in

ಚೀನಾ ದೇಶದಲ್ಲಿ ಗುಲಗಂಜಿಯು ಪ್ರೀತಿಯ ಸಂಕೇತ

ಗುಲಗಂಜಿ
ಗುಲಗಂಜಿ

ಗುಲಗಂಜಿಯ ಗಿಡವು ಹಳದಿ ಬಣ್ಣದ್ದಾಗಿದ್ದು ಕೆಂಪು ಬಣ್ಣದ ಹೂವುಗಳನ್ನು ಬಿಡುತ್ತದೆ. ಕಡು ಕೆಂಪಗಿನ ತುದಿಯಲ್ಲಿ ಕಪ್ಪು ಚುಕ್ಕೆಯಿರುವ ಸಣ್ಣ ಬೀಜವೇ ಗುಲಗಂಜಿ. ಅಕ್ಕಸಾಲಿಗರು ಹಿಂದಿನ ಕಾಲದಲ್ಲಿ ಬಂಗಾರವನ್ನು ತೂಕಮಾಡಲು ಗುಲಗಂಜಿಯ ಬೀಜಗಳನ್ನು ಬಳಸುತ್ತಿದ್ದರು. ಈಗಲೂ ಗ್ರಾಮೀಣ ಪ್ರದೇಶದಲ್ಲಿ ಚಿನ್ನ ತೂಕ ಮಾಡಲು ಗುಲಗಂಜಿ ಬಳಕೆ ಆಗುತ್ತದೆ. ಗುಲಗಂಜಿ ಬೀಜಗಳು ಆಕರ್ಷಕವಾದ ಕೆಂಪು ಮತ್ತು ಕಡು ಕಪ್ಪು ಬಣ್ಣದಿಂದ ಕೂಡಿರುತ್ತವೆ. ಗುಲಗಂಜಿಯಲ್ಲಿ ಅಬ್ರಿನ್ ಎನ್ನುವ ಅಪಾಯಕಾರಿಯಾದ ಅಂಶವಿದೆ. ಇದು ನಾಗರಹಾವಿನ ವಿಷಕ್ಕಿಂತಲೂ ಹೆಚ್ಚು ತೀಕ್ಷ್ಣವಾಗಿದೆ.

ಏಬ್ರಸ್ ಪ್ರಿಕಟೋರಿಯಸ್ – ಗುಲಗಂಜಿಯ ಸಸ್ಯಶಾಸ್ತ್ರೀಯ ಹೆಸರು ಏಬ್ರಸ್ ಪ್ರಿಕಟೋರಿಯಸ್. ಇಂಗ್ಲೀಷ್‌ನಲ್ಲಿ ಇದಕ್ಕೆ ಇಂಡಿಯನ್ ಲಿಕೋರಿಸ್ ಎನ್ನುತ್ತಾರೆ.

ಮಲೇಷ್ಯಾ ಮತ್ತು ಇಂಡೋನೇಷ್ಯಾ ದೇಶಗಳು ಗುಲಗಂಜಿಯ ತವರು. ಚೀನಾ ದೇಶದಲ್ಲಿ ಗುಲಗಂಜಿಯು ಪ್ರೀತಿಯ ಸಂಕೇತ ಆಗಿದೆ.

ವಿಶ್ವ ಯುದ್ಧ ಸಮಯದಲ್ಲಿ ಗುಲಗಂಜಿ ಬೀಜಗಳನ್ನು ಶತ್ರು ಸೈನಿಕರನ್ನು ಕೊಲ್ಲಲು ಬಳಸುತ್ತಿದ್ದರು ಎಂಬ ಬಗ್ಗೆ ದಾಖಲೆಗಳಿವೆ. ಗುಲಗಂಜಿ ಗಿಡದ ಉಳಿದ ಭಾಗಗಳಾದ ಕಾಂಡ, ಸೊಪ್ಪು, ಎಲೆ ಇತ್ಯಾದಿಗಳು ವಿಷ ಬಾಧೆಯನ್ನುಂಟು ಮಾಡುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.ಗುಲಗಂಜಿ ವಿಷ ಬಾಧೆಯನ್ನು ಪತ್ತೆ ಹಚ್ಚುವುದು ಸ್ವಲ್ಪ ಕಷ್ಟ. ಗುಲಗಂಜಿ ಬೀಜ ತಿಂದ ನಂತರ ವಿಷಬಾಧೆಯ ಲಕ್ಷಣಗಳು ಮತ್ತು ಮರಣೋತ್ತರ ಪರೀಕ್ಷೆಯಲ್ಲಿ ಕಂಡು ಬರುವ ಕೆಲವು ವಿಶಿಷ್ಟ ಬದಲಾವಣೆಗಳ ಮೂಲಕ ವಿಷದ ನಿಖರತೆಯನ್ನು ಪತ್ತೆ ಹಚ್ಚಬಹುದು. ಇದಕ್ಕೆ ನಿಖರ ಚಿಕಿತ್ಸೆ ಇಲ್ಲ. ಆದರೂ ಕೂಡಲೇ ವಾಂತಿ ಅಥವಾ ಬೇಧಿ ಮಾಡಿಸುವ ಮೂಲಕ ರೋಗದ ತೀವ್ರತೆಯನ್ನು ಕಡಿಮೆ ಮಾಡಬಹುದು. ಶರೀರಕ್ಕೆ ರಕ್ತನಾಳದ ಮೂಲಕ ಸಾಕಷ್ಟು ಪ್ರಮಾಣದಲ್ಲಿ ಗ್ಲುಕೋಸ್ ಅಥವಾ ಉತ್ತಮ ದ್ರವಾಹಾರ ನೀಡುವುದರ ಮೂಲಕ ರೋಗದ ತೀವ್ರತೆಯನ್ನು ಕಡಿಮೆ ಮಾಡಬಹುದು. ಇದಕ್ಕಿಂತ ಮುಖ್ಯವಾಗಿ ಜಾನುವಾರುಗಳು ಗುಲಗಂಜಿ ಬೀಜಗಳು ತಿನ್ನದಂತೆ ತಡೆದುಕೊಳ್ಳುವುದು ಉತ್ತಮ ಉಪಾಯ.

” ಗುಲಗಂಜಿ ಪೂರ್ಣ ಕೆಂಪಾದರೆ ಪ್ರಳಯವಾಗುತ್ತದೆ” ಎಂಬುದು. ಇದನ್ನು ” ಕಾಡಿನ ರಾಣಿ” ಎಂದು ಕೂಡ ಕರೆಯುತ್ತಾರೆ. ಇಷ್ಟು ಮಾತ್ರವಲ್ಲದೆ ಇದರಲ್ಲಿ ವಿವಿಧ ಬಣ್ಣದ ಗುಲಗಂಜಿ ಇರುವುದು ಹಾಗೂ ಆಯುರ್ವೇದದಲ್ಲಿ ಕೂಡ ಉಪಯೋಗಿಸುತ್ತಾರೆ ಎಂಬುದು ಸಹ ಹಲವರಿಗೆ ತಿಳಿದಿಲ್ಲ.

ಚೀನಾ ದೇಶದಲ್ಲಿ ಗುಲಗಂಜಿಯು ಪ್ರೀತಿಯ ಸಂಕೇತ
ಗುಲಗಂಜಿ ಗಿಡ

ಇಂಗ್ಲೀಷ್‌ನಲ್ಲಿ ಇದನ್ನು ಕ್ರ್ಯಾಬ್ಸ್ ಐ, ಇಂಡಿಯನ್ ಲಿಕರಿಸ್, ಜೆಕ್ವೈರಿಟಿ ಎಂದು ಕರೆಯುತ್ತಾರೆ. ಇದು ಲೆಗ್ಯೂಮಿನೋಸೀ ಕುಟುಂಬ, ಪ್ಯಾಪಿಲಿಯೋನೇಸೀ ಎಂಬ ಉಪಕುಟುಂಬಕ್ಕೆ ಸೇರಿದ ಒಂದು ಬಳ್ಳಿ. ಇದನ್ನು ಮೊದಲು ಬಂಗಾರದ ಅಂಗಡಿಗಳಲ್ಲಿ ಬಂಗಾರವನ್ನು ತೂಕ ಮಾಡಲು ಬಳಸುತ್ತಿದ್ದರು. ಗುಲಗಂಜಿ ತುಂಬಾ ಮನಮೋಹಕ ಬಣ್ಣವುಳ್ಳದ್ದಾಗಿದ್ದು, ಇದರ ಗಾತ್ರ ತೊಗರಿ/ಅಲಸಂದೆ ಕಾಳಿನಷ್ಟಾಗಿರುತ್ತದೆ.

ಗುಲಗಂಜಿಯ ಬಗ್ಗೆ ಒಂದು ಗಾದೆ ಮಾತು ಕೂಡ ಉಂಟು ” ಕೋತಿ ಕೈಗೆ ಗುಲಗಂಜಿ ಕೊಟ್ಟಂಗೆ ” ಬೆಲೆ ಗೊತ್ತಿಲ್ಲದವರ ಕೈಯಲ್ಲಿ ಬೆಲೆಬಾಳುವ ವಸ್ತುವೊಂದನ್ನು ಕೊಟ್ಟರೆ ಏನಾಗಬಹುದು ಎನ್ನುವುದಕ್ಕೆ ಈ ಗಾದೆಯನ್ನು ಬಳಸುತ್ತಾರೆ. ಈಗ ಗುಲಗಂಜಿ ಎಲ್ಲಿ ಬೆಳೆಯುತ್ತದೆ, ವಿವಿಧ ಬಣ್ಣಗಳು, ಉಪಯೋಗ ಮತ್ತು ಅಪಾಯಗಳ ಕುರಿತು ಸಂಕ್ಷಿಪ್ತವಾಗಿ ತಿಳಿಯೋಣ.

ಗುಲಗಂಜಿಯ ವ್ಯಾಪ್ತಿ ಹಾಗೂ ವಿಧಗಳು

ಭಾರತಾದ್ಯಂತ ಗುಲಗಂಜಿಯ ವ್ಯಾಪ್ತಿ ಉಂಟು, ಬಯಲು ಸೀಮೆಗಳಲ್ಲಿ ಇದು ಹೇರಳವಾಗಿದೆ. ಹಿಮಾಲಯದಲ್ಲಿ 1,100ಮೀ.ಎತ್ತರದ ಪ್ರದೇಶದಲ್ಲಿಯೂ ಚನ್ನಾಗಿ ಬೆಳೆಯುತ್ತದೆ. ಇತರ ಆಸರೆ ಸಸ್ಯಗಳನ್ನು ಆಶ್ರಯಿಸಿ ಬೆಳೆಯುವ ಬಳ್ಳಿಯಾದ ಇದು ಸುಮಾರು 8-10 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ.

ಗುಲಗಂಜಿಯ ಗಿಡವು ಹಳದಿ ಬಣ್ಣದ್ದಾಗಿದ್ದು, ಕೆಂಪು ಬಣ್ಣದ ಹೂವುಗಳನ್ನು ಹೊಂದಿರುತ್ತದೆ. ಹೂವುಗಳು ಗಾತ್ರದಲ್ಲಿ ಚಿಕ್ಕವು. ಸಾಮಾನ್ಯವಾಗಿ ಅನೇಕ ಫಲಗಳು ಒಂದು ಗೊಂಚಲಿನಲ್ಲಿರುತ್ತವೆ. ಬಲಿತು ಒಣಗಿದ ಅನಂತರ ಕಾಯಿಗಳು ಬಿರಿಯುವುದರಿಂದ ಒಳಗಿನ ಬೀಜಗಳು ಕಾಣಿಸುತ್ತದೆ.

ಗುಲಗಂಜಿಯ ಬೀಜಗಳು 4-5 ಬಣ್ಣಗಳಲ್ಲಿ ಲಭ್ಯವಿದೆ ಕೆಂಪು, ಬಿಳಿ, ನೀಲಿ, ಹಸಿರು ಹಾಗೂ ಕಪ್ಪು. ಹಸಿರು ಹಾಗು ಕಪ್ಪು ಗುಲಗಂಜಿಗಳು ಸಿಗುವುದು ತುಂಬ ವಿರಳ.

ಉಪಯೋಗಗಳು

*ಗುಲಗಂಜಿಯನ್ನು ಬಂಗಾರದ ಅಂಗಡಿಯಲ್ಲಿ ಹಾರಗಳು ಮತ್ತು ಜಪಮಾಲೆಗಳನ್ನು ತಯಾರಿಸಲು ಹಾಗು ಮೊದಲು ಚಿನ್ನವನ್ನು ತೂಕ ಮಾಡಲು (ತೂಕದ ಯಂತ್ರ ಬರುವ ಮೊದಲು) ಬಳಸುತ್ತಿದ್ದರು.

*ಗುಲಗಂಜಿಯ ಬೇರನ್ನು ಮತ್ತು ಬೀಜವನ್ನು ಚೂರ್ಣ ಮಾಡಿಕೊಂಡು, ಎಮ್ಮೆ ಹಾಲಿಗೆ ಹಾಕಿ ಕಲಸಿ ಮೊಸರು ಮಾಡಿ ಬೆಣ್ಣೆ ತೆಗೆದು ನಿತ್ಯವು ಒಳಕಿವಿಗೆ ಲೇಪಿಸುವುದರಿಂದ ಕಿವಿಯ ತೊಂದರೆ ವಾಸಿಯಾಗುತ್ತದೆ.

*ಗುಲಗಂಜಿಯ ಬೇರನ್ನು ಬಾಯಿಯಲ್ಲಿ ಜಗಿದು ರಸವಿಟ್ಟು ಕೊಳ್ಳುವುದರಿಂದ, ಹುಳುಕು ಹಲ್ಲಿನ ತೊಂದರೆ ನಿವಾರಣೆಯಾಗುತ್ತದೆ.

*ಗುಲಗಂಜಿ ಎಲೆಯ ರಸ ಅಥವಾ ಬೇರನ್ನು ಅರೆದು ಸೇವಿಸುವುದರಿಂದ ರಕ್ತ ಶುದ್ಧಿಯಾಗುತ್ತದೆ. ಹಾಗೆ ಗಂಟಲು ನೋವು ಮತ್ತು ಒಣಕೆಮ್ಮು ಕಡಿಮೆಯಾಗುತ್ತದೆ.

*ಗುಲಗಂಜಿ ಎಲೆಯ ರಸವನ್ನು, ಚರ್ಮದ ಮೇಲಿನ ಕಲೆಗಳಿರುವ ಕಡೆ ಲೇಪಿಸುವುದರಿಂದ ಕಲೆಗಳ ನಿವಾರಣೆಯಾಗುತ್ತದೆ.

*ನಾಯಿ ಕಡಿದವರಿಗೆ ಸೊಪ್ಪನ್ನು ಅರೆದು ಎಳ್ಳೆಣೆಯೊಡನೆ ಕುಡಿಸುತ್ತಾರೆ.

*ತಲೆ, ಹುಬ್ಬು, ಮೀಸೆಯ ಕೂದಲು ಉದುರುತ್ತಿದ್ದರೆ, ಗುಲಗಂಜಿಯ ಬೇರನ್ನು ನೀರಿನಲ್ಲಿ ತೇದು ಕೂದಲು ಉದುರಿದ ಕಡೆ ಮಂದವಾಗಿ ಲೇಪಿಸುವುದರಿಂದ ಕ್ರಮೇಣ ಕೂದಲು ಬೆಳೆಯುತ್ತದೆ.

*ಕಾಲು, ಸೊಂಟ ಮತ್ತು ಯಾವುದೇ ಗಂಟು ನೋವು ಇದ್ದರೆ, ಗುಲಗಂಜಿಯ ಬೀಜದ ಪುಡಿಯನ್ನು ಬಿಸಿನೀರಿನಲ್ಲಿ ಕಲಸಿ ಹಚ್ಚುವುದರಿಂದ ನೋವು ಗಂಟು ಕಡಿಮೆಯಾಗುತ್ತದೆ.

*ಬಿಳಿ ಗುಲಗಂಜಿ ಬೇರಿನ ಪುಡಿಯನ್ನು ಸೇವಿಸುವುದರಿಂದ ಬುದ್ಧಿಶಕ್ತಿ ಹೆಚ್ಚುತ್ತದೆ.
ಗುಲಗಂಜಿಯ ಎಲೆ ತುಂಬಾ ಸಿಹಿ ಇರುತ್ತದೆ. ಅದರೇ ಗುಲಗಂಜಿಯು ಉಷ್ಣಕಾರಕ, ಇದನ್ನು ಗೊಗ್ಗರು ಧ್ವನಿಯನ್ನು ಸರಿಪಡಿಸಿಕೊಳ್ಳಲು ಬಳಸುತ್ತಾರೆ.
ಅತಿ ಮಧುರ ಎಂಬ ಸಸ್ಯದ ಬೇರಿನಲ್ಲಿರುವ ಲಿಕರಿಸ್ ಎಂಬ ವಸ್ತುವಿನ ಮುಖ್ಯ ಸತ್ತ್ವವಾದ ಗ್ಲೈಸಿರೈಸಿನ್ ಎಂಬುದು ಗುಲಗಂಜಿಯ ಬೇರು ಹಾಗೂ ಎಲೆಗಳಿಂದ ತಯಾರಿಸಿದ ಕಷಾಯವನ್ನು ನೆಗಡಿ,ಕೆಮ್ಮು ಮತ್ತು ಹೊಟ್ಟೆ ನುಲಿತಗಳಿಗೆ ಔಷಧಿಯಾಗಿ ಉಪಯೋಗಿಸುತ್ತಾರೆ.

*ಬೇಯಿಸಿದ ಗುಲಗಂಜಿ ಈಜಿಪ್ಟಿನಲ್ಲಿ ಆಹಾರವಾಗಿ ಬಳಸಲ್ಪಡುತ್ತದೆ.
ಸೂಚನೆ

ಈ ಗುಲಗಂಜಿಯು ಎಷ್ಟು ಉಪಯೋಗವೋ ಅಷ್ಟೇ ಅಪಾಯಕಾರಿಯು ಹೌದು. ಇದು ಮನುಷ್ಯ ಹಾಗೂ ಪ್ರಾಣಿಗಳಿಗೆ ಅಪಾಯಕಾರಿ.

ಗುಲಗಂಜಿಯ ಬೀಜಗಳನ್ನು ‘ ಏಬ್ರಿನ್’ ಎಂಬ ಟಾಕ್ಯಾಲ್ಬ್ಯುಮಿನ್ ಇದೆ. ಇದೊಂದು ಕಟು ವಿಷ. ಈ ವಿಷ ಕಣ್ಣಿನ ರೆಪ್ಪೆಗಳ ಒಳಭಾಗಕ್ಕೆ ಲೇಪಿಸಿದರೆ ರಕ್ತಕ್ಕೆ ಏಬ್ರಿನ್ ಸೇರುವುದರಿಂದ ಪ್ರಾಣಹಾನಿಯಾಗುತ್ತದೆ. ಆದರೆ ಬಾಯಿ,ಅನ್ನನಾಳ ಮತ್ತು ಹೊಟ್ಟೆಯಲ್ಲಿ ಏಬ್ರಿನ್ ಯಾವ ದುಷ್ಪರಿಣಾಮವನ್ನು ಮಾಡುವುದಿಲ್ಲ.

ಗುಲಗಂಜಿ ಸಸ್ಯದ ಬೇರು, ಕಾಂಡ, ಎಲೆ ಎಲ್ಲವೂ ಉಪಯೋಗಕಾರಿ, ಅದರೇ ಬೀಜ ಮಾತ್ರ ನಾಗರಹಾವಿನ ವಿಷಕ್ಕಿಂತಲು ಅಪಾಯ.

ಇಂದಿನ ದಿನಗಳಲ್ಲಿ ನಗರದ ಎಷ್ಟೋ ಜನಗಳಿಗೆ, ಗುಲಗಂಜಿ ಎಂದರೆ ಏನು ಎಂಬುದು ಗೊತ್ತಿಲ್ಲ ಹಾಗೂ ನೋಡಿಯೂ ಇರುವುದಿಲ್ಲ.
ರೈತರು ಇತ್ತೀಚಿನ ದಿನಗಳಲ್ಲಿ ಇದನ್ನು ತಮ್ಮ ತಮ್ಮ ಹೊಲದಲ್ಲಿ ಬೆಳೆಯನ್ನಾಗಿ. ಬೆಳೆದು ಒಳ್ಳೆಯ ಹಣ ಕೂಡ ಸಂಪಾದಿಸುತ್ತಿದಾರೆ. ಈ ಬಳ್ಳಿಯ ಆಯಸ್ಸು 50 ವರ್ಷ.
ಇದನ್ನು ನೀವು ಆರೋಗ್ಯ ದೃಷ್ಟಿಯಿಂದ ಬಳಸದಿದ್ದರೂ, ಸುಂದರವಾಗಿ ಕಾಣಿಸುತ್ತದೆ ಎಂದಾದರೂ ಹೊರಗೆ ಸಿಕ್ಕಾಗ ಶೇಖರಿಸಿಟ್ರಿಟುಕೊಳ್ಳಿ.

ಚೀನಾ ದೇಶದಲ್ಲಿ ಗುಲಗಂಜಿಯು ಪ್ರೀತಿಯ ಸಂಕೇತ
ಗುಲಗಂಜಿಯ ವಿಧಗಳು

ಗುಲಗಂಜಿಯ ವ್ಯಾಪ್ತಿ ಹಾಗೂ ವಿಧಗಳು

ಭಾರತಾದ್ಯಂತ ಗುಲಗಂಜಿಯ ವ್ಯಾಪ್ತಿ ಉಂಟು, ಬಯಲು ಸೀಮೆಗಳಲ್ಲಿ ಇದು ಹೇರಳವಾಗಿದೆ. ಹಿಮಾಲಯದಲ್ಲಿ 1,100ಮೀ.ಎತ್ತರದ ಪ್ರದೇಶದಲ್ಲಿಯೂ ಚನ್ನಾಗಿ ಬೆಳೆಯುತ್ತದೆ. ಇತರ ಆಸರೆ ಸಸ್ಯಗಳನ್ನು ಆಶ್ರಯಿಸಿ ಬೆಳೆಯುವ ಬಳ್ಳಿಯಾದ ಇದು ಸುಮಾರು 8-10 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ.

ಗುಲಗಂಜಿಯ ಗಿಡವು ಹಳದಿ ಬಣ್ಣದ್ದಾಗಿದ್ದು, ಕೆಂಪು ಬಣ್ಣದ ಹೂವುಗಳನ್ನು ಹೊಂದಿರುತ್ತದೆ. ಹೂವುಗಳು ಗಾತ್ರದಲ್ಲಿ ಚಿಕ್ಕವು. ಸಾಮಾನ್ಯವಾಗಿ ಅನೇಕ ಫಲಗಳು ಒಂದು ಗೊಂಚಲಿನಲ್ಲಿರುತ್ತವೆ. ಬಲಿತು ಒಣಗಿದ ಅನಂತರ ಕಾಯಿಗಳು ಬಿರಿಯುವುದರಿಂದ ಒಳಗಿನ ಬೀಜಗಳು ಕಾಣಿಸುತ್ತದೆ.

ಗುಲಗಂಜಿಯ ಬೀಜಗಳು 4-5 ಬಣ್ಣಗಳಲ್ಲಿ ಲಭ್ಯವಿದೆ ಕೆಂಪು, ಬಿಳಿ, ನೀಲಿ, ಹಸಿರು ಹಾಗೂ ಕಪ್ಪು. ಹಸಿರು ಹಾಗು ಕಪ್ಪು ಗುಲಗಂಜಿಗಳು ಸಿಗುವುದು ತುಂಬ ವಿರಳ.

ಗುಲಗಂಜಿಯು ಔಷಧೀಯ ಸಸ್ಯವಾಗಿದ್ದು, ಗಿಡಮೂಲಿಕೆಗಳಲ್ಲಿ ಬಳಸಲಾಗುತ್ತದೆ. ಪ್ರತಿಯೊಂದು ಬೀಜಗಳ ತೂಕವು ಒಂದೇ ಸಮಾನವಾಗಿರುತ್ತವೆ. ಆದ್ದರಿಂದ ಅಕ್ಕಸಾಲಿಗರು ಅಮೂಲ್ಯವಾದ ಲೋಹ ಮತ್ತು ವಜ್ರಗಳನ್ನು ತೊಗಲು ಬಳಸುತ್ತಿದ್ದರು. ಈ ಬೀಜಗಳನ್ನು ಆಭರಣ ಮತ್ತು ಜಪಮಾಲೆ ತಯಾರಿಸಲು ಸಹ ಬಳಸುತ್ತಾರೆ. ಈಗಂತೂ ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಆಭರಣಗಳಿಗೆ ಬೇಡಿಕೆ ಹೆಚ್ಚು ಹಾಗಾಗಿ ಇದರ ಬಳಕೆ ಆಭರಣ ತಯಾರಿಕೆ ಮತ್ತು ಕರಕುಶಲ ವಸ್ತುಗಳಲ್ಲಿ ಹೆಚ್ಚಾಗುತ್ತಿದೆ. ಇದಕ್ಕೆ ಮುಖ್ಯಕಾರಣ, ಕಾಲ ಬದಲಾದಂತೆ ಇದರ ಬಣ್ಣ ಮಾಸುವುದಿಲ್ಲ ಮೊದಲಿನಂತೆ ಕಡು ಕೆಂಪು ಬಣ್ಣವನ್ನು ಇದು ಉಳಿಸಿಕೊಂಡಿರುತ್ತದೆ.

ಇದು ಬೇರೆ ಮರಗಳನ್ನು ಆಶ್ರಯಿಸಿ ಬೆಳೆಯುವ ಬಳ್ಳಿಯಾಗಿದೆ. ಮಸುಕಾದ ಗುಲಾಬಿ ಬಣ್ಣದ ಹೂಗಳು, ಕಾಯಿಗಳು ಹಣ್ಣಾದ ನಂತರ ಇಬ್ಭಾಗವಾಗಿ ಆಕರ್ಷಿಸುವ ಕೆಂಪು ಬೀಜಗಳು ಹೊರಕಾಣುತ್ತವೆ. ಸಸ್ಯದ ಅತ್ಯಂತ ವಿಷಕಾರಿಭಾಗವೆಂದರೆ ಬೀಜ. ಎಲೆಗಳು ಮತ್ತು ಬೇರುಗಳು ಸಿಹಿಯಾಗಿರುತ್ತದೆ. ಬೀಜಗಳು ವಿಭಿನ್ನ ಬಣ್ಣಗಳಲ್ಲಿ ಅಂದರೆ ಕಪ್ಪು ಕೆಂಪು ಮಿಶ್ರಿತ, ಬಿಳಿ, ಹಸಿರು, ಕಪ್ಪು ಬಣ್ಣದಲ್ಲಿ ದೊರೆಯುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

One Comment

ಚಂದ್ರಶೇಖರ್ ಆಜಾದ್

ಚಂದ್ರಶೇಖರ್ ಆಜಾದ್ ಸಮಾಜವಾದಿ

ಅಗ್ನಿ ದೇವತೆ

ಅಗ್ನಿ : ಹಿಂದೂ ದೇವತೆ