in

ಸ್ತ್ರೀ ಎಂದರೆ ಅಷ್ಟೇ ಸಾಕೆ?

ಸ್ತ್ರೀ
ಸ್ತ್ರೀ

ಸ್ತ್ರೀ ಎಂಬ ಪದಕ್ಕೆ ಸರಿಸಮಾನ ಏನಿದೆ? ಅವಳ ತ್ಯಾಗಕ್ಕೆ ಕೊನೆ ಎಲ್ಲಿದೆ? ಪ್ರತಿಯೊಂದು ಮನೆಯಲ್ಲಿ ಅಂತಹ ಸ್ತ್ರೀ ಇರುತ್ತಾಳೆ. ಸ್ತ್ರೀ ಅಥವಾ ಮಹಿಳೆ ಪದವು ಸಂಸ್ಕೃತದ್ದು, ಕನ್ನಡದಲ್ಲಿ ಈ ಪದಕ್ಕೆ ‘ಹೆಣ್ಣು’ ಎಂಬ ಅರ್ಥವಿದೆ. ಇದು ನಾಗರಿಕ ಗೌರವದ ಮತ್ತು ಪುರುಷ ಪದದ ಸಮಾನ ಪದವಾಗಿದ್ದು ವಯಸ್ಕ ಹೆಣ್ಣನ್ನು ಸೂಚಿಸಲು ಉಪಯೋಗಿಸಲಾಗುತ್ತದೆ. ಆದಿಯಿಂದಲೂ ಸೃಷ್ಟಿಯ ಮೂಲ ಸ್ತ್ರೀಯಾಗಿದ್ದಾಳೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಗೆ ಅವಳದೇ ಆದ ಗೌರವ, ಸ್ಥಾನಮಾನಗಳಿರುವುದನ್ನು ಗುರುತಿಸಬಹುದಾಗಿದೆ. ಸ್ತ್ರೀ ಅವಿನಾಶಿ, ಸಂಜೀವಿನಿ. ಹೆಣ್ಣು ವಿಶಿಷ್ಟ ಶಕ್ತಿಗಳ ಸಂಗಮ. ಮಮತೆ, ಕರುಣೆ, ವಾತ್ಸಲ್ಯ, ಅಕ್ಕರೆ ಮತ್ತು ಭೂಮಿತೂಕದ ತಾಳ್ಮೆಯುಳ್ಳ ಸ್ತ್ರೀ ಒಂದು ಪ್ರಬಲ ಶಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಮಹಿಳೆಯ ಜಾಯಮಾನ ಪುರುಷನ ಜಾಯಮಾನಕ್ಕಿಂತ ಭಿನ್ನವಾದದ್ದು. ಮಹಿಳೆಯನ್ನು ಹಿಂದಿನಿಂದಲೂ ಅಬಲೆಯೆಂದೇ ಕಡೆಗಣಿಸಲಾಗುತ್ತಿತ್ತು. ಮಾನವರಲ್ಲಿ ಗಂಡು ಅಥವಾ ಹೆಣ್ಣು ಎಂಬ, ನಿಸರ್ಗಬದ್ಧವಾಗಿ ಅಂಗಾಂಗ ವಿನ್ಯಾಸದಲ್ಲಿ ಭಿನ್ನತೆಯ ದೇಹಧಾರಣೆಯಾಗುತ್ತದೆ.

ಸ್ತ್ರೀ ಎಂದರೆ ಅಷ್ಟೇ ಸಾಕೆ?
ಮಹಿಳೆ

ವೇದಗಳ ಕಾಲದಲ್ಲಿದ್ದ ಗಾರ್ಗಿ, ಮೈತ್ರೈಯಿಯರ ಬೌದ್ದಿಕ ಸಾಧನೆ ಸ್ಮರಣಿಯವಾದುದು. ಪುರಾಣ ಕಾಲದ ‘ಆದಿಶಕ್ತಿ’ ದುಷ್ಟಶಿಕ್ಷಕಿಯಾಗಿ, ಶಿಷ್ಟರಕ್ಷಕಿಯಾಗಿ, ಸರ್ವಶಕ್ತಿಯನ್ನು ಮೆರೆದಿರುವುದನ್ನು ಕಾಣಬಹುದಾಗಿದೆ.
ಹಿಂದೂ ಮಹಾಕಾವ್ಯಗಳಾದ ರಾಮಾಯಣ-ಮಹಾಭಾರತ ಕೃತಿಗಳ ರಚನೆಗೆ ಸ್ತ್ರೀ ಕಾರಣೀಭೂತಳಾಗಿದ್ದಾಳೆ. ಹಲವು ಶಾಸ್ತ್ರಗಳಲ್ಲಿ ಈಕೆಯನ್ನು ಜಗಜನನಿಯೆಂದು ಹೇಳಲಾಗುತ್ತದೆ. ಹಾಗಾಗಿ ಹಿರಿಯರು – “ಕಾರ್ಯೇಷು ದಾಸಿ, ಸಲಹೇಷು ಮಂತ್ರಿ, ಪೂಜ್ಯೇಶು ಮಾತ, ಶಯನೇಷು ರಂಭಾ ನಾರಿ ಕ್ಷಮಯಾಧರಿತ್ರಿ” ಎಂದಿದ್ದಾರೆ. ಮನು ತನ್ನ ಮನುಸ್ಪೃತಿಯಲ್ಲಿ’ ಯತ್ರನಾರ್ಯಸ್ತು ಪೂಜ್ಯಂತೇ, ರಮಂತೇ ತತ್ರ ದೇವತಾಃ’ ಎಂದಿದ್ದಾನೆ. ವೇದಕಾಲದಲ್ಲಿ ಸ್ತ್ರೀಯರಿಗೆ ಧಾರ್ಮಿಕ ಸ್ವಾತಂತ್ರ್ಯವಿತ್ತು. ಸ್ತ್ರೀಯರು ಬ್ರಹ್ಮವಾದಿನಿಯರಾಗಿ ಬ್ರಹ್ಮ ಸಭೆಗಳಲ್ಲಿ ಪುರುಷರ ಸಮಾನವಾಗಿ ವಾದ ಮಾಡಬಲ್ಲವರಾಗಿದ್ದರು ಎಂದು ಹೇಳಿ ಅಪಾಲಾ, ಲೋಪಾಮುದ್ರೆ, ಮೈತ್ರೇಯಿ,ಗಾರ್ಗಿ, ಉಭಯಭಾರತಿ ಇತ್ಯಾದಿ ಬೆರಳಣಿಕೆ ಸ್ತ್ರೀಯರನ್ನು ಉದಾಹರಣೆಯಾಗಿ ನೀಡುತ್ತಾರೆ. ಆದರೆ ಇವರ್ಯಾರು ಸಾಮಾನ್ಯ ಮಹಿಳೆಯರು ಆಗಿರಲಿಲ್ಲ. ಇವರೆಲ್ಲ ಉನ್ನತವರ್ಗದ ಉಚ್ಹ ವರ್ಣದ ಋಷಿ ಪತ್ನಿಯರಾಗಿದ್ದರು ಅಷ್ಟಕ್ಕೂ ಅವರಲ್ಲಿ ಗಾರ್ಗಿ ಮೈತ್ರೆಯರು ತಮಗೇಕೆ ಬ್ರಹ್ಮ ವಿದ್ಯೆ ನೀಡುತ್ತಿಲ್ಲವೆಂದು ಋಷಿ ಪತಿಯೊಂದಿಗೆ ವಾದವೇ ಹೂಡಿದ್ದರು. ವೇದಕಾಲದಲ್ಲಿ ಸಾಮಾನ್ಯ ವರ್ಗ, ವರ್ಣದ ಮಹಿಳೆಯರ ಸ್ಥಿತಿಗತಿ ಏನಾಗಿತ್ತು ಎಂಬುವುದಕ್ಕೆ ಮಾಹಿತಿಗಳು ಇಲ್ಲ. ನಮ್ಮ ಪರಂಪರೆಯಲ್ಲಿಯೂ ಸಹ ಮುಖ್ಯ ದೇವತೆಗಳು ‘ಸ್ತ್ರೀ’ ದೇವತೆಗಳೇ. ಶಕ್ತಿಗೆ ಅದಿದೇವತೆ ‘ಪಾರ್ವತಿ’ ಧನಕ್ಕೆ ಅದಿದೇವತೆ ‘ಲಕ್ಷ್ಮಿ’ ಮತ್ತು ವಿದ್ಯೆಗೆ ಅದಿದೇವತೆ ‘ಸರಸ್ವತಿ’ . ನಮ್ಮ ದೇಶದಲ್ಲಿ ಹರಿಯುವ ಒಂದೇ ಒಂದು ನದಿಯನ್ನು ಹೊರತು ಎಲ್ಲಾ ನದಿಗಳೂ ‘ ಸ್ತ್ರೀ’ ನದಿಗಳೇ. ಗಂಗಾ, ಕಾವೇರಿ, ಕೃಷ್ಣಾ, ನರ್ಮದಾ, ಅಲಕನಂದಾ, ಗೋದಾವರಿ, ತುಂಗಾ, ಭದ್ರಾ ಹೀಗೆ ಎಲ್ಲಾ ನದಿಗಳೂ ‘ಸ್ತ್ರೀ’ಗಳೇ! ಎಲ್ಲಿ ಸ್ತ್ರೀಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬ ಅಭಿಪ್ರಾಯಕ್ಕೆ ಭಾರತೀಯ ಸಂಸ್ಕೃತಿ ಬದ್ದವಾಗಿದೆ.

ಅಹಿಂಸೆ, ತ್ಯಾಗ, ಬಲಿದಾನದ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮಾಗಾಂಧೀಜಿಯವರಲ್ಲಿಯೂ ಸನಾತನ ಹಿಂದೂ ಮಹಿಳೆಯ ಚಿತ್ರವೇ ಉಳಿದುಕೊಂಡಿತ್ತು. ಹನ್ನೆರಡನೆಯ ಶತಮಾನದ ನಂತರ ಸಾಮೂಹಿಕವಾಗಿ ಮಹಿಳೆಯರು ಹೊರಬಂದು ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿದುಡಿದಂತೆ ಆಧುನಿಕ ಕಾಲದಲ್ಲಿ ಗಾಂಧೀಜಿಯ ಒತ್ತಾಸೆಯಿಂದಲೇ ಮಹಿಳೆಯರು ಮನೆಯ ಹೊಸಿಲು ದಾಟಿ ಹೊರ ಬಂದು ರಾಷ್ಟ್ರೀಯ ಚಳುವಳಿಯಲ್ಲಿ ತೊಡಗಿಕೊಳ್ಳುವಂತಾಯಿತೆಂಬುದು ಹೆಮ್ಮೆಯ ಸಂಗತಿ. ಆದರೆ ಗಾಂಧೀಜಿಗೆ ಒಂದು ನಿಶ್ಚಿತವಾದ ಗುರಿಸಾಧನೆಯಲ್ಲಿ ಸ್ತ್ರೀಶಕ್ತಿಯ ಅವಶ್ಯಕತೆ ಕಾಣಿಸಿಕೊಂಡಿರುವುದರಿಂದ ಸ್ತ್ರೀಯರಿಗೆ ಸಾಮಾಜಿಕವಾಗಿ ಹೊರಬರುವಂತೆ ಒತ್ತಾಯಿಸಲಾಯಿತೇ ಹೊರತು ಹೆಣ್ಣಿನ ಉದ್ಧಾರಕ್ಕಾಗಿಯಲ್ಲ. ಅಂತರಿಕವಾಗಿ ಗಾಂಧೀಜಿಯಲ್ಲಿ ಸನಾತನ ಸಂಸ್ಕೃತಿಯ ಚೌಕಟ್ಟಿನೊಳಗಿರುವ ಹೆಣ್ಣಿನ ಬಗ್ಗೆ ಗೌರವಾಧಾರಗಳಿದ್ದವೇ ಹೊರತು ಚೌಕಟ್ಟಿನಾಚೆಗೆ ಬದುಕಲು ಇಚ್ಚಿಸುವ ಮಹಿಳೆಯರ ಕುರಿತ ಹಾಗೆ ಸದಭಿಪ್ರಾಯವಿರಲಿಲ್ಲ.

ಗಾಂಧೀಜಿಯ ಸನಾತನ ಮನಸ್ಸು ಹೆಣ್ಣನ್ನು ಗೌರವಿಸುತ್ತದೆ, ಪೂಜಿಸುತ್ತದೆ. ಆದರೆ ಸಮಾನ ನೆಲೆಯಲ್ಲಿ ಬರುವುದನ್ನು, ಇರುವುದನ್ನು ಸಹಿಸಿಕೊಳ್ಳಲಿಲ್ಲ. ವರ್ಣಾಶ್ರಮ ಪದ್ಧತಿಯನ್ನು ಒಪ್ಪಿದ ಗಾಂಧೀಜಿ ಗೃಹಿಣಿಗೆ ಗೃಹದಾಚೆಗೆ ಬದುಕಿಲ್ಲವೆಂದೇ ಭಾವಿಸಿರುವರು. ಹೆಣ್ಣು ಗಂಡಿನ ಸಮಾನತೆಯ ಬಗ್ಗೆ ಗಾಂಧೀಜಿಯಲ್ಲಿ ಗೊಂದಲಗಳಿದ್ದವು. ಸ್ತ್ರೀ ಬದುಕಿಗೆ ಒಳಪಟ್ಟು ಮಾತನಾಡುವಾಗಲೆಲ್ಲ ಗಾಂಧೀಜಿಯ ಗಂಟಲಲ್ಲಿ ಮನು ಕಾಣಿಸಿಕೊಳ್ಳುತ್ತಾನೆ.

ಸ್ತ್ರೀ ಎಂದರೆ ಅಷ್ಟೇ ಸಾಕೆ?
ಮಹಿಳೆ

ಒಂದು ಜೀವವನ್ನು ಸೃಷ್ಟಿಮಾಡುವ ಶಕ್ತಿ ಮಹಿಳೆಗೆ ಇದೆ ಎಂದಾದರೆ, ಖಂಡಿತವಾಗಿ ಅವಳಲ್ಲಿ ಅನಂತವಾದ ಶಕ್ತಿ ಇದೆ ಎಂದರ್ಥ. ಮಾತೃ ಶಕ್ತಿ, ವಾತ್ಸಲ್ಯ, ಸಹನೆ, ಪ್ರೀತಿ, ತಾಳ್ಮೆ, ಆರೈಕೆ, ಸತ್ಕಾರ, ಸನ್ಮಾನ, ಸಾಂತ್ವನ ಗುಣಗಳು ಆಕೆಗೆ ಹುಟ್ಟಿನಿಂದಲೇ ಮೇಳೈಸಿಕೊಂಡು ಬಂದಿರುತ್ತದೆ.ನಮ್ಮ ದೇಶದಲ್ಲಿ ಕೌಟುಂಬಿಕ ಪದ್ಧತಿ, ಸಂಸ್ಕೃತಿ, ಸಂಸ್ಕಾರಗಳು, ಕುಟುಂಬ ನಿರ್ವಹಣೆ, ಆರೈಕೆ ಮಾಡುವ ಜವಾಬ್ದಾರಿ ಅನಾದಿ ಕಾಲದಿಂದಲೂ ಬಂದಿರುವುದರಿಂದ ಸಣ್ಣ ವಯಸ್ಸಿನಿಂದಲೇ ಆಕೆಗೆ ಹಲವಾರು ನೀತಿ ನಿಯಮಗಳು, ಕಟ್ಟುಪಾಡುಗಳನ್ನು ಹಾಕಲಾಗುತ್ತದೆ. ಮನುಷ್ಯನ ಎಲ್ಲಾ ಚಟುವಟಿಕೆಗಳು ಅಂಗಾಂಗಗಳ ಪರಸ್ಪರ ಕಾರ್ಯಾಚರಣೆಯನ್ನು ಅವಲಂಬಿಸಿದ್ದು ದೇಹ ಮತ್ತು ಮನಸ್ಸಿನ ಹೊಂದಾಣಿಕೆಯನ್ನು ವರ್ತನಾಕ್ರಿಯೆಗಳ ಮೂಲಕ ಸಾಧಿಸುತ್ತದೆ. ಬಹಪಾಲು ವರ್ತನೆಗಳು ದೇಹದೊಳಗಿನ ಮತ್ತು ಹೊರಗಿನ ಪ್ರೇರಣೆಗಳನ್ನು ನೀಗಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತದೆ. ಸ್ವತಂತ್ರ ರೀತಿಯಲ್ಲಿ ಮನೆಯಿಂದ ಹೊರಗೆ ಹೋಗಿ ವ್ಯವಹಾರ ನಡೆಸುವುದು ಪುರುಷ ಪ್ರಧಾನ ಸಮಾಜದಲ್ಲಿ ಅತ್ಯಂತ ಕಷ್ಟವೇ ಆಗಿತ್ತು. ಕೆಲವು ಧರ್ಮಗಳ ಪ್ರಕಾರ ಸ್ತ್ರೀಯರಿಗೆ ಆತ್ಮವಿಲ್ಲ. ಕೆಲವು ಧರ್ಮಗಳಲ್ಲಿ ಸ್ತ್ರೀಯರಿಗೆ ಮೋಕ್ಷವಿಲ್ಲ. ಬೌದ್ಧ ಧರ್ಮದಲ್ಲಿಯೂ ಮೊದಮೊದಲು ಸ್ತ್ರೀಯರಿಗೆ ಅವಕಾಶವಿರಲಿಲ್ಲ ಮಹಿಳೆಯನ್ನು ಮುಖ್ಯವಾಗಿ ಎರಡು ವರ್ಗವಾಗಿ ನೋಡ ಬೇಕಾಗುತ್ತದೆ. ಒಂದು ಗ್ರಾಮೀಣ ಮಹಿಳೆ. ಇನ್ನೊಂದು ನಗರ ಪ್ರದೇಶದ ಮಹಿಳೆ. ಪಾತ್ರ ಮತ್ತು ಜವಾಬ್ದಾರಿಗಳ ನಿರ್ವಹಣೆಯಲ್ಲಿ ಇವರಿಬ್ಬರಲ್ಲಿ ವ್ಯತ್ಯಾಸಗಳಿವೆ. ಶಿಕ್ಷಣದ ಮಟ್ಟ ಮತ್ತು ಕುಟುಂಬದ ಪರಿಸರ, ಅದಕ್ಕೆ ಅನುಸರಿಸಿ ಜೀವನವನ್ನು ನೋಡುವ ಮತ್ತು ಅನುಭವಿಸಲು ಇಚ್ಚಿಸುವ ಮನೋಭಾವದಲ್ಲಿ ಇಬ್ಬರಿಗೂ ವ್ಯತ್ಯಾಸವಿದೆ.

ಸ್ತ್ರೀ ಕನಸೂ ಹೌದು, ವಾಸ್ತವವೂ ಹೌದು. ಪ್ರಕೃತಿಗೂ – ಸ್ತ್ರೀಗೂ ಅವಿನಾಭಾವ ಸಂಬಂಧವಿದೆ. ಈಕೆ ಭೂಮಿಯಾಗಿ, ಮುಗಿಲಾಗಿ, ಮೇರುಪರ್ವತವಾಗಿ ಬೆಳೆದು ನಿಂತಿದ್ದಾಳೆ. ಹಾಗಾಗಿ ಸ್ತ್ರೀಯನ್ನು ಸಮೃದ್ದಿಯ ಸಂಕೇತವೆಂದು ಪರಿಭಾವಿಸಲಾಗಿದೆ. ಇಡಿ ವಿಶ್ವವೇ ಆರೋಗ್ಯಕರ ಮನೋಭಾವ ಹೊಂದಲು ಸಹಕಾರ ಶಕ್ತಿ ಸ್ತ್ರೀಯಾಗಿದ್ದಾಳೆ. ನಿಸರ್ಗದಲ್ಲಿ ಹಲವು ಬಗೆಯ ವೈವಿಧ್ಯತೆಗಳಿರುವಂತೆ ಸ್ತ್ರೀಯರಲ್ಲೂ ಹಲವು ವಿಧದ ಮಹಿಳೆಯರನ್ನು ಕಾಣಬಹುದು. ಚರಿತ್ರೆಯಲ್ಲಿ ಹಿಂದೆ ಮಾತೃಪ್ರಧಾನ ಕುಟುಂಬಗಳಿದ್ದುದನ್ನು ನಾವು ಸ್ಮರಿಸಬಹುದಾಗಿದೆ. ವಚನಕಾರರು ಹೆಣ್ಣನ್ನು ‘ಮಾಯೆ’ಯೆಂದು ಕರೆದಿದ್ದಾರೆ.

ಸ್ತ್ರೀ ಎಂದರೆ ಅಷ್ಟೇ ಸಾಕೆ?
ಸ್ತ್ರೀ

ಗಂಡಸಿಗೆ ಹೊಲಿಸಿದಾಗ ಹೆಣ್ಣಿನ ದೇಹವನ್ನು ನ್ಯೂನತೆಯ ಗೂಡನ್ನಾಗಿ ಕಲ್ಪಿಸಲಾಗುತ್ತದೆ. ಭೌತಿಕ ವಸ್ತುಗಳನ್ನು ಬಳಸಿ ತಮ್ಮ ದೇಹವನ್ನು ಕೆಲಸಕಾರ್ಯಗಳಲ್ಲಿ ತೊಡಗಿಸುವಾಗ ಹುಡುಗಿಯರಲ್ಲಿ ಅಳುಕು ಮನೋಭಾವ, ಹಿಂಜರಿಯುವಿಕೆ ಹಾಗೂ ಹಿಂದು ಮುಂದು ನೋಡುವ ಡೋಲಾಯಮಾನ ಸ್ಥಿತಿ ಕಾಣಿಸಿಕೊಂಡು, ಸಂಕಲ್ಪ ಶಕ್ತಿ ಕಡಿಮೆಯಿದೆ ಎಂದು ಭಾವಿಸುತ್ತಾರೆ. ಮಾಡಬೇಕಾದ ಕೆಲಸವನ್ನು ಮಾಡಿ ಪೂರೈಸುವ ಸಾಧನವೆಂದು ದೇಹವನ್ನು ಕಲ್ಪಿಸುವ ಬದಲಾಗಿ, ಹೆಣ್ಣುಗಳು ತಮ್ಮ ಶರೀರವನ್ನು ಒಂದು ತೊಡರು, ಕೋಟಲೆ ಎಂದು ಕಲ್ಪಿಸುವುದುಂಟು. ಮಾದರಿ ಹೆಣ್ಣನ್ನು ಉಪಭೋಗಿ ನೆಲೆಯಲ್ಲಿ ಗ್ರಹಿಸುವುದು. ಅವಳ ದೇಹ, ಆ ದೇಹದ ಸೌಂದರ್ಯ, ಅದರ ಧಾರಣ ಶಕ್ತಿ, ಅದರ ಪ್ರಾಯೋಗಿಕ ಉಪಯುಕ್ತತೆ ಈ ಎಲ್ಲವನ್ನೂ ಪಿತೃಪ್ರಧಾನ ವ್ಯವಸ್ಥೆ, ತನ್ನ ಅಪೇಕ್ಷೆ ಮತ್ತು ಅನುಕೂಲಕ್ಕೆ ತಕ್ಕಂತೆ ನಿರ್ವಚನಗಳನ್ನು ಕಟ್ಟಿಕೊಂಡಿದೆ.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರತಿ ವರ್ಷ ಮಾರ್ಚ್ ೮ ರಂದು ಆಚರಿಸಲ್ಪಡುತ್ತದೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಎಂದರೆ ಬಂಡವಾಳಶಾಹಿ ಶೋಷಣೆಯ ವಿರುದ್ಧ ಮಹಿಳಾ ವಿಮೋಚನೆಗಾಗಿ ನಡೆದ ಸಮಾಜವಾದಿ ಹೋರಾಟದ ಪರಂಪರೆ ಎನ್ನುವುದು ಮಾತ್ರ ಸತ್ಯ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

One Comment

  1. Быстромонтируемые здания – это актуальные здания, которые отличаются громадной скоростью установки и гибкостью. Они представляют собой сооруженные объекты, заключающиеся из заранее сделанных деталей или же блоков, которые имеют возможность быть быстрыми темпами установлены в месте стройки.
    [url=https://bystrovozvodimye-zdanija.ru/]Быстровозводимые здания и сооружения[/url] владеют податливостью и адаптируемостью, что дает возможность просто менять и модифицировать их в соответствии с нуждами заказчика. Это экономически успешное а также экологически стабильное решение, которое в крайние годы приняло широкое распространение.

ಪಂಚ ಪಾಂಡವರು

ದೇವತೆಗಳ ಅಂಶ ಪಂಚ ಪಾಂಡವರು

ಕರ್ನಾಟಕ

ಕರ್ನಾಟಕದ ಏಕೀಕರಣ