in

ಲಂಕಾದ ಅಧಿಪತಿ, ದಶಕಂಟ ರಾವಣ

ಲಂಕಾದ ಅಧಿಪತಿ, ದಶಕಂಟ ರಾವಣ


ರಾಮಾಯಣದಲ್ಲಿ ರಾಮ, ಸೀತೆ, ಲಕ್ಷ್ಮಣ ಹಾಗೂ ಹನುಮನ ಪಾತ್ರ ಎಷ್ಟು ಮುಖ್ಯವೋ ಅಷ್ಟೇ ರಾವಣನ ಪಾತ್ರ ಕೂಡ ಪ್ರಮುಖವಾದುದಾಗಿದೆ. ಲಂಕೆಯಲ್ಲಿದ್ದ ರಾಕ್ಷಸ ರಾಜ ರಾವಣ. ರಾವಣನು ಬ್ರಹ್ಮನನ್ನು ಕುರಿತು ಹತ್ತು ಸಾವಿರ ವರ್ಷಗಳು ತಪಸ್ಸು ಮಾಡಿ, ಒಂದು ವಿಶಿಷ್ಟವಾದ ವರವನ್ನು ಪಡೆದಿರುತ್ತಾನೆ. ಅದು ಏನೆಂದರೆ “ದೇವತೆಗಳಿಂದಲೂ, ಬೇರಾವ ಶಕ್ತಿಗಳಿಂದಲೂ ಸಾಯಬಾರದು, ಸಾಮಾನ್ಯ ಮನುಷ್ಯರಿಂದ ಮಾತ್ರ ಸಾಯುವೆನೆಂಬುದೇ ಆ ವರ.

ಲಂಕಾದ ಅಧಿಪತಿ, ದಶಕಂಟ ರಾವಣ


ರಾವಣನ ತಂದೆ ವಿಶ್ರವಸ್ ಎಂಬ ಋಷಿ. ತಾಯಿ ಕೇಕಸಿ ಎಂಬ ದೈತ್ಯ ವಂಶದ ರಾಣಿ. ರಾವಣನಿಗೆ ಹತ್ತು ತಲೆಗಳು ಮತ್ತು ಇಪ್ಪತ್ತು ಕೈಗಳು. ಬ್ರಹ್ಮನಿಂದ ಚಿರಂಜೀವಿಯಾಗುವ ವರ ಪಡೆದ ರಾವಣ ಲೋಕ ಕಂಟಕನಾಗಿ ಪರಿಣಮಿಸುತ್ತಾನೆ. ಇವನು ಶಿವನ ಪರಮ ಭಕ್ತನು ಹೌದು. ದುಷ್ಟತನದಿಂದ ಮೆರೆಯುತ್ತಿದ್ದ ರಾವಣನನ್ನು ಸಂಹರಿಸಲು ರಾಮ ಭೂಲೋಕದಲ್ಲಿ ಜನ್ಮ ತಾಳುತ್ತಾನೆ. ರಾವಣ ಲಂಕೆಯ ರಾಜನಾದುದರಿಂದ ಇವನನ್ನು ‘ಲಂಕೇಶ’ನೆಂದು ಕರೆಯುವರು. ಇವನಿಗೆ ಇಬ್ಬರು ತಂಗಿಯರು -ಶೂರ್ಪನಖಿ ಮತ್ತು ಲಂಕಿಣಿ, ಇಬ್ಬರು ತಮ್ಮಂದಿರು -ಕುಂಭಕರ್ಣ ಮತ್ತು ವಿಭೀಷಣ.
ರಾವಣನ ಹೆಂಡತಿ ಮಂಡೋದರಿ ಮೊದಲನೇ ಹೆಂಡತಿ, ಎರಡನೇ ಹೆಂಡತಿಯ ಹೆಸರು ದಮ್ಯಮಾಲಿನೀ ಮತ್ತು ಮೂರನೇ ಹೆಂಡತಿಯ ಹೆಸರು ಎಲ್ಲಿಯೂ ಉಲ್ಲೇಖಿಸಲಾಗಿಲ್ಲ. ಈ ಮೂರು ರಾಣಿಗಳಿಂದ ಅವನಿಗೆ 7 ಗಂಡು ಮಕ್ಕಳಿದ್ದರು. ಮೇಘನಾಥ ಮತ್ತು ಅಕ್ಷಯ್ ಎನ್ನುವವರು ರಾಣಿ ಮಂಡೋದರಿಯ ಇಬ್ಬರು ಪುತ್ರರು, ಎರಡನೇ ಹೆಂಡತಿಯಾದ ದಮ್ಯಮಾಲಿನೀಯಿಂದ ಅತಿಕ್ಯ ಮತ್ತು ತ್ರಿಶಿರರ ಎನ್ನುವ ಇಬ್ಬರು ಗಂಡು ಮಕ್ಕಳನ್ನು ರಾವಣ ಹೊಂದಿದ್ದನು. ರಾವಣನ ಮೂರನೇ ಹೆಂಡತಿಯ ಹೆಸರನ್ನು ಎಲ್ಲಿಯೂ ಉಲ್ಲೇಖಿಸಲಾಗಿಲ್ಲ, ಆದರೆ ಅವಳಿಗೆ ಪ್ರಹಸ್ಥಾ, ನರಾಂತಕ ಮತ್ತು ದೇವತಾಕಾ ಎನ್ನುವ ಇಬ್ಬರು ಪುತ್ರರಿದ್ದರು ಎಂದು ಹೇಳಲಾಗುತ್ತದೆ.


ಬ್ರಹ್ಮನು ರಾವಣನ ಮುತ್ತಜ್ಜ . ಬ್ರಹ್ಮನ ಮಗ ಮಹರ್ಷಿ ಪುಲಸ್ತ್ಯ, ಇವರು ಹವಿರ್ಭುವಳನ್ನು ಮದುವೆಯಾದನು. ಇವರಿಗೆ ಜನಿಸಿದ ಮಗನೇ ಋಷಿ ವಿಶ್ವಶ್ರವಾ. ಈ ಋಷಿ ವಿಶ್ವಶ್ರವಾನು ರಾಕ್ಷಸಿ ಕೈಕೇಸಿಯನ್ನು ವಿವಾಹವಾಗುತ್ತಾನೆ. ವಿಶ್ವಶ್ರವಾ ಮತ್ತು ಕೈಕೇಸಿಗೆ ಜನಿಸಿಗೆ ಮಗನೇ ಈ ದೈತ್ಯ ರಾಕ್ಷಸ. ಬ್ರಾಹ್ಮಣ ತಂದೆಗೆ ಮತ್ತು ರಾಕ್ಷಸಿ ತಾಯಿಗೆ ರಾವಣ ಜನಿಸಿದ್ದರಿಂದ ಆತ ರಾಕ್ಷಸ ಮತ್ತು ಬ್ರಾಹ್ಮಣ ಈ ಎರಡೂ ಗುಣವನ್ನು ಹೊಂದಿದವನಾಗಿದ್ದನು.


ರಾವಣ ಯಾವಾಗಲು ಕೆಟ್ಟವನೆಂದೇ ಹೇಳಲಾಗುತ್ತದೆ. ಆದರೆ ರಾವಣನಲ್ಲೂ ಸದ್ಗುಣಗಳಿದ್ದವು. ರಾವಣನಲ್ಲೂ ಒಳ್ಳೆಯ ಗುಣಗಳಿದ್ದವು. ರಾಮನು ಕೂಡ ರಾವಣನನ್ನು ಮಹಾಬ್ರಾಹ್ಮಣನೆಂದು ಗುರುತಿಸಿದ್ದನು ಹಾಗೂ ರಾವಣನನ್ನು ಕೊಲ್ಲುವುದಕ್ಕಾಗಿ ರಾಮನು ದೊಡ್ಡ ಅಶ್ವಮೇಧ ಯಾಗವನ್ನೇ ಮಾಡಿದ್ದನು. ರಾವಣನನ್ನು ರಾಮಾಯಣ ಕಾಲದ ಅತ್ಯಂತ ಶ್ರೇಷ್ಟ ವಿದ್ವಾಂಸನೆಂದು ಪರಿಗಣಿಸಲಾಗುತ್ತದೆ. ರಾವಣನು ತಾನು ಮರಣ ಹೊಂದುವ ಮೊದಲು ಭಗವಾನ್ ರಾಮ ಮತ್ತು ಲಕ್ಷ್ಮಣನ ಬಳಿ ತನ್ನೊಂದಿಗೆ ಸ್ವಲ್ಪ ಸಮಯ ಕುಳಿತುಕೊಳ್ಳಲು ಕೇಳಿಕೊಂಡನು. ರಾಮ ಮತ್ತು ಲಕ್ಷ್ಮಣರು ರಾವಣನ ಕೋರಿಕೆಯ ಮೇರೆಗೆ ರಾವಣನೊಂದಿಗೆ ಕುಳಿತುಕೊಂಡರು ಆಗ ರಾವಣನು ಅವರಿಬ್ಬರಿಗೆ ರಾಜತಾಂತ್ರಿಕ ಹಾಗೂ ಸಂಖ್ಯಾಶಾಸ್ತ್ರದ ಅಂಶಗಳನ್ನು ಕಲಿಸಿಕೊಟ್ಟನು.
ರಾವಣನು ಓರ್ವ ಮಹಾನ್ ಸಂಗೀತಗಾರನಾಗಿದ್ದನು ಮತ್ತು ಸಂಗೀತದ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿದ್ದನು.. ರಾವಣನ ಜ್ಞಾನದ ಕುರಿತಿರುವ ಇನ್ನೊಂದು ಅಚ್ಚರಿಯ ವಿಷಯವೇನೆಂದರೆ ಶಿವನನ್ನು ಸ್ತುತಿಸುವ ಸತ್ಯಮೂಲ್ಯ ಕೃತಿ ಎಂದು ಪರಿಗಣಿಸಲಾಗುವ ಶಿವ ತಾಂಡವವನ್ನು ಸಂಯೋಜನೆ ಮಾಡಿರುವುದು ಕೂಡ ರಾವಣನೇ ಆಗಿದ್ದಾನೆ.ರಾವಣನು ಅದ್ಬುತವಾದ ಶಿವಭಕ್ತನಾಗಿದ್ದ. ಮುರುಡೇಶ್ವರದಲ್ಲಿ ಶಿವನ ದೊಡ್ಡ ಪ್ರತಿಮೆ ಇದೆ. ಆ ಪ್ರತಿಮೆಯ ಎದುರು ಮಾತ್ರ ರಾವಣನ ಪ್ರತಿಮೆ ಕಾಣಬಹುದು.


ರಾವಣನು ಒಬ್ಬ ಜ್ಯೋತಿಷಿ ಯಾಗಿದ್ದನು. ಮಗ ಮೇಘನಾದನು ಹುಟ್ಟಬೇಕಾದರೆ ಅವನು ಅಮರನಾಗಲು ರಾವಣನು ಎಲ್ಲಾ ಗ್ರಹಗಳಲ್ಲಿ ಹಾಗೂ ಸೂರ್ಯನಲ್ಲಿ ಒಂದು ನಿರ್ದಿಷ್ಟ ಸ್ಥಾನದಲ್ಲಿರಲು ಸೂಚಿಸಿದನು. ಆದರೆ ಶನಿ ರಾವಣನ ಮಾತನ್ನು ಅಲ್ಲಗಳೆದು ತನ್ನ ಸ್ಥಾನವನ್ನು ಬದಲಾಯಿಸುತ್ತಾನೆ. ಇದರಿಂದ ರಾವಣನು ಕೋಪಗೊಂಡು ಅವನು ತನ್ನ ಜಟಿಲದಿಂದ ಶನಿಯ ಮೇಲೆ ಆಕ್ರಮಣ ನಡೆಸಿ ಆತನ ಒಂದು ಕಾಲನ್ನು ಮುರಿದು ಹಾಕುತ್ತಾನೆ.


ರಾವಣನ ಅಂತ್ಯ:

ಲಂಕಾದ ಅಧಿಪತಿ, ದಶಕಂಟ ರಾವಣ


ದಶರಥನ ಎರಡನೇ ಹೆಂಡತಿ ಕೈಕೇಯಿಯ ಕುತಂತ್ರದಿಂದಾಗಿ ರಾಮನು 14 ವರ್ಷಗಳ ವನವಾಸವನ್ನು ಅನುಭವಿಸಬೇಕಾಯಿತು. ವನವಾಸಕ್ಕೆ ತೆರಳುವಾಗ ರಾಮನ ಪತ್ನಿ ಹಾಗೂ ಸಹೋದರನಾದ ಲಕ್ಷ್ಮಣನು ರಾಮನ ಜೊತೆಯಲ್ಲಿಯೇ ವನವಾಸಕ್ಕೆ ನಡೆದರು. ಸ್ವಯಂ ವರದಲ್ಲಿ ಸೋತಿದ್ದ ರಾವಣನು ಸೀತೆಯನ್ನು ಪಡೆಯಬೇಕು ಎನ್ನುವ ಹಂಬಲವನ್ನು ಹೊಂದಿದ್ದನು ಜೊತೆಗೆ ಶೂರ್ಪನಖಿಯ ಮೂಗನ್ನು ಲಕ್ಷ್ಮಣ ಕತ್ತರಿಸಿದ್ದನು. ಈ ಎರಡು ಕಾರಣ ಸಾಕಾಗಿತ್ತು ರಾವಣನಿಗೆ , ಒಂದು ದಿನ ಮಾಯಾವಿ ಭಿಕ್ಷುಕನ ವೇಶವನ್ನು ಧರಿಸಿ, ರಾಮನಿಲ್ಲದ ಸಮಯದಲ್ಲಿ ಸೀತೆಯನ್ನು ಅಪಹರಿಸಿದನು. ಭಿಕ್ಷೆಯನ್ನು ಬೇಡಲು ಬಂದ ರಾವಣನಿಗೆ ಲಕ್ಷ್ಮಣ ಹಾಕಿದ ಗೆರೆಯನ್ನು ದಾಟಿ ಮುಂದೆ ಬರಲು ಸಾಧ್ಯವಾಗಲಿಲ್ಲ.
ಸೀತಾ ದೇವಿಯ ಬಳಿಯೇ ಇಲ್ಲಿಗೆ ಬಂದು ಭಿಕ್ಷೆ ಹಾಕಿ ಎಂದು ಬೇಡಿಕೊಂಡನು. ನಂಬಿದ ಸೀತಾ ದೇವಿ ಭಿಕ್ಷೆ ಹಾಕಲು ಲಕ್ಷ್ಮಣ ಹಾಕಿದ ಗೆರೆಯನ್ನು ದಾಟಿ ಮುಂದೆ ನಡೆದಳು. ಆಗ ಸೀತೆಯನ್ನು ಹಿಡಿದು ತನ್ನೊಂದಿಗೆ ಪುಷ್ಪಕ ವಿಮಾನದಲ್ಲಿ ಕರೆದೊಯ್ದನು. ನಂತರ ರಾಮ ಲಕ್ಷ್ಮಣ ಇಬ್ಬರು ಸೀತಾಮಾತೆಯನ್ನುಹುಡುಕಲು ಹನುಮನ ಸಹಾಯಪಡೆಯುತ್ತಾರೆ. ಹನುಮಂತ ಮತ್ತು ವಾನರಗಳ ಸಹಾಯದಿಂದ ಅಂತಿಮವಾಗಿ ಸೀತೆಯನ್ನು ಹುಡುಕುವಲ್ಲಿ ರಾಮನು ಯಶಸ್ವಿಯಾದನು. ಜೊತೆಗೆ ಸಮಾಜದಲ್ಲಿ ದುಷ್ಟ ಶಕ್ತಿಯಾದ ರಾವಣನನ್ನು ಸದೆ ಬಡಿದನು. ಇದನ್ನು ವಿಜಯದ ದಿನವಾಗಿ ಆಚರಿಸಲಾಗುತ್ತದೆ. ಹೀಗಾಗಿ ರಾವಣನನ್ನು ಕೆಟ್ಟವನು ಎಂದು ನೋಡಲಾಗುತ್ತದೆ.


ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

2 Comments

ನಾಡಪ್ರಭು ಕೆಂಪೇಗೌಡರು

ಪುನೀತ್ ರಾಜ್‍ಕುಮಾರ್

ನಿನ್ನನು ಪಡೆದ ನಾವೇ ಪುನೀತರು, ಪುನೀತ್ ರಾಜಕುಮಾರ