ಏಷ್ಟು ಮಂದಿಗೆ ಗೊತ್ತು ಕಾಗೆಗಳಿಗೆ ಒಂದು ಕಣ್ಣು ಮಾತ್ರ ಕಾಣುವುದು, ಮತ್ತು ಅವುಗಳಿಗೆ ಸೀತಾ ಮಾತೆಯ ಶಾಪ ಇದೆ ಅಂತ?
ಪುರಾಣದ ಕಥೆಗಳು ಹೀಗಿವೆ :
ಸೀತೆಯ ಶಾಪ :

ರಾಮ, ಲಕ್ಷ್ಮಣ ಹಾಗು ಸೀತಾಮಾತೆ ವನವಾಸದ ಸಂದರ್ಭದಲ್ಲಿ ನಡೆದ ಹಲವಾರು ಘಟನೆಗಳು ಸಂಭವಿಸಿರುತ್ತದೆ. ಅವೆಲ್ಲಾ ಜನರ ಜೀವನದ ಮೇಲೆ ಪ್ರಭಾವ ಬೀರುತ್ತಲೇ ಇವೆ. ರಾಮ ವನವಾಸದಲ್ಲಿದ್ದ ಸಂದರ್ಭದಲ್ಲಿ ಅವರ ತಂದೆ ದಶರಥರ ದೇಹಾಂತ್ಯವಾಗಿರುವ ಸುದ್ದಿ ಬರುತ್ತದೆ. ಆ ಸುದ್ದಿ ಕೇಳಿದಾಕ್ಷಣ ಶ್ರೀರಾಮನಿಗೆ ಒಮ್ಮೆ ಸಿಡಿಲು ಬಡಿದ ಅನುಭವವಾಗುತ್ತದೆ. ಆದರೆ 14 ವರ್ಷ ವನವಾಸ ಮುಗಿಸಿಯೇ ಆಯೋಧ್ಯೆಗೆ ಬರಬೇಕು ಎನ್ನುವ ಕೈಕೆಯಿ ಮಾತನ್ನ ಮೀರದ ರಾಮ ತಂದೆಯ ಅಂತ್ಯಕ್ರಿಯೆಗೆ ಹೋಗಲು ಸಾಧ್ಯವಾಗುವುದಿಲ್ಲ.
ಮಾವನವರ ದೇಹಾಂತ್ಯವಾಗಿದೆ ಎಂಬ ವಿಷಯ ತಿಳಿದ ಕೂಡಲೇ ತನ್ನ ಮೈದುನನಾದ ಲಕ್ಷ್ಮಣನಿಗೆ ಸುದ್ದಿ ತಿಳಿಸಿ ದಶರಥ ಮಹಾರಾಜರಿಗೆ ಪಿಂಡದಾನ ಮಾಡಲು ಬೇಕಾದ ಸಾಮಗ್ರಿಗಳನ್ನ ತರಲು ಸೀತಾಮಾತೆ ಲಕ್ಷ್ಮಣನಿಗೆ ತಿಳಿಸುತ್ತಾಳೆ. ಅತ್ತಿಗೆಯ ಆಜ್ಞೆಯನ್ನ ಪಾಲಿಸಲು ಲಕ್ಷ್ಮಣ ಪಿಂಡಪ್ರದಾನಕ್ಕೆ ಬೇಕಾದ ಸಾಮಗ್ರಿಗಳನ್ನ ತರಲು ಕಾಡಿನಲ್ಲಿ ಹೊರಟುಹೋದ. ಬಹಳ ಹೊತ್ತಾದರೂ ಲಕ್ಷ್ಮಣ ಬರಲೇ ಇಲ್ಲ. ಕಾಯುತ್ತ ಕೂತಿದ್ದ ಸೀತಾಮಾತೆ ಯಾಕೋ ಲಕ್ಷ್ಮಣ ಬರೋಕೆ ಇನ್ನೂ ತಡವಾಗಬಹುದು ಎಂದರಿತು ತಾವೇ ಸುತ್ತಮುತ್ತಲಿನ ಪ್ರದೇಶದಲ್ಲಿ ತಮಗೆ ಬೇಕಾದ ವಸ್ತುಗಳನ್ನ ಜೋಡಿಸಿಕೊಂಡು ದಶರಥ ಮಹಾರಾಜರ ಪಿಂಡದಾನವನ್ನ ಮಾಡುತ್ತಾಳೆ. ಇದಕ್ಕೆ ಸಾಕ್ಷಿಯಾಗಿ ಒಬ್ಬ ಪಂಡಿತ, ಹಸು, ಕಾಗೆ ಹಾಗು ಫಲ್ಗು ನದಿಯ ಸಮ್ಮುಖದಲ್ಲಿ ಪಿಂಡ ಪ್ರದಾನ ಮಾಡುತ್ತಾಳೆ.
ಆದರೆ ರಾಮ ಹಾಗು ಲಕ್ಷ್ಮಣ ವಾಪಸ್ಸಾದ ಬಳಿಕ ಸೀತಾಮಾತೆ ತಾನು ಪಿಂಡದಾನವನ್ನ ಮಾಡಿದ್ದಾಗಿ ಹಾಗು ಅದಕ್ಕೆ ಈ ನಾಲ್ವರು ಸಾಕ್ಷಿ, ಬೇಕಿದ್ದರೆ ನೀವು ಇವರನ್ನ ಕೇಳಬಹುದು ಎನ್ನುತ್ತಾಳೆ. ಯಾವಾಗ ರಾಮ ನಾಲ್ವರನ್ನ ಈ ಬಗ್ಗೆ ಪ್ರಶ್ನಿಸಿದಾಗ ಅವರ‌್ಯಾರೂ ಉತ್ತರಿಸದೆ ಮೌನವಾಗಿ ಬಿಡುತ್ತಾರೆ. ಆಗ ಶ್ರೀರಾಮ ಸೀತೆಯ ಮೇಲೆ ಕೋಪಗೊಳ್ಳುತ್ತಾನೆ. ಈ ವಿಷಯದಿಂದ ಸೀತಾಮಾತೆ ಬೇಸರಗೊಳ್ಳುತ್ತಾಳೆ, ಬಳಿಕ ಆಕೆ ತಕ್ಷಣವೇ ದಶರಥ ಮಹಾರಾಜರ ಆತ್ಮವನ್ನ ಕರೆದು ಈ ಬಗ್ಗೆ ತಿಳಿಸುತ್ತಾಳೆ. ದಶರಥ ಮಹಾರಾಜರ ಆತ್ಮವು ಸೀತೆ ನನ್ನ ಪಿಂಡದಾನ ಮಾಡಿದ್ದಾಳೆ, ಈ ನಾಲ್ವರೂ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳುತ್ತದೆ.
ಮತ್ತೇನು, ತನ್ನ ಅಪಮಾನ ಮಾಡಿದ ಈ ನಾಲ್ವರ ಮೇಲೂ ಕ್ರೋಧಿತರಾಗಿ ಅವರೆಲ್ಲರಿಗೂ ಶಾಪ ನೀಡುತ್ತಾಳೆ. ಪಂಡಿತನಿಗೆ ಶಾಪ ನೀಡುತ್ತ ನಿನಗೆ ತಿನ್ನಲು ಅದೆಷ್ಟೇ ಆಹಾರ ಸಿಗಲಿ, ರಾಜಮಹಾರಾಜರ ಬಳಿ ಹಣ ಸಿಕ್ಕರೂ ಕೂಡ ನೀನು ಸದಾ ದರಿದ್ರನಾಗೆ ಇರು ಎನ್ನುತ್ತಾಳೆ, ಫಲ್ಗು ನದಿಗೆ ಶಾಪ ನೀಡುತ್ತ ಎಷ್ಟೇ ಮಳೆ ಬಂದರೂ ನೀನೂ ಒಣಗಿಹೋಗು ಎಂದು ಶಾಪ ನೀಡುತ್ತಾಳೆ. ನಿನ್ನನ್ನ ಜನ ಪೂಜಿಸಿದರೂ ನೀನು ಅಲ್ಲಿ ಇಲ್ಲಿ ಓಡಾಡುತ್ತ ಮೇವಿಗಾಗಿ ಪರದಾಡು ಎಂದು ಆಕಳಿಗೆ ಶಾಪ ನೀಡುತ್ತಾಳೆ. ಕೊನೆಯದಾಗಿ ನೀನು ಒಬ್ಬನೇ ತಿಂದರೂ ನಿನ್ನ ಹೊಟ್ಟೆ ತುಂಬದೆ ನೀನು ನಿನ್ನ ಕಾಗೆಗಳ ಗುಂಪಲ್ಲೇ ಕಚ್ಚಾಡಿ ತಿಂದು ಹೊಟ್ಟೆ ತುಂಬಿಸಿಕೋ ಎಂದು ಕಾಗೆಗೆ ಶಾಪ ಕೊಡುತ್ತಾಳೆ.
ಕಾಗೆಗಳಿಗೆ ಒಂದು ಕಣ್ಣು ಮಾತ್ರ ಕಾಣುವುದು, ಇದರ ಕಾರಣ ಶ್ರೀರಾಮನ ಬ್ರಮ್ಮಾಸ್ತ್ರ :

ಸೀತಾದೇವಿಯನ್ನು ಹುಡುಕಿಕೊಂಡು ಲಂಕಾ ಪಟ್ಟಣದಲ್ಲಿ ಓಡಾಡುತ್ತಿರುವಾಗ ಅಶೋಕ ವನದಲ್ಲಿ ರಾಕ್ಷಸ ಮಹಿಳೆಯರ ಪಹರೆ ಮಧ್ಯೆ ಸೀತಾದೇವಿ ಇರುವುದು ಹನುಮಂತನ ಕಣ್ಣಿಗೆ ಬೀಳುತ್ತದೆ. ಆದರೆ ತಕ್ಷಣವೇ ಸೀತಾ ದೇವಿ ಬಳಿ ಹೋಗದ ಹನುಮಂತ ಅಲ್ಲೇ ಇದ್ದ ಮರವೊಂದರ ಮೇಲೆ ಕುಳಿತು ರಾಮ ಜಪ ಮಾಡಲು ಶುರು ಮಾಡುತ್ತಾನೆ. ದಶಕಂಠ ರಾವಣನ ಸಾಮ್ರಾಜ್ಯದಲ್ಲಿ ರಾಮ ನಾಮ ಜಪ ಕೇಳಿದ ಸೀತಾ ದೇವಿ ಅಚ್ಚರಿಯ ಚಕಿತಳಾಗಿ ಮರದ ಮೇಲಿದ್ದ ಹನುಮಂತನನ್ನ ನೋಡಿ ನೀನು ಯಾರೆಂದು ಕೇಳುತ್ತಾಳೆ. ಆಗ ಆಂಜನೇಯನು ಗುರುತಿಗಾಗಿ ರಾಮ ನೀಡಿದ್ದ ಮುದ್ರಿಕೆಯನ್ನ ಸೀತಾ ದೇವಿಗೆ ನೀಡಿ ಶ್ರೀರಾಮನು ನನ್ನನ್ನ ಕಳಿಸಿದ್ದಾನೆ ತಾಯಿ ಎಂದು ಹೇಳುತ್ತಾನೆ. ಮುದ್ರಿಕೆಯನ್ನ ಕಂಡ ಸೀತೆ ಸಂತೋಷಭರಿತಳಾಗಿ ತನ್ನ ಬಳಿ ಇದ್ದ ಚೂಡಾಮಣಿಯನ್ನ ಹನುಮಂತನಿಗೆ ಕೊಟ್ಟು ಯಾರಿಗೂ ತಿಳಿಯದ ರಹಸ್ಯವಾದ ಕತೆಯೊಂದನ್ನ ಹೇಳುತ್ತಾಳೆ. ಅದುವೇ ಶ್ರೀರಾಮನು ಕಾಗೆಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದ ಕತೆ.
ಶ್ರೀರಾಮನು, ಸೀತಾ ದೇವಿ ಲಕ್ಷ್ಮಣ ಸಮೇತ ವನವಾಸದಲ್ಲಿದ್ದ ವೇಳೆ ಚಿತ್ರಕೂಟ ಎಂಬ ಪರ್ವತದಲ್ಲಿ ತಂಗಿರುತ್ತಾರೆ. ಒಂದು ದಿನ ರಾಮ ಸೀತಾ ದೇವಿಯ ತೊಡೆಯ ಮೇಲೆ ಮಲಗಿ ನಿದ್ದೆ ಮಾಡುತ್ತಿರುತ್ತಾನೆ. ಇದೇ ವೇಳೆ ಇಂದ್ರನ ಮಗ ಜಯಂತ ಕಾಗೆಯ ರೂಪದಲ್ಲಿ ಬಂದು ಸೀತೆಯ ಎದೆಯನ್ನ ಕುಕ್ಕಲು ಪ್ರಾರಂಭ ಮಾಡುತ್ತಾನೆ. ಆದರೆ ರಾಮ ನಿದ್ದೆಯಲ್ಲಿದ್ದಾನೆ. ಅಲ್ಲಾಡಿದರೆ ರಾಮನಿಗೆ ಎಚ್ಚರಿಕೆ ಆಗುತ್ತದೆ. ಸುಮ್ಮನೆ ಕುಳಿತಿದ್ದರೆ ಕಾಗೆ ಕುಕ್ಕುವುದನ್ನ ನಿಲ್ಲಿಸುವುದಿಲ್ಲ ಎಂಬ ಹೆದರಿಕೆ ಬೇರೆ. ಇನ್ನು ಸೀತೆಯ ಎದೆಯಿಂದ ರಕ್ತ ಸುರಿಯಲು ಶುರುವಾಗುತ್ತೆ. ಈಗಿದ್ದಾಗಲೇ ರಾಮನಿಗೆ ಎಚ್ಚರವಾಗುತ್ತೆ. ಕಾಗೆಯ ಉಪದ್ರವಕ್ಕೆ ಕೋಪಗೊಂಡ ರಾಮ ಅಲ್ಲೇ ಇದ್ದ ಹುಲ್ಲುಕಡ್ಡಿಯನ್ನ ತೆಗೆದುಕೊಂಡು ಬ್ರಹ್ಮಾಸ್ತ್ರವನ್ನ ಮಂತ್ರಿಸಿ ಪ್ರಯೋಗ ಮಾಡುತ್ತಾನೆ. ರಾಮ ಬಾಣದಿಂದ ತಪ್ಪಿಸಿಕೊಳ್ಳಲು ಕಾಗೆ ಸ್ವರ್ಗ, ಬ್ರಹ್ಮ ಲೋಕ, ಕೈಲಾಸ ಸೇರಿದಂತೆ ಇಡೀ ಬ್ರಹ್ಮಾಂಡವನ್ನು ಸುತ್ತುತ್ತಾನೆ ಯಾರೂ ಇದರ ಸಹಾಯಕ್ಕೆ ಬರುವುದಿಲ್ಲ.
ಕೊನೆಗೆ ಶ್ರೀರಾಮನ ಪಾದವೇ ಗತಿಯೆಂದು ರಾಮನ ಕಾಲುಗಳಿಗೆ ಬಿದ್ದು ನನ್ನನ್ನ ರಕ್ಷಿಸು ಎಂದು ಶರಣಾಗುತ್ತದೆ. ಕೊನೆಗೆ ಕಾಗೆಯ ಬಲಗಣ್ಣಿಗೆ ಮಾತ್ರ ಹಾನಿಯಾಗುವಂತೆ ಶ್ರೀರಾಮ ಮಾಡುತ್ತಾನೆ. ಒಂದು ಕಣ್ಣು ಕಳೆದುಕೊಂಡ ಕಾಗೆಗೆ ಶ್ರೀರಾಮ ಪ್ರಾಣ ಭಿಕ್ಷೆ ನೀಡುತ್ತಾನೆ. ಹಾಗಾಗಿ ಇಂದಿಗೂ ಕಾಗೆಗಳಿಗೆ ಗೋಲ ಎರಡಿದ್ದರೂ ಕಣ್ಣು ಕಾಣುವುದು ಒಂದೇ. ಈ ರಹಸ್ಯ ಕಥೆ ನನ್ನನ್ನ ಬಿಟ್ಟರೆ ರಾಮನಿಗೆ ಮಾತ್ರ ತಿಳಿದಿದೆ. ಈ ಕಥೆಯನ್ನು ನೀನು ರಾಮನಿಗೆ ಹೇಳು ಅವನು ಖುಷಿಯಾಗುತ್ತಾನೆ. ಹಾಗೂ ಅದಷ್ಟು ಬೇಗ ಬಂದು ರಾವಣನನ್ನ ಸಂಹಾರ ಮಾಡಿ ತನ್ನನ್ನು ಕರೆದೊಯ್ಯಲು ಹೇಳು, ಎಂದು ಹೇಳಿ ಸೀತಾದೇವಿ ಹನುಮಂತನನ್ನ ಕಳುಹಿಸಿಕೊಡುತ್ತಾಳೆ.
ಧನ್ಯವಾದಗಳು.
GIPHY App Key not set. Please check settings