in

ರಾಮ ಬಂಟ ಹನುಮಂತ ಕೂಡ ರಾಮ ಲಕ್ಷ್ಮಣರ ಅಂಶ ಎಂದೇ ಹೇಳಲಾಗುತ್ತದೆ.

ಹಿಂದೂ ಧರ್ಮದಲ್ಲಿ ವಾಲ್ಮೀಕಿ ಯವರಿಂದ ರಚಿಸಲ್ಪಟ್ಟ ಮಹಾಕಾವ್ಯ “ರಾಮಾಯಣ”. ರಾಮಾಯಣದಲ್ಲಿ ಬರುವ ಪ್ರಮುಖ ಪಾತ್ರಗಳಲ್ಲಿ ಒಂದು ವಾಯುಪುತ್ರ ಹನುಮಂತ. ಕಪಿ ವೀರರಲ್ಲಿ ಒಬ್ಬನು ನಮ್ಮ ಹನುಮಂತ.ಇವರು ಕೇಸರಿ ಎಂಬ ವಾನರ ಮತ್ತು ಅಂಜನಿದೇವಿಯ  ಮಗ.  ಮಾರುತಿ, ಪವನಪುತ್ರ, ಸುಂದರ, ವಾಯುಪುತ್ರ, ರಾಮಪ್ರಿಯ, ಹನುಮ, ಅಂಜನಾತನಯ, ಆಂಜನೇಯ, ವಾನರ ಶ್ರೇಷ್ಠ, ಕೇಸರಿ ನಂದನ, ಹನುಮಂತ, ರಾಮದೂತ, ದಾಸರಲ್ಲಿ ಶ್ರೇಷ್ಟ ಭಕ್ತ, ಹೀಗೆ ಹಲವು ನಾಮಗಳನ್ನು ಹೊಂದಿದವ ನಮ್ಮ ಹನುಮಂತ. ಶಿವನ ಅವತಾರವೆಂದು ಪರಿಗಣಿಸಲಾಗುವ ಹನುಮಂತನು ಶ್ರೀರಾಮನ ಪರಮ ಭಕ್ತ. ಲಂಕೆಯಿಂದ ಸೀತೆಯನ್ನು ಸುರಕ್ಷತವಾಗಿ ಮರಳಿ ತರಲು ನಡೆದ ಯುದ್ಧದಲ್ಲಿ ಈತನ ಪಾತ್ರ ಪ್ರಮುಖವಾದುದ್ದಾಗಿದೆ. ಶ್ರೀರಾಮನಿಗಾಗಿ ಹನುಮಂತನು ತೋರಿದ ಪ್ರೀತಿ ನಿಸ್ವಾರ್ಥ, ಶ್ರದ್ಧಾ ಮತ್ತು ಭಕ್ತಿಯಿಂದ ಕೂಡಿರುವುದಾಗಿದೆ. ತನ್ನ ಯಜಮಾನನಿಗಾಗಿ ಪ್ರಾಣವನ್ನು ಕೊಡಲು ಲೆಕ್ಕಿಸದ ಮಹಾನ್ ವೀರನೀತ, ತ್ಯಾಗಮಯಿ ಈತ. ತನ್ನ ಎದೆಯನ್ನೇ ಸೀಳಿ ತನ್ನ ನಿಷ್ಠಾವಂತೆ ಭಕ್ತಿಯನ್ನು ಮೆರೆದ ತ್ಯಾಗವಂತ.

ಆಂಜನೇಯನನ್ನು ರಾಜನಾಗಿ ಯಾಕೆ ಪರಿಗಣಿಸಲಿಲ್ಲ?

ವಿಷ್ಣು, ರಾಮನ ರೂಪದಲ್ಲಿ ಈ ಭೂಮಿಯನ್ನು ಪಾವನ ಮಾಡುವುದಾಗಿ ಹೇಳಿದಾಗ, ಶಿವ ಕೂಡ ಅವನೊಂದಿಗೆ ಬರಲು ಇಚ್ಛಿಸುತ್ತಾನೆ. ಆದರೆ ಸತಿ, ತನ್ನ ಗಂಡ ತನ್ನಿಂದ ದೂರವಾಗುತ್ತಾನೆ ಎಂದು ಯೋಚಿಸಿ ದುಃಖಿತಳಾಗುತ್ತಾಳೆ. ಇದನ್ನು ಗಮನಿಸಿದ ಶಿವ, ತನ್ನ ಸಂಪೂರ್ಣ ಆತ್ಮವನ್ನು ಬಿಟ್ಟು, ಒಂದು ಭಾಗವನ್ನು ಮಾತ್ರ ಭೂಮಿಗೆ ಕಳುಹಿಸುವುದಾಗಿ ವಚನ ಕೊಡುತ್ತಾನೆ. ಆದ್ದರಿಂದ ಶಿವ, ತನ್ನ ಶಕ್ತಿಯಿಂದ ವಾನರ ರೂಪವನ್ನು ಪಡೆಯುತ್ತಾನೆ.

ರಾಮ ಬಂಟ ಹನುಮಂತ ಕೂಡ ರಾಮ ಲಕ್ಷ್ಮಣರ ಅಂಶ ಎಂದೇ ಹೇಳಲಾಗುತ್ತದೆ.

ಹನುಮಂತ ಚಿಕ್ಕವನಾಗಿದ್ದಾಗ ತುಂಬಾ ತುಂಟ, ಕೆಲವರಿಗೆ ತುಂಟತನ ಇಷ್ಟ ಆದರೆ ಇನ್ನು ಕೆಲವರಿಗೆ ಕಿರಿಕಿರಿ ಉಂಟುಮಾಡುತ್ತಿತ್ತು. ಆಂಜನೇಯನ ಚೇಷ್ಟೆಯಿಂದ ಕೋಪಕ್ಕೆ ಒಳಗಾದವರಲ್ಲಿ ಮಾತಂಗ ಮುನಿಗಳು ಕೂಡ ಒಬ್ಬರು. ಆಂಜನೇಯನ ಕಪಿ ಚೇಷ್ಟೆಯಿಂದ ಮಾತಂಗ ಮುನಿಗಳು ಕೋಪಗೊಂಡು ಹನುಮಂತನಿಗೆ ನಿನ್ನ ದೈವಿಕ ಶಕ್ತಿಯನ್ನು ಯಾರಾದರು ನೆನಪಿಸುವವರೆಗೆ ನಿನ್ನ ದೈವಿಕ ಶಕ್ತಿ ನೆನಪಿನಲ್ಲಿರಬಾರದು ಎಂದು ಶಾಪವನ್ನು ನೀಡುತ್ತಾರೆ. ಸಂಸ್ಕೃತದಲ್ಲಿ ಹನುಮಾನ್ ಎಂದರೆ ವಿರೂಪಗೊಂಡ ದವಡೆ ಎಂದರ್ಥ. ಹನು ಎಂದರೆ ‘ದವಡೆ’ ಮಾನ್ ಎಂದರೆ ‘ವಿರೂಪಗೊಂಡಿದೆ’ ಎಂದು ಹೇಳಲಾಗಿದೆ. ಹೀಗೆ ಒಂದು ಸಲ ಸೂರ್ಯ ದೇವನನ್ನೇ ಹಣ್ಣು ಎಂದು ತಿನ್ನಲು ಬಯಸಿದನು,ಇನ್ನೇನು ತಿನ್ನಬೇಕು ಎನ್ನುವಷ್ಟರಲ್ಲಿ ಇಂದ್ರ ದೇವನು ವಜ್ರಾಯುದದಿಂದ ದವಡೆ ಮೇಲೆ ಪ್ರಹಾರ ಮಾಡುತ್ತಾನೆ. ಆದ್ದರಿಂದ ಹನುಮಂತನ ಮುಖ ಊದಿಕೊಂಡಿತು ಅಂತ ನಂಬಿಕೆ.

ಆದರೆ ಹನುಮಂತನ ಹುಟ್ಟಿನ ನಿಜವಾದ ಕಾರಣ ಏನು?

ರಾಮ ಬಂಟ ಹನುಮಂತ ಕೂಡ ರಾಮ ಲಕ್ಷ್ಮಣರ ಅಂಶ ಎಂದೇ ಹೇಳಲಾಗುತ್ತದೆ.

ಅಯೋದ್ಯೆಯ ರಾಜ ದಶರಥ. ರಾಜನಿಗೆ ಅನೇಕ ವರ್ಷಗಳು ಮಕ್ಕಳಿಲ್ಲದ ಕಾರಣ ಮಂತ್ರಿಗಳ ಮತ್ತು ಪುರೋಹಿತರ ಸಲಹೆಯ ಮೇರೆಗೆ ಪುತ್ರಾಕಾಮೇಷ್ಟಿ ಯಜ್ಞ ಮಾಡುತ್ತಾನೆ. ವಿಷ್ಣು ದಶರಥನ ಜೇಷ್ಠ ಪುತ್ರನಾಗಿ ಜನಿಸಲು ನಿರ್ಧರಿಸುತ್ತಾನೆ. ದೈವೀ ಪುರುಷನನ್ನು ಯಜ್ಞಕುಂಡದಲ್ಲಿ ಜನಿಸುವಂತೆ ಮಾಡುತ್ತಾನೆ. ಪುರುಷ ದಶರಥನಿಗೆ ಪಾಯಾಸವಿದ್ದ ಚಿನ್ನದ ಕಳಸವನ್ನು ನೀಡಿ ತನ್ನ ರಾಣಿಯರಿಗೆ ನೀಡಲು ಹೇಳಿದನು. ದಶರಥನು ತನ್ನ ಮೂರು ರಾಣಿಯಾರಾದ ಕೌಸಲ್ಯ, ಸುಮಿತ್ರಾ, ಕೈಕೇಯಿ ಇವರ ನಡುವೆ ಹಂಚಿದನು.ಆಗ ಮೂರು ರಾಣಿಯರು ಪಾಯಸವನ್ನು ಹಂಚಿ ತಿನ್ನುವಾಗ ಅದರಲ್ಲಿ ಒಂಚೂರು ಹಕ್ಕಿಯೊಂದು ತನ್ನ ಕೊಕ್ಕಿನಲ್ಲಿ ಕಚ್ಚಿಕೊಂಡು ಹೋಯಿತು. ಆಗ ಆ ಪಾಯಸ ಹಕ್ಕಿಯ ಬಾಯಿಂದ ಜಾರಿ ಕೆಳಗೆ ಬೀಳಬೇಕು ಎನ್ನುವಷ್ಟರಲ್ಲಿ ವಾಯುದೇವನು ಅದನ್ನು ತನ್ನ ಪ್ರಭಾವ ಬೀರಿ ವಾನರ ರಾಣಿಯಾದ ಅಂಜನಿ ತಿನ್ನುವ ಊಟದಲ್ಲಿ ಬೀಳುವಂತೆ ಮಾಡುತ್ತಾನೆ. ಆದುದರಿಂದ ಹನುಮಂತನನ್ನು ವಾಯುಪುತ್ರ ಅಂತ ಕರೆಯುತ್ತೇವೆ. ಹಾಗಾಗಿ ರಾಮ ,ಲಕ್ಷ್ಮಣನ ರಂತೆ ಹನುಮಂತ ಕೂಡ ಪ್ರಸಾದದ ಅಂಶ.

ಹನುಮಂತನನ್ನು ಕುಂಕುಮದಿಂದ ಯಾಕೆ ಅಲಂಕಾರ ಮಾಡುತ್ತಾರೆ?

ಒಂದು ದಿನ ಕುತೂಹಲದಿಂದ ಹನುಮಂತನು ಸೀತಾಮಾತೆಯ ಬಳಿ ಮಾತೆ ನೀವು ಹಣೆಗೆ ಕುಂಕುಮ ಅಥವಾ ಸಿಂಧೂರವನ್ನು ಯಾಕೆ ಇಟ್ಟುಕೊಳ್ಳುತ್ತೀರಿ ಎಂದು ಕೇಳುತ್ತಾನೆ. ಆಗ ಸೀತೆಯು ತನ್ನ ಗಂಡನ, ಅಂದರೆ ನಿಮ್ಮ ಯಜಮಾನರ ಆಯಸ್ಸು ಹೆಚ್ಚಾಗಲೆಂದು ಎಂದು ಪ್ರತ್ಯುತ್ತರವನ್ನು ನೀಡುತ್ತಾಳೆ. ಇದರಿಂದ ಹನುಮಂತನು ಪ್ರಭಾವಿತನಾಗಿ ರಾಮನ ಮೇಲಿನ ಪ್ರೀತಿಯಿಂದ, ಸಿಂಧೂರವನ್ನಿಟ್ಟರೆ ನನ್ನ ಸ್ವಾಮಿಗೆ ಸಂತೋಷ, ಆಯಸ್ಸು ಹೆಚ್ಚಾಗುತ್ತೆಂದು ತಿಳಿದು ತನ್ನ ಸಂಪೂರ್ಣ ದೇಹಕ್ಕೆ ಸಿಂಧೂರವನ್ನು ಹಚ್ಚಿಕೊಳ್ಳುತ್ತಾನೆ. ಆದ್ದರಿಂದ  ಇಂದಿಗೂ ಕೂಡ ಹನುಮಂತನ ವಿಗ್ರಹವನ್ನು ಸಿಂಧೂರದಿಂದ ಅಲಂಕರಿಸಲಾಗುತ್ತದೆ.

ಹನುಮಂತ ಬ್ರಹ್ಮಚಾರಿಯಾದರೂ ಮಗ ಇದ್ದಾನೆ.

ಹನುಮಾನ್ ಬ್ರಹ್ಮಚಾರಿಯಾಗಿದ್ದರೂ ಕೂಡ ಆತನಿಗೆ ಮಕರಧ್ವಜ ಎನ್ನುವ ಮಗನಿದ್ದಾನೆ. ಮಕರಧ್ವಜನು ಮೀನಿನಿಂದ ಹುಟ್ಟಿದವನಾಗಿದ್ದಾನೆ. ಮಕರಧ್ವಜನ ಹುಟ್ಟಿನ ಹಿಂದೆ ದಂತಕಥೆಯೇ ಇದೆ. ಲಂಕಾವನ್ನು ಸುಟ್ಟ ನಂತರ ಹನುಮಂತನು ತನ್ನನ್ನು ತಣ್ಣಗಾಗಿಸಿಕೊಳ್ಳಲು ಸಮುದ್ರದಲ್ಲಿ ಸ್ನಾನ ಮಾಡುತ್ತಾನೆ. ಭಾರೀ ಉಷ್ಣತೆಯಿಂದಾಗಿ ಹನುಮಂತನ ಬೆವರಿನ ಹನಿಗಳು ಧೈತ್ಯ ಮೀನಿನ ಬಾಯಿಗೆ ಸೇರುತ್ತದೆ. ಇದರಿಂದ ಹುಟ್ಟಿದವನೇ ಮಕರಧ್ವಜ.

ನಂತರ ರಾಮ, ಲಕ್ಷ್ಮಣ, ದಶರಥನ ಉಳಿದ ಮಕ್ಕಳು ಕೂಡ ಬೆಳೆದು ದೊಡ್ಡವರಾದರು. ಹನುಮಂತ ಕೂಡ. ಸಿಂಹಾಸನದ ಕುತಂತ್ರಕ್ಕೆ ರಾಮ, ಸೀತೆ, ಲಕ್ಷ್ಮಣ ವನವಾಸ  ಹೋಗಬೇಕಾಯಿತು. ಕಾಡಿನಲ್ಲಿ ರಾವಣನಿಂದ ಸೀತೆಯ ಅಪರಹರಣವಾಯಿತು. ಅಲ್ಲಿಂದ  ನಡೆದ ಘಟನೆ ಮಹಾನ್ ಯುದ್ಧಕ್ಕೆ ನಾಂದಿಯಾಯಿತು. ಹನುಮಂತ ಕಿಷ್ಕಿಂದೆಯ ರಾಜ ಸುಗ್ರೀವನೊಂದಿಗೆ ಇರುತ್ತಾನೆ. ರಾಮ ಸೀತೆಯ ಹುಡುಕಾಟದಲ್ಲಿರುವಾಗ ರಾಮ, ಹನುಮಂತನ ಸಂಗಮವಾಯಿತು. ಹನುಮಂತ ರಾಮನ ಬಂಟನಾಗುತ್ತಾನೆ. ರಾಮನ ಸೇವೆಗೆ ಹನುಮಂತ ತನ್ನನ್ನು ಮುಡಿಪಾಗಿ ಇಟ್ಟನು. ಸೀತಾನ್ವೇಷಣೆ’ ಆಂಜನೇಯನ ಬಹುಮುಖ್ಯ ಸಾಹಸಗಳಲ್ಲೊಂದು. ಸುಗ್ರೀವನ ಸೈನ್ಯದಲ್ಲಿದ್ದ ಉಳಿದೆಲ್ಲ ವೀರರ ಶಕ್ತಿ ಒಂದು ತೂಕವಾದರೆ ಆಂಜನೇಯನೊಬ್ಬನದೇ ಒಂದು ತೂಕ. ಕುವೆಂಪು ರಾಮಾಯಣ ದರ್ಶನದಲ್ಲಿ ಈ ಭಾಗ ಬಹಳ ಸುಂದರವಾಗಿ ಬರುತ್ತದೆ. ಸುಗ್ರೀವ, ಆಂಜನೇಯನನ್ನು ‘ನೀನು ನಮ್ಮ ಕುಲದ ಕಣ್ಣು, ಸಾಹಸದ ಧೈರ್ಯ, ಎಲ್ಲವೂ. ವಾಯುಪುತ್ರನಾದ್ದರಿಂದ ನೀನು ಚಲಿಸದ ಪ್ರದೇಶವೇ ಇಲ್ಲ. ಮೂರು ಲೋಕಗಳಲ್ಲಿ ನಿನಗೆ ಬುದ್ಧಿಯಲ್ಲೂ ಬಲದಲ್ಲೂ ಸಮಾನರಿಲ್ಲ’ ಎಂದು ಕೊಂಡಾಡಿ ಸೀತಾನ್ವೇಷಣೆಗೆ ಕಳುಹಿಸುತ್ತಾನೆ. ಸೀತಾಮಾತೆಯ ಪತ್ತೆಹಚ್ಚಲು ಏಳು ಸರೋವರ ದಾಟಿ, ಸೀತಾಮಾತೆ ಅಶೋಕವನದಲ್ಲಿ ಇರುವ ಸುದ್ದಿಯನ್ನು ಶ್ರೀ ರಾಮನಿಗೆ ತಿಳಿಸುವನು. ಇಡೀ ಲಂಕೆಗೆ ತನ್ನ ಬಾಲದಲ್ಲಿ ಬೆಂಕಿ ಇಟ್ಟನು. ನಂತರ ತನ್ನ ವಾನರ ಸೇನೆಯೊಂದಿಗೆ ಲಂಕೆಗೆ ರಾಮಸೇತುವನ್ನು ನಿರ್ಮಾಣ ಮಾಡಿದರು. ಲಕ್ಷ್ಮಣನೀಗಾಗಿ ಸಂಜೀವಿನಿ ಪರ್ವತವನ್ನೇ ಎತ್ತಿಕೊಂಡು ಬಂದನು. ರಾಮನಿಂದ ರಾವಣನ ಸಂಹಾರವಾಯಿತು.ಅಲ್ಲಿಂದ ಮತ್ತೆ ಅಯೋಧ್ಯೆಯಲ್ಲಿ ರಾಮರಾಜ್ಯ  ಶುರುವಾಯಿತು. ನಂತರ ಆದ ಅನೇಕ ಘಟನೆಗಳಿಗೆ ಸಾಕ್ಷಿಯಾದ ಹನುಮಂತ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

2 Comments

ನಮ್ಮ ಲಾಲ್ ಬಹದ್ದೂರ್ ಶಾಸ್ತ್ರೀಜಿ!

ಸಕ್ಕರೆ ಬಳಸದೆ ಆರೋಗ್ಯಕರವಾದ ಜ್ಯೂಸ್ ಗಳು