in

ಸೂರ್ಯನ ಪುತ್ರ ಶನಿ /ಛಾಯಾ ಪುತ್ರ

ಶನಿಯು ಸೂರ್ಯ ದೇವನ ಪುತ್ರ ಹಾಗೂ ಸೂರ್ಯನ ಹೆಂಡತಿ ಛಾಯ(ನೆರಳಿನ ದೇವತೆ ) ಹಾಗಾಗಿ ಶನಿಯನ್ನು’ಛಾಯಾಪುತ್ರ’ ಎಂದೂ ಕರೆಯಲಾಗುತ್ತದೆ. ಸಾವಿನ ದೇವತೆ ಯಮನ ಹಿರಿಯ ಸಹೋದರ ಶನಿ. ಧರ್ಮ ಗ್ರಂಥಗಳ ಪ್ರಕಾರ ನ್ಯಾಯವನ್ನು ಒದಗಿಸುವ ದೇವರು.

ಸೂರ್ಯನ ಇಬ್ಬರು ಮಕ್ಕಳು ಶನಿ ಮತ್ತು ಯಮ ನ್ಯಾಯ ದೇವತೆಗಳೇ. ಜೀವನದ ಆಗು-ಹೋಗುಗಳನ್ನು ಗಮನಿಸಿ, ಶನಿಯು ಸೂಕ್ತ ರೀತಿಯ ಶಿಕ್ಷೆ ಅಥವಾ ವರವನ್ನು ಬದುಕಿರುವಾಗ ನೀಡುತ್ತಾನೆ, ಆದರೆ ಯಮನು, ಒಬ್ಬ ವ್ಯಕ್ತಿಯು ಸತ್ತ ನಂತರ ಫಲಿತಾಂಶವನ್ನು ನೀಡುತ್ತಾನೆ.

ಸೂರ್ಯನ ಶಾಖ ತಡೆಯಲಾರದೆ  ಸೂರ್ಯನ ಹೆಂಡತಿ ಸಂಗ್ಯಾದೇವಿ ಶಿವನನ್ನು ಕುರಿತು ತಪಸ್ಸು ಮಾಡಲು ಹೋಗುವ ಮುನ್ನ ತನ್ನ ನೆರಳನ್ನು ಸೃಷ್ಟಿ ಮಾಡುತ್ತಾಳೆ. ಅವಳೇ ಛಾಯಾ, ಶನಿ ಛಾಯಾಳಿಂದ ಜನಿಸುತ್ತಾನೆ. ಹಾಗಾಗಿ ಶನಿಯ ಬಣ್ಣ ಕಪ್ಪಾಗಿದೆ. ಸೂರ್ಯ ದೇವನು ಕಪ್ಪಾಗಿರುವ ಮಗುವನ್ನು ನೋಡಿ ತನ್ನ ಹೆಂಡತಿಯ ಮೇಲೆ ಅನುಮಾನ ಪಡುತ್ತಾನೆ. ಆಗ ತನ್ನ ತಾಯಿಯನ್ನು ಅವಮಾನಿಸಿದ ತನ್ನ ಸ್ವಂತ ತಂದೆಯ ಮೇಲೆ ದೃಷ್ಟಿ ಇಟ್ಟಾಗ ಸೂರ್ಯನ ಮೇಲೆ ಗ್ರಹಣವಾಗಿ ಪರಿಣಮಿಸುತ್ತದೆ. ತಂದೆಯ ಮೇಲೆ ತನ್ನ ಮೊದಲ ದೃಷ್ಟಿ ಇಡುತ್ತಾನೆ.

ಈತನು ಒಬ್ಬ ಮಹಾನ್ ಉಪಾಧ್ಯಾಯ. ಶನಿದೇವ ಯಾವ ವ್ಯಕ್ತಿಯು ತಪ್ಪಿನ/ಮೋಸದ, ಅನ್ಯಾಯದ ಹಾದಿ ಹಿಡಿಯುತ್ತಾರೋ ಅವರಿಗೆ ಶನಿಯು ಬಹಳ ಕಷ್ಟವನ್ನು ನೀಡುತ್ತಾನೆ. ಹಿಂದೂ ಧರ್ಮಗ್ರಂಥಗಳ ಆಧಾರದ ಪ್ರಕಾರ ಶನಿಯು ತೊಂದರೆಯನ್ನು ಕೊಡುವ ದೇವರು ಹಾಗು ಒಳ್ಳೆಯವರನ್ನು ಆಶೀರ್ವದಿಸುವವನೂ ಸಹ ಆಗಿದ್ದಾನೆ.

ಸೂರ್ಯನ ಪುತ್ರ ಶನಿ /ಛಾಯಾ ಪುತ್ರ

ಈತನು ಕಪ್ಪು ಬಣ್ದವನಾಗಿದ್ದು, ಕಪ್ಪು ಬಟ್ಟೆಯನ್ನು ಧರಿಸಿದವನು , ಕೈಯಲ್ಲಿ ಕತ್ತಿಯನ್ನು ಹಿಡಿದವನಾಗಿದ್ದು, ಬಾಣ ಹಾಗು ಎರಡು ಚಾಕು ಹೊಂದಿದ್ದು, ಕಪ್ಪಗಿನ ಕಾಗೆಯ ಮೇಲೆ ಸವಾರಿ ಮಾಡುವವನಾಗಿದ್ದಾನೆ. ನೀಲಿ ರತ್ನ ಪ್ರಿಯ.

ಶನಿಗೆ ಎಂಟು ಜನ ಹೆಂಡತಿಯರಿದ್ದಾರೆ. ದ್ವಾಜಿನಿ, ಧಾಮಿನಿ, ಕಂಕಲಿ, ಕಲಹಪ್ರಿಯ, ಕಂಟಕಿ, ತುರಂಗಿ, ಮಹಿಷಿ ಮತ್ತು ಅಜ. ಮನುಷ್ಯರಾದ ನಾವು ಶನಿ ದೇವನ ಕೃಪೆಗೆ ಪಾತ್ರರಾಗಲು ಈ ಹೆಸರುಗಳನ್ನು ಭಯ ಭಕ್ತಿಯಿಂದ ಪಠಿಸಬೇಕು. ಮುಖ್ಯವಾಗಿ ಶನಿವಾರದ ದಿನ ಶುಚಿರ್ಭೂತರಾಗಿ ಈ ಕೆಲಸ ಮಾಡಬೇಕು. ಶನಿದೇವನ ದೃಷ್ಟಿ ಕೆಟ್ಟದ್ದು ಎಂಬ ಭಾವನೆ ಇಂದಿಗೆ ಜನರಲ್ಲಿ ಬರಬೇಕಾದರೆ ಅದಕ್ಕೆ ಆತನ ಹೆಂಡತಿ ಧಾಮಿನಿಯೇ ಕಾರಣ ಅಂತೆ.

ಚಿಕ್ಕ ವಯಸ್ಸಿನಿಂದಲೂ ಶನಿಗೆ ಶ್ರೀಕೃಷ್ಣ ದೇವರೆಂದರೆ ಬಹಳ ಅಚ್ಚು ಮೆಚ್ಚು ಮತ್ತು ಭಕ್ತಿ ಕೂಡ. ಶನಿಯು ಶ್ರೀಕೃಷ್ಣನನ್ನು ಜಪಿಸುತ್ತಾ ಧ್ಯಾನಕ್ಕೆ ಕೂರುತ್ತಾ ಇದ್ದ. ದೊಡ್ಡವನಾದ ಮೇಲೂ ಸಹ ಇದೇ ರೀತಿ ಮುಂದುವರೆಸುತ್ತಾನೆ. ಪ್ರೌಢಾವಸ್ಥೆಗೆ ಬಂದ ಮೇಲೆ ಚಿತ್ರರಥನ ಮಗಳಾದ ಧಾಮಿನಿಯನ್ನು ಮದುವೆಯಾಗುತ್ತಾನೆ. ಧಾಮಿನಿಗೆ ಕೆಲವು ದೈವೀಶಕ್ತಿಗಳು ಹುಟ್ಟಿನಿಂದಲೇ ಬಂದಿದ್ದವು. ಬಹಳಷ್ಟು ಸುಂದರವಾಗಿದ್ದ ಅವಳು ಬುದ್ಧಿವಂತೆಯೂ ಆಗಿದ್ದಳು.

ಧಾಮಿನಿ ಒಮ್ಮೆ  ಯೋಚಿಸುತ್ತಾ ಕುಳಿತಿರಬೇಕಾದರೆ ಆಕೆಯ ಮನಸ್ಸಿನಲ್ಲಿ ಒಂದು ಬಲವಾದ ಆಲೋಚನೆ ಬಂತು. ಅದೇನೆಂದರೆ ನಾನೇಕೆ ಗಂಡು ಮಗುವಿನ ತಾಯಿ ಆಗಬಾರದು ಎಂದು. ತಕ್ಷಣ ಸ್ವಲ್ಪವೂ ತಡ ಮಾಡದೆ ಶನಿ ದೇವನ ಬಳಿ ಬಂದು ತನ್ನ ಮನಸ್ಸಿನ ಬಯಕೆಯನ್ನು ತಿಳಿಸಿ ಹೇಳಿದಳು. ಆದರೆ ಆ ಕ್ಷಣದಲ್ಲಿ ಶನಿ ದೇವನು ಶ್ರೀಕೃಷ್ಣನ ಜಪ ಮಾಡುತ್ತಾ ಧ್ಯಾನದಲ್ಲಿ ಮಗ್ನನಾಗಿದ್ದನು. ಯಾರೂ ತನ್ನನ್ನು ಎಚ್ಚರ ಪಡಿಸಬಾರದು ಎಂಬ ಇಚ್ಛೆಯಿಂದ ಧ್ಯಾನದಲ್ಲಿ ಕುಳಿತಿದ್ದನು. ಧಾಮಿನಿಯು ಎಷ್ಟೇ ಬಾರಿ ಶನಿಯನ್ನು ಎಚ್ಚರಿಸಲು ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ.

ತನ್ನ ಮನಸ್ಸಿನ ಆಸೆಯನ್ನು ತನ್ನ ಗಂಡನಾದ ಶನಿಯ ಬಳಿ ಪ್ರೀತಿಯಿಂದ ಹೇಳಿಕೊಳ್ಳಲು ಬಹಳ ಉತ್ಸುಕಳಾಗಿ ಬಂದ ಧಾಮಿನಿಗೆ ದೊಡ್ಡ ಆಘಾತವಾಯಿತು. ಮೊದಲೇ ದೈವೀಶಕ್ತಿಯನ್ನು ಪಡೆದಿದ್ದ ಆಕೆ ತಾನು ಇಷ್ಟೆಲ್ಲಾ ಎಚ್ಚರ ಪಡಿಸಿದರೂ ನನ್ನ ಕಡೆ ತಿರುಗಿಯೂ ನೋಡದ ಶನಿ ಇನ್ನು ಮುಂದೆ ತನ್ನ ದೃಷ್ಟಿಯಿಂದ ಯಾರನ್ನಾದರೂ ಸ್ವಲ್ಪ ಕಣ್ಣೆತ್ತಿ ನೋಡಿದರೂ ಸಹ ಅವರು ನಾಶವಾಗಿ ಹೋಗಲಿ ಎಂದು ಶಾಪವಿತ್ತಳು. ಆದ್ದರಿಂದಲೇ ಇಂದಿಗೂ ಕೂಡ ಶನಿಯ ವಕ್ರ ದೃಷ್ಟಿ ಬಹಳ ಕೆಟ್ಟದ್ದು ಎಂದು ಜನ ನಂಬಿದ್ದಾರೆ. ಶನಿಯ ದೃಷ್ಟಿ ಒಬ್ಬರ ಮೇಲೆ ಬಿದ್ದರೆ ಮುಗಿಯಿತು. ಆ ವ್ಯಕ್ತಿ ಕಷ್ಟದ ಸರಪಳಿಯಲ್ಲಿ ಸಿಲುಕಿ ಪೇಚಾಡುವಂತೆ ಜೀವನ ಆತನ ವಿರುದ್ಧವೇ ತಿರುಗಿ ಬೀಳುತ್ತದೆ. ಆದ್ದರಿಂದಲೇ ಶನಿ ದೇವ ಕೆಟ್ಟವನಾಗಿರದಿದ್ದರೂ ಆತನ ದೃಷ್ಟಿ ಮಾತ್ರ ಬಹಳ ಕೆಟ್ಟದ್ದು ಎಂದು ಪುರಾಣಗಳಲ್ಲಿ ತಿಳಿಸುತ್ತದೆ.

ಶನಿಯು ಚಿಕ್ಕ ವಯಸ್ಸಿನಿಂದ ಬಹಳ ಹಠಮಾರಿ ಸ್ವಭಾವವನ್ನು ಹೊಂದಿರುವ ಕಾರಣ ತನ್ನ ಧ್ಯಾನ ಮುಗಿಯುವವರೆಗೆ ಮೇಲೆ ಏಳಲೇ ಇಲ್ಲ. ನಂತರ ಕಣ್ಣು ಬಿಟ್ಟು ನೋಡಿದಾಗ ಆತನ ಹೆಂಡತಿ ಧಾಮಿನಿ ಕಣ್ಣೆದುರಿಗಿದ್ದಳು. ನೋಡಿದ ತಕ್ಷಣ ವಿಷಯ ತಿಳಿದು ಆಕೆಗೆ ಕ್ಷಮೆ ಕೇಳಿದನು ಮತ್ತು ತನ್ನ ಧ್ಯಾನದ ಬಗ್ಗೆ ವಿವರಿಸಿ ಹೇಳಿದನು. ಆಗ ಅರ್ಥ ಮಾಡಿಕೊಂಡ ಧಾಮಿನಿ ಬಹಳ ನೊಂದುಕೊಂಡಳು ಮತ್ತು ತನ್ನ ಶಾಪವನ್ನು ಹಿಂಪಡೆಯಲು ಏನೆಲ್ಲ ಪ್ರಯತ್ನ ಪಟ್ಟಳು. ಆದರೆ ಅವಳಿಗೆ ಶಾಪವನ್ನು ನೀಡುವ ಶಕ್ತಿ ಇತ್ತೇ ವಿನಃ ಅದನ್ನು ಹಿಂಪಡೆಯುವ ಯಾವುದೇ ಶಕ್ತಿ ಇರಲಿಲ್ಲ. ಆದ್ದರಿಂದ ಶನಿಯು ಇನ್ನು ಮುಂದೆ ತನ್ನನ್ನು ಭಯ ಭಕ್ತಿಯಿಂದ ಮತ್ತು ನಿಷ್ಠೆಯಿಂದ ಪೂಜಿಸುವವರನ್ನು ಎಂದಿಗೂ ತಾನು ನೋಡುವುದಿಲ್ಲ ಮತ್ತು ಅವರ ವಿಷಯ ಬಂದಾಗ ನಾನು ತಲೆ ತಗ್ಗಿಸಿ ನಿಲ್ಲುತ್ತೇನೆ ಎಂದು ಶಪಥ ಮಾಡಿದ.

ಹನುಮಂತನನ್ನು ಜಪಿಸಿದರೆ ಶನಿ ದೃಷ್ಟಿಯಿಂದ ಪಾರಾಗಬಹುದು.

ಸೂರ್ಯನ ಪುತ್ರ ಶನಿ /ಛಾಯಾ ಪುತ್ರ

ಮತ್ತೊಂದು ಕಥೆಯ ಪ್ರಕಾರ, ಹನುಮಂತ ಮತ್ತು ಶನಿ ಭಗವಾನ್ ನಡುವೆ ನಡೆದ ಜಟಾಪಟಿಯಲ್ಲಿ , ಶನಿಯು ಹನುಮಂತನ ಹೆಗಲನ್ನು ಏರಿ, ಹನುಮಂತ ನ ಮೇಲೆ ಪ್ರಭಾವವನ್ನು ಬೀರುವ ಸಂದರ್ಭದಲ್ಲಿ , ಹನುಮಾನನು ಬಹಳ ಎತ್ತರವಾಗಿ ಬೆಳೆಯಲಾರಂಭಿಸಿದಾಗ, ಶನಿಯು ಹನುಮಾನನ ತೋಳುಗಳ ನಡುವೆ ಸಿಲುಕಿಕೊಂಡು, ಅತ್ಯಂತ ನೋವಿನಿಂದ ನರಳುತ್ತಾ, ತಡೆದುಕೊಳ್ಳಲಾಗದೆ, ಶನಿಯು ಹನುಮಾನನನ್ನು,ತನ್ನನ್ನು ಈ ಕಷ್ಟದಿಂದ ಪಾರು ಮಾಡಲು ಬೇಡಿಕೊಳ್ಳಲಾಗಿ , ಯಾರು ಹನುಮಾನನನ್ನು, ಪ್ರಾರ್ಥಿಸುತ್ತಾರೋ, ಅಂತಹ ವ್ಯಕ್ತಿಗಳ ಮೇಲಿನ ತನ್ನ ಪ್ರಭಾವವನ್ನು ಕಡಿಮೆ ಮಾಡುವುದಾಗಿ, ಶನಿ ಆಶ್ವಾಸನೆಯನ್ನು ನೀಡಿದ ಮೇಲೆ , ಹನುಮಾನನು ಅವನನ್ನು ಬಿಡುಗಡೆ ಮಾಡುತ್ತಾನೆ.

ದಶರಥ ಮಹಾರಾಜನೊಬ್ಬನೇ ದೇವ ಶನೀಶ್ವರನನ್ನು ದ್ವಂದ್ವ ಯುದ್ಧಕ್ಕೆ ಆಹಾನಿಸಿದ್ದು, ಕಾರಣವೆಂದರೆ ಆತ ತನ್ನ ರಾಷ್ಟ್ರವನ್ನು ಅನಾವೃಷ್ಟಿ ಮತ್ತು ಬಡತನದಿಂದ ಪಾರು ಮಾಡಬೇಕಾಗಿದ್ದು, ಶನಿಮಹಾತ್ಮನು ಆತನನ್ನು ಕೊಂಡಾಡಿ, ದಶರಥನ ಸದ್ಗುಣಗಳನ್ನು ಹೊಗಳಿ, ಉತ್ತರಿಸುತ್ತಾ, “ನಾನು ನನ್ನ ಕರ್ತವ್ಯವನ್ನು ಮಾಡದೇ ಇರಲಾರೆ, ಆದರೆ ನಿನ್ನ ಧೈರ್ಯವನ್ನು ಮೆಚ್ಚುತ್ತೇನೆ” ಎನ್ನುತ್ತಾನೆ. ಮಹಾ ಸಂತ ಋಷ್ಯಶೃಂಗರು ನಿನಗೆ ಸಹಾಯ ಮಾಡುತ್ತಾರೆ. ಎಲ್ಲಿ ಋಷ್ಯಶೃಂಗನು ಇರುತ್ತಾನೋ, ಎಲ್ಲಿ ಅವನು ವಾಸ ಮಾಡುತ್ತಾನೋ, ಆ ರಾಜ್ಯದಲ್ಲಿ ಬರಗಾಲವಾಗಲಿ, ಒಣ ಭೂಮಿಯಾಗಲಿ ಇರುವುದಿಲ್ಲ”. ಶನಿ ಮಹಾತ್ಮನಿಂದ ವರವನ್ನು ಪಡೆಯುತ್ತಾನೆ ರಾಜ ದಶರಥನು,  ರಾಜ ಬುದ್ಧಿವಂತಿಕೆಯಿಂದ ಕಷ್ಟದ ಪರಿಸ್ಥಿತಿಯನ್ನು ಎದುರಿಸಿ, ಋಷ್ಯಶೃಂಗರನ್ನು ತನ್ನ ಅಳಿಯನನ್ನಾಗಿ ಮಾಡಿ ಕೊಳ್ಳುತ್ತಾನೆ. ‘ಸಂತ  (ಶಾಂತಾ) ದಶರಥನ ಮಗಳು ಋಷ್ಯಶೃಂಗನನ್ನು ಮದುವೆಯಾದ ಕಾರಣದಿಂದ, ಆತ ಅಯೋಧ್ಯೆಯಲ್ಲಿ ಉಳಿಯುತ್ತಾನೆ.ಹಾಗಾಗಿ ರಾಜ್ಯದಲ್ಲಿ ಬರಗಾಲ ಎನ್ನುವುದು ಇಲ್ಲವಾಗುತ್ತದೆ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಚೌತಿಯ ದಿನ ಚಂದ್ರನನ್ನು ನೋಡಿದರೆ ಆಪತ್ತು ತಪ್ಪಿದ್ದಲ್ಲ

ಬಾಲ ನರೆ / ವಯಸ್ಸಿಗಿಂತ ಮುಂಚೆ ಬರುವ ಬಿಳಿ ಕೂದಲಿಗೆ ನೈಸರ್ಗಿಕ ಮದ್ದು