು ಗಂಟಲಿನ ಭಾಗದಲ್ಲಿ ಹಾಕಿ ಮುಕ್ಕಳಿಸುವುದರಿಂದ ಈ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ. 

ಬಾಯಿಯ ದುರ್ವಾಸನೆಯನ್ನು ತೆಗೆದುಹಾಕಲು ಸೋಂಪು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಅದೇ ರೀತಿ ಲವಂಗ ಅಥವಾ ಏಲಕ್ಕಿಯನ್ನು ಸಹ ಬಳಸಬಹುದು. ಇವುಗಳು ಹಲ್ಲು ಮತ್ತು ಬಾಯಿಯ ದುರ್ವಾಸನೆಯನ್ನು ತಡೆಯುತ್ತದೆ.

ಬಾಯಿಯಿಂದ ದುರ್ವಾಸನೆ ಬರುವುದೇ? ಕಾರಣ ಏನಿರಬಹುದು? ಸುಲಭದಲ್ಲಿ ಪರಿಹಾರ ಕಂಡುಕೊಳ್ಳಿ
ಅರಿಶಿನ ಹಾಕಿ ಕುಡಿದರೆ ಬಾಯಿ ದುರ್ವಾಸನೆ ಬೀರುವುದಿಲ್ಲ

ಒಂದು ಲೋಟ ನೀರಿಗೆ ಸ್ವಲ್ಪ ಅರಿಶಿನ ಹಾಕಿ ಕುಡಿದರೆ ಬಾಯಿ ದುರ್ವಾಸನೆ ಬೀರುವುದಿಲ್ಲ.

ಹೆಚ್ಚು ನೀರು ಕುಡಿದಷ್ಟೂ ದೇಹಕ್ಕೆ ಒಳ್ಳೆಯದು. ಸಾಕಷ್ಟು ನೀರು ಕುಡಿಯುವುದರಿಂದ ದೇಹದಿಂದ ಬ್ಯಾಕ್ಟೀರಿಯಾವನ್ನು ಸುಲಭವಾಗಿ ತೆಗೆದುಹಾಕಬಹುದು. ಒಂದು ಗಂಟೆಯಾದರೂ ನೀರಿನಿಂದ ಬಾಯಿ ತೊಳೆದರೆ ಬಾಯಿಯಲ್ಲಿ ಬ್ಯಾಕ್ಟೀರಿಯಾ ಬೆಳೆಯುವುದಿಲ್ಲ. ಇದರಿಂದ ವಾಸನೆ ಬಾಯಿಂದ ಬರುವುದಿಲ್ಲ.

ದುರ್ಗಂಧ ಬೀರುವ ರೋಗಾಣುಗಳನ್ನು ದಾಲ್ಚಿನ್ನಿ ಸಂಪೂರ್ಣ ನಿವಾರಣೆ ಮಾಡುತ್ತದೆ. ಇದಕ್ಕಾಗಿ ಬಹಳ ಸರಳ ಕೆಲಸ ಮಾಡಬೇಕು. ದಾಲ್ಚಿನ್ನಿಯ ಸಣ್ಣ ತುಂಡೊಂದನ್ನು ಬಾಯಿಯಲ್ಲಿ ಸ್ವಲ್ಪ ಸಮಯದ ಕಾಲ ಇಟ್ಟುಕೊಳ್ಳಿ, ನಂತರ ಇದನ್ನು ಉಗಿಯಿರಿ. ಅಷ್ಟೇ, ಅಲ್ಲಿಗೆ ಸಮಸ್ಯೆ ಪರಿಹಾರವಾಗುತ್ತದೆ.

​ಕೊತ್ತಂಬರಿ ಸೊಪ್ಪು ಬಾಯಿಯ ದುರ್ವಾಸನೆ ಹೋಗಲಾಡಿಸುವ ಪರಿಣಾಮಕಾರಿ ಮಾರ್ಗ. ಇದನ್ನು ತಿಂದರೆ ಬಾಯಿ ದುರ್ವಾಸನೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎನ್ನುತ್ತಾರೆ ತಜ್ಞರು. ಹಸಿ ಕೊತ್ತಂಬರಿ ಸೊಪ್ಪನ್ನು ತಿನ್ನಬೇಕೆಂದರೆ ಅದರ ಎಲೆಗಳನ್ನು ಸ್ವಲ್ಪ ತೆಗೆದುಕೊಂಡು ತೊಳೆದು ಸ್ವಲ್ಪ ಹೊತ್ತು ಜಗಿಯಿರಿ.

ರಾಸಾಯನಿಕಗಳನ್ನು ಹೊಂದಿರದ ಈ ನೈಸರ್ಗಿಕ ಪದಾರ್ಥಗಳನ್ನು ಬಳಸುವುದರಿಂದ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಬಹುದು.

ಸಾಸಿವೆ ಎಣ್ಣೆಗೆ ಪ್ರತಿದಿನ ಉಪ್ಪು ಬೆರೆಸಿ ಒಸಡು ಮತ್ತು ಹಲ್ಲುಗಳಿಗೆ ಮಸಾಜ್ ಮಾಡಿ. ಇದು ಬಹಳ ಪ್ರಯೋಜನಕಾರಿ ಎಂದು ಸಾಬೀತಾಗಿದೆ.

ಬಾಯಿಯಿಂದ ದುರ್ವಾಸನೆ ಬರುವುದೇ? ಕಾರಣ ಏನಿರಬಹುದು? ಸುಲಭದಲ್ಲಿ ಪರಿಹಾರ ಕಂಡುಕೊಳ್ಳಿ
ದಿನದಲ್ಲಿ ಎರಡು ಬಾರಿ ಹಲ್ಲುಜ್ಜಬೇಕು

ವಿಟಾಮಿನ್​ ಸಿ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದೆ. ಹೀಗಾಗಿ, ನಿಂಬೆ, ಕಿತ್ತಳೆ, ದ್ರಾಕ್ಷಿ ಮುಂತಾದ ಹಣ್ಣುಗಳನ್ನು ತಿನ್ನುವುದರಿಂದ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಬಹುದು.

ನೀರಿಗೆ ಒಂದು ಚಮಚ ಮೆಂತೆ ಕಾಳುಗಳನ್ನು ಹಾಕಿ. ಇದನ್ನು ಸೋಸಿಕೊಂಡ ಬಳಿಕ ನೀರನ್ನು ದಿನದಲ್ಲಿ ಒಂದು ಸಲ ಕುಡಿಯಿರಿ. 

ಸಕ್ಕರೆ ಪ್ರಮಾಣ ಕಡಿಮೆ ಇರುವ ಚಿಂಗಮ್ ಅಗೆಯುವದರಿಂದ ಬಾಯಿಯಲ್ಲಿ ಎಂಜಲ ಪ್ರಮಾಣ ಜಾಸ್ತಿ ಆಗುತ್ತದೆ. ಇದರಿಂದಲೂ ಸಹ ಬಾಯಿಯ ದುರ್ವಾಸನೆ ಹೋಗಲಾಡಿಸಬಹುದು. ಧೂಮಪಾನ ಮತ್ತು ಮದ್ಯಪಾನ ಯಾವುದೇ ದುಶ್ಚಟಗಳಿದ್ದರೆ ಅವುಗಳಿಂದ ತಕ್ಷಣವೇ ದೂರವಾದರೆ ಬಾಯಿಯ ದುರ್ವಾಸನೆ ಹೋಗಲಾಡಿಸಿಕೊಳ್ಳಬಹುದು.

 ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಪಾಕಿಸ್ತಾನ ಸೈನ್ಯದ ಶರಣಾಗತಿ

ಇತಿಹಾಸದಲ್ಲಿ ಇಂದು “ಭಾರತ-ಪಾಕಿಸ್ತಾನ ಯುದ್ಧವು”, ಪಾಕಿಸ್ತಾನ ಸೈನ್ಯದ ಶರಣಾಗತಿಯೊಂದಿಗೆ ಕೊನೆಗೊಂಡಿತು

ಸದಾ ಅಣ್ಣ ರಾಮನ ಸೇವೆಯಲ್ಲಿ ಇದ್ದ ಲಕ್ಷ್ಮಣ

ಸದಾ ಅಣ್ಣ ರಾಮನ ಸೇವೆಯಲ್ಲಿ ಇದ್ದ ಲಕ್ಷ್ಮಣ